ಹೋಂಡಾ WRV ಡೀಸೆಲ್ vs ಹುಂಡೈ i20 Active ಡೀಸೆಲ್ - ನೈಜ ಕಾರ್ಯದಕ್ಷತೆ ಹಾಗು ಮೈಲೇಜ್ ಹೋಲಿಕೆ
ಏಪ್ರಿಲ್ 26, 2019 10:25 am ರಂದು khan mohd. ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ನಾವು ರೋಡ್ ಟೆಸ್ಟ್ ನಲ್ಲಿ ಕಂಡುಕೊಡಿದ್ದು ಹೀಗಿದೆ.
ಹೋಂಡಾ WR-V ಮತ್ತು ಹುಂಡೈ i20 Activeಒಂದು ವಿಷಯವನ್ನು ಸಾಮಾನ್ಯವಾಗಿ ಹೊಂದಿದೆ. ಎವೆರೆದುವು ಕ್ರಾಸ್ಒವರ್ ಗಳಾಗಿದ್ದು ಹ್ಯಾಚ್ ಬ್ಯಾಕ್ ಕಸಿನ್ ಗಳಾದ ಜಾಜ್ ಹಾಗು ಎಲೈಟ್ i20 ವೇದಿಕೆ ಮೇಲೆ ನಿರ್ಮಾಣವಾಗಿದೆ. ಹೋಂಡಾ ನೋಡಲು SUV- ತರಹ ಇದ್ದು , ಎತ್ತರದ ಬಾನೆಟ್, ಚಪ್ಪಟೆ ಮೂಗು, ದಪ್ಪವಾದ ಕ್ರೋಮ್ ಗ್ರಿಲ್, ನೋಡಲು BR-V ಇಂದ ಸ್ಫೂರ್ತಿ ಪಡೆದಂತಿದೆ. ಹುಂಡೈ ಒಂದು ಎತ್ತರ ಹೆಚ್ಚುಗೊಳಿಸಲ್ಪಟ್ಟ ಹ್ಯಾಚ್ ಬ್ಯಾಕ್ ರೂಫ್ ರೈಲ್ ಹಾಗು ಪ್ಲಾಸ್ಟಿಕ್ ಕ್ಲಾಡ್ಡಿಂಗ್ ಹೊಂದಿದೆ. ಹಾಗಾದರೆ, ನಿಜ ಉಪಯೋಗದಲ್ಲಿ ಎವೆರೆಡರಲ್ಲಿ ಯಾವುದು ಹೆಚ್ಚು ಕಾರ್ಯ ದಕ್ಷತೆ ಹೊಂದಿದೆ ಹಾಗು ಮೈಲೇಜ್ ಸಂಖ್ಯೆಗಳನ್ನು ಹೊಂದಿದೆ? ರೋಡ್ ಟೆಸ್ಟ್ ನ ಫಲಿತಾಂಶಗಳನ್ನು ಕೆಳಗೆ ಕೊಡಲಾಗಿದೆ.
ವೇಗಗತಿ ಪಡೆಯುವಿಕೆ
ಹೋಂಡಾ WR-V ಯಲ್ಲಿ 1.5-litre, 4-cylinder i-DTEC ಡೀಸೆಲ್ ಎಂಜಿನ್ ಉಪಯೋಗಿಸಲಾಗಿದೆ ಇದು 100PS ಪವರ್ ಹಾಗು 200Nm ಗರಿಷ್ಟ ಟಾರ್ಕ್ ಕೊಡುತ್ತದೆ. ಮತ್ತು ಇದು 10PS ಹೆಚ್ಚು ಮತ್ತು 20Nm ಕಡಿಮೆಯಾಗಿದೆ , ಹುಂಡೈ ಗೆ ಹೋಲಿಸಿದಾಗ. ಇವೆರೆಡರಲ್ಲಿ ಹೋಂಡಾ ಬೇಗನೆ 100kmph ವೇಗ ಪಡೆಯುತ್ತದೆ , ಇದಕ್ಕೆ 12.43 ಸೆಕೆಂಡ್ ತೆಗೆದುಕೊಳ್ಳುತ್ತದೆ, ಹೋಲಿಕೆಯಲ್ಲಿ i20 Active 13.3 ಸೆಕೆಂಡ್ ತೆಗೆದುಕೊಳ್ಳುತ್ತದೆ.
ಹೆಚ್ಚಿನ ಟಾರ್ಕ್ i20 Active ಗೆ ಟ್ರಾಫಿಕ್ ನಲ್ಲಿ ಹೆಚ್ಚು ಸಹಾಯಕವಾಗಿದೆ, ಹಾಗಾಗಿ ನಗರಗಳಲ್ಲಿ ಡ್ರೈವ್ ಮಾಡುವುದಕ್ಕೆ ಅನುಕೂಲವಾಗುತ್ತದೆ. ಆದರೆ ಹೋಂಡಾ ವೇಗಗತಿ ಪಡೆಯಲು ಸ್ವಲ್ಪ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ, ಇದಕ್ಕೆ ಹೆಚ್ಚಿನ ಗೇರ್ ರೇಶಿಯೋ ಕಾರಣವಾಗಿರಬಹುದು. ಕಡಿಮೆ ರೇಶಿಯೋ ಗಳಿರುವದರಿಂದ i20 Active ಹೆಚ್ಚು ಮೈಲೇಜ್ ಸಂಖ್ಯೆಗಳನ್ನು ಪಡೆಯಲು ಅನುಕೂಲವಾಗಿದೆ ನಗರಗಳಲ್ಲಿ WR-V ಯ ಮೈಲೇಜ್ ಅನ್ನು ಪರಿಗಣಿಸಿದಾಗ. ಹೈವೆ ಗಳಲ್ಲಿ WR-V ಹೆಚ್ಚಿನ ಗೇರ್ ರೇಷನ್ ಗಳಿಂದ ಹುಂಡೈ ನಿಂದ ಮುನ್ನಡೆಯುತ್ತದೆ, ಮೈಲೇಜ್ ಅಂಕೆ ಗಳ ವಿಚಾರದಲ್ಲಿ. ಇದರ ಬಗ್ಗೆ ಹೆಚ್ಚು ವಿಷಯಗಳನ್ನು ನಂತರ ತಿಳಿಯೋಣ.
ಬ್ರೇಕಿಂಗ್
ಹೋಂಡಾ WR-V ಹುಂಡೈ i20 Active ಅನ್ನು ಬ್ರೇಕಿಂಗ್ ಪರೀಕ್ಷೆಯಲ್ಲಿ ಸೋಲಿಸುತ್ತದೆ. ಬ್ರೇಕಿಂಗ್ ಮಾಡುವಾಗ 100-0kmph, ಹೋಂಡಾ ಕಡಿಮೆ ದೂರ ಕ್ರಮಿಸುತ್ತದೆ (41.90m) ಹುಂಡೈ i20 Active ಗೆ ಹೋಲಿಸಿದಾಗ., ಇದು 4.97m ಹೆಚ್ಚು ದೂರ ತೆಗೆದುಕೊಂಡಿತು ಪೂರ್ಣ ನಿಲ್ಲಲು. ಆದರೆ ನಾವು ಪರಿಗಣಿಸಬೇಕಾದ ವಿಷಯವೆಂದರೆ, ನಾವು ಪರೀಕ್ಷಿಸಿದ ಹುಂಡೈ i20 Active ಈಗಾಗಲೇ 40,000km ಕ್ರಮಿಸಿದ್ದು ಬ್ರೇಕ್ ಗಳು ಹಳತಾಗಿದ್ದವು. ಹಾಗಾಗಿ ಈ ಸಂಖ್ಯೆಗಳನ್ನು ಕಾರ್ ನ ನಿಜವಾದ ಕಾರ್ಯದಕ್ಷತೆ ಎಂದು ಪರಿಗಣಿಸಲಾಗುವುದಿಲ್ಲ. ಧಾಖಲೆಗೆ ಸಂಬಂಧಿಸಿದಂತೆ ಎರೆದುವು ಕಾರ್ ಗಳಲ್ಲಿ ವೆಂಟಿಲೇಟ್ ಮುಂದಿನ ಡಿಸ್ಕ್ ಹಾಗು ಹಿಂಬದಿಯ ಡ್ರಮ್ ಬ್ರೇಕ್ ಗಳು ಮತ್ತು ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಇಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯುಶನ್ (EBD) ( ಎಲ್ಲ ವೇರಿಯೆಂಟ್ ಗಳಲ್ಲೂ ಸ್ಟ್ಯಾಂಡರ್ಡ್ ಆಗಿದೆ ) ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ.
ನಿಜ ಪ್ರಪಂಚದ ಮೈಲೇಜ್ ಹೋಲಿಕೆ
ಕಂಪನಿ ಕ್ಲೇಮ್ ಮಾಡಿರುವ ಮೈಲೇಜ್ ಸಂಖ್ಯೆಗಳು ಹೋಂಡಾ WR-V ಡೀಸೆಲ್ ಅವತರಣಿಕೆಯಲ್ಲಿ, ಮತ್ತು ಹುಂಡೈ i20 Active ನಲ್ಲಿ, 25.5kmpl ಮತ್ತು 21.19kmpl ಅನುಕ್ರಮವಾಗಿ. ಕಡಿಮೆ ಗೇರ್ ರೇಶಿಯೋ ಇರುವುದರಿಂದ ಮತ್ತು ಹೆಚ್ಚಿನ ಟಾರ್ಕ್ ಇರುವುದರಿಂದ, i20 Active ನಗರಗಳಲ್ಲಿ 16.36kmpl ಕೊಡಲು ಸಾಧ್ಯವಾಯಿತು. ಹೋಂಡಾ 15.35kmpl ಕೊಟ್ಟಿತು. ಈ ಹಿಂದೆ ಹೇಳಿದಂತೆ ಹೋಂಡಾ ಗೆ ಹೆಚ್ಚಿನ ಗೇರ್ ಇದ್ದದ್ದರಿಂದ ಚೆನ್ನಾಗಿರುವ ಸಂಖ್ಯೆಗಳಾದ 25.88kmpl ಪಡೆಯಲು ಅನುಕೂಲವಾಯಿತು. ಇನ್ನೊಂದು ಬದಿಯಲ್ಲಿ i20 Active ಗಣನೀಯವಾದ 23.8kmpl ಕೊಟ್ಟಿತು!
ಈ ಸಂಖ್ಯೆಗಳನ್ನು ಪರಿಗಣಿಸಿದಾಗ, ಹುಂಡೈ i20 Active ಒಂದು ಉತ್ತಮ ಆಯ್ಕೆ ಆಗುತ್ತದೆ ಯಾವ ಗ್ರಾಹಕರು ಇದನ್ನು ನಗರಗಳಲ್ಲಿನ ಪ್ರಯಾಣಕ್ಕೆ ಉಪಯೋಗಿಸುತ್ತಾರೋ ಅವರಿಗೆ. ಆದರೆ WR-V ಹೆಚ್ಚಾಗಿ ಹೈವೆ ಯಲ್ಲಿ ಡ್ರೈವ್ ಮಾಡುವವರಿಗೆ ಹೊಂದಿಕೊಳ್ಳುತ್ತದೆ. ಇಷ್ಟು ಹೇಳಿದ ನಂತರ ಎರೆದುವು ಕಾರ್ ಗಳಿಗೆ ಅದರದೇ ಆದ ಶಕ್ತಿ ಇದೆ, ಮತ್ತು ಎರೆದುವು ಸಮಾನಾಂತರ ಕಾರ್ಯದಕ್ಷತೆ ನೋಡಿಸಿ, ಮತ್ತು ನಮ್ಮ ಎಲ್ಲ ಪರೀಕ್ಷೆಗಳಲ್ಲಿ ಒಂದನ್ನು ಇನ್ನೊಂದು ಹೆಚ್ಚಿನ ಅಂತರದಲ್ಲಿ ಸೋಲಿಸಲಾಗಲಿಲ್ಲ.
Prices (only diesel variants)
Honda WRV |
Hyundai i20 Active |
S – Rs 8.82 lakh |
S – Rs 9.02 lakh |
SX – Rs 9.83 lakh |
|
VX – Rs 10 lakh |
SX Dual Tone– Rs 10.07 lakh |
All prices are ex-showroom Delhi
Don’t miss: Comparison Review: Honda WR-V vs Hyundai i20 Active
Read More on : WRV on road price