2024ರ ಫೆಬ್ರವರಿಯಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳನ್ನು ನೋಡೋಣ
ಮಾರುತಿ ವ್ಯಾಗನ್ ಆರ್ ಗಾಗಿ rohit ಮೂಲಕ ಮಾರ್ಚ್ 12, 2024 03:29 pm ರಂದು ಪ್ರಕಟಿಸಲಾಗಿದೆ
- 35 Views
- ಕಾಮೆಂಟ್ ಅನ್ನು ಬರೆಯಿರಿ
ಪಟ್ಟಿಯಲ್ಲಿರುವ ಎರಡು ಮೊಡೆಲ್‌ಗಳು ವರ್ಷದಿಂದ ವರ್ಷಕ್ಕೆ (YoY) 100 ಪ್ರತಿಶತಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ನೋಂದಾಯಿಸಿವೆ
2024ರ ಫೆಬ್ರವರಿಯಲ್ಲಿ, ಟಾಪ್ 10 ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮತ್ತೊಮ್ಮೆ ಮಾರುತಿ ಪ್ರಾಬಲ್ಯ ಸಾಧಿಸಿದೆ. ಈ ಮೂಲಕ ಮಾರುತಿ ವ್ಯಾಗನ್ ಆರ್ ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರು ಎಂಬ ಕಿರೀಟವನ್ನು ಮತ್ತೆ ತನ್ನ ತೆಕ್ಕೆಗೆ ಪಡೆಯಿತು ಮತ್ತು ಟಾಟಾ ನೆಕ್ಸಾನ್ ಈ ಪಟ್ಟಿಯಲ್ಲಿ ಮತ್ತಷ್ಟು ಕೆಳಗೆ ಜಾರಿತು. ಅನೇಕ ಕಾರುಗಳು ಧನಾತ್ಮಕ YYY ಬೆಳವಣಿಗೆಯನ್ನು ದಾಖಲಿಸಿವೆ, ಹಾಗೆಯೇ ಈ ಎರಡು ಕಾರುಗಳು 100 ಪ್ರತಿಶತದಷ್ಟು ಸುಧಾರಿಸಿವೆ.
2024ರ ಫೆಬ್ರವರಿಯ ಮಾರಾಟದಲ್ಲಿ ಪ್ರತಿ ಮೊಡೆಲ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ವಿವರವಾದ ನೋಟ ಇಲ್ಲಿದೆ:
ಮೊಡೆಲ್ |
2024 ಫೆಬ್ರವರಿ |
2023 ಫೆಬ್ರವರಿ |
2024 ಜನವರಿ |
ಮಾರುತಿ ವ್ಯಾಗನ್ ಆರ್ |
19,412 |
16,889 |
17,756 |
ಟಾಟಾ ಪಂಚ್ |
18,438 |
11,169 |
17,978 |
ಮಾರುತಿ ಬಲೆನೋ |
17,517 |
18,592 |
19,630 |
ಮಾರುತಿ ಡಿಜೈರ್ |
15,837 |
16,798 |
16,773 |
ಮಾರುತಿ ಬ್ರೆಜ್ಜಾ |
15,765 |
15,787 |
15,303 |
ಮಾರುತಿ ಏರ್ಟಿಗಾ |
15,519 |
6,472 |
14,632 |
ಹುಂಡೈ ಕ್ರೆಟಾ |
15,276 |
10,421 |
13,212 |
ಮಹೀಂದ್ರಾ ಸ್ಕಾರ್ಪಿಯೋ |
15,051 |
6,950 |
14,293 |
ಟಾಟಾ ನೆಕ್ಸಾನ್ |
14,395 |
13,914 |
17,182 |
ಮಾರುತಿ ಫ್ರಾಂಕ್ಸ್ |
14,168 |
– |
13,643 |
ಪ್ರಮುಖ ಅಂಶಗಳು
-
ಮಾರುತಿ ವ್ಯಾಗನ್ ಆರ್, ಸುಮಾರು 19,500 ಕಾರ್‌ಗಳನ್ನು ಮಾರಾಟ ಮಾಡಿದ್ದು, ಫೆಬ್ರವರಿ 2024 ರಲ್ಲಿ ಹೆಚ್ಚು ಮಾರಾಟವಾದ ಕಾರು ಆಗಿತ್ತು. ಇದರ ವರ್ಷದಿಂದ ವರ್ಷಕ್ಕೆ ಮಾರಾಟದ ಬೆಳವಣಿಗೆಯ (YoY) ಅಂಕಿ ಅಂಶವು 15 ಪ್ರತಿಶತದಷ್ಟು ಹೆಚ್ಚಾಗಿದೆ.
-
ಸುಮಾರು 18,500 ಯುನಿಟ್‌ಗಳನ್ನು ದೆಲಿವರಿ ಮಾಡುವ ಮೂಲಕ, ಟಾಟಾ ಪಂಚ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಜನವರಿ ತಿಂಗಳ ಇದರ ಮಾರಾಟಕ್ಕೆ ಹೋಲಿಸಿದರೆ ಫೆಬ್ರುವರಿಯಲ್ಲಿ ಸುಮಾರು 500 ರಷ್ಟು ಕಾರುಗಳನ್ನು ಹೆಚ್ಚು ಮಾರಾಟ ಮಾಡಿದೆ. ಈ ಅಂಕಿಅಂಶಗಳು ಹೊಸ ಪಂಚ್ ಇವಿಯ ಮಾರಾಟದ ಸಂಖ್ಯೆಯನ್ನು ಸಹ ಒಳಗೊಂಡಿವೆ.
-
17,500 ಕ್ಕೂ ಹೆಚ್ಚು ಕಾರುಗಳು ಮಾರಾಟವಾಗುವುದರೊಂದಿಗೆ, ಮಾರುತಿ ಬಲೆನೊ ಟಾಟಾದ ಮೈಕ್ರೋ ಎಸ್‌ಯುವಿಗಿಂತ ಕೇವಲ 1,000 ಯುನಿಟ್‌ಗಳ ಹಿಂದೆ ಇತ್ತು. ಹಾಗೆಯೇ ಇದರ ವರ್ಷದಿಂದ ವರ್ಷಕ್ಕೆ ಮತ್ತು ತಿಂಗಳಿನಿಂದ ತಿಂಗಳಿನ ಮಾರಾಟದ ಎರಡೂ ಅಂಕಿಅಂಶಗಳು ಕುಸಿದಿವೆ ಎಂದು ಹೇಳಬಹುದು.


-
ಬಲೆನೊದ ನಂತರದ ಐದು ಮೊಡೆಲ್ಗಳಾದ ಮಾರುತಿ ಡಿಜೈರ್, ಮಾರುತಿ ಬ್ರೆಝಾ, ಮಾರುತಿ ಎರ್ಟಿಗಾ, ಹ್ಯುಂಡೈ ಕ್ರೆಟಾ ಮತ್ತು ಮಹೀಂದ್ರ ಸ್ಕಾರ್ಪಿಯೊಗಳ ಒಟ್ಟು ಮಾರಾಟವು 15,000 ರಿಂದ 16,000 ಯುನಿಟ್ ಗಳ ನಡುವೆ ಇದೆ. ಅವುಗಳಲ್ಲಿ, ಎರ್ಟಿಗಾ ಮತ್ತು ಸ್ಕಾರ್ಪಿಯೊದ ಮಾರಾಟದ ಅಂಕಿ-ಅಂಶವು ವರ್ಷದಿಂದ ವರ್ಷಕ್ಕೆ 100 ಪ್ರತಿಶತಕ್ಕಿಂತ ಹೆಚ್ಚು ಏರಿಕೆ ಕಂಡಿತು. ಸ್ಕಾರ್ಪಿಯೊದ ಮಾರಾಟ ಸಂಖ್ಯೆಗಳು ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಮತ್ತು ಮಹೀಂದ್ರಾ ಸ್ಕಾರ್ಪಿಯೊ ಎನ್ ಎರಡರ ಅಂಕಿಅಂಶಗಳನ್ನು ಒಳಗೊಂಡಿವೆ ಎಂಬುದನ್ನು ಗಮನಿಸಬೇಕು.


-
ಟಾಟಾ ನೆಕ್ಸಾನ್ ಮತ್ತು ಮಾರುತಿ ಫ್ರಾಂಕ್ಸ್ ಎರಡೂ 14,000 ಮತ್ತು 14,500 ಯುನಿಟ್‌ಗಳ ನಡುವೆ ಒಟ್ಟು ಮಾರಾಟವನ್ನು ದಾಖಲಿಸಿವೆ. ಟಾಟಾ ಎಸ್‌ಯುವಿಯ ವರ್ಷದಿಂದ ವರ್ಷಕ್ಕೆ ಮಾರಾಟದ ಅಂಕಿ ಅಂಶವು 3 ಪ್ರತಿಶತದಷ್ಟು ಏರಿದರೆ, ಅದರ ತಿಂಗಳಿನಿಂದ ತಿಂಗಳ ಮಾರಾಟವು ಸುಮಾರು 3,000 ಯುನಿಟ್‌ಗಳಿಂದ ಕುಸಿಯಿತು. ನೆಕ್ಸಾನ್‌ನ ಸಂಖ್ಯೆಗಳು ನೆಕ್ಸಾನ್ ಇವಿಯ ಮಾರಾಟದ ಅಂಕಿಅಂಶಗಳನ್ನು ಸಹ ಒಳಗೊಂಡಿದೆ.
ಇದನ್ನೂ ಓದಿ: ಮಾರುತಿ ಸುಜುಕಿ, ಟಾಟಾ ಮತ್ತು ಹ್ಯುಂಡೈ 2024ರ ಫೆಬ್ರವರಿಯಲ್ಲಿ ಹೆಚ್ಚು ಮಾರಾಟವಾದ ಕಾರ್ ಬ್ರಾಂಡ್‌ಗಳು
ಹೆಚ್ಚು ಓದಿ : ವ್ಯಾಗನ್ ಆರ್ ಆನ್‌ರೋಡ್ ಬೆಲೆ