2020 ಹುಂಡೈ ಕ್ರೆಟಾ ದಲ್ಲಿ ಕಿಯಾ ಸೆಲ್ಟೋಸ್ ನಿಂದ ತಂದ ಅಳವಡಿಸಲಾದಂತಹ 1.4-ಲೀಟರ್ ಟರ್ಬೊ ಪೆಟ್ರೋಲ್ ಅಳವಡಿಸಲಾಗುತ್ತದೆ.
ಹುಂಡೈ ಕ್ರೆಟಾ 2020-2024 ಗಾಗಿ sonny ಮೂಲಕ ಸೆಪ್ಟೆಂಬರ್ 06, 2019 12:57 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಟರ್ಬೊ -ಪೆಟ್ರೋಲ್ ಜೊತೆಗೆ, ಮುಂದಿನ ಪೀಳಿಗೆಯ ಹುಂಡೈ ಕ್ರೆಟಾ ದಲ್ಲಿ ಸೆಲ್ಟೋಸ್ ನ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಅನ್ನು ಕೊಡಲಾಗುತ್ತದೆ.
- ಮುಂದಿನ -ಪೀಳಿಗೆಯ ಹುಂಡೈ ಕ್ರೆಟಾ ದಲ್ಲಿ ಚೀನಾ ಸ್ಪೆಕ್, ಎರೆಡನೆ ಜೆನ್ ix25 ಕಾಣುತ್ತದೆ.
- ಅದರಲ್ಲಿ BS6 ಎಂಜಿನ್ ಮತ್ತು ಟ್ರಾನ್ಸ್ಮಿಷನ್ ಆಯ್ಕೆಗಳು ಜೊತೆಗೆ ಕಿಯಾ ಸೆಲ್ಟೋಸ್ ನೊಂದಿಗೆ ಹಂಚಿಕೊಳ್ಳಲಾಗಿದೆ
- ಪವರ್ ಟ್ರೈನ್ ಆಯ್ಕೆ ಗಳಲ್ಲಿ 1.4- ಲೀಟರ್ ಟರ್ಬೊ ಪೆಟ್ರೋಲ್ ಜೊತೆಗೆ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಸೇರಿದೆ.
- ಕಿಯಾ ದವರ T-GD ಅನ್ನು ಕೇವಲ ಸೆಲ್ಟೋಸ್ GT ಲೈನ್ ನಲ್ಲಿ ಅಳವಡಿಸಲಾಗಿದೆ, ಹುಂಡೈ ನವರು ಅದನ್ನು ಕ್ರೆಟಾ ದ N-ಲೈನ್ ವೇರಿಯೆಂಟ್ ಒಂದಿಗೆ ಕೊಡಬಹುದು.
- 2020 ಕ್ರೆಟಾ ವನ್ನು ಭಾರತದಲ್ಲಿ 2020 ಪ್ರಾರಂಭದಲ್ಲಿ ಬಿಡುಗಡೆ ಮಾಡಬಹುದು, ಬಹುಶಃ ಆಟೋ ಎಕ್ಸ್ಪೋ ದಲ್ಲಿ.
ನೆಕ್ಸ್ಟ್ -ಜೆನ್ ಹುಂಡೈ ಕ್ರೆಟಾ ಭಾರತದಲ್ಲಿ 2020 ಬರಲಿದೆ ಮತ್ತು ಅದನ್ನು ಚೀನಾ ದಲ್ಲಿ ix25 ಆಗಿ ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಹೇಳಿಕೆ ನೀಡಿದಂತೆ ಹೊಸ ಕ್ರೆಟಾ ದಲ್ಲಿ ಅದೇ ಜೋಡಿ ಎಂಜಿನ್ ಗಳಾದ ಕಿಯಾ ಸೆಲ್ಟೋಸ್ ನಿಂದ ತರಲಾದ 1.5- ಲೀಟರ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಅನ್ನು ಕೊಡುವ ಸಾಧ್ಯತೆ ಇದೆ.
ಕಿಯಾ ದವರ 1.4-ಲೀಟರ್ T-GDi ಪೆಟ್ರೋಲ್ ಎಂಜಿನ್ BS6 ಕಂಪ್ಲೇಂಟ್ ನಾರ್ಮ್ಸ್ ಗೆ ಅನುಗುಣವಾಗಿದೆ ಮತ್ತು ಆಯ್ಕೆಯಾಗಿ 6-ಸ್ಪೀಡ್ ಮಾನ್ಯುಯಲ್ ಅಥವಾ 7-ಸ್ಪೀಡ್ ಡುಯಲ್ ಕ್ಲಚ್ ಟ್ರಾನ್ಸ್ಮಿಷನ್ , ಸೆಲ್ಟೋಸ್ ನಲ್ಲಿ ಕೊಟ್ಟಂತಹುದು, ಕೊಡಲಾಗಿದೆ. ಈಗಿರುವ ಕ್ರೆಟಾ ದ BS4 ಎಂಜಿನ್ , ಅದು 1.6- ಲೀಟರ್ ಪೆಟ್ರೋಲ್ ಎಂಜಿನ್ ಆಗಿದ್ದು 123PS ಪವರ್ ಕೊಡುತ್ತಿತ್ತು, ಅದನ್ನು ನಿಲ್ಲಿಸಲಾಗಿದೆ.
ಸೆಲ್ಟೋಸ್ ನಲ್ಲಿರುವ 1.5-ಲೀಟರ್ ಎಂಜಿನ್ 115PS ಪವರ್ ಕೊಡುತ್ತದೆ , ಹಾಗಾಗಿ 1.4-ಲೀಟರ್ ಟರ್ಬೊ ಚಾರ್ಜ್ ಎಂಜಿನ್ 140PS ಕೊಡುವಂತಹುದನ್ನು 2020 ಕ್ರೆಟಾ ದಲ್ಲಿ ಕೊಡಲಾಗುವುದು, ಸೆಲ್ಟೋಸ್ GT ಲೈನ್ ನಲ್ಲಿರುವಂತೆ. ಹುಂಡೈ ಕಾಂಪ್ಯಾಕ್ಟ್ SUV ಯನ್ನು N-ಲೈನ್ ವೇರಿಯೆಂಟ್ ಎಂದು ಹೇಳಲಾಗುತ್ತದೆ ಕಿಯಾ ದ GT ಲೈನ್ ಗೆ ವಿರುದ್ಧವಾಗಿ.
ಹುಂಡೈ ನ ನೆಕ್ಸ್ಟ್ ಜೆನ್ ಕಾಂಪ್ಯಾಕ್ಟ್ SUV ಯು ಸೆಲ್ಟೋಸ್ ನ ವೇದಿಕೆಯಲ್ಲಿ ನಿರ್ಮಾಣವಾಗುತ್ತದೆ. ತಾಂತ್ರಿಕ ವಿವರಗಳು ಮತ್ತು ಸ್ಪೆಸಿಫಿಕೇಷನ್ ಗಳು ಚೀನಾ ಸ್ಪೆಕ್ ix25 ನಲ್ಲಿರುವಂತಹುದು ಸೂಚಿಸುವಂತೆ ಹೊಸ ಕ್ರೆಟಾ ಹೊರ ಹೋಗುತ್ತಿರುವ ಮಾಡೆಲ್ ಗಿಂತಲೂ ಹೆಚ್ಚು ದೊಡ್ಡದಾಗಿರುತ್ತದೆ, ಆದರೆ ಈಗಲೂ ಕಿಯಾ ಸಹೋದರಗಿಂತಲೂ ಚಿಕ್ಕದಾಗಿರುತ್ತದೆ.
|
2020 ಹುಂಡೈ ಕ್ರೆಟಾ (ix25) |
ಹುಂಡೈ ಕ್ರೆಟಾ ( ಈಗಿನ -ಪೀಳಿಗೆ) |
ಕಿಯಾ ಸೆಲ್ಟೋಸ್ |
Length |
4300mm |
4370mm |
4315mm |
Width |
1790mm |
1780mm |
1800mm |
Height |
1622mm |
1665mm |
1620mm |
Wheelbase |
2610mm |
2590mm |
2613mm |
ಹೊಸ ಗೂಢಾಚಾರಿಕೆಯ ಚಿತ್ರಗಳು ಸೂಚಿಸುವಂತೆ 2020 ಕ್ರೆಟಾ ದ ಕ್ಯಾಬಿನ್ ನಲ್ಲಿ ದೊಡ್ಡ ಸೆಂಟ್ರಲ್ ಟಚ್ ಸ್ಕ್ರೀನ್ ಅನ್ನು ಲಂಬಾಕಾರವಾಗಿ ಕೊಡಲಾಗುತ್ತದೆ, MG ಹೆಕ್ಟರ್ ನಲ್ಲಿರುವಂತೆ. ಆದರೆ, ಅದನ್ನು ಭಾರತ ಸ್ಪೆಕ್ ಕ್ರೆಟಾ ದಲ್ಲಿ ಕೊಡಲ್ಗುವ ವಿಚಾರ ತಿಳಿದಿಲ್ಲ. ಇದರಲ್ಲಿ ಹುಂಡೈ ಬ್ಲೂ ಲಿಂಕ್ ಕನೆಕ್ಟೆಡ್ ಕಾರ್ ಫೀಚರ್ ಗಳನ್ನು ಕೊಡಲಾಗಿದ್ದು ಅದನ್ನು ವೆನ್ಯೂ ನಲ್ಲಿ ನೋಡಬಹುದಾಗಿದೆ, ಉದಾಹರಣೆಗೆ 360-ಡಿಗ್ರಿ ವ್ಯೂ ಕ್ಯಾಮೆರಾ , ಹೆಡ್ ಅಪ್ ಡಿಸ್ಪ್ಲೇ, ಪನೋರಮಿಕ್ ಸನ್ ರೂಫ್, ಹೆಚ್ಚು ಸಂಖ್ಯೆಗಳ ಏರ್ಬ್ಯಾಗ್ ಗಳು, ಮತ್ತು ಅಧಿಕ.
ಹುಂಡೈ ಕ್ರೆಟಾ ಸದ್ಯದಲ್ಲಿ ರೂ 10 ಲಕ್ಷ ದಿಂದ ರೂ 15.65 ಲಕ್ಷ ವರೆಗೂ ಬೆಲೆ ಪಟ್ಟಿ ಹೊಂದಿದೆ, ಅದೇ ಸಮಯದಲ್ಲಿ ಕಿಯಾ ಸೆಲ್ಟೋಸ್ ಆರಂಭಿಕ ಬೆಲೆ ವ್ಯಾಪ್ತಿ ರೂ 9.69 ಲಕ್ಷ ದಿಂದ ರೂ 15.99 ಲಕ್ಷ ವರೆಗೂ ಇದೆ (ಎಲ್ಲ ಬೆಲೆಗಳು ಎಕ್ಸ್ ಶೋ ರೂಮ್ ದೆಹಲಿ). ಹೊಸ ಕ್ರೆಟಾ ಬೆಲೆ ಪಟ್ಟಿ ಸೆಲ್ಟೋಸ್ ನಲ್ಲಿರುವಂತೆ ಇರುತ್ತದೆ ಅದನ್ನು 2020 ಪ್ರಾರಂಭದಲ್ಲಿ ಬಿಡುಗಡೆ ಮಾಡಿದಾಗ. ಮತ್ತು ಅದು ಸೆಲ್ಟೋಸ್, ನಿಸ್ಸಾನ್ ಕಿಕ್ಸ್, ಟಾಟಾ ಹ್ಯಾರಿಯೆರ್, ಮತ್ತು MG ಹೆಕ್ಟರ್ ನೊಂದಿಗೆ ಪ್ರತಿಸ್ಪರ್ಧೆ ಮುಂದುವರೆಸುತ್ತದೆ.