ಕಿಯಾ ಕಾರ್ನಿವಾಲ್ :ಮೊದಲ ಡ್ರೈವ್ ವಿಮರ್ಶೆ
Published On ಫೆಬ್ರವಾರಿ 21, 2020 By nabeel for ಕಿಯಾ ಕಾರ್ನಿವಲ್
- 0 Views
- Write a comment
ಬಹಳ ಕಾಲದ ವರೆಗೆ ಪ್ರೀಮಿಯಂ MPV ಗಳ ಮೈಲಿಗಲ್ಲು ಎಂದರೆ ಅದು ಟೊಯೋಟಾ ಇನ್ನೋವಾ ಎನ್ನುವಂತಿತ್ತು, ಈಗ ಅದು ಬದಲಾಗಲಿದೆ
ಕಿಯಾ ಎನ್ನುವುದು 'ಕೌನ್ ಕಿಯಾ ?' ನಿಂದ 'ವಾಹ್ ಕಿಯಾ' ವರೆಗೂ ಸೆಲ್ಟೋಸ್ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಬದಲಾಗಿದೆ . ಈ SUV ಗೆ ಮಾರುಕಟ್ಟೆಯಲ್ಲಿ ಮುಂದಾಳತ್ವ ಪಡೆಯಲು ಬಹಳ ದಿನ ಹಿಡಿಸಲಿಲ್ಲ-- ಹುಂಡೈ ಕ್ರೆಟಾ ವನ್ನು ಹಿಂದಿಕ್ಕಿ. ಹಾಗಾಗಿ ನೀರಿಕ್ಷೆ ಗಳು ಸಹ ಹೆಚ್ಚು ಆಗಿದೆ , ಹಾಗು ಪ್ರತಿಸ್ಪರ್ಧೆ ಗಳು ಸಹ ತೀವ್ರಗತಿ ಪಡೆದಿದೆ. ಹೆಚ್ಚಿನ ಮಟ್ಟ ದೊಂದಿಗೆ , ಕಾರ್ನಿವಾಲ್ ಕಿಯಾ ಅವರ ಪ್ರಮುಖ ವಾಹನವಾಗಲಿದೆ ಭಾರತಕ್ಕೆ.
ಕಾರ್ನಿವಾಲ್ ಅನ್ನು ಒಮ್ಮೆ ನೋಡಿದರೆ ನಿಮಗೆ ಅದು ಕಠಿಣ ಪರಿಸ್ಥಿತಿಗಳಲ್ಲಿ ಹಿನ್ನಡೆಯುವಂತೆ ಮಾಡುವುದಿಲ್ಲ ಎಂದು ತೋರಿಸುತ್ತದೆ. ಅದು ದೊಡ್ಡದಾಗಿರುವುದಷ್ಟೇ ಅಲ್ಲ ದೈತ್ಯಾಕಾರವಾಗಿದೆ. ಅದು ಹೆಚ್ಚು ಪ್ರೀಮಿಯಂ ಆಗಿರುವುದಲ್ಲದೆ ಐಷಾರಾಮಿಯಾಗಿಯೂ ಇದೆ. ಹಾಗು ವಿಶಾಲವಾಗಿರುವುದಲ್ಲದೆ , ಕುಟುಂಬದ ಪ್ರಯಾಣಗಳಿಗೆ ಉತ್ಸಾಹ ತುಂಬುತ್ತದೆ! ಕಿಯಾ ಕಾರ್ನಿವಾಲ್ ಎಂದರೆ ಏನು ಹಾಗು ಅದು ಯಾರಿಗೆ ಸೂಕ್ತವಾಗಿದೆ?
ನೋಟ
ಟೊಯೋಟಾ ಇನ್ನೋವಾ ವನ್ನು ಮರೆತುಬಿಡಿ. ಕಾರ್ನಿವಾಲ್ ಹೆಚ್ಚು ಉದ್ದವಾಗಿ ಹಾಗು ಅಗಲವಾಗಿದೆ , ಅದು ಟೊಯೋಟಾ ಫಾರ್ಚುನರ್ ಹಾಗು ಫೋರ್ಡ್ ಎಂಡೇವರ್ ಗಿಂತಲೂ ಅಗಲವಾಗಿದೆ. ಅದು ಮೇಲೆ ಹೇಳಿದ ಪತಿಸ್ಪರ್ದಿಗಳಿಗಿಂತ ಸ್ವಲ್ಪ ಕಡಿಮೆ ಎತ್ತರ ಹೊಂದಿರುವುದರಿಂದ, ಅದು ರಸ್ತೆಯಲ್ಲಿ ಆಕರ್ಷಕ ನಿಲುವು ಪಡೆಯುತ್ತದೆ. ಅಳತೆಗಳು LED ಪ್ರೊಜೆಕ್ಟರ್ ಹೆಡ್ ಲ್ಯಾಂಪ್, DRL ಗಳು , ಹಾಗು ಸೆಲ್ಟೋಸ್ ತರಹದ ಐಸ್ ಕ್ಯೂಬ್ ಫಾಗ್ ಲ್ಯಾಂಪ್ ಹೊಂದಿರುವುದರಿಂದ ಹೆಚ್ಚು ಪ್ರೀಮಿಯಂ ಆಗಿ ಕಾಣಿಸುತ್ತದೆ. ದೊಡ್ಡ ಗ್ರಿಲ್ ಸಹ ಅಲ್ಯೂಮಿನಿಯಂ ತರಹ ಫಿನಿಶಿಂಗ್ ಪಡೆಯುತ್ತದೆ ಹಾಗು ನೋಡಲು ಆಕರ್ಷಕವಾಗಿದೆ.
ಬದಿಗಳಿಂದ, ಉದ್ದನೆಯದಾದ ವೀಲ್ ಬೇಸ್ ಕಾರ್ನಿವಾಲ್ ಅನ್ನು ನೋಡಲು ಎಳೆದಂತೆ ಕಾಣುತ್ತದೆ.- ಲಿಮೌಸಿನ್ ತರಹ. ದೊಡ್ಡ ವಿಂಡೋ ಗಳು ಫ್ಲೋಟಿಂಗ್ ರೂಫ್ ಎಫೆಕ್ಟ್ ಅನ್ನು ಪಡೆಯುತ್ತದೆ, ಅದು ಕಾರ್ನಿವಾಲ್ ನೋಡಲು ಆಕರ್ಷಕವಾಗಿರುವಂತೆ ಮಾಡುತ್ತದೆ. ನಂತರ ಬರುತ್ತದೆ 18-ಇಂಚು (235/60 R18) ವೀಲ್ ಆರ್ಚ್, ಈ ವೇರಿಯೆಂಟ್ ನಲ್ಲಿ ಪಡೆಯುತ್ತದೆ 'ಸ್ಪಟರಿಂಗ್\ ಶೈಲಿಯ ಕ್ರೋಮ್ ಫಿನಿಷ್ ಅನ್ನು. ಕಿಯಾ ಹೇಳುವಂತೆ ಅದು ದುಬಾರಿ ಫಿನಿಶಿಂಗ್ ಆಗಿದೆ ಹಾಗು ಬಹಳ ಕಾಲದ ವರೆಗೆ ವೀಲ್ ಮೇಲೆ ಇರುತ್ತದೆ. ಆದರೆ ಪ್ರತಿ ಗೆರೆಗಳು ನಿಮಗೆ ಅನಿಸುವುದಕ್ಕಿಂತ ಹೆಚ್ಚು ಎದ್ದು ಕಾಣುವಂತೆ ಇರುತ್ತದೆ. ರೂಫ್ ಲೈನ್ ಗಳು ಇದನ್ನು MPV ಯಂತೆ ಕಾಣುವಂತೆ ಮಾಡುವುದಲ್ಲದೆ ಇರುವುದಕ್ಕಿಂತ ಹೆಚ್ಚು ಉದ್ದವಾಗಿರುವಂತೆ ಕಾಣುವಂತೆ ಮಾಡುತ್ತದೆ.
ಹಿಂದುಗಡೆಯಿಂದ , ಡಿಸೈನ್ ಅತ್ಯುತ್ತಮವಾಗಿದೆ . ಅದು ಪಡೆಯುತ್ತದೆ LED ಟೈಲ್ ಲ್ಯಾಂಪ್ ಗಳು ಹಾಗು ಸರಳವಾದ ಕ್ರೋಮ್ ಸ್ಟ್ರಿಪ್ ಎರೆಡು ಕಡೆ ಸೇರುವಂತೆ ಕಾಣುತ್ತದೆ. ಒಟ್ಟಾರೆ ಕಾರ್ನಿವಾಲ್ ಆಕರ್ಷಕವಾಗಿದೆ ಹಾಗು ದೊಡ್ಡ ವ್ಯಾನ್ ಆಗಿ ಅದು ಮೌಲ್ಯ ಯುಕ್ತವಾಗಿದೆ.
ಆಂತರಿಕಗಳು
ಎರೆಡನೆ ಸಾಲು
ನಾವು ಡ್ರೈವ್ ಮಡಿದ ಕಾರ್ನಿವಾಲ್ ಲಿಮೌಸಿನ್ ವೇರಿಯೆಂಟ್ ಆಗಿದೆ ಹಾಗು ಪಡೆಯುತ್ತದೆ VIP ಏಳು -ಸೀಟ್ ವ್ಯವಸ್ಥೆ. ಹಾಗಾಗಿ, ಈ ಕಾರ್ನಿವಾಲ್ ನಲ್ಲಿನ ಕಾರ್ನಿವಾಲ್ ಗೆ ಎರೆಡನೆ ಸಾಲು ಸೂಕ್ತವಾಗಿದೆ. ಕೀ ನಲ್ಲಿರುವ ಅಥವಾ ಡೋರ್ ಹ್ಯಾಂಡಲ್ ಮೇಲೆ ಇರುವ ಬಟನ್ ಅನ್ನು ಪ್ರೆಸ್ ಮಾಡಿ ಅದು ಆಟೋಮ್ಯಾಟಿಕ್ ಆಗಿ ಬದಿಗೆ ಸರಿಯುತ್ತದೆ. ಡೋರ್ ಹ್ಯಾಂಡಲ್ ಅನ್ನು ಸ್ವಲ್ಪ ಎಳೆದು ಸಹ ಹಾಗೆ ಮಾಡಬಹುದು ನಿಮ್ಮ ಮೆಚ್ಚುಗೆಗೆ ಅನುಗುಣವಾಗಿ. ಈ MPV, ಇತರ SUV ಗಳಿಗೆ ಹೋಲಿಸಿದರೆ ಕಡಿಮೆ ಎತ್ತರ ಹೊಂದಿದೆ ಹಾಗಾಗಿ , ಒಳಗೆ ಪ್ರವೇಶಿಸುವುದು ಸರಳ ಹಾಗು ಹಿರಿಯ ವಯಸ್ಕರಿಗೂ ಸುಲಭವಾಗುತ್ತದೆ
ಲಿಮೌಸಿನ್ ವೇರಿಯೆಂಟ್ ನಲ್ಲಿನ ಕ್ಯಾಪ್ಟನ್ ಸೀಟ್ ಗಳನ್ನು VIP ಎನ್ನಲಾಗಿದೆ, ಅದು ಹಾಗೆ ಇದೆ ಕೂಡ. ಅವು ದೊಡ್ಡದಾಗಿದೆ, ಮೆತ್ತಗಿದೆ, ಹಾಗು ಪೆರ್ಪೋರ್ಟೆಡ್ ನಪ್ಪ ಲೆಥರ್ ಇಂದ ಅಲಂಕೃತವಾಗಿದೆ. ಹೆಡ್ ರೆಸ್ಟ್ ಗಳು ನಿಮಗೆ ನಿದ್ದೆ ಮಾಡಲು ಸಹಕರಿಸುತ್ತದೆ ಹಾಗು ಸೀಟ್ ಗಳು ಸಹ ಅದಕ್ಕೆ ತಕ್ಕ ಹಾಗೆ ಇದೆ. ನೀವು ಕಾಲುಗಳಿಗೆ ಹೆಚ್ಚು ವಿಶಾಲತೆ ಪಡೆಯಲು ಅದು ಸಹಾಯವಾಗುವುದಲ್ಲದೆ . ಒಮ್ಮೆ ಮಾಡಿದರೆ , ನೀವು ಸೀಟ್ ನಲ್ಲಿರುವ ಲೆಗ್ ರೆಸ್ಟ್ ಅನ್ನು ಅನುಭವಿಸಬಹುದು. ಅದನ್ನು ಎಳೆದು ರೇಕ್ಲಿನರ್ ತರಹದ ವ್ಯವಸ್ಥೆ ಮಾಡಬಹುದು. ಅತ್ಯುತ್ತಮ ಆರಾಮದಾಯಕತೆ ಕೊಡುತ್ತದೆ.!
ಆದರೂ, ಈ ವಿಷಯದಲ್ಲಿ ಹಲವು ತಡೆಗಳಿವೆ. ಎರೆಡನೆ ಸಾಲು ಹಿಂದಕ್ಕೆ ಸರಿದಿದ್ದು, ಮುಂಬದಿಯ ಸಾಲು ಮುಂಬದಿಗೆ ಸರಿದಿದ್ದರು ಸಹ ನನಮ್ ಕಾಲು ಚಾಚಲು ಆಗಲಿಲ್ಲ, ಏಕೆಂದರೆ ಅದು ಮುಂಬದಿ ಸೀಟ್ ಗೆ ತಗಲುತ್ತಿತ್ತು . ಅದು ನಿಮ್ಮ ಕಾಲಿನ ಆರಾಮದಾಯಕತೆಗೆ ತಡೆಯಾಗುತ್ತದೆ. ಫುಟ್ ರೆಸ್ಟ್ ಅನ್ನು ಹಿಂಬದಿಗೆ ಸರಿಸಿದರೆ ಇದು ಒಂದು ಅತಿ ಉತ್ತಮ ಕ್ಯಾಪ್ಟನ್ ಸೀಟ್ ಹೊಂದಿದೆ ರೂ 40 ಲಕ್ಷ ಒಳಗೆ.
ಈ ಸೀಟ್ ನಿಂದ , ನಿಮಗೆ ದೊಡ್ಡ ವಿಂಡೋ ಮುಕಾಂತರ ಹೊರಗಿನ ಪ್ರಪಂಚ ಉತ್ತಮವಾಗಿ ಕಾಣುತ್ತದೆ, ಅದು ಅಗಲವಾಗಿ ತೆರೆದುಕೊಳ್ಳುತ್ತದೆ ( V-ಕ್ಲಾಸ್ ನಲ್ಲಿ ಹಾಗೆ ಲಭ್ಯವಿಲ್ಲ) ಹಾಗು ಪಡೆಯುತ್ತದೆ ಮಾನ್ಯುಯಲ್ ಸನ್ ಬ್ಲೈಂಡ್ ಅನ್ನು ಸಹ. ರೇರ್ ಪ್ಯಾಸೆಂಜರ್ ಗಳು ಪಡೆಯುತ್ತಾರೆ ಅವರದೇ ಎಡಿಎ ಕ್ಲೈಮೇಟ್ ಕಂಟ್ರೋಲ್,ಅದನ್ನು ಪ್ಯಾನೆಲ್ ನಿಂದ ಆಪರೇಟ್ ಮಾಡಬಹುದು ಕ್ಯಾಬಿನ್ ನ ಮೇಲ್ಬದಿಯ ಬಲಭಾಗದಿಂದ . ವಿಶಾಲವಾದ ಕ್ಯಾಬಿನ್ ಅನ್ನು ತಂಪಾಗಿರಿಸಲು, ಕಿಯಾ ದವರು ಕೊಟ್ಟಿದ್ದಾರೆ ರೂಫ್-ಮೌಂಟೆಡ್ AC ವೆಂಟ್ ಗಳನ್ನೂ ಎಲ್ಲ ಸಾಲುಗಳಿಗಾಗಿ
ಎರೆಡನೆ ಸಾಲಿನ ಪ್ಯಾಸೆಂಜರ್ ಗಳಿಗೆ ಟಚ್ ಸ್ಕ್ರೀನ್ ಕೊಡಲಾಗಿದೆ. ಅವುಗಳು 10.1-ಇಂಚು ಸ್ಕ್ರೀನ್ ಗಳು ಹಾಗು ಪಡೆಯುತ್ತದೆ ಬಹು ಇನ್ಪುಟ್ ಗಳು HDMI ಹಾಗು AV-IN. ನೀವು ನಿಮ್ಮ ಸ್ಮಾರ್ಟ್ ಫೋನ್ ಅನ್ನು ಸ್ಕ್ರೀನ್ ಗೆ ಮಿರರ್ ಮಾಡಬಹುದು. ಆಡಿಯೋ ಔಟ್ ಪುಟ್ ಅನ್ನು ಕಾರ್ ನ ಮ್ಯೂಸಿಕ್ ಸಿಸ್ಟಮ್ ಗೆ ಬ್ಲೂಟೂತ್ ಅಥವಾ ಪರ್ಸನಲ್ ಹೆಡ್ ಫೋನ್ ಗೆ 3.5mm ಜಾಕ್ ಮುಕಾಂತರ ಕಳುಹಿಸಬಹುದು. ಎರೆಡೂ ಸ್ಕ್ರೀನ್ ಗಳು ಸ್ವತಂತ್ರವಾಗಿದೆ ಪ್ಯಾಸೆಂಜರ್ ಗಳ ಮೋನೋರಂಜನೆಗೆ ಅನುಕೂಲವಾಗುವಂತೆ.\
ಸಹಜವಾಗಿ , ನೀವು ಸ್ಮಾರ್ಟ್ ಫೋನ್ ಬ್ಯಾಟರಿ ಅನ್ನು ಹೆಚ್ಚು ಬಳಸುವ ಸಾಧ್ಯತೆ ಇರುವುದರಿಂದ . ಕಿಯಾ ದವರು ಹಿಂಬದಿಯಲ್ಲಿ USB ಚಾರ್ಜರ್ ಅಲ್ಲದೆ 220V ಲ್ಯಾಪ್ ಟಾಪ್ ಚಾರ್ಜರ್ ಸಹ ಕೊಟ್ಟಿದ್ದರೆ - ಅವು ಮೆರ್ಸೆಡಿಸ್ -ಬೆಂಜ್ V-ಕ್ಲಾಸ್ ನಲ್ಲೂ ಸಹ ಮಿಸ್ ಆಗಿದೆ!
ಒಟ್ಟಾರೆ , ಬಹಳಷ್ಟು ಫೀಚರ್ ಗಳು ಹಾಗು ರೇಕ್ಲಿನರ್ ಸೀಟ್ ಗಳು ಇರುವುದರಿಂದ , ಕಾರ್ನಿವಾಲ್ ನಿಮಗೆ ಈ ಬೆಲೆ ಯಲ್ಲಿ ಅತ್ಯುತ್ತಮ ಎರೆಡನೆ ಸಾಲಿನ ಕ್ಯಾಪ್ಟನ್ ಸೀಟ್ ಅನುಭವ ಕೊಡುತ್ತದೆ.
ಮೂರನೆ ಸಾಲು
ಮೂರನೇ ಸಾಲು ಸಹ ಅತುತ್ತಮ ವಾಗಿದೆ ವಿಶಾಲತೆ ಹಾಗು ಆರಾಮದಾಯಕತೆ ಪರಿಗಣಿಸಿದಾಗ. ನೀವು ಮದ್ಯದ ಸಾಲನ್ನು ಸರಿಸಬಹುದು ಅಥವಾ ಸುಲಭವಾಗಿ ಕ್ಯಾಪ್ಟನ್ ಸೀಟ್ ಮದ್ಯ ಹೋಗಬಹುದು ಹಿಂಬದಿ ಬೆಂಚ್ ತಲುಪಲು. ಅಲ್ಲೂ ಸಹ ಬಹಳಷ್ಟು ಮೊಣಕಾಲು ಜಾಗ ಹಾಗು ಹೆಡ್ ರೂಮ್ ಕೊಡಲಾಗಿದೆ. ಹಾಗು ನೀವು ಮುಂಬದಿ ಸೀಟ್ ಕೆಳಗೆ ಕಾಲು ಚಾಚಬಹುದಾಗಿರುವುದರಿಂದ , ನಿಮಗೆ ಹೆಚ್ಚು ದೂರುವುದಕ್ಕೆ ಅವಕಾಶವಿರುವುದಿಲ್ಲ. ಎಲ್ಲ ಮೂರು ಪ್ಯಾಸೆಂಜರ್ ಗಳಿಗೆ ಹಾಗು ಮ್ಯಾನುಯಲ್ ರಿಕ್ಲಿನ್ ಹೆಚ್ಚು ಆರಾಮದಾಯಕತೆ ಕೊಡುತ್ತದೆ. ಕ್ಯಾಬಿನ್ ನ ಅಗಲತೆ ಇದನ್ನು ಮಕ್ಕಳಿಗೆ ಅಷ್ಟೇ ಅಲ್ಲದೆ ವಯಸ್ಕರಿಗೂ ಸಹ ಅನುಕೂಲಕರವಾಗಿದೆ.
ಫೀಚರ್ ಗಳ ವಿಚಾರದಲ್ಲಿ , ನಿಮಗೆ ದೊರೆಯುತ್ತದೆ ನಿಮ್ಮದೇ ಆದ AC ವೆಂಟ್ ಗಳು, ಸನ್ ಬ್ಲೈಂಡ್ ಗಳು ದೊಡ್ಡ ಗ್ಲಾಸ್ ವಿಂಡೋ ಗಳು ಹಾಗು ಕಪ್ ಹೋಲ್ಡರ್ ಸಹ. ನಿಮಗೆ ದೊರೆಯುತ್ತದೆ 12V ಸಾಕೆಟ್ ಇಲ್ಲೂ ಸಹ. ನಿಮ್ಮ ಸಲಕರಣೆಗಳ ಚಾರ್ಜ್ ನಿಭಾಯಿಸಲು ಅನುಕೂಲವಾಗುವಂತೆ.ಮೇಲ್ಬಾಗದಲ್ಲಿ ನೋಡಿ ನಿಮಗೆ ಒಂದು ಅಲ್ಲ ಎರೆಡು ಸನ್ ರೂಫ್ ಗಳು ದೊರೆಯುತ್ತದೆ. ಮದ್ಯದ ಸಾಲಿನ ಮೇಲೆ ಇರುವುದು ಹೆಚ್ಚು ದೊಡ್ಡದಾಗಿದೆ.
ಡ್ರೈವರ್ ನ್ ಸೀಟ್
ಹಿಂಬದಿ ಸೀಟ್ ಗಳಲ್ಲಿ ಬಹಳಷ್ಟು ದೊರೆಯುತ್ತಿದ್ದು , ಡ್ರೈವರ್ ಮೇಲೆ ಗಮನ ಇಲ್ಲದೆ ಆಗಬಹುದು. ಅದೃಷ್ಟದಂತೆ, ಕಾರ್ನಿವಾಲ್ ನಲ್ಲಿ ಹಾಗೆ ಇಲ್ಲ. ಡ್ರೈವರ್ ಸೀಟ್ ಅನ್ನು ಸರಿಸಿರಿ, ನಿಮಗೆ ದೊಡ್ಡ ಕಾರ್ ಅನುಭವ ಆಗುತ್ತದೆ , ಹಾಗಾಗಿ ಅಳತೆಗಳಲ್ಲಷ್ಟೇ ಅಲ್ಲದೆ ಗುಣಮಟ್ಟದಲ್ಲಿಯೂ ಸಹ. ಎತ್ತರದ ಡ್ರೈವಿಂಗ್ ಸ್ಥಿತಿಗತಿ ಹಾಗು ದೊಡ್ಡ ಗ್ಲಾಸ್ ಏರಿಯಾ ಡ್ರೈವರ್ ಗೆ ಉತ್ತಮ ಸುತ್ತಲಿನ ನೋಟ ಕೊಡುತ್ತದೆ. ಕ್ಯಾಬಿನ್ ನಿಜವಾಗಿಯೂ ವಿಶಾಲವಾಗಿದ್ದು ಡ್ರೈವ್ ಪ್ಯಾಸೆಂಜರ್ ಗಿಂತ ಸ್ವಲ್ಪ ದೂರದಲ್ಲಿ ಇರುತ್ತಾನೆ. ಡ್ಯಾಶ್ ಬೋರ್ಡ್ ಪಡೆಯುತ್ತದೆ ನಯವಾದ ಹೊರಪದರಗಳನ್ನು ಸ್ಟಿಯರಿಂಗ್ ಹಾಗು ಗೇರ್ ಕ್ನೋಬ್ ಪಡೆಯುತ್ತದೆ ಲೆಥರ್ ಸುತ್ತುಗಳು. ಡ್ಯಾಶ್ ಬೋರ್ಡ್ ಮೇಲೆ ಹಾಗು ಡೋರ್ ಗಳ ಮೇಲೆ ವುಡನ್ ಅಸ್ಸೇನ್ಟ್ ಕೊಡಲಾಗಿದೆ. ಸೀಟ್ ಗಳು ಮೆತ್ತನೆಯಾಗಿದ್ದು ಡ್ರೈವರ್ ದೂರದ ಪ್ರಯಾಣಗಳಲ್ಲಿ ಆರಾಮವಾಗಿ ಕುಳಿತುಕೊಳ್ಳುವುದಕ್ಕೆ ಅನುಕೂಲ ಮಾಡಿಕೊಡುತ್ತದೆ.
ಫೀಚರ್ ಗಳ ವಿಚಾರದಲ್ಲಿ , ನಿಮಗೆ ದೊರೆಯುತ್ತದೆ ವೆಂಟಿಲೇಟೆಡ್ ಡ್ರೈವರ್ ಸೀಟ್, ಕ್ರೂಸ್ ಕಂಟ್ರೋಲ್, ಮೂರು ಜೋನ್ ಕ್ಲೈಮೇಟ್ ಕಂಟ್ರೋಲ್, ಹಾಗು ಆಟೋ ಡೇ ನೈಟ್ IRVM ಡ್ರೈವರ್ ಗಾಗಿ ಕೊಡಲಾಗಿದ್ದು ದೊರದ ಪ್ರಯಾಣದಲ್ಲಿಸಹಕಾರಿಯಾಗಿದೆ. ಎರ್ಗಾನಾಮಿಕ್ ಗಳು ಸಹ ಉತ್ತಮವಾಗಿ ಮಾಡಲಾಗಿದೆ 10- ವೆ ಪವರ್ ಅಳವಡಿಕೆಯ ಸೀಟ್ ಹಾಗು ಟಿಲ್ಟ್ ಹಾಗು ಟೆಲೆಸ್ಕೋಪಿಕ್ ಅಳವಡಿಕೆಯ ಸ್ಟಿಯರಿಂಗ್ ಒಂದಿಗೆ.ವಿಭಿನ್ನವಾಗಿದೆ ಎನಿಸುವ ವಿಷಯ ಎಂದರೆ 8-ಇಂಚು ಟಚ್ ಸ್ಕ್ರೀನ್ ಇಟ್ಟಿರುವ ಜಾಗ. ಅದು ಡ್ರೈವರ್ ಕಡೆಗೆ ಬಾಗಿದೆ, ಅದು ಡ್ರೈವರ್ ಗೆ ಸ್ವಲ್ಪ ದೊರದಲ್ಲಿ ಇದೆ ಎನ್ನುವಂತೆ ಭಾಸವಾಗುತ್ತದೆ, ಹಾಗಾಗಿ ಡ್ರೈವ್ ಮಾಡುವಾಗ ಆಪರೇಟ್ ಮಾಡುವುದು ಕಷ್ಟವಾಗಬಹುದು. ಧನ್ಯವಾದಗಳೊಂದಿಗೆ, ಇನ್ಫೋಟೈನ್ಮೆಂಟ್ ಬಟನ್ ಗಳು ಕೈಗೆ ಸಿಗುವ ಹಾಗೆ ಇದೆ.
ಅದು ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ಅನ್ನು ಬೆಂಬಲಿಸುತ್ತದೆ ಹಾಗು ಸರಳವಾಗಿದೆ ಸಹ. ಕಿಯಾ ಹೇಳುವಂತೆ ಅದು ವಯರ್ಲೆಸ್ ಆಪಲ್ ಕಾರ್ ಪ್ಲೇ ಯನ್ನು ವಯರ್ಲೆಸ್ ಫೋನ್ ಚಾರ್ಜರ್ ಒಂದಿಗೆ ಬೆಂಬಲಿಸುತ್ತದೆ. ಅದು ಒಮ್ಮೆ ಆಪಲ್ ಆ ಸಲಕರಣೆಗಲ ಮೇಲೆ ಉಪಯೋಗಿಸಲು ಅನುವು ಮಾಡಿಕೊಟ್ಟರೆ. ವಯರ್ಲೆಸ್ ಸೇವೆ ವಿಚಾರದಲ್ಲಿ , ನಿಮಗೆ UVO ಕನೆಕ್ಟ್ ಫೀಚರ್ ಗಳ ಲಭ್ಯವಿರುತ್ತದೆ, ಅದು ನಿಮಗೆ ರಿಮೋಟ್ ಮೂಲಕ ಸ್ಟಾರ್ಟ್ ಮಾಡಲು, AC ಸ್ವಿಚ್ ಆನ್ ಮಾಡಲು, ಹಾಗು ಕಾರ್ ಅನ್ನು ಲಾಕ್ / ಅನ್ಲೋಕ್ ಮಾಡಲು ಅನುಕೂಲ ಮಾಡಿಕೊಡುತ್ತದೆ. ಅದರಲ್ಲಿ ತುರ್ತು ಸೇವೆ ಹಾಗು ಸುರಕ್ಷತೆ ಕಾಲ್ ಗಳನ್ನು ಕಾರ್ ನಿಂದ ತುರ್ತು ಸೇವಾ ಸೌಲಭ್ಯಗಳಿಗೆ ಮಾಡಲು ಅನುಕೂಲ ಮಾಡಿಕೊಡುತ್ತದೆ.
ಡ್ರೈವರ್ ಹಾಗು ಪಡೆಯುತ್ತಾರೆ ಬಹಳಷ್ಟು ಸ್ಟೋರೇಜ್ ಅನುಕೂಲತೆಗಳನ್ನು . ದೊಡ್ಡ ಡೋರ್ ಪಾಕೆಟ್ ಗಳು, ದೊಡ್ಡ ಸೆಂಟರ್ ಆರ್ಮ್ ರೆಸ್ಟ್ ಸ್ಟೋರೇಜ್ ಜೊತೆಗೆ ಸನ್ ಗ್ಲಾಸ್ ಹೋಲ್ಡರ್, ಹಾಗು ಸೆಂಟರ್ ಕನ್ಸೋಲ್ ನಲ್ಲಿನ ಕಪ್ ಹೋಲ್ಡರ್ ಗಳು ಕೊಡಲಾಗಿದೆ. ನಿಮ್ಮ ಜೊತೆ ತೆಗೆದುಕೊಡ್ ಹೋಗಬಯಸುವ ಎಲ್ಲದಕ್ಕೂ ಅನುಕೂಲತೆ ಕಲ್ಪಿಸಲಾಗಿದೆ.
8-ಸೀಟೆರ್
8-ಸೀಟೆರ್ ಸಂಯೋಜನೆ ಕೇವಲ ಬೇಸ್ ವೇರಿಯೆಂಟ್ ನಲ್ಲಿ ಲಭ್ಯವಿದೆ. ಕೊನೆ ಸಾಲು 7-ಸೀಟೆರ್ ತರಹ ಇದೆ. ವಿಭಿನ್ನತೆ ಇರುವುದು ಮದ್ಯ ಸಾಲಿನಲ್ಲಿ. ಕ್ಯಾಪ್ಟನ್ ಸೀಟ್ ಇಲ್ಲಿ ಭಿನ್ನವಾಗಿದೆ, ಚಿಕ್ಕದಾಗಿದೆ, ಹಾಗು ಸೀಟ್ ಬೇಸ್ ನಲ್ಲಿ ಚಪ್ಪಟೆಯಾಗಿದೆ. ಅವುಗಳ ಮದ್ಯ ತೆಗೆಯಬಹುದಾದ ಸೀಟ್, ಕೊಡಲಾಗಿದೆ ಅದು ಬೆಂಚ್ ತರಹ ಸಂಯೋಜನೆ ಕೊಡುತ್ತದೆ. ಈ ಸೀಟ್ ವಿಶಿಷ್ಟ ಲೆಗ್ ರೆಸ್ಟ್ ಪಡೆಯುವುದಿಲ್ಲ ಅಥವಾ ಸೈಡ್ ಸ್ಲೈಡ್ ಸಹ ಪಡೆಯುವುದಿಲ್ಲ. ಒಟ್ಟಾಗಿ , ಸೀಟ್ ಗಳು ಮಂದಿ ಪ್ಯಾಸೆಂಜರ್ ಗಳು ಆರಾಮದಾಯಕವಾಗಿ ಕುಳಿತುಕೊಳ್ಳಲು ಸಹಕಾರಿಯಾಗಿದೆ. ಹಾಗು ನೀವು ಇಬ್ಬರು ಮಾತ್ರ ಅಲ್ಲಿ ಕುಳಿತಿದ್ದರೆ ಮದ್ಯದ ಸೀಟ್ ನ ಬ್ಯಾಕ್ ರೆಸ್ಟ್ ಅನ್ನು ಫೋಲ್ಡ್ ಮಾಡಿದರೆ ಅದು ದೊಡ್ಡ ಆರ್ಮ್ ರೆಸ್ಟ್ ಜೊತೆಗೆ ಕಪ್ ಹೋಲ್ಡರ್ ಆಗುತ್ತದೆ. ಹಾಗು ಸುಲಭವಾಗಿ ಮೂರನೆ ಸಾಲಿಗೆ ಹೋಗಲು ಅನುವಾಗುವಂತೆ , ಮದ್ಯದ ಸಾಲು ಮಡಚಲಾಗುವುದಿಲ್ಲ ಆದರೆ ಲಂಬವಾಗಿ ನಿಲ್ಲುತ್ತದೆ ಲಿವರ್ ಅನ್ನು ಒಮ್ಮೆ ಎಳೆದರೆ.
9-ಸೀಟೆರ್
ವಾಣಿಜ್ಯ ವಿಭಾಗದಲ್ಲಿ ಇದರ ಬಗ್ಗೆ ಹೆಚ್ಚು ಗಮನ ಇರುತ್ತದೆ. ನಿಮಗೆ ಚಿಕ್ಕ ಕ್ಯಾಪ್ಟನ್ ಸೀಟ್ ಗಳು ದೊರೆಯುತ್ತದೆ, ಆದರೆ ಅವು ನಾಲ್ಕು ಇವೆ. ಅವುಗಳು ಗ್ರೌಂಡ್ ಗೆ ಹತ್ತಿರವಾಗಿದೆ ಹಾಗಾಗಿ , ಇತರ ಎರೆಡು ಸಂಯೋಜನೆಯಷ್ಟು ಆರಾಮದಾಯಕತೆ ಇರುವುದಿಲ್ಲ. ಇಲ್ಲಿನ ನಾಲ್ಕನೇ ಸಾಲು ಬೆಂಚ್ ಸೀಟ್ ಆಗಿದೆ (ಅದು ಏಳು ಅಥವಾ ಎಂಟು -ಸೀಟೆರ್ ತರಹ ಇಲ್ಲ ), ಅದನ್ನು ಹಿಂಬದಿಯಲ್ಲಿ ಕೊಡಲಾಗಿದೆ. ಎಲ್ಲ ಜನಗಳನ್ನು ನಾಲ್ಕು ಸಾಲುಗಳಲ್ಲಿ ಕುಳಿಸುವುದು ಇಕ್ಕಟ್ಟಾಗಿರುತ್ತದೆ. ಯಾರೋ ಒಬ್ಬರು ಸಹ ಉದ್ದವಾಗಿದ್ದರು , ನಾಲ್ಕನೇ ಸಾಲಿನ ಪ್ಯಾಸೆಂಜರ್ ಗೆ ಮೊಣಕಾಲಿಗೆ ಜಾಗ ಇರುವುದಿಲ್ಲ.
ಆದರೆ, ಕೊನೆ ಸಾಲನ್ನು ಮಡಚಿದರೆ ಅದು ವಿಶಾಲವಾದ ಬೂಟ್ ಜೊತೆಗೆ ಚಪ್ಪಟೆ ಫ್ಲೋರ್ ಗೆ ಅನುವು ಮಾಡಿಕೊಡುತ್ತದೆ. ಇದರ ಜೊತೆ ನೀವು ನಾಲ್ಕು ಕ್ಯಾಪ್ಟನ್ ಸೀಟ್ ಗಳನ್ನು ಹಿಂಬದಿಗೆ ಸರಿಸಬಹುದು ಹೆಚ್ಚು ಮೊಣಕಾಲು ಜಾಗ ಪಡೆಯಲು. ಹಾಗು, ಅದರಿಂದ 9-ಸೀಟ್ MPV ಗುಣಕ್ಕೆ ಪೆಟ್ಟು ಕೊಟ್ಟಂತಾದರೂ, ಹಾಗೆ ಮಾಡುವುದರಿಂದ ಇದು ಒಂದು ಉತ್ತಮ 6-ಸೀಟೆರ್ , ಜೊತೆಗೆ ಹೆಚ್ಚು ಲಗೇಜ್ ಗೆ ಅನುಕೂಲತೆ ಪಡೆಯಬಹುದು.
ಬೂಟ್
ಅದು ಆಳವಾಗಿದೆ. ಎರೆಡನೆ ಸಾಲು ಬಳಕೆಯಲ್ಲಿರುವಾಗ , ನಿಮಗೆ 540 ಲೀಟರ್ ಬೂಟ್ ಸ್ಪೇಸ್ ದೊರೆಯುತ್ತದೆ, ಅದು ಎಲ್ಲ ತರಹದ ಲಗೇಜ್ ಇಡಲು ಅನುಕೂಲವಾಗುತ್ತದೆ. ರೇರ್ ಸೀಟ್ ಅನ್ನು ಎರೆಡು ಹಂತದಲ್ಲಿ ಮಡಚಬಹುದು . ಮೊದಲು , ಬ್ಯಾಕ್ ರೆಸ್ಟ್ ಮಡಚಲಾಗುತ್ತದೆ, ಎರೆಡನೆಯದಾಗಿ ಪೂರ್ಣ ಸೀಟ್ ಫ್ಲೋರ್ ಗೆ ಸಮನಾಗುತ್ತದೆ ಹಾಗು ನಿಮಗೆ ಚಪ್ಪಟೆ ಫ್ಲೋರ್ ದೊರೆಯುತ್ತದೆ, ಅದು ಒಟ್ಟಾರೆ 1,624 ಲೀಟರ್ ವಿಶಾಲತೆ ಹೊಂದಿರುತ್ತದೆ.
ಈ ಎರೆಡು ಸ್ಟೆಪ್ ಗಳನ್ನು 60:40 ಸ್ಪ್ಲಿಟ್ ನಲ್ಲಿ ಮಾಡಬಹುದು. ಹಾಗು, ಎರೆಡನೆ ಸಾಲು ತೆಗೆಯಲು ಆಗುವುದಿಲ್ಲ, ಅದನ್ನು ತೆಗೆದರೆ ನಿಮಗೆ ಒಟ್ಟಾರೆ 2,759 ಲೀಟರ್ ಜಾಗ ಸಿಗುತ್ತದೆ ! ಅದು ಇಡೀ ಮನೆಯ ಸರಕುಗಳನ್ನು ತಗೆದುಕೊಡು ಹೋಗಲು ಸಾಕಾಗುತ್ತದೆ.
ಹಾಗು , ನೀವು ಸ್ಪೇರ್ ವೀಲ್ ಬಗ್ಗೆ ಚಿಂತಿಸುತ್ತಿದ್ದರೆ , ಅದನ್ನು ಫ್ಲೋರ್ ಕೆಳಗೆ ಸಂಯೋಜಿಸಲಾಗಿದೆ, ಡ್ರೈವರ್ ಹಿಂಬದಿ ಭಾಗದಲ್ಲಿ. ಅದರಿಂದ ಬಹಳಷ್ಟು ಜಾಗ ಉಳಿತಾಯ ಆಗುತ್ತದೆ ಹಾಗು ಅದು ಪೂರ್ಣ ಅಳತೆಯ ಅಲಾಯ್ ಆಗಿರುವುದಿಲ್ಲ.
ಸುರಕ್ಷತೆ
ಕಾರ್ನಿವಾಲ್ ನಿಮ್ಮ ಒಟ್ಟು ಕುಟುಂಬ ಪ್ರಯಾಣ ಮಾಡಲು ಉಪಯೋಗಿಸಬಹುದಾದ ಕಾರ್ ಆಗಿದೆ , ಸುರಕ್ಷತೆ ಅವಶ್ಯವಾಗಿರುತ್ತದೆ. ಅದೃಷ್ಟವಶಾತ್, ಕಿಯಾ ಹೆಚ್ಚು ಫೀಚರ್ ಭರಿತವಾಗಿದೆ. ಅದು ಪಡೆಯುತ್ತದೆ ಆರು ಏರ್ಬ್ಯಾಗ್ ಗಳು, ISOFIX ಚೈಲ್ಡ್ ಸೀಟ್ ಆಂಕರ್ ಗಳು, ABS ಜೊತೆಗೆ EBD, ಬ್ರೇಕ್ ಅಸಿಸ್ಟ್ ಹಾಗು ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್. ನಿಮಗೆ ರೋಲ್ ಓವರ್ ಮಿಟಿಗೇಷನ್ , ಹಿಲ್ ಸ್ಟಾರ್ಟ್ ಅಸಿಸ್ಟ್, ಹಾಗು ಕಾರ್ನೆರಿಂಗ್ ಬ್ರೇಕ್ ಕಂಟ್ರೋಲ್ ಸಹ ಲಭ್ಯವಿರುತ್ತದೆ.
ಎಂಜಿನ್ ಹಾಗು ಕಾರ್ಯದಕ್ಷತೆ
ಕಿಯಾ ಕಾರ್ನಿವಾಲ್ ಕೇವಲ ಒಂದು ಡೀಸೆಲ್ ಎಂಜಿನ್ ಅವತರಣಿಕೆಯಲ್ಲಿ ಲಭ್ಯವಿದೆ, ಅದನ್ನು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಒಂದಿಗೆ ಸಂಯೋಜಿಸಲಾಗಿದೆ ಅದರ ಪ್ರತಿಸ್ಪರ್ದಿಗಳಿಗಿಂತ ಭಿನ್ನವಾಗಿ ಫ್ರಂಟ್ ವೀಲ್ ಡ್ರೈವ್ ಪಡೆದಿದೆ. ಪೆಟ್ರೋಲ್ ಅಥವಾ ಮಾನ್ಯುಯಲ್ ಅವತರಣಿಕೆಯ ಯೋಜನೆ ಇಲ್ಲ. 2.2L ಯುನಿಟ್ ಇಲ್ಲಿ ಕೊಡಲಾಗಿರುವಂತಹುದು BS6-ಕಂಪ್ಲೇಂಟ್ ಹೊಂದಿದೆ. ಅದು ಕೊಡುತ್ತದೆ 200PS ಪವರ್ ಹಾಗು 440Nm ಟಾರ್ಕ್ . ಎಂಜಿನ್ ಉತ್ತಮವಾಗಿದೆ ಹಾಗು ನಿಶಬ್ದವಾಗಿದೆ ಎಂದೆನಿಸುತ್ತದೆ, ಪೂರ್ಣ ವೇಗದಲ್ಲಿ ಡ್ರೈವ್ ಮಾಡುವಾಗ ಸಹ. ಇದನ್ನು ನಗರದಲ್ಲಿ ಡ್ರೈವ್ ಮಾಡುವುದು ಸುಲಭ ಹಾಗು ಪವರ್ ಡೆಲಿವರಿ ನಯವಾಗಿದೆ ಹಾಗು ಜೆರ್ಕ್ ಕೊಡುವುದಿಲ್ಲ.
ನಗರದಲ್ಲಿನ ಓವರ್ ಟೇಕ್ ಗಳಿಗೆ ಸಾಕಷ್ಟು ಟಾರ್ಕ್ ಲಭ್ಯವಿದೆ ಹಾಗು ಅದು ಕ್ರಮೇಣ ಲಭ್ಯವಿರುತ್ತದೆ ಡ್ರೈವರ್ ಅಥವಾ -ಪ್ಯಾಸೆಂಜರ್ ಗೆ ಆಶ್ಚರ್ಯ ಉಂಟು ಮಾಡುವುದಿಲ್ಲ. ಕಡಿಮೆ ವೇಗದಲ್ಲಿಯೂ ಸಹ , ಎಂಜಿನ್ ಹಾಗು ಗೇರ್ ಬಾಕ್ಸ್ ಆಶ್ಚರ್ಯಕರವಾಗಿ ನಯವಾಗಿದೆ, ಹಾಗಾಗಿ ಕಾರ್ನಿವಾಲ್ ಡ್ರೈವ್ ಮಾಡುವುದು ಉಲ್ಲಾಸಕರವಾಗಿರುತ್ತದೆ. ಬ್ರೇಕ್ ಸ್ವಲ್ಪ ಎಳೆದಂತೆ ಇರುತ್ತದೆ ಹೆಚ್ಚು ತೀಕ್ಷ್ಣವಾಗಿಲ್ಲ. ಬ್ರೇಕ್ ಉಪಯೋಗಿಸುವಾಗ ಕ್ಯಾಬಿನ್ ನಲ್ಲಿ ಜೆರ್ಕ್ ಆಗದಿರುವಂತೆ ಹಾಗೆ ಮಾಡಿರಬಹುದು . ಹಾಗು ನಗರದಲ್ಲಿ ಅದು ಒಪ್ಪಬಹುದಾದ ವಿಷಯ ಆಗಿದ್ದರೂ , ಹೈವೇ ಗಳಲ್ಲಿ ಸ್ವಲ್ಪ ಗಮನಿಸಬೇಕಾಗುತ್ತದೆ.
ನಮ್ಮನ್ನು ತಪ್ಪು ತಿಳಿಯಬೇಡಿ -- ಇದರಲ್ಲಿ ಬಹಳಷ್ಟು ಪವರ್ ಹಾಗು ಟಾರ್ಕ್ ಲಭ್ಯವಿದೆ ಹೈ ವೆ ಗಳಲ್ಲಿ ಸಹ ಆದರೆ ಅದು ಸರಳವಾದ ಡ್ರೈವ್ ಅನುಭವಕ್ಕೆ ಪೂರಕವಾಗಿಲ್ಲ. 100kmph ವೇಗದಲ್ಲಿ , ಎಂಜಿನ್ ಹೋಲ್ಡ್ ಮಾಡುತ್ತದೆ 1500rpm ನಲ್ಲಿ ಹಾಗು ಈ ಕಾರ್ ದಿನ ಪೂರ್ತಿ ಓಡಬಲ್ಲದು. 8- ಸ್ಪೀಡ್ ಟಾರ್ಕ್ ಕಾನ್ವೆರ್ಟರ್ ಗೇರ್ ಬಾಕ್ಸ್ ಬಹಳಷ್ಟು ನಯವಾಗಿದೆ ಕೂಡ. ಅದು ಅಷ್ಟು ವೇಗವಾಗಿಲ್ಲ ಆದರೂ ಶಿಫ್ಟ್ ಗಳು ಸುಲಭವಾಗಿದೆ. ಅದು ನಾವು ಇನ್ನೋವಾ ಹಾಗು ಫಾರ್ಚುನರ್ ನಲ್ಲಿ ಅನುಭವಿಸದಕ್ಕಿಂತ ಉತ್ತಮವಾಗಿತ್ತು, ಹಾಗು ಎಂಡೇವರ್ ಸರಿಸಮನಾಗಿತ್ತು.
ರೈಡ್ ಹಾಗು ಹ್ಯಾಂಡಲಿಂಗ್
ಈ ತರಹದ MPV ಗಳಲ್ಲಿ ಆರಾಮದಾಯಕ ರೈಡ್ ಅನ್ನು ನಿರೀಕ್ಷಿಸಲಾಗುತ್ತದೆ ಮಾಲೀಕರಿಗೆ ಗಳಿಗೆ ಮೆಚ್ಚುಗೆ ಆಗುವಂತೆ , ಹಾಗು ಕಾರ್ನಿವಾಲ್ ಅದನ್ನು ಸುಲಭವಾಗಿ ಮಾಡುತ್ತದೆ. ನಾಲ್ಕು ಕೋನಗಳಲ್ಲಿ ಇಂಡಿಪೆಂಡೆಂಟ್ ಸಸ್ಪೆನ್ಷನ್ ಕೊಡಲಾಗಿದೆ.(ಮ್ಯಾಕ್ ಫೆರ್ಸನ್ ಸ್ಟ್ರೆಟ್ ಗಳು ಮುಂಭಾಗದಲ್ಲಿ ಹಾಗು ಮಲ್ಟಿ ಲಿಂಕ್ ಅನ್ನು ಹಿಂಬದಿಯಲ್ಲಿ) ನಿಮಗೆ ಸಾಧಾರಣಕ್ಕಿಂತ ದೊಡ್ಡದಾಗಿರುವ ಸ್ಪೀಡ್ ಬ್ರೇಕರ್ ಹಾಗು ಪ್ಯಾಚ್ ಆಗಿರುವ ರಸ್ತೆಗಳಲ್ಲಿ ನಿಭಾಯಿಸಲು. ಆರಂಭದಲ್ಲಿ ಸ್ವಲ್ಪ ಕಾಠಿಣ್ಯತೆ ಕಂಡುಬರುತ್ತದೆ , ಅದು ಇಂತಹ ಹೆಚ್ಚು ಭಾರ ಇರುವ ಕಾರ್ ಗಳು ಸರಿಸುಮಾರು ಎರೆಡು ಟನ್ ಗಳ ಬರ ಹೊಂದಿರುವಂತಹವುಗಳಲ್ಲಿ ಸಹಜವಾಗಿರುತ್ತದೆ ಆದರೆ ಅದು ಅನಾನುಕೂಲ ಎಂದೆನಿಸುವುದಿಲ್ಲ . ಹೈವೇ ಗಳಲ್ಲಿ ಸಹ , ರೈಡ್ ಬೌನ್ಸಿ ಎಂದೆನಿಸುವುದಿಲ್ಲ ಹಾಗು ಅದು ಪ್ಯಾಸೆಂಜರ್ ಗಳನ್ನೂ ದಿರಾದ ಪ್ರಯಾಣದಲ್ಲಿ ಆರಾಮಾಗಿ ಇರುವಂತೆ ಮಾಡುತ್ತದೆ.
ಡ್ರೈವರ್ ಸೀಟ್ ನಿಂದ ನೋಟ ಮುಂಬದಿ ಕ್ವಾರ್ಟರ್ ಗ್ಲಾಸ್ ನಿಂದ ಸುಧಾರಿಸಲಾಗಿದೆ. ಅದು ನಿಮಗೆ ಆಕ್ಸಿಡೆಂಟ್ ಗಳನ್ನು ತಡೆಯಲು ಬದಿಗಳ ಮೇಲೆ ಗಮನ ಕೊಡುವುದಕ್ಕೆ ಸಹಕಾರಿಯಾಗಿರುತ್ತದೆ . ನಿಮಗೆ ಪಾರ್ಕಿಂಗ್ ಲಾಟ್ ನಲ್ಲಿ ಅದರ ಅಳತೆಗಳು ಸ್ವಲ್ಪ ಸಮಸ್ಯೆ ಕೊಡಬಹುದು. ಆದರೆ ಕಾರ್ನಿವಾಲ್ ಉತ್ತಮ ಟರ್ನಿಂಗ್ ರೇಡಿಯಸ್ ಒಂದಿಗೆ ತಿರುವುಗಳನ್ನು ಮಾಡುವುದುಸುಲಭ ಮಾಡುತ್ತದೆ. ಕಡಿಮೆ ವೇಗದಲ್ಲಿ ಹಾಗು u-ಟರ್ನ್ ಗಳಲ್ಲಿ ಸ್ಟಿಯರಿಂಗ್ ಸ್ವಲ್ಪ ಭಾರವಾಗಿದೆ ಎನಿಸಬಹುದು . ರೆವೆರ್ಸ್ ಕ್ಯಾಮೆರಾ ಹಾಗು ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಗಳು ನಿಮಗೆ ದುಬಾರಿಯಾದ ಪೈಂಟ್ ಫಿನಿಷ್ ಹೊಂದಿರುವ ಕಾರ್ ತರಚುವ ಹಾಗೆ ಆಗುವುದನ್ನು ತಡೆಯಲು ಸಹಕಾರಿಯಾಗಿರುತ್ತದೆ.
ನಾವು ಒಂದು ವಿಚಾರ ನೇರವಾಗಿ ಹೇಳೋಣ -ಇದು ದೊಡ್ಡ ಕಾರ್ ಆಗಿದೆ ಹಾಗು ಹಾಗೆಯೆ ಡ್ರೈವ್ ಮಾಡುವಂತೆ ಬಯಸುತ್ತದೆ. ಮುಂಬದಿ ಬಹಳಷ್ಟು ಚಪ್ಪಟೆಯಾಗಿದ್ದು ತಿರುವುಗಳಲ್ಲಿ ಸ್ಟೇಬಲ್ ಆಗಿದೆ. ಸ್ಟಿಯರಿಂಗ್ ಸ್ವಲ್ಪ ಭಾರವಾಗಿದೆ, ಹಾಗು ಅದರಿಂದ ಡ್ರೈವಿಂಗ್ ವಿಶ್ವಾಸ ಹೆಚ್ಚುತ್ತದೆ. ಆದರೆ, ನಿರೀಕ್ಷೆಯಂತೆ ಬೊಡಿ ರೋಲ್ ಇದೆ . ಆದರೆ ಅದು ಹೇಗೆ ನಿಯಂತ್ರಣದಲ್ಲಿದೆ ಎಂಬುದು ಆಶ್ಚರ್ಯ ಉಂಟು ಮಾಡುತ್ತದೆ. ಲೇನ್ ಗಳನ್ನು ಒಬ್ಬ ಉತ್ತಮ ಪ್ರಜೆಯಾಗಿ ಮಾಡಿ ಅದು ಕ್ಯಾಬಿನ್ ಹೆಚ್ಚು ಅನುಭವ ಆಗುವುದಿಲ್ಲ. ಹೆಚ್ಚು ತಿರುವುಗಳಿರುವ ರಸ್ತೆಯಲ್ಲೂ ಸಹ ಕ್ಯಾಬಿನ್ ಬಹಳಷ್ಟು ಸ್ಟೇಬಲ್ ಆಗಿದೆ ಹಾಗು ಬೊಡಿ ರೋಲ್ ಹೆಚ್ಚು ಎತ್ತರ ಇರುವ ಬಾಡಿ ಸೂಚಿಸುವಷ್ಟು ಇರುವುದಿಲ್ಲ.
ಅನಿಸಿಕೆಗಳು
ನಮ್ಮ ಚಿಕ್ಕ ಡ್ರೈವ್ ನಲ್ಲಿ , ಕಿಯಾ ಕಾರ್ನಿವಾಲ್ ಉತ್ತಮ ಕುಟಂಬದ ಕಾರ್ ಆಗಿದೆ . ಅದು ಏಳು ಪ್ಯಾಸೆಂಜರ್ ಪ್ರಯಾಣಿಸುವುದಕ್ಕೆ ಅನುಕೂಲವಾಗಿದೆ ಎನ್ನುವುದಷ್ಟೆ ಅಲ್ಲ, ಆ ಕಾರ್ಯವನ್ನು ಸುಲಭವಾಗಿ, ಆರಾಮದಾಯಕವಾಗಿ ಹಾಗು ಐಷಾರಾಮಿಗಳೊಂದಿಗೆ ಮಾಡುತ್ತದೆ. ಉಪಯುಕ್ತತೆಯಲ್ಲಿ , ನವೀನ ಇಂಜಿನಿಯರಿಂಗ್ ಪರಿಹಾರಗಳೊಂದಿಗೆ, ಕ್ಯಾಬಿನ್ ಅನ್ನು ಸಹಜವಾಗಿ ಬಹು ಉಪಯುಕ್ತತೆ ಹೊಂದಿರುವಂತೆ ಮಾಡಲಾಗಿದೆ. ಅದು ಡ್ರೈವ್ ಮಾಡಲು ಸಹ ಸುಲಭವಾಗಿದೆ ಹಾಗು ಹೈವೇ ಗಳಲ್ಲಿ ದೃಢತೆ ಚೆನ್ನಾಗಿದೆ ಹಾಗು ದೂರದ ಪ್ರಯಾಣ ಮಾಡುವವರಿಗೆ ಮುಚ್ಚುಗೆಯಾಗುತ್ತದೆ. ಆದರೆ, ಡ್ರೈವ್ ಮಾಡಲು ಸುಲಭವಾಗಿದ್ದರೂ , ನೀವು ಅದರ ಅಳತೆಗಳ ಬಗ್ಗೆ ಗಮನಹರಿಸಬೇಕಾಗುತ್ತದೆ ವಿಶೇಷವಾಗಿ ಇಕ್ಕಟ್ಟು ಜಾಗದಲ್ಲಿ ಪಾರ್ಕ್ ಮಾಡುವಾಗ.
ಇವೆಲ್ಲವುಗಳಿಗಾಗಿ, ಕಿಯಾ ಸುಮಾರು ರೂ 30 ಲಕ್ಷ (ಎಕ್ಸ್ ಶೋ ರೂಮ್ ) ಕೇಳುತ್ತದೆ ಹಾಗು ಅದು ಬ್ರಾಂಡ್ ನ ಭಾರತದಲ್ಲಿನ ಪ್ರಮುಖ ವಾಹನವಾಗಲಿದೆ ಹತ್ತಿರದ ಭವಿಷ್ಯದಲ್ಲಿ. ಹಾಗಾಗಿ, ಕಾರ್ನಿವಾಲ್ ಯಾವ ಗ್ರಾಹಕರು ಕುಟುಂಬದ ಪ್ರಯಾಣಕ್ಕಾಗಿ ಯಾವುದೇ ರಾಜಿ ಮಾಡಿಕೊಳ್ಳಬಯಸುವುದಿಲ್ಲವೋ ಅಂತಹವರಿಗೆ ಸೂಕ್ತವಾಗಿದೆ - ಬಹಳಷ್ಟು ಫೀಚರ್ ಗಳಿಂದ ಭರಿತವಾಗಿದೆ , ಪ್ರೀಮಿಯಂ SUV ಗಿಂತಲೂ ಹೆಚ್ಚಾಗಿ ಐಷಾರಮಿ ಗಳು, ಆರಾಮದಾಯಕತೆಗಳು ಹೆಚ್ಚು ಬಯಸುವವವರಿಗೆ. . ನೀವು ಅಂತಹ ಗ್ರಾಹಕರಲ್ಲಿ ಒಬ್ಬರಾಗಿದ್ದರೆ ನಿಮ್ಮ ಪಾರ್ಕಿಂಗ್ ಜಾಗವನ್ನು ಪರಿಶೀಲಿಸುವ ಸಮಯ ಬಂದಿದೆ.