• English
  • Login / Register

2024 Maruti Dzire ಬಿಡುಗಡೆ, 33.73 ಕಿ.ಮೀ ಮೈಲೇಜ್‌, ಬೆಲೆಗಳು 6.79 ಲಕ್ಷ ರೂ.ನಿಂದ ಪ್ರಾರಂಭ

ಮಾರುತಿ ಡಿಜೈರ್ ಗಾಗಿ shreyash ಮೂಲಕ ನವೆಂಬರ್ 11, 2024 03:00 pm ರಂದು ಪ್ರಕಟಿಸಲಾಗಿದೆ

  • 166 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ವಿನ್ಯಾಸ ಮತ್ತು ಎಂಜಿನ್‌ನ ಹೊರತಾಗಿ, 2024 ಡಿಜೈರ್ ಈ ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ ನೀಡಲಾಗುತ್ತಿರುವ ಸಿಂಗಲ್-ಪೇನ್ ಸನ್‌ರೂಫ್ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಫೀಚರ್‌ಗಳೊಂದಿಗೆ ಬರುತ್ತದೆ

2024 Maruti Dzire Launched, Prices Start From Rs 6.79 Lakh

  • ಹೊರಭಾಗದ ಹೈಲೈಟ್‌ಗಳಲ್ಲಿ ಹೊಸ ಎಲ್‌ಇಡಿ ಲೈಟಿಂಗ್ ಸೆಟಪ್ ಮತ್ತು 15-ಇಂಚಿನ ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳನ್ನು ಒಳಗೊಂಡಿವೆ.

  • ಒಳಭಾಗದಲ್ಲಿ, ಇದು ಸ್ವಿಫ್ಟ್-ಪ್ರೇರಿತ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯುತ್ತದೆ ಆದರೆ ಕಪ್ಪು ಮತ್ತು ಬೀಜ್ ಇಂಟಿರೀಯರ್‌ ಥೀಮ್ ಅನ್ನು ಹೊಂದಿದೆ.

  • 9-ಇಂಚಿನ ಟಚ್‌ಸ್ಕ್ರೀನ್, ಆಟೋ ಎಸಿ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಸೌಕರ್ಯಗಳೊಂದಿಗೆ ಬರುತ್ತದೆ.

  • ಸುರಕ್ಷತಾ ಫೀಚರ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಸೇರಿವೆ.

  • 5-ಸ್ಪೀಡ್ ಮ್ಯಾನುವಲ್‌ ಮತ್ತು ಎಎಮ್‌ಟಿ ಆಯ್ಕೆಗಳೊಂದಿಗೆ ಹೊಸ 1.2-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಡೆಸಲ್ಪಡುತ್ತಿದೆ.

  • 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾದ ಕಡಿಮೆ ಔಟ್‌ಪುಟ್ (70 ಪಿಎಸ್‌/102 ಎನ್‌ಎಮ್‌) ಜೊತೆಗೆ ಒಪ್ಶನಲ್‌ ಸಿಎನ್‌ಜಿ ಪವರ್‌ಟ್ರೇನ್ ಅನ್ನು ಸಹ ಪಡೆಯಿರಿ.

  • ಭಾರತದಾದ್ಯಂತ ಇದರ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆ 6.79 ಲಕ್ಷ ರೂ.ನಿಂದ 10.14 ಲಕ್ಷ ರೂ.ವರೆಗೆ ಇರಲಿದೆ.

  • ತಿಂಗಳಿಗೆ ರೂ 18,248 ರಿಂದ ಪ್ರಾರಂಭವಾಗುವ ಯೋಜನೆಗಳೊಂದಿಗೆ ಮಾಸಿಕ ಚಂದಾದಾರಿಕೆಯಲ್ಲಿ ಸಹ ಲಭ್ಯವಿದೆ.

2024 ರ ಮಾರುತಿ ಡಿಜೈರ್ ಅನ್ನು ಕಳೆದ ವಾರವಷ್ಟೇ ಅನಾವರಣಗೊಳಿಸಲಾಯಿತು ಮತ್ತು ಈಗ ವಾಹನ ತಯಾರಕರು ಅದರ ಬೆಲೆಗಳನ್ನು ಬಹಿರಂಗಪಡಿಸಿದ್ದಾರೆ, ಭಾರತದಾದ್ಯಂತ ಇದರ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆ ರೂ 6.79 ಲಕ್ಷದಿಂದ ಪ್ರಾರಂಭವಾಗುತ್ತದೆ. ಮಾರುತಿಯು ಹೊಸ ಡಿಜೈರ್ ಅನ್ನು LXi, VXi, ZXi, ಮತ್ತು ZXi Plus ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡುತ್ತದೆ ಮತ್ತು ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಗಳಲ್ಲಿ ಇದು ಲಭ್ಯವಿದೆ. 2024 ರ ಡಿಜೈರ್‌ನ ವೇರಿಯಂಟ್-ವಾರು ಬೆಲೆಗಳನ್ನು ನೋಡೋಣ.

ವೇರಿಯೆಂಟ್‌

ಬೆಲೆ

ಪೆಟ್ರೋಲ್‌ ಮ್ಯಾನುವಲ್‌

LXi

6.79 ಲಕ್ಷ ರೂ.

VXi

7.79 ಲಕ್ಷ ರೂ.

ZXi

  8.89 ಲಕ್ಷ ರೂ.

ZXi Plus

9.69 ಲಕ್ಷ ರೂ.

ಪೆಟ್ರೋಲ್‌ ಎಎಮ್‌ಟಿ

VXi AMT

8.24 ಲಕ್ಷ ರೂ.

ZXi AMT

9.34 ಲಕ್ಷ ರೂ.

ZXi Plus AMT

10.14 ಲಕ್ಷ ರೂ.

ಸಿಎನ್‌ಜಿ

VXi CNG

8.74 ಲಕ್ಷ ರೂ.

ZXi CNG

9.84 ಲಕ್ಷ ರೂ.

ಎಲ್ಲಾ ಬೆಲೆಗಳು ಭಾರತದಾದ್ಯಂತ ಪರಿಚಯಾತ್ಮಕ, ಎಕ್ಸ್ ಶೋರೂಂ ಆಗಿದೆ

ಈ ಬೆಲೆಗಳು 2024 ರ ಅಂತ್ಯದವರೆಗೆ ಮಾತ್ರ ಮಾನ್ಯವಾಗಿರುತ್ತವೆ ಎಂಬುದನ್ನು ಗಮನಿಸಬೇಕು. ಮಾರುತಿಯು ಚಂದಾದಾರಿಕೆಯ ಆಧಾರದ ಮೇಲೆ ಡಿಜೈರ್ ಅನ್ನು ಸಹ ನೀಡುತ್ತಿದೆ, ಯೋಜನೆಗಳು ತಿಂಗಳಿಗೆ ರೂ 18,248 ರಿಂದ ಪ್ರಾರಂಭವಾಗುತ್ತವೆ. ಇದು ರಿಜಿಸ್ಟ್ರೇಶನ್‌, ಮೆಂಟೈನೆನ್ಸ್‌, ಇನ್ಶೂರೆನ್ಸ್‌ ಮತ್ತು ರೋಡ್‌ಸೈಡ್‌ ಅಸಿಸ್ಟೆನ್ಸ್‌ ಅನ್ನು ಒಳಗೊಂಡಿರುತ್ತದೆ.

ಡಿಸೈನ್‌

2024 Maruti Dzire Launched, Prices Start From Rs 6.79 Lakh

2024 ಡಿಜೈರ್ ಈಗ ಅದರ ಹ್ಯಾಚ್‌ಬ್ಯಾಕ್ ಪ್ರತಿರೂಪವಾದ ಸ್ವಿಫ್ಟ್‌ಗಿಂತ ಸಂಪೂರ್ಣವಾಗಿ ವಿಭಿನ್ನವಾಗಿದೆ. ಪ್ರಮುಖ ವಿನ್ಯಾಸದ ಫಿಚರ್‌ಗಳು ಸಮತಲವಾದ ಸ್ಲ್ಯಾಟ್‌ಗಳೊಂದಿಗೆ ಪ್ರಮುಖ ಗ್ರಿಲ್, ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಹೊಸ ಹೆಡ್‌ಲೈಟ್‌ಗಳು ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ 15-ಇಂಚಿನ ಅಲಾಯ್‌ ವೀಲ್‌ಗಳನ್ನು ಒಳಗೊಂಡಿವೆ. ಹಿಂಭಾಗವು ಈಗ Y-ಆಕಾರದ ಎಲ್ಇಡಿ ಲೈಟಿಂಗ್ ಅಂಶಗಳೊಂದಿಗೆ ಹೊಸ ಟೈಲ್ ಲೈಟ್‌ಗಳನ್ನು ಸಂಯೋಜಿಸುತ್ತದೆ.

ಕ್ಯಾಬಿನ್‌ ಮತ್ತು ಫೀಚರ್‌ಗಳು

2024 Maruti Dzire Launched, Prices Start From Rs 6.79 Lakh

ಒಳಭಾಗದಲ್ಲಿ, ಸ್ವಿಫ್ಟ್‌ನಂತೆಯೇ ಅದೇ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಇತ್ತೀಚಿನ ಜನರೇಶನ್‌ನ ಡಿಜೈರ್ ಪಡೆಯುತ್ತದೆ. ಹಾಗೆಯೇ, ಇದು ಡ್ಯಾಶ್‌ಬೋರ್ಡ್‌ನಲ್ಲಿ ಫೇಕ್‌ ವುಡನ್‌ ಇನ್ಸರ್ಟ್ಸ್‌ನೊಂದಿಗೆ ಕಪ್ಪು ಮತ್ತು ಬೀಜ್ ಇಂಟಿರಿಯರ್ ಥೀಮ್ ಅನ್ನು ಪಡೆಯುತ್ತದೆ.

ಫೀಚರ್‌ಗಳ ವಿಷಯದಲ್ಲಿ, ಹೊಸ ಡಿಜೈರ್ 9-ಇಂಚಿನ ಟಚ್‌ಸ್ಕ್ರೀನ್, ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಸೌಕರ್ಯಗಳೊಂದಿಗೆ ಬರುತ್ತದೆ. ಇದು ಸಿಂಗಲ್ ಪೇನ್ ಸನ್‌ರೂಫ್‌ನೊಂದಿಗೆ ಬರುತ್ತಿರುವ ಭಾರತದ ಮೊದಲ ಸಬ್‌ಕಾಂಪ್ಯಾಕ್ಟ್ ಸೆಡಾನ್ ಆಗಿದೆ. ಪ್ರಯಾಣಿಕರ ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ನಂತೆ), 360-ಡಿಗ್ರಿ ಕ್ಯಾಮೆರಾ (ಸೆಗ್ಮೆಂಟ್‌ನಲ್ಲಿ ಮೊದಲು), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ನೋಡಿಕೊಳ್ಳುತ್ತವೆ.

ಪವರ್‌ಟ್ರೈನ್‌ ಆಯ್ಕೆಗಳು

2024ರ ಡಿಜೈರ್ ಹೊಸ 1.2-ಲೀಟರ್ 3 ಸಿಲಿಂಡರ್ Z ಸಿರೀಸ್‌ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ, ಇದನ್ನು ಹೊಸ ಸ್ವಿಫ್ಟ್‌ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1.2-ಲೀಟರ್ 3 ಸಿಲಿಂಡರ್ Z ಸಿರೀಸ್‌ ಪೆಟ್ರೋಲ್ ಎಂಜಿನ್

1.2-ಲೀಟರ್ 3 ಸಿಲಿಂಡರ್ Z ಸಿರೀಸ್‌ ಪೆಟ್ರೋಲ್-CNG

ಪವರ್‌

82 ಪಿಎಸ್‌

70 ಪಿಎಸ್‌

ಟಾರ್ಕ್‌

112 ಎನ್‌ಎಮ್‌

102 ಎನ್‌ಎಮ್‌

ಟ್ರಾನ್ಸ್‌ಮಿಷನ್‌

5-ಸ್ಪೀಡ್‌ ಮ್ಯಾನುವಲ್‌, 5-ಸ್ಪೀಡ್‌ ಎಎಮ್‌ಟಿ

5-ಸ್ಪೀಡ್‌ ಮ್ಯಾನುವಲ್‌

ಕ್ಲೈಮ್‌ ಮಾಡಲಾದ ಇಂಧನ ದಕ್ಷತೆ

ಪ್ರತಿ ಲೀ.ಗೆ 24.79 ಕಿ.ಮೀ. (MT), ಪ್ರತಿ ಲೀ.ಗೆ 25.71  ಕಿ.ಮೀ. (AMT)

ಪ್ರತಿ ಕೆ.ಜಿ.ಗೆ 33.73 ಕಿಮೀ 

ಪ್ರತಿಸ್ಪರ್ಧಿಗಳು

 2024 ರ ಮಾರುತಿ ಡಿಜೈರ್ ಹೊಸ ಜನರೇಶನ್‌ನ ಹೋಂಡಾ ಅಮೇಜ್, ಟಾಟಾ ಟಿಗೋರ್ ಮತ್ತು ಹ್ಯುಂಡೈ ಔರಾದೊಂದಿಗೆ ತನ್ನ ಪೈಪೋಟಿಯನ್ನು ಮುಂದುವರಿಸುತ್ತದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಡಿಜೈರ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience