Maruti Cars; 2024 ರಲ್ಲಿ ಈ 3 ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆ
ಮಾರುತಿ ಇವಿಎಕ್ಸ್ ಗಾಗಿ shreyash ಮೂಲಕ ಡಿಸೆಂಬರ್ 21, 2023 02:46 pm ರಂದು ಪ್ರಕಟಿಸಲಾಗಿದೆ
- 51 Views
- ಕಾಮೆಂಟ್ ಅನ್ನು ಬರೆಯಿರಿ
2024 ರಲ್ಲಿ, ಭಾರತೀಯ ವಾಹನ ತಯಾರಕರು ಎರಡು ಹೊಸ ತಲೆಮಾರಿನ ಮಾಡೆಲ್‌ಗಳನ್ನು ಮಾತ್ರವಲ್ಲದೆ ತನ್ನ ಪ್ರಥಮ ಇವಿಯನ್ನು ಸಹ ಬಿಡುಗಡೆ ಮಾಡಲಿವೆ.
ಭಾರತದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಝುಕಿಯು 2023 ರಲ್ಲಿ, ತನ್ನ ವಿಸ್ತಾರವಾದ ಶ್ರೇಣಿಗೆ – ಮಾರುತಿ ಜಿಮ್ನಿ, ಮಾರುತಿ ಫ್ರಾಂಕ್ಸ್, ಮತ್ತು ಮಾರುತಿ ಇನ್ವಿಕ್ಟೊ ಎಂಬ ಮೂರು ಸಂಪೂರ್ಣ ಹೊಸ ಮಾದರಿಗಳನ್ನು ಪರಿಚಯಿಸುವುದರೊಂದಿಗೆ ಯಶಸ್ಸನ್ನು ಕಂಡಿತು. ಸದ್ಯದಲ್ಲಿಯೇ 2024 ಕ್ಕೆ ನಾವು ಕಾಲಿಡುತ್ತಿರುವಾಗ, ಈ ಕಾರುತಯಾರಿಕಾ ಕಂಪನಿಯು ತನ್ನ ಮೊದಲ ಬರುನಿರೀಕ್ಷಿತ ಎಲೆಕ್ಟ್ರಿಕ್ ವಾಹನ ಸೇರಿದಂತೆ (EV) ಮೂರು ಹೊಸ ಕಾರುಗಳನ್ನು ಯೋಜಿಸುವುದರೊಂದಿಗೆ ಮತ್ತೊಂದು ಮೈಲುಗಲ್ಲಿಗೆ ಸಿದ್ಧವಾಗಿದೆ.
ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್
ನಿರೀಕ್ಷಿತ ಬಿಡುಗಡೆ: ಮಾರ್ಚ್ 2024
ನಿರೀಕ್ಷಿತ ಬೆಲೆ: ರೂ 6 ಲಕ್ಷದಿಂದ
ಈ ನಾಲ್ಕನೇ-ತಲೆಮಾರಿನ ಸುಝುಕಿ ಸ್ವಿಫ್ಟ್ ತನ್ನ ತಾಯ್ನಾಡಾದ ಜಪಾನ್‌ನಲ್ಲಿ ವಿವಿಧ ವಿಶೇಷಣಗಳನ್ನು ಈಗಾಗಲೇ ಬಹಿರಂಗಪಡಿಸಿದೆ. ಈ ಹೊಸ ತಲೆಮಾರಿನ ಹ್ಯಾಚ್‌ಬ್ಯಾಕ್ ಮರುವಿನ್ಯಾಸಗೊಳಿಸಲಾದ ಇಂಟೀರಿಯರ್ ಅನ್ನು ಹೊಂದಿದೆ ಮತ್ತು ಎಕ್ಸ್‌ಟೀರಿಯರ್ ವಿನ್ಯಾಸದ ಬದಲಾವಣೆಗಳು ವಿಕಸನೀಯವಾಗಿದ್ದು ತೀಕ್ಷ್ಣವಾಗಿದ್ದರೂ ಗಮನಾರ್ಹವಾಗಿದೆ. ಇದು ಹೊಸ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ (82 PS / 108 Nm), ಅನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ CVT ಯೊಂದಿಗೆ ಪಡೆಯಲಿದೆ. ಜಪಾನ್‌ನಲ್ಲಿ, ಈ ಸ್ವಿಫ್ಟ್ ಪೆಟ್ರೋಲ್ ಮತ್ತು ಹೈಬ್ರಿಡ್ ಆವೃತ್ತಿಗಳಲ್ಲಿ ಐಚ್ಛಿಕ ಆಲ್ ವ್ಹೀಲ್ ಡ್ರೈವ್ (AWD) ಜೊತೆಗೆ ಲಭ್ಯವಿರುತ್ತದೆ. ಹಾಗಿದ್ದರೂ, ಭಾರತದಲ್ಲಿ ಈ ವಿಶೇಷಣಗಳು ಬದಲಾಗಬಹುದು ಮತ್ತು ಹೈಬ್ರಿಡ್ ಮತ್ತು AWD ಆವೃತ್ತಿಗಳು ಈ ಗಣನೆಗೆ ಬರುವುದಿಲ್ಲ.
ಇದನ್ನೂ ಪರಿಶೀಲಿಸಿ: ಮುಂಬರುವ ಮಹೀಂದ್ರಾ ಥಾರ್ 5-ಡೋರ್‌ಗೆ ಟ್ರೇಡ್‌ಮಾರ್ಕ್ ಮಾಡಲಾದ 7 ಹೆಸರುಗಳಲ್ಲಿ “ಆರ್ಮಡಾ” ಪ್ರಮುಖ
ಮಾರುತಿ eVX
ನಿರೀಕ್ಷಿತ ಬಿಡುಗಡೆ: ಏಪ್ರಿಲ್ 2024
ನಿರೀಕ್ಷಿತ ಬೆಲೆ: ರೂ 22 ಲಕ್ಷದಿಂದ
2024 ರಲ್ಲಿ, ಭಾರತೀಯ ಕಾರು ತಯಾರಿಕಾ ಕಂಪನಿಯು ಮಾರುತಿ eVX ನಿಂದ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನದ ಚೊಚ್ಚಲ ಪ್ರವೇಶಕ್ಕೆ ನಾಂದಿ ಹಾಡಲಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಇತ್ತೀಚೆಗೆ ಜಪಾನ್ ಮೊಬಿಲಿಟಿ ಶೋ 2023 ರಲ್ಲಿ ಉತ್ಪಾದನಾ ಹಂತದಲ್ಲಿಯೇ ಪ್ರದರ್ಶಿಸಲಾಯಿತು. ಅಂತಿಮ ವಿನ್ಯಾಸವನ್ನು ಮುಚ್ಚಿಡಲು ತಾತ್ಕಾಲಿಕ ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳನ್ನು ಒಳಗೊಂಡಿರುವ ಈ ಇವಿಯು ಹಲವಾರು ಬಾರಿ ಭಾರತೀಯ ರಸ್ತೆಯಲ್ಲಿಯೂ ಪರೀಕ್ಷೆಗಳನ್ನು ಎದುರಿಸಿದೆ. ಫೀಚರ್‌ಗಳ ವಿಷಯದಲ್ಲಿ, ಇದು ಇಂಟಿಗ್ರೇಟೆಡ್ ಡಿಸ್‌ಪ್ಲೇ ಸೆಟಪ್ (ಇನ್‌ಫೊಟೈನ್‌ಮೆಂಟ್ ಮತ್ತು ಇನ್‌ಸ್ಟ್ರೂಮೆಂಟ್ ಕ್ಲಸ್ಟರ್‌ಗಾಗಿ) ಮತ್ತು 360-ಡಿಗ್ರಿ ಕ್ಯಾಮರಾವನ್ನು ಒಳಗೊಂಡಿರಬಹುದಾಗಿದೆ. ಮಾರುತಿ eVX ನಲ್ಲಿ 60 kWh ಬ್ಯಾಟರಿ ಪ್ಯಾಕ್ ಅನ್ನು ಡ್ಯುಯಲ್-ಮೋಟಾರ್ ಸೆಟಪ್‌ನೊಂದಿಗೆ ಬಳಸಲಾಗುತ್ತದೆ ಎಂದು ದೃಢೀಕರಿಸಲಾಗಿದ್ದು ಇದು 550 km ವ್ಯಾಪ್ತಿಯನ್ನು ನೀಡುತ್ತದೆ.
ಇದನ್ನೂ ಪರಿಶೀಲಿಸಿ: 2024 ರಲ್ಲಿ ಬಿಡುಗಡೆಗೆ ಸಿದ್ಧವಾದ 7 ಟಾಟಾ ಕಾರುಗಳು
ಹೊಸ ತಲೆಮಾರಿನ ಮಾರುತಿ ಡಿಸೈರ್
ನಿರೀಕ್ಷಿತ ಬಿಡುಗಡೆ: 2024 ರ ಮಧ್ಯದಲ್ಲಿ
ನಿರೀಕ್ಷಿತ ಬೆಲೆ: ರೂ 6.5 ಲಕ್ಷದಿಂದ
ಪ್ರಸ್ತುತ ಪೀಳಿಗೆಯ ಮಾರುತಿ ಡಿಸೈರ್ ಅನ್ನು 2017 ರಲ್ಲಿ ಪರಿಚಯಿಸಲಾಯಿತು ಮತ್ತು ಇದು ಕೊನೆಯದಾಗಿ 2020 ರಲ್ಲಿ ನವೀಕರಣವನ್ನು ಪಡೆಯಿತು. ಈಗ, ಸ್ವಿಫ್ಟ್ ಆಧಾರಿತ ಸಬ್-4m ಸೆಡಾನ್ ಅದರ ತಲೆಮಾರಿನ ನವೀಕರಣಕ್ಕೆ ಸಿದ್ಧವಾಗಿದೆ. ಹೊಸ ತಲೆಮಾರಿನ ಸ್ವಿಫ್ಟ್ ಅನ್ನು ಆಧರಿಸಿ, ಡಿಸೈರ್ ಹೊಸ ವಿನ್ಯಾಸ ಮತ್ತು ದೊಡ್ಡ ಇನ್‌ಫೊಟೈನ್‌ಮೆಂಟ್ ಸಿಸ್ಟಮ್ ಮತ್ತು 6 ಏರ್‌ಬ್ಯಾಗ್‌ಗಳಂತಹ ಹೊಸ ಫೀಚರ್‌ಗಳನ್ನು ಒಳಗೊಂಡಿರುವ ಸಮಗ್ರ ನವೀಕರಣವನ್ನು ಪಡೆಯಲಿದೆ. ಇದು ಹೊಸ ಸ್ವಿಫ್ಟ್‌ನಂತೆಯೇ ಅದೇ ಪವರ್‌ಟ್ರೇನ್ ನವೀಕರಣವನ್ನು ಪಡೆಯಲಿದೆ.
ಫೀಚರ್ ಸೇರ್ಪಡೆಗಳ ವಿಷಯದಲ್ಲಿ ನಾವು 2024 ರಲ್ಲಿ ಇತರ ಮಾರುತಿ ಮಾದರಿಗಳಿಗೆ ಸಣ್ಣ ಪರಿಷ್ಕರಣೆಯನ್ನು ಪಡೆಯಬಹುದು. ಇವುಗಳಲ್ಲಿ ಮಾರುತಿಯ ಯಾವ ಹೊಸ ಕಾರುಗಳನ್ನು ನೀವು ಹೆಚ್ಚು ನಿರೀಕ್ಷಿಸುತ್ತೀರಿ ಎಂಬುದನ್ನು ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ.
0 out of 0 found this helpful