Login or Register ಅತ್ಯುತ್ತಮ CarDekho experience ಗೆ
Login

2017 ಹುಂಡೈ ವೆರ್ನಾ : ವೇರಿಯೆಂಟ್ ಗಳ ವಿವರಣೆ

published on ಆಗಸ್ಟ್‌ 03, 2019 11:02 am by raunak for ಹುಂಡೈ ವೆರ್ನಾ 2017-2020

ಹುಂಡೈ ವೆರ್ನಾ ತನ್ನ ಅಳತೆಗೋಲನ್ನು ಹೆಚ್ಚಿಸಿದೆ ತನ್ನ ಹೊರ ಹೋಗುತ್ತಿರುವ ಆವೃತ್ತಿಯನ್ನು ಮದ್ಯ ಅಳತೆಯ ಸೆಡಾನ್ ಆವರಣದಲ್ಲಿ ಬಿಡುಗಡೆ ಮಾಡಿದಾಗ ಇದ್ದಂತಹ ಫೀಚರ್ ಗಳನ್ನು ಮೀರಿಸಿದೆ !

ನವೀಕರಿಸಿ: ಹ್ಯುಂಡೈ ವೆರ್ನಾ 1.4-ಲೀಟರ್ ಪೆಟ್ರೋಲ್ ಅನ್ನು 7.79 ಲಕ್ಷ ರೂ.ಗೆ ಬಿಡುಗಡೆ ಮಾಡಿದೆ (ಲೇಖನ ಬೆಲೆಗಳೊಂದಿಗೆ ನವೀಕರಿಸಲಾಗಿದೆ)

ಕೊಡಲಾಗುತ್ತಿರುವ ಫೀಚರ್ ಗಳನ್ನು ಗಮನಿಸಿದಾಗ, ಹುಂಡೈ ನವರು ತನ್ನ ಹಿಂದಿನ ಮಾಡೆಲ್ ನ ಪ್ಯಾಕೇಜುಗಳನ್ನು ಸರಿಪಡಿಸಿದೆ ಎಂದು ಅವಶ್ಯಕವಾಗಿ ಹೇಳಬಹುದು. ಮತ್ತು ಇನ್ನು ಮುಂದುವರೆದು ಅದು ತನ್ನ ಹೋಂಡಾ ಸಿಟಿ ಒಂದಿಗಿನ ಸ್ಪರ್ಧೆಯನ್ನು ಗೆಲ್ಲಲು ಹೆಚ್ಚಿನ ಪರಿಶ್ರಮ ಮಾಡಲಾಗಿದೆ ಎನ್ನಬಹುದು. ನಾವು ವೇರಿಯೆಂಟ್ ವಿವರಣೆ ವಿಭಾಗದಲ್ಲಿ ಹುಂಡೈ ವೆರ್ನಾ ದಲ್ಲಿ ಹೆಚ್ಚಾಗಿ ಏನನ್ನು ಕೊಡಲಾಗಿದೆ ಎಂದು ಪರಿಶೀಲಿಸೋಣ.

ಹುಂಡೈ ವೆರ್ನಾ ಆಗಸ್ಟ್ 22, 2017 (ಬುಕಿಂಗ್ ಓಪನ್ ಆಗುತ್ತೆ )ಹೊಸ ಇನ್ನಿಂಗ್ಸ್ ಅನ್ನು ಪ್ರಾರಂಭ ಮಾಡಲು ತಯಾರಿದೆ, ಅದರ ಹೊಸ ಐದನೇ ಜನರೇಶನ್ ಆವೃತ್ತಿಯೊಂದಿಗೆ. ಸೌತ್ ಕೊರಿಯಾ ದ ಆಟೋಮೇಕರ್ ತನ್ನ ಮುಂಬರುವ ಮಾಡೆಲ್ ನಲ್ಲೂ ಸಹ ಅದೇ ಫಾರ್ಮುಲಾ ವನ್ನು ಉಪಯೋಗಿಸಿದೆ ಎನ್ನಬಹುದು, ತನ್ನ ಮೊದಲ ಜನರೇಶನ್ ಫೀಚರ್ ಗಳು ಮತ್ತು ಕೋಪೆ ತರಹದ ವಿನ್ಯಾಸದೊಂದಿಗೆ.

ಸ್ಟ್ಯಾಂಡರ್ಡ್ ಆಗಿರುವ ಸುರಕ್ಷತೆ ಫೀಚರ್ ಗಳು

  • ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು ಮತ್ತು ABS (ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ )
  • ಮುಂಬದಿಯ ಸೀಟ್ ಬೆಲ್ಟ್ ಪ್ರಿ ಟೆನ್ಸಿನ್ರ್ ಜೊತೆಗೆ.
  • ISOFIX ಚೈಲ್ಡ್ ಸೀಟ್ ಮೌಂಟ್ ಗಳು

  • ಡ್ರೈವರ್ ಸೀಟ್ ಬೆಲ್ಟ್ ರಿಮೈಂಡರ್

ಬಣ್ಣಗಳ ಆಯ್ಕೆ ಗಳು

  • ಹೊಸತು
  • ಪೋಲಾರ್ ವೈಟ್
  • ಫಿರಿ ರೆಡ್
  • ಸಿಎನಾ ಬ್ರೌನ್
  • ಫ್ಲೇಮ್ ಆರೆಂಜ್

ಈಗಾಗಲೇ ಇರುವಂತಹವು

  • ಸ್ಟಾರ್ಡಸ್ಟ್
  • ಸ್ಲೀಕ್ ಸಿಲ್ವರ್
  • ಫ್ಯಾಂಟಮ್ ಬ್ಲಾಕ್

ಎಂಜಿನ್ ಗಳು

ಪೆಟ್ರೋಲ್

  • 1.6L ಡುಯಲ್ VTVT: 123PS/155Nm (6- ಸ್ಪೀಡ್ MT/ 6-ಸ್ಪೀಡ್ AT)
  • 1.4L ಡುಯಲ್ VTVT: 100PS/132Nm (6-ಸ್ಪೀಡ್ MT)

ಡೀಸೆಲ್

  • 1.6L: 128PS/260Nm (6-ಸ್ಪೀಡ್ MT/ 6-ಸ್ಪೀಡ್ AT)

ಹುಂಡೈ ವೆರ್ನಾ E - ಸ್ಪರ್ಧಾತ್ಮಕವಾಗಿ ಬೆಲೆ ಪಟ್ಟಿ ಇರುವ ಬೇಸ್ ವೇರಿಯೆಂಟ್

ಹೈಲೈಟ್ ಗಳು

  • ಬೇಸ್ ವೇರಿಯೆಂಟ್
  • ಎಂಜಿನ್ ಆಯ್ಕೆ: ಎರೆಡು ಪೆಟ್ರೋಲ್ (1.4-ಲೀಟರ್ ) ಮತ್ತು ಡೀಸೆಲ್ ಎಂಜಿನ್ ಅನ್ನು ಕೊಡಲಾಗಿದೆ.
  • ಟ್ರಾನ್ಸ್ಮಿಷನ್ ಆಯ್ಕೆ: 6-ಸ್ಪೀಡ್ ಮಾನ್ಯುಯಲ್

ಬೆಲೆ (ಎಕ್ಸ್ ಶೋ ರೂಮ್ , ಹೊಸ ದೆಹಲಿ): Rs 7.79 ಲಕ್ಷ (ಪೆಟ್ರೋಲ್ ಮಾನ್ಯುಯಲ್) || Rs 9.42 ಲಕ್ಷ ( ಡೀಸೆಲ್ ಮಾನ್ಯುಯಲ್ )

ಏನೇನು ಕೊಡುಗೆಗಳು ಇವೆ?

  • ಇದರಲ್ಲಿ ಹ್ಯಾಲೊಜೆನ್ ಹೆಡ್ ಲ್ಯಾಂಪ್ ಗಳು ಮತ್ತು ಇಂಕಾಡೆಸೆಂಟ್ ಟೈಲ್ ಲ್ಯಾಂಪ್ ಗಳು
  • 185/65 ಕ್ರಾಸ್ ಸೆಕ್ಷನ್ 15- ಇಂಚು ಸ್ಟೀಲ್ ಜೊತೆಗೆ ಫುಲ್ ವೀಲ್ ಕ್ಯಾಪ್
  • ಡುಯಲ್ ಟೋನ್ ಇಂಟೀರಿಯರ್ ಜೊತೆಗೆ ಬ್ಲೂ ಹಿಂಬದಿಯ ಇಲ್ಲ್ಯೂಮಿನಾಶನ್ ಒಂದಿಗೆ
  • ಸೆಂಟ್ರಲ್ ಲೊಕ್ಕಿನ್ಗ್
  • ಫ್ಯಾಬ್ರಿಕ್ ಸೀಟ್ ಹೊರ ಪದರಗಳು
  • ಮಾನ್ಯುಯಲ್ ಏರ್ ಕಂಡೀಶನ್, ಪವರ್ ಸ್ಟಿಯರಿಂಗ್ (ಟಿಲ್ಟ್ ಅಳವಡಿಕೆಯೊಂದಿಗೆ) ಮತ್ತು ವಿದ್ಯುತ್ ಅಳವಡಿಕೆಯ ವಿಂಡೋ ಗಳು (ಡ್ರೈವರ್ ಆಟೋ ಡೌನ್ ಜೊತೆಗೆ), ಆಡಿಯೋ ಸಿಸ್ಟಮ್ ಇಲ್ಲ, ಅಥವಾ ಸ್ಪೀಕರ್ ಗಳನ್ನೂ ಸಹ ಕೊಡಲಾಗಿಲ್ಲ.
  • ತಂಪಾದ ಗ್ಲೋವ್ ಬಾಕ್ಸ್
  • ವಿದ್ಯುತ್ ಅಳವಡಿಕೆಯ ಹೊರಗಡೆಯ ರೇರ್ ವ್ಯೂ ಮಿರರ್.

ಇದು ಕೊಳ್ಳಲು ಮೌಲ್ಯಯುಕ್ತವಾಗಿದೆಯೇ?

ಬೇಸ್ ವೇರಿಯೆಂಟ್ E ನಲ್ಲಿ ಸ್ಪರ್ಧಾತ್ಮಕವಾದ ಬೆಲೆ ಪಟ್ಟಿ ನಿಗದಿಸಲಾಗಿದೆ. ಇದರಲ್ಲಿ ಮಿಸ್ ಆಗಿರುವ ಫೀಚರ್ ಎಂದರೆ ಅದು ಮ್ಯೂಸಿಕ್ ಸಿಸ್ಟಮ್. ನೀವು ಒಂದನ್ನು ಹೊರಗಡೆ ಮಾರ್ಕೆಟ್ ಇಂದ ಸುಲಭವಾಗಿ ಕೊಳ್ಳಬಹುದಾಗಿರುವುದರಿಂದ, ಅದನ್ನು ಕೊಡಲಾಗಿಲ್ಲದಿರಿವುದು ಅಷ್ಟೇನೂ ಪ್ರಭಾವ ಬೀರುವುದಿಲ್ಲ. ಹಾಗಾಗಿ , ನಿಮಗೆ ಬಜೆಟ್ ನಿಗದಿತವಾಗಿದ್ದರೆ ಮತ್ತು ನಿಮಗೆ E ಇಂದ ಮುಂದುವರೆದು EX ಗೆ ಹೋಗುವ ಚಿಂತನೆ ಇಲ್ಲದಿದ್ದರೆ, ವೆರ್ನಾ E ನಿಮಗೆ ಒಂದು ಬಜೆಟ್ ಗೆ ಅನುಗುಣವಾಗಿರುವ ಮತ್ತು ಮೌಲ್ಯಯುಕ್ತ ಆಯ್ಕೆಯಾಗಿರುತ್ತದೆ.

ಹುಂಡೈ ವೆರ್ನಾ EX -ಡೀಸೆಲ್ ಮತ್ತು ಆಟೋಮ್ಯಾಟಿಕ್ ವೇರಿಯೆಂಟ್ ಗಳು

ಹೈಲೈಟ್

  • ಮಿಡ್ ಟ್ರಿಮ್
  • ಎಂಜಿನ್ ಆಯ್ಕೆ ಗಳು:ಎರೆಡು ಪೆಟ್ರೋಲ್ (1.4- ಲೀಟರ್ ಮತ್ತು 1.6-ಲೀಟರ್ ) ಮತ್ತು ಡೀಸೆಲ್ ಎಂಜಿನ್ ಗಳ ಕೊಡುಗೆ
  • ಟ್ರಾನ್ಸ್ಮಿಷನ್ ಆಯ್ಕೆ: 6-ಸ್ಪೀಡ್ ಮಾನ್ಯುಯಲ್ (1.4-ಲೀಟರ್ ಪೆಟ್ರೋಲ್ ಮತ್ತು 1.6- ಲೀಟರ್ ಡೀಸೆಲ್ ) ಅಥವಾ 6- ಸ್ಪೀಡ್ ಆಟೋಮ್ಯಾಟಿಕ್ (1.6- ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ )

ಬೆಲೆ (ಎಕ್ಸ್ ಶೋ ರೂಮ್, ಹೊಸ ದೆಹಲಿ): Rs 9.09 ಲಕ್ಷ (1.4- ಲೀಟರ್ ಪೆಟ್ರೋಲ್ ಮಾನ್ಯುಯಲ್ ); Rs 10.48 ಲಕ್ಷ (1.6-ಲೀಟರ್ ಪೆಟ್ರೋಲ್ ಆಟೋಮ್ಯಾಟಿಕ್ ) || Rs 10.24 ಲಕ್ಷ ( ಡೀಸೆಲ್ ಮಾನ್ಯುಯಲ್ ); Rs 11.67 ಲಕ್ಷ ( ಡೀಸೆಲ್ ಆಟೋಮ್ಯಾಟಿಕ್ )

ಏನೇನು ಕೊಡುಗೆಗಳಿವೆ?

ಬೇಸ್ E ನಲ್ಲಿರುವ ಫೀಚರ್ ಗಳೊಂದಿಗೆ ಹೆಚ್ಚಿನದಾಗಿ

  • ಕ್ರೋಮ್ ಇರುವ ಫ್ರಂಟ್ ಗ್ರಿಲ್ ಮತ್ತು ವಿಂಡೋ ಬೆಲ್ಟ್ ಲೈನ್
  • ಪ್ರೊಜೆಕ್ಟರ್ ಫಾಗ್ ಲ್ಯಾಂಪ್ ಗಳು ಹುಂಡೈ ಎಲಾನ್ಟ್ರಾ ನಲ್ಲಿರುವಂತೆ

  • ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಗಳು ಜೊತೆಗೆ ಫಾಲೋ ಮೀ ಹೋಂ ಕಾರ್ಯದೊಂದಿಗೆ
  • ರೇರ್ ಡಿಫಾಗರ್ ಜೊತೆಗೆ ಟೈಮರ್
  • 185/65 ಕ್ರಾಸ್ ಸೆಕ್ಷನ್ 15- ಇಂಚು ಅಲಾಯ್ ವೀಲ್ ಗಳು ಆಟೋಮ್ಯಾಟಿಕ್ ಟ್ರಿಮ್ ನೊಂದಿಗೆ
  • ಶಾರ್ಕ್ ಫ಼ಿನ್ ಆಂಟೆನಾ
  • ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ ಮತ್ತು ಇಂಪ್ಯಾಕ್ಟ್ ಸೆನ್ಸಿಂಗ್ ಅನ್ಲಾಕ್ ಕೊಡಲಾಗಿದೆ
  • ಎತ್ತರ ಸರಿಹೊಂದಿಸಬಹುದಾದ ಡ್ರೈವರ್ ಸೀಟ್
  • ಸ್ಲೀಡ್ ಅಳವಡಿಕೆಯ ಸೆಂಟ್ರಲ್ ಆರ್ಮ್ ರೆಸ್ಟ್
  • ಆಟೋ ಅಪ್ ಮತ್ತು ಡೌನ್ ಡ್ರೈವರ್ ವಿಂಡೋ ಕಡೆ
  • ಕ್ರೂಸ್ ಕಂಟ್ರೋಲ್
  • 5.0- ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ರೇರ್ ಪಾರ್ಕಿಂಗ್ ಕ್ಯಾಮೆರಾ
  • ರೇರ್ ಪಾರ್ಕಿಂಗ್ ಸೆನ್ಸಾರ್ ಗಳು
  • ನಾಲ್ಕು ಸ್ಪೀಕರ್ ಗಳು ಜೊತೆಗೆ ಅರ್ಕಾಯ್ಮ್ ನ ಸೌಂಡ್ ಟ್ಯೂನಿಂಗ್
  • ಆಟೋ ಕ್ಲೈಮೇಟ್ ಕಂಟ್ರೋಲ್ ಗಳು ಜೊತೆಗೆ ಐಯೋನಿಜ್ರ್ ಮತ್ತು ರೇರ್ AC ವೆಂಟ್ ಗಳು
  • ಮುಂಬದಿ ಹಾಗು ಹಿಂಬದಿಯಲ್ಲಿನ USB ಚಾರ್ಜಿನ್ಗ್

ಇದು ಕೊಳ್ಳಲು ಮೌಲ್ಯಯುಕ್ತವಾಗಿದೆಯೇ?

ವೆರ್ನಾ ದ E ವೇರಿಯೆಂಟ್ ನಿಂದ EX ವೇರಿಯೆಂಟ್ ಗೆ ಹೋಗುವುದರಿಂದ ನಿಮಗೆ Rs 80,000 ನಿಂದ Rs 1.3 ಲಕ್ಷ ವರೆಗೂ ಹೆಚ್ಚಾಗಬಹುದು. ಆದರೆ ಬೇಸ್ ವೇರಿಯೆಂಟ್ ಗೆ ಹೋಲಿಸಿದಾಗ ಇದರಲ್ಲಿ ಹೆಚ್ಚಾಗಿ ಸಿಗುವ ಫೀಚರ್ ಗಳು ಆಧುನಿಕ ಕಾರ್ ಗೆ ತಕ್ಕುದಾಗಿದೆ. ನೀವು ಡೀಸೆಲ್ ಮಾನ್ಯುಯಲ್ ಅಥವಾ ಆಟೋಮ್ಯಾಟಿಕ್ ವೆರ್ನಾ ಕೊಳ್ಳುವುದಕ್ಕೆ ನಿರ್ಧರಿಸಿದ್ದರೆ, ಅದು ಮೌಲ್ಯ ಯುಕ್ತವಾದ ಆಯ್ಕೆ ಆಗಿರುತ್ತದೆ. ಆದರೆ, ಅದು ನೀವು ಈಗಾಗಲೇ ಪೆಟ್ರೋಲ್ ಮಾನ್ಯುಯಲ್ ವೆರ್ನಾ ವನ್ನು ಕೊಳ್ಳುವುದಕ್ಕೆ ಈಗಾಗಲೇ ನಿರ್ಧರಿಸಿದ್ದರೆ ಒಪಿಗೆಯಾಗಲಾರದು. ಅವಿಚಾರದಲ್ಲಿ ಇದಕ್ಕಿಂತ ಮೇಲಿನದನ್ನು ನೋಡಿ.

ಹುಂಡೈ ವೆರ್ನಾ SX -ಪೆಟ್ರೋಲ್ ಮಾನ್ಯುಯಲ್ ವೇರಿಯೆಂಟ್ ಕೊಳ್ಳಬಹುದೇ

ಹೈಲೈಟ್

  • ಎಂಜಿನ್ ಆಯ್ಕೆ: ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಎರೆಡು ಸಿಗುತ್ತದೆ
  • ಟ್ರಾನ್ಸ್ಮಿಷನ್ ಆಯ್ಕೆ: 6- ಸ್ಪೀಡ್ ಮಾನ್ಯುಯಲ್ (1.6- ಲೀಟರ್ ಪೆಟ್ರೋಲ್ ) ಮತ್ತು 6- ಸ್ಪೀಡ್ ಮಾನ್ಯುಯಲ್/ಆಟೋಮ್ಯಾಟಿಕ್ ( ಡೀಸೆಲ್)

ಬೆಲೆ (ಎಕ್ಸ್ ಶೋ ರೂಮ್, ಹೊಸ ದೆಹಲಿ):Rs 9.68 lakh (1.6-ಲೀಟರ್ ಪೆಟ್ರೋಲ್ ಮಾನ್ಯುಯಲ್) || Rs 11.37 ಲಕ್ಷ ( ಡೀಸೆಲ್ ಮಾನ್ಯುಯಲ್ ), Rs 12.87 ಲಕ್ಷ (ಡೀಸೆಲ್ ಆಟೋಮ್ಯಾಟಿಕ್) (SX+)

ಏನೇನು ಕೊಡುಗೆಗಳಿವೆ?

ಮಿಡ್ EX ಟ್ರಿಮ್ ಗಿಂತಲೂ ಹೆಚ್ಚಾಗಿ ದೊರೆಯುವ ಫೀಚರ್ ಗಳು

  • ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಜೊತೆಗೆ ಕಾರ್ನೆರಿಂಗ್ ಲ್ಯಾಂಪ್ ಗಳು, ಮತ್ತು LED ಡೇ ಟೈಮ್ ರನ್ನಿಂಗ್ ಲೈಟ್ಸ್
  • LED ಟೈಲ್ ಲ್ಯಾಂಪ್

  • ಎತ್ತರ ಸರಿಹೊಂದಿಸಬಹುದಾದ ಶೇರ್ ಬೆಲ್ಟ್ ಗಳು
  • 195/55 16- ಇಂಚು ಡೈಮಂಡ್ ಕಟ್ ಅಲಾಯ್ ವೀಲ್ ಗಳು

  • ಲೆಥರ್ ಸುತ್ತುಗಳು ಉಳ್ಳ ಸ್ಟಿಯರಿಂಗ್ ವೀಲ್ ಮತ್ತು ಗೇರ್ ಶಿಫ್ಟ್ ಕ್ನೋಬ್
  • ಇಲೆಕ್ಟ್ರಾನಿಕ್ ಮಡಚಬಹುದಾದ ಹೊರಗಡೆಯ ರೇರ್ ವ್ಯೂ ಮಿರರ್ ಗಳು
  • 7.0-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (IPS ಡಿಸ್ಪ್ಲೇ ಅಗಲವಾದ ಕೋನಗಳನೋಟಕ್ಕಾಗಿ) ಜೊತೆಗೆ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಮಿರರ್ ಲಿಂಕ್ ಕನೆಕ್ಟಿವಿಟಿ.

  • 6-ಸ್ಪೀಕರ್ ಸಿಸ್ಟಮ್ (4 ಡೋರ್ ಸ್ಪೀಕರ್ ಮತ್ತು 2 ಮುಂಬದಿಯ ಟ್ವಿಟರ್ ಗಳು ) ಜೊತೆಗೆ ಅರ್ಕಮ್ ಸೌಂಡ್ ಟ್ಯೂನಿಂಗ್
  • ಹುಂಡೈ iಬ್ಲೂ ಸ್ಮಾರ್ಟ್ ಫೋನ್ ಆಪ್ ಬೇಸ್ ಇರುವ ರಿಮೋಟ್ (ಆಯ್ದ ಆಂಡ್ರಾಯ್ಡ್ ಫೋನ್ ಗಳ ಜೊತೆ ಕೆಲಸ ಮಾಡುತ್ತದೆ
  • ಡೀಸೆಲ್ ಆಟೋಮ್ಯಾಟಿಕ್ ಮಾಡೆಲ್ ನಲ್ಲಿ ಸನ್ ರೂಫ್ ,ಏಕೋ ಕೋಟಿಂಗ್ ಕಾರ್ಯ (AC ಜೊತೆಗಿನ ವಾಸನೆಯನ್ನು ತೆಗೆಯುತ್ತದೆ) ಮತ್ತು ರೇರ್ ಮಾನ್ಯುಯಲ್ ಕರ್ಟನ್ ದೊರೆಯುತ್ತದೆ.

ಇದು ಕೊಳ್ಳಲು ಮೌಲ್ಯಯುಕ್ತವಾಗಿದೆಯೇ?

ಬೆಲೆ ಪ್ರೀಮಿಯಂ ಆದ ಸುಮಾರು Rs 60,000 ಹಿಂದಿನ ವೇರಿಯೆಂಟ್ ಗಿಂತಲೂ ಹೆಚ್ಚಾಗಿದೆ (ಪೆಟ್ರೋಲ್ ಮಾನ್ಯುಯಲ್ ಗಾಗಿ ), SX ವೇರಿಯೆಂಟ್ ಹೆಚ್ಚು ಸಕ್ತವಾದ ಆಯ್ಕೆ ಆಗಿದೆ. ನಿಮಗೆ ಬೆಲೆಗೆ ತಕ್ಕಂತೆ ಹೆಚ್ಚು ಸಲಕರಣೆಗಳು ದೊರೆಯುತ್ತದೆ ಮತ್ತು ಹೆಚ್ಚು ಪವರ್ ಇರುವ ಎಂಜಿನ್ ಸಹ. ತದ್ವಿರುದ್ಧವಾಗಿ, ಡೀಸೆಲ್ ಮಾನ್ಯುಯಲ್ ವೆರ್ನಾ ದ ಹೆಚ್ಚಿನ ಬೆಲೆಯಾದ SX ವೇರಿಯೆಂಟ್ EX ವೇರಿಯೆಂಟ್ ಗಿಂತಲೂ ಒಂದು ಲಕ್ಷ ಹೆಚ್ಚಾಗಿದೆ ! ಹೆಚ್ಚಿನ ಸಲಕರಣೆಗಳು ಬೆಲೆ ವೆತ್ಯಾಸವನ್ನು ಸಮರ್ಥಿಸುವುದಿಲ್ಲ.

ಹುಂಡೈ ವೆರ್ನಾ SX (O) - ಸುರಕ್ಷತೆ ಪ್ಯಾಕ್ ಒಂದಿಗೆ ಬರುತ್ತದೆ

ಹೈಲೈಟ್

  • ಟಾಪ್ ಸ್ಪೆಕ್ ಟ್ರಿಮ್ ನ ಆಯ್ಕೆ ವೇರಿಯೆಂಟ್ ಆಗಿದೆ ( ತಾಂತ್ರಿಕವಾಗಿ ಈ ವ್ಯಾಪ್ತಿ ಯಲ್ಲಿನ ಆಗ್ರಾ ಪಂಕ್ತಿಯ ಟ್ರಿಮ್)
  • ಎಂಜಿನ್ ಆಯ್ಕೆಗಳು: ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಎರೆಡು ಸಿಗುತ್ತದೆ
  • ಟ್ರಾನ್ಸ್ಮಿಷನ್ ಆಯ್ಕೆ: 6- ಸ್ಪೀಡ್ ಮಾನ್ಯುಯಲ್ / ಆಟೋಮ್ಯಾಟಿಕ್ (ಪೆಟ್ರೋಲ್) ಮತ್ತು 6- ಸ್ಪೀಡ್ ಮಾನ್ಯುಯಲ್ (ಡೀಸೆಲ್)

ಬೆಲೆ (ಎಕ್ಸ್ ಶೋ ರೂಮ್, ಹೊಸ ದೆಹಲಿ): Rs 11.34 ಲಕ್ಷ ( ಪೆಟ್ರೋಲ್ ಮಾನ್ಯುಯಲ್ ); Rs 12.48 ಲಕ್ಷ ( ಪೆಟ್ರೋಲ್ ಆಟೋಮ್ಯಾಟಿಕ್)|| Rs 12.68 ಲಕ್ಷ (ಡೀಸೆಲ್ ಮಾನ್ಯುಯಲ್ )

ಏನೇನು ಕೊಡುಗೆಗಳಿವೆ?

ಟಾಪ್ ಸ್ಪೆಕ್ SX ಟ್ರಿಮ್ ನ ಫೀಚರ್ ಗಳನ್ನು ಮುಂದುವರೆಸಿದೆ ಆದರೆ ಅದರ ಜೊತೆಗೆ ಕೇಳಾಗಿನವುಗಳನ್ನು ಸೇರಿಸಲಾಗಿದೆ

  • ಫಾಸ್ಸಿವ್ ಕೀ ಲೆಸ್ ಎಂಟ್ರಿ ಜೊತೆಗೆ ಪುಶ್ ಬಟನ್ ಎಂಜಿನ್ ಸ್ಟಾರ್ಟ್ ಸ್ಟಾಪ್
  • ಲೆಥರ್ ಮೇಲ್ಪದರಗಳು ಜೊತೆಗೆ ವೆಂಟಿಲೇಟೆಡ್ ಮುಂಬದಿಯ ಸೀಟ್ ಗಳು

  • ಕರ್ಟೈನ್ ಮತ್ತು ಸೈಡ್ ಏರ್ಬ್ಯಾಗ್ ಗಳು ( ಒಟ್ಟು ಆರು ಏರ್ಬ್ಯಾಗ್ ಗಳು )

  • ಸರಿಹೊಂದಿಸಬಹುದಾದ ರೇರ್ ಹೆಡ್ ರೆಸ್ಟ್ ಗಳು.
  • ಹ್ಯಾಂಡ್ಸ್ ಫ್ರೀ ಸ್ಮಾರ್ಟ್ ಟ್ರಂಕ್

  • ಆಟೋ ಲಿಂಕ್ ಹೊಂದಾಣಿಕೆ ಇರುವ ಕಾರ್ ಟೆಕ್
  • ರೇರ್ ಮಾನ್ಯುಯಲ್ ಕರ್ಟೈನ್
  • ಪೆಟ್ರೋಲ್ ಆಟೋಮಾಟಿ ನಲ್ಲಿ Eco ಕೋಟಿಂಗ್ ಕಾರ್ಯ ಇದೆ (AC ಯಲ್ಲಿನ ವಾಸನೆ ಹೋಗಲಾಡಿಸುತ್ತದೆ)
  • ಎಲೆಕ್ಟ್ರಿಕ್ ಸನ್ ರೂಫ್

ಇದು ಕೊಳ್ಳಲು ಮೌಲ್ಯಯುಕ್ತವಾಗಿದೆಯೇ?

ಇದು ವೆರ್ನಾ ದಲ್ಲಿ ಆರು ಏರ್ಬ್ಯಾಗ್ ಗಳೊಂದಿಗೆ ಬರುವ ಒಂದೇ ವೇರಿಯೆಂಟ್ ಆಗಿದೆ, ಇದರಲ್ಲಿರುವ ಸುರಕ್ಷತೆ ಬಗ್ಗೆ ನೀವು ರಾಜಿ ಮಾಡಿಕೊಳ್ಳಬೇಕಾಗಿಲ್ಲ SX(O) ವೇರಿಯೆಂಟ್ ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನಿಮಗೆ ಹೆಚ್ಚಾಗಿ ದೊರೆಯುವ ವಿಚಾರಗಳು ನೀವು ಯಾವಾಗಲಾದರೂ ಒಮ್ಮೆ ಬಳಸಬಹುದಾಗಿದೆ, ಆದರೆ ಅವು ಇಂತಹ ಕೆಲವು ಕಾರ್ ಗಳಲ್ಲಿ ಈ ಬೆಲೆಯಲ್ಲಿ ಸಿಗುತ್ತದೆ. ಹಾಗಾಗಿ, ನೀವು ಟಾಪ್ ಎಂಡ್ ವೆರ್ನಾ ಕೊಳ್ಳುವ ಮನಸಿದ್ದರೆ ಇದನ್ನು ಆಯ್ಕೆಮಾಡಬಹುದು .

Check out: Hyundai Clears Air About Ioniq, Tucson 4WD And Compact SUV

Read More on : Verna Automatic

r
ಅವರಿಂದ ಪ್ರಕಟಿಸಲಾಗಿದೆ

raunak

  • 55 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ ವೆರ್ನಾ 2017-2020

s
shardul kumar
Sep 24, 2019, 12:11:08 AM

When would we see the BSVI engine in Hyundai Verna?

Read Full News

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
Rs.43.90 - 46.90 ಲಕ್ಷ*
ಫೇಸ್ ಲಿಫ್ಟ್
Rs.73.50 - 78.90 ಲಕ್ಷ*
ಎಲೆಕ್ಟ್ರಿಕ್
Rs.2.03 - 2.50 ಸಿಆರ್*
ಎಲೆಕ್ಟ್ರಿಕ್
Rs.41 - 53 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ