• English
  • Login / Register

ಮೊದಲ ದಿನವೇ 1,500 ಗ್ರಾಹಕರ ಮನೆಯನ್ನು ತಲುಪಿದ Mahindra XUV 3XO

published on ಮೇ 29, 2024 08:39 pm by shreyash for ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಹೀಂದ್ರಾ ಎಕ್ಸ್‌ಯುವಿ3XO ಅನ್ನು 2024ರ ಏಪ್ರಿಲ್‌ನ ಕೊನೆಯಲ್ಲಿ ಬಿಡುಗಡೆ ಮಾಡಲಾಯಿತು, ಆದರೆ ಅದರ ಡೆಲಿವರಿಯು ಇದೇ ತಿಂಗಳ 26ರಂದು ಪ್ರಾರಂಭಿಸಲಾಗಿತ್ತು.

Mahindra XUV 3XO

  • ಮೇ ತಿಂಗಳ 15ರಂದು ಮಹೀಂದ್ರಾ 3XO ನ ಆರ್ಡರ್ ಪುಸ್ತಕಗಳನ್ನು ತೆರೆಯಿತು, ಒಂದು ಗಂಟೆಯಲ್ಲಿ 50,000 ಬುಕಿಂಗ್‌ಗಳನ್ನು ಗಳಿಸಿತು.
  • ಒಟ್ಟು ಬುಕಿಂಗ್‌ನಲ್ಲಿ ಸುಮಾರು 70 ಪ್ರತಿಶತದಷ್ಟು ಪೆಟ್ರೋಲ್ ಆವೃತ್ತಿಗಾಗಿ ಪಡೆದಿದೆ. 
  • ಎಕ್ಸ್‌ಯುವಿ 3XO ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳ ಆಯ್ಕೆಯೊಂದಿಗೆ ಬರುತ್ತದೆ.
  • ಫೀಚರ್‌ನ ಹೈಲೈಟ್ಸ್‌ಗಳು 10.25-ಇಂಚಿನ ಟಚ್‌ಸ್ಕ್ರೀನ್, ಡ್ಯುಯಲ್-ಜೋನ್ ಎಸಿ, ಪನೋರಮಿಕ್ ಸನ್‌ರೂಫ್ ಮತ್ತು ADAS ಅನ್ನು ಒಳಗೊಂಡಿವೆ.
  • ಭಾರತದಾದ್ಯಂತ ಇದರ ಪರಿಚಯಾತ್ಮಕ ಬೆಲೆಗಳು 7.49 ಲಕ್ಷ ರೂ.ನಿಂದ 15.49 ಲಕ್ಷ ರೂ.ವಿನ (ಎಕ್ಸ್ ಶೋರೂಂ) ನಡುವೆ ಇರುತ್ತದೆ.

2024ರ ಏಪ್ರಿಲ್‌ನಲ್ಲಿ, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒಗಾಗಿ ಬೆಲೆಗಳನ್ನು ಘೋಷಿಸಲಾಯಿತು. ಇದನ್ನು ಎಕ್ಸ್‌ಯುವಿ300 ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ ಫೇಸ್‌ಲಿಫ್ಟೆಡ್ ಆವೃತ್ತಿಯಾಗಿ ಬಿಡುಗಡೆ ಮಾಡಲಾಯಿತು, ಇದು ತಾಜಾ ವಿನ್ಯಾಸ, ಹೊಸ ತಂತ್ರಜ್ಞಾನಗಳು ಮತ್ತು ಸುಧಾರಿತ ಸುರಕ್ಷತೆಯನ್ನು ಒಳಗೊಂಡಿದೆ. ವಾಹನ ತಯಾರಕರು ಮೇ 15 ರಂದು ಎಕ್ಸ್‌ಯುವಿ 3ಎಕ್ಸ್‌ಒಗಾಗಿ ಬುಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು, ಅದರ ವಿತರಣೆಗಳು ಮೇ 26ರಂದು ಪ್ರಾರಂಭವಾಯಿತು.

ಮೊದಲ ದಿನವೇ 1,500 ಎಕ್ಸ್‌ಯುವಿ 3ಎಕ್ಸ್‌ಒಗಳ ಡೆಲಿವೆರಿ

ಡೆಲಿವರಿಯ ಮೊದಲ ದಿನದಂದು, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒನ 1,500 ಯುನಿಟ್‌ಗಳನ್ನು ಭಾರತದಾದ್ಯಂತ ಗ್ರಾಹಕರ ಮನೆಗೆ ಕಳುಹಿಸಲಾಯಿತು. ಕೇವಲ ಒಂದು ಗಂಟೆಯೊಳಗೆ 50,000 ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಗಳಿಸಿದ ಮಹೀಂದ್ರಾವು ಗ್ರಾಹಕರಿಂದ ಅತ್ಯತ್ತಮವಾದ ಪ್ರತಿಕ್ರಿಯೆಯನ್ನು ಪಡೆದಿತ್ತು. ಮಹೀಂದ್ರಾ ಪ್ರಕಾರ, ಒಟ್ಟು ಬುಕ್ಕಿಂಗ್‌ಗಳಲ್ಲಿ ಸುಮಾರು 70 ಪ್ರತಿಶತವನ್ನು ಕೇವಲ ಪೆಟ್ರೋಲ್ ಆವೃತ್ತಿಗಳು ಪಡೆದಿವೆ.

ಇದನ್ನು ಸಹ ಓದಿ: Mahindra XUV 3XO AX7 ವರ್ಸಸ್‌ Volkswagen Taigun Highline: ಯಾವ ಎಸ್‌ಯುವಿ ಖರೀದಿಸಬೇಕು?

ಇದು ಏನನ್ನು ನೀಡುತ್ತದೆ ?

Mahindra XUV 3XO cabin

ಮಹೀಂದ್ರಾವು ತನ್ನ ಎಕ್ಸ್‌ಯುವಿ 3ಎಕ್ಸ್‌ಒವನ್ನು 10.25-ಇಂಚಿನ  ಡ್ಯುಯಲ್ ಡಿಸ್‌ಪ್ಲೇಗಳು(ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಇನ್‌ಸ್ಟ್ರುಮೆಂಟೇಶನ್‌ಗಾಗಿ), 7-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಮತ್ತು ಸೆಗ್ಮೆಂಟ್-ಫಸ್ಟ್ ಪನೋರಮಿಕ್ ಸನ್‌ರೂಫ್‌ನಂತಹ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳಿಸಿದೆ. ಇದು ಕ್ರೂಸ್ ಕಂಟ್ರೋಲ್, ಡ್ಯುಯಲ್-ಝೋನ್ ಎಸಿ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ.

ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್ ಮತ್ತು ಲೇನ್-ಕೀಪ್ ಅಸಿಸ್ಟ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸಂಪೂರ್ಣ ಸೂಟ್‌ನೊಂದಿಗೆ ಬರುತ್ತದೆ.

ಎಂಜಿನ್ ಮತ್ತು ಗೇರ್‌ಬಾಕ್ಸ್‌

ಎಕ್ಸ್‌ಯುವಿ 3ಎಕ್ಸ್‌ಒವು ಮೊದಲಿನ ಎಂಜಿನ್ ಆಯ್ಕೆಗಳನ್ನೇ ಬಳಸುತ್ತದೆ. ಅವರ ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ:

ಎಂಜಿನ್‌

1.2-ಲೀಟರ್ ಟರ್ಬೊ-ಪೆಟ್ರೋಲ್

  1. 1.2-ಲೀಟರ್ T-GDi (ಟರ್ಬೊ-ಪೆಟ್ರೋಲ್)

1.5-ಲೀಟರ್ ಡೀಸೆಲ್

ಪವರ್‌

112 ಪಿಎಸ್‌

130 ಪಿಎಸ್‌

117 ಪಿಎಸ್‌

ಟಾರ್ಕ್‌

200 ಎನ್‌ಎಮ್‌

230 ಎನ್‌ಎಮ್‌

300 ಎನ್‌ಎಮ್‌

ಗೇರ್‌ಬಾಕ್ಸ್‌

6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ ಆಟೋಮ್ಯಾಟಿಕ್‌

6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ ಆಟೋಮ್ಯಾಟಿಕ್‌

6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ AMT

ಎಕ್ಸ್‌ಯುವಿ 3ಎಕ್ಸ್‌ಒ ಈಗ ಅದರ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌  ಆಯ್ಕೆಯನ್ನು ಪಡೆಯುತ್ತದೆ. 112 PS 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಈ ಹಿಂದೆ 6-ಸ್ಪೀಡ್ AMT ಯೊಂದಿಗೆ ನೀಡಲಾಗಿತ್ತು.

ಬೆಲೆಯ ರೇಂಜ್‌ ಮತ್ತು ಪ್ರತಿಸ್ಪರ್ಧಿಗಳು

ಭಾರತದಾದ್ಯಂತ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಪರಿಚಯಾತ್ಮಕ ಬೆಲೆಯು 7.49 ಲಕ್ಷ ರೂ.ನಿಂದ 15.49 ಲಕ್ಷ ರೂ.ವರೆಗೆ(ಎಕ್ಸ್ ಶೋ ರೂಂ) ಇರಲಿದೆ. ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಮುಂತಾದವುಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ. 

ಇನ್ನಷ್ಟು ಓದಿ: ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಎಎಮ್‌ಟಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಹೀಂದ್ರ XUV 3XO

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience