• English
  • Login / Register

Nissan Magnite ಫೇಸ್‌ಲಿಫ್ಟ್ ಬಿಡುಗಡೆ, 5.99 ಲಕ್ಷ ರೂ ಬೆಲೆ, 20 ಕಿ.ಮೀ ಮೈಲೇಜ್‌, ಮತ್ತಷ್ಟು..

ನಿಸ್ಸಾನ್ ಮ್ಯಾಗ್ನೈಟ್ ಗಾಗಿ ansh ಮೂಲಕ ಅಕ್ಟೋಬರ್ 04, 2024 06:12 pm ರಂದು ಪ್ರಕಟಿಸಲಾಗಿದೆ

  • 98 Views
  • ಕಾಮೆಂಟ್‌ ಅನ್ನು ಬರೆಯಿರಿ

ಮ್ಯಾಗ್ನೈಟ್‌ನ ಒಟ್ಟಾರೆ ವಿನ್ಯಾಸವು ಹೆಚ್ಚು ಬದಲಾಗಿಲ್ಲ, ಆದರೆ ಇದು ಹೊಸ ಕ್ಯಾಬಿನ್ ಥೀಮ್ ಮತ್ತು ಹೆಚ್ಚಿನ ಫೀಚರ್‌ಗಳೊಂದಿಗೆ ಬರುತ್ತದೆ

Nissan Magnite Facelift Launched

  • ನಿಸ್ಸಾನ್ ಮ್ಯಾಗ್ನೈಟ್ 2020 ರಲ್ಲಿ ಬಿಡುಗಡೆಯಾದಗಿನಿಂದ ಅದರ ಮೊದಲ ಪ್ರಮುಖ ಆಪ್‌ಡೇಟ್‌ ಅನ್ನು ಪಡೆದುಕೊಂಡಿದೆ.

  • ಇದು Visia, Visia+, Acenta, N-Connecta, Tekna, ಮತ್ತು Tekna+ ಎಂಬ 6 ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

  • ಭಾರತದಾದ್ಯಂತ ಫೇಸ್‌ಲಿಫ್ಟೆಡ್ ನಿಸ್ಸಾನ್ ಮ್ಯಾಗ್ನೈಟ್‌ನ ಪರಿಚಯಾತ್ಮಕ, ಎಕ್ಸ್-ಶೋರೂಮ್ ಬೆಲೆಗಳು 5.99 ಲಕ್ಷ ರೂ.ನಿಂದ ರೂ 11.50 ಲಕ್ಷದವರೆಗೆ ಇದೆ.

  • ಹೊರಭಾಗವು ಸ್ವಲ್ಪ ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್‌ ಮತ್ತು ಹೊಸ ಅಲಾಯ್‌ ವೀಲ್‌ಗಳನ್ನು ಒಳಗೊಂಡಂತೆ ಕಡಿಮೆ ವಿನ್ಯಾಸ ಬದಲಾವಣೆಗಳನ್ನು ಪಡೆಯುತ್ತದೆ.

  • ಕ್ಯಾಬಿನ್ ಮೊದಲಿನಂತೆಯೇ ವಿನ್ಯಾಸವನ್ನು ಹೊಂದಿದೆ ಆದರೆ ಇದು ಹೊಸ ಕಪ್ಪು ಮತ್ತು ಆರೆಂಜ್‌ ಥೀಮ್‌ನಲ್ಲಿ ಬರುತ್ತದೆ.

  • ಫೀಚರ್‌ಗಳು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, 6 ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿವೆ.

  • ಅದೇ 1-ಲೀಟರ್ ಪೆಟ್ರೋಲ್ ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಪ್ರಿ-ಫೇಸ್‌ಲಿಫ್ಟ್ ಆವೃತ್ತಿಯಂತೆ ಬರುತ್ತದೆ.

ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ, ಭಾರತದಾದ್ಯಂತ ಇದರ ಪರಿಚಯಾತ್ಮಕ, ಎಕ್ಸ್-ಶೋರೂಮ್ ಬೆಲೆಗಳು 5.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ ಮತ್ತು ಇದು ಭಾರತೀಯ ಮಾರುಕಟ್ಟೆಗೆ ಆಗಮಿಸಿದ ಸುಮಾರು ನಾಲ್ಕು ವರ್ಷಗಳ ನಂತರ ಅದರ ಮಿಡ್-ಲೈಫ್ ಆಪ್‌ಡೇಟ್‌ ಅನ್ನು ಪಡೆದುಕೊಂಡಿದೆ. ಫೇಸ್‌ಲಿಫ್ಟೆಡ್ ಆವೃತ್ತಿಯು ಹೊರಹೋಗುವ ಆವೃತ್ತಿಗಿಂತ ಸೂಕ್ಷ್ಮವಾದ ಹಾಗು ಗಮನಾರ್ಹ ವಿನ್ಯಾಸ ಬದಲಾವಣೆಗಳನ್ನು ಪಡೆಯುತ್ತದೆ ಮತ್ತು ಇದು ಕೆಲವು ಹೊಸ ಫೀಚರ್‌ಗಳೊಂದಿಗೆ ಬರುತ್ತದೆ. ಹೊಸ ಮ್ಯಾಗ್ನೈಟ್‌ಗಾಗಿ ಬುಕ್ಕಿಂಗ್‌ಗಳು ನಡೆಯುತ್ತಿವೆ, ಮ್ಯಾಗ್ನೈಟ್ ಫೇಸ್‌ಲಿಫ್ಟ್ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.

ಬೆಲೆ

ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆ

ವೇರಿಯೆಂಟ್‌

1-ಲೀಟರ್‌ ಪೆಟ್ರೋಲ್‌

1-ಲೀಟರ್‌ ಟರ್ಬೋ ಪೆಟ್ರೋಲ್‌

ಮ್ಯಾನುವಲ್‌

ಎಎಮ್‌ಟಿ

ಮ್ಯಾನುವಲ್‌

ಸಿವಿಟಿ

ವಿಸಿಯಾ

5.99 ಲಕ್ಷ ರೂ.

6.60 ಲಕ್ಷ ರೂ.

-

-

ವಿಸಿಯಾ +

6.49 ಲಕ್ಷ ರೂ.

-

-

-

ಅಸೆಂಟಾ

7.14 ಲಕ್ಷ ರೂ.

7.64 ಲಕ್ಷ ರೂ.

-

9.79 ಲಕ್ಷ ರೂ.

ಎನ್-ಕನೆಕ್ಟಾ

7.86 ಲಕ್ಷ ರೂ.

8.36 ಲಕ್ಷ ರೂ.

9.19 ಲಕ್ಷ ರೂ.

10.34 ಲಕ್ಷ ರೂ.

ಟೆಕ್ನಾ

8.75 ಲಕ್ಷ ರೂ.

9.25 ಲಕ್ಷ ರೂ.

9.99 ಲಕ್ಷ ರೂ.

11.14 ಲಕ್ಷ ರೂ.

ಟೆಕ್ನಾ+

9.10 ಲಕ್ಷ ರೂ.

9.60 ಲಕ್ಷ ರೂ.

10.35 ಲಕ್ಷ ರೂ.

11.50 ಲಕ್ಷ ರೂ.

ನೀವು ಮ್ಯಾನುವಲ್‌ಗಿಂತ ಎಎಮ್‌ಟಿ ವೆರಿಯೆಂಟ್‌ಗಳಿಗಾಗಿ 50,000 ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ ಮತ್ತು ಸಿವಿಟಿಯ ಬೆಲೆಯು 1.15 ಲಕ್ಷ ರೂ.ನಷ್ಟು ದುಬಾರಿಯಾಗಿದೆ. ಹೊಸ ಮ್ಯಾಗ್ನೈಟ್‌ನ ಆರಂಭಿಕ ಬೆಲೆಯು ಹೊರಹೋಗುವ ಆವೃತ್ತಿಯಂತೆಯೇ ಇರುತ್ತದೆ, ಆದರೆ ಇವುಗಳು ಪರಿಚಯಾತ್ಮಕ ಬೆಲೆಗಳಾಗಿವೆ, ಇದು ಮೊದಲ 10,000 ಕಾರು ಡೆಲಿವೆರಿಗೆ ಅನ್ವಯವಾಗಲಿದೆ. 

ಡಿಸೈನ್‌ನಲ್ಲಿ ಕಡಿಮೆ ಬದಲಾವಣೆ

Nissan Magnite Facelift Front

ಪ್ರೀ ಫೇಸ್‌ಲಿಫ್ಟ್ ಆವೃತ್ತಿಗೆ ಹೋಲಿಸಿದರೆ, ಹೊಸ ಮ್ಯಾಗ್ನೈಟ್ ಹೆಚ್ಚು ಭಿನ್ನವಾಗಿ ಕಾಣುತ್ತಿಲ್ಲ. ಮುಂಭಾಗದಲ್ಲಿ, ಇದು ಹೊರಹೋಗುವ ಆವೃತ್ತಿಯಂತೆಯೇ ಅದೇ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಬೂಮರಾಂಗ್-ಆಕಾರದ ಡಿಆರ್‌ಎಲ್‌ಗಳನ್ನು ಪಡೆಯುತ್ತದೆ ಮತ್ತು ಗ್ರಿಲ್ ಸಹ ಇದೇ ವಿನ್ಯಾಸವನ್ನು ಹೊಂದಿದೆ, ಆದರೆ ಈಗ ಸ್ವಲ್ಪ ದೊಡ್ಡದಾಗಿದೆ. ಹಾಗೆಯೇ, ಗ್ರಿಲ್ ವಿಭಿನ್ನ ವಿನ್ಯಾಸದ ಅಂಶಗಳನ್ನು ಹೊಂದಿದೆ, ಮತ್ತು ಸಿ-ಆಕಾರದ ಕ್ರೋಮ್ ಆಕ್ಸೆಂಟ್‌ಗಳು ಇನ್ನೂ ಒಂದೇ ಆಗಿದ್ದರೂ, ಅದು ಈಗ ಹೊಳೆಯುವ ಕಪ್ಪು ಸರೌಂಡ್ ಅನ್ನು ಪಡೆಯುತ್ತದೆ.

ಫಾಗ್ ಲ್ಯಾಂಪ್‌ಗಳ ಸ್ಥಾನವೂ ಬದಲಾಗಿದೆ ಮತ್ತು ಸ್ವಲ್ಪ ಒಳಭಾಗಕ್ಕೆ ಇರಿಸಲಾಗಿದೆ ಮತ್ತು ಮುಂಭಾಗದ ಬಂಪರ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ ಅದು ಈಗ ಆಕ್ರಮಣಕಾರಿ ವಿನ್ಯಾಸದ ಸ್ಕಿಡ್ ಪ್ಲೇಟ್‌ನೊಂದಿಗೆ ಬರುತ್ತದೆ.

Nissan Magnite Facelift Alloy Wheels

ಬದಿಗಳಲ್ಲಿ ಸಹ ಬದಲಾವಣೆಗಳು ಅಷ್ಟೊಂದು ಕಾಣುವುದಿಲ್ಲ. ಬಾಡಿಯ ಆಕೃತಿ ಒಂದೇ ಆಗಿರುತ್ತದೆ ಮತ್ತು ಇಲ್ಲಿ ಕೇವಲ ಪ್ರಮುಖ ಬದಲಾವಣೆಯೆಂದರೆ ಹೊಸದಾಗಿ ವಿನ್ಯಾಸಗೊಳಿಸಲಾದ 16-ಇಂಚಿನ ಡ್ಯುಯಲ್-ಟೋನ್ ಅಲಾಯ್‌ ವೀಲ್‌ಗಳು.

Nissan Magnite Facelift LED Tail Lamps

ಹಿಂಭಾಗದಲ್ಲಿ, ಬೂಟ್ ಲಿಪ್ ಮತ್ತು ಬಂಪರ್‌ಗಳು ಪೂರ್ವ-ಫೇಸ್‌ಲಿಫ್ಟ್ ಆವೃತ್ತಿಯಂತೆಯೇ ಇರುತ್ತವೆ, ಆದರೆ ಎಲ್‌ಇಡಿ ಟೈಲ್ ಲ್ಯಾಂಪ್‌ಗಳನ್ನು ಸ್ವಲ್ಪಮಟ್ಟಿಗೆ ಟ್ವೀಕ್ ಬದಲಾವಣೆ ಮಾಡಲಾಗಿದೆ ಮತ್ತು ವಿಭಿನ್ನ ಆಂತರಿಕ ಲೈಟಿಂಗ್‌ ಸೆಟಪ್‌ ಅನ್ನು ಹೊಂದಿದೆ.

ಒಂದೇ ರೀತಿಯ ಕ್ಯಾಬಿನ್‌

Nissan Magnite Facelift Dashboard

ಹೊರಭಾಗದಲ್ಲಿರುವಂತೆಯೇ, ಕ್ಯಾಬಿನ್ ಕೂಡ ಕನಿಷ್ಠ ಬದಲಾವಣೆಗಳನ್ನು ಪಡೆಯುತ್ತದೆ. ಡ್ಯಾಶ್‌ಬೋರ್ಡ್ ಮೊದಲಿನಂತೆಯೇ ವಿನ್ಯಾಸವನ್ನು ಹೊಂದಿದೆ, ಆದರೆ ಇದು ಈಗ ಹೊಸ ಕಪ್ಪು ಮತ್ತು ಆರೆಂಜ್‌ ಥೀಮ್‌ನಲ್ಲಿ ಬರುತ್ತದೆ. ಎಸಿ ವೆಂಟ್‌ಗಳು, ಪರದೆಯ ಆಕಾರ ಮತ್ತು ಸ್ಟೀರಿಂಗ್ ವೀಲ್ ಸಹ ಒಂದೇ ಆಗಿರುತ್ತದೆ. ಆದರೆ, ಡ್ಯಾಶ್‌ಬೋರ್ಡ್‌ ಮತ್ತು ಡೋರ್‌ನಲ್ಲಿನ ಎಲ್ಲಾ ಆರೆಂಜ್‌ ಅಂಶಗಳನ್ನು ಸಾಫ್ಟ್‌-ಟಚ್ ಲೆಥೆರೆಟ್ ಪ್ಯಾಡಿಂಗ್‌ನಲ್ಲಿ ಫಿನಿಶ್‌ ಮಾಡಲಾಗಿದೆ. 

Nissan Magnite Facelift Seats

ಸೆಂಟರ್ ಕನ್ಸೋಲ್ ಹಳೆಯ ವಿನ್ಯಾಸವನ್ನು ಹೊಂದಿದೆ, ಇದು ಮೇಲ್ಭಾಗದಲ್ಲಿ ಎಸಿ ಕಂಟ್ರೋಲ್‌ಗಳನ್ನು ಹೊಂದಿದೆ, ಮಧ್ಯದಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕೆಳಭಾಗದಲ್ಲಿ ಸ್ಟೋರೆಜ್‌ ಪ್ರದೇಶವನ್ನು ಹೊಂದಿದೆ. ಆಸನಗಳು ಡ್ಯುಯಲ್-ಟೋನ್ ಕಪ್ಪು ಮತ್ತು ಆರೆಂಜ್‌ ಫಿನಿಶ್‌ ಅನ್ನು ಸಹ ಪಡೆಯುತ್ತವೆ, ಹಾಗೆಯೇ ಹೊಸದು ಲೆಥೆರೆಟ್ ಕವರ್‌ ಅನ್ನು ಪಡೆಯುತ್ತದೆ.

Nissan Magnite Facelift Dashboard

ಇನ್ನೂ ಕೆಲವು ಬದಲಾವಣೆಗಳೂ ಇವೆ. ಡ್ಯಾಶ್‌ಬೋರ್ಡ್ ಆಂಬಿಯೆಂಟ್ ಲೈಟಿಂಗ್ ಸ್ಟ್ರಿಪ್ ಅನ್ನು ಪಡೆಯುತ್ತದೆ, ಗೇರ್ ನಾಬ್‌ನ ಸುತ್ತಲೂ ಕ್ರೋಮ್ ಅಂಶಗಳಿವೆ ಮತ್ತು ಡೋರ್ ಪ್ಯಾಡ್‌ಗಳಲ್ಲಿ ಕ್ರೋಮ್ ಅಂಶಗಳಿವೆ.

ಫೀಚರ್‌ ಮತ್ತು ಸುರಕ್ಷತೆ

Nissan Magnite Facelift Touchscreen

ಫೇಸ್‌ಲಿಫ್ಟೆಡ್ ಮ್ಯಾಗ್ನೈಟ್ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮ್ಯಾಟಿಕ್‌ ಕ್ಲೈಮೇಟ್ ಕಂಟ್ರೋಲ್, 4-ಕಲರ್ ಆಂಬಿಯೆಂಟ್ ಲೈಟಿಂಗ್ ಮತ್ತು 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯೊಂದಿಗೆ ಬರುತ್ತದೆ.

ಇದನ್ನೂ ಓದಿ: ಈ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಎಲ್ಲಾ ಕಾರುಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಪಟ್ಟಿ..

ಸುರಕ್ಷತೆಯ ದೃಷ್ಟಿಯಿಂದ, ಇದು 6 ಸ್ಟ್ಯಾಂಡರ್ಡ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಮ್‌ಎಸ್‌), ಆಟೋ-ಡಿಮ್ಮಿಂಗ್‌ IRVM, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾದೊಂದಿಗೆ ಬರುತ್ತದೆ. 

ಅದೇ ಪವರ್‌ಟ್ರೈನ್‌

ವಿನ್ಯಾಸ ಮತ್ತು ಫೀಚರ್‌ಗಳಲ್ಲಿ ಕೆಲವು ಬದಲಾವಣೆಗಳು ಕಂಡುಬಂದರೂ, ಮ್ಯಾಗ್ನೈಟ್ ಫೇಸ್‌ಲಿಫ್ಟ್‌ನ ಪವರ್‌ಟ್ರೇನ್ ಪೂರ್ವ-ಫೇಸ್‌ಲಿಫ್ಟ್ ಆವೃತ್ತಿಯಂತೆಯೇ ಇರುತ್ತದೆ. 

ಎಂಜಿನ್‌

1-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್

1-ಲೀಟರ್ ಟರ್ಬೊ-ಪೆಟ್ರೋಲ್

ಪವರ್‌

72 ಪಿಎಸ್‌

100 ಪಿಎಸ್‌

ಟಾರ್ಕ್‌

96 ಎನ್‌ಎಮ್‌

160 ಎನ್‌ಎಮ್‌ ವರೆಗೆ

ಗೇರ್‌ಬಾಕ್ಸ್‌

5-ಸ್ಪೀಡ್ ಮ್ಯಾನುವಲ್‌, 5-ಸ್ಪೀಡ್ AMT

5-ಸ್ಪೀಡ್ ಮ್ಯಾನುವಲ್‌, ಸಿವಿಟಿ*

ಇಂಧನ ದಕ್ಷತೆ

ಇನ್ನೂ ಘೋಷಣೆಯಾಗಿಲ್ಲ

20 kmph (ಮ್ಯಾನುವಲ್‌), 17.4 kmpl (ಸಿವಿಟಿ)

*ಸಿವಿಟಿ- ಕಂಟಿನ್ಯೂಸ್ಲಿ ವೇರಿಯಬಲ್ ಟ್ರಾನ್ಸ್ಮಿಷನ್

ಪ್ರತಿಸ್ಪರ್ಧಿಗಳು

 ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಇತರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಾದ ರೆನಾಲ್ಟ್ ಕಿಗರ್, ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್, ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ ಮತ್ತು ಮಹೀಂದ್ರಾ ಎಕ್ಸ್‌ಯುವಿ 3XO ಗಳ ವಿರುದ್ಧ ಸ್ಪರ್ಧಿಸುತ್ತದೆ. ಇದು ಟೊಯೋಟಾ ಟೈಸರ್ ಮತ್ತು ಮಾರುತಿ ಫ್ರಾಂಕ್ಸ್‌ನಂತಹ ಸಬ್‌-4ಮೀ ಕ್ರಾಸ್‌ಒವರ್‌ಗಳಿಗೆ ಸಹ ಸ್ಪರ್ಧೆಯನ್ನು ಒಡ್ಡುತ್ತದೆ. 

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ : ಮ್ಯಾಗ್ನೈಟ್‌ 2024 ಎಎಮ್‌ಟಿ

was this article helpful ?

Write your Comment on Nissan ಮ್ಯಾಗ್ನೈಟ್

2 ಕಾಮೆಂಟ್ಗಳು
1
S
sandeep singh
Oct 5, 2024, 12:31:18 PM

Koi discount to hai ni kpkb me

Read More...
    ಪ್ರತ್ಯುತ್ತರ
    Write a Reply
    1
    A
    adnan khan
    Oct 5, 2024, 12:16:48 PM

    Nice & beautiful designing new Nissan magnite faseleft

    Read More...
      ಪ್ರತ್ಯುತ್ತರ
      Write a Reply

      Similar cars to compare & consider

      ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

      ಕಾರು ಸುದ್ದಿ

      • ಟ್ರೆಂಡಿಂಗ್ ಸುದ್ದಿ
      • ಇತ್ತಿಚ್ಚಿನ ಸುದ್ದಿ

      trending ಎಸ್‌ಯುವಿ ಕಾರುಗಳು

      • ಲೇಟೆಸ್ಟ್
      • ಉಪಕಮಿಂಗ್
      • ಪಾಪ್ಯುಲರ್
      ×
      We need your ನಗರ to customize your experience