Login or Register ಅತ್ಯುತ್ತಮ CarDekho experience ಗೆ
Login

2024 ಭಾರತ್ ಮೊಬಿಲಿಟಿ ಎಕ್ಸ್‌ಪೋ: ಈ 5 ಚಿತ್ರಗಳಲ್ಲಿ ಎಮರಾಲ್ಡ್ ಗ್ರೀನ್ Tata Harrier EV ಕಾನ್ಸೆಪ್ಟ್‌ನ್ನು ಪರಿಶೀಲಿಸಿ

ಟಾಟಾ ಹ್ಯಾರಿಯರ್ ಇವಿ ಗಾಗಿ ansh ಮೂಲಕ ಫೆಬ್ರವಾರಿ 02, 2024 03:00 pm ರಂದು ಪ್ರಕಟಿಸಲಾಗಿದೆ

ಹ್ಯಾರಿಯರ್ ಇವಿ ಅನ್ನು ಭಾರತ್ ಮೊಬಿಲಿಟಿ ಎಕ್ಸ್‌ಪೋ 2024 ನಲ್ಲಿ ಪ್ರದರ್ಶಿಸಲಾಗಿದೆ ಮತ್ತು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ

ಕೆಲವು ವರ್ಷಗಳ ಹಿಂದೆ ಟಾಟಾವು 2025 ರ ವೇಳೆಗೆ ತಮ್ಮ ಗರಡಿಯಿಂದ ಸುಮಾರು 10 EV ಗಳನ್ನು ಹೊರ ತರುವ ದಿಟ್ಟ ಗುರಿಯನ್ನು ಘೋಷಿಸಿತ್ತು, ಮತ್ತು ಈಗಾಗಲೇ ಅದರ ಮುಂಬರುವ ಎಲೆಕ್ಟ್ರಿಕ್ ಕಾರುಗಳ ಪ್ರದರ್ಶನವನ್ನು ಮಾಡಿದೆ. 2024ರಲ್ಲಿ ಮಾತ್ರ, ನಾವು ಭಾರತೀಯ ಕಾರು ತಯಾರಕರಿಂದ ಒಟ್ಟು ಮೂರು ಹೊಸ ಇವಿಗಳನ್ನು ನಿರೀಕ್ಷಿಸುತ್ತಿದ್ದೇವೆ, ಅವುಗಳಲ್ಲಿ ಒಂದು ಟಾಟಾ ಹ್ಯಾರಿಯರ್ EV. ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು 2023ರ ಆಟೋ ಎಕ್ಸ್‌ಪೋದಲ್ಲಿ ಕಾನ್ಸೆಪ್ಟ್ ರೂಪದಲ್ಲಿ ಮೊದಲು ಬಹಿರಂಗಪಡಿಸಲಾಯಿತು ಮತ್ತು ಇದನ್ನು ಈಗ 2024 ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಹೊಸ ಎಮರಾಲ್ಡ್ ಗ್ರೀನ್ ವರ್ಣದಲ್ಲಿ ಪ್ರದರ್ಶಿಸಲಾಗಿದೆ. ಈ ಐದು ವಿವರವಾದ ಚಿತ್ರಗಳಲ್ಲಿ ಮಧ್ಯಮ ಗಾತ್ರದ ಎಲೆಕ್ಟ್ರಿಕ್ SUV ಕಾನ್ಸೆಪ್ಟ್‌ನ್ನು ಪರಿಶೀಲಿಸಿ.

ಮುಂಭಾಗ

2023ರ ಆಟೋ ಎಕ್ಸ್‌ಪೋದಲ್ಲಿ ಪ್ರಾರಂಭವಾದಾಗಿನಿಂದ ಹ್ಯಾರಿಯರ್ ಇವಿ ಕಾನ್ಸೆಪ್ಟ್‌ನ ವಿನ್ಯಾಸದಲ್ಲಿ ಟಾಟಾ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಮುಂಭಾಗದಲ್ಲಿ, ನೀವು ಸಂಪರ್ಕಿತ ಎಲ್‌ಇಡಿ ಡಿಆರ್‌ಎಲ್‌ ಗಳನ್ನು ನೋಡಬಹುದು, ಇದನ್ನು ಫೇಸ್‌ಲಿಫ್ಟೆಡ್ ಹ್ಯಾರಿಯರ್‌ನ ಐಸಿಇ(ಆಂತರಿಕ ದಹನಕಾರಿ ಎಂಜಿನ್) ಆವೃತ್ತಿಯಲ್ಲಿ ನೀಡಲಾಗುತ್ತಿದೆ. ಈ ಇವಿಯು ಸಮತಲವಾದ ಸ್ಲ್ಯಾಟ್‌ಗಳೊಂದಿಗೆ ಮುಚ್ಚಿದ ಗ್ರಿಲ್ ಅನ್ನು ಪಡೆಯುತ್ತದೆ. ಲಂಬವಾಗಿ ಇರಿಸಲಾದ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ದಪ್ಪನಾದ ಬಂಪರ್‌ನ ಮೂಲೆಗಳಲ್ಲಿ ಆಳವಾಗಿ ಹಿಡಿಯಲಾಗುತ್ತದೆ. ಅತ್ಯಂತ ಕೆಳಭಾಗದಲ್ಲಿ, ಎಸ್‌ಯುವಿಯು ನಯವಾದ ಸ್ಕಿಡ್ ಪ್ಲೇಟ್ ವಿನ್ಯಾಸವನ್ನು ಪಡೆಯುತ್ತದೆ, ಅದರ ಮೇಲೆ ಏರ್ ಡ್ಯಾಮ್‌ಗಾಗಿ ಲಂಬ ವಿನ್ಯಾಸದ ಅಂಶಗಳಿವೆ. ಅವುಗಳ ನಡುವೆ ಇರುವ ಎಡಿಎಎಸ್‌ ರಾಡಾರ್ ಅನ್ನು ಸಹ ನಾವು ಗುರುತಿಸಬಹುದು.

ಸೈಡ್‌

ಪ್ರೊಫೈಲ್ ಪ್ರತಿ ರೀತಿಯಲ್ಲಿ ICE ಆವೃತ್ತಿಯನ್ನು ಹೋಲುತ್ತದೆ, ಮುಂಭಾಗದ ಫೆಂಡರ್‌ಗಳಲ್ಲಿ ".ev" ಬ್ಯಾಡ್ಜಿಂಗ್‌ನಿಂದ ಮಾತ್ರ ಭಿನ್ನವಾಗಿರುತ್ತದೆ. ಈ ಎಸ್‌ಯುವಿಯನ್ನು ಡ್ಯುಯಲ್-ಟೋನ್ ಪೇಂಟ್‌ನಲ್ಲಿ ಪೂರ್ಣಗೊಳಿಸಲಾಗಿದೆ, ಇದು ರೂಫ್‌ ಮತ್ತು ಪಿಲ್ಲರ್‌ಗಳ ಮೇಲೆ ಗ್ಲೋಸ್‌ ಬ್ಲ್ಯಾಕ್‌ ಬಣ್ಣವನ್ನು ಪಡೆಯುತ್ತದೆ. ಇದು ವೀಲ್ ಆರ್ಚರ್‌ಗಳ ಸುತ್ತಲೂ ಸ್ಲಿಮ್ ಕ್ಲಾಡಿಂಗ್ ಮತ್ತು ಸ್ವಲ್ಪ ಹೆಚ್ಚು ಒರಟಾದ ನೋಟಕ್ಕಾಗಿ ಬಾಗಿಲುಗಳ ಕೆಳಗೆ ದಪ್ಪವಾದ ಕ್ಲಾಡಿಂಗ್ ಅನ್ನು ಪಡೆಯುತ್ತದೆ.

ಐಸಿಇ ಆವೃತ್ತಿಯ ಹ್ಯಾರಿಯರ್‌ನಿಂದ ಒಂದು ದೊಡ್ಡ ವ್ಯತ್ಯಾಸವೆಂದರೆ ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳ ವಿನ್ಯಾಸವಾಗಿದೆ. ಈ ಎಲೆಕ್ಟ್ರಿಕ್ ಆವೃತ್ತಿಯಲ್ಲಿ, ವಿನ್ಯಾಸವು ಒರಟಾದ ಪ್ಲಾಸ್ಟಿಕ್ ಒಳಸೇರಿಸುವಿಕೆಯೊಂದಿಗೆ ಹೆಚ್ಚು ವಾಯುಬಲವೈಜ್ಞಾನಿಕವಾಗಿ ತೋರುತ್ತದೆ.

ಹಿಂಭಾಗ

ಹಿಂಭಾಗದಲ್ಲಿ, ನೀವು ಕನೆಕ್ಟೆಡ್‌ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಮತ್ತು ಎರಡೂ ಬದಿಗಳಲ್ಲಿ Z- ಆಕಾರದ ಸುತ್ತುವ ಲೈಟಿಂಗ್‌ ಅಂಶಗಳನ್ನು ಗುರುತಿಸಬಹುದು. ಈ ಎಸ್‌ಯುವಿಯು ರೂಫ್-ಇಂಟಿಗ್ರೇಟೆಡ್ ರಿಯರ್ ಸ್ಪಾಯ್ಲರ್ ಅನ್ನು ಪಡೆಯುತ್ತದೆ, ಇದು ಹೊಳಪು ಕಪ್ಪು ಬಣ್ಣದಲ್ಲಿ ಕೂಡ ಫಿನಿಶ್‌ ಆಗಿದೆ.

ಹಿಂಭಾಗದ ಪ್ರೊಫೈಲ್‌ನ ಕೆಳಗಿನ ಭಾಗವು ದೊಡ್ಡದಾದ ಬಂಪರ್ ಅನ್ನು ಪಡೆಯುತ್ತದೆ, ಇದು ಲಂಬ ವಿನ್ಯಾಸದ ಅಂಶಗಳೊಂದಿಗೆ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ.

ಇದನ್ನೂ ಓದಿ: ಭಾರತ್ ಮೊಬಿಲಿಟಿ ಎಕ್ಸ್ಪೋ 2024: ಉತ್ಪಾದನೆಗೆ ಸಿದ್ಧವಾಗುತ್ತಿರುವ Tata Curvv ಡೀಸೆಲ್ ಆವೃತ್ತಿಯ ವಿನ್ಯಾಸದ ಅನಾವರಣ

ಟಾಟಾ ಹ್ಯಾರಿಯರ್ ಇವಿ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಮತ್ತು ಇದರ ಎಕ್ಸ್ ಶೋ ರೂಂ ಬೆಲೆ 30 ಲಕ್ಷ ರೂ.ನಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ಇದು ಇತ್ತೀಚೆಗೆ ಬಹಿರಂಗಪಡಿಸಿದ Tata Acti.EV ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, 500 ಕಿಮೀಗಿಂತ ಹೆಚ್ಚು ಕ್ಲೈಮ್ ಮಾಡಲಾದ ಶ್ರೇಣಿಯನ್ನು ನೀಡಬಹುದು. ಹಾಗೆಯೇ ಇದರಲ್ಲಿ ಡ್ಯುಯಲ್-ಮೋಟರ್ ಆಲ್-ವೀಲ್-ಡ್ರೈವ್ ಸೆಟಪ್ ಆಯ್ಕೆಯನ್ನು ಪಡೆಯಬಹುದು. ಈ ಎಲೆಕ್ಟ್ರಿಕ್ ಎಸ್‌ಯುವಿಯು ಮುಂಬರುವ ಮಹೀಂದ್ರಾ XUV.e8 ಗೆ ನೇರ ಪ್ರತಿಸ್ಪರ್ಧಿಯಾಗಲಿದೆ ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು ಎಮ್‌ಜಿ ಝೆಡ್‌ಎಸ್‌ ಇವಿಗೆ ಪ್ರೀಮಿಯಂ ಮತ್ತು ವಿಶಾಲವಾದ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.

ಹೆಚ್ಚು ಓದಿ: ಹ್ಯಾರಿಯರ್ ಡೀಸೆಲ್

Share via

Write your Comment on Tata ಹ್ಯಾರಿಯರ್ EV

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ