2024 Nissan Magnite Geza ಸ್ಪೇಷ ಲ್ ಎಡಿಷನ್ 9.84 ಲಕ್ಷ ರೂ.ಗೆ ಬಿಡುಗಡೆ, ಸಿವಿಟಿಯ ಬೆಲೆಯಲ್ಲಿ ಮತ್ತಷ್ಟು ಕಡಿತ
ನಿಸ್ಸಾನ್ ಮ್ಯಾಗ್ನೈಟ್ 2020-2024 ಗಾಗಿ samarth ಮೂಲಕ ಮೇ 24, 2024 08:06 pm ರಂದು ಪ್ರಕಟಿಸಲಾಗಿದೆ
- 30 Views
- ಕಾಮೆಂಟ್ ಅನ್ನು ಬರೆಯಿರಿ
ಈ ವಿಶೇಷ ಆವೃತ್ತಿಯು ಟರ್ಬೊ-ಪೆಟ್ರೋಲ್ ಮತ್ತು ಸಿವಿಟಿ ಆಯ್ಕೆಯೊಂದಿಗೆ ಮಾತ್ರ ಲಭ್ಯವಿದೆ ಮತ್ತು ದೊಡ್ಡ ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ಸಹ ನೀಡುತ್ತದೆ.
ಒಂದು ವೇಳೆ ನೀವು ಸಬ್-4ಮೀ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಕೈಗೆಟುಕುವ ಬೆಲೆಯ ಪೆಟ್ರೋಲ್-ಆಟೋಮ್ಯಾಟಿಕ್ ಗಾಗಿ ಹುಡುಕುತ್ತಿದ್ದರೆ, ನೀವು ಈಗ ಆಯ್ಕೆ ಮಾಡಲು ಹೊಸದೊಂದು ಆಯ್ಕೆಯನ್ನು ಹೊಂದಿದ್ದೀರಿ. 2024ರ ನಿಸ್ಸಾನ್ ಮ್ಯಾಗ್ನೈಟ್ ಗೆಝಾ ವಿಶೇಷ ಆವೃತ್ತಿಯು ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಪವರ್‌ಟ್ರೇನ್ ಅನ್ನು ಇನ್ನೂ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ 9.84 ಲಕ್ಷ ರೂ.ಗೆ (ಎಕ್ಸ್ ಶೋ ರೂಂ) ನೀಡುತ್ತದೆ. ಇದು 2023 ರಲ್ಲಿ ಬಿಡುಗಡೆಯಾದ ಮ್ಯಾಗ್ನೈಟ್ ಗೆಜಾ ಆವೃತ್ತಿಯ ಮೊದಲ ವಾರ್ಷಿಕೋತ್ಸವಕ್ಕಾಗಿ ನೀಡುತ್ತಿರುವ ವಿಶೇಷ ಕೊಡುಗೆಯಾಗಿದೆ. ಹೊರಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ತರದಿದ್ದರೂ, ಈ ಆವೃತ್ತಿಯು ಆಂತರಿಕ ವೈಶಿಷ್ಟ್ಯಗಳ ಪಟ್ಟಿಗೆ ಹಲವಾರು ಸೇರ್ಪಡೆಗಳನ್ನು ಪರಿಚಯಿಸುತ್ತದೆ.
ಎಕ್ಸ್‌ಟಿರೀಯರ್
ಈ ಲಿಮಿಟೆಡ್-ರನ್ ಎಡಿಷನ್ ಸಿ-ಪಿಲ್ಲರ್‌ನಲ್ಲಿನ ಗೆಝಾ ಆವೃತ್ತಿಯ ಬ್ಯಾಡ್ಜ್ ಅನ್ನು ಹೊರತುಪಡಿಸಿ, ಎಸ್‌ಯುವಿಯ ಹೊರಭಾಗಕ್ಕೆ ಯಾವುದೇ ಕಾಸ್ಮೆಟಿಕ್ ಬದಲಾವಣೆಗಳನ್ನು ನೀಡುತ್ತಿಲ್ಲ. ಇದು ಬಹುಶಃ ಮ್ಯಾಗ್ನೈಟ್ XV ಆವೃತ್ತಿಯನ್ನು ಆಧರಿಸಿದೆ ಮತ್ತು ಹ್ಯಾಲೊಜೆನ್ ಹೆಡ್‌ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು 16-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ
ಇಂಟೀರಿಯರ್ ಮತ್ತು ಸೌಕರ್ಯಗಳು
ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಜೊತೆಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನ ಪರಿಚಯದೊಂದಿಗೆ ಈ ಗೆಝಾ ಎಡಿಷನ್‌ನ ಇಂಟಿರೀಯರ್ ಹೊಸ ಸೇರ್ಪಡೆಗಳನ್ನು ಪಡೆಯುತ್ತದೆ. ಆದರೆ ರೆಗುಲರ್ ಮ್ಯಾಗ್ನೈಟ್ ಆವೃತ್ತಿಗಳು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇನೊಂದಿಗೆ 8-ಇಂಚಿನ ಟಚ್‌ಸ್ಕ್ರೀನ್ ಅನ್ನು ಮಾತ್ರ ನೀಡುತ್ತವೆ. ಈ ಆವೃತ್ತಿಯು JBL ಸ್ಪೀಕರ್‌ಗಳು ಮತ್ತು ಆಂಬಿಯೆಂಟ್ ಲೈಟಿಂಗ್‌ಗಳನ್ನು ಸಹ ಹೊಂದಿದೆ, ಇದನ್ನು ನಿಸ್ಸಾನ್ ಮೊಬೈಲ್ ಅಪ್ಲಿಕೇಶನ್ ಮೂಲಕವೂ ನಿಯಂತ್ರಿಸಬಹುದು. ಹಾಗೆಯೇ ಹೆಚ್ಚುವರಿ ಮೊತ್ತವನ್ನು ಪಾವತಿಸುವ ಮೂಲಕ ಗ್ರಾಹಕರು ಇದರಲ್ಲಿ ಹೆಚ್ಚು ಪ್ರೀಮಿಯಂ ಬೀಜ್ ಬಣ್ಣದ ಆಪ್ಹೋಲ್ಸ್‌ಟೆರಿಯನ್ನು ಆಯ್ಕೆ ಮಾಡಬಹುದು.
ಈ ಸ್ಪೇಷಲ್ ಎಡಿಷನ್ ಮ್ಯಾಗ್ನೈಟ್‌ನ XV ಆವೃತ್ತಿಯನ್ನು ಆಧರಿಸಿಸಿರಬಹುದು ಎಂದು ಅಂದಾಜಿಸಲಾಗಿದೆ, ಇದು ಎತ್ತರ ಹೊಂದಾಣಿಕೆಯ ಡ್ರೈವರ್ ಸೀಟ್ ಮತ್ತು 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯಂತಹ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ. ಹಾಗೆಯೇ ಇದರ ಸುರಕ್ಷತಾ ಕಿಟ್‌ಅನ್ನು ಗಮನಿಸುವಾಗ ರಿಯರ್ ವ್ಯೂ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ISOFIX ಚೈಲ್ಡ್ ಸೀಟ್ ಆಂಕಾರೇಜ್ ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಇದನ್ನೂ ಒದಿ: 2024ರ Mercedes-Maybach GLS 600 ಬಿಡುಗಡೆ, ಬೆಲೆ ಬರೋಬ್ಬರಿ 3.35 ಕೋಟಿ ರೂ..!
ಮ್ಯಾಗ್ನೈಟ್ ಪವರ್‌ಟ್ರೇನ್‌ಗಳು
ನಿಸ್ಸಾನ್ ಮ್ಯಾಗ್ನೈಟ್ ಗೆಝಾ ವಿಶೇಷ ಆವೃತ್ತಿಯು ಕೇವಲ 1-ಲೀಟರ್ ಟರ್ಬೊ-ಪೆಟ್ರೋಲ್ ಆಯ್ಕೆಯಲ್ಲಿ ಕಂಟಿನ್ಯೂಯಸ್ಲಿ ವೇರಿಯಬಲ್ ಟ್ರಾನ್ಸ್‌ಮಿಷನ್ (CVT) ನಲ್ಲಿ ಲಭ್ಯವಿರುತ್ತದೆ. ಈ ಎಂಜಿನ್ 100 ಪಿಎಸ್ ಮತ್ತು 152 ಎನ್‌ಎಮ್ ನಷ್ಟು ಔಟ್‌ಪುಟ್ ಅನ್ನು ಉತ್ಪಾದಿಸುತ್ತದೆ. ಆದರೆ ಇದೇ ಎಂಜಿನ್ ಇತರ ಆವೃತ್ತಿಗಳಲ್ಲಿ 5-ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ ಲಭ್ಯವಿದೆ. ಇತರ ಮ್ಯಾಗ್ನೈಟ್‌ನ ಆವೃತ್ತಿಗಳು ನ್ಯಾಚುರಲಿ ಎಸ್ಪಿರೇಟೆಡ್‌ನ 1-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಸಹ ಬಳಸುತ್ತಿದ್ದು, ಇದು 72 ಪಿಎಸ್ ಮತ್ತು 96 ಎನ್‌ಎಮ್ ಔಟ್‌ಪುಟ್‌ನೊಂದಿಗೆ 5-ಸ್ಪೀಡ್ ಮ್ಯಾನುಯಲ್ ಮತ್ತು ಎಎಮ್‌ಟಿ ಆಯ್ಕೆಯೊಂದಿಗೆ ಲಭ್ಯವಿದೆ.
ಪ್ರತಿಸ್ಪರ್ಧಿಗಳು
ನಿಸ್ಸಾನ್ ಮ್ಯಾಗ್ನೈಟ್ ಮಾರುಕಟ್ಟೆಯಲ್ಲಿ ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರಾ XUV 3XO, ರೆನಾಲ್ಟ್ ಕೈಗರ್ ಮತ್ತು ಸಿಟ್ರೊಯೆನ್ C3 ಜೊತೆಗೆ ಮಾರುತಿ ಫ್ರಾಂಕ್ಸ್ ಮತ್ತು ಹ್ಯುಂಡೈ ಎಕ್ಸ್‌ಟರ್‌ನೊಂದಿಗೆ ಸ್ಪರ್ಧೆಯಲ್ಲಿದೆ. ಹೆಚ್ಚುವರಿಯಾಗಿ, ಇದು 2025 ರ ಆರಂಭದಲ್ಲಿ ಆಗಮಿಸಲಿರುವ ಮುಂಬರುವ ಸ್ಕೋಡಾ ಸಬ್-4m ಎಸ್‌ಯುವಿಯೊಂದಿಗೂ ಮುಖಾಮುಖಿಯಾಗಲಿದೆ.
ಇನ್ನಷ್ಟು ಓದಿ: ನಿಸ್ಸಾನ್ ಮ್ಯಾಗ್ನೈಟ್ ಎಎಮ್‌ಟಿ
0 out of 0 found this helpful