ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ 2024ರ ಮಾರುತಿ ಸ್ವಿಫ್ಟ್, ಹೊಸ ವಿನ್ಯಾಸದ ವಿವರಗಳ ಬಹಿರಂಗ
ಮಾರುತಿ ಸ್ವಿಫ್ಟ್ 2021-2024 ಗಾಗಿ shreyash ಮೂಲಕ ನವೆಂಬರ್ 07, 2023 11:37 am ರಂದು ಪ್ರಕಟಿಸಲಾಗಿದೆ
- 28 Views
- ಕಾಮೆಂಟ್ ಅನ್ನು ಬರೆಯಿರಿ
ನಾಲ್ಕನೇ ತಲೆಮಾರಿನ ಮಾರುತಿ ಸ್ಪಿಫ್ಟ್ ಕಾರು ತನ್ನ ಪರಿಕಲ್ಪನೆಯ ರೂಪದಲ್ಲಿ ಕಂಡು ಬಂದಿದ್ದು, ವಿನ್ಯಾಸದಲ್ಲಿ ಸಮಗ್ರ ಬದಲಾವಣೆಗಳನ್ನು ಮಾಡಲಾಗಿದೆ
- ಹೊಸ ಮಾರುತಿ ಸ್ವಿಫ್ಟ್ ಕಾರು ಹೊಸ ದುಂಡಗಿನ ಗ್ರಿಲ್ ವಿನ್ಯಾಸವನ್ನು ಪಡೆಯಲಿದೆ.
- LED ಫಾಗ್ ಲ್ಯಾಂಪ್ ಗಳು ಸೇರಿದಂತೆ ಸಂಪೂರ್ಣ LED ಹೆಡ್ ಲೈಟ್ ವ್ಯವಸ್ಥೆಯನ್ನು ಹೊಂದಿರಲಿದೆ.
- ಈ ಹ್ಯಾಚ್ ಬ್ಯಾಕ್ ಕಾರಿನ ಪರೀಕ್ಷಾರ್ಥ ವಾಹನದಲ್ಲಿ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ವೈಶಿಷ್ಟ್ಯವೂ ಕಾಣಿಸಿಕೊಂಡಿದೆ.
- ಮಾರುತಿ ಬಲೇನೋ ಮತ್ತು ಫ್ರಾಂಕ್ಸ್ ಕಾರುಗಳ ಒಳಾಂಗಣವೇ ಇದರಲ್ಲಿ ಕಾಣಿಸಿಕೊಳ್ಳಲಿದೆ.
- ಭಾರತದಲ್ಲಿ ಅದೇ 1.2 ಲೀಟರ್ ಪೆಟ್ರೋಲ್ ನ ಪರಿಷ್ಕೃತ ಆವೃತ್ತಿಯೊಂದಿಗೆ ಇದು ರಸ್ತೆಗಿಳಿಯಲಿದೆ.
- ಇದು 2024ರ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಜಪಾನ್ ಮೊಬಿಲಿಟಿ ಶೋ 2023ರಲ್ಲಿ ಪರಿಕಲ್ಪನೆಯು ಅನಾವರಣಗೊಂಡ ಕೆಲವೇ ದಿನಗಳಲ್ಲಿ ಮಾರುತಿ ಸ್ವಿಫ್ಟ್ ಕಾರಿನ ಪರೀಕ್ಷಾರ್ಥ ವಾಹನವು ಸಾಕಷ್ಟು ಮರೆಮಾಚಿದ ರೀತಿಯಲ್ಲಿ ಕಾಣಿಸಿಕೊಂಡಿದೆ. ಭಾರತದಲ್ಲಿ ರಸ್ತೆಗಿಳಿಯಲಿರುವ ಹೊಸ ಸ್ಪೈ ಶಾಟ್ ಗಳು ಹೊಸ ವಿನ್ಯಾಸವನ್ನು ಬಹಿರಂಗಪಡಿಸಿದ್ದು, ಜಪಾನಿನಲ್ಲಿ ಪ್ರದರ್ಶಿಸಿದ, ಉತ್ಪಾದನೆಗೆ ಸಿದ್ಧವಾಗಿರುವ ಪರಿಕಲ್ಪನೆಯನ್ನು ಇದು ಹೋಲುತ್ತದೆ. ಈ ಸ್ಪೈ ಶಾಟ್ ಗಳತ್ತ ಗಮನ ಹರಿಸೋಣ.
ಹೊಸ ಗ್ರಿಲ್ ಮತ್ತು ಲೈಟಿಂಗ್ ವ್ಯವಸ್ಥೆ
ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್ ವಾಹನವು LED ಫಾಗ್ ಲ್ಯಾಂಪ್ ಗಳು ಸೇರಿದಂತೆ ಪರಿಷ್ಕೃತ LED ಹೆಡ್ ಲೈಟ್ ವ್ಯವಸ್ಥೆಯೊಂದಿಗೆ ದುಂಡಗಿನ ಗ್ರಿಲ್ ಅನ್ನು ಹೊಂದಿದೆ. ಮುಂದಿನ ಬಂಪರ್ ಕಾಣಿಸಿಕೊಳ್ಳದೆ ಇದ್ದರೂ, ಇದರ ವಿನ್ಯಾಸದಲ್ಲಿಯೂ ಬದಲಾವಣೆಯನ್ನು ಮಾಡಲಾಗಿದೆ ಎನ್ನಲಾಗಿದೆ.
ಕಾರ್ ದೇಖೊ ಮೂಲಕ ನಿಮ್ಮ ಬಾಕಿ ಇರುವ ಚಲನ್ ಗಳನ್ನು ಪಾವತಿಸಿರಿ
ಪ್ರೊಫೈಲ್ ವಿಚಾರದಲ್ಲಿ ಹೇಳುವುದಾದರೆ, ಇದು ಈಗಿನ ತಲೆಮಾರಿನ ಸ್ವಿಫ್ಟ್ ಕಾರನ್ನು ಹೋಲುತ್ತಿದ್ದರೂ, ಹೊಸ ವಾಹನವು ಸಂಪೂರ್ಣ ಕಪ್ಪು ಬಣ್ಣದ ಅಲೋಯ್ ವೀಲ್ ಗಳನ್ನು ಹೊಂದಿರುವುದನ್ನು ಸ್ಪೈ ಶಾಟ್ ಗಳು ಬಹಿರಂಗಪಡಿಸಿವೆ. ಡೋರ್ ಹ್ಯಾಂಡಲ್ ನ ಸ್ಥಾನವನ್ನು ಸಹ ಇದರಲ್ಲಿ ಬದಲಾಯಿಸಲಾಗಿದೆ. ಈಗ ಇರುವ ಸ್ವಿಫ್ಟ್ ಕಾರಿನಲ್ಲಿ ಇದು C-ಪಿಲ್ಲರ್ ನಲ್ಲಿ ಇದ್ದರೆ ಹೊಸ ವಾಹನದಲ್ಲಿ ಇದನ್ನು ಹಿಂಭಾಗದ ಬಾಗಿಲಿನ ಪಕ್ಕ ತರಲಾಗಿದೆ. ಹಿಂಭಾಗದಲ್ಲಿ ಹೊಸ ಸ್ವಿಫ್ಟ್ ಕಾರು ಪರಿಷ್ಕೃತ ಟೇಲ್ ಗೇಟ್ ಮತ್ತು ಹಿಂಭಾಗದ ಬಂಪರ್ ಜೊತೆಗೆ ಮರುವಿನ್ಯಾಸಕ್ಕೆ ಒಳಪಟ್ಟ LED ಟೇಲ್ ಲ್ಯಾಂಪ್ ಗಳನ್ನು ಹೊಂದಿರಲಿದೆ.
ಇದನ್ನು ಸಹ ನೋಡಿರಿ: ರೂ. 20 ಲಕ್ಷಕ್ಕಿಂತ ಕೆಳಗಿನ 5 CNG SUV ಗಳು
ಕಾಣಿಸಿಕೊಂಡ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್
ಭಾರತದಲ್ಲಿ ಯಾವುದೇ ಮಾರುತಿ ಕಾರು ಸಹ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ವ್ಯವಸ್ಥೆಯನ್ನು ಹೊಂದಿಲ್ಲದಿದ್ದರೂ, ಭಾರತದ ರಸ್ತೆಗಳಲ್ಲಿ ಓಡಾಡಲಿರುವ ನಾಲ್ಕನೇ ತಲೆಮಾರಿನ ಮಾರುತಿ ಸ್ವಿಫ್ಟ್ ಕಾರು ಅದನ್ನು ಅಳವಡಿಸಿಕೊಳ್ಳಲಿರುವ ಮೊದಲ ಕಾರು ಎನಿಸಲಿದೆ. ಮೇಲಿನ ಸ್ಪೈ ಶಾಟ್ ನಲ್ಲಿ, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಹೊಂದಿರುವ ORVM ಗಳನ್ನು ನೀವು ಸ್ಪಷ್ಟವಾಗಿ ಕಾಣಬಹುದು.
ಒಳಗಡೆ ನಿರೀಕ್ಷಿಸಲಾಗಿರುವ ಬದಲಾವಣೆಗಳು
ಉತ್ಪಾದನೆಗೆ ಸಿದ್ಧವಾಗಿರುವ 2024 ಮಾರುತಿ ಸ್ವಿಫ್ಟ್ ಕಾರಿನ ಒಳಭಾಗದ ಕುರಿತು ಮಾಹಿತಿ ದೊರೆಯದೆ ಇದ್ದರೂ, ಜಪಾನಿನಲ್ಲಿ ರಸ್ತೆಗಿಳಿಯಲಿರುವ ಸ್ಪಿಫ್ಟ್ ಪರಿಕಲ್ಪನೆಯನ್ನೇ ಇದು ಹೋಲುತ್ತದೆ. ಈ ಸ್ಪೈ ಶಾಟ್ ಗಳು ಇನ್ಫೋಟೈನ್ ಮೆಂಟ್ ಸ್ಕ್ರೀನ್ ನ ನೋಟವನ್ನು ಸಹ ಸೆರೆ ಹಿಡಿದಿದ್ದು, ಇತರ ಮಾರುತಿ ಮಾದರಿಗಳಲ್ಲಿ ಇರುವ 9 ಇಂಚಿನ ಘಟಕಗಳನ್ನೇ ಹೋಲುತ್ತಿದೆ.
ವೈಶಿಷ್ಟ್ಯಗಳ ವಿಚಾರಗಳಲ್ಲಿ ಹೇಳುವುದಾದರೆ, ನಾಲ್ಕನೇ ತಲೆಮಾರಿನ ಮಾರುತಿ ಸ್ವಿಫ್ಟ್ ಕಾರು ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್, ವೈರ್ ಲೆಸ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್ ಮತ್ತು ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಇತ್ಯಾದಿಗಳನ್ನು ಹೊಂದಿರಲಿದೆ. ಇದರ ಸುರಕ್ಷತಾ ಪಟ್ಟಿಯಲ್ಲಿ 6 ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾ ಇತ್ಯಾದಿಗಳು ಒಳಗೊಂಡಿವೆ.
ಇದನ್ನು ಸಹ ಓದಿರಿ: ಮರೆಮಾಚಿದ ಸ್ಥಿತಿಯಲ್ಲಿ ಕಾಣಿಸಿಕೊಂಡ ಪರೀಕ್ಷಾರ್ಥ ಟಾಟಾ ಪಂಚ್ EV
ಪವರ್ ಟ್ರೇನ್ ಹೇಗಿದೆ?
ಭಾರತದ ರಸ್ತೆಗಳಲ್ಲಿ ಕಾಣಿಸಿಕೊಳ್ಳಲಿರುವ 2024 ಮಾರುತಿ ಸ್ವಿಫ್ಟ್ ಕಾರು, ಜಪಾನ್ ಮೊಬಿಲಿಟಿ ಶೋ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನಿನ ಪರೀಷ್ಕೃತ ಆವೃತ್ತಿಯೊಂದಿಗೆ ಬರಲಿದ್ದು, ಇದು ಸ್ವಲ್ಪ ಹೆಚ್ಚಿನ ಟಾರ್ಕ್ ಅನ್ನು ನೀಡುವ ಸಾಧ್ಯತೆ ಇದೆ. ಪ್ರಸ್ತುತ ಸ್ವಿಫ್ಟ್ ಕಾರಿನ 1.2-ಲೀಟರ್, 4-ಸಿಲಿಂಡರ್ ಪೆಟ್ರೋಲ್ ಘಟಕವು (90PS/113Nm) 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಮತ್ತು 5-ಸ್ಪೀಡ್ AMT ನಡುವಿನ ಆಯ್ಕೆಯನ್ನು ನೀಡಲಿದೆ.
ನಿರೀಕ್ಷಿತ ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು
ಭಾರತದಲ್ಲಿ ನಾಲ್ಕನೇ ತಲೆಮಾರಿನ ಮಾರುತಿ ಸ್ವಿಫ್ಟ್ ಕಾರು ರೂ. 6 ಲಕ್ಷದಷ್ಟು (ಎಕ್ಸ್-ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿರಲಿದೆ. ಇದು ಹ್ಯುಂಡೈ ಗ್ರಾಂಡ್ i10 ನಿಯೋಸ್ ಜೊತೆಗೆ ಸ್ಪರ್ಧಿಸಲಿದ್ದು ಮಾರುತಿ ವ್ಯಾಗನರ್ R ಮತ್ತು Marutiಮಾರುತಿ ಇಗ್ನಿಸ್ ಕಾರುಗಳಿಗೆ ಬದಲಿ ಆಯ್ಕೆ ಎನಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸ್ವಿಫ್ಟ್ AMT