2024 Hyundai Creta Knight ಎಡಿಷನ್ ಬಿಡುಗಡೆ, ಬೆಲೆಗಳು 14.51 ಲಕ್ಷ ರೂ.ನಿಂದ ಪ್ರಾರಂಭ
ಹುಂಡೈ ಕ್ರೆಟಾ ಗಾಗಿ shreyash ಮೂಲಕ ಸೆಪ್ಟೆಂಬರ್ 04, 2024 07:23 pm ರಂದು ಪ್ರಕಟಿಸಲಾಗಿದೆ
- 47 Views
- ಕಾಮೆಂಟ್ ಅನ್ನು ಬರೆಯಿರಿ
ಕ್ರೆಟಾದ ನೈಟ್ ಎಡಿಷನ್ ಸಂಪೂರ್ಣ ಕಪ್ಪು ಕ್ಯಾಬಿನ್ ಥೀಮ್ ಜೊತೆಗೆ ಕಪ್ಪು ವಿನ್ಯಾಸದ ಅಂಶಗಳನ್ನು ಹೊರಭಾಗದಲ್ಲಿ ಪಡೆಯುತ್ತದೆ
-
ಹೊರಭಾಗದ ಹೈಲೈಟ್ಸ್‌ಗಳು ಸಂಪೂರ್ಣ ಕಪ್ಪು ಗ್ರಿಲ್ ಮತ್ತು ಅಲಾಯ್ ವೀಲ್‌ಗಳು ಹಾಗು ಸ್ಕಿಡ್ ಪ್ಲೇಟ್‌ಗಳನ್ನು ಒಳಗೊಂಡಿವೆ.
-
ಒಳಭಾಗದಲ್ಲಿ, ವ್ಯತಿರಿಕ್ತ ಹಿತ್ತಾಳೆಯ ಇನ್ಸರ್ಟ್‌ನೊಂದಿಗೆ ಸಂಪೂರ್ಣ ಕಪ್ಪು ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ.
-
1.5-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾತ್ರ ಲಭ್ಯವಿದೆ.
-
2024ರ ಕ್ರೆಟಾ ನೈಟ್ ಆವೃತ್ತಿಯ ಬೆಲೆಗಳು 14.51 ಲಕ್ಷ ರೂ.ನಿಂದ 20.15 ಲಕ್ಷ ರೂ.ವರೆಗೆ(ಎಕ್ಸ್ ಶೋ ರೂಂ) ಇರುತ್ತದೆ .
ನೈಟ್ ಎಡಿಷನ್ ಈಗ ಹ್ಯುಂಡೈ ಕ್ರೆಟಾಗೆ ಮರಳಿದೆ, ಇದೀಗ ಅದರ ಫೇಸ್‌ಲಿಫ್ಟೆಡ್ ಆವೃತ್ತಿಯೊಂದಿಗೆ ಲಭ್ಯವಿದೆ. ಇದು ಸ್ಪೋರ್ಟಿಯರ್ ಕಪ್ಪು ವಿನ್ಯಾಸದ ಅಂಶಗಳು ಮತ್ತು ಸಂಪೂರ್ಣ ಕಪ್ಪು ಇಂಟೀರಿಯರ್ ಥೀಮ್ ಅನ್ನು ಒಳಗೊಂಡಿದೆ. ಕ್ರೆಟಾ ನೈಟ್ ಎಡಿಷನ್ 1.5-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಿಡ್-ಸ್ಪೆಕ್ ಎಸ್(ಒಪ್ಶನಲ್) ಮತ್ತು ಟಾಪ್-ಸ್ಪೆಕ್ ಎಸ್‌ಎಕ್ಸ್ (ಒಪ್ಶನಲ್) ಆವೃತ್ತಿಗಳಲ್ಲಿ ನೀಡಲಾಗುತ್ತಿದೆ. ಹೆಚ್ಚಿನ ವಿವರಗಳನ್ನು ತಿಳಿಯುವ ಮೊದಲು, ಕ್ರೆಟಾದ ಈ ಸಂಪೂರ್ಣ-ಕಪ್ಪು ಆವೃತ್ತಿಯ ವೇರಿಯಂಟ್-ವಾರು ಬೆಲೆಗಳನ್ನು ನೋಡೋಣ.
ಬೆಲೆಗಳು
ವೇರಿಯೆಂಟ್ |
ರೆಗುಲರ್ ಬೆಲೆ |
ನೈಟ್ ಎಡಿಷನ್ ಬೆಲೆ |
ವ್ಯತ್ಯಾಸ |
1.5-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್ ಪೆಟ್ರೋಲ್ |
|||
ಎಸ್(ಒಪ್ಶನಲ್) ಮ್ಯಾನುಯಲ್ |
14.36 ಲಕ್ಷ ರೂ. |
14.51 ಲಕ್ಷ ರೂ. |
+15,000 ರೂ. |
ಎಸ್ (ಒಪ್ಶನಲ್) ಸಿವಿಟಿ |
15.86 ಲಕ್ಷ ರೂ. |
16.01 ಲಕ್ಷ ರೂ. |
+15,000 ರೂ. |
ಎಸ್‌ಎಕ್ಸ್(ಒಪ್ಶನಲ್) ಮ್ಯಾನುಯಲ್ |
17.27 ಲಕ್ಷ ರೂ. |
17.42 ಲಕ್ಷ ರೂ. |
+15,000 ರೂ. |
ಎಸ್‌ಎಕ್ಸ್ (ಒಪ್ಶನಲ್) ಸಿವಿಟಿ |
18.73 ಲಕ್ಷ ರೂ. |
18.88 ಲಕ್ಷ ರೂ. |
+15,000 ರೂ. |
1.5-ಲೀಟರ್ ಡೀಸೆಲ್ |
|||
ಎಸ್(ಒಪ್ಶನಲ್) ಮ್ಯಾನುಯಲ್ |
15.93 ಲಕ್ಷ ರೂ. |
16.08 ಲಕ್ಷ ರೂ. |
+15,000 ರೂ. |
ಎಸ್(ಒಪ್ಶನಲ್) ಆಟೋಮ್ಯಾಟಿಕ್ |
17.43 ಲಕ್ಷ ರೂ. |
17.58 ಲಕ್ಷ ರೂ. |
+15,000 ರೂ. |
ಎಸ್‌ಎಕ್ಸ್(ಒಪ್ಶನಲ್) ಮ್ಯಾನುಯಲ್ |
18.85 ಲಕ್ಷ ರೂ. |
19 ಲಕ್ಷ ರೂ. |
+15,000 ರೂ. |
ಎಸ್‌ಎಕ್ಸ್ (ಒಪ್ಶನಲ್) ಆಟೋಮ್ಯಾಟಿಕ್ |
20 ಲಕ್ಷ ರೂ. |
20.15 ಲಕ್ಷ ರೂ. |
+15,000 ರೂ. |
ಎಲ್ಲಾ ಬೆಲೆಗಳು ಎಕ್ಸ್‌ಶೋರೂಮ್ ಆಗಿದೆ
2024 ಕ್ರೆಟಾದ ಎಲ್ಲಾ ನೈಟ್ಎಡಿಷನ್‌ನ ಆವೃತ್ತಿಗಳು ಸಾಮಾನ್ಯ ಆವೃತ್ತಿಗಳಿಗಿಂತ 15,000 ರೂ. ನಷ್ಟು ಹೆಚ್ಚಿನ ಬೆಲೆಯಲ್ಲಿ ಬರುತ್ತವೆ.
ಹೊರಭಾಗದಲ್ಲಿ ಕಪ್ಪು ವಿನ್ಯಾಸಗಳು
ಹುಂಡೈ ಕ್ರೆಟಾದ ನೈಟ್ ಎಡಿಷನ್ ಕಪ್ಪು ವಿನ್ಯಾಸದ ಅಂಶಗಳ ಒಂದು ರೇಂಜ್ ಅನ್ನು ಹೊಂದಿದೆ, ಇದು ಅದರ ಸ್ಪೋರ್ಟಿ ಲುಕ್‌ಅನ್ನು ಹೆಚ್ಚಿಸುತ್ತದೆ. ಮುಂಭಾಗವು ಸಂಪೂರ್ಣ ಕಪ್ಪು ಗ್ರಿಲ್ ಮತ್ತು ಸ್ಕಿಡ್ ಪ್ಲೇಟ್ ಅನ್ನು ಒಳಗೊಂಡಿದೆ, ಮ್ಯಾಟ್ ಕಪ್ಪು ಹುಂಡೈ ಲೋಗೋದೊಂದಿಗೆ ಮತ್ತಷ್ಟು ಆಕರ್ಷಕವಾಗಿದೆ. ಬದಿಗಳಲ್ಲಿ, ಕ್ರೆಟಾ ನೈಟ್ ಆವೃತ್ತಿಯು ಸಂಪೂರ್ಣ ಕಪ್ಪಾದ 17-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಕೆಂಪು ಬ್ರೇಕ್ ಕ್ಯಾಲಿಪರ್‌ಗಳು ಮತ್ತು ಕಪ್ಪು ರೂಫ್ ರೇಲ್ಸ್‌ಗಳನ್ನು ಹೊಂದಿದೆ. ಹಿಂಭಾಗದಲ್ಲಿ, ಸ್ಕೀಡ್ ಪ್ಲೇಟ್ ಮತ್ತು ರೂಫ್ ಸ್ಪಾಯ್ಲರ್ ಅನ್ನು ಕಪ್ಪು ಬಣ್ಣದಲ್ಲಿ ಫಿನಿಶ್ ಮಾಡಲಾಗಿದೆ, ಆದರೆ ಟೈಲ್‌ಗೇಟ್ ಲೋಗೊಗಳು ಮ್ಯಾಟ್ ಕಪ್ಪು ಬಣ್ಣವನ್ನು ಪಡೆಯುತ್ತವೆ. ಸುಲಭವಾಗಿ ಗುರುತಿಸಲು ಟೈಲ್‌ಗೇಟ್‌ನಲ್ಲಿ ನೈಟ್ ಆವೃತ್ತಿಯ ಬ್ಯಾಡ್ಜ್ ಕೂಡ ಇದೆ.
ಕಪ್ಪು ಬಣ್ಣದ ಹೊರಭಾಗದ ಕಲರ್‌ನ ಜೊತೆಗೆ, ಕ್ರೆಟಾ ನೈಟ್ ಆವೃತ್ತಿಯು ಟೈಟಾನ್ ಗ್ರೇ ಮ್ಯಾಟ್‌ನಲ್ಲಿ ಹೆಚ್ಚುವರಿ ರೂ 5,000 ಗೆ ಲಭ್ಯವಿದೆ. 15,000 ರೂ.ನಷ್ಟು ಹೆಚ್ಚಿನ ಬೆಲೆಯಲ್ಲಿ ಡ್ಯುಯಲ್-ಟೋನ್ ಫಿನಿಶ್ ಅನ್ನು ನೀಡಲಾಗುತ್ತದೆ.
ಇದನ್ನು ಸಹ ಓದಿ: ಈಗ ಮತ್ತಷ್ಟು ಕಡಿಮೆ ಬೆಲೆಯಲ್ಲಿ Hyundai Auraದ ಡ್ಯುಯಲ್ ಸಿಎನ್‌ಜಿ ಸಿಲಿಂಡರ್ ಆವೃತ್ತಿ ಲಭ್ಯ
ಸಂಪೂರ್ಣ ಕಪ್ಪು ಕ್ಯಾಬಿನ್ ಥೀಮ್
ಡ್ಯಾಶ್‌ಬೋರ್ಡ್ ವಿನ್ಯಾಸವು ಮೊದಲಿನಂತೆಯೇ ಇರುತ್ತದೆ, ಆದರೆ ಕ್ರೆಟಾ ನೈಟ್ ಆವೃತ್ತಿಯು ಡ್ಯಾಶ್‌ಬೋರ್ಡ್ ಮತ್ತು ಸೆಂಟರ್ ಕನ್ಸೋಲ್‌ನ ಸುತ್ತಲೂ ವ್ಯತಿರಿಕ್ತ ಹಿತ್ತಾಳೆಯ ಇನ್ಸರ್ಟ್‌ನೊಂದಿಗೆ ಸಂಪೂರ್ಣ ಕಪ್ಪು ಇಂಟೀರಿಯರ್ ಥೀಮ್ ಅನ್ನು ಪಡೆಯುತ್ತದೆ. ಸೀಟ್‌ಗಳು, ಟ್ರಾನ್ಸ್‌ಮಿಷನ್ ಲಿವರ್ ಮತ್ತು ಸ್ಟೀರಿಂಗ್ ವೀಲ್ ಅನ್ನು ಕಪ್ಪು ಲೆಥೆರೆಟ್‌ನಲ್ಲಿ ಅಳವಡಿಸಲಾಗಿದೆ ಮತ್ತು ಅವು ಹಿತ್ತಾಳೆಯ ಪೈಪಿಂಗ್ ಮತ್ತು ಸ್ಟಿಚ್ಚಿಂಗ್‌ಗಳನ್ನು ಸಹ ಪಡೆಯುತ್ತವೆ. ಕ್ರೆಟಾದ ಈ ಸಂಪೂರ್ಣ-ಕಪ್ಪು ಆವೃತ್ತಿಯಲ್ಲಿ ಮತ್ತೊಂದು ಸ್ವಾಗತಾರ್ಹ ಬದಲಾವಣೆಯು ಮೆಟಲ್ ಫಿನಿಶ್ ಪೆಡಲ್ಸ್ ಆಗಿದೆ.
ಫೀಚರ್‌ಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ
ಹುಂಡೈ ಕ್ರೆಟಾ ನೈಟ್ ಎಡಿಷನ್‌ನಲ್ಲಿ ಯಾವುದೇ ಹೆಚ್ಚುವರಿ ಫೀಚರ್‌ಗಳನ್ನು ನೀಡಲಾಗಿಲ್ಲ. ಅದರ ಸೌಲಭ್ಯಗಳ ಪಟ್ಟಿಯಲ್ಲಿ ಪ್ರಮುಖವಾಗಿ 10.25-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು (ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಡ್ರೈವರ್ ಡಿಸ್‌ಪ್ಲೇಗಾಗಿ), ಡ್ಯುಯಲ್-ಜೋನ್ ಎಸಿ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಮತ್ತು ಪನರೋಮಿಕ್ ಸನ್‌ರೂಫ್ ಅನ್ನು ಒಳಗೊಂಡಿದೆ.
ಪ್ರಯಾಣಿಕರ ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು (ಎಲ್ಲಾ ಅವೃತ್ತಿಗಳಲ್ಲಿ), 360-ಡಿಗ್ರಿ ಕ್ಯಾಮೆರಾ ಮತ್ತು ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಎಮೆರ್ಜೆನ್ಸಿ ಬ್ರೇಕಿಂಗ್ ಸೇರಿದಂತೆ ಮಟ್ಟದ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸಂಪೂರ್ಣ ಸೂಟ್‌ನಿಂದ ಕಾಳಜಿ ವಹಿಸಲಾಗುತ್ತದೆ.
ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳ ಆಯ್ಕೆ
ಕ್ರೆಟಾ ನೈಟ್ ಎಡಿಷನ್ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
115 ಪಿಎಸ್ |
116 ಪಿಎಸ್ |
ಟಾರ್ಕ್ |
144 ಎನ್‌ಎಮ್ |
250 ಎನ್‌ಎಮ್ |
ಟ್ರಾನ್ಸ್‌ಮಿಷನ್ |
6-ಸ್ಪೀಡ್ ಮ್ಯಾನುಯಲ್, ಸಿವಿಟಿ |
6-ಸ್ಪೀಡ್ ಮ್ಯಾನುಯಲ್, 6-ಸ್ಪೀಡ್ AT |
AT - ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಇದನ್ನು 160 ಪಿಎಸ್ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುವುದಿಲ್ಲ. ಆದರೆ, ಗ್ರಾಹಕರು ಕ್ರೆಟಾ ಎನ್ ಲೈನ್ ರೂಪದಲ್ಲಿ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಸ್ಪೋರ್ಟಿಯರ್-ಕಾಣುವ ಕ್ರೆಟಾವನ್ನು ಆಯ್ಕೆ ಮಾಡಬಹುದು.
ಬೆಲೆ ರೇಂಜ್ ಮತ್ತು ಪ್ರತಿಸ್ಪರ್ಧಿಗಳು
ದೆಹಲಿಯಲ್ಲಿ ಹ್ಯುಂಡೈ ಕ್ರೆಟಾದ ಬೆಲೆಗಳು 11 ಲಕ್ಷ ರೂ.ನಿಂದ 20.15 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ) ಇರುತ್ತದೆ. ಇದು ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ವೋಕ್ಸ್‌ವ್ಯಾಗನ್ ಟೈಗುನ್, ಹೋಂಡಾ ಎಲಿವೇಟ್ ಮತ್ತು ಎಂಜಿ ಆಸ್ಟರ್‌ಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ : ಕ್ರೇಟಾ ಆನ್‌ರೋಡ್ ಬೆಲೆ