ADAS ಹೊಂದಿರುವ ನವೀಕೃತ ಟಾಟಾ ಹ್ಯಾರಿಯರ್ ಮತ್ತು ಸಫಾರಿಯ ಬುಕಿಂಗ್‌ಗಳು ಓಪನ್
ಟಾಟಾ ಹ್ಯಾರಿಯರ್ 2019-2023 ಗಾಗಿ sonny ಮೂಲಕ ಫೆಬ್ರವಾರಿ 17, 2023 07:45 pm ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಇದರ ನವೀಕೃತ ಫೀಚರ್, ದೊಡ್ಡದಾದ ಹೊಸ ಇನ್‌ಫೊಟೈನ್‌ಮೆಂಟ್ ಟಚ್‌ಸ್ಕ್ರೀನ್ ಅನ್ನು ಒಳಗೊಂಡಿದೆ.
- ಈ ಹ್ಯಾರಿಯರ್ ಮತ್ತು ಸಫಾರಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಫೀಚರ್ ನವೀಕರಣವನ್ನು ಹೊಂದಿವೆ.
- ಆಟೋ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಸಹಿತ ಫೀಚರ್‌ಗಳ ಪಟ್ಟಿಯನ್ನು ಹೊಸ ADAS ಫೀಚರ್ ಟೆಕ್ ಒಳಗೊಂಡಿದೆ.
- ಹೊಸ 10.25-ಇಂಚಿನ ಇನ್‌ಫೊಟೈನ್‌ಮೆಂಟ್ ಟಚ್‌ಸ್ಕ್ರೀನ್ ಮತ್ತು ಅಧಿಕ ಗುಣಮಟ್ಟದ ಏಳು ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ.
- ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೆರಡರೊಂದಿಗೂ ನೀಡಲಾಗುವ 2-ಲೀಟರ್ ಡಿಸೇಲ್ ಇಂಜಿನ್ ಹಾಗೇ ಮುಂದುವರಿಯಲಿದೆ.
- ಎರಡೂ ನವೀಕೃತ ಎಸ್‌ಯುವಿಗಳ ಬೆಲೆಯನ್ನು ಮಾರ್ಚ್‌ನಲ್ಲಿ ಘೋಷಿಸಬಹುದೆಂದು ನಿರೀಕ್ಷಿಸಲಾಗಿದೆ.
ಈ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳು 2023 ಕ್ಕೆ ಹೆಚ್ಚಿನ ಫೀಚರ್‌ಗಳೊಂದಿಗೆ ನವೀಕರಿಸಲ್ಪಟ್ಟಿದ್ದು ಇವುಗಳಲ್ಲಿ ಹೆಚ್ಚಿನವು ಆಟೋ ಎಕ್ಸ್‌ಪೋ 2023 ರಲ್ಲಿ ಪ್ರದರ್ಶನಗೊಂಡಿವೆ. ಬಿಡುಗಡೆಯ ದಿನಾಂಕವನ್ನು ಇನ್ನೂ ದೃಢೀಕರಿಸದಿದ್ದರೂ, ಈ ನವೀಕೃತ ಎಸ್‌ಯುವಿಗಳ ಬುಕಿಂಗ್‌ಗಳು ಈಗ ರೂ. 30,000 ಟೋಕನ್ ಮೊತ್ತಕ್ಕೆ ತೆರೆಯಲ್ಪಟ್ಟಿವೆ.
ಸಂಬಂಧಿತ: ಆಟೋ ಎಕ್ಸ್‌ಪೋ 2023 ರಲ್ಲಿ ಪ್ರಥಮ ಬಾರಿ ಪ್ರದರ್ಶಿಸಲ್ಪಟ್ಟ ಟಾಟಾ ಹ್ಯಾರಿಯರ್ ಮತ್ತು ಸಫಾರಿಯ 5 ಹೊಸ ಫೀಚರ್‌ಗಳು
ಟಾಟಾ ಎಸ್‌ಯುವಿಗಳಲ್ಲಿ ಹೊಸದೇನಿದೆ?
2023 ರಲ್ಲಿ ಹ್ಯಾರಿಯರ್ ಮತ್ತು ಸಫಾರಿಯ ಅತಿ ದೊಡ್ಡ ಬದಲಾವಣೆಯೆಂದರೆ ಇದಕ್ಕೆ ಹೊಸದಾಗಿ ADAS ಸೇರ್ಪಡೆಯಾಗಿದ್ದು ಫೀಚರ್‌ನ ಪಟ್ಟಿಯು ಫಾರ್ವರ್ಡ್ ಕಲಿಷನ್ ವಾರ್ನಿಂಗ್, ಆಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಡಿಪಾರ್ಚರ್ ವಾರ್ನಿಂಗ್, ಹೈ ಬೀಮ್ ಅಸಿಸ್ಟ್, ರಿಯರ್ ಕಲಿಷನ್ ವಾರ್ನಿಂಗ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಟ್ರಾಫಿಕ್ ಸೈನ್ ರೆಕಗ್ನಿಷನ್ ಅನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಮತ್ತೊಂದು ಸುಧಾರಣೆಯೆಂದರೆ 360-ಡಿಗ್ರಿ ಸರೌಂಡ್ ವ್ಯೂ ಕ್ಯಾಮರಾ.
ಈ ಮಧ್ಯಮ-ಗಾತ್ರದ ಎಸ್‌ಯುವಿಗಳ ಹೆಚ್ಚುವರಿ ಫೀಚರ್‌ಗಳೆಂದರೆ ಹಳೆಯ 8.8-ಇಂಚಿನ ಯೂನಿಟ್ ಬದಲಿಸಿ ಹೊಸ 10.25-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಸಿಸ್ಟಮ್ ಮತ್ತು ನವೀಕೃತ ಏಳು-ಇಂಚಿನ ಡಿಜಿಟಲ್ TFT ಡ್ರೈವರ್ ಡಿಸ್‌ಪ್ಲೇ ಅನ್ನು ಅಳವಡಿಸಲಾಗಿದೆ. ಈ ಹೊಸ ಸ್ಕ್ರೀನ್‌ಗಳು ಈಗಾಗಲೇ ಹ್ಯಾರಿಯರ್ ಮತ್ತು ಸಫಾರಿಯ ಕ್ಯಾಬಿನ್ ಅನ್ನು ನವೀಕೃತಗೊಳಿಸಿವೆ. ಏತನ್ಮಧ್ಯೆ, ವಿಶೇಷ ಆವೃತ್ತಿಯ ವೇರಿಯೆಂಟ್‌ಗಳು ಈಗಾಗಲೇ ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್‌ಪ್ಲೇ, ವೈರ್‌ಲೆಸ್ ಚಾರ್ಜಿಂಗ್ ಮತ್ತು ಡಿಸ್ಕ್ ಬ್ರೇಕ್‌ಗಳಂತಹ ಸೌಕರ್ಯಗಳನ್ನು ಪರಿಚಯಿಸಿವೆ.
ಪರಿಚಿತ ಪವರ್‌ಟ್ರೇನ್‌ಗಳು
ಈ ಟಾಪ್ ಟಾಟಾ ಎಸ್‌ಯುವಿಗಳು 170PS ಮತ್ತು 350Nm ನೀಡುವ 2-ಲೀಟರ್ ಡಿಸೇಲ್ ಇಂಜಿನ್ ಅನ್ನು ಹೊಂದಿದ್ದು, ಸದ್ಯಕ್ಕೆ ಡಿಸೇಲ್-ಮಾತ್ರ ಆಯ್ಕೆಯನ್ನು ಒಳಗೊಂಡಿದೆ. ಇದು ಮೊದಲಿನಂತೆಯೇ ಸಿಕ್ಸ್-ಸ್ಪೀಡ್ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳ ಆಯ್ಕೆಯನ್ನು ನೀಡುತ್ತಿದೆ. ಆದಾಗ್ಯೂ, ಇತ್ತೀಚಿನ ಎಮಿಷನ್ ಮತ್ತು RDE ಮಾನದಂಡಗಳನ್ನು ಪೂರೈಸಲು ಇಂಜಿನ್ ಅನ್ನು ನವೀಕರಿಸಲಾಗುತ್ತಿದ್ದು E20 ಫ್ಲೆಕ್ಸ್ ಇಂಧನಕ್ಕೆ ಅನುಗುಣವಾಗಿರಬಹುದು.
ಡಿಸೈನ್ ಬದಲಾವಣೆ ಬಾಕಿಯಿದೆ
ಈ ಹ್ಯಾರಿಯರ್ ಮತ್ತು ಸಫಾರಿಯು 2023 ನವೀಕೃತ ಟೆಕ್ ಮತ್ತು ಫೀಚರ್‌ಗಳನ್ನು ಪಡೆದಿದ್ದರೂ, ಹೊಸ ನೋಟವನ್ನು ಇವು ಹೊಂದಿಲ್ಲ. ಅದನ್ನು 2024 ರಲ್ಲಿ ಬಿಡುಗಡೆಯಾಗುವ ಅಧಿಕ ನಿರೀಕ್ಷೆಯನ್ನು ಹೊಂದಿರುವ ಹೆಚ್ಚು ಮಹತ್ವದ ನವೀಕರಣಕ್ಕಾಗಿ ಕಾಯ್ದಿರಿಸಲಾಗಿದೆ, ಮತ್ತು ಹೊಸ ಫ್ರಂಟ್ ಹಾಗೂ ರಿಯರ್ ಡಿಸೈನ್ ಅನ್ನು ಆಟೋ ಎಕ್ಸ್‌ಪೋ 2023ರಲ್ಲಿ ಪ್ರದರ್ಶಿಸಲಾದ ಟಾಟಾ ಹ್ಯಾರಿಯರ್ ಇವಿ ಕಾನ್ಸೆಪ್ಟ್‌ನಲ್ಲಿ ಪೂರ್ವವೀಕ್ಷಣೆ ಮಾಡಲಾಗಿದೆ ಎಂದು ನಾವು ಊಹಿಸುತ್ತೇವೆ.
ನಿರೀಕ್ಷಿತ ಬಿಡುಗಡೆ ಮತ್ತು ಬೆಲೆಗಳು
ಈ ನವೀಕೃತ ಟಾಟಾ ಎಸ್‌ಯುವಿಗಳು ಮಾರ್ಚ್‌ನಲ್ಲಿ ಮಾರುಕಟ್ಟೆಯನ್ನು ತಲುಪುವ ನಿರೀಕ್ಷೆಯಿದೆ, ಪ್ರಸ್ತುತ ಬೆಲೆಗಳಿಗಿಂತ ಪ್ರೀಮಿಯಂ ಅನ್ನು ಸೇರಿಸಲಾಗುತ್ತದೆ, ವಿಶೇಷವಾಗಿ ಟಾಪ್ ಎಂಡ್ ಕಾರುಗಳಿಗೆ ಇದು ಅನ್ವಯಿಸುತ್ತದೆ. ಈ ಹ್ಯಾರಿಯರ್ ಪ್ರಸ್ತುತ ರೂ. 15 ಲಕ್ಷದಿಂದ ರೂ.22 ಲಕ್ಷ ರೇಂಜ್ ಬೆಲೆಯನ್ನು ಹೊಂದಿದ್ದರೆ, ಸಫಾರಿಯ ಬೆಲೆಯು ರೂ. 15.65 ಲಕ್ಷ ಮತ್ತು ರೂ.24.01 ಲಕ್ಷಗಳ ನಡುವೆ ಇದೆ. (ಎರಡೂ ಎಕ್ಸ್-ಶೋರೂಮ್, ದೆಹಲಿ)
ಇನ್ನೂ ಹೆಚ್ಚಿನದನ್ನು ಇಲ್ಲಿ ಓದಿ : ಟಾಟಾ ಹ್ಯಾರಿಯರ್ ಡಿಸೇಲ್