- + 9ಬಣ್ಣಗಳು
- + 38ಚಿತ್ರಗಳು
- shorts
- ವೀಡಿಯೋಸ್
ಹುಂಡೈ ಅಲ್ಕಝರ್
ಹುಂಡೈ ಅಲ್ಕಝರ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1482 ಸಿಸಿ - 1493 ಸಿಸಿ |
ಪವರ್ | 114 - 158 ಬಿಹೆಚ್ ಪಿ |
ಟಾರ್ಕ್ | 250 Nm - 253 Nm |
ಆಸನ ಸಾಮರ್ಥ್ಯ | 6, 7 |
ಡ್ರೈವ್ ಟೈಪ್ | ಫ್ರಂಟ್ ವೀಲ್ |
ಮೈಲೇಜ್ | 17.5 ಗೆ 20.4 ಕೆಎಂಪಿಎಲ್ |
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಕ್ರುಯಸ್ ಕಂಟ್ರೋಲ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ಸನ್ರೂಫ್
- powered ಮುಂಭಾಗ ಸೀಟುಗಳು
- 360 degree camera
- adas
- ವೆಂಟಿಲೇಟೆಡ್ ಸೀಟ್‌ಗಳು
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್‌ಗಳು
ಅಲ್ಕಝರ್ ಇತ್ತೀಚಿನ ಅಪ್ಡೇಟ್
ಹ್ಯುಂಡೈ ಅಲ್ಕಾಜರ್ ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಅನ್ನು ಇತ್ತೀಚೆಗೆ ತಾಜಾ ವಿನ್ಯಾಸ ಮತ್ತು ಹೊಸ ಫೀಚರ್‌ಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಹೊಸ ಅಲ್ಕಾಜರ್‌ಗಾಗಿ ನಮ್ಮ ವಿವರವಾದ ಇಂಟಿರಿಯರ್‌ನ ಚಿತ್ರ ಗ್ಯಾಲರಿಯನ್ನು ಸಹ ನೀವು ನೋಡಬಹುದು.
ಹ್ಯುಂಡೈ ಅಲ್ಕಾಜರ್‌ನ ಬೆಲೆ ಎಷ್ಟು?
ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ, ಇದರ ಬೆಲೆ 14.99 ಲಕ್ಷ ರೂ.ನಿಂದ 21.55 ಲಕ್ಷ ರೂ.ವರೆಗೆ ಇರಲಿದೆ. ಟರ್ಬೊ-ಪೆಟ್ರೋಲ್ ಎಂಜಿನ್‌ನ ಬೆಲೆಗಳು 14.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ. ಡೀಸೆಲ್ ವೇರಿಯೆಂಟ್‌ಗಳ ಬೆಲೆ 15.99 ಲಕ್ಷ ರೂ.ನಿಂದ ಇರಲಿದೆ (ಎಲ್ಲಾ ಬೆಲೆಗಳು ನವದೆಹಲಿಯ ಪರಿಚಯಾತ್ಮಕ ಎಕ್ಸ್ ಶೋ ರೂಂ).
ಹ್ಯುಂಡೈ ಅಲ್ಕಾಜರ್‌ನ ಆಯಾಮಗಳು ಯಾವುವು?
ಅಲ್ಕಾಜರ್ ಕಾರು ಹ್ಯುಂಡೈ ಕ್ರೆಟಾ ಆಧಾರಿತ ಮೂರು-ಸಾಲಿನ ಫ್ಯಾಮಿಲಿ ಎಸ್‌ಯುವಿ ಆಗಿದೆ. ಆಯಾಮಗಳು ಕೆಳಕಂಡಂತಿವೆ:
ಉದ್ದ: 4,560 ಮಿ.ಮೀ
ಅಗಲ: 1,800 ಮಿ.ಮೀ
ಎತ್ತರ: 1,710 ಮಿ.ಮೀ (ರೂಫ್ ರೇಲ್ಸ್‌ನೊಂದಿಗೆ)
ವೀಲ್‌ಬೇಸ್: 2,760 ಮಿ.ಮೀ
ಹ್ಯುಂಡೈ ಅಲ್ಕಾಜರ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?
ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ 4 ವಿಶಾಲ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ -
-
ಎಕ್ಸಿಕ್ಯೂಟಿವ್
-
ಪ್ರೆಸ್ಟೀಜ್
-
ಪ್ಲಾಟಿನಂ
-
ಸಿಗ್ನೇಚರ್
ಎಕ್ಸಿಕ್ಯುಟಿವ್ ಮತ್ತು ಪ್ರೆಸ್ಟೀಜ್ ವೇರಿಯೆಂಟ್‌ಗಳು ಕೇವಲ 7-ಸೀಟರ್ ಸೆಟಪ್ ಅನ್ನು ಪಡೆಯುತ್ತವೆ ಆದರೆ ಹೆಚ್ಚು ಪ್ರೀಮಿಯಂ ಪ್ಲಾಟಿನಂ ಮತ್ತು ಸಿಗ್ನೇಚರ್ ವೇರಿಯೆಂಟ್‌ಗಳು 6- ಮತ್ತು 7-ಸೀಟರ್‌ಗಳ ಆಯ್ಕೆಗಳೊಂದಿಗೆ ಬರುತ್ತವೆ.
ಹ್ಯುಂಡೈ ಅಲ್ಕಾಜರ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್, ಹ್ಯುಂಡೈ ಕ್ರೆಟಾದಂತೆಯೇ, ಅದ್ಭುತ ಫೀಚರ್‌ಗಳೊಂದಿಗೆ ತುಂಬಿದೆ. ಈ ಹೊಸ ಹ್ಯುಂಡೈ ಕಾರು 10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳನ್ನು(ಒಂದು ಟಚ್‌ಸ್ಕ್ರೀನ್ ಮತ್ತು ಇನ್ನೊಂದು ಡ್ರೈವರ್ ಡಿಸ್‌ಪ್ಲೇಗಾಗಿ), ಡ್ಯುಯಲ್-ಝೋನ್ ಎಸಿ ಜೊತೆಗೆ ಹಿಂಭಾಗದ ದ್ವಾರಗಳು ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಪಡೆಯುತ್ತದೆ. ಇದು ಸಹ-ಚಾಲಕ ಸೀಟಿಗೆ ಬಾಸ್ ಮೋಡ್ ಫಂಕ್ಷನ್ ಅನ್ನು ಮತ್ತು ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಗೆ ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಸಹ ಪಡೆಯುತ್ತದೆ. ಇದು ಡ್ರೈವರ್‌ಗಾಗಿ ಮೆಮೊರಿ ಫಂಕ್ಷನ್‌ನೊಂದಿಗೆ 8-ವೇ ಚಾಲಿತ ಮುಂಭಾಗದ ಸೀಟ್‌ಗಳು, 1 ನೇ ಮತ್ತು 2 ನೇ ಸಾಲಿನಲ್ಲಿ ವೆಂಟಿಲೇಟೆಡ್ ಸೀಟ್‌ಗಳು (ಎರಡನೆಯದು 6-ಆಸನಗಳ ಆವೃತ್ತಿಯಲ್ಲಿ ಮಾತ್ರ) ಮತ್ತು ಟಂಬಲ್-ಡೌನ್ 2 ನೇ-ಸಾಲಿನ ಸೀಟ್‌ಗಳನ್ನು ಸಹ ಪಡೆಯುತ್ತದೆ.
ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?
ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಅನ್ನು ಹ್ಯುಂಡೈ ಅಲ್ಕಾಜರ್ 2023 ರಂತೆಯೇ ಅದೇ ಎಂಜಿನ್‌ಗಳೊಂದಿಗೆ ನೀಡುತ್ತದೆ. ಇದು 1.5-ಲೀಟರ್ ಟರ್ಬೊ-ಪೆಟ್ರೋಲ್ (160 ಪಿಎಸ್/253 ಎನ್‌ಎಮ್) ಮತ್ತು 1.5-ಲೀಟರ್ ಡೀಸೆಲ್ (116 ಪಿಎಸ್/250 ಎನ್‌ಎಮ್) ಎಂಜಿನ್‌ಗಳನ್ನು ಪಡೆಯುತ್ತದೆ. 6-ಸ್ಪೀಡ್ ಮ್ಯಾನುವಲ್ ಎರಡೂ ಎಂಜಿನ್‌ನೊಂದಿಗೆ ಪ್ರಮಾಣಿತವಾಗಿ ಲಭ್ಯವಿದೆ. ಟರ್ಬೊ-ಪೆಟ್ರೋಲ್ ಎಂಜಿನ್ 7-ಸ್ಪೀಡ್ ಡಿಸಿಟಿ (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ಆಯ್ಕೆಯೊಂದಿಗೆ ಬರುತ್ತದೆ, ಡೀಸೆಲ್ ಒಪ್ಶನಲ್ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಪಡೆಯುತ್ತದೆ.
ಹ್ಯುಂಡೈ ಅಲ್ಕಾಜರ್‌ನ ಮೈಲೇಜ್ ಎಷ್ಟು?
ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್‌ನ ಮೈಲೇಜ್ ಅಂಕಿಅಂಶಗಳು ಇಲ್ಲಿವೆ:
-
1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಜೊತೆಗೆ 6-ಸ್ಪೀಡ್ ಮ್ಯಾನ್ಯುವಲ್: ಪ್ರತಿ ಲೀ.ಗೆ 17.5 ಕಿ.ಮೀ
-
1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಜೊತೆಗೆ 7-ಸ್ಪೀಡ್ DCT: ಪ್ರತಿ ಲೀ.ಗೆ 18 ಕಿ.ಮೀ.
-
1.5-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 6-ಸ್ಪೀಡ್ ಮ್ಯಾನ್ಯುವಲ್: ಪ್ರತಿ ಲೀ.ಗೆ 20.4 ಕಿ.ಮೀ.
-
1.5-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 6-ಸ್ಪೀಡ್ ಆಟೋಮ್ಯಾಟಿಕ್: ಪ್ರತಿ ಲೀ.ಗೆ 18.1 ಕಿ.ಮೀ.
ಹೊಸ ಅಲ್ಕಾಜರ್ ಕಾರಿನ ಈ ಇಂಧನ ದಕ್ಷತೆಯ ಅಂಕಿಅಂಶಗಳನ್ನು ARAI (ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ) ಪರೀಕ್ಷಿಸಿದೆ.
ಹುಂಡೈ ಅಲ್ಕಾಜರ್ ಎಷ್ಟು ಸುರಕ್ಷಿತವಾಗಿದೆ?
ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್‌ನ ಸುರಕ್ಷತಾ ಅಂಶವನ್ನು ಎನ್‌ಸಿಎಪಿ (ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ) ಕ್ರ್ಯಾಶ್ ಸುರಕ್ಷತಾ ಪರೀಕ್ಷೆಗೆ ಒಳಪಡಿಸಿದಾಗ ನಿರ್ಧರಿಸಲಾಗುತ್ತದೆ. ಹೊರಹೋಗುವ ಅಲ್ಕಾಜರ್ ಆಧಾರಿತವಾದ ಪೂರ್ವ-ಫೇಸ್‌ಲಿಫ್ಟ್ ಹ್ಯುಂಡೈ ಕ್ರೆಟಾವನ್ನು ಗ್ಲೋಬಲ್ ಎನ್‌ಸಿಎಪಿ ಪರೀಕ್ಷಿಸಿದೆ ಮತ್ತು ಇದು 5 ರಲ್ಲಿ 3 ಸ್ಟಾರ್ ರೇಟಿಂಗ್ ಗಳಿಸಿದೆ.
ಸುರಕ್ಷತಾ ಸೂಟ್ ಕುರಿತು ಹೇಳುವುದಾದರೆ, ಹೊಸ ಅಲ್ಕಾಜರ್ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS), 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ನಂತೆ), 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುತ್ತದೆ.
ಆದಾಗಿಯೂ, ಹೊಸ ಪ್ರಮಾಣಿತ ಸುರಕ್ಷತಾ ಫೀಚರ್‌ಗಳ ಸೇರ್ಪಡೆಯೊಂದಿಗೆ, 2022 ರಲ್ಲಿ ಅದರ ಕ್ರೆಟಾ ಸಹೋದರರು ಗಳಿಸಿದ್ದಕ್ಕಿಂತ ಉತ್ತಮವಾಗಿ ಅಲ್ಕಾಜರ್ ಫೇಸ್‌ಲಿಫ್ಟ್ ಸ್ಕೋರ್ ಮಾಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.
ಎಷ್ಟು ಬಣ್ಣದ ಆಯ್ಕೆಗಳಿವೆ?
ಹೊಸ ಹ್ಯುಂಡೈ ಅಲ್ಕಾಜರ್ ಎಂಟು ಮೊನೊಟೋನ್ ಮತ್ತು ಡ್ಯುಯಲ್ ಟೋನ್ ಆಯ್ಕೆಯಲ್ಲಿ ಲಭ್ಯವಿದೆ. ಇವುಗಳಲ್ಲಿ ಟೈಟಾನ್ ಗ್ರೇ ಮ್ಯಾಟ್, ರಾಬಸ್ಟ್ ಎಮರಾಲ್ಡ್ ಮ್ಯಾಟ್ (ಹೊಸ), ಸ್ಟಾರಿ ನೈಟ್, ರೇಂಜರ್ ಖಾಕಿ, ಫಿಯರಿ ರೆಡ್, ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್ ಮತ್ತು ಬ್ಲ್ಯಾಕ್ ರೂಫ್‌ನ ಬಣ್ಣದ ಯೋಜನೆಯೊಂದಿಗೆ ಅಟ್ಲಾಸ್ ವೈಟ್ ಸೇರಿವೆ.
ನಾವು ವಿಶೇಷವಾಗಿ ಇಷ್ಟಪಟ್ಟದ್ದು: ನಾವು ನಿರ್ದಿಷ್ಟವಾಗಿ ರೇಂಜರ್ ಖಾಕಿಯನ್ನು ಇಷ್ಟಪಡುತ್ತೇವೆ, ಏಕೆಂದರೆ ಇದು ಎಸ್‌ಯುವಿಗೆ ದೃಢವಾದ, ಎಲ್ಲಾ ಕಡೆಯು ಎದ್ದುಕಾಣುವಂತೆ ಮಾಡುತ್ತದೆ ಮತ್ತು ಪ್ರೀಮಿಯಂ ನೋಟವನ್ನು ಕಾಪಾಡಿಕೊಳ್ಳುತ್ತದೆ.
ನೀವು ಅಲ್ಕಾಜರ್ ಫೇಸ್‌ಲಿಫ್ಟ್ ಅನ್ನು ಖರೀದಿಸಬೇಕೇ?
ನೀವು ಪವರ್, ಮೌಲ್ಯ ಮತ್ತು ಫೀಚರ್‌ಗಳನ್ನು ಸಂಯೋಜಿಸುವ ಮೂರು-ಸಾಲಿನ ಎಸ್‌ಯುವಿಯನ್ನು ಹುಡುಕುತ್ತಿದ್ದರೆ ಅದು ಪ್ರಬಲ ಸ್ಪರ್ಧಿಯಾಗಿದೆ. ಅದರ ಎರಡು ಪ್ರಬಲ ಎಂಜಿನ್ ಆಯ್ಕೆಗಳೊಂದಿಗೆ: 1.5-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್, ಹೊಸ ಅಲ್ಕಾಜರ್ ಪ್ರಭಾವಶಾಲಿ ಫರ್ಫಾರ್ಮೆನ್ಸ್ ಅನ್ನು ನೀಡುತ್ತದೆ ಮತ್ತು ಅದರ ಸೆಗ್ಮೆಂಟ್‌ನಲ್ಲಿ ಎದ್ದು ಕಾಣುತ್ತದೆ.
ಅದರ ಪ್ರತಿಸ್ಪರ್ಧಿಗಳ ವಿರುದ್ಧ ಸ್ಪರ್ಧಾತ್ಮಕವಾಗಿ ಬೆಲೆ ನಿಗದಿಪಡಿಸಲಾಗಿದೆ, ಇದು ನೀಡುವ ಹಣಕ್ಕಿಂತ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ. 10.25-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು, ಡ್ಯುಯಲ್-ಜೋನ್ ಎಸಿ, ಪನೋರಮಿಕ್ ಸನ್‌ರೂಫ್ ಮತ್ತು 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಎಡಿಎಎಸ್‌ನಂತಹ ಸುಧಾರಿತ ಸುರಕ್ಷತಾ ತಂತ್ರಜ್ಞಾನವನ್ನು ಒಳಗೊಂಡಂತೆ ಇಂಟಿರಿಯರ್ ಫೀಚರ್‌ಗಳಿಂದ ತುಂಬಿರುತ್ತದೆ.
ಹೆಚ್ಚುವರಿಯಾಗಿ, ಹ್ಯುಂಡೈ ಕ್ರೆಟಾದ ಶೈಲಿಯೊಂದಿಗೆ ಹೊಂದಿಕೆಯಾಗುವ ಫೇಸ್‌ಲಿಫ್ಟೆಡ್ ವಿನ್ಯಾಸವು ಆಧುನಿಕ-ದಿನದ ಎಸ್‌ಯುವಿಗಳಿಗೆ ಸಂಬಂಧಿಸಿದ ಲುಕ್ ಅನ್ನು ನೀಡುವುದನ್ನು ಹೆಚ್ಚಿಸುತ್ತದೆ. ಶಕ್ತಿಯುತ ಎಂಜಿನ್‌ಗಳು, ಫೀಚರ್-ಸಮೃದ್ಧ ಕ್ಯಾಬಿನ್ ಮತ್ತು ಸ್ಪರ್ಧಾತ್ಮಕ ಬೆಲೆಗಳ ಸಂಯೋಜನೆಯು ಅಲ್ಕಾಜರ್ ಫೇಸ್‌ಲಿಫ್ಟ್ ಅನ್ನು ಅದರ ಸೆಗ್ಮೆಂಟ್‌ನಲ್ಲಿ ಬಲವಾದ ಆಯ್ಕೆಯನ್ನಾಗಿ ಮಾಡುತ್ತದೆ.
ನನ್ನ ಪರ್ಯಾಯಗಳು ಯಾವುವು?
ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಎಮ್‌ಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಮಹೀಂದ್ರಾ ಎಕ್ಸ್‌ಯುವಿ700 ನ 6/7-ಸೀಟರ್ ವೇರಿಯೆಂಟ್‌ಗಳೊಂದಿಗೆ ಸ್ಪರ್ಧಿಸುತ್ತದೆ. ಹೆಚ್ಚುವರಿಯಾಗಿ, ಇದನ್ನು ಕಿಯಾ ಕ್ಯಾರೆನ್ಸ್ ಮತ್ತು ಟೊಯೋಟಾ ಇನ್ನೋವಾ ಕ್ರಿಸ್ಟಾದಂತಹ ಎಮ್‌ಪಿವಿಗಳಿಗೆ ಪ್ರತಿಸ್ಪರ್ಧಿ ಎಂದು ಪರಿಗಣಿಸಬಹುದು.
ಅಲ್ಕಝರ್ ಎಕ್ಸಿಕ್ಯೂಟಿವ್(ಬೇಸ್ ಮಾಡೆಲ್)1482 ಸಿಸಿ, ಮ್ಯಾನುಯಲ್, ಪೆಟ್ರೋಲ್, 17.5 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹14.99 ಲಕ್ಷ* | ||
ಅಲ್ಕಝರ್ ಎಕ್ಸಿಕ್ಯುಟಿವ್ ಮ್ಯಾಟ್1482 ಸಿಸಿ, ಮ್ಯಾನುಯಲ್, ಪೆಟ್ರೋಲ್, 17.5 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹15.14 ಲಕ್ಷ* | ||
ಅಲ್ಕಝರ್ ಎಕ್ಸಿಕ್ಯೂಟಿವ್ ಡೀಸಲ್1493 ಸಿಸಿ, ಮ್ ಯಾನುಯಲ್, ಡೀಸಲ್, 20.4 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹15.99 ಲಕ್ಷ* | ||
ಅಲ್ಕಝರ್ ಎಕ್ಸಿಕ್ಯುಟಿವ್ ಮ್ಯಾಟ್ ಡೀಸೆಲ್1493 ಸಿಸಿ, ಮ್ಯಾನುಯಲ್, ಡೀಸಲ್, 20.4 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹16.14 ಲಕ್ಷ* | ||
ಅಲ್ಕಝರ್ ಪ್ರೆಸ್ಟೀಜ್1482 ಸಿಸಿ, ಮ್ಯಾನುಯಲ್, ಪೆಟ್ರೋಲ್, 17.5 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹17.18 ಲಕ್ಷ* | ||
ಅಲ್ಕಝರ್ ಪ್ರೆಸ್ ಟೀಜ್ ಡೀಸಲ್1493 ಸಿಸಿ, ಮ್ಯಾನುಯಲ್, ಡೀಸಲ್, 20.4 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹17.18 ಲಕ್ಷ* | ||
ಅಲ್ಕಝರ್ ಪ್ರೆಸ್ಟಿಜ್ ಮ್ಯಾಟ್1482 ಸಿಸಿ, ಮ್ಯಾನುಯಲ್, ಪೆಟ್ರೋಲ್, 17.5 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹17.33 ಲಕ್ಷ* | ||
ಅಲ್ಕಝರ್ ಪ್ರೆಸ್ಟಿಜ್ ಮ್ಯಾಟ್ ಡೀಸೆಲ್1493 ಸಿಸಿ, ಮ್ಯಾನುಯಲ್, ಡೀಸಲ್, 20.4 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹17.33 ಲಕ್ಷ* | ||
ಅಲ್ಕಝರ್ ಪ್ಲಾಟಿನಂ1482 ಸಿಸಿ, ಮ್ಯಾನುಯಲ್, ಪೆಟ್ರೋಲ್, 17.5 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹19.56 ಲಕ್ಷ* | ||
ಅಲ್ಕಝರ್ ಪ್ಲಾಟಿನಂ ಡೀಸಲ್1493 ಸಿಸಿ, ಮ್ಯಾನುಯಲ್, ಡೀಸಲ್, 20.4 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹19.56 ಲಕ್ಷ* | ||
ಅಲ್ಕಝರ್ ಪ್ಲಾಟಿನಮ್ ಮ್ಯಾಟ್ ಡೀಸೆಲ್ ಡ್ಯುಯಲ್-ಟೋನ್1493 ಸಿಸಿ, ಮ್ಯಾನುಯಲ್, ಡೀಸಲ್, 20.4 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹19.71 ಲಕ್ಷ* | ||
ಅಲ್ಕಝರ್ ಪ್ಲಾಟಿನಮ್ ಮ್ಯಾಟ್ ಡ್ಯುಯಲ್-ಟೋನ್1482 ಸಿಸಿ, ಮ್ಯಾನುಯಲ್, ಪೆಟ್ರೋಲ್, 17.5 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹19.71 ಲಕ್ಷ* | ||
ಅಗ್ರ ಮಾರಾಟ ಅಲ್ಕಝರ್ ಪ್ಲಾಟಿನಮ್ ಡಿಸಿಟಿ1482 ಸಿಸಿ, ಆಟೋಮ್ಯಾಟಿಕ್ , ಪೆಟ್ರೋಲ್, 18 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹20.91 ಲಕ್ಷ* | ||
ಅಗ್ರ ಮಾರಾಟ ಅಲ್ಕಝರ್ ಪ್ಲಾಟಿನಂ ಡೀಸಲ್ ಎಟಿ1493 ಸಿಸಿ, ಆಟೋಮ್ಯಾಟಿಕ್, ಡೀಸಲ್, 18.1 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹20.91 ಲಕ್ಷ* | ||
ಅಲ್ಕಝರ್ ಪ್ಲಾಟಿನಮ್ 6ಸೀಟರ್ ಡೀಸೆಲ್ ಆಟೋಮ್ಯಾಟಿಕ್1493 ಸಿಸಿ, ಆಟೋಮ್ಯಾಟಿಕ್, ಡೀಸಲ್, 18.1 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹21 ಲಕ್ಷ* | ||
ಅಲ್ಕಝರ್ ಪ್ಲಾಟಿನಮ್ ಡಿಸಿಟಿ 6ಸೀಟರ್1482 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 18 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹21 ಲಕ್ಷ* | ||
ಅಲ್ಕಝರ್ ಪ್ಲಾಟಿನಮ್ ಮ್ಯಾಟ್ ಡೀಸೆಲ್ ಡ್ಯುಯಲ್-ಟೋನ್ ಆಟೋಮ್ಯಾಟಿಕ್1493 ಸಿಸಿ, ಆಟೋಮ್ಯಾಟಿಕ್, ಡೀಸಲ್, 20.4 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹21.06 ಲಕ್ಷ* | ||
ಅಲ್ಕಝರ್ ಪ್ಲಾಟಿನಮ್ ಮ್ಯಾಟ್ ಡ್ಯುಯಲ್-ಟೋನ್ ಡಿಸಿಟಿ1482 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 17.5 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹21.06 ಲಕ್ಷ* | ||
ಪ್ಲಾಟಿನಮ್ ಮ್ಯಾಟ್ 6ಸೀಟರ್ ಡೀಸೆಲ್ ಡ್ಯುಯಲ್-ಟೋನ್ ಆಟೋಮ್ಯಾಟಿಕ್1493 ಸಿಸಿ, ಆಟೋಮ್ಯಾಟಿಕ್, ಡೀಸಲ್, 18.1 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹21.15 ಲಕ್ಷ* | ||
ಅಲ್ಕಝರ್ ಪ್ಲಾಟಿನಮ್ ಮ್ಯಾಟ್ 6ಸೀಟರ್ ಡ್ಯುಯಲ್-ಟೋನ್ ಡಿಸಿಟಿ1482 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 18 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹21.15 ಲಕ್ಷ* | ||
ಅಲ್ಕಝರ್ ಸಿಗ್ನೇಚರ್ ಡಿಸಿಟಿ1482 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 18 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹21.35 ಲಕ್ಷ* | ||
ಅಲ್ಕಝರ್ ಸಿಗ್ನೇಚರ್ ಡೀಸೆಲ್ ಆಟೋಮ್ಯಾಟಿಕ್1493 ಸಿಸಿ, ಆಟೋಮ್ಯಾಟಿಕ್, ಡೀಸಲ್, 18.1 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹21.35 ಲಕ್ಷ* | ||
ಅಲ್ಕಝರ್ ಸಿಗ್ನೇಚರ್ ಮ್ಯಾಟ್ ಡೀಸೆಲ್ ಡ್ಯುಯಲ್‌ಟೋನ್ ಆಟೋಮ್ಯಾಟಿಕ್1493 ಸಿಸಿ, ಆಟೋಮ್ಯಾಟಿಕ್, ಡೀಸಲ್, 20.4 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹21.50 ಲಕ್ಷ* | ||
ಅಲ್ಕಝರ್ ಸಿಗ್ನೇಚರ್ ಮ್ಯಾಟ್ ಡ್ಯುಯಲ್‌ಟೋನ್ ಡಿಸಿಟಿ1482 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 17.5 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹21.50 ಲಕ್ಷ* | ||
ಅಲ್ಕಝರ್ ಸಿಗ್ನೇಚರ್ 6ಸೀಟರ್ ಡೀಸೆಲ್ ಆಟೋಮ್ಯಾಟಿಕ್1493 ಸಿಸಿ, ಆಟೋಮ್ಯಾಟಿಕ್, ಡೀಸಲ್, 18.1 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹21.55 ಲಕ್ಷ* | ||
ಅಲ್ಕಝರ್ ಸಿಗ್ನೇಚರ್ ಡಿಸಿಟಿ 6ಸೀಟರ್1482 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 18 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹21.55 ಲಕ್ಷ* | ||
ಸಿಗ್ನೇಚರ್ ಮ್ಯಾಟ್ 6ಸೀಟರ್ ಡೀಸೆಲ್ ಡ್ಯುಯಲ್‌ಟೋನ್ ಆಟೋಮ್ಯಾಟಿಕ್1493 ಸಿಸಿ, ಆಟೋಮ್ಯಾಟಿಕ್, ಡೀಸಲ್, 18.1 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹21.70 ಲಕ್ಷ* | ||
ಅಲ್ಕಝರ್ ಸಿಗ್ನೇಚರ್ matte 6str dt dct(ಟಾಪ್ ಮೊಡೆಲ್)1482 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 18 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹21.70 ಲಕ್ಷ* |
ಹುಂಡೈ ಅಲ್ಕಝರ್ ವಿಮರ್ಶೆ
Overview
ಹ್ಯುಂಡೈ ಅಲ್ಕಾಜರ್ ಯಾವಾಗಲೂ ಕಠಿಣ ಮಾರಾಟವಾಗಿದೆ. ಕ್ರೆಟಾಕ್ಕಿಂತ ಇದು 2.5 ಲಕ್ಷ ರೂ.ಗಳಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದ್ದು, ಇದು ಎರಡು ಹೆಚ್ಚುವರಿ ಸೀಟ್‌ಗಳನ್ನು ನೀಡುತ್ತಿದ್ದು, ಇದರಲ್ಲಿ ಮಕ್ಕಳು ಮಾತ್ರ ಆರಾಮವಾಗಿ ಕುಳಿತುಕೊಳ್ಳಬಹುದಾದ ಸೀಟ್‌ಗಳಾಗಿದೆ. ಇದು ವಿಶೇಷವಾಗಿ ಆಕರ್ಷಕವಾಗಿಲ್ಲ, ಮತ್ತು ಇಂಟಿರೀಯರ್ ಯಾವುದೇ ಅಸಾಧಾರಣ ಫೀಚರ್‌ಗಳನ್ನು ನೀಡಲಿಲ್ಲ.
ಹಾಗೆಯೇ, ಹೊಸ ಅಲ್ಕಾಝರ್ ಕೆಲವು ಅಗತ್ಯ ಬದಲಾವಣೆಗಳನ್ನು ತರುತ್ತದೆ. ಇದು ತೀಕ್ಷ್ಣವಾಗಿ ಕಾಣುತ್ತದೆ, ಕ್ಯಾಬಿನ್ ಹೆಚ್ಚು ಪ್ರೀಮಿಯಂ ಫೀಚರ್‌ಗಳನ್ನು ಹೊಂದಿದೆ ಮತ್ತು ಈಗ, ಇದು ಕ್ರೆಟಾಕ್ಕಿಂತ ಕೇವಲ 1.5 ಲಕ್ಷ ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ. ಹಾಗಾದರೆ, ಅದನ್ನು ಖರೀದಿಸಲು ಕಾರಣಗಳು ಯಾವುವು? ಮತ್ತು ನಿಮ್ಮ ಬೆಳೆಯುತ್ತಿರುವ ಕುಟುಂಬಕ್ಕೆ ಇದು ಸರಿಯಾದ ಆಯ್ಕೆಯಾಗಬಹುದೇ? ಈ ವಿಮರ್ಶೆಯಲ್ಲಿ ಕಂಡುಹಿಡಿಯೋಣ.
ಎಕ್ಸ್‌ಟೀರಿಯರ್
ಹೊಸ ಅಲ್ಕಾಜಾರ್‌ನಲ್ಲಿನ ಅತ್ಯಂತ ಗಮನಾರ್ಹ ಸುಧಾರಣೆ ಅದರ ವಿನ್ಯಾಸವಾಗಿದೆ. ಇದು ಇನ್ನು ಮುಂದೆ ವಿಸ್ತರಿಸಿದ ಕ್ರೆಟಾದಂತೆ ಕಾಣುವುದಿಲ್ಲ. ಬದಲಾಗಿ, ಇದು ತನ್ನದೇ ಆದ ಗುರುತನ್ನು ಅಭಿವೃದ್ಧಿಪಡಿಸಿದೆ, ಹ್ಯುಂಡೈನ ಫ್ಯಾಮಿಲಿ ಎಸ್‌ಯುವಿ ರೇಂಜ್‌ನಿಂದ, ನಿರ್ದಿಷ್ಟವಾಗಿ ಪಾಲಿಸೇಡ್‌ನಿಂದ ಸ್ಫೂರ್ತಿ ಪಡೆಯುತ್ತದೆ. ಹೆಚ್ಚು ಸೊಗಸಾದ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಈಗ ಕನೆಕ್ಟ್ ಮಾಡಲಾಗಿದೆ ಮತ್ತು ಡೈನಾಮಿಕ್ ಟರ್ನ್ ಇಂಡಿಕೇಟರ್‌ಗಳನ್ನು ಸೇರಿಸಲಾಗಿದೆ. ಮುಂಭಾಗದ ಲುಕ್ ಹೆಚ್ಚು ಕಮಾಂಡಿಂಗ್ ಆಗಿದೆ, 4-ಎಲ್‌ಇಡಿ ಹೆಡ್‌ಲ್ಯಾಂಪ್ ಸೆಟಪ್‌ನೊಂದಿಗೆ ರಾತ್ರಿಯಲ್ಲಿ ಉತ್ತಮ ಪರ್ಫಾರ್ಮೆನ್ಸ್ ಅನ್ನು ನೀಡುತ್ತದೆ.
ಆದರೆ, ಬದಿಯು ಹೆಚ್ಚಾಗಿ ಬದಲಾಗದೆ ಉಳಿಯುತ್ತದೆ, ಅದೇ ಬಾಡಿ ಪ್ಯಾನಲ್‌ಗಳು, ಲೈನ್‌ಗಳು ಮತ್ತು ಕ್ವಾರ್ಟರ್ ಗ್ಲಾಸ್ ಕೂಡ. ಹಾಗೆಯೇ, ಹೊಸ 18-ಇಂಚಿನ ಅಲಾಯ್ ವೀಲ್‌ಗಳು ಮತ್ತು ಸ್ವಲ್ಪ ಎತ್ತರದ ರೂಫ್ ರೇಲ್ಸ್‌ಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಹಿಂಭಾಗವು ಪ್ರೀಮಿಯಂ ಟಚ್‌ನ ಪ್ರಯೋಜನವನ್ನು ಪಡೆದಿದೆ, ಕನೆಕ್ಟೆಡ್ ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಗ್ಲಾಸ್ ಫಿನಿಶ್‌ನ ಅಲ್ಕಾಜರ್‌ನ ಅಕ್ಷರಗಳು ಹೆಚ್ಚು ಉನ್ನತ ಮಟ್ಟದ ಅನುಭವವನ್ನು ನೀಡುತ್ತದೆ. ಹಿಂಭಾಗದ ಬಂಪರ್ ಹೆಚ್ಚು ಉಬ್ಬಿದ ಆಕಾರವನ್ನು ಹೊಂದಿದೆ, ಮತ್ತು ಡೈನಾಮಿಕ್ ಟರ್ನ್ ಇಂಡಿಕೇಟರ್‌ಗಳು ಇದರ ಲುಕ್‌ಗೆ ಮತ್ತಷ್ಟು ಮೆರುಗು ತರುತ್ತದೆ. ಟಕ್ಸನ್‌ನಲ್ಲಿರುವಂತೆ ಹ್ಯುಂಡೈ ಸ್ಪಾಯ್ಲರ್‌ನ ಹಿಂದೆ ವೈಪರ್ ಅನ್ನು ಮರೆಮಾಡಿದ್ದರೆ, ಅದು ಇನ್ನೂ ಸ್ವಚ್ಛವಾಗಿ ಕಾಣುತ್ತಿತ್ತು. ಒಟ್ಟಾರೆಯಾಗಿ, ರೋಡ್‌ನ ಪ್ರೆಸೆನ್ಸ್ ಗಮನಾರ್ಹವಾಗಿ ಸುಧಾರಿಸಿದೆ ಮತ್ತು ಇದರ ಹೊಸ ಮ್ಯಾಟ್ ಗ್ರೇ ಕಲರ್ ಎಲ್ಲರ ಗಮನವನ್ನು ಸೆಳೆಯುತ್ತದೆ.
ಇಂಟೀರಿಯರ್

ಕಾರಿನೊಳಗೆ ಹೋಗಲು, ನೀವು ಈಗ ಸಾಂಪ್ರದಾಯಿಕ ಕೀಗೆ ಪರ್ಯಾಯವನ್ನು ಪಡೆಯುತ್ತೀರಿ. ಡಿಜಿಟಲ್ ಕೀ ಫೀಚರ್ ಇದರ ಮತ್ತೊಂದು ಉತ್ತಮ ಅಂಶವಾಗಿದೆ. ನಿಮ್ಮ ಫೋನ್‌ನ NFC (Near-field communication) ಬಳಸಿಕೊಂಡು ನೀವು ಕಾರನ್ನು ಅನ್‌ಲಾಕ್ ಮಾಡಬಹುದು, ನಿಮ್ಮ ಫೋನ್ ಅನ್ನು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌ನಲ್ಲಿ ಇರಿಸುವ ಮೂಲಕ ಅದನ್ನು ಸ್ಟಾರ್ಟ್ ಮಾಡಬಹುದು ಮತ್ತು ನಿಮ್ಮ ಫೋನ್ ಅನ್ನು ಡೋರ್ ಹ್ಯಾಂಡಲ್‌ನಲ್ಲಿ ಟ್ಯಾಪ್ ಮಾಡುವ ಮೂಲಕ ಅದನ್ನು ಲಾಕ್ ಮಾಡಬಹುದು. ಈ ಫೀಚರ್ ಆಂಡ್ರಾಯ್ಡ್ ಮತ್ತು ಆಪಲ್ ಎರಡೂ ಮೊಬೈಲ್‌ನಲ್ಲಿ ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುತ್ತದೆ. ಫೋನ್ ಅನ್ನು ವೈರ್‌ಲೆಸ್ ಚಾರ್ಜರ್‌ನಲ್ಲಿ ಇರಿಸುವ ಮೂಲಕವೂ ಕಾರನ್ನು ಸ್ಟಾರ್ಟ್ ಮಾಡಬಹುದು.
ಅಲ್ಕಾಜರ್‌ನ ಕ್ಯಾಬಿನ್ ಕ್ರೆಟಾವನ್ನು ಹೋಲುತ್ತದೆ, ಆದರೆ ಕೆಲವು ಸಣ್ಣ ಬದಲಾವಣೆಗಳಿವೆ. ವಿನ್ಯಾಸವು ಒಂದೇ ಆಗಿರುತ್ತದೆ, ಆದರೂ ಬಣ್ಣದ ಆಯ್ಕೆಯು ಈಗ ಕ್ರೆಟಾದ ಬಿಳಿ ಮತ್ತು ಬೂದು ಬಣ್ಣಕ್ಕೆ ಬದಲಾಗಿ ಕಂದು-ಬೀಜ್ ಎಫೆಕ್ಟ್ ಅನ್ನು ಹೊಂದಿದೆ. ಮೆಟಿರಿಯಲ್‌ಗಳ ಗುಣಮಟ್ಟವು ಕ್ರೆಟಾಕ್ಕೆ ಸಮನಾಗಿರುತ್ತದೆ, ಆದರೆ ಅಲ್ಕಾಜಾರ್‌ನ ಪ್ರೀಮಿಯಂ ಪೊಸಿಶನ್‌ಗಾಗಿ, ಇದನ್ನು ಇನ್ನೂ ಒಂದು ಹೆಜ್ಜೆ ಮೇಲೆ ಮಾಡಬಹುದಿತ್ತು, ವಿಶೇಷವಾಗಿ ಕೆಲವು ಬಟನ್‌ಗಳು ಪ್ಲಾಸ್ಟಿಕ್ ನಂತೆ ಭಾಸವಾಗುತ್ತದೆ.
ಪ್ರಾಯೋಗಿಕವಾಗಿ, ಇದು ಕ್ರೆಟಾದಂತೆಯೇ ಅದ್ಭುತವಾಗಿದೆ. ದೊಡ್ಡ ಸೆಂಟ್ರಲ್ ಪ್ಯಾನಲ್‌ನಲ್ಲಿ ಕಪ್ ಹೋಲ್ಡರ್‌ಗಳು, ವೈರ್‌ಲೆಸ್ ಚಾರ್ಜರ್ ಮತ್ತು ದೊಡ್ಡ ಬಾಟಲಿಗಳನ್ನು ಹಿಡಿದಿಟ್ಟುಕೊಳ್ಳುವ ಡೋರ್ ಪಾಕೆಟ್‌ಗಳವರೆಗೆ ಸ್ಟೋರೆಜ್‌ಗೆ ಸಾಕಷ್ಟು ಜಾಗ ಇದೆ. ವಿಶಾಲವಾದ ಮತ್ತು ಕೂಲ್ಡ್ ಗ್ಲಾವ್‌ಬಾಕ್ಸ್ ಮತ್ತು ಆಡ್ಜಸ್ಟ್ ಮಾಡಬಹುದಾದ ಆರ್ಮ್‌ರೆಸ್ಟ್‌ಗಳು ಸಹ ಇವೆ. ಜೊತೆಗೆ, ಡ್ಯಾಶ್‌ಬೋರ್ಡ್‌ನಲ್ಲಿನ ಓಪನ್ ಸ್ಟೋರೇಜ್ ಪ್ರಯಾಣಿಕರ ಅನುಕೂಲತೆಯನ್ನು ಹೆಚ್ಚಿಸುತ್ತದೆ.
ಫೀಚರ್‌ಗಳ ವಿಷಯದಲ್ಲಿ, ಹ್ಯುಂಡೈ ಅಲ್ಕಾಜರ್ ಅನ್ನು ಮೆಮೊರಿ ಸೆಟ್ಟಿಂಗ್‌ಗಳೊಂದಿಗೆ 8-ರೀತಿಯಲ್ಲಿ ಪವರ್-ಎಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್‌ನೊಂದಿಗೆ ಅಪ್‌ಗ್ರೇಡ್ ಮಾಡಿದೆ ಮತ್ತು ಕ್ರೆಟಾದ ಮ್ಯಾನುವಲ್ ಹೊಂದಾಣಿಕೆಯಿಂದ ಒಂದು ಹೆಜ್ಜೆ ಮೇಲಿದೆ. ಆದರೆ, ಟಚ್‌ಸ್ಕ್ರೀನ್ ವಿನ್ಯಾಸವು ಸುಗಮವಾಗಿದ್ದರೂ, ಟಾಟಾದಂತಹ ಸ್ಪರ್ಧಿಗಳಿಗೆ ಹೋಲಿಸಿದರೆ ಸ್ವಲ್ಪಮಟ್ಟಿಗೆ ಹಳೆಯದಂತೆ ಕಾಣಲು ಪ್ರಾರಂಭಿಸುತ್ತಿದೆ, ಯಾಕೆಂದರೆ ಅವುಗಳ ಇಂಟರ್ಫೇಸ್‌ಗಳು ಹೆಚ್ಚು ಆಧುನಿಕವಾಗಿ ಕಾಣುತ್ತವೆ. 360-ಡಿಗ್ರಿ ಕ್ಯಾಮೆರಾ, ಬ್ಲೈಂಡ್-ಸ್ಪಾಟ್ ಮಾನಿಟರ್‌ಗಳು, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ವೈಪರ್‌ಗಳನ್ನು ಒಳಗೊಂಡಂತೆ ಅಲ್ಕಾಜರ್‌ನ ಫೀಚರ್‌ನ ಸೆಟ್ ವಿಸ್ತಾರವಾಗಿದೆ. ಆದರೆ, ಇದು ಇನ್ನೂ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಫೀಚರ್ ಅನ್ನು ಹೊಂದಿಲ್ಲ. ಮತ್ತು ಕೆಲವು ಪ್ರತಿಸ್ಪರ್ಧಿಗಳಿಗಿಂತ ಭಿನ್ನವಾಗಿ, ಆಂಡ್ರಾಯ್ಡ್ ಆಟೋ ಅಥವಾ ಕಾರ್‌ಪ್ಲೇ ಮ್ಯಾಪ್‌ಗಳು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗೆ ವರ್ಗಾವಣೆಯಾಗುವುದಿಲ್ಲ.
3ನೇ ಸಾಲಿನ ಅನುಭವ
ಎರಡನೇ ಸಾಲಿನ ಸೀಟನ್ನು ಮಡಚಲಾಗುವುದಿಲ್ಲ ಅಥವಾ ಉರುಳಿಸಲಾಗುವುದಿಲ್ಲವಾದ್ದರಿಂದ ಮೂರನೇ ಸಾಲನ್ನು ಪ್ರವೇಶಿಸುವುದು ಸ್ವಲ್ಪ ಕಷ್ಟವಾಗುತ್ತದೆ. ಬದಲಾಗಿ, ನೀವು ಎರಡನೇ ಸಾಲಿನ ಸೀಟುಗಳ ನಡುವಿನ ಮೂಲಕ ಸಾಗಬೇಕಾಗುತ್ತದೆ, ಅಲ್ಲಿಂದ ಹೋಗಬಹುದು, ಆದರೆ ಸುಲಭವಾಗಿಲ್ಲ. ಒಮ್ಮೇ ನೀವು ಮೂರನೇ ಸಾಲಿಗೆ ಪ್ರವೇಶಿದ ಮೇಲೆ, ಅಲ್ಲಿನ ಜಾಗವು ಉತ್ತಮವಾಗಿದೆ. ಒಮ್ಮೆ, ಸ್ಥಳವು ಸಮಂಜಸವಾಗಿದೆ. 5’7" ಎತ್ತರದ ನನಗೆ ಮೊಣಕಾಲು ಇಡುವಲ್ಲಿ ಸ್ವಲ್ಪ ಕಷ್ಟವಾಯಿತು, ಮತ್ತು ಇದು ಮಕ್ಕಳಿಗೆ ಸಾಕಾಗುತ್ತದೆ. ಹಾಗೆಯೇ, ಎತ್ತರದ ವಯಸ್ಕರಿಗೆ ಇಲ್ಲಿ ಸ್ವಲ್ಪ ಇಕ್ಕಟ್ಟಾಗಬಹುದು. ಪನರೋಮಿಕ್ ಸನ್‌ರೂಫ್ ಮತ್ತು ದೊಡ್ಡ ಕಿಟಕಿಗಳಿಂದಾಗಿ ಗೋಚರತೆ ಉತ್ತಮವಾಗಿದೆ, ಕ್ಯಾಬಿನ್ ಅನ್ನು ವಿಶಾಲವಾಗಿ ಮತ್ತು ಹೆಚ್ಚು ಗಾಳಿಯಾಡುವಂತೆ ಮಾಡುತ್ತದೆ. ಆದರೆ ಆಸನಗಳು ಕೆಳಗಿನ ಪೊಸಿಶನ್‌ನಲ್ಲಿದೆ, ಆದ್ದರಿಂದ ನೀವು ನಿಮ್ಮ ಮೊಣಕಾಲುಗಳನ್ನು ಮೇಲಕ್ಕೆತ್ತಿ ಕುಳಿತುಕೊಳ್ಳುತ್ತೀರಿ, ಇದು ಲಾಂಗ್ ಡ್ರೈವ್‌ಗಳಲ್ಲಿ ವಯಸ್ಕರಿಗೆ ಅನಾನುಕೂಲವಾಗಬಹುದು.
ಸೌಕರ್ಯದ ದೃಷ್ಟಿಯಿಂದ, ಮೂರನೇ ಸಾಲಿನ ಸೀಟ್‌ಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಒರಗಿಸಬಹುದು, ಆದರೆ ಇದು ಲಗೇಜ್ ಸ್ಥಳವನ್ನು ಕಡಿಮೆ ಮಾಡಬಹುದು. ಮೂರನೇ ಸಾಲಿನಲ್ಲಿ ಕ್ಯಾಬಿನ್ ಲೈಟ್‌ಗಳು, ಫ್ಯಾನ್ ಕಂಟ್ರೋಲ್‌ಗಳೊಂದಿಗೆ ಹಿಂಭಾಗದ ಎಸಿ ವೆಂಟ್‌ಗಳು, ಟೈಪ್-ಸಿ ಚಾರ್ಜರ್‌ಗಳು, ಕಪ್ ಮತ್ತು ಬಾಟಲ್ ಹೋಲ್ಡರ್‌ಗಳು ಮತ್ತು ನಿಮ್ಮ ಫೋನ್‌ಗೆ ಪಾಕೆಟ್ ಸೇರಿದಂತೆ ಕೆಲವು ಉಪಯುಕ್ತ ಫೀಚರ್‌ಗಳನ್ನು ನೀವು ಕಾಣಬಹುದು. ಲಾಂಗ್ ಡ್ರೈವ್ ಮಾಡುವಾಗ ಮಕ್ಕಳಿಗೆ ಇದು ಸೂಕ್ತವಾಗಿರುತ್ತದೆ, ಆದರೆ ನಗರದೊಳಗಿನ ಅಥವಾ ಕಡಿಮೆ ದೂರದ ಪ್ರಯಾಣಗಳಲ್ಲಿ ವಯಸ್ಕರು ಸಹ ಪ್ರಯಾಣಿಸಬಹುದು.
ಹಿಂಭಾಗದ ಸೀಟ್‌ನ ಅನುಭವ
ಎರಡನೇ ಸಾಲಿನಲ್ಲಿ, ವಿಶೇಷವಾಗಿ ಕ್ಯಾಪ್ಟನ್ ಸೀಟ್ ವೇರಿಯೆಂಟ್‌ಗಳಲ್ಲಿ, ಇದು ಹೆಚ್ಚು ಆರಾಮದಾಯಕವಾಗುತ್ತವೆ. ಆಸನಗಳು ದೃಢವಾದ ಕುಶಾನ್‌ನೊಂದಿಗೆ ಬೆಂಬಲವನ್ನು ನೀಡುತ್ತವೆ, ನಗರ ಪ್ರಯಾಣವನ್ನು ಸುಲಭಗೊಳಿಸುತ್ತವೆ. ಹೆಡ್‌ರೆಸ್ಟ್ ಅತ್ಯುತ್ತಮ ಬೆಂಬಲವನ್ನು ನೀಡುತ್ತದೆ, ಆದ್ದರಿಂದ ದೀರ್ಘ ಪ್ರಯಾಣಗಳಲ್ಲಿಯೂ ಸಹ, ನೀವು ಚಿಕ್ಕನಿದ್ರೆಗಾಗಿ ಒರಗಿಕೊಂಡರೆ ನಿಮ್ಮ ತಲೆಯು ಜಾರಲು ಬಿಡುವುದಿಲ್ಲ.
ಮತ್ತೊಂದು ಪ್ರಮುಖ ಅಂಶವೆಂದರೆ ತೊಡೆಯ ಕೆಳಭಾಗದ ಬೆಂಬಲ, ಇದು ಈಗಾಗಲೇ ಉತ್ತಮವಾಗಿದೆ, ಆದರೆ ಹ್ಯುಂಡೈ ಅದನ್ನು ವಿಸ್ತರಿಸಬಹುದಾದ ಸೌಕರ್ಯದೊಂದಿಗೆ ಒಂದು ಹೆಜ್ಜೆ ಮುಂದಿಟ್ಟಿದೆ. ಎತ್ತರದ ಪ್ರಯಾಣಿಕರು ಇಲ್ಲಿ ಬೆಂಬಲದ ಕೊರತೆಯನ್ನು ಅನುಭವಿಸುವುದಿಲ್ಲ.
ಅಲ್ಕಾಜರ್ ಸಾಕಷ್ಟು ಫೀಚರ್‌ಗಳನ್ನು ನೀಡುತ್ತದೆ, ಇದು ಕಪ್ ಹೋಲ್ಡರ್ ಮತ್ತು ಫೋನ್ ಅಥವಾ ಟ್ಯಾಬ್ಲೆಟ್‌ಗಾಗಿ ಸ್ಲಾಟ್‌ನೊಂದಿಗೆ ಬರುವ ಟ್ರೇನಿಂದ ಪ್ರಾರಂಭವಾಗುತ್ತದೆ. ಮಧ್ಯದಲ್ಲಿ ವೈರ್‌ಲೆಸ್ ಚಾರ್ಜರ್, ಡ್ಯುಯಲ್ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳು, ಹಿಂಭಾಗದ ಎಸಿ ವೆಂಟ್‌ಗಳು (ಬ್ಲೋವರ್ ಅಥವಾ ಫ್ಯಾನ್ ವೇಗ ಕಂಟ್ರೋಲ್‌ಗಳಿಲ್ಲದಿದ್ದರೂ), ಮತ್ತು ಎರಡನೇ ಸಾಲಿಗೆ ವೆಂಟಿಲೇಟೆಡ್ ಸೀಟುಗಳು ಬೇಸಿಗೆಯ ಪ್ರಯಾಣವನ್ನು ತಂಪಾಗಿ ಮತ್ತು ಆರಾಮದಾಯಕವಾಗಿಸುತ್ತದೆ. ಚಾಲಕನಿಂದ ಚಾಲಿತವಾಗುತ್ತಿದ್ದರೆ ಅಥವಾ ನೀವು ಮಾಲೀಕರಂತೆ ಹಿಂದೆ ಕುಳಿತುಕೊಂಡು ಪ್ರಯಾಣಿಸುವವರಾಗಿದ್ದರೆ, ಈ ಸೆಟಪ್ ತುಂಬಾ ಆರಾಮದಾಯಕವಾಗಿರುತ್ತದೆ ಮತ್ತು ಮುಂಭಾಗದ ಪ್ರಯಾಣಿಕರ ಆಸನವನ್ನು ಹಿಂಭಾಗದಿಂದ ಎಡ್ಜಸ್ಟ್ ಮಾಡಲು ಒಂದು ಬಟನ್ ಕೂಡ ಇದೆ, ಇದರಿಂದ ಹೆಚ್ಚಿನ ಲೆಗ್‌ರೂಮ್ ಅನ್ನು ಪಡೆಯಬಹುದು.
ಸುರಕ್ಷತೆ
ಸುರಕ್ಷತೆಯ ಭಾಗವಾಗಿ, ಅಲ್ಕಾಜರ್ ಆರು ಏರ್‌ಬ್ಯಾಗ್‌ಗಳನ್ನು ಎಲ್ಲಾ ವೇರಿಯೆಂಟ್‌ಗಳಲ್ಲಿಯೂ ನೀಡುತ್ತದೆ, ಜೊತೆಗೆ ABS, EBD, ಟ್ರಾಕ್ಷನ್ ಕಂಟ್ರೋಲ್, ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಟೈರ್ ಪ್ರೇಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಟಾಪ್ ವೇರಿಯೆಂಟ್‌ಗಳು ಲೆವೆಲ್ 2 ADAS ಅನ್ನು ಸಹ ಒಳಗೊಂಡಿವೆ. ಆದರೆ, ಕಾರಿನ ಕ್ರ್ಯಾಶ್ ಟೆಸ್ಟ್ ರೇಟಿಂಗ್ ಅನ್ನು ಇನ್ನಷ್ಟೇ ತಿಳಿಯಬೇಕಾಗಿದೆ, ಭಾರತ್ ಎನ್‌ಸಿಎಪಿ ಪರೀಕ್ಷೆಗಳು ಬಾಕಿ ಉಳಿದಿವೆ.
ಬೂಟ್‌ನ ಸಾಮರ್ಥ್ಯ
ಈ ವಿಭಾಗದಲ್ಲಿರುವ ನ್ಯೂನತೆಯೆಂದರೆ ಅಲ್ಕಾಜರ್ ಇನ್ನೂ ಪವರ್ ಟೈಲ್‌ಗೇಟ್ ಅನ್ನು ಹೊಂದಿಲ್ಲ, ಆದರೆ ನಾವು ಇದನ್ನು ಹೆಕ್ಟರ್ ಮತ್ತು ಕರ್ವ್‌ನಂತಹ ಕಾರುಗಳಲ್ಲಿ ಕಾಣಬಹುದು. ಇದು ದೊಡ್ಡ ಮಿಸ್ಸಿಂಗ್‌ನಂತೆ ಭಾಸವಾಗುತ್ತಿದೆ. ಸ್ಟೋರೆಜ್‌ನ ವಿಷಯದಲ್ಲಿ, ಮೂರನೇ ಸಾಲಿನ ಹಿಂದೆ 180 ಲೀಟರ್ ಬೂಟ್ ಸ್ಪೇಸ್ ಇದೆ - ಒಂದು ದಿನಕ್ಕಾಗುವ ಸೂಟ್‌ಕೇಸ್‌ಗಳು, ಡಫಲ್ ಬ್ಯಾಗ್‌ಗಳು ಅಥವಾ ಬ್ಯಾಕ್‌ಪ್ಯಾಕ್‌ಗಳಿಗೆ ಇದು ಸಾಕಷ್ಟು. ಹೆಚ್ಚು ವಿಶಾಲವಾದ 579-ಲೀಟರ್ ಜಾಗಕ್ಕಾಗಿ ನೀವು ಮೂರನೇ ಸಾಲನ್ನು ಮಡಚಬಹುದು, ಇದು ದೊಡ್ಡ ಲಗೇಜ್, ಕ್ಯಾಂಪಿಂಗ್‌ಗೆ ಬೇಕಾಗುವ ಸಾಮಾನುಗಳು ಅಥವಾ ಹಲವು ಸೂಟ್‌ಕೇಸ್‌ಗಳಿಗೆ ಸಾಕಷ್ಟು ಜಾಗವನ್ನು ಪಡೆಯಬಹುದು. ಮಡಚುವ ಟೇಬಲ್‌ಗಳು ಮತ್ತು ಕುರ್ಚಿಗಳಿಗೆ ಸಹ ಸ್ಥಳವಿದೆ. ಆದರೆ, ಕ್ಯಾಪ್ಟನ್ ಸೀಟ್ ವೇರಿಯೆಂಟ್‌ನಲ್ಲಿ, ಹಿಂಬದಿಯ ಸೀಟುಗಳನ್ನು ಫ್ಲಾಟ್ ಆಗಿ ಮಡಚಲಾಗುವುದಿಲ್ಲ, ಅಂದರೆ ನೀವು ಸಂಪೂರ್ಣವಾಗಿ ಫ್ಲಾಟ್ ಆದ ಫ್ಲೋರ್ ಅನ್ನು ಪಡೆಯುವುದಿಲ್ಲ.
ಬೂಟ್ ಫ್ಲೋರ್‌ನ ಕೆಳಗಿರುವ ಸ್ಥಳವು ಸೀಮಿತವಾಗಿದೆ, ಏಕೆಂದರೆ ಇದು ಜ್ಯಾಕ್ ಮತ್ತು ಸ್ಪೀಕರ್ ಸೆಟ್‌ಗಳನ್ನು ಸಹ ಹೊಂದಿದೆ. ಆದರೂ ಇಲ್ಲಿ ನೀವು ಕ್ಲೀನ್ ಮಾಡಲು ಬಳಸುವ ಬಟ್ಟೆ ಅಥವಾ ಸ್ಪ್ರೇಗಳಂತಹ ಸಣ್ಣ ವಸ್ತುಗಳನ್ನು ಸಂಗ್ರಹಿಸಲು ಇದು ಸೂಕ್ತವಾಗಿದೆ.
ಕಾರ್ಯಕ್ಷಮತೆ
ಅಲ್ಕಾಜರ್ ಅನ್ನು ಕ್ರೆಟಾಗೆ ಹೋಲಿಸುವ ಮೂಲಕ ಪ್ರಾರಂಭಿಸೋಣ. ಎಂಜಿನ್ ಆಯ್ಕೆಗಳು-1.5 ಟರ್ಬೊ ಮತ್ತು 1.5 ಡೀಸೆಲ್, ನೀವು ಕ್ರೆಟಾದಲ್ಲಿ ಪಡೆಯುವ ಅದೇ ಪವರ್ ಟ್ಯೂನಿಂಗ್ ಅನ್ನು ಪಡೆಯುವಂತೆಯೇ ಇರುತ್ತವೆ. ಇದರರ್ಥ ಡ್ರೈವಿಂಗ್ ಅನುಭವವು ಕ್ರೆಟಾವನ್ನು ಹೋಲುತ್ತದೆ, ಇದು ಕೆಟ್ಟ ವಿಷಯವಲ್ಲ. ಎರಡೂ ಇಂಜಿನ್‌ಗಳು ತುಂಬಾ ಸಮರ್ಥವಾಗಿವೆ, ಪರಿಷ್ಕೃತವಾಗಿವೆ ಮತ್ತು ಸುಗಮ ಚಾಲನಾ ಅನುಭವವನ್ನು ನೀಡುತ್ತವೆ. ಪವರ್‌ನ ಸಪ್ಲೈ ವಿಷಯದಲ್ಲಿ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ, ಅದು ತಡೆರಹಿತ ಮತ್ತು ಪ್ರಯತ್ನರಹಿತವಾಗಿರುತ್ತದೆ.
ಮೊದಲಿಗೆ, ಟರ್ಬೊ ಪೆಟ್ರೋಲ್ ಎಂಜಿನ್ ಬಗ್ಗೆ ಮಾತನಾಡೋಣ. ಇದು ನಮ್ಮ ಟಾಪ್ ಪಿಕ್ ಆಗಿರುತ್ತದೆ, ಏಕೆಂದರೆ ಇದು ಹೆಚ್ಚು ಶ್ರಮವಿಲ್ಲದ ಡ್ರೈವಿಂಗ್ ಅನುಭವವನ್ನು ನೀಡುತ್ತದೆ. ಸಿಟಿ ಡ್ರೈವಿಂಗ್‌ನಲ್ಲಿ, ಇದು ಬಂಪರ್-ಟು-ಬಂಪರ್ ಟ್ರಾಫಿಕ್ ಅನ್ನು ಸುಲಭವಾಗಿ ನಿಭಾಯಿಸುತ್ತದೆ ಮತ್ತು ಓವರ್‌ಟೇಕ್ ಮಾಡುವುದು ಕ್ವಿಕ್ ಮತ್ತು ಮೃದುವಾಗಿರುತ್ತದೆ. ಡಿಸಿಟಿ ಗೇರ್‌ಬಾಕ್ಸ್ ಕೂಡ ಚುರುಕಾಗಿದೆ, ಮೈಲೇಜ್‌ಗಾಗಿ ಯಾವಾಗ ಮೇಲಕ್ಕೆ ಬದಲಾಯಿಸಬೇಕು ಮತ್ತು ಓವರ್‌ಟೇಕ್‌ಗಳಿಗಾಗಿ ಯಾವಾಗ ಡೌನ್‌ಶಿಫ್ಟ್ ಮಾಡಬೇಕು ಎಂಬುವುದು ಸಹ ಚೆನ್ನಾಗಿ ತಿಳಿದಿದೆ.
ಒಟ್ಟಾರೆಯಾಗಿ, ಡ್ರೈವಿಂಗ್ ಅನುಭವವು ನಿರಾಳವಾಗಿದೆ. ಆದರೂ, ಕ್ರೆಟಾದಂತಲ್ಲದೆ, ನೀವು ಥ್ರೊಟಲ್‌ಗೆ ಪ್ರೆಶರ್ ನೀಡಿದಂತೆ ಕಾರು ಹೆಚ್ಚು ಸ್ಪಂದಿಸುತ್ತದೆ, ಅಲ್ಕಾಜರ್ ಸ್ಪೋರ್ಟಿ ಎಂದು ಭಾವಿಸುವುದಿಲ್ಲ. ಇದು ಅದರ ದೊಡ್ಡ ಗಾತ್ರ ಮತ್ತು ಹೆಚ್ಚಿದ ತೂಕದಿಂದಾಗಿ, ಅದರ ಒಟ್ಟಾರೆ ಪರ್ಫಾರ್ಮೆನ್ಸ್ ಮೇಲೆ ಪರಿಣಾಮ ಬೀರುತ್ತದೆ. ಇದು ಹೆದ್ದಾರಿಗಳಲ್ಲಿ ಪರ್ಫಾರ್ಮೆನ್ಸ್‌ಅನ್ನು ಹೊಂದಿಲ್ಲ ಎಂದು ಇದರ ಅರ್ಥವಲ್ಲ, ಇದು ಅವುಗಳನ್ನು ಸಲೀಸಾಗಿ ನಿಭಾಯಿಸುತ್ತದೆ. ಇಲ್ಲಿ ಇರುವ ನ್ಯೂನತೆಯೆಂದರೆ ನಗರದಲ್ಲಿನ ಮೈಲೇಜ್ ಆಗಿರಬಹುದು, ಅಲ್ಲಿ ಇದು ಪ್ರತಿ ಲೀಟರ್‌ಗೆ ಸುಮಾರು 8-10 ಕಿಮೀ ನೀಡುತ್ತದೆ. ಆದರೆ, ಹೆದ್ದಾರಿಗಳಲ್ಲಿ, ಇದು ಪ್ರತಿ ಲೀಟರ್‌ಗೆ ಸಮಧಾನಕರವೆಂಬಂತೆ 14-15 ಕಿ.ಮೀ. ನೀಡುತ್ತದೆ.
ಡೀಸೆಲ್ ಎಂಜಿನ್ ಅನ್ನು ಗಮನಿಸುವಾಗ, ಇದು ಸೋನೆಟ್ ಮತ್ತು ಸೆಲ್ಟೋಸ್‌ನಲ್ಲಿ ಕಂಡುಬರುವ ಒಂದೇ ರೀತಿಯದ್ದಾಗಿದೆ. ವಿಶೇಷವಾಗಿ ಸಿಟಿ ಡ್ರೈವಿಂಗ್‌ನಲ್ಲಿ ಡೀಸೆಲ್ ಎಂಜಿನ್ ಶ್ರಮರಹಿತ ಫರ್ಫಾರ್ಮೆನ್ಸ್ ಅನ್ನು ನೀಡುತ್ತದೆ. ಕಡಿಮೆ-ವೇಗದ ಟಾರ್ಕ್ ಅತ್ಯುತ್ತಮವಾಗಿದೆ, ತ್ವರಿತ ಓವರ್‌ಟೇಕ್‌ಗಳು ಮತ್ತು ಸ್ಟಾಪ್-ಗೋ ಟ್ರಾಫಿಕ್ ನಲ್ಲಿ ಸರಾಗವಾಗಿ ಸಾಗುತ್ತದೆ. ಆದಾಗ್ಯೂ, ಡೀಸೆಲ್‌ನ ಶ್ರಮರಹಿತವಾದ ಪರ್ಫಾರ್ಮೆನ್ಸ್ ಟಾರ್ಕ್ ಕನ್ವರ್ಟರ್ ಟ್ರಾನ್ಸ್‌ಮಿಷನ್‌ನೊಂದಿಗೆ ಇರುವುದಿಲ್ಲ. ಪ್ರತಿಕ್ರಿಯಿಸಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ನೀವು ಹೆದ್ದಾರಿಯಲ್ಲಿ ಓವರ್‌ಟೇಕ್‌ಗಳನ್ನು ಯೋಜಿಸಬೇಕಾಗುತ್ತದೆ. ನೀವು ಅದರೊಂದಿಗೆ ಆರಾಮದಾಯಕವಾಗಿದ್ದರೆ ಮತ್ತು ನಿಮ್ಮ ಆದ್ಯತೆಯು ಇಂಧನ ದಕ್ಷತೆಯಾಗಿದ್ದರೆ, ಡೀಸೆಲ್ ಎಂಜಿನ್ ಇನ್ನೂ ಸಾಲಿಡ್ ಆಗಿರುವ ಆಯ್ಕೆಯಾಗಿದೆ.
ಗಮನಿಸಬೇಕಾದ ಅಂಶವೆಂದರೆ ಡೀಸೆಲ್ ಎಂಜಿನ್ ಆಯ್ಕೆಯು ಪನರೋಮಿಕ್ ಸನ್‌ರೂಫ್ ಅಥವಾ ಸ್ಪೇರ್ ವೀಲ್‌ನೊಂದಿಗೆ ಬರುವುದಿಲ್ಲ. ಕಾರಿನ ತೂಕವನ್ನು ನಿಯಂತ್ರಣದಲ್ಲಿಡಲು ಹ್ಯುಂಡೈ ಕೆಲವು ಹೊಂದಾಣಿಕೆಗಳನ್ನು ಮಾಡಬೇಕಾಗಿತ್ತು.
ರೈಡ್ ಅಂಡ್ ಹ್ಯಾಂಡಲಿಂಗ್
ನೀವು ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದರೆ ಮತ್ತು ಲಗೇಜ್‌ನ ಜೊತೆಗೆ ಕಾರಿನಲ್ಲಿ 6-7 ಜನರನ್ನು ಹೊಂದಿದ್ದರೆ, ಸಸ್ಪೆನ್ಸನ್ ಮೇಲೆ ಪ್ರೆಶರ್ ಬೀಳಬಹುದು ಮತ್ತು ಕ್ಯಾಬಿನ್‌ನಲ್ಲಿ ನೀವು ಜರ್ಕ್‌ಗಳನ್ನು ಅನುಭವಿಸಲು ಪ್ರಾರಂಭಿಸಬಹುದು. ಆದರೆ ಅದರ ಹೊರತಾಗಿ, ರಫ್ ಆದ ರಸ್ತೆಗಳಲ್ಲಿ ಡ್ರೈವ್ ಮಾಡುವುದು ಸಮಸ್ಯೆಯಲ್ಲ. ಅಲ್ಕಾಜರ್ ಕ್ರೆಟಾಕ್ಕಿಂತ ಹೆಚ್ಚು ದುಬಾರಿಯಾಗಿರುವುದನ್ನು ಪರಿಗಣಿಸುವಾಗ, ಸೌಕರ್ಯದ ಮಟ್ಟವು ಉತ್ತಮವಾಗಿರಬೇಕಿತ್ತು, ಆದರೂ ಇದು ಒಟ್ಟಾರೆಯಾಗಿ ಇನ್ನೂ ಸುಧಾರಣೆಯ ಹಂತದಲ್ಲಿದೆ.
ವರ್ಡಿಕ್ಟ್
ಇದು ಹೆಚ್ಚು ಸ್ಥಳಾವಕಾಶ ಮತ್ತು ಕೆಲವು ಹೆಚ್ಚುವರಿ ಫೀಚರ್‌ಗಳನ್ನು ನೀಡುವುದೇ, ಅಲ್ಕಾಝರ್ ಅನ್ನು ಖರೀದಿಸಲು ಇರುವ ಕಾರಣಗಳಲ್ಲಿ ಒಂದು ಆಗಿರುತ್ತವೆ. ಇದು ಸಾಮಾನ್ಯವಾಗಿ ಕ್ರೆಟಾದ ಪ್ರೀಮಿಯಂ ಆವೃತ್ತಿಯಾಗಿದ್ದು, ಉತ್ತಮ ಹಿಂಬದಿಯ ಆಸನದ ಸೌಕರ್ಯ ಮತ್ತು ಗಮನಾರ್ಹವಾಗಿ ಹೆಚ್ಚು ಬೂಟ್ ಸ್ಥಳಾವಕಾಶವನ್ನು ಹೊಂದಿದೆ. ಹಿಂದಿನ ಆಸನದ ಸೌಕರ್ಯಗಳಿಗೆ ಆದ್ಯತೆ ನೀಡುವ ಅಥವಾ ಮಾಲೀಕರಂತೆ ಕುಳಿತು ಪ್ರಯಾಣಿಸುವವರಿಗೆ, ಅಲ್ಕಾಜರ್‌ನ ಹೊಸ ಫೀಚರ್‌ಗಳು ದೊಡ್ಡ ಪ್ರಯೋಜನವಾಗಿದೆ. ಮತ್ತು ಕ್ರೆಟಾಗೆ ಹೋಲಿಸಿದರೆ ದೊಡ್ಡ ಬೆಲೆ ವ್ಯತ್ಯಾಸವಿಲ್ಲದ ಕಾರಣ, ಈ ಹೆಚ್ಚಿನ ಫೀಚರ್‌ಗಳಿಗೆ ಸ್ವಲ್ಪ ಹೆಚ್ಚುವರಿ ಪಾವತಿಸುವುದು ಸಮರ್ಥನೀಯವಾಗಿದೆ.
ಆದಾಗ್ಯೂ, ನೀವು ನಿಜವಾದ 6- ಅಥವಾ 7-ಸೀಟರ್ ಎಸ್‌ಯುವಿಗಳನ್ನು ಹುಡುಕುತ್ತಿದ್ದರೆ, ಅಲ್ಕಾಜರ್ ಕಡಿಮೆಯಾಗಬಹುದು ಮತ್ತು ನೀವು ಕಿಯಾ ಕಾರೆನ್ಸ್ ಅಥವಾ ಮಹೀಂದ್ರಾ ಎಕ್ಸ್‌ಯುವಿ700ನಂತಹ ಪರ್ಯಾಯಗಳನ್ನು ಪರಿಗಣಿಸಬೇಕು. ಆದರೆ ನೀವು ಕ್ರೆಟಾದ ಪ್ರಾಯೋಗಿಕತೆಯನ್ನು ಮೆಚ್ಚಿದರೆ ಮತ್ತು ಅದಕ್ಕಿಂತ ದೊಡ್ಡದಾದ, ಹೆಚ್ಚು ಪ್ರೀಮಿಯಂ ಪ್ಯಾಕೇಜ್‌ನಲ್ಲಿ ಬಯಸಿದರೆ, ಅಲ್ಕಾಜರ್ ಅತ್ಯುತ್ತಮ ಆಯ್ಕೆಯಾಗಿದೆ.
ಹುಂಡೈ ಅಲ್ಕಝರ್
ನಾವು ಇಷ್ಟಪಡುವ ವಿಷಯಗಳು
- ಹ್ಯುಂಡೈ ಕ್ರೆಟಾಗಿಂತ ಉತ್ತಮ ಹಿಂಬದಿ ಸೀಟಿನ ಅನುಭವವನ್ನು ನೀಡುತ್ತದೆ.
- ಈ ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ ನೀಡಲಾಗುತ್ತಿರುವ ಫೀಚರ್‌ಗಳಾದ ಆಡ್ಜಸ್ಟೇಬಲ್ ಕೆಳತೊಡೆಯ ಸಪೋರ್ಟ್ ಮತ್ತು 2 ನೇ ಸಾಲಿಗೆ ಕಪ್ ಹೋಲ್ಡರ್ ಹೊಂದಿರುವ ಯುಟಿಲಿಟಿ ಟ್ರೇ.
- ಮಕ್ಕಳು ಅಥವಾ ಸಣ್ಣ ಗಾತ್ರದ ವಯಸ್ಕರಿಗೆ ಮೂರನೇ ಸಾಲು.
ನಾವು ಇಷ್ಟಪಡದ ವಿಷಯಗಳು
- ದೊಡ್ಡ ಗಾತ್ರದ ವಯಸ್ಕರಿಗೆ 3 ನೇ ಸಾಲು ಸೂಕ್ತವಲ್ಲ.
- ಚಿಕ್ಕದಾದ ಕ್ರೆಟಾದಿಂದ ಸುಲಭವಾಗಿ ಇದನ್ನು ಪ್ರತ್ಯೇಕಿಸಲಾಗುವುದಿಲ್ಲ.
- ಸ್ಟೀರಿಂಗ್ ಕಾಲಮ್‌ನ ಬಲಭಾಗದಲ್ಲಿರುವ ಸಣ್ಣ ಬಟನ್ ಕ್ಲಸ್ಟರ್‌ನಲ್ಲಿರುವಂತೆ ನೀಲಿ ಪ್ಲಾಸ್ಟಿಕ್‌ಗಳು ಕೆಲವು ಬಣ್ಣ ಹೊಂದಾಣಿಕೆಯ ಸಮಸ್ಯೆಗಳನ್ನು ತೋರಿಸುತ್ತವೆ.
ಹುಂಡೈ ಅಲ್ಕಝರ್ comparison with similar cars
![]() Rs.14.99 - 21.70 ಲಕ್ಷ* | ![]() Rs.10.60 - 19.70 ಲಕ್ಷ* | ![]() Rs.11.11 - 20.50 ಲಕ್ಷ* | ![]() Rs.13.99 - 25.74 ಲಕ್ಷ* | ![]() Rs.15.50 - 27.25 ಲಕ್ಷ* | ![]() Rs.13.99 - 24.89 ಲಕ್ಷ* | ![]() Rs.11.84 - 14.87 ಲಕ್ಷ* | ![]() Rs.14 - 22.92 ಲಕ್ಷ* |
Rating80 ವಿರ್ಮಶೆಗಳು | Rating464 ವಿರ್ಮಶೆಗಳು | Rating394 ವಿರ್ಮಶೆಗಳು | Rating1.1K ವಿರ್ಮಶೆಗಳು | Rating181 ವಿರ್ಮಶೆಗಳು | Rating784 ವಿರ್ಮಶೆಗಳು | Rating275 ವಿರ್ಮಶೆಗಳು | Rating321 ವಿರ್ಮಶೆಗಳು |
Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ |
Engine1482 cc - 1493 cc | Engine1482 cc - 1497 cc | Engine1482 cc - 1497 cc | Engine1999 cc - 2198 cc | Engine1956 cc | Engine1997 cc - 2198 cc | Engine1462 cc | Engine1451 cc - 1956 cc |
Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಡೀಸಲ್ / ಪೆಟ್ರೋಲ್ |
Power114 - 158 ಬಿಹೆಚ್ ಪಿ | Power113.42 - 157.81 ಬಿಹೆಚ್ ಪಿ | Power113.18 - 157.57 ಬಿಹೆಚ್ ಪಿ | Power152 - 197 ಬಿಹೆಚ್ ಪಿ | Power167.62 ಬಿಹೆಚ್ ಪಿ | Power130 - 200 ಬಿಹೆಚ್ ಪಿ | Power86.63 - 101.64 ಬಿಹೆಚ್ ಪಿ | Power141.04 - 167.67 ಬಿಹೆಚ್ ಪಿ |
Mileage17.5 ಗೆ 20.4 ಕೆಎಂಪಿಎಲ್ | Mileage15 ಕೆಎಂಪಿಎಲ್ | Mileage17.4 ಗೆ 21.8 ಕೆಎಂಪಿಎಲ್ | Mileage17 ಕೆಎಂಪಿಎಲ್ | Mileage16.3 ಕೆಎಂಪಿಎಲ್ | Mileage12.12 ಗೆ 15.94 ಕೆಎಂಪಿಎಲ್ | Mileage20.27 ಗೆ 20.97 ಕೆಎಂಪಿಎಲ್ | Mileage15.58 ಕೆಎಂಪಿಎಲ್ |
Airbags6 | Airbags6 | Airbags6 | Airbags2-7 | Airbags6-7 | Airbags2-6 | Airbags4 | Airbags2-6 |
Currently Viewing |