2023ರಲ್ಲಿ ಭಾರತೀಯ ಮಾರುಕಟ್ಟೆಗೆ ಗುಡ್ ಬೈ ಹೇಳಿದ 8 ಕಾರುಗಳಿವು
ಹೋಂಡಾ ಡವೋಆರ್-ವಿ ಗಾಗಿ shreyash ಮೂಲಕ ಡಿಸೆಂಬರ್ 27, 2023 01:17 pm ರಂದು ಪ್ರಕಟಿಸಲಾಗಿದೆ
- 75 Views
- ಕಾಮೆಂಟ್ ಅನ್ನು ಬರೆಯಿರಿ
ಈ ಒಟ್ಟು 8 ಮೊಡೆಲ್‌ಗಳಲ್ಲಿ ಹೋಂಡಾವು ಮೂರು, ಮತ್ತು ಸ್ಕೋಡಾವು ಎರಡು ಸೆಡಾನ್ ಗಳನ್ನು ತನ್ನ ಭಾರತೀಯ ಪಟ್ಟಿಯಿಂದ ತೊಡೆದು ಹಾಕಿದೆ
2023ರಲ್ಲಿ ಅಟೋಮೊಬೈಲ್ ಪ್ರಪಂಚವು ಟಾಟಾ, ಹೋಂಡಾ ಮತ್ತು ಹ್ಯಂಡೈ ಸೇರಿದಂತೆ ವಿವಿಧ ಕಂಪನಿಗಳಿಗೆ ಸೇರಿದ ಅನೇಕ ಕಾರುಗಳ ಬಿಡುಗಡೆ ಮತ್ತು ಪರಿಷ್ಕರಣೆಯನ್ನು ಕಂಡಿದೆ. ಇನ್ನೊಂದೆಡೆ ಹೋಂಡಾ, ಸ್ಕೋಡಾ, ನಿಸಾನ್, ಮತ್ತು ಮಹೀಂದ್ರಾ ಮುಂತಾದ ಸಂಸ್ಥೆಗಳ ಕೆಲವು ವಾಹನಗಳ ಮಾರಾಟವನ್ನು ನಿಲ್ಲಿಸಲಾಗಿದ್ದು, ಬಹುಶಃ BS6 ಹಂತ-2ರ ನಿಯಮಾವಳಿಗಳ ಕಾರಣ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೆ ಪರಿಷ್ಕೃತ ಮಾಲಿನ್ಯ ಮಾನದಂಡಗಳನ್ನು ಪಾಲಿಸುವುದಕ್ಕಾಗಿ ಎಂಜಿನ್ ಗಳ ಮಾರ್ಪಾಡಿಗಾಗಿ ಬೇಕಾಗುವ ಹೂಡಿಕೆಯನ್ನು ಮಾಡಲು ಅವು ಅಷ್ಟೊಂದು ಜನಪ್ರಿಯವಾಗಿಲ್ಲದ ಕಾರಣ ಕಾರು ತಯಾರಕ ಸಂಸ್ಥೆಗಳು ಈ ಹೆಜ್ಜೆಯನ್ನಿಟ್ಟಿವೆ. 2023ರಲ್ಲಿ ಶೋರೂಂಗಳಿಂದ ನಿವೃತ್ತಿ ಪಡೆದ 8 ಕಾರುಗಳ ವಿವರ ಇಲ್ಲಿದೆ:
ಮಾರುತಿ ಆಲ್ಟೊ 800
ಕೊನೆಯ ದಾಖಲಿತ ಬೆಲೆ - ರೂ. 3.54 ರಿಂದ ರೂ. 5.13 ಲಕ್ಷ.
ಎಂಜಿನ್ - 0.8-ಲೀಟರ್ (ಪೆಟ್ರೋಲ್ / CNG) ಎಂಜಿನ್ (5-MT)
ಬಿಡುಗಡೆ - 2012
ಮಾರುತಿ ಆಲ್ಟೊ 800 ಕಾರನ್ನು 2012ರಲ್ಲಿ ಪರಿಚಯಲಿಸಲಾಗಿದ್ದು, ಆಲ್ಟೊ K10 ವಾಹನಕ್ಕೆ ಪರ್ಯಾಯವಾದ ಅತ್ಯಂತ ಅಗ್ಗದ ವಾಹನವಾಗಿ ಮಾತ್ರವಲ್ಲದೆ ಭಾರತದಲ್ಲಿ ಮಾರುತಿ ಸಂಸ್ಥೆಯ ಅತ್ಯಂತ ಅಗ್ಗದ ಕೊಡುಗೆಯಾಗಿ ಹೊರತರಲಾಗಿತ್ತು. ಇದು ಪೆಟ್ರೋಲ್ ಮತ್ತು CNG ಪವರ್ ಟ್ರೇನ್ ಆಯ್ಕೆಗಳೊಂದಿಗೆ ಹೊರಬಂದಿತ್ತು. ಆದರೆ ಸುಮಾರು ಒಂದು ದಶಕದ ಕಾಲ ಮಾರುಕಟ್ಟೆಯಲ್ಲಿದ್ದ ನಂತರ ಇದನ್ನು 2023ರಲ್ಲಿ ಹಿಂದಕ್ಕೆ ಪಡೆಯಲಾಯಿತು. ಏಕೆಂದರೆ ಮಾರುತಿ ಸಂಸ್ಥೆಯ ಈ ಆರಂಭಿಕ ವಾಹನವು BS6 ಹಂತ-2ರ ಪರಿಷ್ಕರಣೆಗೆ ಒಳಗಾಗಿಲ್ಲ. ಆಲ್ಟೊ ಹೆಸರು ಈಗಲೂ K10 ಆವೃತ್ತಿಯೊಂದಿಗೆ ಗುರುತಿಸಿಕೊಂಡಿದ್ದು, ಇದು 1 ಲೀಟರ್ ಪೆಟ್ರೊಲ್ ಎಂಜಿನ್ ಅನ್ನು ಹೊಂದಿದೆ.
ಹೋಂಡಾ ಜಾಝ್
ಕೊನೆಯ ದಾಖಲಿತ ಬೆಲೆ - ರೂ. 8.01 ರಿಂದ ರೂ. 10.32 ಲಕ್ಷ.
ಎಂಜಿನ್ - 1.2 ಲೀಟರ್ ಪೆಟ್ರೋಲ್ ಎಂಜಿನ್ (5-MT/CVT)
ಬಿಡುಗಡೆ - 2009
ಹೋಂಡಾ ಜಾಝ್ ವಾಹನವು 2009ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಕಾಲಿಟ್ಟಿದ್ದು, 2015ರಲ್ಲಿ ಇದು ಗಣನೀಯ ಪ್ರಮಾಣದ ಪರಿಷ್ಕರಣೆಗೆ ಒಳಗಾಯಿತು. ಆರಂಭಿಕವಾಗಿ ಜಾಝ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳೆರಡರಲ್ಲೂ ಸಿದ್ಧಪಡಿಸಲಾಗುತ್ತಿತ್ತು. ಜಪಾನಿನ ಈ ಕಾರು ತಯಾರಕ ಸಂಸ್ಥೆಯು 2020ರಲ್ಲಿ ಜಾಝ್ ಅನ್ನು ಪರಿಷ್ಕರಣೆಗೆ ಒಳಪಡಿಸಿತು. ಆದರೆ BS6 ಮಾಲಿನ್ಯ ಮಾನದಂಡಗಳ ಜಾರಿಯ ಕಾರಣ ಡೀಸೆಲ್ ಆಯ್ಕೆಯನ್ನು ಹಿಂಪಡೆಯಲಾಯಿತು. ಅಲ್ಲದೆ 2023ರ ಏಪ್ರಿಲ್ ತಿಂಗಳಿನಲ್ಲಿ BS6 ಹಂತ-2ರ ನಿಯಮಗಳು ಜಾರಿಗೆ ಬಂದ ಕಾರಣ ಹೋಂಡಾ ಸಂಸ್ಥೆಯು ಈ ಕಾರನ್ನು ಸಂಪೂರ್ಣವಾಗಿ ನಿವೃತ್ತಿಗೊಳಿಸಿತು.
ಇದನ್ನು ಸಹ ನೋಡಿರಿ: 2023ರಲ್ಲಿ ಪರಿಷ್ಕರಣೆಗೆ ಒಳಗಾದ ರೂ. 30 ಲಕ್ಷದೊಳಗಿನ ಕಾರುಗಳು
ಹೋಂಡಾ WR-V
ಕೊನೆಯ ದಾಖಲಿತ ಬೆಲೆ - ರೂ. 9.11 ರಿಂದ ರೂ. 12.31 ಲಕ್ಷ.
ಎಂಜಿನ್ - 1.2-ಲೀಟರ್ ಪೆಟ್ರೋಲ್ (5-MT) / 1.5-ಲೀಟರ್ ಡೀಸೆಲ್ ಎಂಜಿನ್ (6-MT)
ಬಿಡುಗಡೆ - 2017
ಹೋಂಡಾ ಸಂಸ್ಥೆಯು 2017 ರಲ್ಲಿ ಜಾಝ್ ಅನ್ನು ಆಧರಿಸಿದ ಸಬ್-4m ಕ್ರಾಸ್ ಓವರ್ ಆದ WR-Vಯನ್ನು ಬಿಡುಗಡೆ ಮಾಡಿತು. 1.2 ಲೀಟರಿನ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರಿನ ಡೀಸೆಲ್ ಎಂಜಿನ್ ಎರಡನ್ನೂ ಹೊಂದಿದ್ದ WR-V ಯನ್ನು ಮ್ಯಾನುವಲ್ ಟ್ರಾನ್ಸ್ ಮಿಶನ್ ಆಯ್ಕೆಗಳಲ್ಲಿ ಮಾತ್ರವೇ ಹೊರತರಲಾಗುತ್ತಿತ್ತು. ಆದರೆ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ನ ಅನುಪಸ್ಥಿತಿ ಮತ್ತು ಹೆಚ್ಚಿನ ಸ್ಪರ್ಧೆಯ ಕಾರಣ 2023ರಲ್ಲಿ ಜಾಝ್ ಜೊತೆಗೆ WR-V ಯ ಉತ್ಪಾದನೆಯನ್ನು ನಿಲ್ಲಿಸಲಾಯಿತು. ಏಕೆಂದರೆ ಇತ್ತೀಚಿನ ಮಾನದಂಡಗಳನ್ನು ಅನುಸರಿಸಲು ಮಾಡಬೇಕಾದ ಹೂಡಿಕೆಯು ಈ ಕಂಪನಿಗೆ ಲಾಭದಾಯಕವಾಗಿ ಕಾಣಿಸಲಿಲ್ಲ.
ಹೋಂಡಾ ಸಿಟಿ 4ನೇ ತಲೆಮಾರು
ಕೊನೆಯ ದಾಖಲಿತ ಬೆಲೆ - ರೂ. 9.50 ರಿಂದ ರೂ. 10 ಲಕ್ಷ.
ಎಂಜಿನ್ - 1.5 ಲೀಟರ್ ಪೆಟ್ರೋಲ್ ಎಂಜಿನ್ (6-MT)
ಬಿಡುಗಡೆ - 2014
ನಾಲ್ಕನೇ ತಲೆಮಾರಿ ಹೋಂಡಾ ಸಿಟಿಯು 2014ರಲ್ಲಿ ಭಾರತದಲ್ಲಿ ಬಿಡುಗಡೆಗೊಂಡಿದ್ದು 2017ರಲ್ಲಿ ಮಧ್ಯಂತರ ಪರಿಷ್ಕರಣೆಗೆ ಒಳಗಾಯಿತು. ಇದು 1.5 ಲೀಟರಿನ ಪೆಟ್ರೋಲ್ ಮತ್ತು 1.5 ಲೀಟರಿನ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, ಮೊದಲನೆಯದ್ದು CVT ಆಯ್ಕೆಯನ್ನು ಸಹ ಪಡೆದಿತ್ತು. ಆದರೆ 2020ರಲ್ಲಿ ಐದನೇ ತಲೆಮಾರಿನ ಹೋಂಡಾ ಸಿಟಿಯನ್ನು ಬಿಡುಗಡೆ ಮಾಡಲಾಗಿದ್ದರೂ ಸಹ ಹಳೆಯ ಸೆಡಾನ್ ನ ಮಾರಾಟವನ್ನು ಮುಂದುವರಿಸಲಾಗಿತ್ತು. ಆದರೆ ಇದನ್ನು ಅಗ್ಗದ ವಾಹನವಾಗಿ ಮುಂದುವರಿಸಿದ ಕಾರಣ ಡೀಸೆಲ್ ಎಂಜಿನ್ ಮತ್ತು CVT ಆಯ್ಕೆಗಳನ್ನು ರದ್ದುಪಡಿಸಲಾಗಿತ್ತು. ಆದರೆ ಐದನೇ ತಲೆಮಾರಿನ ಸಿಟಿಯು 2023ರ ಮಾರ್ಚ್ ತಿಂಗಳಿನಲ್ಲಿ ಪರಿಷ್ಕರಣೆಗೆ ಒಳಗಾದ ನಂತರ ಹೋಂಡಾ ಸಂಸ್ಥೆಯು ಅಂತಿಮವಾಗಿ ನಾಲ್ಕನೇ ತಲೆಮಾರಿನ ಸಿಟಿಯನ್ನು ನಿವೃತ್ತಿಗೊಳಿಸಿತು.
ನಿಸಾನ್ ಕಿಕ್ಸ್
ಕೊನೆಯ ದಾಖಲಿತ ಬೆಲೆ - ರೂ. 9.50 ರಿಂದ ರೂ. 14.90 ಲಕ್ಷ.
ಎಂಜಿನ್ - 1.5-ಲೀಟರ್ ಪೆಟ್ರೋಲ್ ಎಂಜಿನ್ (5-MT) / 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (MT / CVT)
ಬಿಡುಗಡೆ - 2019
ನಿಸಾನ್ ಕಿಕ್ಸ್ ಅನ್ನು ಕಾಂಪ್ಯಾಕ್ಟ್ SUV ಯಾಗಿ 2019ರಲ್ಲಿ ಪರಿಚಯಿಸಲಾಗಿದ್ದು, ಹ್ಯುಂಡೈ ಕ್ರೆಟಾದಂತಹ ಮಾದರಿಗಳಿಗೆ ಸ್ಪರ್ಧೆಯನ್ನು ನೀಡುವುದು ಈ ಸಂಸ್ಥೆಯ ಉದ್ದೇಶವಾಗಿತ್ತು. ಇದು 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬಂದಿದ್ದು, ಎರಡೂ ಸಹ ಮ್ಯಾನುವಲ್ ಟ್ರಾನ್ಸ್ ಮಿಶನ್ ಆಯ್ಕೆಗಳನ್ನು ಹೊಂದಿದ್ದವು. ಆದರೆ BS6 ಜೊತೆಗೆ 2020ರಲ್ಲಿ ಮಾಲಿನ್ಯ ನಿಯಮಗಳನ್ನು ಬಿಗಿಗೊಳಿಸಿದ ಕಾರಣ ನಿಸಾನ್ ಸಂಸ್ಥೆಯು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹಿಂಪಡೆಯಿತು. ಬದಲಾಗಿ ಇದು ಮ್ಯಾನುವಲ್ ಟ್ರಾನ್ಸ್ ಮಿಶನ್ ಅಥವಾ CVT ಅಟೋಮ್ಯಾಟಿಕ್ ಜೊತೆಗೆ ಬರುವ ಹೊಸ 1.3 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (156 PS / 254 Nm) ಅನ್ನು ಹೊರತಂದಿತು. 2023 ರಲ್ಲಿ ಹೊಸ RDE (ರಿಯಲ್ ಡ್ರೈವಿಂಗ್ ಎಮಿಷನ್ಸ್) ಮಾನದಂಡಗಳನ್ನು ಪರಿಚಯಿಸಿದಾಗ, ಕಿಕ್ಸ್ ಕಾರು ಈಗಾಗಲೇ ತನ್ನ ಬದುಕಿನ ಅಂತಿಮ ಘಟ್ಟವನ್ನು ತಲುಪಿದೆ ಎಂದು ಹೇಳಿದ ನಿಸಾನ್ ಸಂಸ್ಥೆಯು, ಕಡಿಮೆ ಪ್ರಮಾಣದ ಮಾರಾಟವನ್ನು ಹೊಂದಿದ್ದ ಈ SUV ಯನ್ನು ನಿವೃತ್ತಿಗೊಳಿಸಿತು. ಅಂದಿನಿಂದ ಸಬ್ 4m SUV ವಿಭಾಗದಲ್ಲಿ ಮ್ಯಾಗ್ನೈಟ್ ಅನ್ನು ಮಾತ್ರವೇ ನಿಸಾನ್ ಸಂಸ್ಥೆಯು ಭಾರತದಲ್ಲಿ ಮಾರುತ್ತಿದೆ.
ಇದನ್ನು ಸಹ ನೋಡಿರಿ: ಹದಿಮೂರು! ಈ ವರ್ಷದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾದ ಅಧಿಕ ಕಾರ್ಯಕ್ಷಮತೆಯ ಕಾರುಗಳ ಸಂಖ್ಯೆ ಇದು
ಸ್ಕೋಡಾ ಒಕ್ಟೇವಿಯಾ
ಕೊನೆಯ ದಾಖಲಿತ ಬೆಲೆ - ರೂ. 27.35 ರಿಂದ ರೂ. 30.45 ಲಕ್ಷ.
ಎಂಜಿನ್ - 2-ಲೀಟರ್ ಟರ್ಬೊ ಪೆಟ್ರೋಲ್ (7-DCT)
ಬಿಡುಗಡೆ - 2001
ಮೊದಲನೇ ತಲೆಮಾರಿನ ಸ್ಕೋಡಾ ಒಕ್ಟೇವಿಯಾ ಕಾರು 2 ದಶಕಗಳ ಹಿಂದೆ ಭಾರತದಲ್ಲಿ ಬಿಡುಗಡೆಯಾಗಿದ್ದು, 2021ರಲ್ಲಿ ಇದು ಕೊನೆಯ ಪರಿಷ್ಕರಣೆಯನ್ನು ಪಡೆದಿತ್ತು. CKD (ಕಂಪ್ಲೀಟ್ಲಿ ಕ್ನಾಕ್ಡ್ ಡೌನ್) ಮಾದರಿಯಾಗಿ ಮಾರಲ್ಪಡುವ ಈ ಪ್ರೀಮಿಯಂ ಸ್ಕೋಡಾ ಸೆಡಾನ್ ವಾಹನವು ಇದರ ನಿರ್ವಹಣೆ ಮತ್ತು ಕಾರ್ಯಕ್ಷಮತೆಯ ಕಾರಣ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿತ್ತು. ಈ ವಾಹನವು ಭಾರತದಲ್ಲಿ 2022ರಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಯೂನಿಟ್ ಗಳ ಮಾರಾಟದ ಮೈಲಿಗಲ್ಲನ್ನು ದಾಟಿತ್ತು. ಆದರೆ 2023ರ ಏಪ್ರಿಲ್ ತಿಂಗಳಿನಲ್ಲಿ BS6 ಹಂತ 2ರ ಮಾನದಂಡಗಳನ್ನು ಜಾರಿಗೊಳಿಸಿದ ಕಾರಣ ಸ್ಕೋಡಾ ಒಕ್ಟೇವಿಯಾವನ್ನು ಭಾರತದಲ್ಲಿ ಮಾರಾಟದಿಂದ ಹಿಂಪಡೆಯಲಾಯಿತು. ಆಸಕ್ತಿಯ ವಿಷಯವೆಂದರೆ ಇದು ಜಾಗತಿಕ ಮಾರುಕಟ್ಟೆಗಳಲ್ಲಿ ಹೊಸ ವೈಶಿಷ್ಟ್ಯಗಳು ಮತ್ತು ಪವರ್ ಟ್ರೇನ್ ಆಯ್ಕೆಗಳೊಂದಿಗೆ ಈಗಲೂ ಸಹ ಲಭಿಸುತ್ತಿದೆ.
ಸ್ಕೋಡಾ ಸುಪರ್ಬ್
ಕೊನೆಯ ದಾಖಲಿತ ಬೆಲೆ - ರೂ. 34.19 ರಿಂದ ರೂ. 37.29 ಲಕ್ಷ.
ಎಂಜಿನ್ - 2-ಲೀಟರ್ ಟರ್ಬೊ ಪೆಟ್ರೋಲ್ (7-DCT)
ಬಿಡುಗಡೆ - 2009
ಸ್ಕೋಡಾ ಸುಪರ್ಬ್ ವಾಹನವು ಭಾರತದಲ್ಲಿ ಈ ಕಾರು ತಯಾರಕ ಸಂಸ್ಥೆಯ ಅಗ್ರಗಣ್ಯ ವಾಹನವಾಗಿದೆ. ಇದನ್ನು 2009ರಲ್ಲಿ ಮೊದಲ ಬಾರಿಗೆ ಎರಡನೇ ತಲೆಮಾರಿನ ಅವತಾರವಾಗಿ ಹೊರತರಲಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗಿತ್ತು. ಆದರೆ 2020ರಲ್ಲಿ ಸುಪರ್ಬ್ ಅನ್ನು ಪೆಟ್ರೋಲ್ ಎಂಜಿನ್ ಗೆ ಮಾತ್ರವೇ ಸೀಮಿತಗೊಳಿಸಲಾಯಿತು. ಏಕೆಂದರೆ BS6 ಮಾಲಿನ್ಯ ನಿಯಮಗಳನ್ನು ಜಾರಿಗೊಳಿಸಿದ ಕಾರಣ ಸ್ಕೋಡಾ - ಫೋಕ್ಸ್ ವ್ಯಾಗನ್ ಬ್ರಾಂಡ್, ಸಂಪೂರ್ಣವಾಗಿ ಡೀಸೆಲ್ ಎಂಜಿನ್ ಗಳಿಂದ ದೂರ ಸರಿಯಿತು.
ಒಕ್ಟೇವಿಯಾದಂತೆಯೇ ಸುಪರ್ಬ್ ಸಹ ಭಾರತದಲ್ಲಿ CKD ಯೂನಿಟ್ ಆಗಿ ದೊರೆಯುತ್ತಿತ್ತು. ಹಾಗೂ 2023ರಲ್ಲಿ ಮಾನದಂಡಗಳು ಇನ್ನಷ್ಟು ಬಿಗಿಗೊಂಡಾಗ ಹಾಗೂ ನಾನ್ ಲಕ್ಷುರಿ ಎಕ್ಸಿಕೀಟಿವ್ ಸೆಡಾನ್ ಗಳ ಬೇಡಿಕೆಯು ಕುಸಿದಾಗ ಸ್ಕೋಡಾ ಸಂಸ್ಥೆಯು ಸುಪರ್ಬ್ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧರಿಸಿತು. ಅಲ್ಲದೆ ಹೊಸ ತಲೆಮಾರಿನ ಸುಪರ್ಬ್ ಅನ್ನು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗಿದು, ಭಾರತದಲ್ಲಿ ಇದು 2024ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಮಹೀಂದ್ರಾ KUV100 NXT
ಕೊನೆಯ ದಾಖಲಿತ ಬೆಲೆ - ರೂ. 6.06 ರಿಂದ ರೂ. 7.72 ಲಕ್ಷ.
ಎಂಜಿನ್ - 1.2 ಲೀಟರ್ ಪೆಟ್ರೋಲ್ ಎಂಜಿನ್ (5-MT)
ಬಿಡುಗಡೆ - 2016
ಮಹೀಂದ್ರಾ KUV100 NXT ವಾಹನವು 2016ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಇದನ್ನು 2017ರಲ್ಲಿ ಪರಿಷ್ಕರಣೆಗೆ ಒಳಪಡಿಸಲಾಯಿತು. KUV100 NXT ವಾಹನವು 6 ಸೀಟುಗಳ ಕ್ರಾಸ್ ಓವರ್ ಆಗಿದ್ದು 1.2 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.2 ಲೀಟರ್ ಡೀಸೆಲ್ ಯೂನಿಟ್ ಎರಡನ್ನೂ ಹೊಂದಿತ್ತು. ಆದರೆ ನಂತರದ ಹಂತಗಳಲ್ಲಿ ಡೀಸೆಲ್ ಎಂಜಿನ್ ವೇರಿಯಂಟ್ ಗಳನ್ನು ಹಿಂಪಡೆಯಲಾಯಿತು. ಮಹೀಂದ್ರಾ ಸಂಸ್ಥೆಯು 2023ರಲ್ಲಿ KUV100 NXT ಯ ಆನ್ಲೈನ್ ಮತ್ತು ಆಫ್ಲೈನ್ ಕಾಯ್ದಿರಿಸುವಿಕೆಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದು, ಈ ಮಾದರಿಯ ಉತ್ಪಾದನೆಯನ್ನು ಸಂಪೂರ್ಣವಾಗಿ ರದ್ದುಪಡಿಸಿದೆ.
ಇವು 2023ರಲ್ಲಿ ಭಾರತದ ಮಾರುಕಟ್ಟೆಯಿಂದ ನಿವೃತ್ತಿ ಹೊಂದಿದ 8 ಮಾದರಿಗಳಾಗಿವೆ. ನಿಮ್ಮ ಪ್ರಕಾರ ಯಾವ ಮಾದರಿಯನ್ನು ನಿಲ್ಲಿಸಬಾರದಿತ್ತು ಮತ್ತು ಯಾಕೆ? ನಿಮ್ಮ ಅನಿಸಿಕೆಗಳನ್ನು ಈ ಕೆಳಗೆ ಹಂಚಿಕೊಳ್ಳಿ