Tata Cars: ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 7 ಕಾರುಗಳ ಮಾಹಿತಿ ಇಲ್ಲಿವೆ
ಟಾಟಾ ಪಂಚ್ ಇವಿ ಗಾಗಿ rohit ಮೂಲಕ ಡಿಸೆಂಬರ್ 19, 2023 04:27 pm ರಂದು ಪ್ರಕಟಿಸಲಾಗಿದೆ
- 91 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಸಂಸ್ಥೆಯು 2024ರಲ್ಲಿ ಕನಿಷ್ಠ ಮೂರು ಸಂಪೂರ್ಣ ಹೊಸ ಎಲೆಕ್ಟ್ರಿಕ್ SUV ಗಳನ್ನು ಬಿಡುಗಡೆ ಮಾಡಲಿದೆ
ಈ ಕಾರು ತಯಾರಕ ಸಂಸ್ಥೆಯು ಹೊಸ ಮತ್ತು ಪರಿಷ್ಕೃತ ವಾಹನಗಳ ಬಿಡುಗಡೆಯೊಂದಿಗೆ 2023ರಲ್ಲಿ ಸಾಕಷ್ಟು ಚಟುವಟಿಕೆಯಿಂದ ಕೂಡಿತ್ತು. ಆದರೆ 2024ರಲ್ಲಿ ಇನ್ನೂ ಏಳು ಮಾದರಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ತನ್ನ ಪ್ರಾಬಲ್ಯವನ್ನು ಮೆರೆಯಲಿದೆ. ಇದರಲ್ಲಿ ಅತ್ಯಂತ ಹೆಚ್ಚು ನಿರೀಕ್ಷೆಯ ಹಾಗೂ ಕೂಪೆ ಆಕಾರದ SUV, ಟಾಟಾ ಕರ್ವ್ ಮತ್ತು ಮೂರು EV ಗಳು ಒಳಗೊಂಡಿವೆ. ಬಿಡುಗಡೆಯಾಗಲಿರುವ ಮಾದರಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
ಟಾಟಾ ಪಂಚ್ EV
ಈ ಕಾರು ತಯಾರಕ ಸಂಸ್ಥೆಯು 2024ರಲ್ಲಿ ಬಿಡುಗಡೆ ಮಾಡಲಿರುವ ವಾಹನಗಳ ಪಟ್ಟಿಯಲ್ಲಿ ಟಾಟಾ ಪಂಚ್ EV ಮೊದ ಸ್ಥಾನದಲ್ಲಿದೆ. 2023ರಲ್ಲಿ ಆನ್ಲೈನ್ ನಲ್ಲಿ ಕಾಣಿಸಿಕೊಂಡ ಅನೇಕ ಸ್ಪೈ ಶಾಟ್ ಗಳ ಮೂಲಕ ನಾವು ಅನೇಕ ಬಾರಿ ಟಾಟಾ ಪಂಚ್ EV ಯನ್ನು ನೋಡಿದ್ದೇವೆ. ಇದು 2024ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, ಈ ಹೊಸ ಎಲೆಕ್ಟ್ರಿಕ್ ಮೈಕ್ರೊ SUV ಯು ಇತ್ತೀಚೆಗೆ ಪರಿಷ್ಕರಣೆಗೆ ಒಳಗಾದ ನೆಕ್ಸನ್ ನಂತೆಯೇ ಕಾಣಿಸಿಕೊಳ್ಳಲಿದ್ದು, ಹೊಸ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿರಲಿದೆ. ಟಾಟಾದ ಪ್ರಕಾರ ಪಂಚ್ EV ಯು 500 km ಶ್ರೇಣಿಯನ್ನು ಹೊಂದಿದ್ದು ಗ್ರಾಹಕರಿಗೆ ಎರಡು ಬ್ಯಾಟರಿ ಪ್ಯಾಕ್ ಗಳ ಆಯ್ಕೆಯನ್ನುನೀಡಲಿದೆ.
ನಿರೀಕ್ಷಿತ ಬಿಡುಗಡೆ: ಜನವರಿ 2024
ನಿರೀಕ್ಷಿತ ಬೆಲೆ: ರೂ 12 ಲಕ್ಷ
ಟಾಟಾ ಕರ್ವ್ EV
2024 ರಲ್ಲಿ ಟಾಟಾ ಕರ್ವ್ EV ವಾಹನವು ಸಂಪೂರ್ಣ ಹೊಸ SUV ಕೂಪೆಯಾಗಿ ರಸ್ತೆಗಿಳಿಯಲಿದ್ದು ಟಾಟಾ ನೆಕ್ಸನ್ EV ಮತ್ತು ಮುಂಬರುವ ಟಾಟಾ ಹ್ಯಾರಿಯರ್ EV ನಡುವಿನ ನೋಟವನ್ನು ಹೊಂದಿರಲಿದೆ. ನೆಕ್ಸನ್ EV ಯಲ್ಲಿರುವ ದೊಡ್ಡದಾದ 12.3 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಯೂನಿಟ್, ಸ್ಪರ್ಶ ಆಧರಿತ ಕ್ಲೈಮೇಟ್ ಕಂಟ್ರೋಲ್, ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂಗಳು (ADAS) ಇತ್ಯಾದಿಗಳನ್ನು ಈ ವಾಹನದಲ್ಲಿಯೂ ಟಾಟಾ ಸಂಸ್ಥೆಯು ನೀಡಲಿದೆ. ಕರ್ವ್ EV ಯು ವಿವಿಧ ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರಲಿದ್ದು, ನೆಕ್ಸನ್ EV ಗೆ ಹೋಲಿಸಿದರೆ ಹೆಚ್ಚಿನ ಕಾರ್ಯಕ್ಷಮತೆಯನ್ನು ತೋರಲಿದೆ ಹಾಗೂ 500 km ಗಿಂತಲೂ ಹೆಚ್ಚಿನ ಶ್ರೇಣಿಯನ್ನು ಹೊಂದಲಿದೆ.
ನಿರೀಕ್ಷಿತ ಬಿಡುಗಡೆ: ಮಾರ್ಚ್ 2024
ನಿರೀಕ್ಷಿತ ಬೆಲೆ: ರೂ 20 ಲಕ್ಷ
-
ಟಾಟಾ ಪಂಚ್ ಫೇಸ್ ಲಿಫ್ಟ್
ಟಾಟಾ ಪಂಚ್ ವಾಹನದ ಸದ್ಯದ ಚಿತ್ರವನ್ನು ಪ್ರಾತಿನಿಧಿಕ ಉದ್ದೇಶಕ್ಕಾಗಿ ಮಾತ್ರವೇ ಬಳಸಲಾಗಿದೆ
ಸುಮಾರು ಎರಡು ವರ್ಷಗಳ ಕಾಲ ರಸ್ತೆಯಲ್ಲಿ ರಾರಾಜಿಸಿದ ನಂತರ ಟಾಟಾ ಪಂಚ್ ವಾಹನವು ಸದ್ಯವೇ ಪರಿಷ್ಕೃತ ರೂಪದಲ್ಲಿ ಹೊರಬರಲಿದೆ. ಪರಿಷ್ಕೃತ ಪಂಚ್ ಕಾರು ಪಂಚ್ EV ಗೆ ಸಮನಾಗಿ ಮಾರ್ಪಾಡುಗಳನ್ನು ಹೊಂದಲಿದ್ದು, ಒಳಗಡೆ ಮತ್ತು ಹೊರಗಡೆಯಲ್ಲಿ ಸಾಮ್ಯತೆಯನ್ನು ಹೊಂದಿರಲಿದೆ ಮತ್ತು ಪರಿಷ್ಕೃತ ಉಪಕರಣಗಳ ಗಣದೊಂದಿಗೆ ಹೊರಬರಲಿದೆ. ಈ ಮೈಕ್ರೋ SUV ಯ ಹುಡ್ ಅಡಿಯಲ್ಲಿ ಯಾವುದೇ ಬದಲಾವಣೆ ಉಂಟಾಗದು.
ನಿರೀಕ್ಷಿತ ಬಿಡುಗಡೆ: ಇನ್ನಷ್ಟೇ ಘೋಷಿಸಬೇಕು
ನಿರೀಕ್ಷಿತ ಬೆಲೆ: ರೂ 6.20 ಲಕ್ಷ
ಇದನ್ನು ಸಹ ನೋಡಿರಿ: 2023ರ ಕೊನೆಗೆ ಗರಿಷ್ಠ ರಿಯಾಯಿತಿ ನೀಡಲಿರುವ ಪ್ರಮುಖ 10 ಕಾರುಗಳು
-
ಟಾಟಾ ಕರ್ವ್
ಕರ್ವ್ EV ಯ ಬಿಡುಗಡೆಯ ನಂತರ ಟಾಟಾ ಕರ್ವ್ ಎಂಬ ಹೆಸರಿನಲ್ಲಿ ಇಂಟರ್ನಲ್ ಕಂಬಶನ್ ವರ್ಷನ್ (ICE) ಸಹ ಹೊರಬರಲಿದ್ದು 2024ರ ಸುಮಾರಿಗೆ ಬಿಡುಗಡೆಗೊಳ್ಳಲಿದೆ. ಹೊಸ ಮಾದರಿಯು ಸಾಕಷ್ಟು ಸ್ಪರ್ಧೆಯನ್ನು ಹೊಂದಿರುವ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಟಾಟಾದ ಪ್ರಾಬಲ್ಯವನ್ನು ಇನ್ನಷ್ಟು ಹೆಚ್ಚಿಸಲಿದ್ದು ಹ್ಯುಂಡೈ ಕ್ರೆಟಾ ಮತ್ತು ಗ್ರಾಂಡ್ ವಿಟಾರ ಮುಂತಾದ ವಾಹನಗಳಿಗೆ ಇದು ಸ್ಪರ್ಧೆ ನೀಡಲಿದೆ. ಕರ್ವ್ EV ಯಲ್ಲಿರುವ ವೈಶಿಷ್ಟ್ಯಗಳು ಇದರಲ್ಲೂ ಕಾಣಿಸಿಕೊಳ್ಳಲಿದ್ದು, ದೊಡ್ಡ ಗಾತ್ರದ ಡಿಜಿಟಲ್ ಡಿಸ್ಪ್ಲೇಗಳು ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂಗಳು (ADAS) ಇತ್ಯಾದಿಗಳನ್ನು ಇದು ಹೊಂದಿರಲಿದೆ.
ನಿರೀಕ್ಷಿತ ಬಿಡುಗಡೆ: 2024ರ ಮಧ್ಯ ಭಾಗ
ನಿರೀಕ್ಷಿತ ಬೆಲೆ: ರೂ 10.50 ಲಕ್ಷ
-
ಟಾಟಾ ಅಲ್ಟ್ರೋಜ್ ರೇಸರ್
ಟಾಟಾ ಅಲ್ಟ್ರೋಜ್ ರೇಸರ್ ಅನ್ನು ಮಾಮೂಲಿ ಅಲ್ಟ್ರೋಜ್ ಹ್ಯಾಚ್ ಬ್ಯಾಕ್ ನ ಸ್ಪೋರ್ಟಿಯರ್ ಅವೃತ್ತಿಯಾಗಿ ಅಟೋ ಎಕ್ಸ್ಪೊ 2023 ರಲ್ಲಿ ಪ್ರದರ್ಶಿಸಲಾಗಿತ್ತು. ಒಳಗಡೆ ಮತ್ತು ಹೊರಗಡೆ ಆಲಂಕಾರಿಕ ಬದಲಾವಣೆಗಳನ್ನು ಮಾಡಲಾಗಿದ್ದು, ಈ ಮಾದರಿಯು ಪರಿಷ್ಕೃತ ನೆಕ್ಸನ್ ನಲ್ಲಿ ದೊಎಯುವ ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ. ನೆಕ್ಸನ್ ನ 120 PS ಟರ್ಬೊ ಪೆಟ್ರೋಲ್ ಎಂಜಿನ್ ಹೊರತುಪಡಿಸಿ ಯಾಂತ್ರಿಕ ವಿಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
ನಿರೀಕ್ಷಿತ ಬಿಡುಗಡೆ: ಇನ್ನಷ್ಟೇ ದೃಢೀಕರಿಸಬೇಕು
ನಿರೀಕ್ಷಿತ ಬೆಲೆ: ರೂ 10 ಲಕ್ಷ
-
ಟಾಟಾ ನೆಕ್ಸನ್ ಡಾರ್ಕ್
ಪರಿಷ್ಕೃತ ಟಾಟಾ ನೆಕ್ಸನ್ ಬಿಡುಗಡೆಗೊಂಡು ಹಲವು ತಿಂಗಳುಗಳೇ ಕಳೆದು ಹೋಗಿವೆ. ಆದರೆ ಈ SUVಯ ಪರಿಷ್ಕರಣೆಗೆ ಮೊದಲ ಮಾದರಿಯಲ್ಲಿ ದೊರೆಯುತ್ತಿದ್ದ ಡಾರ್ಕ್ ಎಡಿಷನ್ ಅನ್ನು ಈ ಕಾರು ತಯಾರಕ ಸಂಸ್ಥೆಯು ಇನ್ನೂ ಹೊರತಂದಿಲ್ಲ. ಕಪ್ಪು ಬಣ್ಣದ ಅಲೋಯ್ ವೀಲ್ ಗಳು, ʻಡಾರ್ಕ್ʼ ಬ್ಯಾಜ್ ಗಳು, ಸಂಪೂರ್ಣ ಕಪ್ಪು ಬಣ್ಣದ ಕ್ಯಾಬಿನ್, ಮತ್ತು ಇದರ ಮೂಲ ವೇರಿಯಂಟ್ ನಲ್ಲಿರುವ ವೈಶಿಷ್ಟ್ಯಗಳು ಮತ್ತು ಪವರ್ ಟ್ರೇನ್ ವ್ಯವಸ್ಥೆ ಸೇರಿದಂತೆ ಹೆಚ್ಚಿನ ಅಂಶಗಳನ್ನು ಈ ವಾಹನದಲ್ಲಿಯೂ ಮುಂದುವರಿಸುವ ಜೊತೆಗೆ 2024ರಲ್ಲಿ ಇದು ಬಿಡುಗಡೆಗೊಳ್ಳಲಿದೆ.
ನಿರೀಕ್ಷಿತ ಬಿಡುಗಡೆ: ಇನ್ನಷ್ಟೇ ಘೋಷಿಸಬೇಕು
ನಿರೀಕ್ಷಿತ ಬೆಲೆ: ರೂ 11.30 ಲಕ್ಷ
-
ಟಾಟಾ ಹ್ಯಾರಿಯರ್ EV
ಅಕ್ಟೋಬರ್ 2023ರಲ್ಲಿ ಬಿಡುಗಡೆಯಾದ ಪರಿಷ್ಕೃತ ಟಾಟಾ ಹ್ಯಾರಿಯರ್ ನ EV ಆವೃತ್ತಿಯು 2024ರಲ್ಲಿ ಹೊರಬರಲಿದ್ದು, 2023ರ ಅಟೋ ಎಕ್ಸ್ಪೊದಲ್ಲಿ ಇದನ್ನು ಈಗಲೇ ಪ್ರದರ್ಶಿಸಲಾಗಿದೆ. ಪ್ರಮಾಣಿತ ಹ್ಯಾರಿಯರ್ ನಲ್ಲಿ ಇರುವ ವಿನ್ಯಾಸ ಮತ್ತು ವೈಶಿಷ್ಟ್ಯಗಳೇ ಇದರಲ್ಲಿ ಕಾಣಿಸಿಕೊಳ್ಳಲಿವೆ. ಜತೆಗೆ ಆಲ್ ವೀಲ್ ಡ್ರೈವ್ (AWD) ಆಯ್ಕೆಯೊಂದಿಗೆ 500 km ನಷ್ಟು ಗರಿಷ್ಠ ಶ್ರೇಣಿಯೊಂದಿಗೆ ಎಲೆಕ್ಟ್ರಿಕ್ ಪವರ್ ಟ್ರೇನ್ ಗಳ ಆಯ್ಕೆಯೊಂದಿಗೆ ಇದು ದೊರೆಯಲಿದೆ.
ನಿರೀಕ್ಷಿತ ಬಿಡುಗಡೆ: 2024ರ ಉತ್ತರಾರ್ಧ
ನಿರೀಕ್ಷಿತ ಬೆಲೆ: ರೂ 30 ಲಕ್ಷ
2024ರಲ್ಲಿ ಟಾಟಾದ ಯಾವ ಕಾರನ್ನು ನೀವು ನಿರೀಕ್ಷಿಸುವಿರಿ ಹಾಗೂ ಯಾವ ಮಾದರಿಯ ಕುರಿತು ಹೆಚ್ಚು ಉತ್ಸುಕರಾಗಿದ್ದೀರಿ? ನಿಮ್ಮ ಪ್ರತಿಕ್ರಿಯೆಗಳನ್ನು ನಮಗೆ ತಿಳಿಸಿರಿ.
ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ಬೆಲೆಗಳಾಗಿವೆ