ಈ ಜೂನ್ನಲ್ ಲಿ 15 ಲಕ್ಷ ರೂ. ಒಳಗಿನ MPVಯನ್ನು ಖರೀದಿಸುತ್ತೀರಾ? ನೀವು 5 ತಿಂಗಳವರೆಗೆ ಕಾಯಬೇಕಾಗಬಹುದು..!
ಮಾರುತಿ ಎರ್ಟಿಗಾ ಗಾಗಿ samarth ಮೂಲಕ ಜೂನ್ 11, 2024 06:13 pm ರಂದು ಪ್ರಕಟಿಸಲಾಗಿದೆ
- 34 Views
- ಕಾಮೆಂಟ್ ಅನ್ನು ಬರೆಯಿರಿ
ಮಾರುತಿಯ 6-ಆಸನಗಳ ಎಮ್‌ಪಿವಿ ಎಕ್ಸ್‌ಎಲ್6 ಎರ್ಟಿಗಾಗಿಂತ ಬೇಗನೆ ಲಭ್ಯವಿರುತ್ತದೆ, ಇದು ದೀರ್ಘಾವಧಿಯ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ. ಹಾಗೆಯೇ, ಟ್ರೈಬರ್ ಹೆಚ್ಚಿನ ನಗರಗಳಲ್ಲಿ ಸುಲಭವಾಗಿ ಲಭ್ಯವಿರುತ್ತದೆ
ನೀವು ಬಜೆಟ್‌ನಲ್ಲಿ ಫ್ಯಾಮಿಲಿ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ MPV ಗಳು ನಿಮ್ಮ ಆಯ್ಕೆಯಾಗಿರಬಹುದು. ಮಾರುತಿ ಎರ್ಟಿಗಾ, ಕಿಯಾ ಕ್ಯಾರೆನ್ಸ್, ಟೊಯೊಟಾ ರೂಮಿಯಾನ್, ರೆನಾಲ್ಟ್ ಟ್ರೈಬರ್ ಮತ್ತು ಮಾರುತಿ ಎಕ್ಸ್‌ಎಲ್6 ನಂತಹ 15 ಲಕ್ಷದೊಳಗೆ ಎಮ್‌ಪಿವಿಗಳ ವಿವಿಧ ಆಯ್ಕೆಗಳಿವೆ. ಈ ಜೂನ್‌ನಲ್ಲಿ ನೀವು ಅವುಗಳಲ್ಲಿ ಯಾವುದನ್ನಾದರೂ ಖರೀದಿಸಲು ಯೋಜಿಸುತ್ತಿದ್ದರೆ, ಒಂದನ್ನು ಮನೆಗೆ ತೆಗೆದುಕೊಳ್ಳಲು ನೀವು ಎಷ್ಟು ಸಮಯ ಕಾಯಬೇಕಾಗುತ್ತದೆ ಎಂಬುವುದನ್ನು ಕೆಳಗೆ ತಿಳಿಸಲಾಗಿದೆ:
ನಗರ |
ಮಾರುತಿ ಎರ್ಟಿಗಾ |
ಮಾರುತಿ ಎಕ್ಸ್‌ಎಲ್ 6 |
ಕಿಯಾ ಕ್ಯಾರೆನ್ಸ್ |
ಟೊಯೋಟಾ ರೂಮಿಯಾನ್ |
ರೆನಾಲ್ಟ್ ಟ್ರೈಬರ್ |
ನವದೆಹಲಿ |
4.5-5 ತಿಂಗಳುಗಳು |
1 ತಿಂಗಳು |
3 ತಿಂಗಳುಗಳು |
3-4 ತಿಂಗಳುಗಳು |
0.5 ತಿಂಗಳು |
ಬೆಂಗಳೂರು |
1-2 ತಿಂಗಳುಗಳು |
1 week |
2 ತಿಂಗಳುಗಳು |
1 ತಿಂಗಳು |
0.5 ತಿಂಗಳು |
ಮುಂಬೈ |
1-2 ತಿಂಗಳುಗಳು |
1-1.5 ತಿಂಗಳುಗಳು |
1 ತಿಂಗಳು |
2 ತಿಂಗಳುಗಳು |
1 ತಿಂಗಳು |
ಹೈದರಾಬಾದ್ |
1-2 ತಿಂಗಳುಗಳು |
1 ತಿಂಗಳು |
1-2 ತಿಂಗಳುಗಳು |
1-2 ತಿಂಗಳುಗಳು |
1 ತಿಂಗಳು |
ಪುಣೆ |
1-2 ತಿಂಗಳುಗಳು |
1-1.5 ತಿಂಗಳುಗಳು |
3 ತಿಂಗಳುಗಳು |
3-4 ತಿಂಗಳುಗಳು |
1 ತಿಂಗಳು |
ಚೆನ್ನೈ |
1-2 ತಿಂಗಳುಗಳು |
1-2 ತಿಂಗಳುಗಳು |
1 ತಿಂಗಳು |
3 ತಿಂಗಳುಗಳು |
ಕಾಯಬೇಕಾಗಿಲ್ಲ |
ಜೈಪುರ |
1.5-2 ತಿಂಗಳುಗಳು |
1 ತಿಂಗಳು |
1-2 ತಿಂಗಳುಗಳು |
1 ತಿಂಗಳು |
ಕಾಯಬೇಕಾಗಿಲ್ಲ |
ಅಹಮದಾಬಾದ್ |
2 ತಿಂಗಳುಗಳು |
ಕಾಯಬೇಕಾಗಿಲ್ಲ |
1-2 ತಿಂಗಳುಗಳು |
1-2 ತಿಂಗಳುಗಳು |
1-2 ತಿಂಗಳುಗಳು |
ಗುರುಗ್ರಾಮ್ |
1-2 ತಿಂಗಳುಗಳು |
1 ತಿಂಗಳು |
1 ತಿಂಗಳು |
1-2 ತಿಂಗಳುಗಳು |
1 ತಿಂಗಳು |
ಲಕ್ನೋ |
2 ತಿಂಗಳುಗಳು |
1 ತಿಂಗಳು |
3 ತಿಂಗಳುಗಳು |
2 ತಿಂಗಳುಗಳು |
0.5 ತಿಂಗಳು |
ಕೋಲ್ಕತ್ತಾ |
1-2 ತಿಂಗಳುಗಳು |
1-1.5 ತಿಂಗಳುಗಳು |
ಕಾಯಬೇಕಾಗಿಲ್ಲ |
3-4 ತಿಂಗಳುಗಳು |
1 ತಿಂಗಳು |
ಥಾಣೆ |
1-2 ತಿಂಗಳುಗಳು |
1-1.5 ತಿಂಗಳುಗಳು |
1 ತಿಂಗಳು |
3 ತಿಂಗಳುಗಳು |
ಕಾಯಬೇಕಾಗಿಲ್ಲ |
ಸೂರತ್ |
2.5 ತಿಂಗಳುಗಳು |
ಕಾಯಬೇಕಾಗಿಲ್ಲ |
1 ತಿಂಗಳು |
3 ತಿಂಗಳುಗಳು |
ಕಾಯಬೇಕಾಗಿಲ್ಲ |
ಗಾಜಿಯಾಬಾದ್ |
2 ತಿಂಗಳುಗಳು |
1-1.5 ತಿಂಗಳುಗಳು |
2 ತಿಂಗಳುಗಳು |
2 ತಿಂಗಳುಗಳು |
0.5 ತಿಂಗಳು |
ಚಂಡೀಗಢ |
2.5 ತಿಂಗಳುಗಳು |
1-1.5 ತಿಂಗಳುಗಳು |
2 ತಿಂಗಳುಗಳು |
3 ತಿಂಗಳುಗಳು |
1 ತಿಂಗಳು |
ಕೊಯಮತ್ತೂರು |
1.5-2 ತಿಂಗಳುಗಳು |
1-2 ತಿಂಗಳುಗಳು |
2 ತಿಂಗಳುಗಳು |
4 ತಿಂಗಳುಗಳು |
1 ತಿಂಗಳು |
ಪಾಟ್ನಾ |
1-2 ತಿಂಗಳುಗಳು |
1-1.5 ತಿಂಗಳುಗಳು |
2 ತಿಂಗಳುಗಳು |
1 ತಿಂಗಳು |
0.5 ತಿಂಗಳು |
ಫರಿದಾಬಾದ್ |
2 ತಿಂಗಳುಗಳು |
1-2 ತಿಂಗಳುಗಳು |
1-2 ತಿಂಗಳುಗಳು |
4 ತಿಂಗಳುಗಳು |
1 ತಿಂಗಳು |
ಇಂದೋರ್ |
1-2 ತಿಂಗಳುಗಳು |
1 ತಿಂಗಳು |
1 ತಿಂಗಳು |
3-5 ತಿಂಗಳುಗಳು |
0.5 ತಿಂಗಳು |
ನೋಯ್ಡಾ |
1 ತಿಂಗಳು |
1 ತಿಂಗಳು |
0.5 ತಿಂಗಳು |
2 ತಿಂಗಳುಗಳು |
1 ತಿಂಗಳು |
ಇದನ್ನೂ ಸಹ ಪರಿಶೀಲಿಸಿ: Maruti Nexaದ ಜೂನ್ ಆಫರ್‌ಗಳು- ರೂ 74,000 ವರೆಗೆ ಬರೋಬ್ಬರಿ ರಿಯಾಯಿತಿ ಪಡೆಯುವ ಅವಕಾಶ
ಗಮನಿಸಿದ ಪ್ರಮುಖ ಅಂಶಗಳು
-
ಮಾರುತಿ ಎರ್ಟಿಗಾ ಸರಾಸರಿ 2 ತಿಂಗಳವರೆಗೆ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ, ಆದರೆ ನವದೆಹಲಿಯಲ್ಲಿ ಇದು 5 ತಿಂಗಳವರೆಗೆ ಹೆಚ್ಚಾಗುತ್ತದೆ.
-
6-ಸೀಟರ್ ಎಮ್‌ಪಿವಿಯಾದ ಮಾರುತಿ ಎಕ್ಸ್‌ಎಲ್6, ಹೆಚ್ಚಿನ ನಗರಗಳಲ್ಲಿ 1 ತಿಂಗಳೊಳಗೆ ಲಭ್ಯವಿದೆ. ಸೂರತ್ ಮತ್ತು ಅಹಮದಾಬಾದ್‌ನಲ್ಲಿ, XL6 ನಲ್ಲಿ ಯಾವುದೇ ರೀತಿ ಕಾಯಬೇಕಾಗಿಲ್ಲ.
-
ಟೊಯೊಟಾ ರುಮಿಯಾನ್ ಎರ್ಟಿಗಾಗಿಂತ ಹೆಚ್ಚು ಸರಾಸರಿ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ, ನವದೆಹಲಿ, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಕೊಯಮತ್ತೂರು ಮತ್ತು ಇಂದೋರ್‌ನಲ್ಲಿ 3-4 ತಿಂಗಳವರೆಗೆ ಕಾಯಬೇಕಾಗುತ್ತದೆ. ಬೆಂಗಳೂರು, ಪಾಟ್ನಾ ಮತ್ತು ಜೈಪುರದ ಖರೀದಿದಾರರು ತಮ್ಮ ಹೊಸ ಎಮ್‌ಪಿವಿಯನ್ನು ಕೇವಲ ಒಂದು ತಿಂಗಳಲ್ಲಿ ಮನೆಗೆ ತೆಗೆದುಕೊಂಡು ಹೋಗಬಹುದು.
-
ರೆನಾಲ್ಟ್ ಟ್ರೈಬರ್ ಹೆಚ್ಚಿನ ನಗರಗಳಲ್ಲಿ 1 ತಿಂಗಳೊಳಗೆ ಲಭ್ಯವಿದೆ. ಚೆನ್ನೈ, ಜೈಪುರ, ಸೂರತ್ ಮತ್ತು ಗಾಜಿಯಾಬಾದ್‌ನಲ್ಲಿ ನೀವು ಯಾವುದೇ ರೀತಿ ಕಾಯದೆ ರೆನಾಲ್ಟ್‌ನ ಈ ಎಮ್‌ಪಿವಿಯನ್ನು ಮನೆಗೆ ಕೊಂಡೊಯ್ಯಬಹುದು.
ನೀವು ನವದೆಹಲಿ, ಪುಣೆ ಮತ್ತು ಲಕ್ನೋದವರಾಗಿದ್ದರೆ ಹೊಸ ಕಿಯಾ ಕ್ಯಾರೆನ್ಸ್ ಅನ್ನು ಪಡೆಯಲು ಗರಿಷ್ಠ ಮೂರು ತಿಂಗಳವರೆಗೆ ಕಾಯಬೇಕಾಗುತ್ತದೆ. ಮುಂಬೈ, ಚೆನ್ನೈ, ಗುರುಗ್ರಾಮ್, ಥಾಣೆ, ಸೂರತ್ ಮತ್ತು ಇಂದೋರ್‌ನಂತಹ ನಗರಗಳ ಖರೀದಿದಾರರಿಗೆ ಒಂದು ತಿಂಗಳ ವೈಟಿಂಗ್ ಪಿರೇಡ್‌ನಲ್ಲಿ ಕಾರನ್ನು ಮನೆ ಕಡೆಗೆ ಸಾಗಿಸಬಹುದು.
ಹೊಸ ಕಾರಿಗೆ ನಿಖರವಾದ ವೈಟಿಂಗ್ ಪಿರೇಡ್ ಆಯ್ಕೆಯ ಆವೃತ್ತಿ ಮತ್ತು ಬಣ್ಣವನ್ನು ಆಧರಿಸಿ ಬದಲಾಗಬಹುದು ಮತ್ತು ನಿಮ್ಮ ಹತ್ತಿರದ ಡೀಲರ್‌ಶಿಪ್‌ನಲ್ಲಿ ಲಭ್ಯವಿರುವ ಸ್ಟಾಕ್ ಅನ್ನು ದಯವಿಟ್ಟು ಗಮನಿಸಿ.
ಇನ್ನಷ್ಟು ಓದಿ : ಎರ್ಟಿಗಾ ಆನ್ ರೋಡ್ ಬೆಲೆ
0 out of 0 found this helpful