ಭಾರತಕ್ಕಾಗಿ ಸಿದ್ಧವಾಗುತ್ತಿರುವ ಹೊಸ Renault ಮತ್ತು Nissan ಎಸ್‌ಯುವಿಗಳ ಟೀಸರ್‌ ಮೊದಲ ಬಾರಿಗೆ ಔಟ್‌, 2025 ರಲ್ಲಿ ಬಿಡುಗಡೆ ಆಗುವ ಸಾಧ್ಯತೆ

published on ಮಾರ್ಚ್‌ 28, 2024 05:48 pm by rohit for ರೆನಾಲ್ಟ್ ಡಸ್ಟರ್ 2025

 • 22 Views
 • ಕಾಮೆಂಟ್‌ ಅನ್ನು ಬರೆಯಿರಿ

ಈ ಎರಡೂ ಎಸ್‌ಯುವಿಗಳು CMF-B ಎಂಬ ಹೊಸ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತವೆ, ಇದನ್ನು ಭಾರತೀಯ ರಸ್ತೆಗೆ ಅನುಗುಣವಾಗಿ ಸಾಕಷ್ಟು ಕಸ್ಟಮೈಸ್ ಮಾಡಲಾಗಿದೆ. ಶೀಘ್ರದಲ್ಲೇ ಭಾರತಕ್ಕೆ ಬರಲಿರುವ ಇತರ ರೆನಾಲ್ಟ್-ನಿಸ್ಸಾನ್ ಕಾರುಗಳಿಗೂ ಈ ಪ್ಲಾಟ್‌ಫಾರ್ಮ್ ಅನ್ನು ಬಳಸಲಾಗುವುದು.

New Renault and Nissan C-segment SUVs teased

 •  ರೆನಾಲ್ಟ್ ಮತ್ತು ನಿಸ್ಸಾನ್ 2025 ರಲ್ಲಿ ಭಾರತದಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್ ಗೆ ಮರು-ಪ್ರವೇಶಿಸಲಿದೆ.
 •  ಹೊಸ  ಎಸ್‌ಯುವಿಗಳ ಮೊದಲ ಟೀಸರ್ ಚಿತ್ರ ಹೊರಬಂದಿದೆ; ಇದು ಈ ಎರಡೂ SUV ಗಳ ಒರಟಾದ ಮತ್ತು ಸ್ಟೈಲಿಶ್ ಲುಕ್ ಅನ್ನು ತೋರಿಸುತ್ತದೆ.
 •  ಇದು ಹೊಸ (ಭಾರತಕ್ಕಾಗಿ ತಯಾರಿಸಲಾದ) ಮತ್ತು ಹೆಚ್ಚು ಸ್ಥಳೀಯ ಬಳಕೆಗೆ ತಯಾರಿಸಿದ CMF-B ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ
 •  CMF-B ಪ್ಲಾಟ್‌ಫಾರ್ಮ್ ಅನ್ನು ಪ್ರತಿ ಬ್ರಾಂಡ್‌ನ ಒಂದು 5-ಸೀಟರ್ ಮತ್ತು ಒಂದು 7-ಸೀಟರ್ SUV ಗಾಗಿ ಕೂಡ ಬಳಸಲಾಗುವುದು.
 •  ಇದು ಕೇವಲ ಪೆಟ್ರೋಲ್ ನಲ್ಲಿ ಮಾತ್ರ ಬರುವ ನಿರೀಕ್ಷೆಯಿದೆ; ಮತ್ತು ಟರ್ಬೊ-ಪೆಟ್ರೋಲ್ ಪವರ್‌ಟ್ರೇನ್ ಎಂಜಿನ್ ಅನ್ನು ಪಡೆಯಬಹುದು.
 •  5-ಸೀಟರ್ ಮಾಡೆಲ್ ಗಳು 2025 ರಲ್ಲಿ ಬರುವ ನಿರೀಕ್ಷೆಯಿದೆ ಮತ್ತು ಬೆಲೆಯು ರೂ. 10 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ (ಎಕ್ಸ್ ಶೋರೂಂ).
 • 5-ಸೀಟರ್ ಮಾಡೆಲ್ ಗಳು 2025 ರಲ್ಲಿ ಬರುವ ನಿರೀಕ್ಷೆಯಿದೆ ಮತ್ತು ಎಕ್ಸ್ ಶೋರೂಂ ಬೆಲೆಯು ರೂ. 10 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ.

2023 ರ ಆರಂಭದಲ್ಲಿ ನಾವು ನಾಲ್ಕು SUV ಗಳೊಂದಿಗೆ ಆರು ಹೊಸ ಮಾಡೆಲ್ ಗಳನ್ನು ಭಾರತಕ್ಕೆ ತರುವ ರೆನಾಲ್ಟ್-ನಿಸ್ಸಾನ್‌ನ ಪ್ಲಾನ್ ನ ಬಗ್ಗೆ ತಿಳಿದುಕೊಂಡೆವು. ಈಗ, ಕಾರು ತಯಾರಕರು ಭಾರತಕ್ಕಾಗಿ ತಮ್ಮ ಹೊಸ SUV ಗಳ ಮೊದಲ ಲುಕ್ ಅನ್ನು ಬಿಡುಗಡೆ ಮಾಡಿದ್ದಾರೆ. ಅವು 2025ರ ಸುಮಾರಿಗೆ ಮಾರುಕಟ್ಟೆಗೆ ಬರಬಹುದು.

ಟೀಸರ್ ಚಿತ್ರದಲ್ಲಿ ಏನೇನಿದೆ?

New Renault C-segment SUV teased

 ಟೀಸರ್ ನಮಗೆ ಹೊಸ ಸಣ್ಣ SUV ಗಳ ಫಸ್ಟ್ ಲುಕ್ ಅನ್ನು ತೋರಿಸುತ್ತದೆ. ರೆನಾಲ್ಟ್ ಮತ್ತು ನಿಸ್ಸಾನ್ ಎರಡರಿಂದಲೂ ಅವುಗಳನ್ನು ಅಧಿಕೃತವಾಗಿ C-ಸೆಗ್ಮೆಂಟ್ SUVಗಳು ಎಂದು ಕರೆಯಲಾಗುತ್ತದೆ. ಮುಂಭಾಗದ ಭಾಗವನ್ನು ತೋರಿಸುವ ಡಿಸೈನ್ ನಲ್ಲಿ, ರೆನಾಲ್ಟ್ SUV ದೊಡ್ಡ ಮುಂಭಾಗದ ಬಂಪರ್ ಮತ್ತು ಎತ್ತರದ ಸ್ಕಿಡ್ ಪ್ಲೇಟ್ ನೊಂದಿಗೆ ಅದ್ಭುತವಾಗಿ ಕಾಣುತ್ತದೆ. ಮತ್ತೊಂದೆಡೆ, ನಿಸ್ಸಾನ್ ಮಾಡೆಲ್ ಬಾನೆಟ್‌ನ ಅಗಲವನ್ನು ಹೊಂದಿರುವ ಸಂಪರ್ಕಿತ LED DRL ಸ್ಟ್ರಿಪ್‌ನೊಂದಿಗೆ ಹೆಚ್ಚು ಸ್ಟೈಲಿಶ್ ಲುಕ್ ಅನ್ನು ಹೊಂದಿದೆ ಮತ್ತು ಗ್ರಿಲ್‌ನ ಮಧ್ಯದಲ್ಲಿ ನಿಸ್ಸಾನ್ ಲೋಗೋದ ಉದ್ದಕ್ಕೂ ಹೋಗುವ ಎರಡು ನಯವಾದ ಕ್ರೋಮ್ ಬಾರ್‌ಗಳನ್ನು ಹೊಂದಿದೆ. ಅವುಗಳು ಒಂದೇ ರೀತಿಯ ಮೆಕ್ಯಾನಿಕಲ್ ಭಾಗಗಳನ್ನು ಹೊಂದಿದ್ದರೂ ಕೂಡ, ಎರಡೂ SUV ಗಳು ವಿಭಿನ್ನವಾಗಿ ಕಾಣುವ ಸಾಧ್ಯತೆಯಿದೆ.

ಅವುಗಳ ಪ್ಲಾಟ್‌ಫಾರ್ಮ್‌ ಬಗ್ಗೆ ಹೆಚ್ಚಿನ ವಿವರಗಳು

New Nissan C-segment SUV teased

 ಈ ಎರಡೂ SUV ಗಳನ್ನು CMF-B ಎಂಬ ಹೊಚ್ಚ ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುವುದು, ಇದನ್ನು ಭಾರತಕ್ಕೆ ಸಾಕಷ್ಟು ಕಸ್ಟಮೈಸ್ ಮಾಡಲಾಗಿದೆ. ಈ ಪ್ಲಾಟ್‌ಫಾರ್ಮ್ ಅನ್ನು ಎರಡೂ ವಾಹನ ತಯಾರಕರ ನಾಲ್ಕು ಹೊಸ C-ಸೆಗ್‌ಮೆಂಟ್ SUVಗಳಿಗಾಗಿ ಬಳಸಲಾಗುತ್ತದೆ, ಅವುಗಳೆಂದರೆ 5-ಸೀಟರ್ SUV ಮತ್ತು ಒಂದು 7-ಸೀಟರ್ SUV, ಪ್ರತಿ ಬ್ರಾಂಡ್‌ಗೆ. ಈ ಹೊಸ ಮಾಡೆಲ್ ಗಳನ್ನು ಭಾರತದಲ್ಲಿ ತಯಾರಿಸಲಾಗುವುದು ಮತ್ತು ನಂತರ ಪ್ರಪಂಚದಾದ್ಯಂತದ ಇತರ ದೇಶಗಳಿಗೆ ಕಳುಹಿಸಲಾಗುವುದು.

 ಅವುಗಳ ಪವರ್‌ಟ್ರೇನ್ ಹೇಗಿದೆ?

2025 Renault Duster

 ನಮಗೆ ಅವುಗಳ ಎಂಜಿನ್‌ಗಳ ಕುರಿತು ನಿರ್ದಿಷ್ಟ ಮಾಹಿತಿ ಇನ್ನೂ ಕೂಡ ಲಭ್ಯವಿಲ್ಲ, ಆದರೆ ಎರಡೂ SUV ಗಳು ಪೆಟ್ರೋಲ್ ಎಂಜಿನ್‌ಗಳನ್ನು ಮಾತ್ರ ಪಡೆಯುವ ಸಾಧ್ಯತೆಯಿದೆ. ಏಕೆಂದರೆ ಭಾರತದಲ್ಲಿ ಡೀಸೆಲ್ ಎಂಜಿನ್ ಹೊಂದಿರುವ ಕಾರುಗಳ ಮಾರಾಟವನ್ನು ರೆನಾಲ್ಟ್ ಮತ್ತು ನಿಸ್ಸಾನ್ ನಿಲ್ಲಿಸಿವೆ. ಎರಡೂ ಮಾಡೆಲ್ ಗಳು ಅವುಗಳ ಕೆಲವು ಪ್ರಮುಖ ಪ್ರತಿಸ್ಪರ್ಧಿಗಳು ನೀಡುವ ಟರ್ಬೋಚಾರ್ಜ್ ಆಗಿರುವ ಪೆಟ್ರೋಲ್ ಎಂಜಿನ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಈ ನಾಲ್ಕು ಹೊಸ SUV ಗಳಲ್ಲಿ ಒಂದು ನ್ಯೂ-ಜನರೇಷನ್ ರೆನಾಲ್ಟ್ ಡಸ್ಟರ್ ಆಗಿರುತ್ತದೆ ಎಂದು ಭಾವಿಸಿದರೆ, ಆಲ್-ವೀಲ್-ಡ್ರೈವ್ ಆಯ್ಕೆಯನ್ನು ಕೂಡ ನೀಡಬಹುದು.

 ಇದನ್ನು ಕೂಡ ಓದಿ: ಫೋಕ್ಸ್‌ವ್ಯಾಗನ್ ಭಾರತದಲ್ಲಿ ಸಬ್-4m SUV ಅನ್ನು ನೀಡುವುದಿಲ್ಲ, ಬದಲಿಗೆ ಪ್ರೀಮಿಯಂ ಮಾಡೆಲ್ ಗಳ ಮೇಲೆ ಗಮನಹರಿಸಲಿದೆ

 ನಿರೀಕ್ಷಿಸಲಾಗಿರುವ ಬಿಡುಗಡೆಯ ಸಮಯ ಮತ್ತು ಬೆಲೆ

 ರೆನಾಲ್ಟ್-ನಿಸ್ಸಾನ್ SUVಗಳು, ವಿಶೇಷವಾಗಿ ಐದು ಸೀಟುಗಳನ್ನು ಹೊಂದಿರುವ SUVಗಳು, 2025 ರಲ್ಲಿ ಮಾರುಕಟ್ಟೆಗೆ ಬರಲಿವೆ ಎಂಬುದು ನಮ್ಮ ನಿರೀಕ್ಷೆಯಾಗಿದೆ. ಅವುಗಳ ಬೆಲೆಯು ರೂ 10 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ (ಎಕ್ಸ್ ಶೋರೂಂ). ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಹ್ಯುಂಡೈ ಕ್ರೆಟಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಸ್ಕೋಡಾ ಕುಶಾಕ್, ಹೋಂಡಾ ಎಲಿವೇಟ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್ ನಂತಹ SUV ಗಳಿಗೆ ಇವು ಪ್ರತಿಸ್ಪರ್ಧಿಯಾಗಲಿವೆ.

 7-ಸೀಟರ್ SUV ಗಳು ಬಹುಶಃ 2026 ರ ಆರಂಭದಲ್ಲಿ ಬರುವ ನಿರೀಕ್ಷೆಯಿದೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ರೆನಾಲ್ಟ್ ಡಸ್ಟರ್ 2025

Read Full News

ಕಾರು ಸುದ್ದಿ

 • ಟ್ರೆಂಡಿಂಗ್ ಸುದ್ದಿ
 • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

 • ಲೇಟೆಸ್ಟ್
 • ಉಪಕಮಿಂಗ್
 • ಪಾಪ್ಯುಲರ್
×
We need your ನಗರ to customize your experience