• English
  • Login / Register

ಹೋಂಡಾ ಎಲಿವೇಟ್‌ಗೆ ಬುಕ್ಕಿಂಗ್‌ಗಳು ಪ್ರಾರಂಭವಾಗಿದ್ದು, ವೇರಿಯೆಂಟ್ ಶ್ರೇಣಿಗಳು ಬಹಿರಂಗ

ಹೊಂಡಾ ಇಲೆವಟ್ ಗಾಗಿ rohit ಮೂಲಕ ಜುಲೈ 04, 2023 05:02 pm ರಂದು ಪ್ರಕಟಿಸಲಾಗಿದೆ

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

 ಹೋಂಡಾ ಎಲಿವೇಟ್ ಅನ್ನು ಆನ್‌ಲೈನ್ ಮತ್ತು ಕಾರುತಯಾರಕರ ಡೀಲರ್‌ಶಿಪ್‌ಗಳಲ್ಲಿ ರೂ. 5000 ಕ್ಕೆ ಕಾಯ್ದಿರಿಸಬಹುದಾಗಿದೆ

Honda Elevate

  •  ಹೋಂಡಾ ಈ ಎಸ್‌ಯುವಿಯನ್ನು SV, V, VX ಮತ್ತು ZX ಎಂಬ ನಾಲ್ಕು ವಿಶಾಲ ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ.

  •  ಇದು ಜಾಗತಿಕ ಮಾಡೆಲ್ ಆಗಿದ್ದು, ಭಾರತವು ಎಲಿವೇಟ್ ಎಸ್‌ಯುವಿಯನ್ನು ಪಡೆಯುತ್ತಿರುವ ಮೊದಲ ಮಾರುಕಟ್ಟೆಯಾಗಿದೆ.

  •  ಈ ಎಸ್‌ಯುವಿಯು 10.25-ಇಂಚಿನ ಟಚ್‌ಸ್ಕ್ರೀನ್, ಸಿಂಗಲ್-ಪೇನ್ ಸನ್‌ರೂಫ್ ಮತ್ತು ADAS ಅನ್ನು ಪಡೆಯುತ್ತದೆ.

  • ಇದನ್ನು ಸಿಟಿಯ 1.5-ಲೀಟರ್ (121PS/145Nm) ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುತ್ತಿದ್ದು, ಇದರ ಇವಿ ಆವೃತ್ತಿಯು 2026 ರಲ್ಲಿ ಬರಲಿದೆ.

  •  ಬೆಲೆಯು ರೂ.11 ಲಕ್ಷದಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗಬಹುದು.

 ಹೋಂಡಾ ಎಲಿವೇಟ್‌ನ ಬುಕ್ಕಿಂಗ್‌ಗಳನ್ನು ಈಗ ಆನ್‌ಲೈನ್ ಮತ್ತು ಹೋಂಡಾ ಡೀಲರ್‌ಶಿಪ್‌ಗಳಲ್ಲಿ ರೂ. 5,000 ಗಳಿಗೆ ತೆರೆಯಲಾಗಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಸೆಪ್ಟೆಂಬರ್ 2023 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಜಪಾನಿನ ಕಾರುತಯಾರಕರು ತಿಳಿಸಿದ್ದು ಅದರ ವೇರಿಯೆಂಟ್ ಶ್ರೇಣಿಯನ್ನು ಬಿಡುಗಡೆಗೊಳಿಸಿದ್ದಾರೆ.

 ಇಲ್ಲಿಯವರೆಗೆ ಹೋಂಡಾ ಎಸ್‌ಯುವಿ ಬಗ್ಗೆ ನಮಗೆ ತಿಳಿದಿರುವ ವಿಷಯಗಳು ಇಲ್ಲಿವೆ:

 ಶುದ್ಧ ವಿನ್ಯಾಸ

Honda Elevate

Honda Elevate side

 ಈ ಹೋಂಡಾ ಎಸ್‌ಯುವಿಯು ನೂತನ ಮತ್ತು ಆಧುನಿಕ ವಿನ್ಯಾಸವನ್ನು ಪಡೆಯುತ್ತದೆ ಮತ್ತು ಎಕ್ಸ್‌ಟೀರಿಯರ್‌ನಲ್ಲಿ ದೊಡ್ಡ ಗ್ರಿಲ್, ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳು, 17-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳು, ಮತ್ತು ಗಟ್ಟಿಮುಟ್ಟಾದ ಬಾಡಿ ಕ್ಲಾಡಿಂಗ್ ಅನ್ನು ಹೊಂದಿದೆ. ಇದರಲ್ಲಿ ನಿರ್ದಿಷ್ಟ ವಿಶೇಷತೆಗಳನ್ನು ಗುರುತಿಸಲಾಗದಿದ್ದರೂ, ಇದರ ವಿನ್ಯಾಸವು ಈ ವಿಭಾಗದಲ್ಲಿಯೇ ಪ್ರಬುದ್ಧ ಮತ್ತು ವಿಶಿಷ್ಟವಾಗಿದೆ.

ಸಂಬಂಧಿತ: ಈ 10 ಚಿತ್ರಗಳಲ್ಲಿ ಹೋಂಡಾ ಎಲಿವೇಟ್‌ನ ಎಕ್ಸ್‌ಟೀರಿಯರ್ ಪರಿಶೀಲಿಸಿ 

ಕ್ಯಾಬಿನ್ ಮತ್ತು ಸಲಕರಣಾ ವಿವರಗಳು

 ಎಲಿವೇಟ್‌ನೊಂದಿಗೆ, ಇದರ ಕಾರುತಯಾರಕರು ಇಂಟೀರಿಯರ್ ಅನ್ನು ಸಿಟಿಗಿಂತ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈ ಎಸ್‌ಯುವಿಯ ಕ್ಯಾಬಿನ್ ಕಪ್ಪು ಮತ್ತು ಕಂದು ಬಣ್ಣದ ಥೀಮ್ ಅನ್ನು ಹೊಂದಿದ್ದು, ಇದರಲ್ಲಿನ ಲೆದರ್ ಮೇಲ್ಗವಸು ಪ್ರೀಮಿಯಂ ನೋಟವನ್ನು ನೀಡುತ್ತದೆ.

Honda Elevate cabin

ಹೋಂಡಾ ಈ ಎಸ್‌ಯುವಿಯನ್ನು10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಕನೆಕ್ಟಿವಿಟಿ, ಸಿಂಗಲ್-ಪೇನ್ ಸನ್‌ರೂಫ್, 7-ಇಂಚಿನ ಸೆಮಿ-ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್, ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನೊಂದಿಗೆ ಸಜ್ಜುಗೊಳಿಸಿದೆ. ಇದರ ಸುರಕ್ಷತಾ ಕಿಟ್ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS), 360-ಡಿಗ್ರಿ ಕ್ಯಾಮರಾ, ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ.

 ಕೇವಲ-ಪೆಟ್ರೋಲ್ ಆಯ್ಕೆ

ಈ ಎಲಿವೇಟ್ ಕೇವಲ ಸಿಟಿಯ 1.5-ಲೀಟರ್ ನೈಸರ್ಗಿಕ ಆ್ಯಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (121PS/145Nm) ನೊಂದಿಗೆ ಬರುತ್ತದೆ. ಇದು 6-ಸ್ಪೀಡ್ ಮ್ಯಾನ್ಯುವಲ್ ಅಥವಾ CVT ಆಟೋಮ್ಯಾಟಿಕ್‌ನೊಂದಿಗೆ ಜೊತೆಯಾಗಿದೆ. ಅನಾವರಣದ ಸ್ವಲ್ಪ ಸಮಯದ ನಂತರ ದೃಢೀಕರಿಸಿದಂತೆ, ಎಲಿವೇಟ್ ಹೈಬ್ರಿಡ್ ಆಯ್ಕೆಯನ್ನು ಬಿಡುತ್ತದೆ ಮತ್ತು 2026 ರಲ್ಲಿ ಬಿಡುಗಡೆಗೊಳಿಸಲು ಯೋಜಿಸಲಾದ ಇವಿ ಆವೃತ್ತಿಯನ್ನು ಪಡೆಯುತ್ತದೆ.

ಇದನ್ನೂ ಓದಿ: ಜುಲೈ 2023 ರಲ್ಲಿ ಎಲಿವೇಟ್ ಬುಕ್ಕಿಂಗ್‌ಗಳನ್ನು ತೆರೆಯುವುದರೊಂದಿಗೆ ಭಾರತದಲ್ಲಿ ಎಸ್‌ಯುವಿಗಳು/ಇ-ಎಸ್‌ಯುವಿಗಳ ಕುರಿತು ಬಾಜಿ ಕಟ್ಟಿದ ಹೋಂಡಾ

 ಬಿಡುಗಡೆ ಮತ್ತು ಬೆಲೆ

 ಹೋಂಡಾ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಎಲಿವೇಟ್ ಅನ್ನು ಬಿಡುಗಡೆ ಮಾಡಲಿದ್ದು ರೂ. 11 ಲಕ್ಷದಿಂದ (ಎಕ್ಸ್-ಶೋರೂಮ್) ಬೆಲೆಯನ್ನು ನಿಗದಿಪಡಿಸುವ ಸಾಧ್ಯತೆಯಿದೆ. ಇದು SV, V, VX ಮತ್ತು ZX ಎಂಬ ನಾಲ್ಕು ವಿಶಾಲ ಟ್ರಿಮ್‌ಗಳನ್ನು ಹೊಂದಲಿದೆ.

Honda Elevate rear

ಈ ಕಾಂಪ್ಯಾಕ್ಟ್ ಎಸ್‌ಯುವಿಯು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಎಂಜಿ ಆಸ್ಟರ್, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಮುಂಬರುವ ಸಿಟ್ರಾನ್ C3 ಏರ್‌ಕ್ರಾಸ್‌ಗೆ ಪ್ರತಿಸ್ಪರ್ಧಿಯಾಗಲಿದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Honda ಇಲೆವಟ್

1 ಕಾಮೆಂಟ್
1
S
seshachalam
Jul 3, 2023, 4:28:41 PM

Eagerly wa . Eagerly waiting

Read More...
    ಪ್ರತ್ಯುತ್ತರ
    Write a Reply
    Read Full News

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience