ಏಪ್ರಿಲ್ 8ರಿಂದ ಜಾರಿಗೆ ಬರುವಂತೆ ಮಾರುತಿಯ ಕೆಲವು ಮೊಡೆಲ್‌ಗಳ ಬೆಲೆಗಳಲ್ಲಿ ಹೆಚ್ಚಳ
ಏಪ್ರಿಲ್ 03, 2025 08:05 pm ರಂದು kartik ಮೂಲಕ ಪ್ರಕಟಿಸಲಾಗಿದೆ
- 18 Views
- ಕಾಮೆಂಟ್ ಅನ್ನು ಬರೆಯಿರಿ
ಬೆಲೆ ಏರಿಕೆಯನ್ನು ಎದುರಿಸುತ್ತಿರುವ ಮೊಡೆಲ್‌ಗಳಲ್ಲಿ ಅರೆನಾ ಮತ್ತು ನೆಕ್ಸಾ ಎರಡೂ ಸೇರಿವೆ, ಗ್ರ್ಯಾಂಡ್ ವಿಟಾರಾ ಅತಿ ಹೆಚ್ಚು ಬೆಲೆ ಏರಿಕೆಗೆ ಸಾಕ್ಷಿಯಾಗಿದೆ
ಮಾರುತಿ ತನ್ನ ಕೆಲವು ಕಾರುಗಳಿಗೆ ಬೆಲೆ ಏರಿಕೆಯನ್ನು ಘೋಷಿಸಿದ್ದು, ಇದು ಏಪ್ರಿಲ್ 8, 2025 ರಿಂದ ಜಾರಿಗೆ ಬರಲಿದೆ. ಕಾರು ತಯಾರಕ ಕಂಪನಿಯು ಕಳೆದ ತಿಂಗಳು ತನ್ನ ಸಂಪೂರ್ಣ ಕಾರುಗಳ ಪಟ್ಟಿಯ ಬೆಲೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಲು ಯೋಜಿಸುತ್ತಿರುವುದಾಗಿ ತಿಳಿಸಿತ್ತು. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು, ಕಾರ್ಯಾಚರಣೆಯ ವೆಚ್ಚಗಳು ಮತ್ತು ಫೀಚರ್‌ಗಳ ಸೇರ್ಪಡೆಗಳು ಬೆಲೆ ಏರಿಕೆಗೆ ಮಾರುತಿ ಒದಗಿಸಿದ ಕಾರಣಗಳು. ಯಾವ ಮೊಡೆಲ್‌ಗಳ ಮೇಲೆ ಬೆಲೆ ಏರಿಕೆ ಮತ್ತು ಎಷ್ಟು ಪರಿಣಾಮ ಬೀರುತ್ತದೆ ಎಂಬುದರ ತ್ವರಿತ ಅವಲೋಕನ ಇಲ್ಲಿದೆ:
ಬೆಲೆ ಏರಿಕೆ
ಮೊಡೆಲ್ |
ಬೆಲೆ ಏರಿಕೆ |
ಪ್ರಸ್ತುತವಿರುವ ಬೆಲೆ ರೇಂಜ್ |
ಗ್ರ್ಯಾಂಡ್ ವಿಟಾರಾ |
62,000 ರೂ.ಗಳವರೆಗೆ |
11.19 ಲಕ್ಷ ರೂ.ನಿಂದ 20 ಲಕ್ಷ ರೂ. |
ಇಕೋ |
22,500 ರೂ.ಗಳವರೆಗೆ |
5.44 ಲಕ್ಷ ರೂ.ನಿಂದ 6.70 ಲಕ್ಷ ರೂ. |
ವ್ಯಾಗನ್- ಆರ್ |
14,000 ರೂ.ಗಳವರೆಗೆ |
5.65 ಲಕ್ಷ ರೂ.ನಿಂದ 7.36 ಲಕ್ಷ ರೂ. |
ಎರ್ಟಿಗಾ |
12,500 ರೂ.ಗಳವರೆಗೆ |
8.84 ಲಕ್ಷ ರೂ.ನಿಂದ 13.13 ಲಕ್ಷ ರೂ. |
ಎಕ್ಸ್ಎಲ್6 |
12,500 ರೂ.ಗಳವರೆಗೆ |
11.71 ಲಕ್ಷ ರೂ.ನಿಂದ 14.71 ಲಕ್ಷ ರೂ. |
ಫ್ರಾಂಕ್ಸ್ |
2,500 ರೂ.ಗಳವರೆಗೆ |
7.52ಲಕ್ಷ ರೂ.ನಿಂದ 12.88 ಲಕ್ಷ ರೂ. |
ಮೇಲಿನ ಕೋಷ್ಟಕದಲ್ಲಿ ನೋಡಿದಂತೆ, ಗ್ರ್ಯಾಂಡ್ ವಿಟಾರಾ ಅತ್ಯಧಿಕ ಹೆಚ್ಚಳವನ್ನು ಅನುಭವಿಸಲಿದೆ, ಅದು ರೂ 50,000 ಕ್ಕಿಂತಲೂ ಹೆಚ್ಚು. ಆಶ್ಚರ್ಯವೆಂಬಂತೆ, ಇಕೊದಲ್ಲಿ ಎರಡನೇ ಅತಿ ಹೆಚ್ಚು ಬೆಲೆ ಏರಿಕೆಯಾಗಿದ್ದು, 20,000 ರೂ.ಗಳಿಗಿಂತ ಹೆಚ್ಚಿನ ಬೆಲೆ ಏರಿಕೆಯಾಗಲಿದೆ.
ಮಾರುತಿ ತನ್ನ ಉಳಿದ ಕಾರುಗಳಿಗೆ ಬೆಲೆ ಏರಿಕೆಯ ಪ್ರಮಾಣವನ್ನು ನಿರ್ದಿಷ್ಟಪಡಿಸಿಲ್ಲ. ಕಾರು ತಯಾರಕ ಕಂಪನಿಯು ಕಳೆದ ತಿಂಗಳು ತನ್ನ ಕಾರುಗಳ ಬೆಲೆಯಲ್ಲಿ ಶೇಕಡಾ 4 ರಷ್ಟು ಏರಿಕೆಯನ್ನು ಘೋಷಿಸುವುದಾಗಿ ಹೇಳಿತ್ತು.
ಇದನ್ನೂ ಸಹ ಓದಿ: ಡೀಲರ್‌ಶಿಪ್‌ಗಳ ಸ್ಟಾಕ್‌ಯಾರ್ಡ್‌ಗೆ ಬಂದಿಳಿದ Tata Curvv ಡಾರ್ಕ್ ಎಡಿಷನ್, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ
ಉಳಿದಿರುವ ಕಾರುಗಳು
ಕಾರು ತಯಾರಕರು ಖಾಸಗಿ ಖರೀದಿದಾರರಿಗೆ ಒಟ್ಟು 17 ಕಾರುಗಳನ್ನು ನೀಡುತ್ತಾರೆ, ಅವುಗಳಲ್ಲಿ ಆಲ್ಟೊ ಕೆ 10, ಸೆಲೆರಿಯೊ, ಬ್ರೆಝಾ, ಇಗ್ನಿಸ್ ಮತ್ತು ಇನ್ವಿಕ್ಟೊ ಸೇರಿವೆ. ಮಾರುತಿ ಈ ಕಾರುಗಳನ್ನು ಅರೆನಾ ಮತ್ತು ನೆಕ್ಸಾ (ಪ್ರೀಮಿಯಂ ಕಾರುಗಳಿಗಾಗಿ) ಎಂಬ ಎರಡು ಪ್ರತ್ಯೇಕ ಚಾನೆಲ್‌ಗಳ ಮೂಲಕ ಮಾರಾಟ ಮಾಡುತ್ತದೆ. ಮಾರುತಿಯ ಮೊಡೆಲ್‌ಗಳ ಬೆಲೆ ರೇಂಜ್ 4.23 ಲಕ್ಷ ರೂ.ಗಳಿಂದ 29.22 ಲಕ್ಷ ರೂ.ಗಳವರೆಗೆ ಇರುತ್ತದೆ.
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ಆಗಿದೆ
ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್ ಮಾಡ್ಬೇಡಿ