New Suzuki Swift 2024: ನಿಮಗೆ ತಿಳಿದಿರಬೇಕಾದ ಎಲ್ಲಾ ವಿವರಗಳು ಇಲ್ಲಿವೆ
ಮಾರುತಿ ಸ್ವಿಫ್ಟ್ ಗಾಗಿ ansh ಮೂಲಕ ಅಕ್ಟೋಬರ್ 26, 2023 12:16 pm ರಂದು ಪ್ರಕಟಿಸಲಾಗಿದೆ
- 37 Views
- ಕಾಮೆಂಟ್ ಅನ್ನು ಬರೆಯಿರಿ
ಉತ್ಪಾದನೆಗೆ ಸಿದ್ಧಗೊಂಡಿರುವ ಪರಿಕಲ್ಪನೆಯು ಮುಂದಿನ ಮಾರುತಿ ಸ್ವಿಫ್ಟ್ ಏನೆಲ್ಲ ಹೊತ್ತು ತರಲಿದೆ ಎಂಬ ಕುರಿತು ಸುಳಿವು ನೀಡುತ್ತದೆ
- ಇದರ ಪರಿಕಲ್ಪನೆಯನ್ನು ಜಪಾನ್ ಮೊಬಿಲಿಟಿ ಶೋ ಕಾರ್ಯಕ್ರಮದಲ್ಲಿ ಬಹಿರಂಗಗೊಳಿಸಲಾಗಿದೆ.
- ಮುಂಭಾಗದಲ್ಲಿ ಹೊಸ ವಿನ್ಯಾಸವನ್ನು ಪಡೆಯಲಿದ್ದು, ಆಕರ್ಷಕ ಹೊಸ ಅಲೋಯ್ ವೀಲ್ ಗಳೊಂದಿಗೆ ರಸ್ತೆಗಿಳಿಯಲಿದೆ.
- ಇದರ ಕ್ಯಾಬಿನ್, ಬಲೇನೊ, ಫ್ರಾಂಕಸ್ ಮತ್ತು ಗ್ರಾಂಡ್ ವಿಟಾರ ಮುಂತಾದ ಕಾರುಗಳ ಕ್ಯಾಬಿನ್ ಜೊತೆಗೆ ಸಾಮ್ಯತೆಯನ್ನು ಹೊಂದಿದೆ.
- ಭಾರತದಲ್ಲಿ ಬಿಡುಗಡೆಯಾಗಲಿರುವ ಆವೃತ್ತಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನೇ ಹೊಂದಿರಲಿದೆ.
- ಮುಂದಿನ ವರ್ಷದಲ್ಲಿ ಇದು ಭಾರತಕ್ಕೆ ಬರುವ ನಿರೀಕ್ಷೆ ಇದೆ.
ಮಾರುತಿ ಸ್ವಿಫ್ಟ್ ಕಾರು ಈ ದೇಶದಲ್ಲಿ ಅತ್ಯಧಿಕವಾಗಿ ಮಾರಾಟವಾಗುತ್ತಿರುವ ಕಾರುಗಳ ಪೈಕಿ ಒಂದೆನಿಸಿದ್ದು, ದೀರ್ಘಕಾಲದಿಂದ ಇದು ಪರಿಷ್ಕರಣೆಗೆ ಒಳಗಾಗಿರಲಿಲ್ಲ. ಸುಜುಕಿ ಸಂಸ್ಥೆಯು 2023ರ ಜಪಾನ್ ಮೊಬಿಲಿಟಿ ಶೋನಲ್ಲಿ ನಾಲ್ಕನೇ ತಲೆಮಾರಿನ ಸ್ವಿಫ್ಟ್ ಪರಿಕಲ್ಪನೆಯನ್ನು ಅನಾವರಣಗೊಳಿಸುವ ಮೂಲಕ ಸಾಕಷ್ಟು ಸಮಯದಿಂದ ಬಾಕಿ ಇದ್ದ ಈ ಪರಿಷ್ಕರಣೆಗೆ ಮೂರ್ತರೂಪವನ್ನು ನೀಡಿದೆ. ಇದು ಏನೆಲ್ಲ ಹೊತ್ತು ತರಲಿದೆ ಹಾಗೂ ಭಾರತಕ್ಕೆ ಸೀಮಿತವಾಗಿರುವ ಆವೃತ್ತಿಯು ಏನೆಲ್ಲ ಪಡೆಯಲಿದೆ ಎಂಬುದನ್ನು ನೋಡೋಣ.
ಹೊಸ ವಿನ್ಯಾಸ
ಸ್ವಿಫ್ಟ್ ಕಾರಿನ ಒಟ್ಟಾರೆ ವಿನ್ಯಾಸ ಮತ್ತು ಆಕಾರವು ಮೊದಲಿನ ಮಾದರಿಯಂತೆಯೇ ಇರಲಿದೆ. ಆದರೆ ಇದು ಸಾಕಷ್ಟು ಆಧುನಿಕತೆಯನ್ನು ಮೈಗೂಡಿಕೊಳ್ಳಲಿದ್ದು, ಹೆಚ್ಚು ಸದೃಢವಾಗಿರಲಿದೆ. ಮುಂದಿನ ವಿನ್ಯಾಸವು ಹನಿಕೋಂಬ್ ಮಾದರಿಯ ಜೊತೆಗೆ ದುಂಡಗಿನ ಹೊಸ ಗ್ರಿಲ್ ಮತ್ತು ಉದ್ದನೆಯ LED ಹೆಡ್ ಲ್ಯಾಂಪ್ ಗಳು ಮತ್ತು DRL ಗಳನ್ನು ಹೊಂದಿರಲಿದೆ.
ಇದನ್ನು ಸಹ ಓದಿರಿ: ರಫ್ತಿನ ಹಾದಿ ಹಿಡಿದ 5 ಬಾಗಿಲುಗಳ ಮೇಡ್ ಇನ್ ಇಂಡಿಯಾ ಮಾರುತಿ ಜಿಮ್ನಿ
ಪಕ್ಕದ ಭಾಗವು ಸರಿಸುಮಾರು ಹಿಂದಿನಂತೆಯೇ ಇದ್ದು ʻಫ್ಲೋಟಿಂಗ್ ರೂಫ್ʼ ವಿನ್ಯಾಸವನ್ನೇ ಮುಂದುವರಿಸಲಿದೆ. ಹಿಂಭಾಗದ ಬಾಗಿಲಿನ ಹ್ಯಾಂಡಲ್ ಗಳನ್ನು ಇನ್ನೊಮ್ಮೆ ಬಾಗಿಲಿನ ಮೇಲೆ ಇರಿಸಲಾಗಿದೆ. ಈಗಿನ ಆವೃತ್ತಿಯಲ್ಲಿ ಇದು C ಪಿಲ್ಲರ್ ಬಳಿ ಇದೆ. ಅಲೋಯ್ ವೀಲ್ ಗಳು ಸಹ ಹೊಸ ವಿನ್ಯಾಸವನ್ನು ಪಡೆದಿವೆ.
ಮರುವಿನ್ಯಾಸಕ್ಕೆ ಒಳಪಡಿಸಿದ ಟೇಲ್ ಗೇಟ್ ಮತ್ತು ಪರಿಷ್ಕೃತ ಬಂಪರ್ ಮತ್ತು C ಆಕಾರದ ಲೈಟಿಂಗ್ ಎಲಿಮೆಂಟ್ ಮತ್ತು ಬ್ಲ್ಯಾಕ್ ಇನ್ಸರ್ಟ್ ಗಳನ್ನು ಹೊಂದಿರುವ ಟೇಲ್ ಲೈಟ್ ಗಳುಸೇರಿದಂತೆ ಹಿಂಭಾಗವೂ ಸಾಕಷ್ಟು ಬದಲಾವಣೆಗೆ ಒಳಪಟ್ಟಿದೆ.
ಸದೃಶ ಕ್ಯಾಬಿನ್
ಹೊಸ ಸ್ವಿಫ್ಟ್ ಕಾರಿನ ಕ್ಯಾಬಿನ್ ಅನ್ನು ನೋಡಿದಾಗ ಮನಸ್ಸಿಗೆ ಬರುವ ಮೊದಲ ವಿಚಾರವೆಂದರೆ, ಅದು ಮಾರುತಿಯ ಇತರ ಮಾದರಿಗಳಾದ ಬಲೇನೊ, ಫ್ರಾಂಕ್ಸ್ ಮತ್ತು ಗ್ರಾಂಡ್ ವಿಟಾರ ಕಾರುಗಳು ಹೊಂದಿರುವ ಕ್ಯಾಬಿನ್ ಅನ್ನೇ ಹೋಲುತ್ತದೆ. ಏಕೆಂದರೆ ಸ್ಟಿಯರಿಂಗ್ ವೀಲ್, ಇನ್ಸ್ ಟ್ರುಮೆಂಟ್ ಕ್ಲಸ್ಟರ್ ಮತ್ತು ಟಚ್ ಸ್ಕ್ರೀನ್ ಗಳು ಎಲ್ಲಾ ರೀತಿಯಲ್ಲಿ ಒಂದೇ ತೆರನಾಗಿವೆ.
ಇದನ್ನು ಸಹ ಓದಿರಿ: 10 ಲಕ್ಷಕ್ಕೂ ಮಿಕ್ಕಿದ ಅಟೋಮ್ಯಾಟಿಕ್ ಕಾರುಗಳನ್ನು ಮಾರಿದ ಮಾರುತಿ ಸುಝುಕಿ, ಇವುಗಳಲ್ಲಿ AMT ಪಾಲು 65 ಶೇಕಡಾ
ಆದರೆ ಇದರ ಡ್ಯಾಶ್ ಬೋರ್ಡ್ ಮಾತ್ರ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದೆ. ಇದು ಕಪ್ಪು ಮತ್ತು ನಸು ಹಳದಿಕಂದು ಬಣ್ಣದ ಲೇಯರ್ಡ್ ಡ್ಯಾಶ್ ಬೋರ್ಡ್ ಜೊತೆಗೆ ಬರುತ್ತದೆ.
ಗುಣಲಕ್ಷಣಗಳು
ಈ ಕಾನ್ಸೆಪ್ಟ್ ನ ಎಲ್ಲಾ ವಿವರಗಳನ್ನು ಬಹಿರಂಗಪಡಿಸದೆ ಇದ್ದರೂ, ಕ್ಯಾಬಿನ್ ಅನ್ನು ನೋಡಿದಾಗ, ಇದು 9 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, ಸೆಮಿ ಡಿಜಿಟಲ್ ಇನ್ಸ್ ಟ್ರುಮೆಂಟ್ ಕ್ಲಸ್ಟರ್, ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್, ಕ್ರೂಸ್ ಕಂಟ್ರೋಲ್ ಮತ್ತು ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಜೊತೆಗೆ ಬರುವುದು ನಿಚ್ಚಳವಾಗಿದೆ. ದೊಡ್ಡದಾದ ಟಚ್ ಸ್ಕ್ರೀನ್ ಒಂದನ್ನು ಹೊರತುಪಡಿಸಿ ಈ ಉಳಿದೆಲ್ಲ ವೈಶಿಷ್ಟ್ಯಗಳು ಈಗಿರುವ ಸ್ವಿಫ್ಟ್ ಕಾರಿನಲ್ಲಿ ಲಭ್ಯ.
ಇದನ್ನು ಸಹ ಓದಿರಿ: ಈ ಹಬ್ಬದ ಅವಧಿಯಲ್ಲಿ ರಿಯಾಯಿತಿಯಲ್ಲಿ ದೊರೆಯಲಿರುವ ಏಕೈಕ ಮಾರುತಿ SUV ಇದು
ಸುರಕ್ಷತೆಯ ದೃಷ್ಟಿಯಿಂದ ನೋಡುವುದಾದರೆ, ಇದು ಅನೇಕ್ ಏರ್ ಬ್ಯಾಗ್ ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಡ್ರೈವರ್ ಮಾನಿಟರಿಂಗ್ ಸಿಸ್ಟಂ ಹಾಗೂ ಹೈ ಬೀಮ್ ಅಸಿಸ್ಟ್ ಮುಂತಾದ ADAS ಸೌಲಭ್ಯಗಳನ್ನು ಸಹ ಹೊಂದಿರಲಿದೆ.
ಪವರ್ ಟ್ರೇನ್
ಹೊಸ ಸ್ವಿಫ್ಟ್ ಕಾರು ಯಾವ ರೀತಿಯ ಪವರ್ ಟ್ರೇನ್ ಅನ್ನು ಹೊಂದಿರಲಿದೆ ಎಂಬುದನ್ನು ಸುಜುಕಿ ಸಂಸ್ಥೆಯು ಬಹಿರಂಗಪಡಿಸಿಲ್ಲ. ಆದರೆ CVT ಗೇರ್ ಬಾಕ್ಸ್ ಜೊತೆಗೆ ಇಂಧನ ದಕ್ಷತೆಯ ಪವರ್ ಟ್ರೇನ್ ಅನ್ನು ಇದು ಹೊಂದಿರಲಿದೆ ಎಂದು ಈ ಕಾರು ತಯಾರಕ ಸಂಸ್ಥೆಯು ತಿಳಿಸಿದೆ. ಆದರೆ ಭಾರತದಲ್ಲಿ ಓಡಾಡಲಿರುವ ಕಾರು, 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಮತ್ತು 5 ಸ್ಪೀಡ್ AMT ಆಯ್ಕೆಗಳೊಂದಿಗೆ 1.2 ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (90PS/113Nm) ಅನ್ನೇ ಮುಂದುವರಿಸುವ ಸಾಧ್ಯತೆ ಹೆಚ್ಚು.
ಬಿಡುಗಡೆಯ ಸಮಯ
ಸುಜುಕಿ ಸಂಸ್ಥೆಯು ಮೊದಲಿಗೆ ಸ್ವಿಫ್ಟ್ ಕಾರಿನ ಪ್ರೊಡಕ್ಷನ್ ಸ್ಪೆಕ್ ಆವೃತ್ತಿಯನ್ನು ಅನಾವರಣಗೊಳಿಸಲಿದ್ದು, ನಂತರ ಹ್ಯಾಚ್ ಬ್ಯಾಕ್ ಅನ್ನು ಮಾರಾಟ ಮಾಡಲಿದೆ. ಭಾರತದಲ್ಲಿ ಹೊಸ ಸ್ವಿಫ್ಟ್ ಕಾರು 2024ರ ಆರಂಭದಲ್ಲಿ ಹೊರಬರಲಿದೆ. ಸದ್ಯಕ್ಕೆ ರೂ. 5.99 ಲಕ್ಷದಿಂದ ರೂ. 9.03 ಲಕ್ಷದ ತನಕ (ಎಕ್ಸ್-ಶೋರೂಂ ದೆಹಲಿ) ಬೆಲೆಯನ್ನು ಹೊಂದಿರುವ ಪ್ರಸ್ತುತ ಮಾದರಿಗಿಂತ ಹೆಚ್ಚಿನ ಬೆಲೆಯನ್ನು ಇದು ಹೊಂದಿರಲಿದೆ. ಬಿಡುಗಡೆಯಾದ ನಂತರ ಹೊಸ ಸ್ವಿಫ್ಟ್ ಕಾರು ಹ್ಯುಂಡೈ ಗ್ರಾಂಡ್ i10 ನಿಯೋಸ್ ಜೊತೆಗೆ ಸ್ಪರ್ಧಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಾರುತಿ ಸ್ವಿಫ್ಟ್ AMT