• English
  • Login / Register

ಮಾರುತಿ ಸುಜುಕಿ S -ಕ್ರಾಸ್ ಫೇಸ್ ಲಿಫ್ಟ್: ವಿಮರ್ಶೆ

Published On ಮೇ 14, 2019 By alan richard for ಮಾರುತಿ ಎಸ್.ಕ್ರಾಸ್ 2017-2020

ಹೊಸ S -ಕ್ರಾಸ್ ಹೊಸ ಡಿಸೈನ್ ನೊಂದಿಗೆ ಮತ್ತು ಚಿಕ್ಕದಾದ 1.3-litre DDiS 200 ಹೊಂದುವುದರೊಂದಿಗೆ  ಗ್ರಾಹಕರ ಮನ ಗೆಲ್ಲಬಹುದೇ ?

ಪರೀಕ್ಷಿಸಿದ ಕಾರ್: ಮಾರುತಿ ಸುಜುಕಿ S -ಕ್ರಾಸ್ :

ಎಂಜಿನ್: 1.3-litre ಡೀಸೆಲ್ ಆಟೋಮ್ಯಾಟಿಕ್ | 90PS/200Nm

ARAI ಅಧಿಕೃತವಾಗಿ ಘೋಷಿಸಲ್ಪಟ್ಟ ಮೈಲೇಜ್: 25kmpl

ರೋಡ್ ಟೆಸ್ಟ್ ನ ಮೈಲೇಜ್ : 19.15kmpl (ನಗರ ) / 20.65kmpl (ಹೈ ವೇ)

Maruti Suzuki S-Cross

S -ಕ್ರಾಸ್ ಏನಾದರು ಟೀಕೆ ಗಳಿಗೆ ಒಳಗಾಗಿದ್ದಾರೆ ಅದು ಸಾಧಾರಣವಾದ ಡಿಸೈನ್ ನಿಂದ. ಮತ್ತು S -ಕ್ರಾಸ್  ಹಿಂದಿನ ವರ್ಷ  ಸೆಪ್ಟೆಂಬರ್ ಪಡೆದಂತಹ ಫೇಸ್ ಲಿಫ್ಟ್  ಗೆ ಮಿಶ್ರಿತ ವಿಮರ್ಶೆಗಳನ್ನು ಪಡೆದಿದೆ. ಇದರ ನೋಟವು ಕೆಲವು  ಅನಿಸಿಕೆಗಳನ್ನು ಪಡೆಯುವುದರಲ್ಲಿ ಸಂಶಯವಿಲ್ಲ. ಮಾರುತಿ ಯು 1.6-litre ಅಲ್ಫಾ ಡೀಸೆಲ್ ಮೋಟಾರ್ ಅನ್ನು ಸಹ ರೇಂಜ್ ಟಾಪ್ ವೇರಿಯೆಂತ್ ನಿಂದ ಹಿಂಪಡೆದಿದ್ದಾರೆ .  ಇದು S-Cross’ ನ ಟಾಪ್ ಎಂಡ್ ಬೆಲೆಯನ್ನು ಕಡಿಮೆ ಗೊಳಿಸಲು ಸಹಾಯಮಾಡಿದೆ. ಮಾರುತಿ ಯು  ಸುಜುಕಿ ಯ Smart Hybrid Vehicle ಅಥವಾ SHVS ಅನ್ನು ಅಳವಡಿಸಿದ್ದು ಅದು ಮೈಲೇಜ್ ಹೆಚ್ಚಿಸಲು  ಮತ್ತು ವೇಗವನ್ನು ಹೆಚ್ಚಿಸಲು ಕೂಡ  ಸಹಕಾರಿಯಾಗಿದೆ. ನಾವು ಒಂದು ವಾರ ಈ S -ಕ್ರಾಸ್ ಅನ್ನು ಬೇರೆ ಬೇರೆ ರೋಡ್ ಗಳಲ್ಲಿ ಓಡಿಸಿ ಈ ಬದಲಾವಣೆಗಳು ಸಹಕಾರಿಯಾಗಿದೆಯೇ ಅಥವಾ ವ್ಯತಿರಿಕ್ತ ಪರಿಣಾಮ ಬೀರಿದೆಯೇ ಎಂದು ನಿಜವಾದ ರಸ್ತೆ ಯ ಸ್ಥಿತಿ ಗತಿ ಗಳಲ್ಲಿ ಪರೀಕ್ಷಿಸಿದೆವು.

Maruti Suzuki S-Cross  ಬಾಹ್ಯ

Maruti Suzuki S-Cross

ಒಮ್ಮೆಗೆ ದೊಡ್ಡದಾದ ಬದಲಾವಣೆಗಳ ಬಗ್ಗೆ ತಿಳಿಯಲು ಹೊಸ ಮಾರುತಿ ಸುಜುಕಿ S-ಕ್ರಾಸ್ ಅನ್ನು ಪರಿಶೀಲಿಸಿದಾಗ ನಮಗೆ ಹೆಚ್ಚಾಗಿ ಕಂಡುಬರುವ ವಿಷಯವೆಂದರೆ ಅದು, ಇದರ ಹೊಸ ಮುಖ. ನೀವು ಹಳೆಯ S -ಕ್ರಾಸ್ ಹಾಗು ಹೊಸದನ್ನು ಪಕ್ಕದಲ್ಲಿರಿಸಿ ನೋಡಿದಾಗ ನಿಮಗೆ ಎರೆಡೂ ಒಂದೇ ತರಹ ಇದೆ ಎಂದು ಅನಿಸುವುದಿಲ್ಲ. ಹೊಸ 10-ಸ್ಲಾಟ್ ಗ್ರಿಲ್ ಮತ್ತು ಎದ್ದು ಕಾಣುವ ಕ್ರೋಮ್ ಅಸೆಂಟ್ ಗಳು ಮತ್ತು ಹೊಸ  LED ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಆಕರ್ಷಿಸುತ್ತವೆ. ಬಂಪರ್ ಕೂಡ ಹೊಸದಾಗಿದ್ದು ಬಾನೆಟ್ ಮೇಲೂ ಸಹ ಎರೆಡು ಅಸೆಂಟ್ ಗಳು ಇದೆ. ಮಿಕ್ಕೆಲ್ಲ ಬಾಗಗಳು ಸೌನ್ದರ್ಯ ವರ್ಧಕಗಳಲ್ಲೂ ಒಳಗೊಂಡಿದ್ದು ಹಿಂಬದಿಯ ಟೈಲ್ ಲೈಟ್ ಗಳು ರೇ ಡಿಸೈನ್ ಪಡೆದಿವೆ ಮತ್ತು ಹೊಸ ಅಲಾಯ್ ವೀಲ್ ಗಳನ್ನೂ ಪಡೆದಿದ್ದು  ಹಳೆಯ ಪ್ಲಾಸ್ಟಿಕ್ ಹಬ್ ಕ್ಯಾಪ್ ನಂತೆ ಕಾಣುತ್ತಿದ್ದ  ಡಿಸೈನ್ ಗಿಂತ ನವೀನವಾದ ಬದಲಾವಣೆಗಳು ಆಕರ್ಷಕವಾಗಿದೆ.

Maruti Suzuki S-Cross

ಹೊಸ ಗ್ರಿಲ್ ಮತ್ತು ಹೆಡ್ ಲ್ಯಾಂಪ್ ಡಿಸೈನ್ ಮುಂಬಾಗಕ್ಕೆ ಆಕರ್ಷಕ ಹೊಳಪು ಕೊಡುವುದಲ್ಲದೆ ಮತ್ತು ಇಲ್ಲಿಯದು ಅಲ್ಲ , ಅಲ್ಲಿಯದೂ ಅಲ್ಲ ಎಂಬ ಹಳೆಯ ಕಾರಿನ ನೋಟವನ್ನು ತೆಗೆದುಹಾಕಿದೆ. ನಮಗೆ ತಿಳಿದಿರುವಂತೆ ಈ ಫೇಸ್ ಲಿಫ್ಟ್ ಸ್ವಲ್ಪ ಪೊಲಾರೈಸಿಂಗ್ ಆಗಿದ್ದು ಕಾರ್ ದೇಖೊ ಆಫೀಸ್ ನಾಲ್ಲುವು ಕೂಡ ವಿಭಿನ್ನ ಅನಿಸಿಕೆಗಳನ್ನು ಪಡೆದಿದೆ, ಯಾವುದು ಚೆನ್ನ್ನಾಗಿದೆ ಎಂಬ ವಿಷಯಕ್ಕೆ. ಒಟ್ಟಿನಲ್ಲಿ ಇದು ಆಕರ್ಷಕವಾಗಿದೆ ಎಂಬುದರಲ್ಲಿ ಸಂಶಯವಿಲ್ಲ.

Maruti Suzuki S-Cross

ಆಂತರಿಕಗಳು

ಅಂತರಿಕಗಳಲ್ಲೂ ಅಷ್ಟೇನು ಬದಲಾವಣೆಗಳು ಇಲ್ಲ, ಹೊರನೋಟಕ್ಕಾದರೂ ಸರಿ. ಡ್ಯಾಶ್ ಬೋರ್ಡ್ ನ ಮೆಟೀರಿಯಲ್ ಹೊರಮೈ ನಲ್ಲಿ ಸ್ವಲ್ಪ ಬದಲಾವಣೆಗಳಿವೆ, ಪ್ಯಾಸೆಂಜರ್ ಸೀಟ್ ನ ಮುಂಬಾಗದಲ್ಲಿ ಮಾತ್ರ. ಇದು ಸಾಫ್ಟ್ ಟಚ್ ಮಾಟೆರಿಲ್ ಒಳಗೊಂಡಿದ್ದು ಇದರ ಹೊರಮೈ  ಹಿಂದಿನ  ಬದಲಾಯಿಸಲ್ಪಟ್ಟ ಪ್ಲಾಸ್ಟಿಕ್ ಗಳಿಗಿಂತ ಚೆನ್ನಾಗಿದೆ. ಕ್ಯಾಬಿನ್ ನ ಮಿಕ್ಕ ಬಾಗಗಳು  ಹಿಂದಿನಂತೆ ಪೂರ್ಣ ಕಪ್ಪು ಥೀಮ್ ಹೊಂದಿರುವ ಪ್ಯಾಸೆಂಜರ್ ಸ್ಪೇಸ್ ಆಗಿದೆ.

Maruti Suzuki S-Cross
 

ಮಾರುತಿಯು ತಮ್ಮ ಹೆಚ್ಚು ಆದ್ಯತೆ ಪಡೆದ ಫಾರ್ಮುಲಾವನ್ನು ಬದಲಿಸಿಲ್ಲ. ಡ್ರೈವರ್ ಹಾಗು ಪ್ಯಾಸೆಂಜರ್ ಸೀಟ್ ಒಳ್ಳೆ ಸಪೋರ್ಟ್ ಕೊಡುವಂತಿದ್ದು ಮತ್ತು ಒಳ್ಳೆ ಸೈಡ್  ಬೊಲ್ಸ್ಟರಿಂಗ್ ಗಳು ನಿಮಗೆ ಉತ್ತಮವಾದ ಸಪೋರ್ಟ್ ಗಳನ್ನೂ ಸಹ ಕೊಡುತ್ತದೆ. ಹಿಂಬದಿಯ ಸೀತ್ತ್ ಮುರು ಜನಕ್ಕೆ ಅರಮಧ್ಯಕವಾಗಿ ಕುಳಿತುಕೊಳ್ಳಲು ಅಣುವುಮಾಡಿಕೊಡುತ್ತದೆ. ದೂರದ ಪ್ರಯಾಣಗಳ್ಲಲು ಸಹ ಮುಂಬದಿಯ ಪ್ಯಾಸೆಂಜರ್ ಗಳು ಲೆಗ್ ರೂಮ್ ಬಗ್ಗೆ ರಾಜಿ ಮಾಡಿಕೊಳ್ಳದೆ.  

Maruti Suzuki S-Cross

ಕ್ಯಾಬಿನ್ ವಿಚಾರದಲ್ಲಿ ಅಷ್ಟೇನು ಕಂಪ್ಲೇಂಟ್ ಗಳು ಇಲ್ಲ, ಆದರೂ ಮಾರುತಿ ಈ ಅವಕಾಶವನ್ನು ಉಪಯೋಗಿಸಿಕೊಂಡು ಇದರಲ್ಲಿ ಹಿಂಬದಿಯ ಏರ್ ಕಾನ್ ವೆಂಟ್ ಗಳನ್ನು ಅಳವಡಿಸಬಹುದಾಗಿತ್ತು. ಇದು ಮಾತ್ರ ಇಂತಹ ಸೆಗ್ಮೆಂಟ್ ನ ಕಾರುಗಳಲ್ಲಿ ನೀವು ಬಯಸಬಹುದಾದ ವಿಷಯವಾಗಿರಬಹುದು.

Maruti Suzuki S-Cross

ಟೆಕ್ನಾಲಜಿ

Maruti Suzuki S-Cross

ಇದರಲ್ಲಿರುವ 7-inch ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಈಗ ಹೊಸ ಫೀಚರ್ ಗಳಾದ ಆಂಡ್ರಾಯ್ಡ್ ಆಟೋ ವನ್ನು ಒಳಗೊಂಡಿದೆ, ಇದು ಹಳೆಯದರ;;ಈ ಮಿಸ್ ಆಗಿತ್ತು ಮತ್ತು ಹಳೆಯ ಮಾಡೆಲ್ ನ ಓನರ್ ಗಳಿಗೆ  ಒಪ್ಪುವಂತೆ ಫೈಟ್ಮೆಂಟ್ ಆಗಿ ಅಳವಡಿಸಿ ಕೊಡಲಾಗುತ್ತಿದೆ ಕೂಡ. ಇದನ್ನು  ಈಗ ಮುರು ಫೀಚರ್ ಗಳಾದ ಆಪಲ್ ಕಾರ್ ಪ್ಲೇ ಹಾಗು ಮಿರರ್ ಲಿಂಕ್ ಜೊತೆಗೆ ಕೊಡಲಾಗುತ್ತಿದೆ. ಇನ್ಫೋಟೈಮೆಂಟ್ ಜೊತೆಗಿರುವ 6- ಸ್ಪೀಕರ್ ಗಳು  ಸ್ಪುಟವಾದ ಶಬ್ದ ಕೊಡುವುದಲ್ಲದೆ ಸ್ಟ್ಯಾಂಡರ್ಡ್ ಇಕ್ವಿಪ್ಮೆಂಟ್ ಆಗಿ ದೊರೆಯುತ್ತದೆ ಕೂಡ. ಇನ್ಫೋಟೈನ್ಮೆಂಟ್ ಸಿಸ್ಟಮ್ ನಲ್ಲಿ ಬಿಲ್ಟ್ ಇನ್ ನೇವಿಗೇಶನ್ ಸಿಸ್ಟಮ್, ಬ್ಲೂಟೂತ್ ಸ್ಟಿಯರಿಂಗ್ ಮೌಂಟೆಡ್ ಕಂಟ್ರೋಲ್ ನೊಂದಿಗೆ, ವಾಯ್ಸ್ ಕಮಾಂಡ್ ಗಳು, ಮತ್ತು ಸ್ಮಾರ್ಟ್ ಫೋನ್ ಆಪ್ ಕೂಡ ಇದ್ದು ಎಂಟರ್ಟೈನ್ಮೆಂಟ್ ನ ಕಂಟ್ರೋಲ್ ಗೆ ಸಹಾಯಕವಾಗಿದೆ. ಟಾಪ್ ಸ್ಪೆಕ್ ಅಲ್ಫಾ ಪುಶ್ ಬಟನ್ ಸ್ಟಾರ್ಟ್,  ರೇರ್ ಸೀಟ್ ಅಳವಡಿಕೆಗಳು, ಪಾರ್ಕಿಂಗ್ ಸೆನ್ಸರ್ ಗಳು, ಮತ್ತು ಕ್ಯಾಮೆರಾ, ಆಟೋ ಲೆವೆಲ್ಲಿಂಗ್ , ಮತ್ತು ಆಟೋ -ಆನ್ ಹೆಡ್ ಲ್ಯಾಂಪ್ ಗಳು, ಆಟೋ ಡಿಮ್ಮಿಂಗ್ IRVM ಗಳು, ಮತ್ತು ರೈನ್ ಸೆನ್ಸಿಂಗ್ ವೈಪರ್ ಗಳನ್ನೂ ಪಡೆಯುತ್ತವೆ

ಕಾರ್ಯ ದಕ್ಷತೆ

Maruti Suzuki S-Cross

ಇದರಲ್ಲಿ ಒಂದು ಎಂಜಿನ್ ಆಯ್ಕೆ ಮಾತ್ರ ಕೊಡಲಾಗಿದೆ, ಅದು 90PS, 1.3-litre multijet ಡೀಸೆಲ್. ಈ ಎಂಜಿನ್ ಬಗ್ಗೆ ನಾವು ಬಹಳಷ್ಟು ಮಾತನಾಡಿದ್ದು (ಇದೆ ಎಂಜಿನ್ ಬ್ರೆಝ , ಸಿಯಾಜ್ ಹಾಗು ಎರ್ಟಿಗಾ ದಲ್ಲಿ ಉಪಯೋಗಿಸಲಾಗಿದೆ, ಇದರೊಟ್ಟಿಗೆ ಈ ಎಂಜಿನ್ ಅನ್ನು ಬಹಳಷ್ಟು ಇತರ ಕಾರ್ ಮೇಕರ್ ಗಳ  ಕಾರುಗಳಲ್ಲಿಯೂ ಸಹ ಉಪಯೋಗಿಸಲಾಗಿದೆ), ಈ ಬಾರಿ ಇದನ್ನು  ಸುಜುಕಿ ಯ Smart Hybrid Vehicle or SHVS ಜೊತೆಗೆ  ಹೊರತರಲಾಗಿದೆ. ಇದು ಒಂದು ಚಿಕ್ಕ ಪಾತ್ರ ವಹಿಸಿದರೂ, ಇದು ಒಂದು ಮುಖ್ಯವಾದ ವಿಭಿನ್ನತೆ ಕೊಡುತ್ತದೆ. ಈ ಸಿಸ್ಟಮ್ ನ ಮುಖ್ಯ ಪಾತ್ರಧಾರಿ ಸ್ಟಾರ್ಟರ್ ಮೋಟಾರ್ ಹಾಗುಅಲ್ಟಾರ್ನೇಟರ್  ಬ್ಯಾಟರಿ ಚಾರ್ಜ್ ಮಾಡುವುದಕ್ಕೆ ಬಳಸಿರುವುದು. ಈ ಮೋಟಾರ್ ಕಾರ್ ಸ್ಟಾರ್ಟ್ ಮಾಡುವುದಕ್ಕಲ್ಲದೆ ಆಟೋ ಸ್ಟಾರ್ಟ್ ಸ್ಟಾಪ್ ಮಾಡುವಾಗ ಇದು ಎಂಜಿನ್ ಗೆ  ವೇಗಗತಿ ಹೆಚ್ಚಿಸುವಾಗ ಹೆಚ್ಚಿನ ಟಾರ್ಕ್ ಕೂಡ ಒದಗಿಸುತ್ತದೆ, ಮತ್ತು ಮೈಲೇಜ್ ಸಹ ಹೆಚ್ಚಿಸುತ್ತದೆ. ಇಡೀ ಸ್ಟಾರ್ಟರ್ ಮೋಟಾರ್ ವೇಗಗತಿಮಾಡುವಾಗ ಬರುವ ಶಕ್ತಿಯನ್ನು ಬ್ಯಾಟರಿ ಚಾರ್ಜ್ ಮಾಡಲು ಉಪಯೋಗಿಸುತ್ತದೆ ಕೂಡ.

Maruti Suzuki S-Cross

ಇದರಲ್ಲಿ ಎಲೆಕ್ಟ್ರಿಕಲ್  ಅಸ್ಸಿಸ್ಟನ್ಸ್ ಸ್ವಲ್ಪ ಕಡಿಮೆ ಇದೆ. ಹಾಗಾಗಿ ನಿಮಗೆ ಕಾರ್ಯ ದಕ್ಷತೆಯಲ್ಲಿ ಅಷ್ಟೇನು ವೆತ್ಯಾಸ ಕಂಡುಬರುವುದಿಲ್ಲ. ಆದರೂ ಇದರಲ್ಲಿ SHVS ಇಲ್ಲದಿರುವ ಕಾರುಗಳಿಗಿಂತ ವಿಭಿನ್ನವಾದ ಸೂಕ್ಷ್ಮತೆ ಇದ್ದು ಹೆಚ್ಚಿನ ಟಾರ್ಕ್ ಇದರ ಸ್ಪೀಡ್ ಅನ್ನು 1800rpm ಮರ್ಕ್ ಗೆ ತೆಗೆದುಕೊಂಡುಹೋಗುತ್ತದೆ. ಇದರಲ್ಲಿ ದೂರದ ಪ್ರಯಾಣಗಳಲ್ಲಿ ವೆತ್ಯಾಸ ಕಂಡುಬರುತ್ತದೆ ಹಾಗು ಹೆಚ್ಚು ಮೈಲೇಜ್ ಅನ್ನು ಸಹ ಕೊಡುತ್ತದೆ , S -ಕ್ರಾಸ್ ನಮಗೆ 19.16kmpl ಸಿಟಿಯಲ್ಲಿ ಹಾಗು 20.65kmpl ಹೈವೇ ಗಳಲ್ಲಿ ಕೊಡುತ್ತಿತ್ತು. ಇದರಲ್ಲಿರುವ SHVS ಹೈ ವೆ ಗಳಲ್ಲಿ ಮೈಲೇಜ್  ಅಷ್ಟೇನು ವೆತ್ಯಾಸ ಕಂಡುಬರದಿದ್ದರೂ ಸರಾಸರಿ ವೇಗಗತಿ ಸಮನಾಗಿರುವುದರಿಂದ, ನಗರಗಳಲ್ಲಿನ ಬಹಳಷ್ಟು ಕಾರುಗಳ ಮೈಲೇಜ್ 3-4kmpl ಹೈವೆ ಗಳಲ್ಲಿ ಪಡೆಯುವುದಕ್ಕಿಂತ ಕಡಿಮೆಯಾಗಿರುತ್ತದೆ.  ಈ ನಗರ ಮತ್ತು ಹೈ ವೆ ಗಳಲ್ಲಿನ ಅಲ್ಪ ವೆತ್ಯಾಸಕ್ಕೆ SHVS ಸಿಸ್ಟಮ್ ನ ಅಳವಡಿಕೆ ಕಾರಣ ಎಂದೇ ವಿವರಿಸಬಹುದು.

ನಮ್ಮ ನೇರವಾದ ಕಾರ್ಯ ದಕ್ಷತೆ ಪರೀಕ್ಷೆಯಲ್ಲಿ S -ಕ್ರಾಸ್  0-100kmph ವೇಗಗತಿಯನ್ನು ಕೇವಲ 10.31s ಪಡೆಯಿತು ಮತ್ತು ಕ್ವಾರ್ಟರ್ ಮೈಲಿ ಅನ್ನು 17.15 ಸೆಕೆಂಡ್ ನಲ್ಲಿ 127.23kmph ವೇಗದಲ್ಲಿ ಕ್ರಮಿಸಿತು.

ರೈಡ್ ಮತ್ತು ಹ್ಯಾಂಡಲಿಂಗ್

Maruti Suzuki S-Cross

ಇದರ ಸಸ್ಪೆನ್ಷನ್  ಸಿಸ್ಟಮ್ ಹಳೆಯ ಕಾರಿನಂತೆಯೇ ಇದೆ ಮತ್ತು ಕ್ಯಾಬಿನ್ ಕ್ಗುಣಮಟ್ಟ ಚೆನ್ನಾಗಿದ್ದು  ಕಠಿಣ ರೋಡ್  ಗಳಲ್ಲಿ ರೋಲ್ ಕಂಟ್ರೋಲ್ ಅನ್ನು ಚೆನ್ನಾಗಿ ನಿರ್ವಹಿಸುತ್ತದೆ.  ಚಿಕ್ಕ  ವೆತ್ಯಾಸಗಳನ್ನು ಚೆನ್ನಾಗಿ ನಿರ್ವಹಿಸಲಾಗಿದ್ದು ನಿಮಗೆ ದೊಡ್ಡ ಎತ್ತಿಹಾಕುವಿಕೆಗಳು ಮುಂದಿನ ಸೀಟ್ ನಲ್ಲಿ ಮಾತ್ರ ಅನುಭವವಾಗುತ್ತದೆ. ಹಿಂಬದಿಯ ಪ್ಯಾಸೆಂಜರ್ ಸೀಟ್ ಗಳಲ್ಲಿ ಮುಂದಿನದ್ದಕ್ಕಿಂತ ಸ್ವಲ್ಪ ಹೆಚ್ಚು ಎತ್ತಿಹಾಕುವಿಕೆಯ ಅನುಭವವಾಗುತ್ತದೆ., ಆದರೆ ಇದು ಅಷ್ಟೇನು ಪರಿಣಾಮಬೀರುವುದಿಲ್ಲ ಕೂಡ. ಮಾರುತಿ ಹೇಳುವಂತೆ  ಇದರ ಕಂಪೋನೆಂಟ್ ನಲ್ಲಿ ಮತ್ತು ಸಸ್ಪೆನ್ಷನ್ ನಲ್ಲಿ ಯಾವುದೇ ಬದಲಾವಣೆಗಳನ್ನು ತರಲಾಗಿಲ್ಲ., ಆದರೆ ಹಳೆಯ ಮಾಡೆಲ್ ಅನ್ನು ನಾವು ಆಗಾಗ್ಗೆ ಡ್ರೈವ್ ಮಾಡಿದ್ದರಿಂದ ಸ್ವಲ್ಪ ಕನ್ಫ್ಯೂಸ್ ಆಯಿತು. ಹೊಸ S -ಕ್ರಾಸ್ ರಸ್ತೆಯ ಅಂಕು ಡೊಂಕು ಗಳನ್ನು  ಹಿಂದಿನದಕ್ಕಿಂತ ಚೆನ್ನಾಗಿ  ನಿಭಾಯಿಸುತ್ತದೆ ಮತ್ತು ಡ್ಯಾoಪಿಂಗ್  ಕೂಡ ಚೆನ್ನಾಗಿದೆ.

Maruti Suzuki S-Cross

ಹೊಸ S -ಕ್ರಾಸ್ ಅಗಲವಾದ 215/60 R16 ಟೈರ್ ಗಳನ್ನೂ ಹೊಂದಿದ್ದು ಇದು 205-section ಹೊಂದಿದ್ದ ಹಳೆಯ ಮಾಡೆಲ್ ನಳ್ಳಿ ಅಳವಡಿಸಿದ್ದ ಟೈರ್ ಗಳಿಗಿಂತ ಚೆನ್ನಾಗಿದೆ. ಈ ಹೆಚ್ಚಿನ ಅಗಳ , ಇದರ ಸ್ಟಿಯರಿಂಗ್ ಹಿಂದಿನದ್ದಕ್ಕಿಂತ ಸ್ವಲ್ಪ ಹೆಚ್ಚಾಗಿದೆ ಎಂದೇ ತೋರಿಸುತ್ತದೆ. S -ಕ್ರಾಸ್ ಕಾರ್ನರ್ ಗಳನ್ನು ಚೆನ್ನಾಗಿ ನಿರ್ವಹಿಸುತ್ತದೆ ಕೂಡ ಮತ್ತು ಹೆಚ್ಚಿನ ವೇಗಗಳಲ್ಲಿ ಸ್ವಲ್ಪ ರೋಲ್ ಆಗುವ ಅನುಭಾವವಾಗುತ್ತದೆ ಎನಿಸುತ್ತದೆ.

ಸುರಕ್ಷತೆ

ಡುಯಲ್ ಫ್ರಂಟ್ ಏರ್ಬ್ಯಾಗ್, ABS with EBD S -ಕ್ರಾಸ್ ನ ಎಲ್ಲಾ ವೇರಿಯೆಂತ್ ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಬರುತ್ತದೆ.ಮತ್ತು ISOFIX   ಚೈಲ್ಡ್ ಸೀಟ್ ಆಂಕರ್ ಗಳು ಸಹ.

ವೇರಿಯೆಂಟ್ ಗಳು

 

S -ಕ್ರಾಸ್ ನಾಲ್ಕು ವೇರಿಯೆಂಟ್ ಗಳು ಲಭ್ಯವಿದೆ ಅವೆಂದರೆ (ಇಕ್ವಿಪ್ಮೆಂಟ್ ಗಾಲ ಇರುವಿಕೆಯ ಶ್ರೇಣಿಗಳಲ್ಲಿ ) ಸಿಗ್ಮ, ಡೆಲ್ಟಾ, ಝೀಟಾ ಮತ್ತು ಟಾಪ್ ಲೈನ್ ವೇರಿಯೆಂಟ್ ಆದ ಅಲ್ಫಾ.

ಅಂತಿಮ ಅನಿಸಿಕೆ

Maruti Suzuki S-Cross

ಈ ನವೀಕರಣಗೊಂಡಿರುವ S -ಕ್ರಾಸ್ ನಿಂದ ಮಾರುತಿಯು  S -ಕ್ರಾಸ್ ಕಾರು ನೋಡಲು ಸಾಧಾರಣವಾಗಿದೆ ಎಂಬ ಸಮಸ್ಯೆಯನ್ನು ನಿಭಾಯಿಸಿದೆ. ಮತ್ತು ಇದು ಬಹಳಷ್ಟು ರೀತಿಯಲ್ಲಿ SUV  ತರಹ ಕಾಣಿಸುತ್ತದೆ, ಮತ್ತು ವಿಶಾಲವಾದ ಅಂತರಿಕಗಳುಳ್ಳ ಅರ್ಬನ್ ಕಾರ್ ಆಗಿದ್ದು ದೂರದ ಪ್ರಯಾಣಕ್ಕೂ ಅನುಕೂಲವಾಗಿದೆ. ಇದರಲ್ಲಿ  SHVS  ಸಿಸ್ಟಮ್ ನ ಅಳವಡಿಕೆ ಚಿಕ್ಕ ವೆತ್ಯಾಸಗಳನ್ನು ತಂದಿದೆ ಇದು micro-hybrid tech ಬಳಕೆ  ಡ್ರೈವ್ ಗುಣಮಟ್ಟ ತೋರಿಸುತ್ತದೆ ಹಾಗು ಮೈಲೇಜ್ ಕೂಡ ಹೆಚ್ಚಿದೆ, ಡ್ರೈವ್ ನಲ್ಲಿ ಪರೀಕ್ಷಿಸಿದಂತೆ. ಆಗ ಮಾರಾಟವಾದ ಯೂನಿಟ್ ಗಾಲ ಸಂಖ್ಯೆ ಹೆಚುತ್ತಿದೆಯೆಂದರೆ ಅದು ಮಾರುತಿ ತೆಗೆದುಕೊಂಡಿರುವ ಕ್ರಮಗಳು ಸರಿಯಾಗಿವೆ ಎಂದೇ ತೋರಿಸುತ್ತದೆ.  .

ಇತ್ತೀಚಿನ ಹ್ಯಾಚ್ಬ್ಯಾಕ್ ಕಾರುಗಳು

ಮುಂಬರುವ ಕಾರುಗಳು

ಇತ್ತೀಚಿನ ಹ್ಯಾಚ್ಬ್ಯಾಕ್ ಕಾರುಗಳು

×
We need your ನಗರ to customize your experience