• English
  • Login / Register

ಮಾರುತಿ ಸುಜುಕಿ ವಿಟಾರಾ AMT:ವಿಮರ್ಶೆ

Published On ಜೂನ್ 11, 2019 By nabeel for ಮಾರುತಿ ವಿಟರಾ ಬ್ರೆಜ್ಜಾ 2016-2020

  • 1 View
  • Write a comment

ವಿಟಾರಾ ಬ್ರೆಝ ಪೂರ್ಣ ಪ್ಯಾಕೇಜ್ ಹೊಂದಿದೆ ಇದರಲ್ಲಿ ಬಹಳಷ್ಟು ಫೀಚರ್ ಗಳು ಇವೆ, ನೋಟ ಚೆನ್ನಾಗಿದೆ, ಬೆಲೆ ಕೂಡ ಒಪ್ಪುವಂತಿದೆ, ಮತ್ತು ಉತ್ತಮ ಮೈಲೇಜ್ ಕೊಡುತ್ತದೆ ಕೂಡ. ಈ ಹಿಂದೆ ಆಟೋಮ್ಯಾಟಿಕ್ ಇಲ್ಲದಿರುವ ವಿಚಾರ ಹೊರಬರುತ್ತಿತ್ತು. ಈಗ ಹಾಗೆ ಇಲ್ಲ. AMT ಯ ಅಳವಡಿಕೆ ವಿಟಾರಾ ಬ್ರೆಝ ವನ್ನು ನಮ್ಮ ಸ್ಪಷ್ಟ ಆಯ್ಕೆಯಾಗಿ ಮಾಡುತ್ತದೆ.

ಮಾರುತಿ ಯು ವಿಟಾರಾ ಬ್ರೆಝ ದಲ್ಲಿ  AMT  ಯನ್ನು ಪರಿಚಯಿಸಿದ್ದಾರೆ 2018 ನವೀಕರಣದ ಜೊತೆಗೆ. ಮಾರುತಿ ಕಾರ್ ಗಳಲ್ಲಿ 1.3-ಲೀಟರ್ ಡೀಸೆಲ್ ಎಂಜಿನ್ನೊಂದಿಗೆ  AMT ಮಾರುತಿ ಯು ವಿಟಾರಾ ಬ್ರೆಝ ದಲ್ಲಿ  AMT  ಯನ್ನು ಪರಿಚಯಿಸಿದ್ದಾರೆ 2018 ನವೀಕರಣದ ಜೊತೆಗೆ. ಮಾರುತಿ ಕಾರ್ ಗಳಲ್ಲಿ 1.3-ಲೀಟರ್ ಡೀಸೆಲ್ ಎಂಜಿನ್ನೊಂದಿಗೆ  AMT  DDiS200 ಮತ್ತು ಮಾರುತಿ ಕಾರ್ ಗಳಲ್ಲಿ 1.3-ಡೀಸೆಲ್ ಎಂಜಿನ್ ಒಂದಿಗೆ AMT ಯನ್ನು ಸ್ವಿಫ್ಟ್ ಮತ್ತು ಸ್ವಿಫ್ಟ್ ಡಿಜೈರ್  ಅಳವಡಿಸಿತ್ತು. ಇದೆ ಮೊಳ ಬಾರಿಗೆ ಅದನ್ನು ಹೆಚ್ಚಿನ  ಹೊಂದಿರುವ DDiS200 ಆವೃತ್ತಿಯಲ್ಲೂ ಕೊಟ್ಟಿದ್ದಾರೆ. AMT ಕೊಡುವುದರೊಂದಿಗೆ ಹಲವು ಫೀಚರ್ ಗಳನ್ನೂ ನವೀಕರಣಗೊಳಿಸಲಾಗಿದೆ . ಈ ಸಂಯೋಜನೆ ನಿಮಗೆ ಟ್ರಾಫಿಕ್ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆಯೇ? ಮತ್ತು ಬೇರೆ ಏನು ಬದಲಾವಣೆಗಳು ಆಗಿವೆ?

ಹೊರನೋಟ

Maruti Suzuki Vitara Brezza

  • ಹೊರನೋಟದ ಬಗ್ಗೆ ಹೇಳಬೇಕೆಂದರೆ 2018 ನವೀಕರಣದಲ್ಲಿರುವ ಬದಲಾವಣೆ  ಎಂದರೆ ಕಪ್ಪು ಅಲಾಯ್ ವೀಲ್  ಗಳು,ಇವು ಈಗ Z ಮತ್ತು  Z+ ವೇರಿಯೆಂಟ್ ಗಳಲ್ಲೂ ಲಭ್ಯವಿದೆ.

Maruti Suzuki Vitara Brezza

  • ಅವು ಹಳೆಯ ಗ್ರೇ ಬಣ್ಣವನ್ನು ಬದಲಿಸುತ್ತದೆ ಆದರೆ ಅಳತೆ ಮತ್ತು ಗಾತ್ರ ಹಾಗೆ ಇದೆ. ನಮ್ಮ ಪ್ರಕಾರ ಕಪ್ಪು ಬಣ್ಣದ್ದು ನೋಡಲು ಚೆನ್ನಾಗಿದೆ. ಹಾಗು ಆರೆಂಜ್ ಬಣ್ಣದ್ದು ಹೊಸ ಕೊಡುಗೆ ಆಗಿದ್ದು ಹಳೆಯ ನೀಲಿ ಬಣ್ಣವನ್ನು ಬದಲಿಸುತ್ತದೆ.
  • ನಂತರ ಲೈಸನ್ಸ್ ಪ್ಲೇಟ್ ಮೇಲೆ ಕ್ರೋಮ್ ಪಟ್ಟಿ ಇದೆ, ಇದು ಹಿಂದೆ ಕೇವಲ ಟಾಪ್ ಎಂಡ್ ವೇರಿಯೆಂಟ್ ಗಳಲ್ಲಿ ಮಾತ್ರ ದೊರೆಯುತ್ತಿತ್ತು , ಈಗ ಎಲ್ಲದರಲ್ಲೂ ಸಿಗುತ್ತದೆ.
  • ಇತರ ವಿಷಯಗಳಾದ ಬಾಕ್ಸ್ SUV  ಶೈಲಿ, LED ಲೈಟ್ ಗೈಡ್ , ಫ್ಲೋಟಿಂಗ್ ರೂಫ್ ಶೈಲಿ, ಮತ್ತು ಅಗಲವಾದ ಗ್ಲಾಸ್ ಇರುವ ಜಾಗ ಗಳು ಬ್ರೆಝ ದ ಯಶಸ್ಸಿಗೆ ಕಾರಣವಾಗಿತ್ತು ಮತ್ತು ಅದನ್ನು ಹಾಗೆಯೇ ಮುಂದುವರೆಸಲಾಗಿದೆ.

Maruti Suzuki Vitara Brezza

ಆಂತರಿಕಗಳು

Maruti Suzuki Vitara Brezza

ಆಂತರಿಕಗಳಲ್ಲಿ, ವಸ್ತುಗಳು ಹಾಗೆಯೇ ಇದೆ. ನಿಮಗೆ ಸುಂದರವಾಗಿ ಕಾಣುವ ಪೂರ್ಣ ಕಪ್ಪು ಬಣ್ಣದ ಡ್ಯಾಶ್ ಬೋರ್ಡ್ ಸ್ಮಾರ್ಟ್ ಪ್ಲೇ ಇನ್ಫೋಟೈನ್ಮೆಂಟ್  ಸಿಸ್ಟಮ್ ಸಿಗುತ್ತದೆ.  ಅದು ಆಪಲ್  ಕಾರ್ ಪ್ಲೇ , ಆಂಡ್ರಾಯ್ಡ್ ಆಟೋ ಮತ್ತು ಮಿರರ್ ಲಿಂಕ್ ಸಂಯೋಜನೆಗೆ ಅನುಕೂಲವಾಗಿದೆ. ಮತ್ತು ನಿಮಗೆ ಬ್ಲೂಟೂತ್ AUX ಮತ್ತು  USB ಕನೆಕ್ಟಿವಿಟಿ ಸಹ ದೊರೆಯುತ್ತದೆ. ಟಾಪ್ ವೇರಿಯೆಂಟ್ ನಲ್ಲಿ ನಿಮಗೆ 6 ಸ್ಪೀಕರ್ ಗಳು ಮತ್ತು ಹೆಚ್ಚು ಬಾಸ್ ಒಂದಿಗಿನ ಆಡಿಯೋ ಗುಣಮಟ್ಟ ಮೆಚ್ಚುವಂತಿದೆ.

Maruti Suzuki Vitara Brezza

 

ನೀವು ನಿಖರವಾದ ಬಂಗಿಯಲ್ಲಿ ಕುಳಿತುಕೊಳ್ಳಬಹುದು ಇದು ವಿಟಾರಾ ಬ್ರೆಝ ದ ಒಂದು ಅನುಕೂಲವಾಗಿದೆ.  ಆದರೆ  ಅನುಕೂಲಗಳಂತೆ ಅನಾನುಕೂಲಗಳೂ ಸಹ ಇದೆ. ಪ್ಲಾಸ್ಟಿಕ್ ನ ಗುಣಮಟ್ಟ ಮತ್ತುಮೇಲ್ಪಾರಗಳು ಕಳಪೆ ಗುಣಮಟ್ಟದು ಎನಿಸುತ್ತದೆ. ಮತ್ತು ಒಟ್ಟಾರೆ ಆಂತರಿಕ ಗುಣಮಟ್ಟ ಪ್ರೀಮಿಯಂ ಆಗಿ ಇಲ್ಲ AMTವೇರಿಯೆಂಟ್ ನಲ್ಲಿ ನಿಮಗೆ ಕ್ರೂಸ್ ಕಂಟ್ರೋಲ್ ಸಹ ದೊರೆಯುವುದಿಲ್ಲ, ಈ ಫೀಚರ್ ಮಾನ್ಯುಯಲ್ ವೇರಿಯೆಂಟ್ ನಲ್ಲಿ ಇದೆ.

Maruti Suzuki Vitara Brezza

 

2018 ನವೀಕರಣದೊಂದಿಗೆ ಮಾರುತಿ ಯು ಆಯ್ಕೆ ಗಳನ್ನು ವೇರಿಯೆಂಟ್ ಲೈನ್ ಅಪ್ ನಲ್ಲಿ ಕೊಟ್ಟಿಲ್ಲ. ನಿಮಗೆ ಈಗ  ಸುರಕ್ಷತೆ ಫೀಚರ್ ಗಳಾದ ಡುಯಲ್ ಏರ್ಬ್ಯಾಗ್ ABS  ಮತ್ತು EBD , ISOFIX ಚೈಲ್ಡ್ ಸೀಟ್ ಮೌಂಟ್ ಗಳು, ರೇರ್ ಪಾರ್ಕಿಂಗ್ ಸೆನ್ಸರ್ ಮತ್ತು ಸೀಟ್ ಬೆಲ್ಟ್ ಪ್ರಿ ಟೆನ್ಸಿನ್ರ್ ಮತ್ತು ಲೋಡ್ ಲಿಮಿಟರ್ ಗಳೊಂದಿಗೆ ಎಲ್ಲ ವೇರಿಯೆಂಟ್ ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ.

AMT ವೇರಿಯೆಂಟ್ ಗಳಲ್ಲಿನ ಮುಖ್ಯ ಬದಲಾವಣೆ ಎಂದರೆ AMT ಗೇರ್ ಶಿಫ್ಟರ್, ಅದು ಸರಳವಾಗಿದೆ ಮತ್ತು ನೀವು ಶಿಫ್ಟರ್ ಅನ್ನು ಎಡಗಡೆಗೆ ತಳ್ಳಬಹುದು ಮಾನ್ಯುಯಲ್ ಮೋಡ್ ಪಡೆಯಲು.

Maruti Suzuki Vitara Brezza

Check out: Mahindra S201: Vitara Brezza, EcoSport, Nexon Rival Spied Inside Out

ಎಂಜಿನ್ ಮತ್ತು ಕಾರ್ಯದಕ್ಷತೆ

Maruti Suzuki Vitara Brezza

1.3-ಲೀಟರ್  DDiS200 ಡೀಸೆಲ್ ಎಂಜಿನ್ ಗೆ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೂ ಇದರಲ್ಲಿ ಗರಿಷ್ಟ  90PS   ಹಾಗು 200Nm ಗರಿಷ್ಟ ಟಾರ್ಕ್  ಕೊಡುತ್ತದೆ.ಇದರಲ್ಲಿ 2,000rpm ಒಳಗೆ ಟರ್ಬೊ ಲ್ಯಾಗ್ ಮುಂದುವರೆದಿದೆ. ನಂತರ  4500rpm ವರೆಗೂ ಶೀಘ್ರ ವೇಗಗತಿ ಪಡೆಯುತ್ತದೆ. AMT ಟ್ರಾನ್ಸ್ಮಿಷನ್ ನಿಂದಾಗಿ  ಟರ್ಬೊ ಲ್ಯಾಗ್ ನ ಪರಿಣಾಮವನ್ನು  ಕಡಿಮೆ ಮಾಡುತ್ತದೆ.

ಗೇರ್ ಬಾಕ್ಸ್ ಗೇರ್ ಗಳನ್ನೂ ಹೆಚ್ಚಾಗಿ ಬದಲಿಸುವುದಿಲ್ಲ, ಮೇಲಿನದು ಅಥವಾ ಕೆಳಗಿನದು. ಮತ್ತು ಕೆಳಗಿನ ಗೇರ್ ಗಳನ್ನು ಕಡಿಮೆ ರೇವ್ ಗಳಲ್ಲಿ ಹೋಲ್ಡ್ ಮಾಡುತ್ತದೆ ಕಾರ್ ಅನ್ನು ಪವರ್ ಬ್ಯಾಂಡ್ ನಲ್ಲಿ ಇರಿಸಲು. ಹಾಗಾಗಿ ನಿಮಗೆ ಸರಳವಾದ ರೈಡ್ ಸಿಗುತ್ತದೆ ಮತ್ತು ವೇಗಗತಿ ಬಗ್ಗೆ ಚಿಂತಿಸಬೇಕಾಗಿಲ್ಲ. ಓವರ್ಟೇಕ್ ಮಾಡಲೂ ಸಹ ಗೇರ್ ಬಾಕ್ಸ್ ಡೌನ್ ಶಿಫ್ಟ್ ಅನ್ನು ತ್ರೋಟಲ್ ಅನ್ನು ಗಟ್ಟಿಯಾಗಿ ಆಮಿದಾಗ. ಇದರ ಹೊರತಾಗಿ ಕಾರ್ ನಲ್ಲಿ ಅದೇ ಗೇರ್ ನಲ್ಲಿ ಡ್ರೈವ್ ಮಾಡಲು ಸಹಕರಿಸುತ್ತದೆ. ಹೈವೆ ಗಳಲ್ಲಿ, ನಿಮಗೆ 4th ನಿಂದ  5th ಗೇರ್ ಗೆ ಬದಲಿಸುವಾಗ ಅಷ್ಟೇನೂ ಕಠಿಣ ಎಂದೆನಿಸುವುದಿಲ್ಲ, ಮತ್ತು ಕಾರ್ ಸಂತೋಷದಿಂದ  ಮುಂದೆ ಸಾಗುತ್ತದೆ.

Maruti Suzuki Vitara Brezza

ತ್ರೋಟಲ್ ಪ್ರತಿಕ್ರಿಯೆಯನ್ನು ಸ್ವಲ್ಪ ಹಿಂದೆಳೆಯಲಾಗಿದೆ. ಹಾಗಾಗಿ, ನೀವು ಸ್ವಲ್ಪ ಹೆಚ್ಚು ಪರಿಷ್ಟಮ ಪಡಬೇಕಾಗುತ್ತದೆ ಕಾರ್ಯದಕ್ಷತೆ ಹೆಚ್ಚಿಸಲು. ಎಲ್ಲಿಯವರೆಗೂ ನೀವು ತ್ರೋಟಲ್ ಅನ್ನು ಗಟ್ಟಿಯಾಗಿ ಒತ್ತುವುದಿಲ್ಲವೋ ಅಲ್ಲಿಯವರೆಗೆ  ಗೇರ್ ಶಿಫ್ಟ್ ಸರಳವಾಗಿರುತ್ತದೆ. ನಿಮಗೆ ಟ್ರಾಫಿಕ್ ನಲ್ಲಿ ವೇಗವಾಗಿ ಹೋಗಬೇಕೆನಿಸಿದರೆ,ಮಾನ್ಯುಯಲ್ ಮೋಡ್ ಗೆ ಬದಲಾಗುವುದು ಒಳಿತು ಮತ್ತು ಶಿಫ್ಟ್ ಅನ್ನು ನೀವೇ ಕಂಟ್ರೋಲ್ ಮಾಡಬಹುದು.

ಆದರೆ ಗೇರ್ ಬಾಕ್ಸ್ ಹೋಲ್ಡಿಂಗ್ ವಿಷಯವು ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ. ಮಾನ್ಯುಯಲ್ ನಲ್ಲಿ ನಮಗೆ 21kmpl  ದೊರೆಯಿತು ನಗರದಲ್ಲಿ ನಮ್ಮ ಪರೀಕ್ಷೆಯಲ್ಲಿ, AMT ಯಲ್ಲಿ ನಮಗೆ 17.6kmpl ದೊರೆಯಿತು. ಹೈ ವೆ ಗಳಲ್ಲೂ ಸಹ ಮೈಲೇಜ್ 5kmpl ಕಡಿಮೆಯಾಗಿ  20.9kmpl ದೊರೆಯಿತು. ಆದರೂ ಈ ಸಂಖ್ಯೆಗಳು ಪ್ರತಿಸ್ಪರ್ದಿಗಳಿಗೆ ಹೋಲಿಸಿದಾಗ ಚೆನ್ನಾಗಿದೆ ಎಂದೆನಿಸುತ್ತದೆ ಮತ್ತು ಅದು ಮನ ಮೆಚ್ಚುವಂತಿರುತ್ತದೆ ಕೂಡ.

ಒಟ್ಟಿನಲ್ಲಿ AMT ಯನ್ನು ನಗರಗಳಲ್ಲಿನ ಉಪಯೋಗಕ್ಕಾಗಿ ಮಾಡಲಾಗಿದೆ. ಮತ್ತು ಗೇರ್ ಬಾಕ್ಸ್ ನಿಮ್ಮನ್ನು ಪವರ್ ಬ್ಯಾಂಡ್ ನಲ್ಲಿ ಸದಾ ಇರುವಂತೆ ಮಾಡುತ್ತದೆ, AMT ಯ ಡ್ರೈವಿಂಗ್ ಮಾನ್ಯುಯಲ್ ಗಿಂತಲೂ ಚೆನ್ನಾಗಿರುತ್ತದೆ.

ರೈಡ್ ಮತ್ತು ಹ್ಯಾಂಡಲಿಂಗ್

Maruti Suzuki Vitara Brezza

ವಿಟಾರಾ ಬ್ರೆಝ ರೈಡ್ ನಲ್ಲಿ ದೃಢವಾಗಿದೆ. ನಮಗೆ ಈ ದೃಢತೆ ಈಗ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ ಎಂದೆನಿಸಿದರೂ, ಇದರಲ್ಲಿ ರಸ್ತೆಯ ಪಾಟ್ ಹೋಲ್ ಮತ್ತು ಅಂಕು ಡೊಂಕುಗಳಿಂದ ಉಂಟಾಗುವ ಒತ್ತಡವನ್ನು ಕ್ಯಾಬಿನ್ ಗೆ ಕಳಿಸುತ್ತದೆ. ಅದರಲ್ಲೂ ನೀವು ನಿದಾನವಾಗಿ ಡ್ರೈವ್ ಮಾಡುವಾಗ ಈ ಉಟ್ಟಡಗಳನ್ನು ಕ್ಯಾಬಿನ್ ನಲ್ಲಿ ನೀವು ಅನುಭವಿಸಬಹುದು. ರೋಡ್ ಭೂಮ್ಪ್ ಗಾಲ ಮೇಲೆ ವೇಗವಾಗಿ ಹೋಗುವುದರಿಂದ ಹೆಚ್ಚು ಆರಾಮದಾಯಕವಾಗಿರುವುದು.

ಈ ರೈಡ್ ಹೈ ವೆ ಗಳಲ್ಲಿ ಇನ್ನು ಉತ್ತಮವಾಗಿರುತ್ತದೆ, ಮತ್ತು ಬಾಡಿ ರೋಲ್ ಬಾಡಿ ವಿನ್ಯಾಸ ಪರಿಗಣಿಸಿದಾಗ ಕಂಟ್ರೋಲ್ ನಲ್ಲಿ ಇರುವ ಅನುಭವ ಆಗುತ್ತದೆ. ರೈಡ್ 120kmph. ವೇಗದಲ್ಲೂ ಸಹ ಸದೃಢವಾಗಿ ಇರುತ್ತದೆ.

ಸ್ಟಿಯರಿಂಗ್ ಸರಳವಾಗಿದೆ ಮತ್ತು ನಗರದಲ್ಲಿ ಉಪಯೋಗಕೆ ಅನುಕೂಲವಾಗಿದೆ. ಹೈವೆ ಗಳಲ್ಲಿ, ಇದು ಸ್ವಲ್ಪ ಹಿಂಜರಿಯುತ್ತದೆ ಮತ್ತು ಒಟ್ಟಾರೆ  ಸ್ವಲ್ಪ ಮೃದುವಾದ ಅನುಭವದ ಕೊರತೆ ಇದೆ ಎಂದೆನಿಸುತ್ತದೆ. ಬ್ರೇಕ್ ಗಳನ್ನೂ ಸಹ ಚೆನ್ನಾಗಿ ಟ್ಯೂನ್ ಮಾಡಲಾಗಿದೆ ಮತ್ತು ಅದರ ನಡತೆ ಚೆನ್ನಾಗಿದ್ದು ಊಹಿಸಬಲ್ಲದ್ದಾಗಿದೆ.

Maruti Suzuki Vitara Brezza

Check out: Tata Nexon AMT: First Drive Review

ಅಂತಿಮ ಅನಿಸಿಕೆ

Maruti Suzuki Vitara Brezza

ವಿಟಾರಾ ಬ್ರೆಝ ಕಾಂಪ್ಯಾಕ್ಟ್ SUV ಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ಮಿಸಿಯೋನ್ ಪಡೆಯುತ್ತಿರುವ ಕೊನೆಯ ಕಾರುಗಳಲ್ಲಿ ಒಂದು ಆಗಿದೆ. ಆದರೆ ನಿಧಾನವಾಗಿ ತಂದರು, ಅವರು ಸರಿಯಾದದನ್ನೇ ಮಾಡಿದ್ದಾರೆ. AMT ಯನ್ನು ನಗರಗಳಲ್ಲಿನ ಉಪಯೋಗಕ್ಕೆ ಸರಿಯಾಗಿ ಮಾಡಿದ್ದಾರೆ. ಇದು ನಿಮ್ಮನ್ನು ಪವರ್ ಬ್ಯಾಂಡ್ ನಲ್ಲಿರುವಂತ ಎಮಾಡುತ್ತದೆ ಟರ್ಬೊ ಲ್ಯಾಗ್ ನಿಂದ ಹೊರಬರಲು ಮತ್ತು ಗೇರ್ ಗಳನ್ನೂ ಹೆಚ್ಚಾಗಿ ಬದಲಿಸುವ ಅವಶ್ಯಕತೆ ಇಲ್ಲದಿರುವುದು ನಿಮಗೆ ನಯವಾದ ರೈಡ್ ಅನುಭವ ಆಗುವಂತೆ ಮಾಡುತ್ತದೆ. ಸಾಮಾನ್ಯವಾದ SUV ನೋಟ ಮತ್ತು ಹೆಚ್ಚು ಮೈಲೇಜ್ ಕೊಡುವ ಎಂಜಿನ್ ಈ SUV  ಯನ್ನು ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರ್ ಗಳಲ್ಲಿ ಒಂದನ್ನಾಗಿ ಮಾಡಿದೆ.

ವಿಟಾರಾ ಬ್ರೆಝ ಅಲ್ಲಿ ಬಹಳಷ್ಟು ಹಿನ್ನಡತೆ ಕೂಡ ಇದೆ. ಮಾರುತಿ ಯವರು ಇನ್ನು ಸ್ವಲ್ಪ ಮೃದುವಾದ ಸಸ್ಪೆನ್ಷನ್  ಹೊಂದಿಸಬಹುದುತ್ತು, ಆರಾಮದಾಯಕವಾದ ರೈಡ್ ಗಾಗಿ. ಮತ್ತು ಅದು ಈ ಕಾರ್ ಗೆ ಉತ್ತಮ ನಗರಕ್ಕಾಗಿ ಹೊಣಿಸಿರುವ ಪ್ಯಾಕೇಜ್ ಹೊಂದಿರುವ ಕಾರ್ ಆಗಿ ಮಾಡುತ್ತಿತ್ತು. ದೃಢವಾದ ರೈಡ್, ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್, ಪೆಟ್ರೋಲ್ ವೇರಿಯೆಂಟ್ ಇಲ್ಲದಿರುವುದು ಇದನ್ನು ಸ್ವಲ್ಪ ಹಿನ್ನಡೆಯುವಂತೆ ಮಾಡುತ್ತದೆ.

ಸದ್ಯಕ್ಕೆ AMT ಅಳವಡಿಕೆಯೊಂದಿಗೆ , ಬ್ರೆಝ ಅಲ್ಲಿ ದೃಢವಾದ ನಿಲುವು ತಂದುಕೊಂಡಿದೆ. ಮತ್ತು, AMT ಯಿಂದಾಗಿ ನಗರಗಳಲ್ಲಿನ ಉಪಯುಕ್ತತೆ ಹೆಚ್ಚುತ್ತದೆ, ನಾವು ಇದನ್ನು ಮಾನ್ಯುಯಲ್ ಗಿಂತಲೂ ಹೆಚ್ಚಾಗಿ ಶಿಫಾರಸು ಮಾಡುತ್ತೇವೆ.

Maruti Suzuki Vitara Brezza

Check out: New Ford EcoSport S: First Drive Review

Published by
nabeel

ಇತ್ತೀಚಿನ ಎಸ್ಯುವಿ ಕಾರುಗಳು

ಮುಂಬರುವ ಕಾರುಗಳು

ಇತ್ತೀಚಿನ ಎಸ್ಯುವಿ ಕಾರುಗಳು

×
We need your ನಗರ to customize your experience