ಟಾಟಾ ಆಲ್ಟ್ರೋಝೇ ಸಿಎನ್‌ಜಿ ವಿಮರ್ಶೆಯ 5 ಪ್ರಮುಖಾಂಶಗಳು

published on ಜೂನ್ 07, 2023 02:00 pm by tarun for ಟಾಟಾ ಆಲ್ಟ್ರೋಝ್ 2020-2023

  • 27 Views
  • ಕಾಮೆಂಟ್‌ ಅನ್ನು ಬರೆಯಿರಿ

ಆಲ್ಟ್ರೋಝ್‌ನ ಪ್ರಮುಖಾಂಶಗಳಲ್ಲಿ ಈ ಸಿಎನ್‌ಜಿ ರಾಜಿ ಮಾಡಿಕೊಳ್ಳುತ್ತದೆಯೇ? ನಾವದನ್ನು ನೋಡೋಣ. 

ನಾವು ಇತ್ತೀಚಿಗೆ ಟಾಟಾ ಆಲ್ಟ್ರೋಝ್ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಆವೃತ್ತಿಯನ್ನು ಓಡಿಸಿದ್ದೇವೆ, ಮತ್ತು ಇದು ಕಾರು ತಯಾರಕರ ಪರ್ಯಾಯ ಇಂಧನ ಸಂಸ್ಕರಣೆಯನ್ನು ಪಡೆಯುತ್ತಿರುವ ಮೂರನೇ ಮಾಡೆಲ್ ಆಗಿದೆ. ಅದರ ರಿವ್ಯೂನಿಂದ ನಾವು ತಿಳಿದುಕೊಂಡ 5 ವಿಷಯಗಳು ಇಲ್ಲಿವೆ: 

ಫೀಚರ್-ಭರಿತ

Tata Altroz CNG

ಆಲ್ಟ್ರೋಝ್ ಸಿಎನ್‌ಜಿ ನಿಮಗೆ ಮೂಲ ಉದ್ದೇಶ-ಚಾಲಿತ ಸಿಎನ್‌ಜಿ ವೇರಿಯೆಂಟ್ ಮತ್ತು ಸಂಪೂರ್ಣ ಫೀಚರ್‌-ಭರಿತ ಆಯ್ಕೆಗಳ ನಡುವೆ ಒಂದನ್ನು ಆಯ್ದುಕೊಳ್ಳಲು ಅನುವುಮಾಡಿಕೊಡುತ್ತದೆ. ಪರ್ಯಾಯ ಇಂಧನ ಆಯ್ಕೆಯು ಟಾಪ್-ಸ್ಪೆಕ್ XZ+ ವೇರಿಯೆಂಟ್‌ಗಳಲ್ಲಿ ಲಭ್ಯವಿರುವುದರಿಂದ, ನೀವು ಎಲ್ಲಾ ರೀತಿಯ ಫೀಚರ್‌ಗಳನ್ನು ಇದರಲ್ಲಿ ಪಡೆಯುತ್ತೀರಿ. ಇದರೊಂದಿಗೆ, ಆಲ್ಟ್ರೋಸ್ ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಅತ್ಯಂತ ವೈಶಿಷ್ಟ್ಯಪೂರ್ಣ ಸಿಎನ್‌ಜಿ ಕಾರಾಗಿದೆ.

 ಹ್ಯಾಚ್‌ಬ್ಯಾಕ್‌ನ ಈ ಸಿಎನ್‌ಜಿ ಉತ್ಪನ್ನವು ಅಲಾಯ್ ವ್ಹೀಲ್‌ಗಳು, ಮೂಡ್ ಲೈಟಿಂಗ್‌ಗಳು, ಲೆದರ್ ಸೀಟುಗಳು, 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಎಲೆಕ್ಟ್ರಿಕ್ ಸನ್‌ರೂಫ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಆಟೋಮ್ಯಾಟಿಕ್ ಎಸಿ ಮತ್ತು ವೈರ್‌ಲೆಸ್ ಚಾರ್ಜರ್ ಅನ್ನು ಪಡೆಯುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಇದು ಅತ್ಯುತ್ತಮ ಗುಣಮಟ್ಟದ ಗಟ್ಟಿಮುಟ್ಟಾದ 5-ಸ್ಟಾರ್-ರೇಟೆಡ್ ಬಾಡಿ ಶೆಲ್, ಡ್ಯುಯಲ್ ಏರ್‌ಬ್ಯಾಗ್‌ಗಳು, ರಿಯರ್ ಕ್ಯಾಮರಾ, ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಹೊಂದಿದೆ. 

ಆದಾಗ್ಯೂ, ಇದರಲ್ಲಿ ಅನಗತ್ಯ ಎಂದು ಭಾವಿಸಿರುವ ಕ್ರೂಸ್ ಕಂಟ್ರೋಲ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯಂತಹ ಕೆಲವು ಫೀಚರ್‌ಗಳನ್ನು ಕಾಣಲು ಸಾಧ್ಯವಿಲ್ಲ. 

ಇತರ ಸಿಎನ್‌ಜಿ ಕಾರ್‌ಗಿಂತ ಭಿನ್ನವಾದ ಬೂಟ್ ಸ್ಪೇಸ್

Tata Altroz CNG

Tata Altroz CNG: CNG Cylinder

 ಆಲ್ಟ್ರೋಝ್ ಸಿಎನ್‌ಜಿಯ ಪ್ರಮುಖ ಯುಎಸ್‌ಪಿಗಳಲ್ಲಿ ಒಂದು ಬಳಕೆ ಮಾಡಬಹುದಾದ ಇದರ ಬೂಟ್ ಸ್ಪೇಸ್. ದೊಡ್ಡದಾದ ಏಕೈಕ 60-ಲೀಟರ್ ಟ್ಯಾಂಕ್ ಬದಲಿಗೆ ಟಾಟಾ 30-ಲೀಟರ್ ಟ್ವಿನ್ ಟ್ಯಾಂಕ್‌ಗಳನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಇದು ಸಾಕಷ್ಟು ಬೂಟ್ ಸ್ಪೇಸ್ ಅನ್ನು ನೀಡುತ್ತದೆ. ಈ ಟ್ಯಾಂಕ್‌ಗಳನ್ನು ಬೂಟ್ ಫ್ಲೋರ್‌ನ ಕೆಳಗಡೆ ಉತ್ತಮ ರೀತಿಯಲ್ಲಿ ಜೋಡಿಸಲಾಗಿದ್ದು, ಇದರ ಮಾಲೀಕರು ತಮ್ಮ ವಾರಾಂತ್ಯದ ಪ್ರಮಾಸಗಳಿಗೆ ಈ ಬೂಟ್ ಸ್ಪೇಸ್ ಅನ್ನು ಬಳಕೆ ಮಾಡಿಕೊಳ್ಳಬಹುದು.

210 ಲೀಟರ್‌ಗಳ ಬೂಟ್ ಸಾಮರ್ಥ್ಯವನ್ನು ಕ್ಲೈಮ್ ಮಾಡಲಾಗಿದ್ದು, ಇದು ಪೆಟ್ರೋಲ್ ಆವೃತ್ತಿಗಿಂತ ಕೇವಲ 135 ಲೀಟರ್‌ಗಳಷ್ಟು ಕಡಿಮೆಯಾಗಿದೆ. ಮಧ್ಯಮ ಗಾತ್ರದ ಸೂಟ್‌ಕೇಸ್ ಮತ್ತು ಓವರ್‌ನೈಟ್ ಡಫೆಲ್‌ ಬ್ಯಾಗ್‌ಗಳನ್ನು ಸುಲಭವಾಗಿ ಹೊಂದಿಸಿಟ್ಟುಕೊಳ್ಳಬಹುದು, ಆದರೆ ಪಾರ್ಸಲ್ ಟ್ರೇ ಇದ್ದರೆ ಅವುಗಳನ್ನು ಅಡ್ಡಲಾಗಿ ಇಡಬೇಕಾಗುತ್ತದೆ. ಸಿಎನ್‌ಜಿ ಮಾಲೀಕರೇ, ನಿಮಗೆ ಸರಿಯಾಗಿ ಜೋಡಿಸಿಕೊಳ್ಳಿ! 

ನಗರ ಪ್ರದೇಶದ ಚಾಲನೆಗೆ ಉತ್ತಮ

Tata Altroz CNG

 ಆಲ್ಟ್ರೋಝ್ ಪೆಟ್ರೋಲ್‌ನ ಕಾರ್ಯಕ್ಷಮತೆ ಎಂದಿಗೂ ಬಲವಾದ ಅಂಶವಾಗಿರಲಿಲ್ಲ. ಇದರ ಆ್ಯಕ್ಸಲರೇಷನ್ ನಿಧಾನವಾಗಿತ್ತು ಮತ್ತು ಹೆಚ್ಚಿನ ಗೇರ್‌ಗಳಲ್ಲಿ ಸ್ವಲ್ಪ ಪ್ರಯತ್ನದ ಅಗತ್ಯವಿತ್ತು. ಆದಾಗ್ಯೂ, ನಗರ ಪ್ರದೇಶದ ಚಾಲನೆಯಲ್ಲಿ ಮತ್ತು ಟ್ರಾಫಿಕ್ ಭರಿತ ಪ್ರಯಾಣಗಳಿಗೆ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿತ್ತು. ಶುಭಸುದ್ದಿಯೆಂದರೆ, ಸಿಎನ್‌ಜಿಯೊಂದಿಗೆ ಚಾಲನೆಯಲ್ಲಿ ಯಾವುದೇ ಪ್ರಮುಖ ರಾಜಿಯಿಲ್ಲ. ಪ್ರಯಾಣದಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಮೋಡ್ ನಡುವಿನ ವ್ಯತ್ಯಾಸವು ಅತ್ಯಲ್ಪವಾಗಿದೆ. ನಿಮಗೆ ಹೆಚ್ಚುವರಿ ಡೌನ್‌ಶಿಫ್ಟ್ (ಸಿಎನ್‌ಜಿಯಲ್ಲಿ) ಅಗತ್ಯವಿರುವ ಕೆಲವು ಸಂದರ್ಭಗಳು ಇರಬಹುದು, ಆದರೆ ಒಟ್ಟಾರೆ ನಗರ ಪ್ರದೇಶದ ಚಾಲನೆಯು ಶ್ರಮರಹಿತವಾಗಿರುತ್ತದೆ.

ಇದನ್ನೂ ಓದಿ: ಟಾಟಾ ಆಲ್ಟ್ರೋಝ್ ಸಿಎನ್‌ಜಿ ವಿಮರ್ಶೆ: ಸಂಪೂರ್ಣ!

ಸಾಮಾನ್ಯ ಮಟ್ಟದ ಹೆದ್ದಾರಿ ಕಾರ್ಯಕ್ಷಮತೆ

Tata Altroz CNGನಗರ ಪ್ರದೇಶದಲ್ಲಿ ಸುಗಮ ಪ್ರಯಾಣವನ್ನು ಹೊಂದಿರುವಾಗ, ಆಲ್ಟ್ರೋಝ್ ಸಿಎನ್‌ಜಿ ತನ್ನ ಪೆಟ್ರೋಲ್ ಪ್ರತಿರೂಪದಂತೆಯೇ, ಮೂರು-ಅಂಕಿಯ ವೇಗವನ್ನು ಏರಲು ಸ್ವಲ್ಪ ನಿಧಾನವಾಗುತ್ತದೆ. ಈ ವೇಗದಲ್ಲಿ ನಾಲ್ಕನೇ ಮತ್ತು ಐದನೇ ಆ್ಯಕ್ಸಲರೇಷನ್ ಸಾಕಷ್ಟು ನಿಧಾನವಾಗಿರುತ್ತದೆ ಮತ್ತು ಈ ಕಾರಣದಿಂದಾಗಿ ಆಗಾಗ್ಗೆ ಡೌನ್‌ಶಿಫ್ಟ್‌ಗಳು ಅನಿವಾರ್ಯವಾಗಿವೆ. ಕಡಿದಾದ ಇಳಿಜಾರುಗಳಲ್ಲಿ ನೀವು ಚಾಲನೆಯಲ್ಲಿ ನಿಖರತೆಯನ್ನು ಹೊಂದಿರಬೇಕು, ಏಕೆಂದರೆ ನಾವು ಆ ರಭಸವನ್ನು ಹೊಂದಿಲ್ಲದಿದ್ದರೆ, ಕಾರು ತಕ್ಷಣವೇ ಡೌನ್‌ಶಿಫ್ಟ್ ಮಾಡಲು ಕೇಳುತ್ತದೆ. ಆದ್ದರಿಂದ ಹಲವು ಬಾರಿ ಈ ಸಂದರ್ಭಗಳನ್ನು ನಿಭಾಯಿಸಲು ಪೆಟ್ರೋಲ್‌ಗೆ ಬದಲಾಯಿಸುವುದು ಉತ್ತಮ ಎಂದು ನೀವು ಭಾವಿಸಬಹುದು. ಆದರೆ ಕಾಕತಾಳೀಯವಾಗಿ, ಇವು ಆಲ್ಟೋಝ್ ಪೆಟ್ರೋಲ್‌ನೊಂದಿಗೆ ನೀವು ಎದುರಿಸುವ ಸಾಮಾನ್ಯ ಸಮಸ್ಯೆಗಳಾಗಿವೆ.

ನಿರ್ವಹಣೆ ಮತ್ತು ಸವಾರಿಯಲ್ಲಿ ಯಾವುದೇ ರಾಜಿಯಿಲ್ಲ

Tata Altroz CNGಸಿಎನ್‌ಜಿ ಕಿಟ್‌ನ ಸೇರ್ಪಡೆ ಮತ್ತು ಹೆಚ್ಚುವರಿ ಮೌಂಟಿಂಗ್ ಆಲ್ಟ್ರೋಝ್‌ನ ಅತ್ಯುತ್ತಮ ನಿರ್ವಹಣೆ ಮತ್ತು ಸವಾರಿಯ ಗುಣಮಟ್ಟಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ಹೆಚ್ಚುವರಿ ತೂಕವನ್ನು ಸಾಗಿಸಲು ಕಾರು ತಯಾರಕರು ರಿಯರ್ ಸಸ್ಪೆನ್ಷನ್ ಅನ್ನು ಮರುಸೃಷ್ಟಿಸಿದ್ದಾರೆ. ಇದು ಮೂರು-ಅಂಕಿಯ ವೇಗವನ್ನು ಸುಲಭ ರೀತಿಯ ಸವಾರಿಯಾಗಿ ಮುಂದುವರಿಯುವಂತೆ ಮಾಡುತ್ತದೆ ಮತ್ತು ವಿವಿಧ ರೀತಿಯ ಪ್ರದೇಶಗಳ ಚಾಲನೆಯಲ್ಲಿ ಆರಾಮದಾಯವಾಗಿದೆ. ಹ್ಯಾಂಡ್ಲಿಂಗ್ ಕೂಡ ಚೂಪಾಗಿ ಮತ್ತು ಚುರುಕಾಗಿದ್ದು ಇದು ಹ್ಯಾಚ್‌ಬ್ಯಾಕ್ ಪ್ಲಸ್ ಪಾಯಿಂಟ್ ಆಗಿದೆ.

ಇದನ್ನೂ ಓದಿ : ಆಲ್ಟ್ರೋಝ್ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಆಲ್ಟ್ರೋಝ್ 2020-2023

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience