Maruti Brezzaದಲ್ಲಿಲ್ಲದ ಈ 10 ಸೌಕರ್ಯಗಳನ್ನು ನೀಡುತ್ತಿರುವ Mahindra XUV 3XO
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಗಾಗಿ samarth ಮೂಲಕ ಮೇ 23, 2024 05:06 pm ರಂದು ಪ್ರಕಟಿಸಲಾಗಿದೆ
- 27 Views
- ಕಾಮೆಂಟ್ ಅನ್ನು ಬರೆಯಿರಿ
ಬ್ರೆಝಾ ಈ ಸೆಗ್ಮೆಂಟ್‌ನಲ್ಲಿ ಹೆಚ್ಚು ಮಾರಾಟವಾಗುವ ಮೊಡೆಲ್‌ಗಳಲ್ಲಿ ಒಂದಾಗಿದ್ದರೂ, 3XOವು ಹೆಚ್ಚು ಸೌಕರ್ಯಗಳನ್ನು ನೀಡುತ್ತದೆ
ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಮಾರುಕಟ್ಟೆಯು ಇತ್ತೀಚಿನ ದಿನಗಳಲ್ಲಿ ಅತ್ಯಂತ ಬೇಡಿಕೆ ಇರುವ ಕಾರು ಸೆಗ್ಮೆಂಟ್‌ಗಳಲ್ಲಿ ಒಂದಾಗಿದೆ, ಹಾಗೆಯೇ ಈ ವಿಭಾಗದಲ್ಲಿ ಮಾರುತಿ ಬ್ರೆಝಾವು ಹಲವು ವರ್ಷಗಳಿಂದ ಪ್ರಾಬಲ್ಯ ಸಾದಿಸಿದೆ. ಆದರೆ ಈಗ, ಮಹೀಂದ್ರಾ ಎಕ್ಸ್‌ಯುವಿ3XO (ಫೇಸ್‌ಲಿಫ್ಟೆಡ್ ಎಕ್ಸ್‌ಯುವಿ300) ಈ ಸೆಗ್ಮೆಂಟ್‌ನಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಮೊದಲ ಬಾರಿಗೆ ನೀಡುತ್ತಿದೆ, ಇದು ಎಕ್ಸ್‌ಯುವಿ3XO ವನ್ನು ಸೆಗ್ಮೆಂಟ್‌ನ ಟಾಪ್ ಬ್ರ್ಯಾಂಡ್ ಆಗುವಂತೆ ಮಾಡಬಹುದು. ಎಕ್ಸ್‌ಯುವಿ3XOನ ಕೆಲವು ಪ್ರಮುಖ ಅನುಕೂಲಗಳು ಇಲ್ಲಿವೆ, ಅದು ಮಾರುತಿ ಬ್ರೆಝಾಕ್ಕಿಂತ ಹೆಚ್ಚಿನದನ್ನು ನೀಡುತ್ತದೆ.
ಪನೋರಮಿಕ್ ಸನ್‌ರೂಫ್
ಎಕ್ಸ್‌ಯುವಿ 3XO ತನ್ನ ಸೆಗ್ಮೆಂಟ್‌ನಲ್ಲಿ ಪನೋರಮಿಕ್ ಸನ್‌ರೂಫ್ ಅನ್ನು ಒದಗಿಸುವ ಏಕೈಕ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ, ಈ ಫೀಚರ್ ಅನ್ನು ದೊಡ್ಡದಾದ, ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಮಾತ್ರ ನೀಡಲಾಗುತ್ತಿತ್ತು. ಮಾರುತಿ ಬ್ರೆಝಾ ಸೇರಿದಂತೆ ಎಲ್ಲಾ ಇತರ ಪ್ರತಿಸ್ಪರ್ಧಿಗಳು ಒಂದೇ ಪೇನ್ ಸನ್‌ರೂಫ್ ಅನ್ನು ಮಾತ್ರ ಒದಗಿಸುತ್ತವೆ.
ADAS
ಎಕ್ಸ್‌ಯುವಿ 3XOವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ನೀಡುವ ಸೆಗ್ಮೆಂಟ್‌ನಲ್ಲಿ ಮೊದಲ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಅಲ್ಲ. ಆದರೆ ಎಸ್‌ಯುವಿಯ ಸುರಕ್ಷತಾ ಪ್ಯಾಕೇಜ್‌ಗೆ ಆಟೋನೋಮಸ್ ಎಮೆರ್ಜೆನ್ಸಿ ಬ್ರೇಕಿಂಗ್‌ನ ಮೇಲೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್-ಕೀಪ್ ಅಸಿಸ್ಟ್ ಅನ್ನು ಸೇರಿಸುವ ಇದು ಮೊದಲನೆಯ ಕಾರು ಇದಾಗಲಿದೆ. ಆದರೆ ಬ್ರೆಝಾ ಇಂತಹ ಯಾವುದೇ ಡ್ರೈವರ್ ಅಸಿಸ್ಟ್ ವೈಶಿಷ್ಟ್ಯಗಳನ್ನು ನೀಡುವುದಿಲ್ಲ.
ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು
ಬ್ರೆಝಾಗಿಂತ ಭಿನ್ನವಾಗಿ ಎಕ್ಸ್‌ಯುವಿ3XOನ ಸುರಕ್ಷತಾ ವೈಶಿಷ್ಟ್ಯದಲ್ಲಿ ಮತ್ತೊಂದು ಹೆಚ್ಚುವರಿ ಎಂದರೆ ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು. ಇವುಗಳು ದಟ್ಟಣೆಯ ಟ್ರಾಫಿಕ್ ಮತ್ತು ಕಿರಿದಾದ ಪಾರ್ಕಿಂಗ್ ಸ್ಥಳಗಳಲ್ಲಿ ಡ್ರೈವರ್‌ಗಳಿಗೆ ಹೆಚ್ಚಿನ ಅನುಕೂಲತೆಯನ್ನು ನೀಡುತ್ತವೆ. ಮಾರುತಿಯ ಎಸ್‌ಯುವಿಯು 360-ಡಿಗ್ರಿ ವ್ಯೂ ಕ್ಯಾಮೆರಾವನ್ನು ಪಡೆದಿದ್ದರೂ, ಇದಕ್ಕೆ ಪೂರಕ ಎಂಬಂತೆ ಹೆಚ್ಚುವರಿ ಸೆನ್ಸಾರ್‌ಗಳನ್ನು ಸಹ ಹೊಂದಿರಬೇಕಾಗುತ್ತದೆ.
ಡ್ಯುಯಲ್ ಝೋನ್ ಎಸಿ
ಮಾರುತಿ ಬ್ರೆಝಾಗಿಂತ ಹೆಚ್ಚುವರಿಯಾಗಿ ಎಕ್ಸ್‌ಯುವಿ 3XOವು ನೀಡುವ ಮತ್ತೊಂದು ಕ್ಯಾಬಿನ್ ಸೌಕರ್ಯವೆಂದರೆ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್, ಇದು ಮುಂಭಾಗದ ಪ್ರಯಾಣಿಕರಿಗೆ ವಿಭಿನ್ನ ತಾಪಮಾನವನ್ನು ಸೆಟ್ ಮಾಡುವ ಆಯ್ಕೆಯನ್ನು ನೀಡುತ್ತದೆ. ಈ ವೈಶಿಷ್ಟ್ಯವು ಎಕ್ಸ್‌ಯುವಿ300ನಲ್ಲಿ 2019ರಿಂದಲೇ ಇದೆ, ಆದರೆ ಮಾರುತಿ ಬ್ರೆಝಾದಲ್ಲಿ ಇನ್ನೂ ಪರಿಚಯಿಸಿಲ್ಲ. ಆದರೆ ಎರಡೂ ಮೊಡೆಲ್‌ಗಳು ಹಿಂದಿನ ಎಸಿ ವೆಂಟ್‌ಗಳನ್ನು ಪಡೆಯುತ್ತವೆ.
ದೊಡ್ಡದಾದ ಡಿಸ್‌ಪ್ಲೇಗಳು
ತಂತ್ರಜ್ಞಾನದ ವಿಷಯದಲ್ಲಿ, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಗಾಗಿ ಎಕ್ಸ್‌ಯುವಿ 3XOವು ಬ್ರೆಝಾಕ್ಕಿಂತ ದೊಡ್ಡದಾದ 10.25-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ, ಬ್ರೆಝಾವು ಕೇವಲ 9-ಇಂಚಿನ ಇನ್ಫೋಟೈನ್‌ಮೆಂಟ್ ಯುನಿಟ್ ಮತ್ತು ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಅನಲಾಗ್ ಡಯಲ್‌ಗಳನ್ನು ನೀಡುತ್ತದೆ.
ಹೆಚ್ಚಿನ ಪರ್ಫಾರ್ಮೆನ್ಸ್
ಮೊಡೆಲ್ |
ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ |
ಮಾರುತಿ ಬ್ರೇಝಾ |
|||
ಎಂಜಿನ್ |
1.2-ಲೀಟರ್ ಟರ್ಬೊ-ಪೆಟ್ರೋಲ್ |
1.2-ಲೀಟರ್ (ನೇರ ಇಂಜೆಕ್ಷನ್) ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
1.5-ಲೀಟರ್ ಪೆಟ್ರೋಲ್ ಎಂಜಿನ್ |
1.5-ಲೀಟರ್ ಪೆಟ್ರೋಲ್ ಎಂಜಿನ್ (ಸಿಎನ್‌ಜಿ) |
ಪವರ್ |
112 ಪಿಎಸ್ |
130 ಪಿಎಸ್ |
117 ಪಿಎಸ್ |
103 ಪಿಎಸ್ |
101 ಪಿಎಸ್ |
ಟಾರ್ಕ್ |
200 ಎನ್‌ಎಮ್ |
230 ಎನ್‌ಎಮ್ |
300 ಎನ್‌ಎಮ್ |
137 ಎನ್‌ಎಮ್ |
136 ಎನ್‌ಎಮ್ |
ಗೇರ್‌ಬಾಕ್ಸ್ |
6 ಮ್ಯಾನುಯಲ್, 6ಆಟೋಮ್ಯಾಟಿಕ್ |
6 ಮ್ಯಾನುಯಲ್, 6ಆಟೋಮ್ಯಾಟಿಕ್ |
6ಮ್ಯಾನುಯಲ್, 6ಎಎಮ್‌ಟಿ |
5ಮ್ಯಾನುಯಲ್, 6ಎಎಮ್‌ಟಿ |
5ಮ್ಯಾನುಯಲ್ |
ಎಕ್ಸ್‌ಯುವಿ 3XOವು ಎರಡು ಟರ್ಬೊ-ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ, ಆದರೆ ಬ್ರೆಝಾವು ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಕೇವಲ ಒಂದು ಪೆಟ್ರೋಲ್ ಎಂಜಿನ್ ಅನ್ನು ನೀಡುತ್ತದೆ. ಎಕ್ಸ್‌ಯುವಿ 3XOವು ಹೆಚ್ಚಿನ ಎಂಜಿನ್ ಆಯ್ಕೆಗಳನ್ನು ನೀಡುವುದಲ್ಲದೆ, ಅವುಗಳಲ್ಲಿ ಪ್ರತಿಯೊಂದಕ್ಕೂ ಹೆಚ್ಚಿನ ಪರ್ಫಾರ್ಮೆನ್ಸ್ ಅನ್ನು ಸಹ ಪ್ಯಾಕ್ ಮಾಡುತ್ತದೆ. ಮಹೀಂದ್ರಾ ಎಸ್‌ಯುವಿಯು ಸ್ಟ್ಯಾಂಡರ್ಡ್ ಪೆಟ್ರೋಲ್ ಆಯ್ಕೆಯಲ್ಲಿ ಮಾರುತಿಗಿಂತ ಹೆಚ್ಚುವರಿ 9 ಪಿಎಸ್ ಮತ್ತು 63 ಎನ್‌ಎಮ್ ಅನ್ನು ಉತ್ಪಾದಿಸುತ್ತದೆ. ಎರಡೂ ತಮ್ಮ ಪೆಟ್ರೋಲ್ ಎಂಜಿನ್‌ಗಳನ್ನು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್‌ನೊಂದಿಗೆ ನೀಡುತ್ತವೆ, ಆದರೆ ಬ್ರೆಝಾ ಮಾತ್ರ ಕಂಪೆನಿ-ಅಳವಡಿಕೆಯ ಸಿಎನ್‌ಜಿ ಇಂಧನ ಆಯ್ಕೆಯನ್ನು ಪಡೆಯುತ್ತದೆ.
ಇದನ್ನು ಸಹ ಓದಿ: Kia Sonetಗಿಂತ ಈ 5 ಪ್ರಮುಖ ಅನುಕೂಲಗಳನ್ನು ನೀಡುತ್ತಿರುವ Mahindra XUV 3XO
ಎಲ್ಲಾ ಡಿಸ್ಕ್ ಬ್ರೇಕ್‌ಗಳು
ಬ್ರ್ಯಾಂಡ್‌ನ ಎಂಟ್ರಿ-ಲೆವೆಲ್‌ನ ಎಸ್‌ಯುವಿಯ ಸುರಕ್ಷತೆಯ ಅಂಶವನ್ನು ಇನ್ನಷ್ಟು ಸುಧಾರಿಸಲು, ಮಹೀಂದ್ರಾವು ತನ್ನ ಎಕ್ಸ್‌ಯುವಿ 3ಎಕ್ಸ್‌ಒಗೆ ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಿದೆ. ಆದರೆ, ಮಾರುತಿ ಬ್ರೆಝಾವು ಮುಂಭಾಗದ ಚಕ್ರಗಳಿಗೆ ಮಾತ್ರ ಡಿಸ್ಕ್ ಬ್ರೇಕ್‌ಗಳನ್ನು ನೀಡುತ್ತದೆ, ಇದು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್
ಎಕ್ಸ್‌ಯುವಿ 3ಎಕ್ಸ್‌ಒವು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಸಹ ಹೊಂದಿದೆ, ಇದು ಒಂದು ಬಟನ್ ಅನ್ನು ಟಚ್ ಮಾಡುವ ಮೂಲಕ ಬ್ರೇಕ್‌ಗಳನ್ನು ಹಿಡಿಯುವ ಮತ್ತು ಬಿಡಿಸುವ ಮೂಲಕ ಚಾಲಕನಿಗೆ ಅನುಕೂಲವನ್ನು ಒದಗಿಸುವುದು ಮಾತ್ರವಲ್ಲದೆ, ಅದರ ಕ್ಯಾಬಿನ್‌ನ ಸೌಂದರ್ಯವನ್ನೂ ಸುಧಾರಿಸುತ್ತದೆ. ಮತ್ತೊಂದೆಡೆ, ಮಾರುತಿ ಬ್ರೆಝಾವು ಮೆಕ್ಯಾನಿಕಲ್ ಪಾರ್ಕಿಂಗ್ ಬ್ರೇಕ್ ಲಿವರ್ ಅನ್ನು ಹೊಂದಿದೆ, ಇದು ಎಲೆಕ್ಟ್ರಾನಿಕ್ ಬ್ರೇಕ್‌ಗಿಂತ ಹೆಚ್ಚಿನ ದೈಹಿಕ ಶ್ರಮವನ್ನು ಬಯಸುತ್ತದೆ ಮತ್ತು ಕ್ಯಾಬಿನ್‌ಗೆ ಸಾಂಪ್ರದಾಯಿಕ ನೋಟವನ್ನು ನೀಡುತ್ತದೆ.
ದೊಡ್ಡದಾದ ಅಲಾಯ್ ವೀಲ್‌ಗಳು
ಎಕ್ಸ್‌ಯುವಿ300 ನಿಂದ ಹೊರತಂದಿರುವ ಮಹೀಂದ್ರಾ ಎಕ್ಸ್‌ಯುವಿ 3XO ನ ಮತ್ತೊಂದು ವೈಶಿಷ್ಟ್ಯದ ಪ್ರಯೋಜನವೆಂದರೆ 17-ಇಂಚಿನ ಅಲಾಯ್ ವೀಲ್‌ಗಳು. ಆದರೆ, ಮಾರುತಿ ಬ್ರೆಝಾವು ಸಣ್ಣ 16-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ.
ಬೆಲೆಗಳು
ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ |
ಮಾರುತಿ ಬ್ರೇಝಾ |
7.49 ಲಕ್ಷ ರೂ.ನಿಂದ 15.49 ಲಕ್ಷ ರೂ. |
8.34 ಲಕ್ಷ ರೂ.ನಿಂದ 14.14 ಲಕ್ಷ ರೂ. |
ಮಾರುತಿ ಬ್ರೆಝಾವು ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒಗಿಂತ ಹೆಚ್ಚಿನ ಆರಂಭಿಕ ಬೆಲೆಯನ್ನು ಹೊಂದಿದೆ. ಆದಾಗಿಯೂ, ಟಾಪ್ ವೇರಿಯೆಂಟ್‌ನಲ್ಲಿ ಮಹೀಂದ್ರಾದ ಹೆಚ್ಚುವರಿ ವೈಶಿಷ್ಟ್ಯಗಳು ಮತ್ತು ಎಂಜಿನ್ ಆಯ್ಕೆಗಳು ಎಕ್ಸ್‌ಯುವಿ 3ಎಕ್ಸ್‌ಒವನ್ನು ಮಾರುತಿಯ ಎಸ್‌ಯುವಿಗಿಂತ ಹೆಚ್ಚು ದುಬಾರಿಯನ್ನಾಗಿಸುತ್ತದೆ. ಈ ಸಬ್-4ಮೀ ಎಸ್‌ಯುವಿಗಳಲ್ಲಿ ಯಾವುದನ್ನು ನೀವು ಆರಿಸುತ್ತೀರಿ? ಕೆಳಗೆ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.
ಇನ್ನಷ್ಟು ಓದಿ : ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಎಎಮ್‌ಟಿ