• English
  • Login / Register

BYD ಹೊರತರಲಿದೆ ಹೊಸ ಸೀಗಲ್‌ ಎಲೆಕ್ಟ್ರಿಕ್‌ ಹ್ಯಾಚ್‌ ಬ್ಯಾಕ್

ಆಗಸ್ಟ್‌ 18, 2023 03:47 pm ರಂದು shreyash ಮೂಲಕ ಪ್ರಕಟಿಸಲಾಗಿದೆ

  • 24 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಸೀಗಲ್‌, BYD ಯ ಅತ್ಯಂತ ಸಣ್ಣ ಹ್ಯಾಚ್‌ ಬ್ಯಾಕ್‌ ಎನಿಸಿದ್ದು, ಸಿಟ್ರಾನ್ eC3‌ ಗೆ ಸ್ಪರ್ಧೆಯೊಡ್ಡಲಿದೆ.

BYD Seagull

  •  BYD ಸೀಗಲ್, ಭಾರತಕ್ಕೆ ಬರಲಿರುವ‌ ಪ್ರವೇಶ ಹಂತದ ಎಲೆಕ್ಟ್ರಿಕ್‌ ಹ್ಯಾಚ್‌ ಬ್ಯಾಕ್‌ ಆಗಿದೆ. 

  •  ಇದರ ಬುಕಿಂಗ್‌ ಈಗಾಗಲೇ ಚೀನಾದಲ್ಲಿ ಪ್ರಾರಂಭಗೊಂಡಿದ್ದು, ಮಾರಾಟ ಪೂರ್ವದ ಬೆಲೆಯನ್ನು 78,800 RMB ಯಿಂದ 95,800 RMB ನಡುವೆ (ಸುಮಾರು ರೂ. 9 ಲಕ್ಷದಿಂದ ರೂ. 11 ಲಕ್ಷ) ನಿಗದಿಪಡಿಸಲಾಗಿದೆ.

  •  ಈ ಸೀಗಲ್‌ ಎರಡು ಬ್ಯಾಟರಿ ಪ್ಯಾಕ್‌ ಆಯ್ಕೆಗಳನ್ನು ಹೊಂದಿದೆ – 30kWh ಮತ್ತು 38 kWh – ಹಾಗೂ 405km ತನಕ ಗರಿಷ್ಠ ಡ್ರೈವಿಂಗ್‌ ಶ್ರೇಣಿ ಇದೆ.

  •  ಇದು ಭಾರತದಲ್ಲಿ 2024 ರ ಸುಮಾರಿಗೆ ಬಿಡುಗಡೆಯಾಗಲಿದೆ.

 BYD ಸೀಗಲ್, ಈ ಬ್ರಾಂಡಿನ ಹೊಸ ಸಣ್ಣ ಎಲೆಕ್ಟ್ರಿಕ್‌ ಹ್ಯಾಚ್‌ ಬ್ಯಾಕ್‌ ಎನಿಸಿರುವ ಇದನ್ನು ಭಾರತದಲ್ಲಿ ಟ್ರೇಡ್‌ ಮಾರ್ಕ್‌ ಗಾಗಿ ನೋಂದಣಿ ಮಾಡಲಾಗಿದೆ. ಈ ಸೀಗಲ್‌, BYD ಯ ಅತ್ಯಂತ ಸಣ್ಣ  EV ಎನಿಸಿದ್ದು, ಇದನ್ನು ಅಟೋ ಶಾಂಘೈ 2023 ಮೋಟರ್‌ ಶೋದಲ್ಲಿ ಪ್ರದರ್ಶಿಸಲಾಗಿತ್ತು. ಇದು ಭಾರತದ ಮಟ್ಟಿಗೆ ಏನನ್ನು ಹೊತ್ತು ತರುತ್ತದೆ ಎಂಬುದನ್ನು ನೋಡೋಣ:

 

ಇದು ಹೇಗೆ ಕಾಣಿಸಿಕೊಳ್ಳುತ್ತದೆ?

BYD Seagull

ಈ ಸೀಗಲ್‌ ಕಾರು 5 ಬಾಗಿಲುಗಳ ಹ್ಯಾಚ್‌ ಬ್ಯಾಕ್‌ ಆಗಿದ್ದು, ಕಡಿದಾದ ಅಂಚುಗಳೊಂದಿಗೆ ಟಾಲ್‌ ಬಾಯ್‌ ವಿನ್ಯಾಸವನ್ನು ಹೊಂದಿದೆ. ಇದರ ಹೆಡ್‌ ಲೈಟ್‌ ಕ್ಲಸ್ಟರ್‌ ಕಡಿದಾಗಿದ್ದರೆ, ಬಂಪರ್‌ ನ ವಿನ್ಯಾಸವು ದೃಢವಾಗಿ ಕಾಣಿಸುತ್ತದೆ. ಪಕ್ಕದಿಂದ ನೋಡಿದರೆ, ಇದು ಮೇಲೇರುವ ವಿಂಡೋಲೈನ್‌ ಮತ್ತು ರೂಫ್‌ ಇಂಟಗ್ರೇಟೆಡ್‌ ಸ್ಪಾಯ್ಲರ್‌ ಜೊತೆಗೆ ಸ್ಪೋರ್ಟಿಯಾಗಿ ಕಾಣಸಿಕೊಳ್ಳುತ್ತದೆ. ಹಿಂದಿನಿಂದ ಗಮನಿಸಿದಾಗ, ಸಂಪರ್ಕಿತ LED ಟೇಲ್‌ ಲ್ಯಾಂಪುಗಳು ಇದರ ನೋಟವನ್ನು ಇನ್ನಷ್ಟು ಮನಮೋಹಕಗೊಳಿಸುತ್ತವೆ.

ಇದನ್ನು ಸಹ ಓದಿರಿ: ಭಾರತದಲ್ಲಿ BYDಯ $1 ಬಿಲಿಯ ಹೂಡಿಕೆ ಪ್ರಸ್ತಾಪಕ್ಕೆ ಕೆಂಪು ನಿಶಾನೆ: ಏನಾಯಿತು ಎಂಬುದನ್ನು ಇಲ್ಲಿ ಓದಿರಿ

 

 ವೈಶಿಷ್ಟ್ಯಗಳು

BYD Seagull EV cabin

ಇದು ಪ್ರವೇಶ ಹಂತದ ಕಾರು ಆಗಿದ್ದರೂ, MG ಕಾಮೆಟ್ EV‌ ಯಂತಹ ವೈಭೋಗದ ಒಳಾಂಗಣವನ್ನು ಹೊಂದಿದೆ. BYD ಸೀಗಲ್‌ ವಾಹನದ ಒಳಾಂಗಣ ವಿನ್ಯಾಸವು, BYD ಅಟ್ಟೊ 3 ಕಾರಿನಿಂದ ಸಾಕಷ್ಟು ಮಟ್ಟಿಗೆ ಪ್ರೇರಣೆ ಪಡೆದಿದ್ದು, ಎರಡೂ ವಾಹನಗಳು ಒಂದೇ ರೀತಿಯ ಸ್ಟಿಯರಿಂಗ್‌ ವೀಲ್‌ ಮತ್ತು ಡ್ಯಾಶ್‌ ಬೋರ್ಡ್‌ ವಿನ್ಯಾಸವನ್ನು ಹೊಂದಿವೆ. ಈ ಸೀಗಲ್‌ ನಲ್ಲಿ ದೊಡ್ಡದಾದ ಟಚ್‌ ಸ್ಕ್ರೀನ್‌ ಇದ್ದು, ಇದನ್ನು ಪೋರ್ಟ್ರೇಟ್‌ ಮತ್ತು ಲ್ಯಾಂಡ್‌ ಸ್ಕೇಪ್‌ ಗಾತ್ರಕ್ಕೆ ತಿರುಗಿಸಬಹುದು. ಇಷ್ಟೇ ಅಲ್ಲದೆ ಚಾಲಕನಿಗಾಗಿ ಕಾಂಪ್ಯಾಕ್ಟ್‌ ಡಿಜಿಟಲ್‌ ಡಿಸ್ಪ್ಲೇ ಮತ್ತು ವೈರ್‌ ಲೆಸ್‌ ಚಾರ್ಜಿಂಗ್‌ ಅನ್ನು ಇದರಲ್ಲಿ ನೀಡಲಾಗಿದೆ.

ಬ್ಯಾಟರಿ ಪ್ಯಾಕ್‌ ಮತ್ತು ಶ್ರೇಣಿ

BYD Trademarks New Seagull Electric Hatchback In India

ಇದರ ತಾಂತ್ರಿಕ ವಿವರಗಳ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿಯು ಲಭ್ಯವಿಲ್ಲದೆ ಇದ್ದರೂ, ವರದಿಗಳ ಪ್ರಕಾರ ಸೀಗಲ್‌ ವಾಹನವು ಬ್ಯಾಟರಿ ಪ್ಯಾಕ್‌ ಗಳ ಎರಡು ಆಯ್ಕೆಗಳೊಂದಿಗೆ ದೊರೆಯಲಿದೆ: 30kWh ಮತ್ತು 38kWh. ಮೊದಲನೆಯ ಆಯ್ಕೆಯು 74PS ಎಲೆಕ್ಟ್ರಿಕ್‌ ಮೋಟಾರ್‌ ನೊಂದಿಗೆ ಬಂದರೆ, ಎರಡನೆಯದ್ದು 100PS ಎಲೆಕ್ಟ್ರಿಕ್‌ ಮೋಟಾರ್‌ ಜೊತೆಗೆ ಬರಲಿದೆ. ಜೊತೆಗೆ ಕ್ರಮವಾಗಿ 305 km ಮತ್ತು 405 km ದೂರದವರೆಗೆ ವಾಹನವನ್ನು ಚಲಾಯಿಸಬಹುದಾಗಿದೆ.

ಇದನ್ನು ಸಹ ನೋಡಿರಿ: 2023ರ ದ್ವಿತೀಯಾರ್ಧದಲ್ಲಿ ಹೊರಬರಲಿರುವ 10 ಕಾರುಗಳಿವು

 

 

BYD ಸೀ ಲಯನ್‌ ಟ್ರೇಡ್‌ ಮಾರ್ಕ್‌ ಅಸ್ತಿತ್ವಕ್ಕೆ

BYD Trademarks New Seagull Electric Hatchback In India

 ಭಾರತದಲ್ಲಿ EV ಮಾರಾಟದ ಭವಿಷ್ಯವನ್ನು ಗಮನಿಸಿ, BYD ಸಂಸ್ಥೆಯು “ಸೀ ಲಯನ್” ಪ್ರೀಮಿಯಂ ಕೊಡುಗೆಯನ್ನು ಟ್ರೇಡ್‌ ಮಾರ್ಕ್‌ ಮಾಡಿದೆ. ಈ ಮಾದರಿಯ ಮೂಲರೂಪವು ಭಾರತದ ಹೊರಗೆ ಕಾಣಸಿಕ್ಕಿದ್ದು, ಈ ಬ್ರಾಂಡಿನ ಪಟ್ಟಿಯಲ್ಲಿ ಸದ್ಯಕ್ಕೆ ಲಭ್ಯವಿರುವ ಅಟ್ಟೊ 3 ವಾಹನಕ್ಕಿಂತಲೂ ಮೇಲಿನ ಸ್ತರದಲ್ಲಿ ಇದನ್ನು ಮಾರುಕಟ್ಟಗೆ ಬಿಡುಗಡೆ ಮಾಡಲಾಗುತ್ತದೆ. 

ಅಟ್ಟೊ 3 (60.48kWh ಯೂನಿಟ್)‌ ವಾಹನದಲ್ಲಿರುವ ಬ್ಯಾಟರಿ ಪ್ಯಾಕ್‌ ಅನ್ನೇ ಇದರಲ್ಲಿ ಬಳಸುವ ಸಾಧ್ಯತೆ ಇದ್ದು, 204PS ಮತ್ತು 310Nm ಉಂಟು ಮಾಡುವ ಎಲೆಕ್ಟ್ರಿಕ್‌ ಮೋಟಾರ್‌ ಜೊತೆಗೆ ಇದನ್ನು ಸಂಯೋಜಿಸಲಾಗುತ್ತದೆ. ಇದು ಸುಮಾರು 521km ದೂರದ ಚಾಲನಾ ಶ್ರೇಣಿಯನ್ನು ಹೊಂದಿರಲಿದೆ. ದೊಡ್ಡ ಬ್ಯಾಟರಿ ಪ್ಯಾಕ್‌ ಜೊತೆಗೆ ಆಲ್‌ ವೀಲ್‌ ಡ್ರೈವ್‌ ಟ್ರೇನ್‌ ಮತ್ತು ಇನ್ನೂ ಹೆಚ್ಚಿನ ಶ್ರೇಣಿಯೊಂದಿಗೆ ಇದು ರಸ್ತೆಗೆ ಇಳಿಯಲಿದೆ.

ಸೀಗಲ್‌ ಮತ್ತು ಸೀ ಲಯನ್‌ ಕಾರುಗಳ ಬಿಡುಗಡೆಯ ನಿರೀಕ್ಷೆ

BYD Seagull EV rear

 BYD ಸೀಗಲ್‌ ಎಲೆಕ್ಟ್ರಿಕ್‌ ಹ್ಯಾಚ್‌ ಬ್ಯಾಕ್‌ ಕಾರು 2024ರ ಸುಮಾರಿಗೆ ಭಾರತಕ್ಕೆ ಕಾಲಿಡಲಿದೆ. ಚೀನಾದಲ್ಲಿ ಇದರ ಮಾರಾಟ ಪೂರ್ವದ ಬೆಲೆಯನ್ನು 78,800 RMB ಯಿಂದ 95,800 RMB ನಡುವೆ (ಸುಮಾರು ರೂ. 9 ಲಕ್ಷದಿಂದ ರೂ. 11 ಲಕ್ಷ) ನಿಗದಿಪಡಿಸಲಾಗಿದೆ. ಭಾರತದಲ್ಲಿ ಇದರ ಬೆಲೆಯು ರೂ. 10 ಲಕ್ಷದಿಂದ (ಎಕ್ಸ್‌ - ಶೋರೂಂ) ಪ್ರಾರಂಭಗೊಳ್ಳುವ ಸಾಧ್ಯತೆ ಇದೆ.  

 ಇದು MG ಕಾಮೆಟ್ EV, ಟಾಟಾ ತಿಯಾಗೊ EV, ಮತ್ತು ಸಿಟ್ರಾನ್ eC3ಗೆ ಸ್ಪರ್ಧೆ ನೀಡಲಿದೆ. ಇದೇ ವೇಳೆ ಸೀ ಲಯನ್‌ ವಾಹನವು ನಂತರದ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದ್ದು ಬೆಲೆಯು ಸುಮಾರು ರೂ. 35 ಲಕ್ಷದಿಂದ (ಎಕ್ಸ್‌ - ಶೋರೂಂ) ಪ್ರಾರಂಭಗೊಳ್ಳಲಿದೆ. ಅಲ್ಲದೆ ಇದು ಹ್ಯುಂಡೇ ಅಯೋನಿಕ್ 5 ಮತ್ತು ವೋಲ್ವೊ XC40 ರೀಚಾರ್ಜ್‌ ಇತ್ಯಾದಿಗಳಿಗೆ ಪರ್ಯಾಯವೆನಿಸಲಿದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience