ಸತತವಾಗಿ ಎರಡನೇ ಬಾರಿಗೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆ ಪಡೆದ Tata Punch

published on ಮೇ 10, 2024 03:26 pm by shreyash for ಮಾರುತಿ ಆಲ್ಟೊ ಕೆ10

  • 26 Views
  • ಕಾಮೆಂಟ್‌ ಅನ್ನು ಬರೆಯಿರಿ

2024ರ ಏಪ್ರಿಲ್‌ನಲ್ಲಿ ಮಾರುತಿ ವ್ಯಾಗನ್ ಆರ್, ಬ್ರೆಝಾ ಮತ್ತು ಡಿಜೈರ್ ಬೇಡಿಕೆಯು ತಮ್ಮ ಸಾಮಾನ್ಯ ಅಂಕಿಅಂಶಗಳಿಗೆ ಮರಳಿತು, ಆದರೆ ಎಂಟ್ರಿ-ಲೆವೆಲ್‌ ಟಾಟಾ ಎಸ್‌ಯುವಿಯನ್ನು ಸೋಲಿಸಲು ಇವುಗಳಿಂದ ಸಾಧ್ಯವಾಗಲಿಲ್ಲ.

Tata Punch, Maruti Wagon R, and Hyundai creta

2024ರ ಏಪ್ರಿಲ್‌ನ ಕಾರುಗಳ ಮಾರಾಟದ ಅಂಕಿಅಂಶಗಳು ಹೊರಬಿದ್ದಿವೆ ಮತ್ತು ಟಾಟಾ ಪಂಚ್ ಹೆಚ್ಚು ಮಾರಾಟವಾಗುವರೊಂದಿಗೆ ಮತ್ತೆ ನಂಬರ್‌.01 ಸ್ಥಾನವನ್ನು ಅಲಂಕರಿಸಿದೆ. ಆದಾಗಿಯೂ, ಟಾಪ್ 15 ಮೊಡೆಲ್‌ಗಳಲ್ಲಿ 8 ಮೊಡೆಲ್‌ಗಳೊಂದಿಗೆ ಮಾರುತಿಯು ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದೆ. 2024ರ ಏಪ್ರಿಲ್‌ನಲ್ಲಿ ಟಾಪ್ 15 ಪಟ್ಟಿಯಲ್ಲಿರುವ ಪ್ರತಿಯೊಂದು ಮೊಡೆಲ್‌ಗಳು ಯಾವ ಸ್ಥಾನದಲ್ಲಿದೆ ಎಂಬುವುದು ಇಲ್ಲಿದೆ.

ಮೊಡೆಲ್‌ಗಳು

2024 ಏಪ್ರಿಲ್‌

2023 ಏಪ್ರಿಲ್‌

2024 ಮಾರ್ಚ್‌

ಟಾಟಾ ಪಂಚ್‌

19,158

10,934

17,547

ಮಾರುತಿ ವ್ಯಾಗನ್‌ ಆರ್‌

17,850

20,879

16,368

ಮಾರುತಿ ಬ್ರೆಝಾ

17,113

11,836

14,614

  ಮಾರುತಿ ಡಿಜೈರ್‌

15,825

10,132

15,894

ಹ್ಯುಂಡೈ ಕ್ರೇಟಾ

15,447

14,186

16,458

ಮಹೀಂದ್ರಾ  ಸ್ಕಾರ್ಪಿಯೋ

14,807

9,617

15,151

ಮಾರುತಿ ಫ್ರಾಂಕ್ಸ್‌

14,286

8,784

12,531

ಮಾರುತಿ ಬಲೆನೋ

14,049

16,180

15,588

ಮಾರುತಿ ಎರ್ಟಿಗಾ

13,544

5,532

14,888

ಮಾರುತಿ ಈಕೊ

12,060

10,504

12,019

ಟಾಟಾ ನೆಕ್ಸಾನ್‌

11,168

15,002

14,058

ಮಹೀಂದ್ರಾ ಬೊಲೆರೋ

9,537

9,054

10,347

ಹ್ಯುಂಡೈ ವೆನ್ಯೂ

9,120

10,342

9,614

ಮಾರುತಿ ಆಲ್ಟೋ ಕೆ10

9,043

11,548

9,332

ಕಿಯಾ ಸೋನೆಟ್‌

7,901

9,744

8,750

ಗಮನಿಸಿದ ಪ್ರಮುಖ ಅಂಶಗಳು

Tata Punch

  •  ಸತತ ಎರಡನೇ ತಿಂಗಳಿನಲ್ಲಿಯೂ, ಟಾಟಾ ಪಂಚ್ ದೇಶದಲ್ಲಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಂಚ್‌ನ 19,000 ಕಾರುಗಳನ್ನು 2024ರ ಏಪ್ರಿಲ್‌ನಲ್ಲಿ ಡೆಲಿವರಿ ನೀಡಲಾಗಿದೆ ಮತ್ತು ಅದರ ವರ್ಷದಿಂದ ವರ್ಷಕ್ಕೆ ಮಾರಾಟವು 75 ಪ್ರತಿಶತದಷ್ಟು ಗಮನಾರ್ಹ ಹೆಚ್ಚಳವನ್ನು ಕಂಡಿದೆ. ಈ ಅಂಕಿಅಂಶಗಳು ಟಾಟಾ ಪಂಚ್ ICE (ಆಂತರಿಕ ದಹನಕಾರಿ ಎಂಜಿನ್) ಮತ್ತು ಟಾಟಾ ಪಂಚ್ EV ಎರಡರ ಮಾರಾಟವನ್ನು ಒಳಗೊಂಡಿವೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.
  • 17,800 ಕ್ಕೂ ಹೆಚ್ಚು ಕಾರುಗಳನ್ನು ಡೆಲಿವೆರಿ ನೀಡುವುದರೊಂದಿಗೆ, ಮಾರುತಿ ವ್ಯಾಗನ್ ಆರ್ 2024ರ ಏಪ್ರಿಲ್‌ನಲ್ಲಿ ಹ್ಯುಂಡೈ ಕ್ರೆಟಾವನ್ನು ಹಿಂದಿಕ್ಕಿ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ. ವ್ಯಾಗನ್ ಆರ್‌ನ ಏಪ್ರಿಲ್ ಮಾರಾಟವು ಹಿಂದಿನ ತಿಂಗಳಿಗಿಂತ ಸುಮಾರು 1,500 ಕಾರಿನಷ್ಟು ಹೆಚ್ಚಳವಾಗಿದ್ದರೂ, ವಾರ್ಷಿಕ ಮಾರಾಟದಲ್ಲಿ ಅದು ಇನ್ನೂ 15 ಪ್ರತಿಶತದಷ್ಟು ನಷ್ಟವನ್ನು ಎದುರಿಸುತ್ತಿದೆ.
  •  Maruti Brezzaವು ಮಾಸಿಕ ಮಾರಾಟದ ಕೋಷ್ಟಕದಲ್ಲಿ ಒಂಬತ್ತನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿತು, ಅದರ ಮಾರಾಟದ ಸಂಖ್ಯೆಯು 2024ರ ಏಪ್ರಿಲ್‌ನಲ್ಲಿ 17,000 ಯುನಿಟ್‌ಗಳನ್ನು ದಾಟಿದೆ. ಇದು ತಿಂಗಳಿನಿಂದ ತಿಂಗಳಿಗೆ (MoM) ಮತ್ತು ವಾರ್ಷಿಕ ಮಾರಾಟದಲ್ಲಿ ಕ್ರಮವಾಗಿ 17 ಪ್ರತಿಶತ ಮತ್ತು 45 ಪ್ರತಿಶತದಷ್ಟು ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.

Maruti Dzire

  •  ಮಾರುತಿ ಡಿಜೈರ್  ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಸ್ಥಿರವಾದ ಬೇಡಿಕೆಯನ್ನು ಕಾಯ್ದುಕೊಂಡಿದೆ, ಕಳೆದ ತಿಂಗಳು 15,800 ಯುನಿಟ್‌ಗಳನ್ನು ಡೆಲಿವೆರಿ ನೀಡಿದೆ. ಮಾರುತಿಯ ಸಬ್‌ಕಾಂಪ್ಯಾಕ್ಟ್ ಸೆಡಾನ್ ಸಹ ವರ್ಷದಿಂದ ವರ್ಷದ ಮಾರಾಟದಲ್ಲಿ 56 ಪ್ರತಿಶತದಷ್ಟು ಏರಿಕೆಯನ್ನು ಕಂಡಿದೆ.
  • The Hyundai Creta  ಹ್ಯುಂಡೈ ಕ್ರೆಟಾ ಮಾರಾಟ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಇಳಿದಿದೆ ಮತ್ತು ಮಾಸಿಕ ಮಾರಾಟದಲ್ಲಿ 1,000 ಯುನಿಟ್‌ಗಳ ಕುಸಿತವನ್ನು ಕಂಡಿದೆ. ಹುಂಡೈಯು 2024ರ ಏಪ್ರಿಲ್‌ನಲ್ಲಿ ಕ್ರೆಟಾದ 15,500 ಯುನಿಟ್‌ಗಳನ್ನು ಮಾರಾಟ ಮಾಡಿತು ಮತ್ತು ಅದರ ವರ್ಷದಿಂದ ವರ್ಷದ ಮಾರಾಟವು 9 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿತು.

ಇದನ್ನೂ ಪರಿಶೀಲಿಸಿ: ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ Vs  ಪೆಟ್ರೋಲ್ ಎಂಜಿನ್‌ನ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ  

  •  ಮಹೀಂದ್ರಾ ಸ್ಕಾರ್ಪಿಯೊವು 2024ರ ಏಪ್ರಿಲ್ ನಲ್ಲಿ 14,800-ಯೂನಿಟ್ ಮಾರಾಟದ ಗಡಿಯನ್ನು ದಾಟಿದೆ. ಇದರ ಮಾಸಿಕ ಮಾರಾಟವು 300 ಯುನಿಟ್‌ಗಳಿಗಿಂತಲೂ ಕಡಿಮೆಯಾಗಿದೆ, ಆದರೆ ವಾರ್ಷಿಕ ಮಾರಾಟದಲ್ಲಿ ಇದು ಇನ್ನೂ 54 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿದೆ. ಈ ಅಂಕಿಅಂಶಗಳು ಮಹೀಂದ್ರಾ ಸ್ಕಾರ್ಪಿಯೊ ಎನ್ ಮತ್ತು ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಎರಡರ ಮಾರಾಟವನ್ನು ಒಳಗೊಂಡಿವೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

  • 14,000 ಯುನಿಟ್‌ಗಳ ಮಾರಾಟದೊಂದಿಗೆ, ಮಾರುತಿ ಫ್ರಾಂಕ್ಸ್ ಮಾಸಿಕ ಮತ್ತು ವಾರ್ಷಿಕ ಮಾರಾಟದಲ್ಲಿ ಕ್ರಮವಾಗಿ 14 ಪ್ರತಿಶತ ಮತ್ತು 63 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿತು.

  • ಈ ಪಟ್ಟಿಯಲ್ಲಿರುವ ಏಕೈಕ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾರುತಿ ಬಲೆನೊ ಆಗಿದೆ, ಇದು 2024ರ ಏಪ್ರಿಲ್ ನಲ್ಲಿ 14,000-ಯೂನಿಟ್ ಮಾರಾಟದ ಗಡಿಯನ್ನು ದಾಟಿದೆ. ಆದಾಗಿಯೂ, ಇದು ತಿಂಗಳಿನಿಂದ ತಿಂಗಳಿಗೆ (MoM) ಮತ್ತು ವರ್ಷದಿಂದ ವರ್ಷಕ್ಕೆ (YoY) ಮಾರಾಟದಲ್ಲಿ ಕ್ರಮವಾಗಿ 10 ಪ್ರತಿಶತ ಮತ್ತು 13 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ.

  • ಮಾರುತಿ ಎರ್ಟಿಗಾ ಮತ್ತು ಮಾರುತಿ ಇಕೋ ಕೇವಲ ಎರಡು ಎಮ್‌ಪಿವಿಗಳು ಟಾಪ್ 15 ಹೆಚ್ಚು ಮಾರಾಟವಾದ ಮಾದರಿಗಳ ಪಟ್ಟಿಗೆ ಸೇರ್ಪಡೆಗೊಂಡಿವೆ. ಎರ್ಟಿಗಾವು 13,500 ಯುನಿಟ್‌ಗಳ ಮಾರಾಟದ ಮಾರ್ಕ್ ಅನ್ನು ದಾಟಿದರೆ, ಇಕೋವು 2024ರ ಏಪ್ರಿಲ್‌ನಲ್ಲಿ 12,000 ಕ್ಕೂ ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

Tata Nexon 2023

  •  ಟಾಟಾ ನೆಕ್ಸಾನ್ 2024ರ ಏಪ್ರಿಲ್‌ನಲ್ಲಿ 11,000 ಯುನಿಟ್ ಮಾರಾಟವನ್ನು ದಾಟುವಲ್ಲಿ ಯಶಸ್ವಿಯಾಗಿದೆ ಆದರೆ ಮಾರುತಿ ಬ್ರೆಝಾಕ್ಕಿಂತ ಸುಮಾರು 6,000 ಯುನಿಟ್‌ಗಳಷ್ಟು ಕಡಿಮೆಯಾಗಿದೆ. ನೆಕ್ಸಾನ್‌ನ ಮಾಸಿಕ ಮಾರಾಟವು 21 ಪ್ರತಿಶತದಷ್ಟು ಕಡಿಮೆಯಾಗಿದೆ, ಹಾಗೆಯೇ ಇದರ ವಾರ್ಷಿಕ ಮಾರಾಟದಲ್ಲಿ 26 ಪ್ರತಿಶತದಷ್ಟು ನಷ್ಟವನ್ನು ಕಂಡಿದೆ. ಇಲ್ಲಿಯ ಮಾರಾಟದ ಅಂಕಿಅಂಶಗಳು ಟಾಟಾ ನೆಕ್ಸಾನ್ ಮತ್ತು ಟಾಟಾ ನೆಕ್ಸಾನ್ EV ಎರಡನ್ನೂ ಒಳಗೊಂಡಿವೆ.

  • ಮಹೀಂದ್ರಾ ಬೊಲೆರೊ, ಬೊಲೆರೊ ನಿಯೊ ಮತ್ತು ಬೊಲೆರೊ ನಿಯೊ ಪ್ಲಸ್ ಒಟ್ಟಾಗಿ 2024ರ ಏಪ್ರಿಲ್‌ನಲ್ಲಿ 9,500 ಕ್ಕೂ ಮಿಕ್ಕಿ ಕಾರುಗಳ ಮಾರಾಟವನ್ನು ಗಳಿಸಿವೆ. ವಾರ್ಷಿಕ ಮಾರಾಟವು ಸ್ಥಿರವಾಗಿ ಉಳಿಯಿತು, ಆದರೆ ಅವರ MoM ಮಾರಾಟವು 810 ಯುನಿಟ್‌ಗಳಷ್ಟು ಕಡಿಮೆಯಾಗಿದೆ.

  • ಪಟ್ಟಿಯಲ್ಲಿ ಮೂರನೇ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯು ಹ್ಯುಂಡೈ ವೆನ್ಯೂ ಆಗಿದ್ದು, ಇದು ಕಳೆದ ತಿಂಗಳು 9,000 ಖರೀದಿದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಈ ಸಂಖ್ಯೆಯು ಹ್ಯುಂಡೈ ವೆನ್ಯೂ ಮತ್ತು ವೆನ್ಯೂ ಎನ್ ಲೈನ್ ಎರಡರ ಮಾರಾಟವನ್ನು ಒಳಗೊಂಡಿವೆ.

  • ಪಟ್ಟಿಯಲ್ಲಿನ ಮತ್ತೊಂದು ಸ್ಥಿರ ಪ್ರದರ್ಶನ ಮಾರುತಿ ಆಲ್ಟೊ K10ದ್ದು ಆಗಿದೆ, ಇದು 2024ರ ಏಪ್ರಿಲ್‌ನಲ್ಲಿ 9,000 ಯುನಿಟ್‌ಗಳ ಮಾರಾಟದ ಮಾರ್ಕ್ ಅನ್ನು ದಾಟಿದೆ. ಆದಾಗ್ಯೂ, ಅದರ ವಾರ್ಷಿಕ ಮಾರಾಟವು 22 ಪ್ರತಿಶತದಷ್ಟು ಕಡಿಮೆಯಾಗಿದೆ.

  • Kia Sonet  ಕೊನೆಯದಾಗಿ, ಕಿಯಾ ಸೊನೆಟ್‌ 2024ರ ಏಪ್ರಿಲ್‌ನಲ್ಲಿ 7,901 ಖರೀದಿದಾರರ ಮನೆಗೆ ತಲುಪವುವಲ್ಲಿ ಯಶಸ್ವಿಯಾಗಿದೆ. ಆದರೂ ಇದು ಮಾಸಿಕ ಮತ್ತು ವಾರ್ಷಿಕ ಮಾರಾಟದಲ್ಲಿ ಕ್ರಮವಾಗಿ 10 ಪ್ರತಿಶತ ಮತ್ತು 19 ಪ್ರತಿಶತದಷ್ಟು ನಷ್ಟವನ್ನು ಅನುಭವಿಸಿದೆ.

ಇಲ್ಲಿ ಇನ್ನಷ್ಟು ಓದಿ: ಆಲ್ಟೋ ಕೆ10 ಆನ್‌ರೋಡ್‌ ಬೆಲೆ  

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ Alto K10

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience