Login or Register ಅತ್ಯುತ್ತಮ CarDekho experience ಗೆ
Login

ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ BMW 3 ಸಿರೀಸ್ Gran Limousine M Sport Pro ಎಡಿಷನ್‌ ಬಿಡುಗಡೆ

modified on ಸೆಪ್ಟೆಂಬರ್ 06, 2024 12:27 pm by shreyash for ಬಿಎಂಡವೋ 3 ಸರಣಿ

3 ಸಿರೀಸ್ ಗ್ರ್ಯಾನ್ ಲಿಮೋಸಿನ್ ಎಮ್‌ ಸ್ಪೋರ್ಟ್ ಪ್ರೊ ಆವೃತ್ತಿಯ ಡೀಸೆಲ್ 193 ಪಿಎಸ್‌ 2-ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಬಳಸುತ್ತದೆ, ಅದು 7.6 ಸೆಕೆಂಡುಗಳಲ್ಲಿ 100 kmph ಗೆ ಹೋಗಬಹುದು

  • ಸೆಡಾನ್‌ನ ಡೀಸೆಲ್ ಆವೃತ್ತಿಯು ಅದರ ಪೆಟ್ರೋಲ್ ಪ್ರತಿರೂಪಕ್ಕಿಂತ 2.4 ಲಕ್ಷ ರೂ.ನಷ್ಟು ಹೆಚ್ಚು ದುಬಾರಿಯಾಗಿದೆ.

  • ಡೀಸೆಲ್ ಆವೃತ್ತಿಯಲ್ಲಿ, ಇದು 193 ಪಿಎಸ್‌ ಮತ್ತು 400 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ ಮತ್ತು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.

  • 3 ಸಿರೀಸ್‌ನ ಗ್ರ್ಯಾನ್ ಲಿಮೋಸಿನ್ ಎಂ ಸ್ಪೋರ್ಟ್ ಪ್ರೊ ಆವೃತ್ತಿಯ ಡೀಸೆಲ್ ಆವೃತ್ತಿಗೆ ಯಾವುದೇ ವಿನ್ಯಾಸ ಬದಲಾವಣೆಗಳನ್ನು ಮಾಡಲಾಗಿಲ್ಲ.

  • ಫೀಚರ್‌ ಹೈಲೈಟ್ಸ್‌ಗಳು ಬಾಗಿದ ಡ್ಯುಯಲ್ ಸ್ಕ್ರೀನ್‌ಗಳು, 3-ಜೋನ್‌ ಎಸಿ ಮತ್ತು ಪನರೋಮಿಕ್‌ ಸನ್‌ರೂಫ್ ಅನ್ನು ಒಳಗೊಂಡಿವೆ.

  • ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು, ಪಾರ್ಕ್ ಅಸಿಸ್ಟ್ ಮತ್ತು ಲೆವೆಲ್ 2 ADAS ಫೀಚರ್‌ಗಳಿಂದ ನೋಡಿಕೊಳ್ಳಲಾಗುತ್ತದೆ.

  • ಭಾರತದಾದ್ಯಂತ 3 ಸಿರೀಸ್‌ನ ಗ್ರ್ಯಾನ್ ಲಿಮೋಸಿನ್ ಬೆಲೆಗಳು 60.60 ಲಕ್ಷ ರೂ.ನಿಂದ 65 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ) ಇದೆ.

2024ರ ಮೇ ತಿಂಗಳಿನಲ್ಲಿ, ನಾವು ಭಾರತದಲ್ಲಿ BMW 3 ಸಿರೀಸ್‌ನ ಗ್ರ್ಯಾನ್ ಲಿಮೋಸಿನ್ ಸೆಡಾನ್‌ನ ಹೊಸ ರೇಂಜ್‌ನ-ಟಾಪ್ ವೇರಿಯಂಟ್ ನ ಬಿಡುಗಡೆಗೆಯನ್ನು ಸ್ವಾಗತಿಸಿದ್ದೇವು, ಇದನ್ನು 'ಎಮ್‌ ಸ್ಪೋರ್ಟ್ ಪ್ರೊ' ಎಡಿಷನ್‌ ಎಂದು ಕರೆಯಲಾಗುತ್ತದೆ. 3 ಸಿರೀಸ್‌ನ ಗ್ರ್ಯಾನ್ ಲಿಮೋಸಿನ್‌ನ ಈ ಹೊಸ ಟ್ರಿಮ್ ಪೆಟ್ರೋಲ್ ಆವೃತ್ತಿಗೆ ಮಾತ್ರ ಸೀಮಿತವಾಗಿತ್ತು, ಆದರೆ ಜರ್ಮನ್ ವಾಹನ ತಯಾರಕರು ಈಗ ಭಾರತದಲ್ಲಿ ಡೀಸೆಲ್ ರೂಪದಲ್ಲಿ ಸೆಡಾನ್‌ನ M ಸ್ಪೋರ್ಟ್ ಪ್ರೊ ಎಡಿಷನ್‌ನ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ನಾವು ವಿವರಗಳನ್ನು ಪಡೆಯುವ ಮೊದಲು, ಸೆಡಾನ್‌ನ ಈ ರೇಂಜ್‌ನ-ಟಾಪ್ ವೇರಿಯಂಟ್‌ನ ಬೆಲೆಗಳನ್ನು ನೋಡೋಣ.

ಬೆಲೆಗಳು

ಎಂ ಸ್ಪೋರ್ಟ್ ಪ್ರೊ ಎಡಿಷನ್‌ ಪೆಟ್ರೋಲ್

62.60 ಲಕ್ಷ ರೂ

ಎಂ ಸ್ಪೋರ್ಟ್ ಪ್ರೊ ಎಡಿಷನ್‌ ಡೀಸೆಲ್

65 ಲಕ್ಷ ರೂ

ಎಲ್ಲಾ ಬೆಲೆಗಳು ಎಕ್ಸ್ ಶೋರೂಂ

ಡೀಸೆಲ್‌ನಲ್ಲಿ, 3 ಸಿರೀಸ್ ಗ್ರ್ಯಾನ್ ಲಿಮೋಸಿನ್‌ನ ಎಂ ಸ್ಪೋರ್ಟ್ ಪ್ರೊ ಎಡಿಷನ್‌ನ ಆವೃತ್ತಿಯು ಅದರ ಪೆಟ್ರೋಲ್ ಪ್ರತಿರೂಪಕ್ಕಿಂತ 2.4 ಲಕ್ಷ ರೂಪಾಯಿಯಷ್ಟು ಹೆಚ್ಚು ದುಬಾರಿಯಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ಲಭ್ಯ

ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್

2-ಲೀಟರ್ 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್

2-ಲೀಟರ್ 4 ಸಿಲಿಂಡರ್ ಡೀಸೆಲ್

ಪವರ್‌

258 ಪಿಎಸ್

193 ಪಿಎಸ್

ಟಾರ್ಕ್

400 ಎನ್ಎಂ

400 ಎನ್ಎಂ

ಟ್ರಾನ್ಸ್‌ಮಿಷನ್‌

8-ಸ್ಪೀಡ್‌ ಆಟೋಮ್ಯಾಟಿಕ್‌

8-ಸ್ಪೀಡ್‌ ಆಟೋಮ್ಯಾಟಿಕ್‌

ವೇಗವರ್ಧನೆ 0-100 kmph

6.2 ಸೆಕೆಂಡುಗಳು

7.6 ಸೆಕೆಂಡುಗಳು

3 ಸಿರೀಸ್ ಗ್ರ್ಯಾನ್ ಲಿಮೋಸಿನ್ ಎಮ್‌ ಸ್ಪೋರ್ಟ್ ಪ್ರೊ ಎಡಿಷನ್‌ ಆವೃತ್ತಿಯೊಂದಿಗೆ ನೀಡಲಾದ ಪೆಟ್ರೋಲ್ ಎಂಜಿನ್ ಡೀಸೆಲ್‌ಗಿಂತ 65 ಪಿಎಸ್‌ ಹೆಚ್ಚು ಶಕ್ತಿಶಾಲಿಯಾಗಿದೆ, ಟಾರ್ಕ್ ಉತ್ಪಾದನೆಯು ಎರಡೂ ಎಂಜಿನ್‌ಗಳಿಗೆ ಒಂದೇ ಆಗಿರುತ್ತದೆ. ಆದಾಗ್ಯೂ, ಪೆಟ್ರೋಲ್ ಎಂಜಿನ್ 0-100 kmph ನಲ್ಲಿ ಡೀಸೆಲ್ ಆವೃತ್ತಿಗಿಂತ 1.4 ಸೆಕೆಂಡುಗಳಷ್ಟು ವೇಗವಾಗಿರುತ್ತದೆ, ಇದು ಪವರ್‌ ಪ್ರಯೋಜನದಿಂದಾಗಿ.

ಇದನ್ನು ಸಹ ಓದಿ: 2.25 ಕೋಟಿ ರೂ. ಬೆಲೆಯ Mercedes-Maybach EQS 680 ಎಲೆಕ್ಟ್ರಿಕ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಒಳಗೆ ಮತ್ತು ಹೊರಗೆ ಒಂದೇ ಸಾಮ್ಯತೆ

ಬಿಎಮ್‌ಡಬ್ಲ್ಯೂ 3 ಸಿರೀಸ್‌ನ ಗ್ರ್ಯಾನ್ ಲಿಮೋಸಿನ್ ಎಮ್‌ ಸ್ಪೋರ್ಟ್ ಪ್ರೊ ಎಡಿಷನ್‌ನ ಡೀಸೆಲ್ ಆವೃತ್ತಿಯ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಸೆಡಾನ್‌ನ ಈ ಆವೃತ್ತಿಯ ಹೊರಭಾಗದ ಹೈಲೈಟ್ಸ್‌ಗಳು ಸಂಪೂರ್ಣ ಕಪ್ಪಾದ ಗ್ರಿಲ್, M ಶಾಡೋಲೈನ್ ಎಫೆಕ್ಟ್‌ನೊಂದಿಗೆ ಅಡಾಪ್ಟಿವ್ ಎಲ್‌ಇಡಿ ಹೆಡ್‌ಲೈಟ್‌ಗಳು, ಇದು ಹೆಡ್‌ಲೈಟ್‌ಗಳ ಮೇಲೆ ಡಾರ್ಕ್‌ ಆದ ಟಿಂಟ್‌ ಆನ್ನು ನೀಡುತ್ತದೆ ಮತ್ತು ಹೊಳೆಯುವ ಕಪ್ಪು ಹಿಂಭಾಗದ ಡಿಫ್ಯೂಸರ್ ಅನ್ನು ಒಳಗೊಂಡಿದೆ.

ಸೆಡಾನ್‌ನ ಎಮ್‌ ಸ್ಪೋರ್ಟ್ ಪ್ರೊ ಎಡಿಷನ್‌ನ ಆವೃತ್ತಿಯು ಬ್ಲ್ಯಾಕ್ಡ್-ಔಟ್ ಹೆಡ್‌ಲೈನರ್ ಅನ್ನು ಪಡೆಯುತ್ತದೆಯಾದರೂ, ಒಳಗೆ ಇದು ರೆಗುಲರ್‌ ಆವೃತ್ತಿಗಳಂತೆಯೇ ಕಾಣುತ್ತದೆ.

ಫೀಚರ್‌ಗಳು ಮತ್ತು ಸುರಕ್ಷತೆ

3 ಸಿರೀಸ್‌ನ ಗ್ರ್ಯಾನ್ ಲಿಮೋಸಿನ್ ಎಮ್‌ ಸ್ಪೋರ್ಟ್ ಪ್ರೊ ಆವೃತ್ತಿಯು ಇಂಟಿಗ್ರೇಟೆಡ್ ಕರ್ವ್ ಡಿಸ್‌ಪ್ಲೇಗಳು (12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 14.9-ಇಂಚಿನ ಟಚ್‌ಸ್ಕ್ರೀನ್), 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, 3-ಝೋನ್ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪನರೋಮಿಕ್‌ ಸನ್‌ರೂಫ್ ಮುಂತಾದ ಫೀಚರ್‌ಗಳನ್ನು ಹೊಂದಿದೆ.

ಇದರ ಸುರಕ್ಷತಾ ಫೀಚರ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್‌ಸಿ), ಪಾರ್ಕ್ ಅಸಿಸ್ಟ್, ಮತ್ತು ಡ್ರೈವರ್ ಅಟೆನ್ಟಿವ್‌ನೆಸ್ ಅಲರ್ಟ್ ಮತ್ತು ಲೇನ್ ಚೇಂಜ್ ಅಸಿಸ್ಟ್ ಸೇರಿದಂತೆ ಕೆಲವು ಹಂತದ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ಎಡಿಎಎಸ್) ಫೀಚರ್‌ಗಳು ಸೇರಿವೆ.

ಬೆಲೆ ರೇಂಜ್‌ ಮತ್ತು ಪ್ರತಿಸ್ಪರ್ಧಿಗಳು

ಬಿಎಮ್‌ಡಬ್ಲ್ಯೂ 3 ಸಿರೀಸ್ ಗ್ರ್ಯಾನ್ ಲಿಮೋಸಿನ್ ಬೆಲೆ 60.60 ಲಕ್ಷ ಮತ್ತು 65 ಲಕ್ಷ ರೂ.ಗಳ (ಎಕ್ಸ್ ಶೋ ರೂಂ ಪ್ಯಾನ್ ಇಂಡಿಯಾ) ನಡುವೆ ಇದೆ. ಇದು ಭಾರತದಲ್ಲಿ ಮರ್ಸಿಡೀಸ್‌ ಬೆಂಝ್‌ ಸಿ ಕ್ಲಾಸ್ ಮತ್ತು ಆಡಿ ಎ4 ಗೆ ಪ್ರತಿಸ್ಪರ್ಧಿಯಾಗಿದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಬಿಎಮ್‌ಡಬ್ಲ್ಯೂ 3 ಸೀರಿಸ್‌ ಆಟೋಮ್ಯಾಟಿಕ್‌

s
ಅವರಿಂದ ಪ್ರಕಟಿಸಲಾಗಿದೆ

shreyash

  • 44 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on BMW 3 ಸರಣಿ

Read Full News

Enable notifications to stay updated with exclusive offers, car news, and more from CarDekho!

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ