• English
  • Login / Register

ಮಾರುತಿ ವಿಟಾರಾ ಬ್ರೆಝ vs ಮಹಿಂದ್ರಾ ನುವೊ ಸ್ಪೋರ್ಟ್ ಹೋಲಿಕೆ ವಿಮರ್ಶೆ

Published On ಜೂನ್ 11, 2019 By arun for ಮಾರುತಿ ವಿಟರಾ ಬ್ರೆಜ್ಜಾ 2016-2020

  • 1 View
  • Write a comment

ಕಾಂಪ್ಯಾಕ್ಟ್ SUV ಗಳು ಪ್ರಚಲಿತದಲ್ಲಿ ಹೆಚ್ಚು ಬೇಡಿಕೆಯಲಿದೆ. ಪ್ರತಿ ತಾಯಾರಕರು ಒಂದನ್ನು ಬಿಡುಗಡೆ ಮಾಡಲು ಆಶಿಸುತ್ತಿದ್ದಾರೆ. ಒಂದು ಮಧ್ಯಮ B-ವಿಭಾಗದ ಹ್ಯಾಚ್ ಬ್ಯಾಕ್ ಜೊತೆಗೆ ಕೆಲವು ಕ್ಲಾಡ್ಡಿಂಗ್ ಗಳು ಸಾಕಾಗುವುದಿಲ್ಲ ಈಗ, ಅಲ್ಲವೇ? ಎತ್ತರದ ಮತ್ತು ದೃಢವಾದ SUV ಗಳು ಜೊತೆಗೆ ಎತ್ತರದ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವಂತಹವುಗಳಿಗೆ  ಗಳಿಗೆ ಬಹಳ ಬೇಡಿಕೆ ಇದೆ. ಮಾರುತಿ ಯು ಸಬ್4-ಮೀಟರ್  SUV ವಿಭಾಗಕ್ಕೆ ಕೊನೆಯದಾಗಿ ಬಂದಿದೆ, ಮಹಿಂದ್ರಾ ಮೊದಲು ಬಂದಿತ್ತು. ಮಾರುತಿ ಯವರು ಬ್ರೆಝ ದೊಂದಿಗೆ ಗೆದ್ದಿದಾರೆ ಎಂದು ಭಾವಿಸಿದ್ದಾರೆ. ಮಹಿಂದ್ರಾ ಇನ್ನೊಂದು ಬದಿಯಲ್ಲಿ  ಮಾರುಕಟ್ಟೆಯಲ್ಲಿ ದೊಡ್ಡ ಭಾಗವನ್ನು ಬಯಸುತ್ತದೆ, ನುವೊ ಸ್ಪೋರ್ಟ್ ನೊಂದಿಗೆ. ನಾವು ಹೊಸ ಸ್ಪರ್ದಿಗಳ ಹೋಲಿಕೆ ಮಾಡಿದ್ದೇವೆ. ಯಾರು ಗೆಲ್ಲುತ್ತಾರೆ ನೋಡೋಣ.

Maruti Vitara Brezza vs Mahindra NuvoSport | Comparison Review

ಡಿಸೈನ್

ನಾವು ಒಮ್ಮೆಲೇ ಹೇಳೋಣ ಇವೆರೆಡರಲ್ಲಿ ಯಾವುದೇ ಒಂದು ಕಾರ್ ನೋಡಲು ಅದ್ಭುತವಾಗಿದೆ ಎನ್ನಲಾಗುವುದಿಲ್ಲ., ಆದರೆ ಅವುಗಳಲ್ಲಿ ಬಹಳಷ್ಟು ಆಸಕ್ತಿದಾಯಕ ವಿಷಯಗಳು ಇವೆ. ನಮಗೆ ಅನಿಸುವಂತೆ ಬ್ರೆಝ ತುಂಬಾ ಸಂಪ್ರದಾಯಿಕವಾಗಿದೆ. ಅದರಲ್ಲಿ ತಪ್ಪು  ಗಳು ಏನು ಇಲ್ಲ, ಆದರೆ ಅದೇ ಸಮಯಕ್ಕೆ ಜನಕ್ಕೆ  ಅತ್ಯಂತ ಇಷ್ಟವಾಗುವಂತಹುದು ಸಹ ಇಲ್ಲ ಎನ್ನಬಹುದು. ಡಿಸೈನ್ ನಲ್ಲಿ ಆಕ್ರಮಣಕಾರಿ ಯಾಗಿರುವಂತಹ ತುಣುಕುಗಳು ಇವೆ, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಡೇ ಟೈಮ್ ರನ್ನಿಂಗ್ ಲ್ಯಾಂಪ್ ಜೊತೆಗೆ. ದೊಡ್ಡ ಬಂಪರ್ ಸಾಂಪ್ರದಾಯಿಕ ಸ್ಕಿಡ್ ಪ್ಲೇಟ್ ಒಂದಿಗೆ ಮತ್ತು ಚೌಕವಾದ ವೀಲ್ ಆರ್ಚ್ ಗಳು 16-ಇಂಚು ಅಲಾಯ್ ವೀಲ್ ಗಳೊಂದಿಗೆ. ಬಹಳಷ್ಟು ಉತ್ಸಾಹಭರಿತ ತುಣುಕುಗಳಾದ ಡುಯಲ್ ಟೋನ್ ಪೈಂಟ್ ಮತ್ತು ಕಸ್ಟಾಮಿಸಷನ್  ಆಯ್ಕೆಗಳು ಡೀಲರ್ ವಿಭಾಗದಲ್ಲಿ ಲಭ್ಯವಿದೆ. ಒಟ್ಟಿನಲ್ಲಿ ಮಾರುತಿ ಡಿಸೈನ್ ಗೆ ಸಂಬಂಧಪಟ್ಟಂತೆ ತಾಳ್ಮೆ ವಹಿಸಿದೆ ಮತ್ತು ಅದು ತೋರ್ಪಡುತ್ತದೆ. ಆದರೆ ನಮಗೆ ಅನಿಸುವಂತೆ ಡಿಸೈನ್ ಮಾರುತಿ ಕಾರ್ ಆಯ್ಕೆ ಮಾಡುವ ಗ್ರಾಹಕರ ಇಷ್ಟಕ್ಕೆ ಅನುಗುಣವಾಗಿ ಮಾಡಲಾಗಿದೆ. ಇದರ ಡಿಸೈನ್ ಅನ್ನು ತಳ್ಳಿಹಾಕಲು ಸಾಧ್ಯವಿಲ್ಲ.

Maruti Vitara Brezza vs Mahindra NuvoSport | Comparison Review

ಇನ್ನೊಂದು ಬದಿಯಲ್ಲಿ ಮಹಿಂದ್ರಾ ನುವೊ ಸ್ಪೋರ್ಟ್ ಇದೆ. ಸಾಮಾನ್ಯವಾಗಿರುವಂತೆ ಮಹಿಂದ್ರಾ ದವರು ಪೂರ್ಣವಾಗಿ ಪ್ರಯತಿನಿಸಿದ್ದರೆ, ತಮ್ಮ ಡಿಸೈನ್ ತತ್ವವಾದ ಇಷ್ಟ ಪಡಿರಿ ಅಥವಾ ದ್ವೇಷಿಸಿ ಎಂಬ ಭಾಷೆಯನ್ನು. ನಾವು ಹೇಳುವಂತೆ ಇತರ ಮಹಿಂದ್ರಾ ಕಾರ್ ಗಳಂತೆ ಇದು ಕೂಡ ಹತ್ತಿರದಿಂದ ನೋಡಲು ಚೆನ್ನಾಗಿದೆ, ಚಿತ್ರಗಳಿಗಿಂತ. ಇದು ಚಿಕ್ಕ ಹ್ಯಾಚ್ ಬ್ಯಾಕ್ ಗಳನ್ನೂ ಹಾಗು ಸೆಡಾನ್ ಗಳನ್ನೂ ಸೋಲಿಸುತ್ತದೆ. ಇಡೀ ಈ ವಿಭಾಗದಲ್ಲಿ ಹೆಚ್ಚು ಅಗಲವಾಗಿರುವ ವಾಹನವಾಗಿದೆ. ನಿಲುವಿನ ಬಗ್ಗೆ ಯೋಚಿಸಿದರೆ, ನುವೊ ಸ್ಪೋರ್ಟ್ ನಲ್ಲಿ ಎಲ್ಲ ಮುಖ್ಯ ಫೀಚರ್ ಗಳು ಇವೆ. ಬದಿಗಳಲ್ಲಿ ಮತ್ತು ಹಿಂಬದಿಯಲ್ಲಿ ಕೆಲವು ನವೀಕರಣಗಳಾದ 16-ಇಂಚು ವೀಲ್ ಗಳು, ಸ್ಮೋಕ್ಡ್ ಟೈಲ್ ಲ್ಯಾಂಪ್ ಗಳು ಇವೆ, ಮುಂಭಾಗದಲ್ಲಿ ಪೂರ್ಣವಾಗಿ ಬದಲಿಸಲಾಗಿದೆ. LED ಡೈ ಟೈಮ್ ರನ್ನಿಂಗ್ ಲ್ಯಾಂಪ್ ಗಳು, ಬಾನೆಟ್ ನಲ್ಲಿರುವ ಏರ್ ವೆಂಟ್ ಗಳು, ಮತ್ತು ಮಹಿಂದ್ರಾ ಸಿಗ್ನೇಚರ್ ಗ್ರಿಲ್ ನುವೊ ಸ್ಪೋರ್ಟ್ ಅನ್ನು  ಕ್ವಾನ್ತೋ ಗಿಂತ ಭಿನ್ನವಾಗಿ ಕಾಣುವಂತೆ ಮಾಡುತ್ತದೆ. ನಾವು ಮಹಿಂದ್ರಾ ಟಾಲ್ ಗೇಟ್ ಮೇಲಿರುವ ಸ್ಪೇರ್ ವೀಲ್ ಅನ್ನು ಮರೆಯೋಣ, ನೀವು ಅಕಸ್ಮಾತ್ ಇದನ್ನು ಮಾದಕದೊಂದಿರುವ ಹ್ಯಾಚ್ ಬ್ಯಾಕ್ ಎಂದು ಅಂದುಕೊಂಡರೆ.

 ಎವೆರೆಡೂ ಡಿಸೈನ್ ಪ್ರಶಸ್ತಿಯನ್ನು ಗೆಲ್ಲುವುದಿಲ್ಲ. ಮಹಿಂದ್ರಾ ದಲ್ಲಿ ನೈಸರ್ಗಿಕ ಮತ್ತು ದೃಢವಾದ ನಿಲುವು ಇದೆ. ಆದರೆ ಬ್ರೆಝ ನೋಡಲು ಸರಳವಾಗಿದೆ. ಮಾರುತಿ ನಗರಗಳ ಪರಿಸರಕ್ಕೆ ಹೊಂದಿಕೊಳ್ಳುವಂತಿರುತ್ತದೆ ಎಂದು ಹೇಳಬೇಕಾಗಿಲ್ಲ. ಅಳತೆಗಳು ನಗರಗಳಲ್ಲಿನ ಉಪಯೋಗಕ್ಕೆ ಅನುಗುಣವಾಗಿದೆ.

ಆಂತರಿಕಗಳು

Maruti Vitara Brezza vs Mahindra NuvoSport | Comparison Review

ಬ್ರೆಝ ಮೇಲಿರುವ ಕಪ್ಪು ಬಣ್ಣದ ಥೀಮ್, ಕ್ಯಾಬಿನ್ ಅನ್ನು ಇರುವುದಕ್ಕಿಂತ ಚಿಕ್ಕದಾಗಿ ಕಾಣುವಂತೆ ಮಾಡುತ್ತದೆ, ಮತ್ತು ಅದು ನಿಜ ಕೂಡ. ಡ್ಯಾಶ್ ಅನ್ನು ನಯವಾಗಿ ಮಾಡಲಾಗಿದೆ ಮತ್ತು ಅದರಲ್ಲಿರುವ ಮೃದು ಸ್ಪರ್ಶದ ವಿನ್ಯಾಸ ಚೆನ್ನಾಗಿದೆ. ನಮಗೆ ಮಂದವಾದ ಸಿಲ್ವರ್ ಅಸ್ಸೇನ್ಟ್ ಡ್ಯಾಶ್ ಹಾಗು ಡೋರ್ ಪ್ಯಾಡ್ ಮೇಲೆ ಇರುವುದು, ಮತ್ತು ಸ್ವಲ್ಪ ಕ್ರೋಮ್ ಪದರವಿರುವ S-ಕ್ರಾಸ್ ನಿಂದ ಅಳವಡಿಸಲ್ಪಟ್ಟ ಸ್ಟಿಯರಿಂಗ್ ವೀಲ್ ಇಷ್ಟವಾಯಿತು. ಆದರೂ ಅಲ್ಪ ಸ್ವಲ್ಪ ಮಾರುತಿ ಯ ಇತರ ಕಾರ್ ಗಳಿಂದ ತರಿಸಲಾದ ಪಾರ್ಟ್ ಗಳು ಕೂಡ ಇದೆ. ಬ್ರೆಝ ದ ಕ್ಯಾಬಿನ್ ಪ್ರೀಮಿಯಂ ಆಗ್ ಕಾಣುತ್ತದೆ.

Maruti Vitara Brezza vs Mahindra NuvoSport | Comparison Review

ನುವೊ ಸ್ಪೋರ್ಟ್ ನಲ್ಲಿ ಝಯಿಲೊ  ದಿಂದ ತಂದಂತಹ  ಹಳೆಯದಾದ ಡ್ಯಾಶ್ ಬೋರ್ಡ್  ಅನ್ನು ಅಳವಡಿಸಲಾಗಿದೆ, ಅದು ಅಷ್ಟೇನೂ ಒಳ್ಳೆ ವಿಚಾರವಲ್ಲ. ಹತ್ತಿರದ ಸ್ಲಾಬ್ ಬದಿ ಇರುವ ಫೆಸಿಯ ಮತ್ತು ದುಂಡಾದ AC ವೆಂಟ್ ಗಳು ನೋಡಲು ಸರಿಯಿಲ್ಲ ಎನಿಸುತ್ತದೆ. ಮತ್ತು ಹೇಳಬೇಕೆಂದರೆ ಕ್ಯಾಬಿನ್ ಅನ್ನು ಡಲ್ ಗ್ರೇ ಶೇಡ್ ನಿಂದ ಫಿನಿಷ್ ಮಾಡಲಾಗಿದೆ, ಅದು ಕ್ಯಾಬಿನ್ ಅನ್ನು ಅಷ್ಟೇನೂ ಚೆನ್ನಾಗಿ ಕಾಣುವಂತೆ ಮಾಡುವುದಿಲ್ಲ. ಮಹಿಂದ್ರಾ ಕಾರ್ಬನ್ ಫೈಬರ್ ನಂತಹ ವಸ್ತುವಿನ ಫಿನಿಶಿಂಗ್ ಡ್ಯಾಶ್ ಬೋರ್ಡ್ ಸುತ್ತಲೂ ಮತ್ತು ಡೋರ್ ಪ್ಯಾಡ್ ಸುತ್ತಲೂ ಕೊಟ್ಟು ಚೆನ್ನಾಗಿ ಕಾಣುವಂತೆ ಮಾಡಲು ಪ್ರಯತ್ನ್ನಿಸಿದೆ, ಆದರೆ ಕೊನೆಗೆ ನಿರಾಸೆ ಮೂಡಿಸಿದೆ.

ಇವೆರೆಡರಲ್ಲಿನ ಅತಿ ಮುಖ್ಯ ಭಿನ್ನತೆ ಎಂದರೆ ನೀವು ನುವೊ ಪೋರ್ಟ್ ನಲ್ಲಿ ಹೋಗಲು ಹತ್ತಿ ಇಳಿಯಬೇಕು, ಬ್ರೆಝ ದ ಒಳಗಡೆಗೆ  ನಡೆದುಕೊಡು ಹೋಗಬಹುದು. ಮಾರುತಿ ಯಲ್ಲಿ ಎತ್ತರದ ಸೀಟ್ ಇಲ್ಲ, ಸಾಮಾನ್ಯವಾಗಿ SUV ಗಳಲ್ಲಿ ಕಾಣಸಿಗುವಂತೆ. ಅದರ ಸ್ಥಾನ ಸಾಮಾನ್ಯವಾಗಿದೆ ಮತ್ತು ಅದನ್ನು B-ವಿಭಾಗದ ಹ್ಯಾಚ್ ಗೆ ಹೋಲಿಸಬಹುದು. ಇನ್ನೊಂದು ಬದಿಯಲ್ಲಿ ನೀವು ಚೆನ್ನಾಗಿ ಮತ್ತು ಎತ್ತರವಾಗಿ ಕುಳಿತುಕೊಳ್ಳಬಹುದು ನುವೊ ಸ್ಪೋರ್ಟ್ ನಲ್ಲಿ, ಮತ್ತು ಅದು ನಿಮಗೆ ಮುಂಬದಿಯ ನೋಟ ಸ್ಪಷ್ಟವಾಗಿ ಇರುವಂತೆ ಮಾಡುತ್ತದೆ. ಮಹಿಂದ್ರಾ ಈ ವಿಭಾಗದಲ್ಲಿ ಮಾರುತಿಯನ್ನು ಸೋಲಿಸುತ್ತದೆ.

Maruti Vitara Brezza vs Mahindra NuvoSport | Comparison Review

ಇದು ಸೆವೆನ್ ಸೀಟೆರ್ ಆಗಿ ಪರಿವರ್ತಿಸುವುದಲ್ಲದೆ, ಇದರಲ್ಲಿ ಹೆಚ್ಚು ಸ್ಥಳಾವಕಾಶ ಇದೆ, ಕೇವಲ ಐದು ಜನ ಕುಳಿತುಕೊಂಡಾಗ. ನಮಗೆ ಮೆಚ್ಚುಗೆಯಾದದ್ದು ಮಡಚಬಹುದಾದ ರೇರ್ ಬೆಂಚ್. ನೀವು ಮುರನೇ ರೋ ಸೀಟ್ ಅನ್ನು ಲೌನ್ಜ್ ಗೆ ತಳ್ಳಬೇಕಾಗುತ್ತದೆ, ಆದರೆ ಅದು ನಮಗೆ ದಿನವಿದೆ ಸಮಯ ತೆಗೆದುಕೊಳ್ಳುತ್ತದೆ. ಎರೆಡು ಕಾರ್ ಗಳ ಹಿಂದಿನ ಸೀಟ್ ನಲ್ಲಿ ಮುರು ಮಂದಿಯನ್ನು ಕೂಡಿಸಬಹುದು, ಆದರೆ ನುವೊ ಸ್ಪೋರ್ಟ್ ನಲ್ಲಿನ ಪ್ಯಾಸೆಂಜರ್ ಗಳಿಗೆ ಹೆಚ್ಚಿನ ಶೌಲ್ಡರ್ ರೂಮ್ ಮತ್ತು ಹೆಡ್ ರೂಮ್ ದೊರೆಯುತ್ತದೆ. ಅದು ಹೇಳಿದ ನಂತರ, ಲೆಗ್ ರೂಮ್ ಹೆಚ್ಚು ಕಡಿಮೆ ಸರಿಸಮನಾಗಿದೆ.

ಆದರೆ,ನೀವು ಹೆಚ್ಚಾಗಿ ಡ್ರೈವರ್ ಸೀಟ್ ನಲ್ಲಿ ಕೂಡುವವರಾದರೆ ಬ್ರೆಝ ಹೆಚ್ಚು

ಆರಾಮದಾಯಕವಾಗಿರುತ್ತದೆ. ಸೀಟ್ ಗಳ ಬೋಲ್ಸ್ಟರ್ ಚೆನ್ನಾಗಿದೆ ಮತ್ತು ಬೆಂಬಲಿಸುತ್ತದೆ, ದೊರದ ಪ್ರಯಾಣಗಳಲ್ಲಿ ಕೂಡ. ನಮಗೆ ಸೈಡ್ ಬೋಲ್ಸ್ಟರಿಂಗ್ ಇಷ್ಟವಾಯಿತು ಅದನ್ನು ನಿಖರವಾಗಿ ಅಳವಡಿಸಲಾಗಿದೆ. ಆಮದಾಯಕವಾದ ಸ್ಥಾನಕ್ಕೆ ಬರುವುದು ಸುಲಭ. ಇದು ಹೇಳಿದ  ಸ್ಟೀರಿಗ್ ನಲ್ಲಿ ರೀಚ್ ಅಳವಡಿಕೆ ಇದ್ದಿದ್ದರೆ ಚೆನ್ನಾಗಿರುತಿತ್ತು. ಮಾರುತಿ ಯು ಎರ್ಗೋನಾಮಿಕ್ ಆಗಿ ಚೆನ್ನಾಗಿದೆ, ಎಲ್ಲವು ಎಲ್ಲಿ ಇರಬೇಕೋ ಅಲ್ಲಿ ಅಳವಡಿಸಲಾಗಿದೆ. ನಿಮಗೆ ಮನೆಯಲ್ಲಿರುವಂತೆ ಆಗಬಹುದು ಒಮ್ಮೆಲೆಗೆ. ನುವೊ ಸ್ಪೋರ್ಟ್ ಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು ಮತ್ತು ಎರ್ಗೊನೊಮಿಕ್ಸ್ ಗಳು ಅಷ್ಟೇನೂ ಚೆನ್ನಾಗಿಲ್ಲ. ಹಾಗು ಮಾರುತಿಯಲ್ಲಿ ಸಲಕರಣೆಗಳ ಪಟ್ಟಿ ಮತ್ತು ಗುಣಮಟ್ಟ ಬಹಳಷ್ಟು ಚೆನ್ನಾಗಿದೆ. ಬ್ರೆಝ ದಲ್ಲಿ ನೇವಿಗೇಶನ್ ಇದೆ, ಕೀ ಲೆಸ್ ಎಂಟ್ರಿ, ಪುಶ್ ಬಟನ್ ಸ್ಟಾರ್ಟ್, ತಂಪಾದ ಗ್ಲೋವ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಇದೆ, ಇವು ನುವೊ ಸ್ಪೋರ್ಟ್ ನಲ್ಲಿ ಇಲ್ಲ. ಎರೆಡೂ  ಕಾರ್ ಗಳಲ್ಲಿ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸ್ಸ್ಟೀಮ್ ಇದೆ, ಆದರೆ 7-ಇಂಚ್ ಯೂನಿಟ್ ಬ್ರೆಝ ದಲ್ಲಿ ಇದೆ ಹಾಗು ಉತ್ತಮ ಇಂಟರ್ಫೇಸ್ ಹೊಂದಿದೆ ಹಾಗು ಉಪಯೋಗಿಸಲು ಸುಲಭವಾಗಿದೆ, ಮತ್ತು ಉತ್ತಮವಾದ ಒಟ್ಟಾರೆ ಔಟ್ ಪುಟ್ ಹೊಂದಿದೆ. ಇದರಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಇದೆ. ಮಹಿಂದ್ರಾ ದಲ್ಲಿರುವ 6.2-ಇಂಚು ಯೂನಿಟ್ ಒಂದು ಆಫ್ಟರ್ ಮಾರ್ಕೆಟ್ ಯೂನಿಟ್ ಆಗಿದೆ ಮತ್ತು ಹಳೆಯದಾಗಿದ್ದು ಉಪಯೋಗಿಸಲು  ಅಷ್ಟೇನೂ ಸಮಂಜಸವಾಗಿರುವುದಿಲ್ಲ.

Maruti Vitara Brezza vs Mahindra NuvoSport | Comparison Review

ಮಾರುತಿಯಲ್ಲಿ ಉತ್ತಮ ಆಂತರಿಕಗಳು ಇವೆ, ಇವೆರೆಡರಲ್ಲಿ. ಇದರ ಬಿಲ್ಡ್ ಕ್ವಾಲಿಟಿ ಚೆನ್ನಾಗಿದೆ  ಗುಣಮಟ್ಟ ಕೂಡ ಈ ವಿಭಾಗದಲ್ಲೇ ಉತ್ತಮವಾಗಿದೆ, ಇತರ ಮಾರುತಿ ಗಳೊಂದಿಗೆ ಪಾರ್ಟ್ಸ್  ಹಂಚಿಕೆ ಉತ್ತಮವಾಗಿದೆ. ನುವೊ ಸ್ಪೋರ್ಟ್ ನ ಕೋರ್ USP ಯು ವಿಶಾಲವಾದ ಅಂತರಿಕಗಳಾಗಿವೆ. ನಮಗೆ ಅನಿಸುವಂತೆ ಮಹಿಂದ್ರಾ ಆಂತರಿಕ ಡಿಸೈನ್ ಅನ್ನು ಕೂಡ ನವೀಕರಣಗೊಳಿಸಬಹುದಿತ್ತು, ಪ್ರತಿಸ್ಪರ್ದಿಗಳೊಂದಿಗೆ ಸ್ಪರ್ದಿಸಲು. ನುವೊ ಸ್ಪೋರ್ಟ್ ನ ಫೀಚರ್ ಗಳ ಪಟ್ಟಿ ಉತ್ತಮವಾಗಿದೆ ಆದರೆ ಹೋಲಿಕೆಯಲ್ಲಿ ಹಿನ್ನಡೆಯುತ್ತದೆ.

ಕಾರ್ಯದಕ್ಷತೆ

ಇವೆರೆಡರ ಸ್ಪೆಸಿಫಿಕೇಷನ್ ಗಳು ಹೀಗಿವೆ

Specs

ಮಹಿಂದ್ರಾ ನುವೊ ಸ್ಪೋರ್ಟ್

ಮಾರುತಿ ವಿಟಾರಾ ಬ್ರೆಝ

Engine Name

1.5-litre 12V mHawk Diesel

1.3-litre 16V DDiS 200 Diesel

Power

100bhp@3750rpm

88.5bhp@4000rpm

Torque

240Nm@1600-2800rpm

200Nm@1750rpm

Transmission

5 Speed - Manual/AMT - 
Rear Wheel Drive

5 Speed - Manual - 
Front Wheel Drive

Mileage

17.45 kmpl

24.3 kmpl

Weight

2220 kg

1680 kg

 ಎರೆಡೂ ಎಂಜಿನ್ ಗಳು ಸಿಟಿ ಯಲ್ಲಿನ ಡ್ರೈವಿಂಗ್ ಗೆ ಸರಿಯಾಗಿ ಟ್ಯೂನ್ ಮಾಡಲಾಗಿದೆ ಹೆಚ್ಚು ಕಾರ್ಯದಕ್ಷತೆಯೊಂದಿಗೆ. ಮಹಿಂದ್ರಾ  ನುವೊ ಸ್ಪೋರ್ಟ್ ನಲ್ಲಿ ಟರ್ಬೊ ಲ್ಯಾಗ್ ಅನ್ನು ಕಂಟ್ರೋಲ್ ಮಾಡಲು ಚೆನ್ನಾಗಿ ನಿರ್ವಹಿಸಿದೆ. ಟಾರ್ಕ್ ಬೇಗನೆ ಬರುತ್ತದೆ, ನಿಮಗೆ ಸಿಟಿ ಯಲ್ಲಿ ತಿರುಗಾಡಲು ಅನುಕೂಲವಾಗಿರುತ್ತದೆ, ಹೆಚ್ಚಾಗಿ ಗೇರ್ ಬದಲಾವಣೆ ಅವಶ್ಯಕತೆ ಇಲ್ಲದೆ . ನಿಮಗೆ ಗೇರ್ ಬದಲಿಸಲು ಇಷ್ಟವಿಲ್ಲದಿದ್ದರೆ ನಿಮಗೆ  AMT ಆಯ್ಕೆ ಸಹ ಇದೆ. ಬ್ರೆಝ ದ ಮೋಟಾರ್ 2000rpm ಒಳಗಡೆ ಸ್ವಲ್ಪ ತಡವರಿಸುತ್ತದೆ ಇತರ ಕಾರ್ ಗಳಲ್ಲಿ ಇರುವಂತೆ. ಅದರ ನಂತರ ಮೋಟಾರ್ 200Nm ಟಾರ್ಕ್ ಕೊಡುತ್ತದೆ ತಡೆಯಿಲ್ಲದೆ.

Maruti Vitara Brezza vs Mahindra NuvoSport | Comparison Review

ಎವೆರೆಡನ್ನು ಒಂದರ ನಂತರ ಒಂದು ಡ್ರೈವ್ ಮಾಡಿದಾಗ ನಿಮಗೆ ಎಂಜಿನ್ ನ ಚಾಕಚಕ್ಯತೆ ಯಾ ಅರಿವು ಉಂಟಾಗುತ್ತದೆ ಮಹಿಂದ್ರಾ ನಿಧಾನವಾಗಿ  ಟಾರ್ಕ್ ಕೊಡುತ್ತದೆ, ಆದರೆ ಮಾರುತಿ ಯಲ್ಲಿ ಶೀಘ್ರವಾಗಿ ದೊರೆಯುತ್ತದೆ ಎಂಜಿನ್ ನ ವೇಗಗತಿಗನುಗುಣವಾಗಿ. ನೀವೇ ಡ್ರೈವ್ ಮಾಡುವವರಾದರೆ ನಿಮಗೆ ಬ್ರೆಝ ಚೆನ್ನಾಗಿದೆ ಎಂದೆನಿಸುತ್ತದೆ. 5-ಸ್ಪೀಡ್ ಮಾನ್ಯುಯಲ್ ನ ಉತ್ತಮ ಪ್ರತಿಕ್ರಿಯೆ ಕೊಡುವ  ಸ್ಟಿಯರಿಂಗ್ ನಿಮಗೆ ಸಂತೋಷ ಉಂಟು ಮಾಡುತ್ತದೆ. ತಿರುವುಗಳಲ್ಲಿ ಇದು ನಿಖರವಾಗಿದೆ ಮತ್ತು ಬಾಡಿ ರೋಲ್ ಸಹ ಗೋಚರವಾಗುವುದಿಲ್ಲ. ಮಾರುತಿ ಯು ಕಠಿಣವಾದ ಸುಸ್ಪೆನ್ಷನ್  ಸೆಟ್ ಅಪ್ ಅಳವಡಿಸಿದೆ, ಅದು ಬ್ರೆಝ ಗೆ ತಿರುವುಗಳಲ್ಲಿ ಡ್ರೈವರ್ ಗೆ ಘಾಸಿಯುಂಟು ಮಾಡದೇ ನಯವಾಗಿ ಹ್ಯಾಂಡಲ್ ಮಾಡಲು ಸಹಕರಿಸುತ್ತದೆ.

Maruti Vitara Brezza vs Mahindra NuvoSport | Comparison Review

ದೃಢವಾದ ಸೆಟ್ ಅಪ್ ನೀವು ಹೆಚ್ಚಾಗಿ ತಿರುವುಗಳಿರುವ ಜಾಗದಲ್ಲಿ ಡ್ರೈವ್ ಮಾಡುವಾಗ ಚೆನ್ನಾಗಿ ಕೆಲಸ ಮಾಡುತ್ತದೆ. ಆದರೆ, ದಿನ ನಿತ್ಯ ಉಪಯೋಗಿಸುವುದಕ್ಕೆ ಹೆಚ್ಚು ಖರ್ಚು ಮಾಡಬೇಕಾಗಬಹುದು. ಕಡಿಮೆ ವೇಗದಲ್ಲಿ ಪಾಟ್ ಹೋಲ್ ಗಳಲ್ಲಿ ತಡವರಿಸುತ್ತದೆ. ಮತ್ತು ಶಾಕ್ ಅನ್ನು ಕ್ಯಾಬಿನ್ ಗೆ ವರ್ಗಾಯಿಸುತ್ತದೆ. ರೈಡ್ ಗುಣಮಟ್ಟ ಸಹ ನುವೊ ಸ್ಪೋರ್ಟ್ ನಷ್ಟು ಆರಾಮದಾಯಕವಾಗಿಲ್ಲ, ಅದು ರಸ್ತೆಯ ಅಡತಡೆಗಳನ್ನು ನಯವಾಗಿ ನಿಭಾಯಿಸುತ್ತದೆ.  ಮಹಿಂದ್ರಾ ದಲ್ಲಿ ನೀವು ಅಪರೂಪಕ್ಕೆ ಪಾಟ್ ಹೋಲ್ ಗಳಲ್ಲಿ ಭೂಮ್ಪ್ ಅನುಭವಿಸಬಹುದು. ಇದರಿಂದಾಗಿ ಬಹಳಷ್ಟು ಬಾಡಿ ರೋಲ್ ಇದೆ, ಮತ್ತು ಹೆಚ್ಚು ವೇಗಗಳಲ್ಲಿ ಸ್ವಲ್ಪ ಬೌನ್ಸಿ ಆಗಿರುತ್ತದೆ.

Maruti Vitara Brezza vs Mahindra NuvoSport | Comparison Review

ಪೇಪರ್ ನಲ್ಲಿ, ಮಹಿಂದ್ರಾ ಮಾರುತಿಯನ್ನು ಹಿನ್ನಡೆಸಿದೆ. ಆದರೆ ನೀವು ಹೆಚ್ಚಾದ 10bhp  ಪವರ್ ಹಾಗು  40Nm ತಾರ್ಕ್ ಅನ್ನು ಆಯ್ಕೆ  AMT ಒಂದಿಗೆ ಉಪಯೋಗಿಸಲಾಗುವುದಿಲ್ಲ. ಈ ವಿಷಯದಲ್ಲಿ ಮಾನ್ಯುಯಲ್ ಚೆನ್ನಾಗಿ ಕೆಲಸ ಮಾಡುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಬ್ರೆಝ ಮೈಲೇಜ್ ಮತ್ತು ಹೈವೆ ನಡವಳಿಕೆ  ವಿಷಯದಲ್ಲಿ ಚೆನ್ನಾಗಿ ವರ್ತಿಸುತ್ತದೆ. ಮತ್ತು ಸ್ಟಿಯರಿಂಗ್ ನ ಗುಣಮಟ್ಟ, ಮತ್ತು ಫೀಡ್ಬ್ಯಾಕ್  ಮತ್ತು ಡ್ರೈವಿಂಗ್ ಡೈನಾಮಿಕ್ಸ್ ಸಹ ಚೆನ್ನಾಗಿದೆ ನುವೊ ಸ್ಪೋರ್ಟ್ ನಲ್ಲಿ ಉತ್ತಮ ರೈಡ್ ಗುಣಮಟ್ಟ ಇದೆ  ಸಿಟಿಯಲ್ಲಿ ಮತ್ತು ಆಯ್ಕೆ AMT ಸಹ ಇದೆ.

ಅಂತಿಮ ಅನಿಸಿಕೆ

ಬೆಲೆ ಪಟ್ಟಿ ಹೆಚ್ಚು ಕಡಿಮೆ ಸರಿಸಮವಾಗಿದೆ, ಬೇಸ್ ಆವೃತ್ತಿ ಎರೆಡರಲ್ಲೂ ಸುಮಾರು INR 7.4 ಲಕ್ಷ  ( ಎಕ್ಸ್ ಶೋ ರೂಮ್ ಮುಂಬೈ ). ಹಾಗಾಗಿ, ಯಾವುದು ಉತ್ತಮ? ವಿಟಾರಾ ಬ್ರೆಝ ಆಯ್ಕೆಗೆ ಸರಿಯಾಗಿದೆ ನಿಮಗೆ  ಹೆಚ್ಚಾದ ಸೀಟ್ ನ ಅವಶ್ಯಕತೆ ಇಲ್ಲದಿದ್ದರೆ. ಆದರೆ ಉತ್ತಮ ಬಿಲ್ಡ್, ಉತ್ತಮವಾದ ಸಲಕರಣೆಗಳು, ಮತ್ತು ನೋಡಲು ಹೊಸತಾಗಿರುವುದು ಕೂಡ. ನುವೊ ಸ್ಪೋರ್ಟ್ ಉತ್ತಮ ಪ್ಯಾಕೇಜ್ ಆಗಿದೆ ಕ್ವಾನ್ತೋ ಒಂದಿಗೆ ಹೋಲಿಸಿದಾಗ, ಮಹಿಂದ್ರಾ ಗುಣಮಟ್ಟವನ್ನು ಸಹ ಹಾಗೆಯೆ ಹೆಚ್ಚಿಸಬಹುದಿತ್ತು.   

Maruti Vitara Brezza vs Mahindra NuvoSport | Comparison Review

Published by
arun

ಇತ್ತೀಚಿನ ಎಸ್ಯುವಿ ಕಾರುಗಳು

ಮುಂಬರುವ ಕಾರುಗಳು

ಇತ್ತೀಚಿನ ಎಸ್ಯುವಿ ಕಾರುಗಳು

×
We need your ನಗರ to customize your experience