• English
    • Login / Register

    Renault Kiger ವಿಮರ್ಶೆ: ಒಂದು ಸಣ್ಣ ಬಜೆಟ್‌ನ ಉತ್ತಮ ಎಸ್‌ಯುವಿಯ ?

    Published On ಮಾರ್ಚ್‌ 31, 2025 By ujjawall for ರೆನಾಲ್ಟ್ ಕೈಗರ್

    • 1 View
    • Write a comment

    ದುಬಾರಿ ಸಬ್-4ಎಮ್‌ ಎಸ್‌ಯುವಿಗಳ ಸೆಗ್ಮೆಂಟ್‌ನಲ್ಲಿ, ಕಿಗರ್ ಸ್ಥಳಾವಕಾಶ, ಪ್ರಾಯೋಗಿಕತೆ ಮತ್ತು ಸೌಕರ್ಯದ ಮೇಲೆ ಕೇಂದ್ರೀಕರಿಸುವ ಆಕರ್ಷಕ ಬಜೆಟ್ ಕೊಡುಗೆಯಾಗಿ ತನ್ನದೇ ಆದ ಕೊಡುಗೆಯನ್ನು ಹೊಂದಿದೆ

    ರೆನಾಲ್ಟ್ ಕಿಗರ್ ಒಂದು ಸಬ್-4ಎಮ್‌ ಎಸ್‌ಯುವಿ ಆಗಿದ್ದು, ಇದರ ಬೆಲೆ 5.99 ಲಕ್ಷ ರೂ.ನಿಂದ 11.22 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ) ಇರುತ್ತದೆ. ಇದರ ಆಕರ್ಷಕ ಬೆಲೆಯು ಮಹೀಂದ್ರಾ ಎಕ್ಸ್‌ಯುವಿ 3XO, ಮಾರುತಿ ಬ್ರೆಝಾ, ಕಿಯಾ ಸೋನೆಟ್ ಮತ್ತು ಹುಂಡೈ ವೆನ್ಯೂಗಳ ವಿರುದ್ಧ ಬಜೆಟ್ ಕಾರು ಆಗಿ ತನ್ನನ್ನು ತಾನು ಇರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಹಾಗೆಯೇ ಗಾತ್ರದಲ್ಲಿ ನಿಸ್ಸಾನ್ ಮ್ಯಾಗ್ನೈಟ್, ಟಾಟಾ ಪಂಚ್ ಮತ್ತು ಹುಂಡೈ ಎಕ್ಸ್‌ಟರ್‌ಗಳೊಂದಿಗೆಯೂ ಸ್ಪರ್ಧೆಯನ್ನು ಮುಂದುವರೆಸುತ್ತದೆ. 

    ಈಗ, ಕಿಗರ್ ಸರಿಯಾದ ಆಪ್‌ಡೇಟ್‌ಅನ್ನು ಪಡೆದು ಸ್ವಲ್ಪ ಸಮಯವಾಗಿದೆ. ಆದ್ದರಿಂದ ಈ ವಿಮರ್ಶೆಯಲ್ಲಿ, ಆಪ್‌ಡೇಟ್‌ ಆಗಿರುವ ಈ ಸೆಗ್ಮೆಂಟ್‌ನಲ್ಲಿನ ಸ್ಪರ್ಧೆಯನ್ನು ಇದು ನಿಭಾಯಿಸಬಹುದೇ ಮತ್ತು ಬಜೆಟ್‌ನಲ್ಲಿ ಬರುವುದರಿಂದ ಯಾವುದೇ ಗುಪ್ತ ರಾಜಿಗಳಿವೆಯೇ ಎಂದು ನಾವು ತಿಳಿಯೋಣ.

    ಕೀ

    Renault Kiger Review:  A Good Small Budget SUV?

    ಕಿಗರ್‌ನಲ್ಲಿ ಗಮನಿಸುವ ಮೊದಲ ಅಂಶವೆಂದರೆ, ಅದರ ಕೀಲಿಕೈ, ಇದು ವಿಶಿಷ್ಟವಾಗಿದೆ. ಇದು ನಿಮ್ಮ ರೆಗ್ಯುಲರ್‌ ಕೀಲಿಯಂತೆ ಕಾಣುತ್ತಿಲ್ಲ - ಇದು ತೆಳ್ಳಗಿದ್ದು, ಆಯತಾಕಾರದ ಆಕಾರದಿಂದಾಗಿ ಕೀ ಕಾರ್ಡ್‌ನಂತೆ ಕಾಣುತ್ತದೆ. ಒಳ್ಳೆಯ ವಿಷಯವೆಂದರೆ ಅದು ನಿಮ್ಮ ಜೇಬಿನಲ್ಲಿ ಸುಲಭವಾಗಿ ಹೊಂದಿಕೊಳ್ಳುತ್ತದೆ, ಆದರೆ ವಿನ್ಯಾಸದ ವಿಷಯದಲ್ಲಿ ಇದು ಸ್ವಲ್ಪ ಸಪ್ಪೆಯಾಗಿದೆ. ಇದರ ವಿನ್ಯಾಸ ಒಂದು ದಶಕದಷ್ಟು ಹಳೆಯದು ಮತ್ತು ಪ್ಲಾಸ್ಟಿಕ್ ಗುಣಮಟ್ಟವನ್ನು ಇನ್ನೂ ಉತ್ತಮವಾಗಿಸಬಹುದಿತ್ತು.

    ಕೀಲಿಯ ಹೊರತಾಗಿ, ಕಿಗರ್‌ನಲ್ಲಿ ಸಾಮೀಪ್ಯ ಸೆನ್ಸಾರ್‌ ಕೂಡ ಇದೆ, ಆದ್ದರಿಂದ ನೀವು ನಿಮ್ಮ ಜೇಬಿನಿಂದ ಕೀಲಿಯನ್ನು ಹೊರತೆಗೆಯಬೇಕಾಗಿಲ್ಲ, ವಿಶೇಷವಾಗಿ ಇದು ನಿಮ್ಮ ಕೈಗಳಲ್ಲಿ ಹಲವು ವಸ್ತುಗಳು ಇರುವಾಗ ಇದು ತುಂಬಾನೇ ಉಪಯುಕ್ತವಾಗಿದೆ.

    ಡಿಸೈನ್‌

    Renault Kiger Review:  A Good Small Budget SUV?

    ಆಪ್‌ಡೇಟ್‌ಗಳ ಕೊರತೆಯ ಹೊರತಾಗಿಯೂ, ಕಿಗರ್ ತನ್ನ ಸಮಾನ ರೂಪದ ಕಾರುಗಳಿಗೆ ಹೋಲಿಸಿದರೆ ಹಳೆಯದಾಗಿ ಅಥವಾ ಪ್ರಸ್ತುತಕ್ಕೆ ಸರಿಹೊಂದದ ಹಾಗೆ ಕಾಣುವುದಿಲ್ಲ. ಮತ್ತು ಇದರ ಗಾತ್ರವು ದೊಡ್ಡ ಎಸ್‌ಯುವಿಯಂತೆ ಅಲ್ಲದಿದ್ದರೂ, ಅದರ ವಿನ್ಯಾಸ ಅಂಶಗಳು ಅದಕ್ಕೆ ರಗಡ್‌ ಆದ ಎಸ್‌ಯುವಿಯಂತಹ ವೈಬ್ ನೀಡುವಲ್ಲಿ ಯಾವುದೇ ಲೋಪವನ್ನುಂಟು ಮಾಡುವುದಿಲ್ಲ.

    ಮುಂಭಾಗವು ದಪ್ಪನಾದ ಹೆಡ್‌ಲೈಟ್‌ಗಳು ಮತ್ತು ಬಾನೆಟ್‌ನಲ್ಲಿ ಉಬ್ಬಿದ ಅಂಶಗಳೊಂದಿಗೆ ಬಾಡಿ ಬಿಲ್ಡರ್‌ನ ಲುಕ್‌ಅನ್ನು ಹೊಂದಿದೆ. ನಯವಾದ ಎಲ್‌ಇಡಿ ಡಿಆರ್‌ಎಲ್‌ಗಳು ಕ್ರೋಮ್ ಅಲಂಕರಿಸಿದ ಗ್ರಿಲ್ ಅನ್ನು ಸುತ್ತುವರೆದಿವೆ, ಮತ್ತು ಟ್ರಿಪಲ್ ಎಲ್‌ಇಡಿ ಹೆಡ್‌ಲೈಟ್‌ಗಳು ಪ್ರೀಮಿಯಂ ಆಗಿ ಕಾಣುತ್ತಿದ್ದರೂ, ಖಾಲಿ ರಸ್ತೆಗಳಲ್ಲಿ ಅವುಗಳ ತೀವ್ರತೆ ಇನ್ನೂ ಉತ್ತಮವಾಗಿರಬಹುದಿತ್ತು. ಪ್ರಸ್ತುತ ಸ್ವಲ್ಪ ಅಸಮರ್ಥವೆನಿಸುತ್ತದೆ.

    Renault Kiger Review:  A Good Small Budget SUV?

    ವಿನ್ಯಾಸವನ್ನು ವಿವರವಾಗಿ ಗಮನಿಸುವುದಾದರೆ, ಸೈಡ್ ಪ್ರೊಫೈಲ್ ಕೂಡ ಅದರ ರೂಫ್ ರೆಲ್ಸ್‌, ವೀಲ್ ಆರ್ಚ್ ಮತ್ತು ಸೈಡ್ ಕ್ಲಾಡಿಂಗ್‌ನೊಂದಿಗೆ ರಗಡ್‌ ಆದ ಥೀಮ್ ಅನ್ನು ಅನುಸರಿಸುತ್ತದೆ. ನನಗೆ ವೈಯಕ್ತಿಕವಾಗಿ ಇದರ 16-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್‌ಗಳು ಇಷ್ಟ, ಮತ್ತು ಇದನ್ನು ಇನ್ನೂ ಉತ್ತಮವಾಗಿಸುವುದು ಮಧ್ಯದ ಕ್ಯಾಪ್‌ನಲ್ಲಿ ಕೆಂಪು ಬಣ್ಣದ ಇನ್ಸರ್ಟ್, ನಂತರ ಕೆಂಪು ಬಣ್ಣದ ಕ್ಯಾಲಿಪರ್‌ಗಳು.

    ಹಿಂಭಾಗದಲ್ಲಿ, ಅದರ ಇಳಿಜಾರಾದ ಹಿಂಭಾಗದ ವಿಂಡ್‌ಸ್ಕ್ರೀನ್‌ನಿಂದಾಗಿ ನೀವು ಇದರಲ್ಲಿ ಕ್ರಾಸ್‌ಒವರ್ ತರಹದ ಬಾಡಿ-ಶೈಲಿಯನ್ನು ಗಮನಿಸಬಹುದು. ಈ ಆಕಾರವು ವಿನ್ಯಾಸಕ್ಕೆ ಸ್ಪೋರ್ಟಿ ಸ್ಪರ್ಶವನ್ನು ನೀಡುತ್ತದೆ, ಇದಕ್ಕೆ ರೂಫ್‌ನ ಮೇಲೆ ಜೋಡಿಸಲಾದ ಸ್ಪಾಯ್ಲರ್ ಮತ್ತು ಶಾರ್ಕ್ ಫಿನ್ ಆಂಟೆನಾ ಕೂಡ ಸಹಾಯ ಮಾಡುತ್ತದೆ. ಈ ಆಕಾರವು ಕಿಗರ್ ತನ್ನ ಪ್ರತಿಸ್ಪರ್ಧಿಗಳಿಂದ ಎದ್ದು ಕಾಣಲು ಸಹಾಯ ಮಾಡುತ್ತದೆ. ವಿಭಿನ್ನವಾಗಿರುವ ಸ್ಕಿಡ್ ಪ್ಲೇಟ್ ಮತ್ತು ದೊಡ್ಡ ಸಿ-ಆಕಾರದ ಎಲ್ಇಡಿ ಟೈಲ್ ಲೈಟ್‌ಗಳೊಂದಿಗೆ ಹಿಂಭಾಗದಲ್ಲಿಯೂ ರಗಡ್‌ ಲುಕ್‌ಅನ್ನು ಮುಂದುವರಿಯುತ್ತದೆ.

    Renault Kiger Review:  A Good Small Budget SUV?

    ಒಟ್ಟಾರೆಯಾಗಿ, ಕಿಗರ್ ಖಂಡಿತವಾಗಿಯೂ ಸುಂದರವಾಗಿ ಕಾಣುವ ಸಬ್-4ಎಮ್‌ ಎಸ್‌ಯುವಿ ಆಗಿದ್ದು, ಸಾಕಷ್ಟು ರಗಡ್‌ ಲುಕ್‌ ಮತ್ತು ಸ್ಪೋರ್ಟಿ ಅಂಶಗಳ ಸರಿಯಾದ ಡೋಸೇಜ್ ಅನ್ನು ಹೊಂದಿದೆ. ಹಲವು ಡ್ಯುಯಲ್ ಟೋನ್ ಶೇಡ್‌ಗಳು ಮತ್ತು ಕ್ರಾಸ್‌ಒವರ್ ತರಹದ ಸ್ಟೈಲಿಂಗ್‌ನೊಂದಿಗೆ, ಹೆಚ್ಚಿನ ಜನರು ಕಿಗರ್‌ನ ವಿನ್ಯಾಸವನ್ನು ಇಷ್ಟಪಡುತ್ತಾರೆ. 

    ಬೂಟ್‌ಸ್ಪೇಸ್‌

    ಬ್ರೋಷರ್‌ನಲ್ಲಿ ತಿಳಿಸಿದಂತೆ, ಕಿಗರ್ 405 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ, ಇದು ನಿಮ್ಮ ಇಡೀ ಕುಟುಂಬದ ವೀಕೆಂಡ್‌ ಟ್ರಿಪ್‌ಗೆ ಬೇಕಾಗುವ ಲಗೇಜ್‌ಗಳಿಗೆ ಸಾಕಾಗುತ್ತದೆ, ಇದರಲ್ಲಿ ಪೂರ್ಣ ಸೂಟ್‌ಕೇಸ್ ಸೆಟ್ (1x ದೊಡ್ಡದು, 1x ಮಧ್ಯಮ, 1x ಸಣ್ಣ) ಮತ್ತು ಡಫಲ್ ಬ್ಯಾಗ್ ಸೇರಿವೆ. ಅದಾದ ನಂತರವೂ, ನಿಮಗೆ ಒಂದೆರಡು ಲ್ಯಾಪ್‌ಟಾಪ್ ಬ್ಯಾಗ್‌ಗಳು ಅಥವಾ ಸಡಿಲ ವಸ್ತುಗಳನ್ನು ಸಂಗ್ರಹಿಸಲು ಸ್ಥಳವಿರುತ್ತದೆ.

    ಹಿಂಭಾಗದ ಸೀಟುಗಳಿಗೆ ನೀವು 60:40 ಸ್ಪ್ಲಿಟ್‌ಅನ್ನು ಪಡೆಯುತ್ತೀರಿ, ಇದು ಹೆಚ್ಚುವರಿ ವಸ್ತುಗಳು ಅಥವಾ ಲಗೇಜ್‌ಗಳನ್ನು ಸಂಗ್ರಹಿಸಲು ಸಮತಟ್ಟಾದ ನೆಲವನ್ನು ತೆರೆಯುತ್ತದೆ. ಒಂದೇ ಒಂದು ಸಣ್ಣ ತೊಂದರೆ ಏನೆಂದರೆ, ಬೂಟ್ ಲಿಪ್ ಸ್ವಲ್ಪ ಎತ್ತರವಾಗಿದ್ದು, ಲಗೇಜ್ ಲೋಡ್ ಮಾಡುವಾಗ ಹೆಚ್ಚುವರಿ ಶ್ರಮ ಬೇಕಾಗುತ್ತದೆ.

    ಇಂಟೀರಿಯರ್‌

    Renault Kiger Review:  A Good Small Budget SUV?

    ಕಿಗರ್‌ನ ಕ್ಯಾಬಿನ್ ಬೇಸಿಕ್‌ ಆಗಿದ್ದು, ಹೆಚ್ಚಾಗಿ ಫಂಕ್ಷನಾಲಿಟಿಗಳ ಮೇಲೆ ಕೇಂದ್ರೀಕರಿಸುತ್ತದೆ. ಇದರ ಪರಿಣಾಮವಾಗಿ, ಅದರ ಹೊರಭಾಗದ ಲುಕ್‌ನಿಂದ ನಿಮಗಾಗುವ ಸಂತೃಪ್ತಿಯನ್ನು ಅದೇ ಪ್ರಮಾಣದಲ್ಲಿ ಮುಂದುವರಿಸಲು ಸಾಧ್ಯವಾಗುವುದಿಲ್ಲ. ಅದರಲ್ಲಿ ಯಾವುದೇ ನ್ಯೂನತೆಗಳಿಲ್ಲ, ಆದರೆ ಥೀಮ್ ಮಂದವಾಗಿದೆ ಮತ್ತು ಕ್ಯಾಬಿನ್‌ನ ಬಹುಪಾಲು ಭಾಗವನ್ನು ಡಾರ್ಕ್‌ ಗ್ರೇ ಬಣ್ಣ ಆವರಿಸಿದೆ. ಹೌದು, ಡ್ಯಾಶ್‌ಬೋರ್ಡ್‌ನಲ್ಲಿ ಕೆಲವು ವ್ಯತಿರಿಕ್ತ ಅಂಶಗಳಿವೆ, ಮತ್ತು ಸೀಟುಗಳು ಕಿತ್ತಳೆ ಬಣ್ಣದ ಕವರ್‌ ಪಡೆಯುತ್ತವೆ, ಇದು ಕ್ಯಾಬಿನ್‌ಗೆ ಸ್ವಲ್ಪ ಬಣ್ಣವನ್ನು ನೀಡುತ್ತದೆ. ಸ್ಟಿಚ್ಚಿಂಗ್‌ನಲ್ಲೂ ನೀವು ಅದೇ ಬಣ್ಣವನ್ನು ಗಮನಿಸುತ್ತೀರಿ, ಆದರೆ ಆ ಬಣ್ಣವು ನಿಮ್ಮ ಅಭಿರುಚಿಯನ್ನು ಅವಲಂಬಿಸಿ ನಿಮಗೆ ಇಷ್ಟವಾಗಬಹುದು ಅಥವಾ ನಿರಾಸೆ ಮೂಡಿಸಬಹುದು. 

    ಗುಣಮಟ್ಟದ ಅಂಶದಲ್ಲಿಯೂ ಮೆಟಿರಿಯಲ್‌ಗಳು ಅಷ್ಟೇನು ಪ್ರಭಾವಶಾಲಿಯಾಗಿಲ್ಲ, ಆದರೆ ಈ ಬೆಲೆಗೆ ಅದು ಸ್ವೀಕಾರಾರ್ಹ. ಡ್ಯಾಶ್‌ಬೋರ್ಡ್ ಸಂಪೂರ್ಣವಾಗಿ ಗಟ್ಟಿಯಾದ ಪ್ಲಾಸ್ಟಿಕ್‌ಗಳಿಂದ ಮಾಡಲ್ಪಟ್ಟಿದೆ, ಆದರೆ ಅವು ಸ್ಕ್ರಾಚಿ ಆಗಿರುವುದಿಲ್ಲ. ರೆನಾಲ್ಟ್ ಸೆಂಟ್ರಲ್ ಆರ್ಮ್‌ರೆಸ್ಟ್ ಮತ್ತು ಸ್ಟೀರಿಂಗ್ ವೀಲ್‌ನಲ್ಲಿ ಕೆಲವು ಲೆದರೆಟ್ ಮೆಟಿರಿಯಲ್‌ಗಳನ್ನು ನೀಡುತ್ತದೆ, ಆದರೆ ಸೀಟುಗಳು ಸೆಮಿ-ಲೆದರೆಟ್ ಆಗಿರುತ್ತವೆ. ಬಟನ್‌ಗಳ ಗುಣಮಟ್ಟ ಕೂಡ ಯಾವುದೇ ಮಿತಿಗಳನ್ನು ಮೀರುತ್ತಿಲ್ಲ, ಆದರೆ ರೆನಾಲ್ಟ್ ಎಸಿ ಕಂಟ್ರೋಲ್‌ಗಳು ಮತ್ತು ಡಯಲ್‌ಗಳೊಳಗಿನ ಸಣ್ಣ ಡಿಸ್‌ಪ್ಲೇಯಲ್ಲಿ ಮಾಡಿರುವ ತಂತ್ರಗಾರಿಕೆಯು ಎಂದು ನನಗೆ ಇಷ್ಟವಾಯಿತು; ಇದು ಪ್ರೀಮಿಯಂ ಆಗಿ ಕಾಣುತ್ತದೆ.

    Renault Kiger Review:  A Good Small Budget SUV?

    ಸೀಟುಗಳ ವಿಷಯಕ್ಕೆ ಬಂದರೆ, ಅವು ಸ್ವಲ್ಪ ಗಟ್ಟಿಯಾಗಿದ್ದರೂ ಸಹ ಉತ್ತಮ ಸೌಕರ್ಯವನ್ನು ನೀಡುತ್ತವೆ.  ನಗರದಲ್ಲಿ ಅವುಗಳಲ್ಲಿ ಮೃದುತನ ಕಡಿಮೆಯಾದಂತೆ ಭಾಸವಾಗುವುದಿಲ್ಲ ಮತ್ತು ಲಾಂಗ್‌ ರೋಡ್‌ ಡ್ರೈವ್‌ಗಳಲ್ಲಿ ನಿಮ್ಮನ್ನು ಆಯಾಸಗೊಳಿಸುವುದಿಲ್ಲ. ಸೈಡ್ ಬೋಲ್ಸ್‌ಟರ್‌ಗಳು ಒಳನುಗ್ಗುವಂತಿಲ್ಲ ಮತ್ತು ಎಲ್ಲಾ ಗಾತ್ರದ ಮತ್ತು ಬಾಡಿ ಆಕೃತಿಯ ಜನರಿಗೆ ಅವಕಾಶ ಕಲ್ಪಿಸುತ್ತವೆ. ಸೀಟು ಮ್ಯಾನ್ಯುವಲ್‌ ಎತ್ತರ ಹೊಂದಾಣಿಕೆಯನ್ನು ಪಡೆಯುತ್ತದೆ, ಆದರೆ ಸ್ಟೀರಿಂಗ್ ಟಿಲ್ಟ್ ಹೊಂದಾಣಿಕೆಯನ್ನು ಮಾತ್ರ ನೀಡುತ್ತದೆ, ಆದ್ದರಿಂದ ಆರಾಮದಾಯಕ ಡ್ರೈವಿಂಗ್‌ ಪೊಸಿಶನ್‌ಅನ್ನು ಸೆಟ್‌ ಮಾಡುವುದು ತುಲನಾತ್ಮಕವಾಗಿ ಸುಲಭ.

    Renault Kiger Review:  A Good Small Budget SUV?

    ಆದರೆ ಸುಲಭವಲ್ಲದ ಕೆಲಸವೆಂದರೆ ನೀವು ಎಂದಿಗೂ ನಿರೀಕ್ಷಿಸದ ವಿಷಯ, ಮತ್ತು ಅದು ಸೀಟ್ ಬೆಲ್ಟ್ ಬಕಲ್ ಅನ್ನು ಕಂಡುಹಿಡಿಯುವುದು. ಅದರ ಸ್ಥಾನ ವಿಚಿತ್ರವಾಗಿದ್ದು, ಸೀಟ್ ಬೆಲ್ಟ್ ಅನ್ನು ಹುಡುಕಲು ಮತ್ತು ಹಾಕಲು ಕಷ್ಟವಾಗುತ್ತದೆ. ಬಕಲ್ ಅನ್ನು ಸ್ವಲ್ಪ ಮೇಲಕ್ಕೆ ಎಳೆದರೆ ಮಾತ್ರ, ನೀವು ಪ್ರತಿ ಬಾರಿ ಸೀಟ್ ಬೆಲ್ಟ್ ಹಾಕಲು ಪ್ರಯತ್ನಿಸಿದಾಗ ಕಷ್ಟಪಡಬೇಕಾಗುವುದಿಲ್ಲ.

    ಇನ್ನೊಂದು ಸಣ್ಣ ಪುಟ್ಟ ತೊಂದರೆ ಇದೆ, ಈ ಬಾರಿ ಕ್ಯಾಬಿನ್‌ನಿಂದ ಹೊರಗಿನ ಗೋಚರತೆ ಕಡಿಮೆಯಾಗಿದೆ. ಮುಂಭಾಗದ ನೋಟವು ಯಾವುದೇ ಅಡೆತಡೆಯಿಲ್ಲದೆ ಇದೆ, ಆದರೆ A-ಪಿಲ್ಲರ್‌ಗಳು ಸ್ವಲ್ಪ ಹೆಚ್ಚು ದಪ್ಪವಾಗಿವೆ. ಅವುಗಳ ಮತ್ತು ORVM ಗಳ ನಡುವೆ ಯಾವುದೇ ಅಂತರವಿಲ್ಲದ ಕಾರಣ, ನೀವು 90-ಡಿಗ್ರಿ ತಿರುವು ತೆಗೆದುಕೊಳ್ಳುವಾಗಲೆಲ್ಲಾ ಅದು ಬ್ಲೈಂಡ್ ಸ್ಪಾಟ್ ಅನ್ನು ಸೃಷ್ಟಿಸುತ್ತದೆ ಮತ್ತು ಇದು ನೀವು ಅಗತ್ಯವಾಗಿ ತಿಳಿದಿರಬೇಕಾದ ವಿಷಯವಾಗಿದೆ.

    ಆದರೆ ಇವುಗಳು ಬಹಳ ಸುವ್ಯವಸ್ಥಿತವಾದ ಕ್ಯಾಬಿನ್‌ನಲ್ಲಿ ಎರಡು ಸಣ್ಣ ತೊಂದರೆಗಳಾಗಿವೆ. ಖಂಡಿತ, ವಿನ್ಯಾಸದ ವಿಷಯದಲ್ಲಿ ಇದು ಶಾಂತವಾಗಿದೆ, ಹಾಗೆಯೇ ಇದು ಆರಾಮದಾಯಕವಾಗಿದೆ ಮತ್ತು ಸಾಕಷ್ಟು ಪ್ರಾಯೋಗಿಕ ಶೇಖರಣಾ ಸ್ಥಳಗಳನ್ನು ಸಹ ಹೊಂದಿದೆ.

    ಪ್ರಾಯೋಗಿಕತೆ

    Renault Kiger Review:  A Good Small Budget SUV?

    ನೀವು ನಾಲ್ಕು ಬಾಗಿಲುಗಳಲ್ಲಿ ಸಾಮಾನ್ಯ ಡೋರ್ ಪಾಕೆಟ್‌ಗಳನ್ನು ಪಡೆಯುತ್ತೀರಿ, ಒಂದು ಗ್ಲೋವ್‌ಬಾಕ್ಸ್ ಮತ್ತು ಎಸಿ ಕಂಟ್ರೋಲ್‌ಗಳ ಕೆಳಗೆ ಎರಡು ತೆರೆದ ಸ್ಟೊರೇಜ್‌ ಸ್ಥಳಗಳಿವೆ. ನಿಮ್ಮ ಫೋನ್ ಅನ್ನು ಸೆಂಟ್ರಲ್ ಕನ್ಸೋಲ್‌ನಲ್ಲಿರುವ ಟ್ರೇನಲ್ಲಿ ಇಡಬಹುದು, ಅದರ ಕೆಳಗೆ ದೊಡ್ಡ ಸ್ಥಳವೂ ಇದೆ. ಆದರೆ ಅದು ವಿಚಿತ್ರವಾದ ಆಕಾರವನ್ನು ಹೊಂದಿದ್ದು, ಅದನ್ನು ಸಂಗ್ರಹಿಸುವುದು ಸ್ವಲ್ಪ ಕಷ್ಟಕರವಾಗಿಸುತ್ತದೆ. ರೆನಾಲ್ಟ್ ಇದರೊಂದಿಗೆ ಐಚ್ಛಿಕ ಹೆಚ್ಚುವರಿ ಆರ್ಗನೈಸರ್ ಅನ್ನು ನೀಡುತ್ತದೆ, ಇದು ಕಪ್ ಹೋಲ್ಡರ್‌ಗಳ ಆಯ್ಕೆಯನ್ನು ಸಹ ಪಡೆಯುತ್ತದೆ, ಆದರೆ ಅದನ್ನು ಬಳಸುವುದು ಸಹ ಅತ್ಯಂತ ಸೂಕ್ತವಾದ ವಿಷಯವಲ್ಲ.

    ಸಾಮಾನ್ಯ ಶೇಖರಣಾ ಸ್ಥಳಗಳ ಹೊರತಾಗಿ, ನೀವು ಡ್ಯಾಶ್‌ಬೋರ್ಡ್‌ನಲ್ಲಿ ಹೆಚ್ಚುವರಿ ಗ್ಲೋವ್‌ಬಾಕ್ಸ್ ಅನ್ನು ಸಹ ಪಡೆಯುತ್ತೀರಿ, ಆದರೆ ಇನ್ನೊಂದು ಗ್ಲೋವ್‌ಬಾಕ್ಸ್ ನಿಮ್ಮ ವಸ್ತುಗಳನ್ನು ಅಚ್ಚುಕಟ್ಟಾಗಿ ಸಂಗ್ರಹಿಸಲು ಆರ್ಗನೈಸರ್ ಅನ್ನು ಪಡೆಯುತ್ತದೆ. ಓಹ್, ಇದು ತುಂಬಾ ಸೊಗಸಾಗಿದೆ. 

    Renault Kiger Review:  A Good Small Budget SUV?

    ಹಿಂಭಾಗದ ಪ್ರಯಾಣಿಕರಿಗೆ ಮುಂಭಾಗದ ಸೀಟುಗಳ ಹಿಂದೆ ಪಾಕೆಟ್‌ಗಳು ಮತ್ತು ಎರಡು ಕಪ್ ಹೋಲ್ಡರ್‌ಗಳು ಮತ್ತು ಮಧ್ಯದ ಆರ್ಮ್‌ರೆಸ್ಟ್‌ನಲ್ಲಿ ಫೋನ್ ಸ್ಟೋರೇಜ್ ಸಿಗುತ್ತದೆ. ಚಾರ್ಜಿಂಗ್‌ಗಾಗಿ, 12V ಸಾಕೆಟ್ (ಮುಂಭಾಗ ಮತ್ತು ಹಿಂಭಾಗ) ಮತ್ತು USB ಪೋರ್ಟ್ ಕೂಡ ಇದೆ. ಆದರೆ ಟೈಪ್-ಸಿ ಪೋರ್ಟ್ ಇಲ್ಲ!

    ಫೀಚರ್‌ಗಳು

    Renault Kiger Review:  A Good Small Budget SUV?

    ಕಿಗರ್‌ನ ಫೀಚರ್‌ಗಳ ಪಟ್ಟಿಯು ಎಲ್ಲಾ ಬೇಸಿಕ್‌ ಕ್ರಿಯಾತ್ಮಕ ಸೌಲಭ್ಯಗಳನ್ನು ಒಳಗೊಂಡಿದೆ. ಈ ಪಟ್ಟಿಯಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋ ಐಆರ್‌ವಿಎಂ, ಕೀಲೆಸ್ ಎಂಟ್ರಿ, ಆಟೋ ಎಸಿ ಮತ್ತು ಆಟೋ ಒಆರ್‌ವಿಎಂಗಳು ಸೇರಿವೆ.

    Renault Kiger Review:  A Good Small Budget SUV?

    ಇದರ ಇನ್ಫೋಟೈನ್‌ಮೆಂಟ್ ಈ ಸೆಗ್ಮೆಂಟ್‌ನಲ್ಲಿ ದೊಡ್ಡದಲ್ಲ, ಆದರೆ ಇದು ತನ್ನ ಕೆಲಸವನ್ನು ಶಿಸ್ತಿನಿಂದ ನಿಭಾಯಿಸುತ್ತದೆ. ಇದರ ರೆಸಲ್ಯೂಶನ್ ನೀವು ಪ್ರತಿಸ್ಪರ್ಧಿಗಳಲ್ಲಿ ಪಡೆಯುವಷ್ಟು ಸ್ಪಷ್ಟವಾಗಿಲ್ಲ, ಆದರೆ ಸ್ಕ್ರೀನ್‌ ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುತ್ತದೆ. ಅದರ ಕಾರ್ಯಾಚರಣೆಯಲ್ಲಿ ನಿಜವಾದ ವಿಳಂಬವಿಲ್ಲ ಮತ್ತು ನಿಮ್ಮ ಫೋನ್ ಅನ್ನು ಸಂಪರ್ಕಿಸುವುದು ಸುಲಭದ ಪ್ರಕ್ರಿಯೆಯಾಗಿದೆ.

    ಆದರೆ, ಚಾಲಕನ ಡಿಸ್‌ಪ್ಲೇಯು ಡ್ರೈವ್-ಮೋಡ್ ನಿರ್ದಿಷ್ಟ ಥೀಮ್‌ಗಳೊಂದಿಗೆ ಸ್ಪಷ್ಟವಾದ ಗ್ರಾಫಿಕ್ಸ್ ಅನ್ನು ಹೊಂದಿದೆ. ಡ್ರೈವ್ ಮೋಡ್‌ಗೆ ಅನುಗುಣವಾಗಿ ಡಿಸ್‌ಪ್ಲೇಯಲ್ಲಿರುವ ಮಾಹಿತಿಯು ಸಹ ಬದಲಾಗುತ್ತದೆ. ಉದಾಹರಣೆಗೆ, ಇದು ಇಕೋ ಮೋಡ್‌ನಲ್ಲಿ ಇಂಧನ ದಕ್ಷತೆಯನ್ನು ಪ್ರದರ್ಶಿಸುತ್ತದೆ, ಆದರೆ ನೀವು ಸ್ಪೋರ್ಟ್ ಮೋಡ್‌ನಲ್ಲಿ G ಫೋರ್ಸ್ ಬಾರ್ ಮತ್ತು ಔಟ್‌ಪುಟ್ (ಹಾರ್ಸ್‌ಪವರ್‌ ಮತ್ತು ಟಾರ್ಕ್) ಬಾರ್‌ಗಳನ್ನು ಪಡೆಯುತ್ತೀರಿ.

    6-ಸ್ಪೀಕರ್ ಸೌಂಡ್ ಸಿಸ್ಟಮ್ ರೆಗ್ಯುಲರ್‌ ಬಳಕೆಗೆ ಅಗತ್ಯವಿದ್ದು, ಅದನ್ನು ನಿಭಾಯಿಸುತ್ತದೆ. ಇದರ ಕೆಲವು ಪ್ರತಿಸ್ಪರ್ಧಿಗಳು ನೀಡುವ ಪ್ರೀಮಿಯಂ ಆಡಿಯೊ ಗುಣಮಟ್ಟ ಇದರಲ್ಲಿ ಇಲ್ಲ, ಆದರೆ ನೀವು ಹಾರ್ಡ್‌ಕೋರ್ ಸಂಗೀತ ಪ್ರಿಯರಾಗಿದ್ದರೆ ಮಾತ್ರ ನೀವು ಇದರ ಬಗ್ಗೆ ದೂರು ನೀಡುತ್ತೀರಿ.

    Renault Kiger Review:  A Good Small Budget SUV?

    ಒಟ್ಟಾರೆಯಾಗಿ, ನಿಮ್ಮ ಮಾಲೀಕತ್ವದ ಅನುಭವದಲ್ಲಿ ರಾಜಿ ಮಾಡಿಕೊಳ್ಳುವ ಯಾವುದೇ ಫೀಚರ್‌ಅನ್ನು ಕಿಗರ್ ತಪ್ಪಿಸಿಕೊಳ್ಳುವುದಿಲ್ಲ. ಆದರೆ ಸೆಗ್ಮೆಂಟ್‌ನಲ್ಲಿನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದಾಗ, ಅದರಲ್ಲಿ ಸನ್‌ರೂಫ್, ವೆಂಟಿಲೇಟೆಡ್‌ ಸೀಟ್‌ಗಳು, ಆಟೋ ಹೆಡ್‌ಲೈಟ್‌ಗಳು ಮತ್ತು ಹೆಡ್ಸ್-ಅಪ್ ಡಿಸ್‌ಪ್ಲೇಯಂತಹ ಕೆಲವು ಉತ್ತಮ ಫೀಚರ್‌ಗಳು ಸಿಗುವುದಿಲ್ಲ. ಹಾಗೆಯೇ, ಈ ಫೀಚರ್‌ಗಳು ಉತ್ತಮ ಮತ್ತು ವಿವೇಚನೆಗೆ ಅನುಗುಣವಾಗಿವೆ, ಮತ್ತು ಈ ಫೀಚರ್‌ಗಳನ್ನು ನೀಡುವ ಕಾರುಗಳು ಕಿಗರ್ ಗಿಂತ ಹೆಚ್ಚು ದುಬಾರಿಯಾಗಿದೆ. ಆದ್ದರಿಂದ ಅದರ ಬೆಲೆಗೆ, ಕಿಗರ್‌ನ ಫೀಚರ್‌ಗಳ ಪಟ್ಟಿ ಸೂಕ್ತವಾಗಿದೆ.

    Published by
    ujjawall

    ರೆನಾಲ್ಟ್ ಕೈಗರ್

    ರೂಪಾಂತರಗಳು*Ex-Showroom Price New Delhi
    ಆರ್ಎಕ್ಸ್ಇ (ಪೆಟ್ರೋಲ್)Rs.6.10 ಲಕ್ಷ*
    ಆರ್ಎಕ್ಸ್ಎಲ್ (ಪೆಟ್ರೋಲ್)Rs.6.85 ಲಕ್ಷ*
    ಆರ್ಎಕ್ಸ್ಎಲ್ ಎಎಂಟಿ (ಪೆಟ್ರೋಲ್)Rs.7.35 ಲಕ್ಷ*
    ಆರ್‌ಎಕ್ಸ್‌ಟಿ ಒಪ್ಶನಲ್‌ (ಪೆಟ್ರೋಲ್)Rs.8 ಲಕ್ಷ*
    ಆರ್‌ಎಕ್ಸ್‌ಟಿ ಒಪ್ಶನಲ್‌ ಡುಯಲ್ ಟೋನ್ (ಪೆಟ್ರೋಲ್)Rs.8.23 ಲಕ್ಷ*
    ಆರ್ಎಕ್ಸ್ಟಿ opt ಎಎಂಟಿ (ಪೆಟ್ರೋಲ್)Rs.8.50 ಲಕ್ಷ*
    ಆರ್ಎಕ್ಸ್ಟಿ opt ಎಎಂಟಿ dt (ಪೆಟ್ರೋಲ್)Rs.8.73 ಲಕ್ಷ*
    ಆರ್‌ಎಕ್ಸಙ (ಪೆಟ್ರೋಲ್)Rs.8.80 ಲಕ್ಷ*
    ಆರ್‌ಎಕ್ಸ್‌ಜೆಡ್‌ ಡುಯಲ್ ಟೋನ್ (ಪೆಟ್ರೋಲ್)Rs.9.03 ಲಕ್ಷ*
    ಆರ್‌ಎಕ್ಸಙ ಟರ್ಬೊ (ಪೆಟ್ರೋಲ್)Rs.10 ಲಕ್ಷ*
    ಆರ್‌ಎಕ್ಸ್‌ಟಿ ಒಪ್ಶನಲ್‌ ಟರ್ಬೋ ಸಿವಿಟಿ ಡ್ಯುಯಲ್‌ ಟೋನ್‌ (ಪೆಟ್ರೋಲ್)Rs.10.23 ಲಕ್ಷ*
    ಆರ್‌ಎಕ್ಸ್‌ಜೆಡ್‌ ಟರ್ಬೊ ಡುಯಲ್ ಟೋನ್ (ಪೆಟ್ರೋಲ್)Rs.10.23 ಲಕ್ಷ*
    ಆರ್‌ಎಕ್ಸ್‌ಟಿ ಒಪ್ಶನಲ್‌ ಟರ್ಬೋ ಸಿವಿಟಿ (ಪೆಟ್ರೋಲ್)Rs.10.30 ಲಕ್ಷ*
    ಆರ್‌ಎಕ್ಸಙ ಟರ್ಬೊ ಸಿವಿಟಿ (ಪೆಟ್ರೋಲ್)Rs.11 ಲಕ್ಷ*
    ಆರ್‌ಎಕ್ಸ್‌ಜೆಡ್‌ ಟರ್ಬೊ ಸಿವಿಟಿ ಡುಯಲ್ ಟೋನ್ (ಪೆಟ್ರೋಲ್)Rs.11.23 ಲಕ್ಷ*
    ಆರ್ಎಕ್ಸ್ಇ ಸಿಎನ್‌ಜಿ (ಸಿಎನ್‌ಜಿ)Rs.6.89 ಲಕ್ಷ*
    ಆರ್ಎಕ್ಸ್ಎಲ್ ಸಿಎನ್‌ಜಿ (ಸಿಎನ್‌ಜಿ)Rs.7.64 ಲಕ್ಷ*
    ಆರ್ಎಕ್ಸ್ಟಿ opt ಸಿಎನ್‌ಜಿ (ಸಿಎನ್‌ಜಿ)Rs.8.79 ಲಕ್ಷ*

    ಇತ್ತೀಚಿನ ಎಸ್ಯುವಿ ಕಾರುಗಳು

    ಮುಂಬರುವ ಕಾರುಗಳು

    ಇತ್ತೀಚಿನ ಎಸ್ಯುವಿ ಕಾರುಗಳು

    ×
    We need your ನಗರ to customize your experience