2024 Nissan X-Trailರ ಗ್ಲೋಬಲ್-ಸ್ಪೆಕ್ ಆವೃತ್ತಿಗೆ ಹೋಲಿಸಿದರೆ ಇಂಡಿಯಾ-ಸ್ಪೆಕ್‌ನಲ್ಲಿ ಮಿಸ್ ಆಗಿರುವ 7 ಫೀಚರ್‌ಗಳು
12.3-ಇಂಚಿನ ಟಚ್‌ಸ್ಕ್ರೀನ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ಜಾಗತಿಕ-ಸ್ಪೆಕ್ ಮಾಡೆಲ್ ನೀಡುವ ಕೆಲವು ಪ್ರಮುಖ ಫೀಚರ್‌ಗಳು ಇಂಡಿಯಾ-ಸ್ಪೆಕ್ ಎಕ್ಸ್-ಟ್ರಯಲ್‌ನಲ್ಲಿ ಮಿಸ್ ಆಗಿದೆ
ಬರೋಬ್ಬರಿ ಒಂದು ದಶಕಗಳ ನಂತರ ನಿಸ್ಸಾನ್ ಎಕ್ಸ್-ಟ್ರಯಲ್ ಇದೀಗ ನಾಲ್ಕನೇ ತಲೆಮಾರಿನ ಅವತಾರದಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ, ಭಾರತದಾದ್ಯಂತ ಇದು 49.92 ಲಕ್ಷ ರೂ.ನಷ್ಟು ಎಕ್ಸ್‌ಶೋರೂಮ್ ಬೆಲೆಯನ್ನು ಹೊಂದಿದೆ. ಭಾರತೀಯ ಮೊಡೆಲ್ ಬೇಸಿಕ್ ಅಂಶಗಳನ್ನು ಸರಿಯಾಗಿ ಪಡೆಯುತ್ತದಾದರೂ, ಇದು ಜಾಗತಿಕ ಆವೃತ್ತಿಯಲ್ಲಿ ಕಂಡುಬರುವ ಹಲವಾರು ಪ್ರೀಮಿಯಂ ಫೀಚರ್‌ಗಳನ್ನು ಹೊಂದಿಲ್ಲ. ಇದರ ಜಾಗತಿಕ ಪ್ರತಿರೂಪಕ್ಕೆ ಹೋಲಿಸಿದರೆ ಇಂಡಿಯಾ-ಸ್ಪೆಕ್ ಎಕ್ಸ್-ಟ್ರಯಲ್ ಏನನ್ನು ಪಡೆಯುವುದಿಲ್ಲ ಎಂಬುದನ್ನು ವಿವರವಾಗಿ ನೋಡೋಣ:
12.3 ಇಂಚಿನ ಟಚ್‌ಸ್ಕ್ರೀನ್
ಜಾಗತಿಕ-ಸ್ಪೆಕ್ ಎಕ್ಸ್-ಟ್ರಯಲ್ 12.3-ಇಂಚಿನ ಟಚ್‌ಸ್ಕ್ರೀನ್ ಅನ್ನು ಪಡೆಯುತ್ತದೆ, ಆದರೆ ಭಾರತೀಯ ಮೊಡೆಲ್ ಕೇವಲ 8-ಇಂಚಿನ ಸ್ಕ್ರೀನ್‌ನೊಂದಿಗೆ ಬರುತ್ತದೆ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊರತುಪಡಿಸಿ ಹೆಚ್ಚಿನ ಕನೆಕ್ಟೆಡ್ ಕಾರ್ ಫೀಚರ್‌ಗಳನ್ನು ಪಡೆಯುವುದಿಲ್ಲ. ಆದರೆ, ಎರಡೂ ಮೊಡೆಲ್‌ಗಳು ಒಂದೇ ರೀತಿಯ 12.3-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇಯನ್ನು ಪಡೆಯುತ್ತದೆ.
ಹೆಡ್ಸ್-ಅಪ್ ಡಿಸ್‌ಪ್ಲೇ
ಜಾಗತಿಕವಾಗಿ ಮಾರಾಟವಾಗುವ ನಿಸ್ಸಾನ್ ಎಕ್ಸ್-ಟ್ರಯಲ್ ವೇಗ ಮತ್ತು ನ್ಯಾವಿಗೇಶನ್‌ನಂತಹ ಪ್ರಮುಖ ಮಾಹಿತಿಯನ್ನು ತೋರಿಸುವ ಬಣ್ಣದ ಹೆಡ್ಸ್-ಅಪ್ ಡಿಸ್‌ಪ್ಲೇಯನ್ನು ಹೊಂದಿದೆ. ಆದರೆ, ಈ ಫೀಚರ್ ಭಾರತೀಯ ಮೊಡೆಲ್‌ನಲ್ಲಿ ಲಭ್ಯವಿರುವುದಿಲ್ಲ.
ADAS
ಜಾಗತಿಕ ಮೊಡೆಲ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪಿಂಗ್ ಅಸಿಸ್ಟ್ ಮತ್ತು ಆಟೋಮ್ಯಾಟಿಕ್ ಎಮೆರ್ಜೆನ್ಸಿ ಬ್ರೇಕಿಂಗ್‌ನಂತಹ ಫಿಚರ್‌ಗಳೊಂದಿಗೆ ಸಮಗ್ರ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸೂಟ್ ಅನ್ನು ಪಡೆಯುತ್ತದೆ. ಇಂತಹ ADAS ಫೀಚರ್‌ಗಳು ಇಂಡಿಯಾ-ಸ್ಪೆಕ್ ಮೊಡೆಲ್‌ನಲ್ಲಿ ಲಭ್ಯವಿಲ್ಲ.
ಇದನ್ನೂ ಓದಿ: Nissan X-Trail Review: ಇದರ ಬೆಲೆಗೆ ಉತ್ತಮ ಆಯ್ಕೆಯೇ ? ಇದರ ಪಾಸಿಟಿವ್ ಮತ್ತು ನೆಗೆಟಿವ್‌ಗಳೇನು ?
ಇ-ಪವರ್ ಎಂಜಿನ್ ಮತ್ತು ಎಡಬ್ಲ್ಯೂಡಿ ಡ್ರೈವ್‌ಟ್ರೇನ್
ಜಾಗತಿಕ ಮೊಡೆಲ್ ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ, ಅದರ ವಿಶೇಷಣಗಳು ಈ ಕೆಳಗಿನಂತಿವೆ:
ನಿಸ್ಸಾನ್ ಎಕ್ಸ್-ಟ್ರಯಲ್ |
|||
ಎಂಜಿನ್ |
1.5-ಲೀಟರ್ ಟರ್ಬೊ-ಪೆಟ್ರೋಲ್ |
e-ಪವರ್(ಹೈಬ್ರಿಡ್) |
|
ಡ್ರೈವ್‌ಟ್ರೈನ್ |
ಫ್ರಂಟ್ ವೀಲ್ ಡ್ರೈವ್ |
ಫ್ರಂಟ್ ವೀಲ್ ಡ್ರೈವ್ |
ಆಲ್ ವೀಲ್ ಡ್ರೈವ್* |
ಪವರ್ |
163 ಪಿಎಸ್ |
204 ಪಿಎಸ್ |
213 ಪಿಎಸ್ |
ಟಾರ್ಕ್ |
300 ಎನ್‌ಎಮ್ |
300 ಎನ್‌ಎಮ್ |
525 ಎನ್‌ಎಮ್‌ವರೆಗೆ |
0-100 kmph |
9.6 ಸೆಕೆಂಡ್‌ಗಳು |
8 ಸೆಕೆಂಡ್‌ಗಳು |
7 ಸೆಕೆಂಡ್‌ಗಳು |
ಇಂಡಿಯಾ-ಸ್ಪೆಕ್ ಮಾಡೆಲ್ ಅನ್ನು ಫ್ರಂಟ್-ವೀಲ್ ಡ್ರೈವ್‌ನೊಂದಿಗೆ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ನೀಡಲಾಗುತ್ತದೆ, ಇದು ವಿಭಿನ್ನ ಭೂಪ್ರದೇಶಗಳಲ್ಲಿ ಡ್ರೈವ್ ಮಾಡುವಾಗ ಅಷ್ಟೇನು ಸಮಧಾನಕರವಾಗಿಲ್ಲ.
ಇದನ್ನೂ ಸಹ ಓದಿ: 2024 Nissan X-Trail: ಆಫರ್‌ನಲ್ಲಿರುವ ಎಲ್ಲಾ ಫೀಚರ್‌ಗಳ ಒಂದು ನೋಟ
10-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್
ಇಂಡಿಯಾ-ಸ್ಪೆಕ್ ಎಕ್ಸ್-ಟ್ರಯಲ್ 6-ಸ್ಪೀಕರ್ ಸೌಂಡ್ ಸಿಸ್ಟಮ್‌ನೊಂದಿಗೆ ಬರುತ್ತದೆ, ಆದರೆ ಜಾಗತಿಕ ಮೊಡೆಲ್ ಹೆಚ್ಚು ಪ್ರೀಮಿಯಂ 10-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ.
ಲೆದರ್ ಸೀಟ್ ಕವರ್
ಗ್ಲೋಬಲ್-ಸ್ಪೆಕ್ ನಿಸ್ಸಾನ್ ಎಕ್ಸ್-ಟ್ರಯಲ್ ಸೀಟ್‌ಗಳ ಮೇಲೆ ಹೆಚ್ಚು ಪ್ರೀಮಿಯಂ-ಫೀಲಿಂಗ್ ಲೆದರ್ ಕವರ್ ಅನ್ನು ಪಡೆಯುತ್ತದೆ, ಇದು ಒಳಭಾಗದ ಐಷಾರಾಮಿ ಅಂಶವನ್ನು ಹೆಚ್ಚಿಸುತ್ತದೆ. ಆದರೆ, ಇಂಡಿಯಾ-ಸ್ಪೆಕ್ ಮೊಡೆಲ್‌ನಲ್ಲಿ, ಸೀಟ್‌ಗಳು ಫ್ಯಾಬ್ರಿಕ್ ಕವರ್‌ನೊಂದಿಗೆ ಬರುತ್ತವೆ ಮತ್ತು ಸ್ಟೀರಿಂಗ್ ವೀಲ್ ಮಾತ್ರ ಲೆದರ್ ಫಿನಿಶ್ ಅನ್ನು ಒಳಗೊಂಡಿದೆ.
ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳು
ಜಾಗತಿಕ ಎಕ್ಸ್-ಟ್ರಯಲ್ ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ಮತ್ತು ವೆಂಟಿಲೇಶನ್ ಸೌಕರ್ಯವಿರುವ ಮುಂಭಾಗದ ಸೀಟ್‌ಗಳನ್ನು ಹೊಂದಿದೆ. ಮತ್ತೊಂದೆಡೆ, ಇಂಡಿಯಾ-ಸ್ಪೆಕ್ ಮಾಡೆಲ್ ಕೇವಲ ಮ್ಯಾನುಯಲ್ ಆಗಿ ಸರಿಹೊಂದಿಸಬಹುದಾದ ಸೀಟ್‌ಗಳನ್ನು ಹೊಂದಿದೆ ಮತ್ತು ವೆಂಟಿಲೇಟೆಡ್ ಸೀಟುಗಳು ಇರುವುದಿಲ್ಲ.
ಈ ಯಾವ ಫೀಚರ್‌ಗಳನ್ನು ನೀವು ಇಂಡಿಯಾ-ಸ್ಪೆಕ್ ನಿಸ್ಸಾನ್ ಎಕ್ಸ್-ಟ್ರಯಲ್‌ನಲ್ಲಿ ನೋಡಲು ಇಷ್ಟಪಡುತ್ತೀರಿ? ಕೆಳಗಿನ ಕಾಮೆಂಟ್‌ಗಳಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.
ನಿಸ್ಸಾನ್ ಕಾರುಗಳ ಕುರಿತ ಹೆಚ್ಚಿನ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ : ನಿಸ್ಸಾನ್ ಎಕ್ಸ್-ಟ್ರಯಲ್ ಆಟೋಮ್ಯಾಟಿಕ್