• English
    • Login / Register

    ಮೇಡ್‌-ಇನ್‌-ಇಂಡಿಯಾದ ಹೋಂಡಾ ಎಲಿವೇಟ್‌ಗೆ ಜಪಾನ್‌ನಲ್ಲಿ ನಡೆದ NCAP ಕ್ರ್ಯಾಶ್ ಪರೀಕ್ಷೆಯಲ್ಲಿ ಭರ್ಜರಿ 5-ಸ್ಟಾರ್ ರೇಟಿಂಗ್

    ಏಪ್ರಿಲ್ 22, 2025 07:45 pm ರಂದು bikramjit ಮೂಲಕ ಪ್ರಕಟಿಸಲಾಗಿದೆ

    4 Views
    • ಕಾಮೆಂಟ್‌ ಅನ್ನು ಬರೆಯಿರಿ

    ಹೋಂಡಾ ಎಲಿವೇಟ್ ಅನ್ನು ಜಪಾನ್‌ನಲ್ಲಿ ಹಲವಾರು ಪರೀಕ್ಷೆಗಳಿಗೆ ಒಳಪಡಿಸಲಾಯಿತು, ಅಲ್ಲಿ ಅದು ಉತ್ತಮ ರೇಟಿಂಗ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು, ಹೆಚ್ಚಿನ ಪರೀಕ್ಷೆಗಳಲ್ಲಿ 5 ರಲ್ಲಿ 5 ಅಂಕಗಳನ್ನು ಗಳಿಸಿತು

    ಭಾರತದಲ್ಲಿ ತಯಾರಿಸಿ ಜಪಾನ್‌ ಮಾರುಕಟ್ಟೆಗೆ ಹೋಂಡಾ WR-V ಎಂದು ರಫ್ತು ಮಾಡಿ ಮಾರಾಟ ಮಾಡಲಾದ ಹೋಂಡಾ ಎಲಿವೇಟ್ ಅನ್ನು ಜಪಾನ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ (JNCAP) ಕ್ರ್ಯಾಶ್ ಟೆಸ್ಟ್ ಮಾಡಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿ ಕಾರು ಕಠಿಣ ಸುರಕ್ಷತಾ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿ ಉತ್ತೀರ್ಣವಾಗಿದ್ದು, ಸಂಪೂರ್ಣ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಇದರ JNCAP ಪರೀಕ್ಷಾ ಫಲಿತಾಂಶಗಳನ್ನು ವಿವರವಾಗಿ ನೋಡೋಣ.

    ಪಲಿತಾಂಶಗಳು

    ಸುರಕ್ಷತಾ ಮಾನದಂಡಗಳು

    ಅಂಕಗಳು

    ಶೇಕಡಾವಾರು

    ಒಟ್ಟಾರೆ ಸುರಕ್ಷತಾ ಪರ್ಫಾರ್ಮೆನ್ಸ್‌

    176.23 / 193.8

    90%

    ತಡೆಗಟ್ಟುವ ಸುರಕ್ಷತಾ ಪರ್ಫಾರ್ಮೆನ್ಸ್‌

    82.22 / 85.8

    95%

    ಡಿಕ್ಕಿ ಸುರಕ್ಷತಾ ಪರ್ಫಾರ್ಮೆನ್ಸ್‌

    86.01 / 100

    86%

    ಆಟೋಮ್ಯಾಟಿಕ್‌ ಎಮೆರ್ಜೆನ್ಸಿ ಕಾಲ್‌ ಸಿಸ್ಟಮ್‌

    8 / 8

    100%

    ಗಮನಿಸಿದ ಪ್ರಮುಖ ಅಂಶಗಳು

    • ಪೂರ್ಣ ಮುಂಭಾಗದ ಡಿಕ್ಕಿ ಪರೀಕ್ಷೆಯಲ್ಲಿ, ಮುಖಾಮುಖಿ ಅಪಘಾತವನ್ನು ಅನುಕರಿಸಲು ಕಾರನ್ನು 50 ಕಿ.ಮೀ. ವೇಗದಲ್ಲಿ ನೇರವಾಗಿ ತಡೆಗೋಡೆಗೆ ಓಡಿಸಲಾಯಿತು. ಈ ಪರೀಕ್ಷೆಯಲ್ಲಿ ಇದು ಉನ್ನತ ಮಟ್ಟದ 5 ರೇಟಿಂಗ್ ಗಳಿಸಿದೆ.

    • ಮುಂದಿನದು ಹೊಸ ಆಫ್‌ಸೆಟ್ ಫ್ರಂಟಲ್ ಡಿಕ್ಕಿ ಪರೀಕ್ಷೆ, ಇದರಲ್ಲಿ ಕಾರಿನ ಮುಂಭಾಗದ ಒಂದು ಭಾಗ ಮಾತ್ರ ಮತ್ತೊಂದು ವಸ್ತುವಿಗೆ ಡಿಕ್ಕಿ ಹೊಡೆಯುತ್ತದೆ. ಎಲಿವೇಟ್ ಹೊಡೆತವನ್ನು ಚೆನ್ನಾಗಿ ಹೀರಿಕೊಳ್ಳಿತು ಮತ್ತು ಪ್ರಯಾಣಿಕರ ವಿಭಾಗವನ್ನು ಹಾಗೆಯೇ ಇರಿಸಿತು. ತನ್ನದೇ ಆದ ಪ್ರಯಾಣಿಕರನ್ನು ರಕ್ಷಿಸಿದ್ದಕ್ಕಾಗಿ ಅದು 24 ಅಂಕಗಳಲ್ಲಿ 22.42 ಅಂಕಗಳನ್ನು ಗಳಿಸಿತು. ಕುತೂಹಲಕಾರಿಯಾಗಿ, ಅದೇ ಅಪಘಾತದಲ್ಲಿ ಕಾರು ಮತ್ತೊಂದು ವಾಹನಕ್ಕೆ ಎಷ್ಟು ಹಾನಿ ಉಂಟುಮಾಡಬಹುದು ಎಂಬುದನ್ನು ಪರೀಕ್ಷೆಯು ಪರಿಶೀಲಿಸುತ್ತದೆ. ಪಾಲುದಾರ ವಾಹನ ರಕ್ಷಣೆ ಎಂದು ಕರೆಯಲ್ಪಡುವ ವಿಭಾಗದಲ್ಲಿ ಎಲಿವೇಟ್‌ಗೆ 5 ರಲ್ಲಿ -1.23 ಅಂಕಗಳನ್ನು ಗಳಿಸುವ ಮೂಲಕ ಸ್ವಲ್ಪ ಪೆನಾಲ್ಟಿ ಸಿಕ್ಕಿತು.

    • ಸೈಡ್ ಇಂಪ್ಯಾಕ್ಟ್ ಪರೀಕ್ಷೆಯಲ್ಲಿ, ಚಲಿಸುವ ತಡೆಗೋಡೆ ಕಾರನ್ನು ಪಕ್ಕದಿಂದ ಹೊಡೆದಾಗ, ಸೈಡ್ ಏರ್‌ಬ್ಯಾಗ್‌ಗಳು ಪರಿಣಾಮಕಾರಿಯಾಗಿ ನಿಯೋಜಿಸಲ್ಪಡುತ್ತವೆ. ಇದರಲ್ಲಿ ಎಲಿವೇಟ್ ಲೆವೆಲ್-5 ರೇಟಿಂಗ್ ಪಡೆದುಕೊಂಡಿದೆ. ಹಿಂಭಾಗದ ಡಿಕ್ಕಿ ಪರೀಕ್ಷೆಗಳಲ್ಲಿ, ಚಾಲಕ ಮತ್ತು ಪ್ರಯಾಣಿಕರ ಸೀಟುಗಳು ಲೆವೆಲ್ 4 ರೇಟಿಂಗ್ ಅನ್ನು ಪಡೆದಿವೆ.

    • JNCAP ತಪಾಸಣೆಗಳಲ್ಲಿ ಪಾದಚಾರಿ ಸುರಕ್ಷತೆಗಾಗಿ ಎಲಿವೇಟ್ ಅನ್ನು ಸಹ ಪರೀಕ್ಷಿಸಲಾಯಿತು. ಇದು ತಲೆ ರಕ್ಷಣೆಗೆ 4ನೇ ಸ್ಟಾರ್‌ ಮತ್ತು ಕಾಲಿನ ರಕ್ಷಣೆಗೆ ಪೂರ್ಣ 5 ನೇ ಸ್ಟಾರ್‌ಅನ್ನು ಗಳಿಸಿತು, ಇದು ಈ ವಿಭಾಗದಲ್ಲಿ ಅತ್ಯಧಿಕ ರೇಟಿಂಗ್‌ಗಳಲ್ಲಿ ಒಂದಾಗಿದೆ.

    • ಹೋಂಡಾ ಎಲಿವೇಟ್ ಆಟೋನಮಸ್ ಎಮರ್ಜೆನ್ಸಿ ಬ್ರೇಕಿಂಗ್ ಪರೀಕ್ಷೆಯಲ್ಲಿ ಪರಿಪೂರ್ಣ ಲೆವೆಲ್ 5 ರೇಟಿಂಗ್ ಅನ್ನು ಗಳಿಸಿದೆ, ಇದರಲ್ಲಿ ಪಾದಚಾರಿಗಳು, ಕಾರುಗಳು ಮತ್ತು ಬೈಸಿಕಲ್‌ಗಳಂತಹ ಚಲಿಸುವ ಡಮ್ಮಿಗಳ ವಿರುದ್ಧ 20 ಕಿಮೀ, 25 ಕಿಮೀ, 30 ಕಿಮೀ, 40 ಕಿಮೀ, 45 ಕಿಮೀ ಮತ್ತು ಗರಿಷ್ಠ 60 ಕಿಮೀ ವೇಗದಲ್ಲಿ ಡಿಕ್ಕಿ ಹೊಡೆಯುವುದನ್ನು ತಡೆಗಟ್ಟಲು ಹಾಗೂ ಲೇನ್ ನಿರ್ಗಮನ ತಡೆಗಟ್ಟುವಿಕೆಗಾಗಿ ಪರೀಕ್ಷಿಸಲಾಯಿತು. ಇದು ಆಡ್ವಾನ್ಸ್‌ಡ್‌ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಮ್‌ಗಳನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ ಎಂದು ಸಾಬೀತುಪಡಿಸುತ್ತದೆ.

    ಲಭ್ಯವಿರುವ ಇತರ ಸುರಕ್ಷತಾ ಫೀಚರ್‌ಗಳು

    ಜಪಾನ್-ಸ್ಪೆಕ್ ಹೋಂಡಾ ಎಲಿವೇಟ್ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು, ಲೇನ್ ವಾಚ್ ಕ್ಯಾಮೆರಾ ಮತ್ತು ಸೆನ್ಸರ್‌ಗಳೊಂದಿಗೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದಂತಹ ಸುರಕ್ಷತಾ ಫೀಚರ್‌ಗಳನ್ನು ಹೊಂದಿದೆ. ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪಿಂಗ್ ಅಸಿಸ್ಟ್ ಮತ್ತು ಆಟೋಮ್ಯಾಟಿಕ್‌ ಎಮೆರ್ಜೆನ್ಸಿ ಬ್ರೇಕಿಂಗ್‌ನಂತಹ ಫೀಚರ್‌ಗಳೊಂದಿಗೆ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಸೂಟ್ ಅನ್ನು ಸಹ ಪಡೆಯುತ್ತದೆ.

    ಬೆಲೆ ಮತ್ತು ಪ್ರತಿಸ್ಪರ್ಧಿಗಳು

    ಭಾರತದಲ್ಲಿ ಹೋಂಡಾ ಎಲಿವೇಟ್ ಬೆಲೆ 11.91 ಲಕ್ಷ ರೂ.ಗಳಿಂದ 16.73 ಲಕ್ಷ ರೂ.ಗಳವರೆಗೆ (ಎರಡೂ ಬೆಲೆಗಳು ಎಕ್ಸ್ ಶೋ ರೂಂ, ಭಾರತಾದ್ಯಂತ) ಇದೆ. ನಮ್ಮ ದೇಶದಲ್ಲಿ, ಇದು ಮಾರುತಿ ಗ್ರ್ಯಾಂಡ್ ವಿಟಾರಾ, ಹುಂಡೈ ಕ್ರೆಟಾ, ಟಾಟಾ ಕರ್ವ್, ಕಿಯಾ ಸೆಲ್ಟೋಸ್, ಟೊಯೋಟಾ ಹೈರೈಡರ್, ಸ್ಕೋಡಾ ಕುಶಾಕ್, ಸಿಟ್ರೊಯೆನ್ ಬಸಾಲ್ಟ್, ಎಂಜಿ ಆಸ್ಟರ್ ಮತ್ತು ವೋಕ್ಸ್‌ವ್ಯಾಗನ್ ಟೈಗುನ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

    ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

    was this article helpful ?

    Write your Comment on Honda ಇಲೆವಟ್

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience