• English
  • Login / Register

Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌

Published On ನವೆಂಬರ್ 15, 2024 By nabeel for ಮಾರುತಿ ಡಿಜೈರ್

  • 1 View
  • Write a comment

ಸಂಪೂರ್ಣ ಹೊಸದಾದ ಡಿಜೈರ್‌ ಇನ್ನು ಮುಂದೆ ಸ್ಫೂರ್ತಿಗಾಗಿ ಸ್ವಿಫ್ಟ್ ಕಡೆಗೆ ನೋಡುವ ಅವಶ್ಯಕತೆ ಇಲ್ಲ. ಏಕೆಂದರೆ ಅದು ಎಲ್ಲಾದರಲ್ಲೂ ವ್ಯತ್ಯಾಸವನ್ನು ಪಡೆದಿದೆ

New Maruti Dzire review

ಹೊರಹೋಗುವ ಮಾರುತಿ ಡಿಜೈರ್ ಬಹುತೇಕ ಪರಿಪೂರ್ಣ ಸೆಡಾನ್ ಆಗಿದೆ. ಇದು ಉತ್ತಮ ಫೀಚರ್‌ಗಳನ್ನು ಹೊಂದಿತ್ತು, ತುಂಬಾ ಆರಾಮದಾಯಕವಾಗಿದೆ, ಒಂದು ವಿಶಾಲವಾದ ಸ್ಥಳಾವಕಾಶ ಮತ್ತು ಪ್ರಾಯೋಗಿಕತೆಯನ್ನು ನೀಡುತ್ತದೆ ಮತ್ತು ಮೈಲೇಜ್ ಸಹ ಅದ್ಭುತವಾಗಿದೆ. ಮತ್ತು ಇದಕ್ಕಿಂತೆಲ್ಲಾ ಹೆಚ್ಚಾಗಿ, ಚಾಲನೆ ಮಾಡುವುದು ಸಹ ಖುಷಿಯಾಗುತ್ತದೆ. ನಿಸ್ಸಂದೇಹವಾಗಿ, ಇದು ಟ್ಯಾಕ್ಸಿ ಮಾರುಕಟ್ಟೆಯ ನೆಚ್ಚಿನ ಸೆಡಾನ್ ಆಗಿ ಮಾರ್ಪಟ್ಟಿದೆ. ಆದರೆ ಆ ಕಾರಿನಲ್ಲಿ ಒಂದು ದೊಡ್ಡ ದೋಷವಿತ್ತು. ಇದರಲ್ಲಿ ಯಾವುದೇ ವಾಹ್ ಅಂಶ ಇರಲಿಲ್ಲ - ಫೀಚರ್‌ಗಳಲ್ಲಿ ಅಥವಾ ಅದರ ನೋಟದಲ್ಲಿ.

ಆದರೆ, ಹೊಸ ಡಿಜೈರ್‌ನಲ್ಲಿ ಉತ್ತಮ ನೋಟ ಮತ್ತು ಫೀಚರ್‌ಗಳೊಂದಿಗೆ ಸಂಪೂರ್ಣವಾಗಿ ಬದಲಾಗುತ್ತಿದೆ. ಇದು ಹೊಸ ಕಾರು ಆಗಿದ್ದು, ಸ್ವಿಫ್ಟ್‌ನ ಜೊತೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಈ ಎಲ್ಲಾ ಹೊಸ ಡಿಜೈರ್ ಹೆಚ್ಚು ಅಪೇಕ್ಷಣೀಯವಾಗಿದೆಯೇ ಎಂದು ನೋಡೋಣ. ಮತ್ತು ಈ ಅಪೇಕ್ಷಣೀಯತೆಯನ್ನು ಪಡೆಯಲು, ಈ ಡಿಜೈರ್ ಏನನ್ನಾದರೂ ಕಳೆದುಕೊಳ್ಳಬೇಕೇ?

ನೋಟ

New Maruti Dzire front

ಹಳೆಯ ಡಿಜೈರ್‌ನಲ್ಲಿ ಬಹಳಷ್ಟು ಉತ್ತಮ ಸಂಗತಿಗಳು ಇದ್ದವು. ಹಾಗೆಯೇ, ಇದರ ಸ್ಟೈಲಿಂಗ್ ಎದ್ದು ಕಾಣುವುದಕ್ಕಿಂತ ಇಷ್ಟಪಡುವಂತಿತ್ತು. ಆದರೆ ಈ ಹೊಸ ಕಾರಿನೊಂದಿಗೆ ಅದು ಬದಲಾಗಿದೆ. ಈ ಡಿಜೈರ್ ನೋಡಲು ಉತ್ತಮವಾದ ಸೆಡಾನ್ ಆಗಿದೆ. ಮತ್ತು ಅದು ತನ್ನ ಗುರುತಿಗಾಗಿ ಸ್ವಿಫ್ಟ್ ಮೇಲೆ ಅವಲಂಬಿತವಾಗಿಲ್ಲದ ಕಾರಣ, ಇದು ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿದೆ. ಇದು ನಯವಾಗಿ, ಅಗಲವಾಗಿ ಕಾಣುತ್ತದೆ ಮತ್ತು ಉತ್ತಮ ನಿಲುವನ್ನು ಹೊಂದಿದೆ. ಮತ್ತು ಅದರಲ್ಲಿ ಹೆಚ್ಚಿನವು ಹೊಸ ಮುಂಭಾಗದಲ್ಲಿಯೆ ಇದೆ. ಗ್ರಿಲ್ ಕೆಳಗಿದ್ದು, ಹಾಗೆಯೇ ಅಗಲವಾಗಿದೆ ಮತ್ತು ಅದರ ಮೇಲೆ ದುಬಾರಿ ಕಾಣುವ LED ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳಂತಹ ಸಾಕಷ್ಟು ಪ್ರೀಮಿಯಂ ಅಂಶಗಳನ್ನು ಪಡೆಯುತ್ತದೆ. ಆದರೆ, ಇಂಡಿಕೇಟರ್‌ ಇನ್ನೂ ಹ್ಯಾಲೊಜೆನ್ ಬಲ್ಬ್ ಅನ್ನೇ ಹೊಂದಿದೆ. ಒಂದು ಉತ್ತಮವಾದ ಅಂಶವೆಂದರೆ ಮಧ್ಯದಲ್ಲಿ ಸ್ಲಿಮ್ ಕ್ರೋಮ್ ಬಾರ್ ಆಗಿದ್ದು, ಅದು ಎರಡು DRL ಗಳನ್ನು ದೋಷರಹಿತವಾಗಿ ಸಂಪರ್ಕಿಸುತ್ತದೆ.

New Maruti Dzire side
New Maruti Dzire has 15-inch alloy wheels

ಸೈಡ್‌ನಿಂದ ಗಮನಿಸುವಾಗ, ಡಿಜೈರ್‌ನ ಸಾಂಪ್ರದಾಯಿಕ ಬಾಡಿ ಆಕೃತಿಯನ್ನು ಇನ್ನೂ ಮುಂದುವರಿಸಲಾಗಿದೆ. ಆದರೆ ಇದು ಬಲವಾದ ಮತ್ತು ತೀಕ್ಷ್ಣವಾದ ಭುಜದ ರೇಖೆಗಳೊಂದಿಗೆ ನೋಡಲು ಸ್ವಲ್ಪ ವಿಶೇಷವಾಗಿದೆ. ಇವುಗಳು ಹಿಂಭಾಗದ ಕಡೆಗೆ ಬಲಗೊಳ್ಳುತ್ತವೆ ಮತ್ತು ಹೆಚ್ಚು ಚಾಚಿಕೊಂಡಿದೆ. ಮತ್ತು ಅಲಾಯ್‌ಗಳು ಇನ್ನೂ 15 ಇಂಚುಗಳಾಗಿದ್ದರೂ, ಅವುಗಳು ಮೊದಲಿಗಿಂತ ಉತ್ತಮವಾಗಿ ಕಾಣುತ್ತವೆ. ಒಟ್ಟಾರೆಯಾಗಿ, ಇದು ಹಳೆಯ ಡಿಜೈರ್‌ನೊಂದಿಗೆ ಗೊಂದಲಕ್ಕೀಡಾಗದಿರುವಷ್ಟು ವಿಭಿನ್ನವಾಗಿ ಕಾಣುತ್ತದೆ.

New Maruti Dzire rear
New Maruti Dzire tail lights

ಹಿಂಭಾಗದಿಂದ, ಅದರ ಬಂಪರ್‌ನ ವಿನ್ಯಾಸವು ಡಿಜೈರ್‌ನ ಅಗಲವು ಹೆಚ್ಚಾದಂತೆ ಕಾಣಲು ಸಹಾಯ ಮಾಡುತ್ತದೆ. ಹಾಗೆಯೇ ಹಿಂಭಾಗದಲ್ಲಿನ ಪ್ರಮುಖ ಆಕರ್ಷಣೆ ಎಂದರೆ - ಸ್ಮೋಕ್‌ಡ್‌ ಎಲ್‌ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಬೂಟ್ ಲಿಪ್ ಸ್ಪಾಯ್ಲರ್. ಅಂತಿಮವಾಗಿ, ಈ ಜನರೇಶನ್‌ನಲ್ಲಿ, ಡಿಜೈರ್ ನಿಮಗೆ ಪ್ರೀಮಿಯಂ ಕಾಣುವ ಸೆಡಾನ್ ಅನ್ನು ಹೊಂದುವ ಉತ್ತಮ ಅಂಶವನ್ನು ನೀಡುತ್ತಿದೆ.

ಬೂಟ್‌ ಸ್ಪೇಸ್‌

New Maruti Dzire boot space

ಬೂಟ್ ಸ್ಪೇಸ್ ಡಿಜೈರ್‌ನ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ ಮತ್ತು ಇಲ್ಲಿಯೂ ಸಹ ಇದು ವಿಶಾಲವಾಗಿದೆ. ಇದರ ಸಾಮರ್ಥ್ಯದಲ್ಲಿ 4 ಲೀಟರ್‌ಗಳಷ್ಟು ಹೆಚ್ಚಾಗಿದೆ, ಆದರೆ ವಾಸ್ತವದಲ್ಲಿ ಮುಖ್ಯವಾದ ವಿಷಯವೆಂದರೆ, ಇದರಲ್ಲಿ ಸುಲಭವಾಗಿ ದೊಡ್ಡ ಸೂಟ್‌ಕೇಸ್‌ಗಳು, ಎರಡು ದಿನಕ್ಕೆ ಬೇಕಾಗುವ ಸೂಟ್‌ಕೇಸ್‌ಗಳನ್ನು ಇಡಬಹುದು ಮತ್ತು ಲ್ಯಾಪ್‌ಟಾಪ್ ಮತ್ತು ಡಫಲ್ ಬ್ಯಾಗ್‌ಗಳಿಗೆ ಇನ್ನೂ ಸ್ಥಳಾವಕಾಶವನ್ನು ಹೊಂದಿದೆ.

ಡಿಜೈರ್ ಬಿಡುಗಡೆಯಾದಗ ಪೆಟ್ರೋಲ್‌ನೊಂದಿಗೆ CNG ಆಯ್ಕೆಯಲ್ಲಿಯೂ ಬಂದಿತ್ತು ಮತ್ತು ಇದು ದೊಡ್ಡ ಟ್ಯಾಂಕ್ ಅನ್ನು ಹೊಂದಿರುತ್ತದೆ. ಇದರಿಂದ ಲಗೇಜ್‌ಗಳಿಗೆ ಸ್ಥಳಾವಕಾಶ ಕಡಿಮೆಯಾಗುತ್ತದೆ. ಸಿಎನ್‌ಜಿ ಗ್ರಾಹಕರಿಗೆ ಉತ್ತಮ ಬೂಟ್ ಸ್ಪೇಸ್ ನೀಡುವ ಟಾಟಾ ಮತ್ತು ಹ್ಯುಂಡೈನಂತಹ ಡ್ಯುಯಲ್ ಸಿಲಿಂಡರ್ ತಂತ್ರಜ್ಞಾನವನ್ನು ಮಾರುತಿ ಅಳವಡಿಸಿಕೊಳ್ಳುವ ಸಮಯ ಬಂದಿದೆ. 

New Maruti Dzire boot opening button

ಆದರೂ ಸ್ವಲ್ಪ ನಿರಾಶಾದಾಯಕ ಸಂಗತಿಯೆಂದರೆ, ಬೂಟ್ ತೆರೆಯುವ ವಿಧಾನವಾಗಿದೆ. ಕೀ ಮತ್ತು ಚಾಲಕನ ಸೀಟಿನ ಬಳಿ ಬಟನ್‌ ಲಿವರ್ ಅನ್ನು ಹೊರತುಪಡಿಸಿ, ನೀವು ಈಗ ಬೂಟ್ ಡೋರ್‌ನಲ್ಲಿನ ಬಟನ್‌ನಿಂದ ಬೂಟ್ ಅನ್ನು ತೆರೆಯಬಹುದು. ಕೀಲಿಯು ಬೂಟ್‌ನ ಸಾಮೀಪ್ಯದಲ್ಲಿರುವಾಗ ಮಾತ್ರ ಅದು ಕಾರ್ಯನಿರ್ವಹಿಸುತ್ತದೆ ಎಂಬುವುದನ್ನು ಮನಸ್ಸಿನಲ್ಲಿಟ್ಟುಕೊಂಡರೆ ಒಳ್ಳೆಯದು. ನಿಮ್ಮ ಜೇಬಿನಲ್ಲಿ ಕೀಲಿಯೊಂದಿಗೆ ನೀವು ಕಾರಿನೊಳಗೆ ಕುಳಿತಿದ್ದರೆ, ಮಾಲ್ ಅಥವಾ ಹೋಟೆಲ್‌ಗಳಲ್ಲಿ ಭದ್ರತಾ ತಪಾಸಣೆಗಾಗಿ ನೀವು ಕೆಳಗೆ ಬಾಗಿ ಬಟನ್‌ನ ಮೂಲಕ ಬೂಟ್ ಅನ್ನು ತೆರೆಯಬೇಕಾಗುತ್ತದೆ. ಏಕೆಂದರೆ ಕಾರನ್ನು ಅನ್‌ಲಾಕ್ ಮಾಡಿದರೂ, ಬೂಟ್‌ನ ಹತ್ತಿರ ನಿಮ್ಮ ಕೀ ಇಲ್ಲದ ಕಾರಣ ಬೂಟ್‌ನ ಬಟನ್‌ನಿಂದ ಬೂಟ್ ಅನ್ನು ತೆರೆಯಲಾಗುವುದಿಲ್ಲ.

Published by
nabeel

ಇತ್ತೀಚಿನ ಸೆಡಾನ್ ಕಾರುಗಳು

ಮುಂಬರುವ ಕಾರುಗಳು

ಇತ್ತೀಚಿನ ಸೆಡಾನ್ ಕಾರುಗಳು

×
We need your ನಗರ to customize your experience