Login or Register ಅತ್ಯುತ್ತಮ CarDekho experience ಗೆ
Login

BYD eMAX 7 ಬಿಡುಗಡೆ, ಬೆಲೆ 26.90 ಲಕ್ಷ ರೂ, 530 ಕಿ.ಮೀ ರೇಂಜ್‌..

ಬಿವೈಡಿ emax 7 ಗಾಗಿ ansh ಮೂಲಕ ಅಕ್ಟೋಬರ್ 08, 2024 05:00 pm ರಂದು ಪ್ರಕಟಿಸಲಾಗಿದೆ

ಎಲೆಕ್ಟ್ರಿಕ್ ಎಮ್‌ಪಿವಿಯು 55.4 ಕಿ.ವ್ಯಾಟ್‌ ಮತ್ತು 71.8 ಕಿ.ವ್ಯಾಟ್‌ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ, ಮತ್ತು 530 ಕಿಮೀ ವರೆಗಿನ NEDC-ಕ್ಲೈಮ್‌ ಮಾಡಿದ ರೇಂಜ್‌ ಅನ್ನು ನೀಡುತ್ತದೆ

  • ಭಾರತದಾದ್ಯಂತ BYD eMAX 7ನ ಪರಿಚಯಾತ್ಮಕ, ಎಕ್ಸ್-ಶೋರೂಂ ಬೆಲೆಗಳು 26.90 ಲಕ್ಷ ರೂ.ನಿಂದ 29.90 ಲಕ್ಷ ರೂ.ವರೆಗೆ ಇದೆ.

  • ಎರಡು ಪ್ರೀಮಿಯಂ ಮತ್ತು ಸುಪೀರಿಯರ್ ಎಂಬ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

  • ಫೀಚರ್‌ಗಳ ಪಟ್ಟಿಯು 12.8-ಇಂಚಿನ ತಿರುಗುವ ಟಚ್‌ಸ್ಕ್ರೀನ್, ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟ್‌ಗಳು, 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ಎಡಿಎಎಸ್ ಅನ್ನು ಒಳಗೊಂಡಿದೆ.

  • 6- ಮತ್ತು 7-ಸೀಟರ್‌ಗಳ ಲೇಔಟ್‌ಗಳಲ್ಲಿ ನೀಡಲಾಗುತ್ತದೆ.

ಬಿವೈಡಿ ಇಮ್ಯಾಕ್ಸ್‌7 ಅನ್ನು ಭಾರತದಲ್ಲಿ ರೂ 26.90 ಲಕ್ಷದ ಆರಂಭಿಕ ಬೆಲೆಯಲ್ಲಿ (ಪರಿಚಯಾತ್ಮಕ, ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ) ಬಿಡುಗಡೆ ಮಾಡಲಾಗಿದೆ ಮತ್ತು ಇದು ಬಿವೈಡಿ ಇ6 ಎಲೆಕ್ಟ್ರಿಕ್ ಎಮ್‌ಪಿವಿಯ ಫೇಸ್‌ಲಿಫ್ಟ್ ಆವೃತ್ತಿಯಾಗಿದೆ. ಆಪ್‌ಡೇಟ್‌ ಮಾಡಲಾದ ಆವೃತ್ತಿಯು ಹೆಚ್ಚು ಆಧುನಿಕ ವಿನ್ಯಾಸ, ಹೊಸ ಫೀಚರ್‌ಗಳು ಮತ್ತು ಸುಧಾರಿತ ಕ್ಲೈಮ್ಡ್‌ ರೇಂಜ್‌ ಅನ್ನು ನೀಡುತ್ತದೆ. ಈ ಎಮ್‌ಪಿವಿಗಾಗಿ ಬುಕಿಂಗ್‌ಗಳು ಈಗಾಗಲೇ ನಡೆಯುತ್ತಿವೆ ಮತ್ತು ಬಿವೈಡಿ ಇಮ್ಯಾಕ್ಸ್7 ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿವರಗಳು ಇಲ್ಲಿದೆ:

ಬೆಲೆ

ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆ

ಪ್ರೀಮಿಯಂ 6-ಸೀಟರ್‌

26.90 ಲಕ್ಷ ರೂ.

ಪ್ರೀಮಿಯಂ 7-ಸೀಟರ್‌

27.90 ಲಕ್ಷ ರೂ.

ಸುಪೀರಿಯರ್ 6 ಸೀಟರ್‌

29.30 ಲಕ್ಷ ರೂ.

ಸುಪೀರಿಯರ್ 7 ಸೀಟರ್‌

29.90 ಲಕ್ಷ ರೂ.

ಒಂದೇ ವೇರಿಯೆಂಟ್‌ನಲ್ಲಿ ಲಭ್ಯವಿದ್ದ ಇ6 ಗೆ ಹೋಲಿಸಿದರೆ, ಇಮ್ಯಾಕ್ಸ್ 7 ಅನ್ನು ಎರಡು ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ ಮತ್ತು ಆರಂಭಿಕ ಬೆಲೆ 2.25 ಲಕ್ಷ ರೂ.ಗಳಷ್ಟು ಕಡಿಮೆಯಾಗಿದೆ.

ಡಿಸೈನ್‌

eMAX 7ನ ಮುಂಭಾಗವು ಸ್ಲೀಕರ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಅಟ್ಟೊ 3 ತರಹದ ಗ್ರಿಲ್ ಅನ್ನು ಪಡೆಯುತ್ತದೆ. ಹೆಡ್‌ಲ್ಯಾಂಪ್‌ನ ಆಂತರಿಕ ಲೈಟಿಂಗ್‌ ಅಂಶಗಳೊಂದಿಗೆ ಬಂಪರ್ ಅನ್ನು ಸಹ ಮಾರ್ಪಾಡು ಮಾಡಲಾಗಿದೆ.

ಬಾಡಿಯ ಆಕೃತಿಯು e6 ನಂತೆಯೇ ಇದೆ, ಆದರೆ ಇದು ಹೊಸ 10-ಸ್ಪೋಕ್ 17-ಇಂಚಿನ ಅಲಾಯ್‌ ವೀಲ್‌ಗಳನ್ನು ಡ್ಯುಯಲ್-ಟೋನ್ ಕಲರ್‌ನಲ್ಲಿ ಫಿನಿಶ್‌ ಮಾಡಲಾಗಿದೆ.

ಹಿಂಭಾಗದಲ್ಲಿ, ಇದು ಕನೆಕ್ಟೆಡ್‌ ಎಲ್‌ಇಡಿ ಟೈಲ್ ಲ್ಯಾಂಪ್ ಸೆಟಪ್‌ನೊಂದಿಗೆ ಬರುತ್ತದೆ ಮತ್ತು ಹೊರಹೋಗುವ e6 ಗೆ ಹೋಲಿಸಿದರೆ, ಇಮ್ಯಾಕ್ಸ್‌ 7 ನ ಹಿಂಭಾಗದ ತುದಿಯು ತೆಳುವಾದ ಅಗಲ-ವ್ಯಾಪಿಸುವ ಕ್ರೋಮ್ ಸ್ಟ್ರಿಪ್ ಮತ್ತು ಸ್ಲೀಕರ್ ಬಂಪರ್ ಅನ್ನು ಹೊಂದಿದೆ.

ಇದನ್ನು ಕ್ವಾರ್ಟ್ಜ್ ಬ್ಲೂ, ಕಾಸ್ಮೊಸ್ ಬ್ಲೂ, ಕ್ರಿಸ್ಟಲ್ ವೈಟ್ ಮತ್ತು ಹಾರ್ಬರ್ ಗ್ರೇ ಅನ್ನು ನಾಲ್ಕು ಬಣ್ಣಗಳಲ್ಲಿ ನೀಡಲಾಗುತ್ತಿದೆ.

ಇದನ್ನೂ ಓದಿ: Nissan Magnite ಫೇಸ್‌ಲಿಫ್ಟ್ ಬಿಡುಗಡೆ, 5.99 ಲಕ್ಷ ರೂ ಬೆಲೆ, 20 ಕಿ.ಮೀ ಮೈಲೇಜ್‌, ಮತ್ತಷ್ಟು..

ಕ್ಯಾಬಿನ್‌

ಇದು ಡ್ಯುಯಲ್-ಟೋನ್ ಕಪ್ಪು ಮತ್ತು ಕಂದು ಕ್ಯಾಬಿನ್ ಥೀಮ್‌ನೊಂದಿಗೆ ಬರುತ್ತದೆ, ಅಲ್ಲಿ ಡ್ಯಾಶ್‌ಬೋರ್ಡ್ ಸಂಪೂರ್ಣ ಕಪ್ಪು ಬಣ್ಣದಲ್ಲಿ ಫಿನಿಶ್‌ ಮಾಡಲಾಗಿದೆ ಮತ್ತು ಅದರ ಅಗಲದಲ್ಲಿ ಕ್ರೋಮ್ ಸ್ಟ್ರಿಪ್ ಅನ್ನು ಹೊಂದಿದೆ. ಬಿವೈಡಿ ಇದನ್ನು 6- ಮತ್ತು 7-ಸೀಟರ್‌ಗಳ ಲೇಔಟ್‌ಗಳಲ್ಲಿ ನೀಡುತ್ತದೆ ಮತ್ತು ಆಸನಗಳನ್ನು ಕಂದು ಬಣ್ಣದ ಲೆಥೆರೆಟ್ ಕವರ್‌ನಲ್ಲಿ ಮುಚ್ಚಲಾಗುತ್ತದೆ. ಡೋರ್ ಪ್ಯಾಡ್‌ಗಳು ಸಾಫ್ಟ್-ಟಚ್ ಲೆಥೆರೆಟ್ ಪ್ಯಾಡಿಂಗ್ ಅನ್ನು ಸಹ ಪಡೆಯುತ್ತವೆ.

ಸ್ಟೀರಿಂಗ್ ಚಕ್ರವು ಹೊಸದು ಮತ್ತು ಅದರ ಮೇಲೆ ಕ್ರೋಮ್ ಇನ್ಸರ್ಟ್ಸ್‌ಗಳನ್ನು ಹೊಂದಿದೆ. ಈ ಕ್ರೋಮ್ ಆಕ್ಸೆಂಟ್‌ಗಳು AC ವೆಂಟ್‌ ಮತ್ತು ಬಾಗಿಲುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿವೆ. ಬಾಗಿಲುಗಳು ಸಹ ಆಂಬಿಯೆಂಟ್ ಲೈಟಿಂಗ್ ಅನ್ನು ಪಡೆಯುತ್ತವೆ.

ಫೀಚರ್‌ಗಳು ಸುರಕ್ಷತೆ

ತಂತ್ರಜ್ಞಾನದ ವಿಷಯದಲ್ಲಿ, ಇದು 12.8-ಇಂಚಿನ ತಿರುಗುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 5-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಸ್ಥಿರವಾದ ಪನರೋಮಿಕ್‌ ಗ್ಲಾಸ್‌ ರೂಫ್‌, ಆಟೋಮ್ಯಾಟಿಕ್‌ ಕ್ಲೈಮೆಟ್‌ ಕಂಟ್ರೋಲ್‌, ವೈರ್‌ಲೆಸ್ ಫೋನ್ ಚಾರ್ಜರ್, 6-ಸ್ಪೀಕರ್ ಸೌಂಡ್ ಸಿಸ್ಟಮ್‌, ಎಲೆಕ್ಟ್ರಿಕ್ ಟೈಲ್‌ಗೇಟ್ ಮತ್ತು ವೆಹಿಕಲ್-2-ಲೋಡ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಡ್ರೈವರ್ ಸೀಟ್ 6-ರೀತಿಯಲ್ಲಿ ಎಲೆಕ್ಟ್ರಿಕಲ್ ಅಡ್ಜೆಸ್ಟ್ ಮಾಡಬಹುದಾದರೆ, ಕೋ-ಡ್ರೈವರ್ ಸೀಟ್ 4-ವೇ ಎಲೆಕ್ಟ್ರಿಕಲ್ ಅಡ್ಜೆಸ್ಟ್ ಮಾಡಬಹುದಾಗಿದೆ.

ಪ್ರಯಾಣಿಕರ ಸುರಕ್ಷತೆಗಾಗಿ, ಇಮ್ಯಾಕ್ಸ್‌ 7 ನಲ್ಲಿ 6 ಏರ್‌ಬ್ಯಾಗ್‌ಗಳು (ಎಲ್ಲಾ ವೇರಿಯೆಂಟ್‌ಗಳಲ್ಲಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ADASನಲ್ಲಿ(ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು) ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್‌ನಂತಹ ಫೀಚರ್‌ಗಳು ಒಳಗೊಂಡಿವೆ.

ಇದನ್ನೂ ಓದಿ: ಈ ಹಬ್ಬದ ಸೀಸನ್‌ನಲ್ಲಿ ಹೋಂಡಾ ಕಾರುಗಳ ಮೇಲೆ ರೂ 1 ಲಕ್ಷಕ್ಕಿಂತ ಹೆಚ್ಚು ಡಿಸ್ಕೌಂಟ್‌ ಪಡೆಯಿರಿ

ಬ್ಯಾಟರಿ ಪ್ಯಾಕ್‌ ರೇಂಜ್‌

ಬ್ಯಾಟರಿ ಪ್ಯಾಕ್‌

55.4 ಕಿ.ವ್ಯಾಟ್‌

71.8 ಕಿ.ವ್ಯಾಟ್‌

ಎಲೆಕ್ಟ್ರಿಕ್‌ ಮೋಟಾರ್‌ ಪವರ್‌

163 ಪಿಎಸ್‌

204 ಪಿಎಸ್‌

ಎಲೆಕ್ಟ್ರಿಕ್‌ ಮೋಟಾರ್‌ ಟಾರ್ಕ್‌

310 ಎನ್‌ಎಮ್‌

310 ಎನ್‌ಎಮ್‌

NEDC*-ಕ್ಲೈಮ್‌ ಮಾಡಿದ ರೇಂಜ್‌

420 ಕಿ.ಮೀ

530 ಕಿ.ಮೀ.

0-100 kmph ಸಮಯ

10.1 ಸೆಕೆಂಡ್‌ಗಳು

8.6 ಸೆಕೆಂಡ್‌ಗಳು

* NEDC - ನ್ಯೂ ಯುರೋಪಿಯನ್ ಡ್ರೈವಿಂಗ್ ಸೈಕಲ್

ಇದು 115 ಕಿ.ವ್ಯಾಟ್‌ವರೆಗೆ ಡಿಸಿ ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಚಿಕ್ಕ ಬ್ಯಾಟರಿ ಪ್ಯಾಕ್ 89 ಕಿ.ವ್ಯಾಟ್‌ವರೆಗೆ ಡಿಸಿ ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಎರಡೂ ಬ್ಯಾಟರಿ ಪ್ಯಾಕ್‌ಗಳು 7 ಕಿ.ವ್ಯಾಟ್‌ವರೆಗೆ ಎಸಿ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತವೆ.

ಪ್ರತಿಸ್ಪರ್ಧಿಗಳು

ಭಾರತೀಯ ಮಾರುಕಟ್ಟೆಯಲ್ಲಿ ಬಿವೈಡಿ ಇಮ್ಯಾಕ್ಸ್ 7 ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ, ಆದರೆ ಇದು ಟೊಯೋಟಾ ಇನ್ನೋವಾ ಹೈಕ್ರಾಸ್ ಮತ್ತು ಟೊಯೋಟಾ ಇನ್ನೋವಾ ಕ್ರಿಸ್ಟಾಗೆ ಇವಿ ಪರ್ಯಾಯವಾಗಿದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your Comment on BYD emax 7

M
mt varghese
Oct 9, 2024, 6:52:21 PM

What is the price of battery after guarantee period

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ