• English
    • Login / Register

    2024 ಟಾಟಾ ಆಲ್ಟ್ರೋಜ್ ​​ಹೊಸ ವೇರಿಯಂಟ್ ಗಳ ಬಿಡುಗಡೆ, ಆಲ್ಟ್ರೋಜ್ ​​ರೇಸರ್‌ನ ಕೆಲವು ಫೀಚರ್ ಗಳು ಸೇರ್ಪಡೆ

    ಟಾಟಾ ಆಲ್ಟ್ರೋಝ್ ಗಾಗಿ dipan ಮೂಲಕ ಜೂನ್ 10, 2024 07:31 pm ರಂದು ಪ್ರಕಟಿಸಲಾಗಿದೆ

    • 32 Views
    • ಕಾಮೆಂಟ್‌ ಅನ್ನು ಬರೆಯಿರಿ

    ಪೆಟ್ರೋಲ್ ಎಂಜಿನ್ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಹೊಸ ವೇರಿಯಂಟ್ ಗಳ ಬೆಲೆಯು 9 ಲಕ್ಷ ರೂಪಾಯಿಗಳ ಪರಿಚಯಾತ್ಮಕ ಬೆಲೆಯಿಂದ ಪ್ರಾರಂಭವಾಗುತ್ತವೆ

    Altroz new variants launched

    ಟಾಟಾ ಆಲ್ಟ್ರೋಜ್ ​​ರೇಸರ್ ಅನ್ನು ಸಾಮಾನ್ಯ ಟಾಟಾ ಆಲ್ಟ್ರೋಜ್ ​​ನ ಸ್ಪೋರ್ಟಿಯರ್ ವರ್ಷನ್ ಆಗಿ ಬಿಡುಗಡೆ ಮಾಡಲಾಗಿದೆ. ಆಲ್ಟ್ರೋಜ್ ​​ರೇಸರ್ ಜೊತೆಗೆ, ಕಾರು ತಯಾರಕರು ರೇಸರ್‌ನಿಂದ ಕೆಲವು ಫೀಚರ್ ಗಳನ್ನು ಪಡೆದಿರುವ XZ LUX ಮತ್ತು XZ+S LUX ಎಂಬ ಸ್ಟ್ಯಾಂಡರ್ಡ್ ಮಾಡೆಲ್ ನ ಎರಡು ಹೊಸ ವರ್ಷನ್ ಗಳನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಆಲ್ಟ್ರೋಜ್ ​​XZ+ OS ವೇರಿಯಂಟ್ ಈಗ ಹೊಸ ಬೆಲೆಯನ್ನು ಕೂಡ ಪಡೆದಿದೆ.

     ಹೊಸ ವೇರಿಯಂಟ್ ಗಳು ಮತ್ತು ಬೆಲೆ

    ರೆಗ್ಯುಲರ್ ಆಲ್ಟ್ರೋಜ್ ​​ಬೆಲೆಯು ರೂ. 6.65 ಲಕ್ಷದಿಂದ ಪ್ರಾರಂಭವಾಗುತ್ತವೆ. ವಿವರವಾದ ಬೆಲೆಯು ಇನ್ನೂ ಹೊರಬಿದ್ದಿಲ್ಲ, ಆದರೆ ಈ ಹೊಸ ವೇರಿಯಂಟ್ ಗಳ ಮ್ಯಾನುವಲ್ ಗೇರ್‌ಬಾಕ್ಸ್‌ ಇರುವ ಪೆಟ್ರೋಲ್ ವರ್ಷನ್ ಗಳ ಬೆಲೆಯು ಈ ಕೆಳಗಿನಂತಿವೆ:

     ವೇರಿಯಂಟ್

     ಬೆಲೆಗಳು

     XZ LUX (ಹೊಸದು)

     ರೂ. 9 ಲಕ್ಷ

     XZ+S LUX (ಹೊಸದು)

     ರೂ. 9.65 ಲಕ್ಷ

     XZ+OS (ಅಪ್ಗ್ರೇಡ್ ಆಗಿರುವ)

     ರೂ. 9.99 ಲಕ್ಷ

     (ಎಲ್ಲಾ ಬೆಲೆಗಳು ಪರಿಚಯಾತ್ಮಕ ಮತ್ತು ಎಕ್ಸ್ ಶೋರೂಂ, ಪ್ಯಾನ್ ಇಂಡಿಯಾ ಬೆಲೆಯಾಗಿದೆ)

     ಹೊಸ ಫೀಚರ್ ಗಳು

     ಡ್ರೈವಿಂಗ್ ಅನುಭವವನ್ನು ಹೆಚ್ಚಿಸಲು, ಹೊಸ ಮತ್ತು ಅಪ್ಗ್ರೇಡ್ ಆಗಿರುವ ವೇರಿಯಂಟ್ ಗಳು ಸುಧಾರಿತ ಫೀಚರ್ ಗಳನ್ನು ನೀಡುತ್ತಿವೆ:

    •  XZ LUX: ಇದು XZ ವೇರಿಯಂಟ್ ನ ಎಲ್ಲಾ ಫೀಚರ್ ಗಳನ್ನು ಮತ್ತು ಆಂಡ್ರಾಯ್ಡ್ ಆಟೋ ಮತ್ತು ವೈಫೈ ಮೂಲಕ ಆಪಲ್ ಕಾರ್ ಪ್ಲೇ ಜೊತೆಗೆ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

    •  XZ+S LUX: XZ+S ವೇರಿಯಂಟ್ ನ ಫೀಚರ್ ಗಳ ಜೊತೆಗೆ 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು 10.25-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಜೊತೆಗೆ ವೈಫೈನಿಂದ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಹೊಂದಿದೆ.

    •  XZ+OS: ಕನೆಕ್ಟೆಡ್ ಕಾರ್ ಟೆಕ್ನಾಲಾಜಿ ಮತ್ತು ಏರ್ ಪ್ಯೂರಿಫೈಯರ್ ಜೊತೆಗೆ XZ+S LUX ವೇರಿಯಂಟ್ ನ ಎಲ್ಲಾ ಫೀಚರ್ ಗಳನ್ನು ಸೇರಿಸಿ ಅಪ್ಗ್ರೇಡ್ ಮಾಡಲಾಗಿದೆ.

    Tata Altroz

     ಎಂಜಿನ್ ಆಯ್ಕೆಗಳು

     ಹೊಸ ವೇರಿಯಂಟ್ ನಲ್ಲಿ ನೀವು 1.2-ಲೀಟರ್ ಪೆಟ್ರೋಲ್ (88 PS/115 Nm), 1.2-ಲೀಟರ್ ಪೆಟ್ರೋಲ್-CNG (73.5 PS/103 Nm), ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ (90 PS/200 Nm) ನಡುವೆ ಆಯ್ಕೆಯನ್ನು ಮಾಡಬಹುದು. ಈ ವೇರಿಯಂಟ್ ಗಳು ಮಾನ್ಯುಯಲ್ ಅಥವಾ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (DCT) ಆಯ್ಕೆಯೊಂದಿಗೆ ಬರುತ್ತವೆ.

    Tata Altroz DCT transmission

     ಪ್ರತಿಸ್ಪರ್ಧಿಗಳು

     ಹ್ಯುಂಡೈ i20, ಮಾರುತಿ ಬಲೆನೊ ಮತ್ತು ಟೊಯೋಟಾ ಗ್ಲಾನ್ಜಾಗೆ ಟಾಟಾ ಆಲ್ಟ್ರೋಜ್ ಪ್ರತಿಸ್ಪರ್ಧಿಯಾಗಿದೆ.

     ಇನ್ನಷ್ಟು ಓದಿ: ಟಾಟಾ ಆಲ್ಟ್ರೋಜ್ ಆನ್ ರೋಡ್ ಬೆಲೆ

    was this article helpful ?

    Write your Comment on Tata ಆಲ್ಟ್ರೋಝ್

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಹ್ಯಾಚ್ಬ್ಯಾಕ್ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience