2023ರಲ್ಲಿ ಫೇಸ್‌ಲಿಫ್ಟ್‌ಗೆ ಒಳಗಾದ ರೂ. 30 ಲಕ್ಷದೊಳಗಿನ ಕಾರುಗಳು
ಎಂಜಿ ಹೆಕ್ಟರ್ ಗಾಗಿ shreyash ಮೂಲಕ ಡಿಸೆಂಬರ್ 27, 2023 09:52 am ರಂದು ಪ್ರಕಟಿಸಲಾಗಿದೆ
- 40 Views
- ಕಾಮೆಂಟ್ ಅನ್ನು ಬರೆಯಿರಿ
ಒಟ್ಟು 10 ಮೊಡೆಲ್‌ಗಳಲ್ಲಿ ಈ ವರ್ಷದಲ್ಲಿ ವಿವಿಧ ವರ್ಗಗಳಲ್ಲಿ ಪರಿಷ್ಕರಣೆಗೆ ಒಳಗಾದ 6 SUV ಗಳು ಸಹ ಸೇರಿವೆ
2023 ಭಾರತದ ಕಾರು ಉದ್ಯಮದ ಪಾಲಿಗೆ ಸಾಕಷ್ಟು ಚಟುವಟಿಕೆಯಿಂದ ಕೂಡಿದ ವರ್ಷವಾಗಿದ್ದು, ಹೊಸ ಬಿಡುಗಡೆ ಮಾತ್ರವಲ್ಲದೆ ವಿವಿಧ ಪರಿಷ್ಕರಣೆಗಳು ಮತ್ತು ಮಾರ್ಪಾಡುಗಳನ್ನು ಕಂಡಿದೆ. ಈ ವರ್ಷಗಳಲ್ಲಿ ನಾವು ಟಾಟಾ, ಹ್ಯುಂಡೈ, ಹೋಂಡಾ, ಮತ್ತು ಕಿಯಾ ಸಂಸ್ಥೆಗಳ ಕಾರುಗಳ ಪರಿಷ್ಕರಣೆಗಳನ್ನು ನಾವು ಕಂಡಿದ್ದು, ಅವುಗಳ ಅನುಕ್ರಮ ಮಾದರಿಗಳಲ್ಲಿ ಸಾಕಷ್ಟು ಮಾರ್ಪಾಡುಗಳು ಉಂಟಾಗಿವೆ. 2023ರಲ್ಲಿ ಪರಿಷ್ಕರಣೆಗೆ ಒಳಗಾದ 10 ಮಾಸ್ ಮಾರ್ಕೆಟ್ ಮಾದರಿಗಳನ್ನು ನಾವು ನೋಡೋಣ.
MG ಹೆಕ್ಟರ್/ ಹೆಕ್ಟರ್ ಪ್ಲಸ್
ಪರಿಷ್ಕೃತ ವಾಹನದ ಬಿಡುಗಡೆ: ಜನವರಿ 2023
ಹೆಕ್ಟರ್ ಬೆಲೆ ಶ್ರೇಣಿ: ರೂ. 15 ಲಕ್ಷದಿಂದ ರೂ. 22 ಲಕ್ಷ
ಹೆಕ್ಟರ್ ಪ್ಲಸ್ ಬೆಲೆ ಶ್ರೇಣಿ: ರೂ. 17.80 ಲಕ್ಷದಿಂದ ರೂ. 22.73 ಲಕ್ಷ
MG ಹೆಕ್ಟರ್ ಮತ್ತು MG ಹೆಕ್ಟರ್ ಪ್ಲಸ್ ವಾಹನಗಳು 2023ರ ಜನವರಿ ತಿಂಗಳಿನಲ್ಲಿ ಮಧ್ಯಂತರ ಪರಿಷ್ಕರಣೆಗೆ ಒಳಗಾಗಿದ್ದು, ಇವುಗಳನ್ನು ಅಟೋ ಎಕ್ಸ್ಪೊ 2023ರಲ್ಲಿ ಬಿಡುಗಡೆ ಮಾಡಲಾಗಿದೆ. ಈ ಪರಿಷ್ಕರಣೆಗಳ ಮೂಲಕ ಎರಡೂ ಮಾದರಿಗಳು ಪರಿಷ್ಕೃತ ಫೇಶಿಯಾ, ಹೊಸ ಕ್ಯಾಬಿನ್ ಮತ್ತು ವೈಶಿಷ್ಟ್ಯಗಳನ್ನು ಪಡೆದಿದ್ದು ಇದರಲ್ಲಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂಗಳನ್ನು (ADAS) ಒಳಗೊಳ್ಳಲಾಗಿದೆ. MG ಹೆಕ್ಟರ್ ವಾಹನದಲ್ಲಿ 14 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, 7 ಇಂಚಿನ ಚಾಲಕನ ಸಂಪೂರ್ಣ ಡಿಜಿಟಲ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು, ಪ್ಯಾನೊರಾಮಿಕ್ ಸನ್ ರೂಫ್, ವೈರ್ ಲೆಸ್ ಫೋನ್ ಚಾರ್ಜರ್, 8 ಬಣ್ಣಗಳ ಆಂಬಿಯೆಂಟ್ ಲೈಟಿಂಗ್, ಮತ್ತು ಪವರ್ಡ್ ಟೇಲ್ ಗೇಟ್ ಇತ್ಯಾದಿ ಇತರ ವೈಶಿಷ್ಟ್ಯಗಳನ್ನು ಕಾಣಬಹುದು. ಸುರಕ್ಷತೆಯ ದೃಷ್ಟಿಯಿಂದ ಎರಡೂ SUV ಗಳು 6 ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ECS), ಮತ್ತು 360 ಡಿಗ್ರಿ ಕ್ಯಾಮರಾವನ್ನು ಹೊಂದಿವೆ.
ಎಂಜಿನ್ ಕುರಿತು ಮಾತನಾಡುವುದಾದರೆ, ಪರಿಷ್ಕೃತ MG ಹೆಕ್ಟರ್ ಮತ್ತು MG ಹೆಕ್ಟರ್ ಫೇಸ್ ಲಿಫ್ಟ್ ಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಎರಡೂ ವಾಹನಗಳು 2 ಎಂಜಿನ್ ಆಯ್ಕೆಗಳೊಂದಿಗೆ ಹೊರಬರುತ್ತಿದೆ: 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (143 PS/ 250 Nm) ಮತ್ತು 2-ಲೀಟರ್ ಡೀಸೆಲ್ ಎಂಜಿನ್ (170 PS/ 350 Nm). ಎರಡೂ ಎಂಜಿನ್ ಗಳನ್ನು ಪ್ರಮಾಣಿತ 6 ಸ್ಪೀಡ್ ಮ್ಯಾನುವಲ್ ಜೊತೆಗೆ ಹೊಂದಿಸಲಾಗಿದ್ದು, ಟರ್ಬೊ ಪೆಟ್ರೋಲ್ ಘಟಕವು CVT ಅಟೋಮ್ಯಾಟಿಕ್ ಅನ್ನು ಸಹ ಪಡೆಯಲಿದೆ.
ಹ್ಯುಂಡೈ ಗ್ರಾಂಡ್ i10 ನಿಯೋಸ್
ಪರಿಷ್ಕೃತ ವಾಹನದ ಬಿಡುಗಡೆ: ಜನವರಿ 2023
ಬೆಲೆ ಶ್ರೇಣಿ: ರೂ. 5.84 ಲಕ್ಷದಿಂದ ರೂ. 8.51 ಲಕ್ಷ
ಪರಿಷ್ಕೃತ ಹ್ಯುಂಡೈ ಗ್ರಾಂಡ್ i10 ನಿಯೋಸ್ ವಾಹನವು ಜನವರಿಯಲ್ಲಿ ಮಾರುಕಟ್ಟೆಗೆ ಬಂದಿದೆ. ಈ ಹ್ಯಾಚ್ ಬ್ಯಾಕ್ ನ ಮುಂದಿನ ಹಿಂದಿನ ಭಾಗಗಳು ಹೊಸ LED ಹೆಡ್ ಲೈಟ್ ಮತ್ತು ಟೇಲ್ ಲೈಟ್ ಗಳೊಂದಿಗೆ ಸ್ಪೋರ್ಟಿಯರ್ ಬಂಪರ್ ವಿನ್ಯಾಸವನ್ನು ಪಡೆದಿದ್ದು, ಪಕ್ಕದಲ್ಲಿ ಹೊಸ ಅಲೋಯ್ ವೀಲ್ ಗಳನ್ನು ಹೊಂದಿದೆ. ಒಳಾಂಗಣದಲ್ಲಿ ಹೊಸ ಅಫೋಲ್ಸ್ಟರಿ ಮತ್ತು ಕೆಲವೊಂದು ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊರತುಪಡಿಸಿ ಹೆಚ್ಚೇನೂ ಬದಲಾವಣೆಗಳನ್ನು ಮಾಡಿಲ್ಲ.
ಹ್ಯುಂಡೈ ಸಂಸ್ಥೆಯು ಗ್ರಾಂಡ್ i10 ನಿಯೋಸ್ ವಾಹನದಲ್ಲಿ ಆಂಡ್ರಾಯ್ಡ್ ಅಟೋ ಮತ್ತು ಆಪಲ್ ಕಾರ್ ಪ್ಲೇ ಜೊತೆಗೆ 8 ಇಂಚುಗಳ ಇನ್ಫೊಟೈನ್ ಮೆಂಟ್ ಡಿಸ್ಪ್ಲೇ, ವೈರ್ ಲೆಸ್ ಫೋನ್ ಚಾರ್ಜರ್, ರಿಯರ್ ವೆಂಟ್ ಗಳ ಜೊತೆಗೆ AC ಮತ್ತು ಕ್ರೂಸ್ ಕಂಟ್ರೋಲ್ ಅನ್ನು ನೀಡಿದೆ. ಸುರಕ್ಷತೆಯ ಪಟ್ಟಿಯಲ್ಲಿ 6 ಏರ್ ಬ್ಯಾಗ್ ಗಳು, ಹಿಲ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS) ಒಳಗೊಂಡಿದೆ.
ಗ್ರಾಂಡ್ i10 ವಾಹನವು 83 PS ಮತ್ತು 114 Nm ಉಂಟು ಮಾಡುವ ಹಾಗೂ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಟ್ರಾನ್ಸ್ ಮಿಶನ್ ಜೊತೆಗೆ ಹೊಂದಿಸಲಾದ 1.2-ಲೀಟರ್ ಪೆಟ್ರೊಲ್ ಎಂಜಿನ್ ನೊಂದಿಗೆ ಲಭ್ಯ. ಇದು ಅದೇ ಎಂಜಿನ್ ನೊಂದಿಗೆ CNG ಆಯ್ಕೆಯನ್ನು ಸಹ ಹೊಂದಿದ್ದು 69 PS ಮತ್ತು 95 Nm ನಷ್ಟು ಔಟ್ಪುಟ್ ಅನ್ನು ಹೊಂದಿದೆ ಮಾತ್ರವಲ್ಲದೆ ಇದನ್ನು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಜೊತೆಗೆ ಮಾತ್ರವೇ ಹೊಂದಿಸಲಾಗುತ್ತದೆ.
ಇದನ್ನು ಸಹ ನೋಡಿರಿ: ಹದಿಮೂರು! ಈ ವರ್ಷದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾದ ಅಧಿಕ ಕಾರ್ಯಕ್ಷಮತೆಯ ಕಾರುಗಳ ಸಂಖ್ಯೆ ಇದು
ಹ್ಯುಂಡೈ ಔರಾ
ಪರಿಷ್ಕೃತ ವಾಹನದ ಬಿಡುಗಡೆ: ಜನವರಿ 2023
ಬೆಲೆ ಶ್ರೇಣಿ: ರೂ. 6.44 ಲಕ್ಷದಿಂದ ರೂ. 9 ಲಕ್ಷ
ಗ್ರಾಂಡ್ i10 ನಿಯೋಸ್ ನ ಸೆಡಾನ್ ಆವೃತ್ತಿಯಾಗಿರುವ ಹ್ಯುಂಡೈ ಔರಾ ವಾಹನವು ಸಹ 2023ರ ಆರಂಭದಲ್ಲಿ ಪರಿಷ್ಕರಣೆಗೆ ಒಳಗಾಗಿದೆ. ಇದರ ಹ್ಯಾಚ್ ಬ್ಯಾಕ್ ಆವೃತ್ತಿಯಂತೆಯೇ ಔರಾವು ಪರಿಷ್ಕೃತ ಫೇಶಿಯಾ, ಹೊಸ LED DRLಗಳು ಮತ್ತು ಪರಿಷ್ಕೃತ ರಿಯರ್ ಬಂಪರ್ ಅನ್ನು ಹೊಂದಿದೆ. ಕ್ಯಾಬಿನ್ ವಿನ್ಯಾಸವು ಹೊಸ ಅಫೋಲ್ಸ್ಟರಿ ಮತ್ತು ಹೆಡ್ ರೆಸ್ಟ್ ನಲ್ಲಿ ʻಔರಾʼ ಬ್ಯಾಜ್ ಅನ್ನು ಪಡೆಯುವ ಜೊತೆಗೆ ತೀರಾ ಕಡಿಮೆ ಪ್ರಮಾಣದಲ್ಲಿ ಪರಿಷ್ಕರಣೆಗೆ ಒಳಗಾಗಿದೆ.
ಹ್ಯುಂಡೈಯ ಸಬ್ ಕಾಂಪ್ಯಾಕ್ಟ್ ಸೆಡಾನ್ ನಲ್ಲಿ ಆಂಡ್ರಾಯ್ಡ್ ಅಟೋ ಮತ್ತು ಆಪಲ್ ಕಾರ್ ಪ್ಲೇ ಜೊತೆಗೆ 8 ಇಂಚುಗಳ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, ವೈರ್ ಲೆಸ್ ಫೋನ್ ಚಾರ್ಜರ್, ಫೂಟ್ ವೆಲ್ ಲೈಟಿಂಗ್ ಅಟೋ AC, ಮತ್ತು ಕ್ರೂಸ್ ಕಂಟ್ರೋಲ್ ಇತ್ಯಾದಿ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಇದರ ಸುರಕ್ಷಾ ಪಟ್ಟಿಯಲ್ಲಿ 6 ಏರ್ ಬ್ಯಾಗ್ ಗಳು, ಹಿಲ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS) ಒಳಗೊಂಡಿದೆ.
ಔರಾ ವಾಹನವು 83 PS ಮತ್ತು 114 Nm ಉಂಟು ಮಾಡುವ ಹಾಗೂ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಟ್ರಾನ್ಸ್ ಮಿಶನ್ ಜೊತೆಗೆ ಹೊಂದಿಸಲಾದ 1.2-ಲೀಟರ್ ಪೆಟ್ರೊಲ್ ಎಂಜಿನ್ ನೊಂದಿಗೆ ಲಭ್ಯ. ಈ ಸಬ್ ಕಾಂಪ್ಯಾಕ್ಟ್ ಸೆಡಾನ್ ವಾಹನವು 69 PS ಮತ್ತು 95 Nm ನಷ್ಟು ಕಡಿಮೆ ಔಟ್ಪುಟ್ ನಲ್ಲಿ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಜೊತೆಗೆ ಹೊಂದಿಸಲಾದ CNG ಪವರ್ ಟ್ರೇನ್ ಆಯ್ಕೆಯೊಂದಿಗೆ ದೊರೆಯುತ್ತದೆ.
ಹೋಂಡಾ ಸಿಟಿ/ ಸಿಟಿ ಹೈಬ್ರೀಡ್
ಪರಿಷ್ಕೃತ ವಾಹನದ ಬಿಡುಗಡೆ: ಮಾರ್ಚ್ 2023
ಸಿಟಿ ಬೆಲೆ ಶ್ರೇಣಿ: ರೂ. 11.63 ಲಕ್ಷದಿಂದ ರೂ. 16.11 ಲಕ್ಷ
ಸಿಟಿ ಹೈಬ್ರೀಡ್ ಬೆಲೆ ಶ್ರೇಣಿ: ರೂ. 18.89 ಲಕ್ಷದಿಂದ ರೂ. 20.39 ಲಕ್ಷ
ಹೋಂಡಾ ಸಂಸ್ಥೆಯು ಐದನೇ ತಲೆಮಾರಿನ ಸಿಟಿ ಮತ್ತು ಸಿಟಿ ಹೈಬ್ರೀಡ್ ಗೆ 2023ರ ಮಾರ್ಚ್ ತಿಂಗಳಿನಲ್ಲಿ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿದೆ. ಈ ಕಾಂಪ್ಯಾಕ್ಟ್ ಸೆಡಾನ್ ವಿನ್ಯಾಸದಲ್ಲಿ ಒಂದಷ್ಟು ಬದಲಾವಣೆಗಳನ್ನು ಮತ್ತು ಒಳಗಡೆಗೆ ಹೊಸ ಅಫೋಲ್ಸ್ಟರಿಯನ್ನು ಕಂಡಿದೆ. ಸಿಟಿಯ ಮಾಮೂಲಿ ಪೆಟ್ರೋಲ್ ಆವೃತ್ತಿಯು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಮೂಲಕ ಪ್ರಮುಖ ವೈಶಿಷ್ಟ್ಯವೊಂದನ್ನು ತನ್ನದಾಗಿಸಿದೆ. ಈ ಪರಿಷ್ಕರಣೆಯ ಮೂಲಕ ಹೋಂಡಾ ಸಿಟಿಯ ಹೈಬ್ರೀಡ್ ಆವೃತ್ತಿಯು ಇನ್ನೊಂದು ಅಗ್ಗದ ಮಿಡ್ ಸ್ಪೆಕ್ V ವೇರಿಯಂಟ್ ಅನ್ನು ಸಹ ಪಡೆದಿದೆ.
2023 ಹೋಂಡಾ ಸಿಟಿಯು ಆಂಡ್ರಾಯ್ಡ್ ಅಟೋ ಮತ್ತು ಆಪಲ್ ಕಾರ್ ಪ್ಲೇ ಜೊತೆಗೆ 8 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, ಸಿಂಗಲ್ ಪೇನ್ ಸನ್ ರೂಫ್, ಸೆಮಿ ಡಿಜಿಟಲ್ ಇನ್ಸ್ ಟ್ರುಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟಿಂಗ್, ಸಂಪರ್ಕಿತ ಕಾರ್ ಟೆಕ್ ಮತ್ತು ರಿಯರ್ ಎಸಿ ವೆಂಟ್ ಗಳ ಜೊತೆಗೆ ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಇತ್ಯಾದಿಗಳೊಂದಿಗೆ ಬರುತ್ತದೆ. ಒಟ್ಟು 6 ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಮತ್ತು ರಿಯರ್ ಪಾರ್ಕಿಂಗ್ ಕ್ಯಾಮರಾದ ಜೊತೆಗೆ ಇದರ ಸುರಕ್ಷತೆಗೆ ಒತ್ತು ನೀಡಲಾಗಿದೆ.
ಜಪಾನ್ ಮೂಲದ ಈ ಕಾಂಪ್ಯಾಕ್ಟ್ ಸೆಡಾನ್ ವಾಹನವು 2 ಪವರ್ ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ: 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಅಥವಾ CVT ಜೊತೆಗೆ ಹೊಂದಿಸಲಾದ a 1.5-ಲೀಟರ್ ಪೆಟ್ರೋಲ್ (121 PS / 145 Nm), ಮತ್ತು 126 PS ಮತ್ತು 253 Nm ನಷ್ಟು ಸಂಯೋಜಿತ ಔಟ್ಪುಟ್ ಅನ್ನು ಹೊಂದಿರುವ 1.5 ಲೀಟರ್ ಪೆಟ್ರೋಲ್-ಹೈಬ್ರೀಡ್ ಪವರ್ ಟ್ರೇನ್. ಹೋಂಡಾ ಸಿಟಿ ಹೈಬ್ರೀಡ್ ಅನ್ನು ಇ-CVT ಗೇರ್ ಬಾಕ್ಸ್ ಜೊತೆಗೆ ಮಾತ್ರವೇ ಪಡೆಯಬಹುದು.
ಇದನ್ನು ಸಹ ನೋಡಿರಿ: 2023ರಲ್ಲಿ 12 ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಾಕ್ಷಿಯಾದ ಭಾರತೀಯ ಕಾರು ಉದ್ಯಮ
ಕಿಯಾ ಸೆಲ್ಟೋಸ್
ಪರಿಷ್ಕೃತ ವಾಹನದ ಬಿಡುಗಡೆ: ಜುಲೈ 2023
ಬೆಲೆ ಶ್ರೇಣಿ: ರೂ. 10.90 ಲಕ್ಷದಿಂದ ರೂ. 20.30 ಲಕ್ಷ
ಕಿಯಾ ಸೆಲ್ಟೋಸ್ ವಾಹನವು ಮೊದಲ ಬಾರಿಗೆ 2023ರ ಮಧ್ಯದಲ್ಲಿ ಪರಿಷ್ಕರಣೆಗೆ ಒಳಗಾಗಿದ್ದು, ಇದು ಹೊಸ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ತನ್ನದಾಗಿಸಿದೆ ಮಾತ್ರವಲ್ಲದೆ ಹೊಸ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ಪಡೆದಿದೆ. ವಿನ್ಯಾಸದ ವಿಚಾರದಲ್ಲಿ ಹೇಳುವುದಾದರೆ, ಪರಿಷ್ಕೃತ ಸೆಲ್ಟೋಸ್ ವಾಹನವು ದೊಡ್ಡದಾದ ಗ್ರಿಲ್, ಸಂಪೂರ್ಣ ಹೊಸ ಹೆಡ್ ಲೈಟ್ ಸೆಟಪ್, ಪರಿಷ್ಕೃತ ಬಂಪರ್ ಮತ್ತು ಕ್ಯಾಬಿನ್ ಅನ್ನು ಇದರಲ್ಲಿ ಕಾಣಬಹುದು.
ಹೊಸ ಸೆಲ್ಟೋಸ್ ವಾಹನವು 10.24 ಇಂಚುಗಳ ಎರಡು ಡಿಸ್ಪ್ಲೇಗಳು (ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಮತ್ತು ಚಾಲಕನ ಡಿಜಿಟಲ್ ಡಿಸ್ಪ್ಲೇ), ಡ್ಯುವಲ್ ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಪ್ಯಾನೊರಾಮಿಕ್ ಸನ್ ರೂಫ್ ಜೊತೆಗೆ ಬರುತ್ತಿದೆ. ಇದರ ಸುರಕ್ಷತಾ ಪಟ್ಟಿಯಲ್ಲಿ 6 ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS), 360 ಡಿಗ್ರಿ ಕ್ಯಾಮರಾ, ಮತ್ತು ಫ್ರಂಟ್ ಕೊಲಿಷನ್ ವಾರ್ನಿಂಗ್, ಲೇನ್ ಕೀಪ್ ಅಸಿಸ್ಟ್, ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಒಳಗೊಂಡಿರುವ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಇತ್ಯಾದಿಗಳನ್ನು ನೋಡಬಹುದು.
ಕಿಯಾ ಸೆಲ್ಟೋಸ್ ಕಾರು ಈಗಲೂ ಸಹ 3 ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: 6 ಸ್ಪೀಡ್ ಮ್ಯಾನುವಲ್ ಅಥವಾ CVT ಗೇರ್ ಬಾಕ್ಸ್ ಜೊತೆಗೆ ಹೊಂದಿಸಲಾದ 1.5 ಲೀಟರ್ ಪೆಟ್ರೋಲ್ (115 PS / 144 Nm), 6 ಸ್ಪೀಡ್ ಅಟೋಮ್ಯಾಟಿಕ್ ಅಥವಾ 6 ಸ್ಪೀಡ್ iMT ಜೊತೆಗೆ ಹೊಂದಿಸಲಾದ 1.5 ಲೀಟರ್ ಡೀಸೆಲ್ (116 PS / 250 Nm), ಮತ್ತು 6 ಸ್ಪೀಡ್ iMT ಅಥವಾ 7 ಸ್ಪೀಡ್ DCT ಗೇರ್ ಬಾಕ್ಸ್ ಜೊತೆಗೆ ಹೊಂದಿಸಲಾದ 1.5 ಲೀಟರ್ ಟರ್ಬೊ ಪೆಟ್ರೋಲ್ (160 PS / 253 Nm).
ಟಾಟಾ ನೆಕ್ಸನ್
ಪರಿಷ್ಕೃತ ವಾಹನದ ಬಿಡುಗಡೆ: ಸೆಪ್ಟೆಂಬರ್ 2023
ಬೆಲೆ ಶ್ರೇಣಿ: ರೂ. 8.10 ಲಕ್ಷದಿಂದ ರೂ. 15.50 ಲಕ್ಷ
ಬಿಡುಗಡೆಯಾದ ನಂತರ ಮೊದಲ ಬಾರಿಗೆ ಟಾಟಾ ನೆಕ್ಸನ್ ಕಾರು ಗಮನಾರ್ಹ ಮಟ್ಟದಲ್ಲಿ ಪರಿಷ್ಕರಣೆಗೆ ಒಳಗಾಗಿದೆ. ಟಾಟಾದ ಈ ಪರಿಷ್ಕೃತ ಸಬ್ ಕಾಂಪ್ಯಾಕ್ಟ್ SUV ಯು ಮುಂಭಾಗ ಮತ್ತು ಹಿಂಭಾಗದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದು, ಸಂಪೂರ್ಣ ಹೊಸ ಲೈಟಿಂಗ್ ವ್ಯವಸ್ಥೆ, ಹೊಸ ಅಲೋಯ್ ವೀಲ್ ಗಳು, ಮತ್ತು ಅನೇಕ ವೈಶಿಷ್ಟ್ಯಗಳೊಂದಿಗೆ ಸಂಪೂರ್ಣ ಹೊಸ ಕ್ಯಾಬಿನ್ ಅನ್ನು ಪಡೆದಿದೆ. ಇದು ಹಿಂದಿನ ಎಂಜಿನ್ ಆಯ್ಕೆಗಳನ್ನೇ ಹೊಂದಿದ್ದು, ಟಾಟಾ ಸಂಸ್ಥೆಯು ಈ ಪರಿಷ್ಕೃತ ನೆಕ್ಸನ್ ನಲ್ಲಿ ಎರಡು ಹೊಸ ಟ್ರಾನ್ಸ್ ಮಿಶನ್ ಆಯ್ಕೆಗಳನ್ನು ಪರಿಚಯಿಸಿದೆ.
2023 ನೆಕ್ಸನ್ ನಲ್ಲಿ ವೈರ್ ಲೆಸ್ ಆಂಡ್ರಾಯ್ಡ್ ಅಟೋ ಮತ್ತು ಆಪಲ್ ಕಾರ್ ಪ್ಲೇ ಜೊತೆಗೆ 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, 10.25 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, ಪ್ಯಾಡಲ್ ಶಿಫ್ಟರ್ ಗಳು ಮತ್ತು ಟಚ್ ಎನೇಬಲ್ಡ್ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ನೀಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಇದು 6 ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS), ಹಿಲ್ ಹೋಲ್ಡ್ ಅಸಿಸ್ಟ್, ಮತ್ತು ಬ್ಲೈಂಡ್ ವ್ಯೂ ಮಾನಿಟರ್ ಜೊತೆಗೆ 360 ಡಿಗ್ರಿ ಕ್ಯಾಮರಾವನ್ನು ಹೊಂದಿದೆ.
ಟಾಟಾ ನೆಕ್ಸನ್ ವಾಹನವು ಈಗಲೂ ಸಹ 2 ಎಂಜಿನ್ ಆಯ್ಕೆಗಳೊಂದಿಗೆ ಹೊರಬರುತ್ತಿದೆ: 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (120 PS/ 170 Nm) ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ (115 PS/ 260 Nm). ಎರಡೂ ಎಂಜಿನ್ ಗಳು 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಜೊತೆಗೆ ಬರುತ್ತಿವೆ. ಆದರೆ ಮೊದಲನೆಯದ್ದು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಮತ್ತು 7 ಸ್ಪೀಡ್ ಡ್ಯುವಲ್ ಕ್ಲಚ್ ಟ್ರಾನ್ಸ್ ಮಿಶನ್ ಅನ್ನು ಪಡೆದರೆ, ಎರಡನೆಯದ್ದು ಐಚ್ಛಿಕ 6 ಸ್ಪೀಡ್ AMT ಜೊತೆಗೆ ಬರುತ್ತದೆ.
ಇದನ್ನು ಸಹ ನೋಡಿರಿ: ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 7 ಟಾಟಾ ಕಾರುಗಳು ಇಲ್ಲಿವೆ
ಟಾಟಾ ನೆಕ್ಸನ್ EV
ಪರಿಷ್ಕೃತ ವಾಹನದ ಬಿಡುಗಡೆ: ಸೆಪ್ಟೆಂಬರ್ 2023
ಬೆಲೆ ಶ್ರೇಣಿ: ರೂ. 14.74 ಲಕ್ಷದಿಂದ ರೂ. 19.94 ಲಕ್ಷ
ಟಾಟಾ ನೆಕ್ಸನ್ ಜೊತೆಗೆ ಇದರ ಎಲೆಕ್ಟ್ರಾನಿಕ್ ಸಂಗಾತಿಯಾದ ನೆಕ್ಸನ್ EV ಸಹ ಮಧ್ಯಂತರ ಅವಧಿಯ ಪರಿಷ್ಕರಣೆಗೆ ಒಳಗಾಗಿದ್ದು ಇದು ಒಳಗಡೆ ಮತ್ತು ಹೊರಗಡೆಗೆ ಹೊಸ ವಿನ್ಯಾಸ ಮತ್ತು ಪರಿಷ್ಕೃತ ಬ್ಯಾಟರಿ ಪ್ಯಾಕ್ ಮತ್ತು ಶ್ರೇಣಿಯನ್ನು ಹೊಂದಿದೆ. ಈ ಹಿಂದೆ ಇದು ನೆಕ್ಸನ್ EV ಪ್ರೈಂ ಮತ್ತು ನೆಕ್ಸನ್ EV ಮ್ಯಾಕ್ಸ್ ಎಂಬ 2 ಆವೃತ್ತಿಗಳಲ್ಲಿ ಮಾರಾಟವಾಗುತ್ತಿತ್ತು. ಆದರೆ ಈಗ ಇದು ಒಂದೇ ಮಾದರಿ ಮತ್ತು 2 ಬ್ಯಾಟರಿ ಪ್ಯಾಕ್ ಗಳೊಂದಿಗೆ ಹೊರಬರುತ್ತಿದೆ.
ಹೊಸ ಟಾಟಾ ನೆಕ್ಸನ್ EVಯ ವೈಶಿಷ್ಟ್ಯಗಳಲ್ಲಿ 12.3 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, 10.25 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, 9-ಸ್ಪೀಕರ್ JBL ಸೌಂಡ್ ಸಿಸ್ಟಂ, ಅಟೋಮ್ಯಾಟಿಕ್ AC, ಕ್ರೂಸ್ ಕಂಟ್ರೋಲ್l, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು, ವೈರ್ ಲೆಸ್ ಫೋನ್ ಚಾರ್ಜಿಂಗ್, ಮತ್ತು ಸಿಂಗಲ್ ಪೇನ್ ಸನ್ ರೂಫ್ ಇತ್ಯಾದಿಗಳು ಒಳಗೊಂಡಿವೆ. ಸುರಕ್ಷತೆಯ ದೃಷ್ಟಿಯಿಂದ ಇದು 6 ಏರ್ ಬ್ಯಾಗ್ ಗಳು, 360 ಡಿಗ್ರಿ ಕ್ಯಾಮರಾ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಇತ್ಯಾದಿಗಳನ್ನು ಹೊಂದಿದೆ.
ನೆಕ್ಸನ್ ನ ಎಲೆಕ್ಟ್ರಿಕ್ ಆವೃತ್ತಿಯು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ: 129 PS/215 Nm ಉಂಟು ಮಾಡುವ ಎಲೆಕ್ಟ್ರಿಕ್ ಮೋಟಾರ್ ಜೊತೆಗೆ ಹೊಂದಿಸಲಾದ ಮತ್ತು 325 km ಶ್ರೇಣಿಯನ್ನು ನೀಡುತ್ತದೆ ಎನ್ನಲಾದ 30 kWh, ಮತ್ತು 144 PS/215 Nm ಉಂಟು ಮಾಡುವ ಎಲೆಕ್ಟ್ರಿಕ್ ಮೋಟಾರ್ ಜೊತೆಗೆ ಹೊಂದಿಸಲಾದ ಮತ್ತು 465 km ಶ್ರೇಣಿಯನ್ನು ನೀಡುತ್ತದೆ ಎನ್ನಲಾದ 40.5kWh.
ಹ್ಯುಂಡೈ i20 ಮತ್ತು i20 N ಲೈನ್
ಪರಿಷ್ಕೃತ ವಾಹನದ ಬಿಡುಗಡೆ: ಸೆಪ್ಟೆಂಬರ್ 2023
i20 ಬೆಲೆ ಶ್ರೇಣಿ: ರೂ. 6.99 ಲಕ್ಷದಿಂದ ರೂ. 11.16 ಲಕ್ಷ
i20 N ಲೈನ್ ಬೆಲೆ ಶ್ರೇಣಿ: ರೂ. 9.99 ಲಕ್ಷದಿಂದ ರೂ. 12.47 ಲಕ್ಷ
ಮಾರ್ಪಾಡಿಗೆ ಒಳಪಟ್ಟ ಶೈಲಿ, ಪರಿಷ್ಕರಣೆಯನ್ನು ಕಂಡ ಪವರ್ ಟ್ರೇನ್ ಮತ್ತು ಟ್ರಾನ್ಸ್ ಮಿಶನ್ ಆಯ್ಕೆಗಳು ಮತ್ತು ಕೆಲವೊಂದು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಹ್ಯುಂಡೈ i20 ಮತ್ತು i20 N ಲೈನ್ ಕಾರುಗಳು ಹೊಸತನದೊಂದಿಗೆ ರಸ್ತೆಗಿಳಿದಿವೆ. ಹೊಸ ಕಲರ್ ಥೀಮ್ ಹೊರತುಪಡಿಸಿದರೆ, ಈ ಹ್ಯಾಚ್ ಬ್ಯಾಕ್ ಗಳ ಒಳಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
ಎರಡೂ ಹ್ಯಾಚ್ ಬ್ಯಾಕ್ ಗಳು 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, 7 ಸ್ಪೀಕರ್ ಬೋಸ್ ಸೌಂಡ್ ಸಿಸ್ಟಂ, ಚಾಲಕನ ಸೆಮಿ ಡಿಜಿಟಲ್ ಡಿಸ್ಪ್ಲೇ, ವೈರ್ ಲೆಸ್ ಫೋನ್ ಚಾರ್ಜರ್, ಮತ್ತು ಏರ್ ಪ್ಯೂರಿಫೈರ್ ಇತ್ಯಾದಿ ವೈಶಿಷ್ಟ್ಯಗಳನ್ನು ಪಡೆದಿವೆ. ಒಟ್ಟು 6 ಏರ್ ಬ್ಯಾಗ್ ಗಳು, ಹಿಲ್ ಅಸಿಸ್ಟ್ ಕಂಟ್ರೋಲ್, ಡೇ-ನೈಟ್ IRVM, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್, ಮತ್ತು ಎಲ್ಲಾ ಪ್ರಯಾಣಿಕರಿಗಾಗಿ ಪ್ರಮಾಣಿತ 3 ಪಾಯಿಂಟ್ ಸೀಟ್ ಬೆಲ್ಟ್ ಗಳು ಇತ್ಯಾದಿಗಳ ಮೂಲಕ ಸುರಕ್ಷತೆಗೆ ಗಮನ ನೀಡಲಾಗಿದೆ.
ಪರಿಷ್ಕರಣೆಯ ನಂತರ ಮಾಮೂಲಿ i20 ವಾಹನವು 88 PS ಮತ್ತು 115 Nm ಉಂಟು ಮಾಡುವ ಹಾಗೂ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಅಥವಾ CVT ಗೇರ್ ಬಾಕ್ಸ್ ಜೊತೆಗೆ ಹೊಂದಿಸಲಾದ 1.2-ಲೀಟರ್ ಪೆಟ್ರೊಲ್ ಎಂಜಿನ್ ನೊಂದಿಗೆ ಲಭ್ಯ. N ಲೈನ್ ವೇರಿಯಂಟ್ ಗಳು 120 PS ಮತ್ತು 172 Nm ಉಂಟು ಮಾಡುವ ಹಾಗೂ 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ DCT (ಡ್ಯುವಲ್ ಕ್ಲಚ್ ಟ್ರಾನ್ಸ್ ಮಿಶನ್) ಜೊತೆಗೆ ಹೊಂದಿಸಲಾದ 1-ಲೀಟರ್ ಪೆಟ್ರೊಲ್ ಎಂಜಿನ್ ನೊಂದಿಗೆ ಲಭ್ಯ.
ಟಾಟಾ ಹ್ಯಾರಿಯರ್
ಪರಿಷ್ಕೃತ ವಾಹನದ ಬಿಡುಗಡೆ: ಅಕ್ಟೋಬರ್ 2023
ಬೆಲೆ ಶ್ರೇಣಿ: ರೂ. 15.49 ಲಕ್ಷದಿಂದ ರೂ. 26.44 ಲಕ್ಷ
ಟಾಟಾ ಹ್ಯಾರಿಯರ್ ವಾಹನವು ಹೊಸ ನೆಕ್ಸನ್ ಬಿಡುಗಡೆಯಾದ ನಂತರ, ಕೆಲವು ತಿಂಗಳ ಹಿಂದೆಯಷ್ಟೇ ತನ್ನ ಮೊದಲ ಪ್ರಮುಖ ಪರಿಷ್ಕರಣೆಯನ್ನು ಕಂಡಿದೆ. ಹ್ಯಾರಿಯರ್ ಸಂಸ್ಥೆಯು ಹೊಸ ಫೇಶಿಯಾ, ಮುಂಭಾಗ ಮತ್ತು ಹಿಂಭಾಗದಲ್ಲಿ LED ಎಲಿಮೆಂಟ್ ಗಳು, ಹೊಸ ಅಲೋಯ್ ವೀಲ್ ಗಳು, ಪರಿಷ್ಕೃತ ಡ್ಯಾಶ್ ಬೋರ್ಡ್ ಮತ್ತು ಹೊಸ ವೈಶಿಷ್ಟ್ಯಗಳನ್ನು ಪಡೆದಿದೆ.
ಟಾಟಾ ಸಂಸ್ಥೆಯು ಹ್ಯಾರಿಯರ್ ನಲ್ಲಿ ವೈರ್ ಲೆಸ್ ಆಂಡ್ರಾಯ್ಡ್ ಅಟೋ ಮತ್ತು ಆಪಲ್ ಕಾರ್ ಪ್ಲೇ ಜೊತೆಗೆ 12.3 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್, 10.25 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, ಟಚ್ ಬೇಸ್ಡ್ AC ಪ್ಯಾನೆಲ್ ಜೊತೆಗೆ ಡ್ಯುವಲ್ ಝೋನ್ ಕ್ಲೈಮೇಟ್ ಕಂಟ್ರೋಲ್, 10-ಸ್ಪೀಕರ್ JBL ಸೌಂಡ್ ಸಿಸ್ಟಂ, ಮತ್ತು ಪವರ್ಡ್ ಟೇಲ್ ಗೇಟ್ ಅನ್ನು ನೀಡಿದೆ. ಸುರಕ್ಷತೆಯನ್ನು ಖಾತರಿಪಡಿಸುವುದಕ್ಕಾಗಿ 7 ಏರ್ ಬ್ಯಾಗ್ ಗಳು, 360 ಡಿಗ್ರಿ ಕ್ಯಾಮರಾ, ಮತ್ತು ಲೇನ್ ಡಿಪಾರ್ಚರ್ ವಾರ್ನಿಂಗ್, ಅಟೋ ಎಮರ್ಜೆನ್ಸಿ ಬ್ರೇಕಿಂಗ್, ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಜೊತೆಗೆ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಇತ್ಯಾದಿಗಳನ್ನು ಇದರಲ್ಲಿ ನೀಡಲಾಗಿದೆ.
ಟಾಟಾ ಸಂಸ್ಥೆಯ ಮಿಡ್ ಸೈಜ್ SUVಯನ್ನು 170 PS ಮತ್ತು 350 Nm ಉಂಟು ಮಾಡುವ ಹಾಗೂ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಜೊತೆಗೆ ಹೊಂದಿಸಲಾದ 2-ಲೀಟರ್ ಡೀಸೆಲ್ ಎಂಜಿನ್ ನಲ್ಲಿಯೇ ಹೊರತರಲಾಗುತ್ತಿದೆ.
ಟಾಟಾ ಸಫಾರಿ
ಪರಿಷ್ಕೃತ ವಾಹನದ ಬಿಡುಗಡೆ: ಅಕ್ಟೋಬರ್ 2023
ಬೆಲೆ ಶ್ರೇಣಿ: ರೂ. 16.19 ಲಕ್ಷದಿಂದ ರೂ. 27.34 ಲಕ್ಷ
ಟಾಟಾ ಸಫಾರಿಯು 5 ಸೀಟುಗಳ ತನ್ನ ದಾಯಾದಿ ಎನಿಸಿರುವ ಹ್ಯಾರಿಯರ್ ಜೊತೆಗೆ ಪರಿಷ್ಕರಣೆಗೆ ಒಳಗಾಯಿತು. ಟಾಟಾ ಹ್ಯಾರಿಯರ್ ನಲ್ಲಿ ಮಾಡಲಾದ ಬದಲಾವಣೆಗಳನ್ನೇ ಇದರಲ್ಲೂ ಮಾಡಲಾಗಿದೆ.
ಹೊಸ ಸಫಾರಿಯಲ್ಲಿ ವೈರ್ ಲೆಸ್ ಆಂಡ್ರಾಯ್ಡ್ ಅಟೋ ಮತ್ತು ಆಪಲ್ ಕಾರ್ ಪ್ಲೇ ಜೊತೆಗೆ 12.3 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, 10.25 ಇಂಚಿನ ಚಾಲಕನ ಡಿಜಿಟಲ್ ಡಿಸ್ಪ್ಲೇ, 10 ಸ್ಪೀಕರ್ JBL ಸಿಸ್ಟಂ ಮತ್ತು ವೈರ್ ಲೆಸ್ ಫೋನ್ ಚಾರ್ಜಿಂಗ್ ಅನ್ನು ನೀಡಲಾಗಿದೆ. ಇದರ ಸುರಕ್ಷಾ ಪಟ್ಟಿಯಲ್ಲಿ 7 ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಅಸಿಸ್ಟ್, 360 ಡಿಗ್ರಿ ಕ್ಯಾಮರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS), ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಇತ್ಯಾದಿಗಳು ಒಳಗೊಂಡಿವೆ.
ಈ ಸಫಾರಿಯನ್ನು 170 PS ಮತ್ತು 350 Nm ಉಂಟು ಮಾಡುವ ಹಾಗೂ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಜೊತೆಗೆ ಹೊಂದಿಸಲಾದ 2-ಲೀಟರ್ ಡೀಸೆಲ್ ಎಂಜಿನ್ ನಲ್ಲಿಯೇ ಹೊರತರಲಾಗುತ್ತಿದೆ.
ಇವು 2023ರಲ್ಲಿ ಬಿಡುಗಡೆಯಾದ ಪ್ರಮುಖ ಪರಿಷ್ಕೃತ ವಾಹನಗಳಾಗಿದ್ದು, ಕೆಲವು ಮಾದರಿಗಳು ತುಸು ಹೆಚ್ಚಿನ ಮಾರ್ಪಾಡಿಗೆ ಒಳಗಾಗಿವೆ. ಯಾವ ಪರಿಷ್ಕೃತ ಮಾದರಿಯನ್ನು ನೀವು ಅತೀ ಹೆಚ್ಚು ಇಷ್ಟಪಟ್ಟಿದ್ದೀರಿ? ನಿಮ್ಮ ಪ್ರತಿಕ್ರಿಯೆಗಳನ್ನು ಈ ಕೆಳಗೆ ಹಂಚಿಕೊಳ್ಳಿರಿ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಹೆಕ್ಟರ್ ಆನ್ ರೋಡ್ ಬೆಲೆ
0 out of 0 found this helpful