• English
  • Login / Register

ಭಾರತದಲ್ಲಿ Nissan ನಿಂದ ಒಂದು ಸಣ್ಣ ಇವಿ ಸೇರಿದಂತೆ 4 ಹೊಸ ಕಾರುಗಳ ಪರಿಚಯ

ಜುಲೈ 19, 2024 07:24 pm ರಂದು shreyash ಮೂಲಕ ಪ್ರಕಟಿಸಲಾಗಿದೆ

  • 213 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ನಾಲ್ಕು ಮಾಡೆಲ್ ಗಳಲ್ಲಿ, ನಿಸ್ಸಾನ್ ಮ್ಯಾಗ್ನೈಟ್ ಕೂಡ ಈ ವರ್ಷ ಫೇಸ್‌ಲಿಫ್ಟ್ ಅನ್ನು ಪಡೆಯಲಿದೆ

4 New Nissan Cars Confirmed For India, Including A Small EV

ನಿಸ್ಸಾನ್ ಇತ್ತೀಚೆಗೆ ಭಾರತದಲ್ಲಿ ತನ್ನ ನಾಲ್ಕನೇ ಜನರೇಷನ್ X-ಟ್ರಯಲ್ ಅನ್ನು ಪರಿಚಯಿಸಿದೆ, ಇದು ಒಂದು ದೊಡ್ಡ SUV ಆಗಿದ್ದು, ಇದನ್ನು ಕಂಪ್ಲೀಟ್ಲಿ ಬಿಲ್ಟ್ ಯೂನಿಟ್ (CBU) ಆಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. 2024 ರ ನಿಸ್ಸಾನ್ X-ಟ್ರಯಲ್‌ನ ಅನಾವರಣ ಸಮಯದಲ್ಲಿ, ಜಪಾನಿನ ಕಾರು ತಯಾರಕರು ಭಾರತಕ್ಕೆ ಇನ್ನೂ ನಾಲ್ಕು ಮಾಡೆಲ್ ಗಳನ್ನು ತರುವುದಾಗಿ ಘೋಷಿಸಿದರು. ಇದು ಅವರ ಪ್ರಸ್ತುತ ಮಾಡೆಲ್ ಗಳ ಅಪ್ಡೇಟ್ ಆಗಿರುವ ವರ್ಷನ್ ಮತ್ತು ಮುಂದಿನ ವರ್ಷದಲ್ಲಿ ಬರಲಿರುವ ಒಂದು ಕಾಂಪ್ಯಾಕ್ಟ್ EV ಅನ್ನು ಒಳಗೊಂಡಿದೆ. ಬನ್ನಿ, ಭಾರತದಲ್ಲಿ ಮುಂದೆ ಬರಲಿರುವ ನಿಸ್ಸಾನ್ ಕಾರುಗಳ ವಿವರವನ್ನು ನೋಡೋಣ.

ನಿಸ್ಸಾನ್ ಮ್ಯಾಗ್ನೈಟ್ ಫೇಸ್ ಲಿಫ್ಟ್

 ನಿರೀಕ್ಷಿಸಲಾಗಿರುವ ಲಾಂಚ್

 ಅಕ್ಟೋಬರ್ 2024

 ನಿರೀಕ್ಷಿಸಲಾಗಿರುವ ಬೆಲೆ

 ರೂ. 6 ಲಕ್ಷ

 ನಿಸ್ಸಾನ್ ಮ್ಯಾಗ್ನೈಟ್ ಅನ್ನು ಭಾರತದಲ್ಲಿ ಡಿಸೆಂಬರ್ 2020 ರಲ್ಲಿ ಸಬ್‌ಕಾಂಪ್ಯಾಕ್ಟ್ SUV ಸೆಗ್ಮೆಂಟ್ ನಲ್ಲಿ ಟಾಟಾ ನೆಕ್ಸಾನ್ ಮತ್ತು ಮಾರುತಿ ಬ್ರೆಜ್ಜಾಕ್ಕೆ ಪ್ರತಿಸ್ಪರ್ಧಿಯಾಗಿ ಪರಿಚಯಿಸಲಾಯಿತು.  ಮ್ಯಾಗ್ನೈಟ್ ತನ್ನ ಸೆಗ್ಮೆಂಟ್ ನಲ್ಲಿರುವ ಕೆಲವು ಇತರ ಪ್ರತಿಸ್ಪರ್ಧಿಗಳಷ್ಟು ಜನಪ್ರಿಯತೆಯನ್ನು ಸಾಧಿಸದಿದ್ದರೂ, ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಈ ಜಪಾನಿನ ವಾಹನ ತಯಾರಕರನ್ನು ಸ್ಪರ್ಧೆಯಲ್ಲಿ ಇರಿಸುವಲ್ಲಿ ಇದು ಮುಖ್ಯ ಪಾತ್ರವನ್ನು ವಹಿಸಿದೆ. ಈಗ ಇದು ಪ್ರಮುಖ ಅಪ್ಡೇಟ್ ಪಡೆಯಲು ರೆಡಿಯಾಗಿದೆ, ಮತ್ತು ನಿಸ್ಸಾನ್ ಮ್ಯಾಗ್ನೈಟ್‌ನ ಹೊಸ ವರ್ಷನ್ ಅನ್ನು 2024 ರ ಕೊನೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

 ಮ್ಯಾಗ್ನೈಟ್ ಫೇಸ್‌ಲಿಫ್ಟ್ ರಿವೈಸ್ ಆಗಿರುವ ಮುಂಭಾಗದ ಗ್ರಿಲ್, ಟ್ವೀಕ್ ಮಾಡಿದ ಮುಂಭಾಗದ ಬಂಪರ್ ಮತ್ತು ಅಪ್ಡೇಟ್ ಆಗಿರುವ ಹೆಡ್‌ಲೈಟ್ ಹೌಸಿಂಗ್ ಮತ್ತು L-ಆಕಾರದ LED DRLಗಳು ಸೇರಿದಂತೆ ಕೆಲವು ಡಿಸೈನ್ ಬದಲಾವಣೆಗಳನ್ನು ಪಡೆಯಲಿದೆ. ಇತ್ತೀಚೆಗೆ ಭಾರತ್ NCAP ಕ್ರ್ಯಾಶ್ ಟೆಸ್ಟ್ ಫೆಸಿಲಿಟಿಯಲ್ಲಿ SUVಯ ಅಪ್ಡೇಟ್ ಆಗಿರುವ ಮುಂಭಾಗದ ಡಿಸೈನ್ ಅನ್ನು ನಾವು ನೋಡಿದ್ದೇವೆ. ಇದು ವೆಂಟಿಲೇಟೆಡ್ ಫ್ರಂಟ್ ಸೀಟ್‌ ಮತ್ತು ಸಿಂಗಲ್ ಪೇನ್ ಸನ್‌ರೂಫ್ ಗಳಂತಹ ಹೊಸ ಫೀಚರ್ ಗಳನ್ನು ಪಡೆಯುವ ನಿರೀಕ್ಷೆಯಿದೆ, ಹಾಗೆಯೆ 8-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್‌ನಂತಹ ಫೀಚರ್ ಗಳನ್ನು ಉಳಿಸಿಕೊಳ್ಳಲಾಗುತ್ತದೆ.

 2024 ಮ್ಯಾಗ್ನೈಟ್ ನಲ್ಲಿ ಈಗಿರುವ ಮಾಡೆಲ್ ನಲ್ಲಿರುವ ಅದೇ ಎಂಜಿನ್ ಆಯ್ಕೆಗಳನ್ನು ನೀಡುವ ನಿರೀಕ್ಷೆಯಿದೆ.

 ಇಂಜಿನ್

 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್

 1-ಲೀಟರ್ ಟರ್ಬೊ-ಪೆಟ್ರೋಲ್

 ಪವರ್

72 PS

100 PS

 ಟಾರ್ಕ್

96 Nm

 160 Nm ವರೆಗೆ

 ಟ್ರಾನ್ಸ್‌ಮಿಷನ್

 5-ಸ್ಪೀಡ್ MT, 5-ಸ್ಪೀಡ್ AMT

 

ನಿಸ್ಸಾನ್ ಕಾಂಪ್ಯಾಕ್ಟ್ SUV / ಮಿಡ್ ಸೈಜ್ 3-ರೋ SUV

 ನಿಸ್ಸಾನ್ ಕಾಂಪ್ಯಾಕ್ಟ್ SUV

 ನಿಸ್ಸಾನ್ ಮಿಡ್ ಸೈಜ್ 3-ರೋ SUV

 ನಿರೀಕ್ಷಿಸಲಾಗಿರುವ ಲಾಂಚ್ - ಮಾರ್ಚ್ 2025

 ನಿರೀಕ್ಷಿಸಲಾಗಿರುವ ಲಾಂಚ್ - ಸೆಪ್ಟೆಂಬರ್ 2025

 ನಿರೀಕ್ಷಿಸಲಾಗಿರುವ ಬೆಲೆ - ರೂ. 10 ಲಕ್ಷ 

 ನಿರೀಕ್ಷಿಸಲಾಗಿರುವ ಬೆಲೆ - ರೂ. 12 ಲಕ್ಷ

New Renault and Nissan C-segment SUVs teased

 ಮುಂಬರುವ ವರ್ಷಗಳಲ್ಲಿ ಭಾರತಕ್ಕೆ ತನ್ನ 7-ಸೀಟರ್ ವರ್ಷನ್ ನೊಂದಿಗೆ ಕ್ರೆಟಾ ಜೊತೆಗೆ ಸ್ಪರ್ಧಿಸಲು ಕಾಂಪ್ಯಾಕ್ಟ್ SUV ಅನ್ನು ಕೂಡ ತರುವುದಾಗಿ ನಿಸ್ಸಾನ್ ಘೋಷಿಸಿದೆ. ಕಾಂಪ್ಯಾಕ್ಟ್ SUVಯು ಭಾರತದಲ್ಲಿ ಬರಲಿರುವ ಹೊಸ ರೆನಾಲ್ಟ್ ಡಸ್ಟರ್‌ ನಲ್ಲಿ ಬಳಸಲಾಗಿರುವ CMF-B ಪ್ಲಾಟ್‌ಫಾರ್ಮ್ ಅನ್ನು ಬಳಸುವ ಸಾಧ್ಯತೆಯಿದೆ. ನಿಸ್ಸಾನ್ ತನ್ನ ಮುಂಬರುವ SUV ಬಗ್ಗೆ ಹೆಚ್ಚಿನ ವಿವರಗಳನ್ನು ಒದಗಿಸದಿದ್ದರೂ, ಹೊಸ ಡಸ್ಟರ್‌ನಲ್ಲಿರುವ ಅದೇ ಎಂಜಿನ್ ಆಯ್ಕೆಗಳನ್ನು ಪಡೆಯುವ ನಿರೀಕ್ಷೆಯಿದೆ. ಮುಂಬರುವ ನಿಸ್ಸಾನ್ SUV ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಕ್ಲಿಕ್ ಮಾಡಿ.

 ಕಾಂಪ್ಯಾಕ್ಟ್ SUV ಭಾರತದಲ್ಲಿ ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಮುಂತಾದವುಗಳಿಗೆ ಪ್ರತಿಸ್ಪರ್ಧಿಯಾಗಲಿದೆ, ಹಾಗೆಯೆ 7-ಸೀಟರ್ ವರ್ಷನ್ ಗಳು ಮಹೀಂದ್ರಾ XUV700, 2024 ಹ್ಯುಂಡೈ ಅಲ್ಕಾಜರ್ ಮತ್ತು MG ಹೆಕ್ಟರ್ ಪ್ಲಸ್‌ನ 7-ಸೀಟರ್ ವೇರಿಯಂಟ್ ಗಳಿಗೆ ಸ್ಪರ್ಧೆಯನ್ನು ನೀಡಲಿದೆ.

 ಒಂದು ಸಣ್ಣ ಗಾತ್ರದ EV

 ನಿರೀಕ್ಷಿಸಲಾಗಿರುವ ಲಾಂಚ್

 ಮಾರ್ಚ್ 2026

 ಟಾಟಾ ಟಿಯಾಗೊ EV ಮತ್ತು MG ಕಾಮೆಟ್ EV ಯೊಂದಿಗೆ ಸ್ಪರ್ಧಿಸಲು ನಿಸ್ಸಾನ್ ಭಾರತದಲ್ಲಿ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಲು ತಯಾರಿ ನಡೆಸುತ್ತಿದೆ. ನಿಸ್ಸಾನ್ ತನ್ನ ಮುಂಬರುವ EV ಕುರಿತು ಇನ್ನೂ ವಿವರಗಳನ್ನು ಬಹಿರಂಗಪಡಿಸಿಲ್ಲ, ಆದರೆ ಇದು 2026 ರ ಹೊತ್ತಿಗೆ ಬಿಡುಗಡೆಯಾಗಬಹುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ನಿಸ್ಸಾನ್‌ನ ಸಣ್ಣ ಗಾತ್ರದ EV ಸುಮಾರು 300 ಕಿಮೀ ರೇಂಜ್ ಅನ್ನು ನೀಡುವ ಸಾಧ್ಯತೆಯಿದೆ.

 ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.

was this article helpful ?

Write your ಕಾಮೆಂಟ್

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ ಇ vitara
    ಮಾರುತಿ ಇ vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience