ಆಟೋ ಎಕ್ಸ್‌ಪೋ 2023 ರಲ್ಲಿ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದ 15 ಕಾರುಗಳು
ಜನವರಿ 18, 2023 02:06 pm ರಂದು sonny ಮೂಲಕ ಪ್ರಕಟಿಸಲಾಗಿದೆ
- 38 Views
- ಕಾಮೆಂಟ್ ಅನ್ನು ಬರೆಯಿರಿ
ಅನ್ವೇಷಿಸಲು ಸಾಕಷ್ಟು ಹೊಸ ಕಾರುಗಳು ಮತ್ತು ಕಾನ್ಸೆಪ್ಟ್‌ಗಳಿವೆ, ಮತ್ತು ಅವುಗಳಲ್ಲಿ ಹಲವನ್ನು ಮೊತ್ತಮೊದಲ ಬಾರಿಗೆ ನೋಡಲಾಗುತ್ತಿದೆ
ಕೊನೆಗೂ ಆಟೋ ಎಕ್ಸ್‌ಪೋ 2023 ಅನ್ನು ಸಾರ್ವಜನಿಕರಿಗೆ ತೆರೆದುಕೊಂಡಿದೆ. ಕಾರು ತಯಾರಕರು ತಾವು ತಯಾರಿಸುತ್ತಿರುವ ಎಲ್ಲಾ ಹೊಸ ಮಾಡೆಲ್‌ಗಳು ಮತ್ತು ಕಾನ್ಸೆಪ್ಟ್‌ಗಳನ್ನು ಬಹಿರಂಗಪಡಿಸಿದ್ದಾರೆ ಹಾಗೂ ಆ ಎಲ್ಲಾ ಆಕ್ಷನ್‌ಗಳು ಹಾಗೂ ಇನ್ನಷ್ಟನ್ನು ನಾವು ನಿಮಗೆ ನೀಡುತ್ತಿದ್ದೇವೆ. ಆದಾಗ್ಯೂ ಈ ವಾರಾಂತ್ಯದಲ್ಲಿ ನೀವು ಭಾರತದ ಅತಿದೊಡ್ಡ ಮೋಟಾರು ಪ್ರದರ್ಶನಕ್ಕೆ ಹಾಜರಾಗಲು ಯೋಜಿಸುತ್ತಿದ್ದರೆ, ಇವುಗಳು ನೀವು ನಿಜವಾಗಿಯೂ ಪರಿಶೀಲಿಸಲೇಬೇಕಾದ ಕಾರುಗಳಾಗಿವೆ:
ಮಾರುತಿ ಜಿಮ್ನಿ
ಈ ಮೋಟಾರು ಪ್ರದರ್ಶನದಲ್ಲಿನ ದೊಡ್ಡ ತಾರೆಗಳಲ್ಲಿ ಒಂದು ಫೈವ್-ಡೋರ್ ಮಾರುತಿ ಜಿಮ್ನಿ. ಜಾಗತಿಕ-ಜನಪ್ರಿಯ ಆಫ್-ರೋಡರ್‌ನ ವಿಸ್ತೃತ ಎಡಿಶನ್ ಆಟೋ ಎಕ್ಸ್‌ಪೋ 2023 ರಲ್ಲಿ ತನ್ನ ಮೊದಲ ವಿಶ್ವ ಪ್ರದರ್ಶನವನ್ನು ಕೈಗೊಂಡಿತು ಮತ್ತು ಮಾರ್ಚ್ 2023 ರ ವೇಳೆಗೆ ಶೋರೂಮ್‌ಗಳನ್ನು ತಲುಪುವ ನಿರೀಕ್ಷೆಯನ್ನು ಇದು ಹೊಂದಿದೆ. ಇದನ್ನು 4WD ಪ್ರಮಾಣಿತವಾಗಿ ಪರಿಚಯಿಸಲಾಗಿದ್ದು, ಫೈವ್-ಸ್ಪೀಡ್ ಮ್ಯಾನ್ಯುವಲ್ ಮತ್ತು ಫೋರ್-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳ ಆಯ್ಕೆಯೊಂದಿಗೆ ಮಾರುತಿಯ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಇದು ಹೊಂದಿದೆ.
ಇದೇವೇಳೆ, ಮಾರುತಿಯ ಮಳಿಗೆಯಲ್ಲಿ ಪ್ರದರ್ಶನಕ್ಕಿಡಲಾದ ಹೊಸ ಫೈವ್-ಡೋರ್ ಜಿಮ್ನಿಯ ಆ್ಯಕ್ಸೆಸರಿಯುಕ್ತ ಎಡಿಶನ್ ಪರಿಶೀಲಿಸಿ. ಮಾರುತಿ ಜಿಮ್ನಿಯ ಬುಕಿಂಗ್‌ಗಳು ಈಗಾಗಲೇ ನಡೆಯುತ್ತಿದ್ದು, ನೀವು ಇದನ್ನು ಖರೀದಿಸಲು ಯೋಜಿಸುತ್ತಿದ್ದರೆ ಹತ್ತಿರದಿಂದ ನೋಡಲು ಇದು ಅತ್ಯುತ್ತಮ ಸಮಯವಾಗಿದೆ.
ಮಾರುತಿ ಫ್ರಾಂಕ್ಸ್
ಜಿಮ್ನಿಯ ವಿಸ್ತೃತ ಎಡಿಶನ್ ಮಾರುತಿಯ ನವ ನಿರ್ಮಾಣವಾದ ಫ್ರಾಂಕ್ಸ್‌ನೊಂದಿಗೆ ಜನಪ್ರಿಯತೆಯನ್ನು ಹಂಚಿಕೊಂಡಿದೆ. ಇದು ಬಲೆನೋ ಹ್ಯಾಚ್‌ಬ್ಯಾಕ್ ಅನ್ನು ಆಧರಿಸಿದ್ದು ಅದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ, ಆದರೆ ಇದರ ವಿನ್ಯಾಸವು ಗ್ರ್ಯಾಂಡ್ ವಿಟಾರಾ ಕಾಂಪ್ಯಾಕ್ಟ್ ಎಸ್‌ಯುವಿಯಿಂದ ಸ್ಫೂರ್ತಿ ಪಡೆದಿದೆ. ಇದು 1-ಲೀಟರ್ ಬೂಸ್ಟರ್‌ಜೆಟ್ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ಮರಳಿ ತರಲು ಹೆಚ್ಚುವರಿ ಬ್ರೌನಿ ಪಾಯಿಂಟ್‌ಗಳನ್ನು ಹೊಂದಿದೆ, ಈಗ ಮೈಲ್ಡ್-ಹೈಬ್ರಿಡ್ ಟೆಕ್ ಮತ್ತು ಸಿಕ್ಸ್-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಯನ್ನು ಸಹ ಹೊಂದಿದೆ.
ಪ್ರಾಂಕ್ಸ್‌ನ ಆರ್ಡರ್ ಬುಕಿಂಗ್‌ಗಳು ತೆರೆದಿದೆ ಮತ್ತು ನೀವು ಖಚಿತವಾಗಿಯೂ ಹೊಸ ಮಾರುತಿ ನೆಕ್ಸಾ ಕೊಡುಗೆಯನ್ನು ಸನಿಹದಿಂದ ನೋಡಬೇಕು.
ಟಾಟಾ ಆಲ್ಟ್ರೋಸ್ ರೇಸರ್
ಟಾಟಾ ಆಲ್ಟ್ರೋಸ್‌ನ ಟರ್ಬೋ-ಪೆಟ್ರೋಲ್ ವೇರಿಯಂಟ್‌ಗಳಲ್ಲಿನ ವಿಭಿನ್ನತೆಯ ಕೊರತೆಯಿಂದ ನೀವು ನಿರಾಸೆಗೊಂಡಿದ್ದರೆ, ಆಲ್ಟ್ರೋಸ್ ರೇಸರ್ ನಿಮ್ಮನ್ನು ಸಂತಸಗೊಳಿಸಬಲ್ಲದು. ಇದು ಸ್ಪೋರ್ಟಿ-ಡೆಕಾಲ್‌ಗಳು ಮತ್ತು ಗೋ-ಫಾಸ್ಟರ್-ಸ್ಟ್ರೈಪ್ಸ್‌ನಿಂದ ಅಲಂಕೃತಗೊಂಡಿದ್ದು ನೆಕ್ಸಾನ್‌ನಿಂದ ಹೆಚ್ಚು ಶಕ್ತಿಶಾಲಿ 120PS 1.2-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ಪಡೆದಿದೆ. ಟಾಟಾ 10.25-ಇಂಚಿನ ಟಚ್‌ಸ್ಕ್ರೀನ್, ಕೆಂಪು ಆ್ಯಂಬಿಲಿಯೆಂಟ್ ಲೈಟಿಂಗ್ ಮತ್ತು ಸನ್‌ರೂಫ್‌ನೊಂದಿಗೆ ಅಪ್‌ಡೇಟ್ ಆದ ಕ್ಯಾಬಿನ್ ಅನ್ನು ಒಳಗೊಂಡ ಆಲ್ಟ್ರೋಸ್ ರೇಸರ್ ಅನ್ನು ಪ್ರದರ್ಶಿಸಿತು.
ಟೊಯೋಟಾ LC300
ಟೊಯೋಟಾ ಲ್ಯಾಂಡ್ ಕ್ರೂಸರ್‌ನ ಹೊಸ ಜನರೇಷನ್ 2021 ರಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಿತ್ತಾದರೂ ಆಟೋ ಎಕ್ಸ್‌ಪೋ 2023 ರಲ್ಲಿ ಖಾಸಗಿಯಾಗಿ ಕಾಣಿಸಿಕೊಂಡಿದೆ. ಟೊಯೋಟಾ ಸದ್ದಿಲ್ಲದೆ ಅದರ ಬೆಲೆಯನ್ನು ಘೋಷಿಸಿದೆ. ಆದರೆ ಈ ವಿರಾಟ್ ಸ್ವರೂಪದ ವಾಹನವು ರಸ್ತೆಯಲ್ಲಿ ಸಂಚರಿಸುವುದನ್ನು ನೋಡಲು ಸ್ವಲ್ಪ ಸಮಯ ಕಾಯಬೇಕಾಗಬಹುದು. ಆದರೆ ತಾತ್ಕಾಲಿಕವಾಗಿ, ಆಟೋ ಎಕ್ಸ್‌ಪೋದ ಟೊಯೋಟಾ ಮಳಿಗೆಯಲ್ಲಿ ನೀವು LC300 ಮತ್ತು ಪರಿಷ್ಕೃತ ವಿನ್ಯಾಸವನ್ನು ಸಮೀಪದಿಂದ ನೋಡಬಹುದು
ಸ್ಪೋರ್ಟ್ ಕಿಟ್‌ನೊಂದಿಗೆ ಟೊಯೋಟಾ ಗ್ಲಾಂಝಾ
ಟೊಯೋಟಾ ಸ್ಪೆಕ್ಟ್ರಮ್‌ನ ಇನ್ನೊಂದು ವಿಶೇಷತೆಯನ್ನು ನೋಡುವುದಾದರೆ, ನಾವು ಅತ್ಯಾಕರ್ಷಕ ಆ್ಯಕ್ಸೆಸರಿಗಳನ್ನು ಹೊಂದಿದ ಮತ್ತು ಪಪ್ಪಿ ಹಾಟ್ ಹ್ಯಾಚ್‌ನಂತೆ ಕಾಣುವ ಹಂಬಲ್ ಬಲೆನೋವನ್ನು ಹೊಂದಿದ್ದೇವೆ. ಬದಲಾವಣೆಗಳು ಸಂಪೂರ್ಣವಾಗಿ ಕಾಸ್ಮೆಟಿಕ್‌ಗಳಾಗಿವೆ ಎಂಬುದು ಆಶ್ಚರ್ಯಕರ ವಿಷಯವಲ್ಲ, ಆದರೆ ರಿಬ್ಯಾಡ್ಜ್ ಮಾಡಲಾದ ಮಾರುತಿ ಬಲೆನೋದಲ್ಲಿ ಬೊನೆಟ್ ಅಡಿಯಲ್ಲಿ ಅತಿಯಾದ ಶಾಖವನ್ನು ಹುದುಗಿಡುತ್ತದೆ ಎಂದು ನಿರೀಕ್ಷಿಸುವುದು ಅತಿಯಾದೀತು. ಹಾಗಿದ್ದರೂ ಕೂಡಾ, ಇದು ತನ್ನ ಅಭಿಮಾನಿಗಳಿಂದ ಕೆಲವು ಅತ್ಯದ್ಭುತ ಮಾರ್ಪಾಡುಗಳನ್ನು ಪ್ರೇರೇಪಿಸುತ್ತದೆ.
ಹ್ಯುಂಡೈ ಅಯೋನಿಕ್ 6
ಅಯೋನಿಕ್ 6 ಎಂಬುದು ಆಟೋ ಎಕ್ಸ್‌ಪೋ 2020 ರಲ್ಲಿ ಪ್ರದರ್ಶಿಸಲಾದ ಪ್ರೊಫೆಸಿ ಕಾನ್ಸೆಪ್ಟ್‌ನ ಉತ್ಪಾದನಾ ಪುನರಾವೃತ್ತಿಯಾಗಿದೆ. ಎಲೆಕ್ಟ್ರಿಕ್ ಸೆಡಾನ್ ಇ-ಜಿಎಂಪಿ ಪ್ಲ್ಯಾಟ್‌ಫಾರ್ಮ್ ಆಧಾರಿತ ಹ್ಯುಂಡೈನ ಅಯೋನಿಕ್ ಶ್ರೇಣಿಯಲ್ಲಿ ಎರಡನೇ ಮಾಡೆಲ್ ಆಗಿದೆ. ಇದನ್ನು ಅದರ ಸ್ಪೋರ್ಟಿ ಬ್ಲ್ಯಾಕ್-ಫಿನಿಶ್‌ನಲ್ಲಿ ಪ್ರದರ್ಶಿಸಲಾಗಿದೆ ಆದರೆ ರಿಯರ್-ವ್ಹೀಲ್-ಡ್ರೈವ್ ವೇರಿಯಂಟ್ 500km ರೇಂಜ್ ಅನ್ನು ಭರವಸೆ ನೀಡುತ್ತದೆ.
ಕಿಯಾ ಕಾರ್ನಿವಲ್
ಪ್ರಸ್ತುತ ಆವೃತ್ತಿಯನ್ನು ಪರಿಚಯಿಸಿದ ಅದೇ ಈವೆಂಟ್‌ನಲ್ಲಿ ಕಿಯಾ ಕಾರ್ನಿವಲ್‌ನ ಬಹು ನಿರೀಕ್ಷಿತ ಫೋರ್ಥ್-ಜನರೇಷನ್ ಭಾರತಕ್ಕೆ ಪಾದಾರ್ಪಣೆ ಮಾಡಿತು. ಇದು ಮೊದಲಿಗಿಂತ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ ಮತ್ತು ಇಂಟೀರಿಯರ್ ತುಂಬಾ ಅಗತ್ಯವಿರುವ ನವೀಕರಣಗಳನ್ನು ಒಳಗೊಂಡಿದೆ. ಆದಾಗ್ಯೂ, ಹೊಸ ಕಾರ್ನಿವಲ್ ಅನ್ನು ಭಾರತದಲ್ಲಿ ಪರಿಚಯಿಸುವ ಬಗ್ಗೆ ಕಿಯಾ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳದ ಕಾರಣ ಅದನ್ನು ನೋಡಲು ಇದು ಉತ್ತಮ ಅವಕಾಶವಾಗಿದೆ ಮತ್ತು ಭಾರತದಲ್ಲಿ ಬಿಡುಗಡೆಗೊಳಿಸುವಂತೆ ಕಾರು ತಯಾರಕರ ಮನವೊಲಿಸಬಹುದಾಗಿದೆ.
ಎಂಜಿ ಮಿಫಾ 9
ಎಂಪಿವಿ ವಿಷಯಗಳಲ್ಲಿಯೇ ಉಳಿಯುತ್ತಾ, ನೀವು ಮಿಫಾ 9 ಅನ್ನು ಪರಿಶೀಲಿಸಲು ಎಂಜಿ ಪೆವಿಲಿಯನ್ ಅಲ್ಲಿ ಅಡ್ಡಾಡಬಹುದು. ಮಿಫಾ 9 ಕಾರ್ನಿವಲ್‌ಗಿಂತಲೂ ದೊಡ್ಡದಾಗಿದೆ ಮಾತ್ರವಲ್ಲದೇ ಮತ್ತು ಪ್ರಪಂಚದ ಮೊದಲ ಪೂರ್ಣ ಗಾತ್ರದ ಎಲೆಕ್ಟ್ರಿಕ್ ಪೀಪಲ್ ಕ್ಯಾರಿಯರ್ ಎಂದು ಘೋಷಿಸಿದೆ. ಪ್ರದರ್ಶನದಲ್ಲಿರುವ ಯೂನಿಟ್ ಮಧ್ಯಮ ಸಾಲಿನಲ್ಲಿ ಬ್ಯುಸಿನೆಸ್ ಕ್ಲಾಸ್ ಶೈಲಿಯ ಆಸನಗಳೊಂದಿಗೆ ಕೋಣೆಯ ರೀತಿಯ ವಿನ್ಯಾಸವನ್ನು ಹೊಂದಿದೆ. ಇದು ಭಾರತಕ್ಕಾಗಿ ಮೌಲ್ಯಮಾಪನ ಮಾಡಲಾದ ಲಿಸ್ಟ್‌ನಲ್ಲಿದ್ದರೂ ಅದನ್ನು ಕಡಿತಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಅದು ಇಲ್ಲಿ ಇರುವಾಗಲೇ ಹೋಗಿ ಪರಿಶೀಲಿಸಿ.
ಲೆಕ್ಸಸ್ ಎಲ್‌ಎಂ
ಟೊಯೋಟಾದ ಐಷಾರಾಮಿ ಭಾಗವಾದ ಲೆಕ್ಸಸ್, ಅದರ ಆಟೋ ಎಕ್ಸ್‌ಪೋ ಮಳಿಗೆಯಲ್ಲಿ ಕೆಲವು ಅತ್ಯದ್ಭುತ ಕಾರುಗಳು ಮತ್ತು ಪರಿಕಲ್ಪನೆಯನ್ನು ಪ್ರದರ್ಶಿಸುತ್ತಿದೆ. ಅವುಗಳಲ್ಲಿ ಒಂದು ಐಷಾರಾಮಿ ಎಂಪಿವಿ, ಇದು ಕ್ಯಾಬಿನ್‌ನ ಮುಂಭಾಗ ಮತ್ತು ಹಿಂಭಾಗದ ನಡುವೆ ಗೌಪ್ಯತೆಯ ಪರದೆ, ವೈನ್ ಕೂಲರ್, ರಿಯರ್ ಸೀಟುಗಳಿಗೆ ಮಸಾಜ್ ಕಾರ್ಯಗಳು ಹೀಗೆ ಇನ್ನೂ ಅನೇಕ ಸೌಲಭ್ಯಗಳನ್ನು ಹೊಂದಿದೆ. ಇದನ್ನು ಲೆಕ್ಸಸ್ ಎಲ್ಎಂ ಎಂದು ಕರೆಯಲಾಗುತ್ತದೆ ಮತ್ತು ಈ ವರ್ಷದ ಕೊನೆಯಲ್ಲಿ ಇದನ್ನು ಭಾರತದಲ್ಲಿ ಕಾಣಬಹುದು.
ಬಿವೈಡಿ ಸೀಲ್
ಆಟೋ ಎಕ್ಸ್‌ಪೋ 2023 ರ ಅತ್ಯಂತ ಆಶ್ಚರ್ಯಕರ ಪ್ರಕಟಣೆಗಳಲ್ಲಿ ಒಂದು ಇವಿ-ಸ್ಪೆಷಲಿಸ್ಟ್ ಬಿವೈಡಿಯಾಗಿದೆ. ಇದು ತನ್ನ ಹೊಸ ರಚನೆಯಲ್ಲಿ ಒಂದಾದ ಸೀಲ್ ಇವಿ ಸೆಡಾನ್ ಅನ್ನು ಹೊಸ ವಿಶೇಷ ಎಡಿಶನ್ ಹಸಿರು-ಬಣ್ಣದ ಅಟ್ಟೋ 3 ಜೊತೆಗೆ ಪ್ರದರ್ಶಿಸಿತು. ಅದರ ಸ್ಪೋರ್ಟಿ ಮತ್ತು ಪ್ರೀಮಿಯಂ ವಿನ್ಯಾಸದೊಂದಿಗೆ, ಸೀಲ್ ಇವಿ 700km ರೇಂಜ್‌ನ ಭರವಸೆ ನೀಡುತ್ತದೆ ಮತ್ತು ಬಿವೈಡಿ ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಇದನ್ನು ಪ್ರಾರಂಭಿಸಲಿದೆ.
ಕಾನ್ಸೆಪ್ಟ್ ಕಾರ್‌ಗಳ ಕುರಿತಾಗಿ ಏನಿದೆ?
ಹ್ಯಾರಿಯರ್ ಇವಿ
ಟಾಟಾದ ಪೆವಿಲಿಯನ್ ಆಟೋ ಎಕ್ಸ್‌ಪೋ 2023 ರ ಪ್ರಮುಖ ಆಕರ್ಷಣೆಯಾಗಿದ್ದು ಇದು ನೋಡಲೇಬೇಕಾದಂತಹ ಅತ್ಯಂತ ರೋಮಾಂಚನಕಾರಿ ಕಾನ್ಸೆಪ್ಟ್ ಕಾರುಗಳನ್ನು ಹೊಂದಿದೆ. ಉತ್ಪಾದನೆಗೆ ಸನಿಹದಲ್ಲಿರುವ ಹ್ಯಾರಿಯರ್ ಇವಿಯೊಂದಿಗೆ ಪ್ರಾರಂಭಿಸೋಣ. ಇದು ಟಾಟಾ ಹ್ಯಾರಿಯರ್‌ನ ಎಲೆಕ್ಟ್ರಿಕ್ ಅವತಾರವಾಗಿದ್ದು ಶೀಘ್ರದಲ್ಲಿ ಬಿಡುಗಡೆಯಾಗಲಿರುವ ಡೀಸೈಲ್ ಎಸ್‌ಯುವಿಯ ಫೇಸ್‌ಲಿಸ್ಟ್‌ನಲ್ಲಿ ನೀಡಲಾಗುವ ವಿನ್ಯಾಸ ಬದಲಾವಣೆಗಳನ್ನು ಸಹ ಹೊಂದಿದೆ.
ಟಾಟಾದ ಪೆವಿಲಿಯನ್ ಆಟೋ ಎಕ್ಸ್‌ಪೋ 2023 ರ ಪ್ರಮುಖ ಆಕರ್ಷಣೆಯಾಗಿದ್ದು ಇದು ನೋಡಲೇಬೇಕಾದಂತಹ ಅತ್ಯಂತ ರೋಮಾಂಚನಕಾರಿ ಕಾನ್ಸೆಪ್ಟ್ ಕಾರುಗಳನ್ನು ಹೊಂದಿದೆ.
ಸಿಯೆರಾ ಇವಿ
ಮುಂದಿನ ಮತ್ತು ಬಹುಶಃ ಹೆಚ್ಚು ರೋಮಾಂಚನಕಾರಿಯಾದ ಹೊಸ ಕಾನ್ಸೆಪ್ಟ್ ಎಂದರೆ ಅದು ಟಾಟಾ ಸಿಯೆರಾ ಇವಿ. ಆಟೋ ಎಕ್ಸ್‌ಪೋ 2020 ರಲ್ಲಿ ಇದು ಹೆಚ್ಚು ಜನಪ್ರಿಯವಾಗಿತ್ತು, ಟಾಟಾ ಬೇರೆಯದನ್ನು ಮಾಡಬಯಸಿತ್ತು, ಇದು ಉತ್ಪಾದನಾ ಮಾಡೆಲ್ ಅನ್ನು ಮಾಡಲು ಹೊರಟಿರುವ ವಿನ್ಯಾಸವಾಗಿದೆ. 2025 ರಲ್ಲಿ ಬಿಡುಗಡೆಯ ನಿರೀಕ್ಷೆಯೊಂದಿಗೆ, ಸಿಯೆರಾ ಆಟೋ ಎಕ್ಸ್‌ಪೋ 2023 ರಲ್ಲಿ ಅತ್ಯಂತ ರೋಮಾಂಚನಕಾರಿ ಹೊಸ ಎಸ್‌ಯುವಿ ಕಾನ್ಸೆಪ್ಟ್‌ನಲ್ಲಿ ಒಂದಾಗಿದೆ.
ಕರ್ವ್ ಐಸಿಇ ಕಾನ್ಸೆಪ್ಟ್
ಅಲ್ಲ, 2022 ರ ಮೊದಲಾರ್ಧದಲ್ಲಿ ಟಾಟಾ ಅನಾವರಣಗೊಳಿಸಿದ ಕಾರು ಇದಲ್ಲ. ಅದು ಕಾನ್ಸೆಪ್ಟ್ ಕರ್ವ್ ಎಲೆಕ್ಟ್ರಿಕ್ ಕ್ಯೂಪ್ ಎಸ್‌ಯುವಿ. ಇದು ಪೆಟ್ರೋಲ್ ಚಾಲಿತವಾಗಿದ್ದು, ಫ್ರಂಟ್ ಮತ್ತು ರಿಯರ್ ಪ್ರೊಫೈಲ್‌ಗೆ ಪವರ್-ಟ್ರೇನ್ ಸಂಬಂಧಿತ ಡಿಸೈನ್ ಟ್ವೀಕ್‌ಗಳೊಂದಿಗೆ ಸ್ಪೋರ್ಟಿ ಕೆಂಪು ಅವತಾರದಲ್ಲಿ ಅನಾವರಣಗೊಂಡಿದೆ. ಹೊಸದಾಗಿ ಬಿಡುಗಡೆಗೊಳಿಸಿದ 125PS 1.2-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್‌ನೊಂದಿಗೆ ಇದು 2024 ಬಿಡುಗಡೆಯಾಗುವ ನಿರೀಕ್ಷೆಯಿದೆ. ಸಿಯೆರಾದಂತೆಯೇ ಕರ್ವ್‌ನ ವಿನ್ಯಾಸವು ಪ್ರೊಡಕ್ಷನ್-ಸ್ಪೆಕ್ ಮಾಡೆಲ್‌ಗೆ ಸಾಕಷ್ಟು ಹತ್ತಿರದಲ್ಲಿದೆ.
ಲೆಕ್ಸಸ್ ಕಾನ್ಸೆಪ್ಟ್
ಮೇಲೆ ಹೇಳಿರುವಂತೆಯೇ, ಈ ವರ್ಷದ ಭಾರತೀಯ ಮೋಟಾರು ಪ್ರದರ್ಶನದಲ್ಲಿ ಲೆಕ್ಸಸ್ ಕೆಲವು ಅತ್ಯದ್ಭುತ ಕಾರುಗಳನ್ನು ಪ್ರದರ್ಶಿಸಿದೆ. ಅದು ಕೆಲವು ಕಾನ್ಸೆಪ್ಟ್‌ಗಳನ್ನು ಸಹ ಒಳಗೊಂಡಿದೆ ಮತ್ತು ಇದು LF-30 ಎಂದು ನಾವು ಭಾವಿಸುತ್ತೇವೆ. ರಿಯರ್ ಎಂಡ್‌ನಿಂದ ಸ್ಪೇಸ್‌ಶಿಪ್‌ವರೆಗಿನ ವ್ಹೀಲ್-ಬೇಸ್‌ನಷ್ಟು ಉದ್ದದ ಬಾಗಿಲುಗಳೊಂದಿಗೆ ಇದು ಆಟೋ ಎಕ್ಸ್‌ಪೋ 2023 ರಲ್ಲಿ ಜಪಾನೀಸ್ ಶೈಲಿಯ, ಯಾವುದೇ ನಿರ್ಬಂಧವಿಲ್ಲದ ಕಾನ್ಸೆಪ್ಟ್ ವಾಹನವಾಗಿದೆ.
ಹಿಲಕ್ಸ್ ಎಕ್ಸ್‌ಟ್ರೀಮ್ ಆಫ್-ರೋಡ್ ಕಾನ್ಸೆಪ್ಟ್
ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಿಫೈಡ್ ಸೃಷ್ಟಿಯ ಬೃಹತ್ ಸಾಗರದಲ್ಲಿ, ಇನ್ನೂ ಮೌನವಹಿಸಲು ಸಾಧ್ಯವಿಲ್ಲದೇ ಇರುವಂತಹುದು ಒಂದಿದೆ. ನೀವು ಶಬ್ದ ಮಾಡುವ ಮತ್ತು ಹೊಗೆ ಉಗುಳುವ ವಿಷಯದಲ್ಲಿ ಆಸಕ್ತಿ ಹೊಂದಿದ್ದರೆ, ಹಿಲಕ್ಸ್ ಎಕ್ಸ್‌ಟ್ರೀಮ್ ಆಫ್-ರೋಡರ್ ಕಾನ್ಸೆಪ್ಟ್‌ಗಾಗಿ ಟೊಯೋಟಾ ಮಳಿಗೆಯನ್ನು ಪರಿಶೀಲಿಸಲು ಮರೆಯದಿರಿ. ಪ್ರತಿಕೂಲ ಭೂಪ್ರದೇಶವನ್ನು ನಿಭಾಯಿಸಲು ಸೂಕ್ತವಾದ ಹಲವಾರು ಮಾರ್ಪಾಡುಗಳನ್ನು ಅಳವಡಿಸಲಾದ ಈ ದೈತ್ಯ ವಾಹನವನ್ನು ಖಂಡಿತವಾಗಿಯೂ ನೀವು ಕಣ್ಣಾರೆ ನೋಡಬಹುದಾಗಿದೆ.
ಆಟೋ ಎಕ್ಸ್‌ಪೋ 2023 ರ ಎಲ್ಲಾ ಆಕ್ಷನ್‌ಗಳನ್ನು ನೀವು ಇಲ್ಲಿಯೇ ಕಾಣಬಹುದು.