• English
  • Login / Register

ಹೊಸ 2024 Hyundai Creta ಮತ್ತು ಹಳೆ ಹ್ಯುಂಡೈ ಕ್ರೆಟಾ: ಪ್ರಮುಖ ವ್ಯತ್ಯಾಸಗಳ ವಿವರ ಇಲ್ಲಿದೆ..

ಹುಂಡೈ ಕ್ರೆಟಾ ಗಾಗಿ ansh ಮೂಲಕ ಜನವರಿ 22, 2024 02:15 pm ರಂದು ಪ್ರಕಟಿಸಲಾಗಿದೆ

  • 84 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಅಪ್ಡೇಟ್ ನೊಂದಿಗೆ, ಹ್ಯುಂಡೈ ಕ್ರೆಟಾ ಹೊಚ್ಚ ಹೊಸ ಡಿಸೈನ್, ಅಪ್ಡೇಟ್ ಆಗಿರುವ ಕ್ಯಾಬಿನ್ ಮತ್ತು ಸಾಕಷ್ಟು ಹೊಸ ಫೀಚರ್ ಗಳನ್ನು ಪಡೆಯುತ್ತದೆ

Hyundai Creta: New vs Old

ಎರಡನೇ ಜನರೇಷನ್ ನ ಹ್ಯುಂಡೈ ಕ್ರೆಟಾಗೆ ಈಗ ಭಾರತದಲ್ಲಿ ಫೇಸ್‌ಲಿಫ್ಟ್ ನೀಡಲಾಗಿದೆ. ಹ್ಯುಂಡೈ ತನ್ನ ಸ್ಟಾರ್ SUV ಅನ್ನು ಬಹಳಷ್ಟು ಅಪ್ಡೇಟ್ ನೊಂದಿಗೆ ನೀಡುತ್ತಿದೆ ಮತ್ತು ಎಲ್ಲಾ ಭಾಗಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಈ ಅಪ್ಡೇಟ್ ಅದರ ಎರಡನೇ ಜನರೇಷನ್ ಪ್ರಾರಂಭವಾದ 3 ವರ್ಷಗಳ ನಂತರ ಬಂದಿದೆ ಮತ್ತು ಈ ವಿವರವಾದ ಲೇಖನದಲ್ಲಿ ಕಾಂಪ್ಯಾಕ್ಟ್ SUV ಎಷ್ಟು ಬದಲಾಗಿದೆ ಎಂಬುದನ್ನು ನಿಮಗೆ ವಿವರಿಸಲಾಗಿದೆ.

 ಮುಂಭಾಗ

2024 Hyundai Creta Front
Pre-facelift Hyundai Creta Front

 2020 ರಲ್ಲಿ ಬಿಡುಗಡೆಯಾದ ಹಿಂದಿನ ವರ್ಷನ್ ಗೆ ಹೋಲಿಸಿದರೆ ಹೊಸ ಕ್ರೆಟಾದ ಫೆಸಿಯವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಹೊಸ ಕ್ರೆಟಾ ಹೊಸ ಗ್ರಿಲ್‌ನೊಂದಿಗೆ ಫ್ಲಾಟ್ ಆಗಿರುವ ಫ್ರಂಟ್ ಪ್ರೊಫೈಲ್ ಅನ್ನು ಹೊಂದಿದೆ (ಹ್ಯುಂಡೈ ವೆನ್ಯೂನಲ್ಲಿರುವಂತೆಯೇ). ಇದು ಅಗಲವಾದ DRL ಗಳನ್ನು ಮತ್ತು ಲಂಬವಾಗಿ ಇರಿಸಲಾದ ಆಯತಾಕಾರದ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ. ಮುಂಭಾಗದ ಬಂಪರ್ ಅನ್ನು ಹೆಚ್ಚಿನ ಬುಚ್ ಲುಕ್‌ಗಾಗಿ ರೀಡಿಸೈನ್ ಗೊಳಿಸಲಾಗಿದೆ.

 ಇದನ್ನು ಕೂಡ ಓದಿ: 5 ಚಿತ್ರಗಳಲ್ಲಿ ಹೊಸ ಹುಂಡೈ ಕ್ರೆಟಾ E ಬೇಸ್ ವೇರಿಯಂಟ್ ನ ಪ್ರಮುಖ ವಿವರಗಳನ್ನು ನೋಡಿ

 ಹಳೆಯ ಕ್ರೆಟಾದಲ್ಲಿ, ಮುಂಭಾಗದ ಪ್ರೊಫೈಲ್ ಹೆಚ್ಚು ಕರ್ವಿ ಡಿಸೈನ್ ಅನ್ನು ಹೊಂದಿತ್ತು, ಬಾನೆಟ್ ಮೇಲೆ ಚೂಪಾದ ಗೆರೆಗಳು ಇದ್ದವು. ಇದರ ತ್ರಿಕೋನಾಕಾರದ ಹೆಡ್‌ಲ್ಯಾಂಪ್ ಯೂನಿಟ್ ಗಳು ಬಹು-ಭಾಗದ LED DRLಗಳಿಂದ ಕವರ್ ಆಗಿತ್ತು ಮತ್ತು ಬಂಪರ್ ಮತ್ತು ಸ್ಕಿಡ್ ಪ್ಲೇಟ್ ಸ್ಲೀಕ್ ಆಗಿದ್ದವು.

 

ಸೈಡ್

2024 Hyundai Creta Side
Pre-facelift Hyundai Creta Side

 ಪ್ರೊಫೈಲ್ ನಲ್ಲಿ ಬಹಳಷ್ಟು ಬದಲಾವಣೆಯಾಗಿಲ್ಲ. ಹೊಸ ಕ್ರೆಟಾ ಅದೇ ಸಿಲೂಯೆಟ್ ಅನ್ನು ಹೊಂದಿದೆ ಮತ್ತು ವಿಂಡೋ ಲೈನ್‌ಗಳು ಕೂಡ ಅದೇ ಆಗಿವೆ. ಹೊಸ ಕ್ರೆಟಾ ತನ್ನ ಹಳೆ ವರ್ಷನ್ ನಲ್ಲಿ ಇರುವ ಅದೇ C-ಪಿಲ್ಲರ್ ಫಿನಿಷ್ ಅನ್ನು ಪಡೆಯುತ್ತದೆ.

2024 Hyundai Creta Alloy Wheels
Pre-facelift Hyundai Creta Alloy Wheels

 ಆದರೆ, ಇಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗಿದ್ದು, 17 ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಸ್ ಈಗ ಸಂಪೂರ್ಣ ಹೊಸ ಡಿಸೈನ್ ಅನ್ನು ಪಡೆದಿದೆ. ಅಲ್ಲದೇ ವೃತ್ತಾಕಾರವಾಗಿದ್ದ ಫ್ಯುಯಲ್ ಕ್ಯಾಪ್ ಲಿಡ್ ಈಗ ಚೌಕಾಕಾರವಾಗಿದೆ.

 ಹಿಂಭಾಗ

2024 Hyundai Creta Rear
Pre-facelift Hyundai Creta Rear

 ಕ್ರೆಟಾದ ಹಿಂಭಾಗವನ್ನು ಸಂಪೂರ್ಣವಾಗಿ ರೀಡಿಸೈನ್ ಮಾಡಲಾಗಿದೆ. ಇದು ಮುಂಭಾಗದಲ್ಲಿ ಇರುವಂತೆಯೇ ನೇರ ರೇಖೆಗಳೊಂದಿಗೆ ಫ್ಲಾಟ್ ಆಗಿರುವ ಹಿಂಭಾಗವನ್ನು ಪಡೆಯುತ್ತದೆ. ಇಲ್ಲಿ ದೊಡ್ಡ ಬದಲಾವಣೆಯೆಂದರೆ ಕನೆಕ್ಟೆಡ್ LED ಟೈಲ್ ಲೈಟ್‌ಗಳು. ಇದರ ಹಿಂದಿನ ವರ್ಷನ್ ನಲ್ಲಿ ಅದರ ಟೈಲ್‌ಲ್ಯಾಂಪ್‌ಗಳು ಪ್ರಿ-ಫೇಸ್‌ಲಿಫ್ಟ್ ಹೆಡ್‌ಲೈಟ್‌ಗಳು ಮತ್ತು DRL ಗಳ ಸ್ಪ್ಲಿಟ್ ಡಿಸೈನ್ ಆಗಿತ್ತು.

 ಇದನ್ನು ಕೂಡ ಓದಿ: 2024 ಹ್ಯುಂಡೈ ಕ್ರೆಟಾ ಭಾರತದಲ್ಲಿ ಬಿಡುಗಡೆಯಾಗಬಹುದಾದ ಮುಂದಿನ N ಲೈನ್ ಮಾಡೆಲ್ ಆಗಿರಬಹುದು

 ಹೊಸ ಕ್ರೆಟಾ ಡಿಸೈನ್ ಹೊಂದಿರುವ ಬಂಪರ್ ಅನ್ನು ಕೂಡ ಪಡೆಯುತ್ತದೆ ಮತ್ತು ಇದು ಈಗ ಹಿಂಭಾಗದ ಸ್ಕಿಡ್ ಪ್ಲೇಟ್‌ನೊಂದಿಗೆ ಬರುತ್ತದೆ.

 

 ಡ್ಯಾಶ್‌ಬೋರ್ಡ್

2024 Hyundai Creta Dashboard
Pre-facelift Hyundai Creta Dashboard

 2024 ರ ಫೇಸ್‌ಲಿಫ್ಟ್‌ನೊಂದಿಗೆ ಕ್ರೆಟಾದ ಡ್ಯಾಶ್‌ಬೋರ್ಡ್ ಅನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಇದು ಈಗ ಲೇಯರ್ಡ್ ಎಲಿಮೆಂಟ್ ನೊಂದಿಗೆ ಡ್ಯುಯಲ್-ಟೋನ್ ಬ್ಲಾಕ್ ಮತ್ತು ಗ್ರೇ ಥೀಮ್‌ನಲ್ಲಿ ಬರುತ್ತದೆ. ಹಳೆಯ ವರ್ಷನ್ ಎರಡು ಕ್ಯಾಬಿನ್ ಥೀಮ್‌ಗಳನ್ನು ಹೊಂದಿತ್ತು: ಆಲ್ ಬ್ಲಾಕ್, ಮತ್ತು ಬೀಜ್ ಜೊತೆಗೆ ಬ್ಲಾಕ್.

2024 Hyundai Creta Screens
Pre-facelift Hyundai Creta Screens

 ಹೊಸ ಕ್ರೆಟಾದಲ್ಲಿನ ದೊಡ್ಡ ಬದಲಾವಣೆಯೆಂದರೆ ಹೊಸ ಸ್ಕ್ರೀನ್ ಸೆಟಪ್. ಹಳೆಯ SUV ನಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಮತ್ತು 7-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇತ್ತು, ಇದನ್ನು ಈಗ ಡ್ಯುಯಲ್-ಇಂಟಿಗ್ರೇಟೆಡ್ 10.25-ಇಂಚಿನ ಡಿಸ್ಪ್ಲೇಗಳೊಂದಿಗೆ ಬದಲಾಯಿಸಲಾಗಿದೆ (ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಡ್ರೈವರ್ ಡಿಸ್ಪ್ಲೇ).

2024 Hyundai Creta Centre Console
Pre-facelift Hyundai Creta Centre Console

 ಮತ್ತೊಂದು ಬದಲಾವಣೆಯು ಹೊಸ ಸೆಂಟರ್ ಕನ್ಸೋಲ್ ನಲ್ಲಿ ಮಾಡಲಾಗಿದೆ, ಅದು ಈಗ ಗ್ಲಾಸ್ ಬ್ಲ್ಯಾಕ್ ಫಿನಿಶ್‌ನಲ್ಲಿ ಬರುತ್ತದೆ ಮತ್ತು ಇದರಲ್ಲಿ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಗಾಗಿ ಕಂಟ್ರೋಲ್ ಗಳನ್ನು ಹೊಂದಿದೆ.

 

 ಸೀಟುಗಳು

2024 Hyundai Creta Front Seats
Pre-facelift Hyundai Creta Front Seats

 ಹ್ಯುಂಡೈ ಸೀಟುಗಳನ್ನು ಕೂಡ ರೀಡಿಸೈನ್ ಮಾಡಿದೆ. ಹಳೆಯ ಕ್ರೆಟಾವು ಕ್ಯಾಬಿನ್ ಥೀಮ್‌ಗೆ ಅನುಗುಣವಾಗಿ ಬ್ಲಾಕ್ ಅಥವಾ ಬೀಜ್ ಸೀಟ್‌ಗಳನ್ನು ಹೊಂದಿತ್ತು, ಆದರೆ ಹೊಸ ಕ್ರೆಟಾವು ಡ್ಯುಯಲ್-ಟೋನ್ ಬ್ಲಾಕ್ ಮತ್ತು ಗ್ರೇ ಬಣ್ಣದ ಲೆಥೆರೆಟ್ ಸೀಟ್‌ಗಳೊಂದಿಗೆ ವಿಭಿನ್ನ ಡಿಸೈನ್ ನೊಂದಿಗೆ ಬರುತ್ತದೆ.

2024 Hyundai Creta Rear Seats
Pre-facelift Hyundai Creta Rear Seats

 ಹಿಂದಿನ ಸೀಟುಗಳು ಕೂಡ ಮುಂಭಾಗದ ಸೀಟ್‌ಗಳಂತೆಯೇ ಅದೇ ಬದಲಾವಣೆಗಳನ್ನು ಪಡೆಯುತ್ತವೆ

2024 Hyundai Creta Panoramic Sunroof
Pre-facelift Hyundai Creta Panoramic Sunroof

 ಇದು ಪನೋರಮಿಕ್ ಸನ್‌ರೂಫ್ ಅನ್ನು ಮುಂದುವರಿಸಿದೆ ಆದರೆ ಲೈಟರ್ ಆಗಿರುವ ಕ್ಯಾಬಿನ್ ಥೀಮ್ ಇದರ ಕ್ಯಾಬಿನ್ ಅನ್ನು ಪ್ರೀ-ಫೇಸ್‌ಲಿಫ್ಟ್ ಕ್ರೆಟಾಕ್ಕಿಂತ ಒಳಗೆ ಹೆಚ್ಚು ಜಾಗವಿರುವಂತೆ ಮಾಡುತ್ತದೆ.

 

 ಬೆಲೆ

2024 Hyundai Creta
2024 Hyundai Creta

 ಎಕ್ಸ್ ಶೋರೂಂ ಬೆಲೆ

 2024 ಹ್ಯುಂಡೈ ಕ್ರೆಟಾ

 ಪ್ರೀ ಫೇಸ್ ಲಿಫ್ಟ್ ಹ್ಯುಂಡೈ ಕ್ರೆಟಾ

 ರೂ 11 ಲಕ್ಷದಿಂದ 20 ಲಕ್ಷ 

 ರೂ 10.87 ಲಕ್ಷದಿಂದ 19.20 ಲಕ್ಷ

 ಹ್ಯುಂಡೈ ಕ್ರೆಟಾದ ಬೆಲೆಗಳನ್ನು ಟಾಪ್-ಸ್ಪೆಕ್ ವೇರಿಯಂಟ್ ಗೆ ರೂ.80,000 ಗಳಷ್ಟು ಹೆಚ್ಚಿಸಲಾಗಿದೆ. ಬೇಸ್-ಸ್ಪೆಕ್ ವೇರಿಯಂಟ್ ಕೂಡ ರೂ.13,000 ಗಳಷ್ಟು ದುಬಾರಿಯಾಗಿದೆ. ಹೊಸ ಕ್ರೆಟಾದ ಬೆಲೆಗಳು ಪರಿಚಯಾತ್ಮಕವಾಗಿವೆ ಮತ್ತು ಮುಂಬರುವ ತಿಂಗಳುಗಳಲ್ಲಿ ಹೆಚ್ಚಿಸಲಾಗುವುದು ಎಂಬುದನ್ನು ಗಮನಿಸಬೇಕು. 2024 ಕ್ರೆಟಾ ಕುರಿತು ಸ್ಪೆಸಿಫಿಕೇಷನ್ ಗಳು, ವೇರಿಯಂಟ್-ವಾರು ಬೆಲೆಗಳು ಮತ್ತು ಫೀಚರ್ ಗಳಂತಹ ಮಿಕ್ಕಿದ ವಿವರಗಳನ್ನು ನೀವು ಇಲ್ಲಿ ನೋಡಬಹುದು.

ಇನ್ನಷ್ಟು ಓದಿ: ಕ್ರೆಟಾ ಆನ್ ರೋಡ್ ಬೆಲೆ

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai ಕ್ರೆಟಾ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience