ಮುಂಬರುವ Mahindra Thar 5-doorಗೆ ಟ್ರೇಡ್‌ಮಾರ್ಕ್ ಮಾಡಲಾದ 7 ಹೆಸರುಗಳಲ್ಲಿ ಪ್ರಮುಖ ಹೆಸರು “ಆರ್ಮಡಾ ”

published on ಡಿಸೆಂಬರ್ 20, 2023 11:46 am by rohit for ಮಹೀಂದ್ರ ಥಾರ್‌ 5-ಡೋರ್‌

  • 63 Views
  • ಕಾಮೆಂಟ್‌ ಅನ್ನು ಬರೆಯಿರಿ

ಇತರ ಹೆಸರುಗಳನ್ನು ಥಾರ್‌ನ ವಿಶೇಷ ಆವೃತ್ತಿಗಳಿಗೆ ಅಥವಾ ವೇರಿಯೆಂಟ್‌ಗಳಿಗೆ (ಟಾಟಾದಂತಹ) ಆಕರ್ಷಕ ಹೆಸರುಗಳನ್ನು ಬಳಸುವ ತಂತ್ರವಾಗಿ ಅಳವಡಿಸಿಕೊಳ್ಳಲು ಬಳಕೆಯಾಗಬಹುದು.

Mahindra Thar 5 door

ಮಹೀಂದ್ರಾ ಥಾರ್ 5 ಡೋರ್ ಈಗ ಒಂದು ವರ್ಷದಿಂದ ಇತ್ತೀಚೆಗೆ ಹೆಚ್ಚು ನಿರೀಕ್ಷಿತ ಎಸ್‌ಯುವಿಗಳಲ್ಲಿ ಒಂದಾಗಿದೆ. 2024 ರಲ್ಲಿ ಇದನ್ನು ಬಿಡುಗಡೆ ಮಾಡಲಾಗುತ್ತಿದ್ದು, ಉತ್ಪಾದನೆಗೆ ಹತ್ತಿರವಾದ ಹಂತದಲ್ಲಿರುವಾಗ ನಮಗೆ ಕಂಡುಬಂದಿದೆ. ಈಗ ಮಹಿಂದ್ರಾ ಥಾರ್ 5-ಡೋರ್‌ನ ಉತ್ಪಾದನಾ ಆವೃತ್ತಿಗೆ ಆಕರ್ಷಕ ಹೆಸರನ್ನು ಅಂತಿಮಗೊಳಿಸುವ ಹಂತದಲ್ಲಿದ್ದು ಇತ್ತೀಚೆಗೆ 7 ಹೆಸರುಗಳನ್ನು ಟ್ರೇಡ್‌ಮಾರ್ಕ್ ಮಾಡಿದೆ.

ಯಾವ ಹೆಸರುಗಳನ್ನು ಟ್ರೇಡ್‌ಮಾರ್ಕ್ ಮಾಡಲಾಗಿದೆ?

 ಮಹೀಂದ್ರಾ ಈ ಕೆಳಗಿನ ಹೆಸರುಗಳಿಗಾಗಿ ಟ್ರೇಡ್‌ಮಾರ್ಕ್‌ಗಳನ್ನು ಸಲ್ಲಿಸಿದೆ:

“Armada” Among 7 Names Trademarked For Upcoming Mahindra Thar 5-door

  •  ಥಾರ್ ಆರ್ಮಡಾ

“Armada” Among 7 Names Trademarked For Upcoming Mahindra Thar 5-door

  •  ಥಾರ್ ಕಲ್ಟ್

“Armada” Among 7 Names Trademarked For Upcoming Mahindra Thar 5-door

  •  ಥಾರ್ ರೆಕ್ಸ್

“Armada” Among 7 Names Trademarked For Upcoming Mahindra Thar 5-door

  • ಥಾರ್ ರಾಕ್ಸ್

“Armada” Among 7 Names Trademarked For Upcoming Mahindra Thar 5-door

  •  ಥಾರ್ ಸವನ್ನಾ

“Armada” Among 7 Names Trademarked For Upcoming Mahindra Thar 5-door

  • ಥಾರ್ ಗ್ಲಾಡಿಯಸ್

“Armada” Among 7 Names Trademarked For Upcoming Mahindra Thar 5-door

  • ಥಾರ್ ಸೆಂಚುರಿಯನ್

 ಇದನ್ನೂ ಪರಿಶೀಲಿಸಿ: ಮಾರುತಿ ಜಿಮ್ನಿ ವರ್ಸಸ್ ಮಹೀಂದ್ರಾ ಥಾರ್ – ಯಾವ ಪೆಟ್ರೋಲ್ ಆಟೋಮ್ಯಾಟಿಕ್ 4x4 ವೇಗವಾಗಿದೆ?

ಅತ್ಯುತ್ತಮ ಆಯ್ಕೆ ಯಾವುದು?

5-door Mahindra Thar render

 ಈ ಮೇಲಿನ 7 ಹೆಸರುಗಳಲ್ಲಿ, ‘ಮುಂಬರುವ 5-ಡೋರ್ ಮಹೀಂದ್ರಾ ಎಸ್‌ಯುವಿಯ ಹೊಸ ಹೆಸರಾಗಿ ಥಾರ್ ಆರ್ಮಡಾ ಎಂಬುದು ಪ್ರಮುಖ ಸ್ಪರ್ಧಿಯಾಗಿದೆ. ಮಹೀಂದ್ರಾ ಅದನ್ನೇ ಅಂತಿಮಗೊಳಿಸಿದರೆ ಇನ್ನೂ 6 ಥಾರ್-ಆಧಾರಿತ ಟ್ರೇಡ್‌ಮಾರ್ಕ್‌ಗಳನ್ನು ಮುಕ್ತವಾಗಿ ಬಳಸಬಹುದು.

ಕಾರು ತಯಾರಕರು 5 ಡೋರ್‌ನ ಇತರ ವೇರಿಯೆಂಟ್‌ಗಳಿಗೆ ಈ ಹೆಸರುಗಳನ್ನು ಬಳಸಬಹುದು ಎಂಬುದು ನಮ್ಮ ಅನಿಸಿಕೆಯಾಗಿದೆ. ಟಾಟಾ ಇತ್ತೀಚೆಗೆ ತನ್ನ ವೇರಿಯೆಂಟ್‌ಗಳಿಗೆ ನವೀಕೃತ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳಿಗೆ ಕೇವಲ ಅಕ್ಷರಗಳಿಂದ ಮರುಬ್ರ್ಯಾಂಡ್ ಮಾಡಿದೆ. ಥಾರ್ 3-ಡೋರ್ ಮಾದರಿಯ ಶ್ರೇಣಿಯಲ್ಲಿ ಹೊಸ ವೇರಿಯೆಂಟ್‌ಗಳನ್ನು ಪ್ರಾರಂಭಿಸಲು ಇದು ಹೊಸದಾಗಿ ಟ್ರೇಡ್‌ಮಾರ್ಕ್ ಮಾಡಿದ ಕೆಲವು ಗುರುತುಗಳನ್ನು ಬಳಸಬಹುದು. 

ಈ ಟ್ರೇಡ್‌ಮಾರ್ಕ್‌ಗಳು ಮಹೀಂದ್ರಾ ಥಾರ್‌ನ 3-ಡೋರ್ ಮತ್ತು 5-ಡೋರ್‌ನ ವಿಶೇಷ ಆವೃತ್ತಿಗಳನ್ನು ಹೊರತರುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದೆ ಮತ್ತು ಇದನ್ನು ಗಮನಿಸಿದರೆ, ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಾಂಗ್ಲರ್ ಎಸ್‌ಯುವಿಯ ಜೊತೆಗೆ ಜೀಪ್ ನಡೆಸಿದ ಪ್ರಕ್ರಿಯೆಯನ್ನು ನೆನಪಿಸುತ್ತದೆ.

 ಪವರ್‌ಟ್ರೇನ್ ಮತ್ತು ಬಿಡುಗಡೆ

ಈ ಮಹೀಂದ್ರಾ ಥಾರ್ 5-ಡೋರ್ ಅದೇ 2-ಲೀಟರ್ ಟರ್ಬೋ-ಪೆಟ್ರೋಲ್ ಮತ್ತು 2.2-ಲೀಟರ್ ಡಿಸೇಲ್ ಎಂಜಿನ್‌ಗಳನ್ನು ಅದರ 3-ಡೋರ್ ಆವೃತ್ತಿಯಲ್ಲಿರುವಂತೆಯೇ, ಹೆಚ್ಚಿನ ಔಟ್‌ಪುಟ್‌ನೊಂದಿಗೆ ಪಡೆಯುವ ನಿರೀಕ್ಷೆಯಿದೆ. ಎರಡೂ ಎಂಜಿನ್‌ಗಳು ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಪಡೆಯಲಿವೆ. ಈ ಥಾರ್ 5 ಡೋರ್ ರಿಯರ್-ವ್ಹೀಲ್-ಡ್ರೈವ್ (RWD) ಮತ್ತು 4-ವ್ಹೀಲ್-ಡ್ರೈವ್ (4WD) ಎರಡೂ ಆಯ್ಕೆಯನ್ನು ಪಡೆಯುತ್ತದೆ.

Mahindra Thar 5 door rear

 ಹೆಚ್ಚು ಪ್ರಾಯೋಗಿಕವಾದ ಥಾರ್ 2024 ರ ಮೊದಲಾರ್ಧದಲ್ಲಿ ನಿರೀಕ್ಷಿತ ಆರಂಭಿಕ ಬೆಲೆ ರೂ. 15 ಲಕ್ಷದೊಂದಿಗೆ (ಎಕ್ಸ್-ಶೋರೂಮ್) ಮಾರಾಟಕ್ಕೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಮಾರುತಿ ಜಿಮ್ಮಿಗೆ ದೊಡ್ಡ ಪರ್ಯಾಯವಾಗಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿರುವ 5-ಡೋರ್ ಫೋರ್ಸ್ ಗೂರ್ಖಾಗೂ ಸಹ ಉತ್ತಮ ಪ್ರತಿಸ್ಪರ್ಧೆಯನ್ನು ನೀಡುತ್ತದೆ

ಮೂಲ

ಇನ್ನಷ್ಟು ಇಲ್ಲಿ ಓದಿ : ಮಹೀಂದ್ರಾ ಥಾರ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಹೀಂದ್ರ ಥಾರ್‌ 5-Door

2 ಕಾಮೆಂಟ್ಗಳು
1
D
deepak chaudhary
Jan 14, 2024, 9:17:28 PM

Gladius is also good name armada look like old version car

Read More...
    ಪ್ರತ್ಯುತ್ತರ
    Write a Reply
    1
    V
    vivekanand pattar
    Dec 19, 2023, 11:57:39 AM

    ARMADA Name is a Very well Suited for the 5 door Version of Thar.

    Read More...
      ಪ್ರತ್ಯುತ್ತರ
      Write a Reply
      Read Full News

      ಕಾರು ಸುದ್ದಿ

      • ಟ್ರೆಂಡಿಂಗ್ ಸುದ್ದಿ
      • ಇತ್ತಿಚ್ಚಿನ ಸುದ್ದಿ

      trendingಎಸ್‌ಯುವಿ ಕಾರುಗಳು

      • ಲೇಟೆಸ್ಟ್
      • ಉಪಕಮಿಂಗ್
      • ಪಾಪ್ಯುಲರ್
      ×
      We need your ನಗರ to customize your experience