ಮಾರುತಿ S -ಕ್ರಾಸ್ ಹೆಚ್ಚು ದಿನ ಬಳಕೆಯ ವರದಿ.
Published On ಮೇ 14, 2019 By abhishek for ಮಾರುತಿ sx4 ಎಸ್ ಕ್ರಾಸ್
- 0 Views
- Write a comment
ಕಾರ್ ದೇಖೊ ಗ್ಯಾರೇಜು ನಲ್ಲಿ ಹೊಸ ಕಾರ್ ಬಂದಿದೆ - ಸುಜುಕಿ S -ಕ್ರಾಸ್ . ಇದು ನಮ್ಮ ಸಹುದ್ಯೋಗಿ ಅರುಣ್ ಅವರಿಗೆ ಬಹಳ ಹುರುಪುಗೊಳ್ಳುವಂತೆ ಮಾಡಿತ್ತು. ಆದರೆ ಅವರಿಗೆ ನಿರಾಶೆಯಾಗುವಂತೆ ಬಾನೆಟ್ ನಲ್ಲಿ DDiS320. ಎಂಜಿನ್ ಬದಲು DDiS200 ಇದ್ದದ್ದು ಕಾರಣವಾಗಿತ್ತು. ನನ್ನ ಮಟ್ಟಿಗೆ ಹೊಸ ವೈಶಿಷ್ಟ್ಯತೆ ಹೊಂದಿರುವ ವೀಲ್ ಗಳು ಹರ್ಷ ಉಂಟುಮಾಡಿತು.
ಈ ಕಾರಿನ ಬಗ್ಗೆ ಮಾತನಾಡುವುದಾದರೆ S -ಕ್ರಾಸ್ ಇತರ ಮಾರುತಿ ಕಾರುಗಳಂತಿಲ್ಲ. ನಿಖರವಾಗಿ ಹೇಳಬೇಕೆಂದರೆ ಇದು ಸಾದಾರಣ ಕಾರ್ ಅಲ್ಲ. ಮೊದಲಿಗೆ ಇದನ್ನು . ಭಾರತದ ಮೊದಲ ಟ್ರೂ ಬ್ಲೂ 'ಪ್ರೀಮಿಯಂ ಕ್ರಾಸ್ಒವರ್ ' ಆಗಿ ತೋರ್ಪಡಿಸಲಾಗಿದೆ. . ಇತರ ಬದಲಾವಣೆ ಹೊಂದಿರುವ ಹ್ಯಾಚ್ ಬ್ಯಾಕ್ ಗಳಂತೆ ಅಲ್ಲ. ಎರೆಡನೆಯದಾಗಿ ಮಾರುತಿ ಇದರ ಜೊತೆಗೆ ನೆಕ್ಸಾ ಬ್ರಾಂಡ್ ಅನ್ನು ಬಿಡುಗಡೆ ಮಾಡಿತು. ಬಹಳಷ್ಟು ಕಾರಣಗಳಿಂದ S -ಕ್ರಾಸ್ ಒಂದು ತುಂಬಾ ಮುಖ್ಯವಾದ ಮಾರುತಿ ಸುಜುಕಿ ಯ ಬಿಡುಗಡೆಯಾಗಿದೆ.
ಮಾರುತಿ ಸುಜುಕಿ S -ಕ್ರಾಸ್ ಅದರ ಹೆಸರೇ ಸೂಚಿಸುವಂತೆ - ಇದು ಪೂರ್ಣವಾದ ಕ್ರಾಸ್ಒವರ್. ಇದು ಒಂದು ಹ್ಯಾಚ್ ಬ್ಯಾಕ್ ಹಾಗು ಕಾಂಪ್ಯಾಕ್ಟ್ SUV ಯ ಒಂದು ಮಿಶ್ರಣ. ಮುಂಬಾಗದಲ್ಲಿ, ದೊಡ್ಡ ಹೆಡ್ ಲ್ಯಾಂಪ್ ಎಲ್ಲದಕ್ಕಿಂತ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ ಮತ್ತು ಅದು ಅಷ್ಟು ಒಳ್ಳೆ ವಿಚಾರ ಅಲ್ಲ. ಇತರ ವಿಷಯಗಳು ಗ್ರಿಲ್ ಮತ್ತು ಸ್ಕಿಡ್ ಪ್ಲೇಟ್ ಸೇರಿ ಹೋಲಿಕೆಯಲ್ಲಿ ಸ್ವಲ್ಪ ಚಿಕ್ಕದಾಗಿ ಕಾಣುತ್ತದೆ.
ಇದರ ಸೈಡ್ ಗಳ ಕಡೆ ನೋಡಿದಾಗ . ಕ್ಲಾಡ್ಡಿಂಗ್ ಹಾಗು ದೃಢ ಸ್ವೇಜ್ ಲೈನ್ ಆಕರ್ಷಕವಾಗಿ ಕಾಣುತ್ತದೆ. ನಮಗೆ ಇದರ 16-inch ಅಲಾಯ್ ಗಳು ನಮಗೆ ಆಕರ್ಷಕವಾಗಿ ಕಾಣುತ್ತದೆ. ಮೊದಲಿನ ನೋಟದಲ್ಲಿ ಅವು ವೀಲ್ ಕ್ಯಾಪ್ ನಂತೆ ಕಾಣುತ್ತದೆ. ಹಿಂದಿನ ಬಾಗದಲ್ಲಿ ಸುರಕ್ಷಾ ಡಿಸೈನ್ ಇದ್ದು ನಿಮಗೆ ಇಷ್ಟವಾಗದೇ ಇರುವುದು ಯಾವುದೂ ಇಲ್ಲ. ಒಟ್ಟಿನಲ್ಲಿ ನಾನು ಹೇಳುವುದು S -ಕ್ರಾಸ್ ಮೊದಲ ನೋಟದಲ್ಲಿ , ಇದರ ಡಿಸೈನ್ ನಿಮಗೆ ಒಂದು ಒಳ್ಳೆ ಅಭಿಪ್ರಾಯ ಬರುವಂತೆ ಮಾಡುತ್ತದೆ. ಇದು ನಮಗೆ ಒಳ್ಳೆ ಅಭಿಪ್ರಾಯ ಬರುವಂತೆ ಮಾಡಿತು.
ಆಂತರಿಕಗಳಲ್ಲಿ S -ಕ್ರಾಸ್ ಪ್ರೀಮಿಯಂ ಎಂಬ ಪಟ್ಟಿಗೆ ನ್ಯಾಯ ಒದಗಿಸುತ್ತದೆ. ಸೀಟ್ ಗಳು ಚೆನ್ನಾಗಿದ್ದು ಅದರ ಹೊರಮೈ ನುಣುಪಾಗಿದೆ ಮತ್ತು ಅದರ ಗುಣಮಟ್ಟವೂ ಸಹ ಚೆನ್ನಾಗಿದೆ. ಡ್ಯಾಶ್ ಸಹ ಚೆನ್ನಾಗಿದ್ದು ನಿಮಗೆ ಒಂದು ಒಳ್ಳೆ ಅನುಭಾವ ಕೊಡುತ್ತದೆ.
ನಮಗೆ ಇಷ್ಟವಾಗದಿದ್ದ ವಿಷಕಾರವೆಂದರೆ ಪವರ್ ವಿಂಡೋ ಸ್ವಿಚ್ ನ ಪ್ಲಾಸ್ಟಿಕ್ ಗುಣಮಟ್ಟ ಇದು ಬೇರೆಯದಕ್ಕೆ ಹೋಲಿಸಿದರೆ ಸ್ವಲ್ಪ ಚೆನ್ನಾಗಿಲ್ಲ ಎಂದೆನಿಸುತ್ತದೆ. ನಮ್ಮ ಪೂರ್ಣವಾಗಿ ಲೋಡ್ ಆದ ಅಲ್ಫಾ ವೇರಿಯೆಂಟ್ ಸ್ಮಾರ್ಟ್ ಪ್ಲೇ ಇನ್ಫೋಟೈನ್ಮೆಂಟ್ ಸಿಸ್ಟಮ್ , ಮಲ್ಟಿ ಇನ್ಫೋ ಡಿಸ್ಪ್ಲೇ, ಮತ್ತು ರೇವೆರ್ಸ್ ಕ್ಯಾಮೆರಾ ದೊಂದಿಗೆ ಬರುತ್ತದೆ.
ನಮಗೆ ವಿಶಾಲವಾದ ಆಂತರಿಕಗಳು ಇಷ್ಟವಾಯಿತು, ನೀವು ಹಿಂಬದಿಯ ಸೀಟ್ ಅನ್ನು ಎರೆಡು ಹಂತಗಳಲ್ಲಿ ಸರಿಪಡಿಸಬವುದು. ನಾವು ಹೆಚ್ಚು ಲಗೇಜ್ ಇತ್ತು ಪರೀಕ್ಷಿಸಲಾಗಲಿಲ್ಲ ಆದರೆ ಒಟ್ಟು 353 litres ಜಾಗವಿದ್ದು ಅದು ವಸ್ತುಗಳನ್ನು ಇಡಲು ಸೌಕರ್ಯವಾಗಿದೆ.
ಈ ಕಾರ ಈಗಲೇ ಹೊರಬಂದಿದ್ದು ನಾವು ಹೆಚ್ಚೇoದರೆ 70 km ಓಡಿಸಿದ್ದು ಸ್ಟಾಪ್ ಮತ್ತು ಗೋ ದಂತಹ ಟ್ರಾಫಿಕ್ ನಲ್ಲಿ ಹೆಚ್ಚು ಡ್ರೈವ್ ಮಾಡಿದ್ದೆವು. ಆದರೂ ಸದ್ಯದಲ್ಲೇ S -ಕ್ರಾಸ್ ನಲ್ಲಿ ಹೈವೆ ನಲ್ಲಿ ಹೋಗುತ್ತೇವೆ. ಇದರಲ್ಲಿರುವ DDiS200 ಎಂಜಿನ್ 1.6 ನದರಷ್ಟು ಶಕ್ತಿಯುತವಾಗಿಲ್ಲದಿರಬಹುದು, ಆದರೆ ನಾವು ಬಹಳಷ್ಟು ಚೆನ್ನಾಗಿರುವ ವೇಗದ ಅಂಕಿಗಳನ್ನು ನಿರೀಕ್ಷಿಸಬಹುದು. ನೀವು S -ಕ್ರಾಸ್ 1.6 ನ ಫಸ್ಟ್ ಡ್ರೈವ್ ರಿಪೋರ್ಟ್ ಅನ್ನು ಇಲ್ಲಿ ನೋಡಬಹುದು.
ಇದರ ರೈಡ್ ಕ್ವಾಲಿಟಿ ಬಹಳಷ್ಟು ಸದೃಢವಾಗಿದೆ. ಇದರ ಸಸ್ಪೆನ್ಷನ್ ಸ್ವಲ್ಪ ಕಠಿಣ, ಆದರೆ ಇದು ಕಠಿಣ ಅಂಕು ಡೊಂಕು ಗಳನ್ನು ತಡೆದುಕೊಳ್ಳುತ್ತದೆ. ಹ್ಯಾಂಡಲಿಂಗ್ ಅಷ್ಟೇನು
ನಿಖರವಾಗಿಲ್ಲ, ಇದಕ್ಕೆ ಎತ್ತರದ ಗ್ರೌಂಡ್ ಕ್ಲಿಯರೆನ್ಸ್ ಕಾರಣವಾಗಿರಬಹುದು ಮತ್ತು ಡುಯಲ್ ಪರ್ಪಸ್ ಟೈರ್ ಕೂಡ. ಇದರೊಟ್ಟಿಗೆ ನಿಮಗೆ ಬಹಳಷ್ಟು ಮನೋರಂಜಕವಾಗಿರುತ್ತದೆ ಕೂಡ.
ನಾವು ಇದರ ದೂರದ ಡ್ರೈವ್ ಮಾಡಿದನಂತರ ಹೆಚ್ಚು ವಿವರಗಳನ್ನು ಕೊಡುತ್ತೇವೆ. ಅಷ್ಟರವರೆಗೆ ನಾನು ಅರುಣ್ ಅವರ ಕೈ ಗಳನ್ನು ದೂರವಿರಿಸಬೇಕಾಗುತ್ತದೆ. ಈ ಪೇಜ್ ಅನ್ನು ಗಮನಿಸುತ್ತಿರಿ.