• English
  • Login / Register

ಈ ವಿವರವಾದ ಗ್ಯಾಲರಿಯಲ್ಲಿ MG Gloster Snowstorm ಎಡಿಷನ್‌ ಬಗ್ಗೆ ತಿಳಿಯೋಣ

modified on ಜೂನ್ 10, 2024 07:21 pm by ansh for ಎಂಜಿ ಗ್ಲೋಸ್ಟರ್

  • 30 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಸ್ಪೇಷಲ್‌ ಎಡಿಷನ್‌ ಟಾಪ್-ಸ್ಪೆಕ್ ಸ್ಯಾವಿ ಟ್ರಿಮ್ ಅನ್ನು ಆಧರಿಸಿದ್ದು ಮತ್ತು 7-ಸೀಟರ್‌ ಸಂರಚನೆಯಲ್ಲಿ ಮಾತ್ರ ಲಭ್ಯವಿದೆ

MG Gloster Snowstorm

MG ಗ್ಲೋಸ್ಟರ್ ಇತ್ತೀಚೆಗೆ ಡೆಸರ್ಟ್ ಸ್ಟಾರ್ಮ್ ಮತ್ತು ಸ್ನೋಸ್ಟಾರ್ಮ್ ಎಂಬ ಎರಡು ಹೊಸ ವಿಶೇಷ ಸ್ಟಾರ್ಮ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ, ಇದು ಹೆಚ್ಚು ರಗಡ್‌ಗಾಗಿ ಲುಕ್‌ಗಾಗಿ ಹೊರಭಾಗ ಮತ್ತು ಒಳಭಾಗಕ್ಕೆ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಬರುತ್ತದೆ. ಈ ವಿಶೇಷ ಆವೃತ್ತಿಗಳು ಡೀಲರ್‌ಶಿಪ್‌ಗಳನ್ನು ಈಗಾಗಲೇ ತಲುಪಿರುವುದರಿಂದ, ನಾವು ಈ ಸ್ನೋಸ್ಟಾರ್ಮ್ ಆವೃತ್ತಿಯ ಚಿತ್ರಗಳನ್ನು ಸೆರೆಹಿಡಿದಿದ್ದೇವೆ. ಕೆಳಗಿನ 10 ಚಿತ್ರಗಳ ವಿವರವಾದ ಗ್ಯಾಲರಿಯಲ್ಲಿ ಅದನ್ನು ನೋಡೋಣ.

ಎಕ್ಸ್‌ಟಿರೀಯರ್‌

MG Gloster Snowstorm Grille

ಸ್ನೋಸ್ಟಾರ್ಮ್ ಎಡಿಷನ್‌ನಲ್ಲಿ ನೀವು ಗಮನಿಸುವ ಮೊದಲ ವಿಷಯವೆಂದರೆ ಹೊಸ "ಪರ್ಲ್ ವೈಟ್" ಕಲರ್‌. ಮುಂಭಾಗದಲ್ಲಿ, ಇದು ಮರುವಿನ್ಯಾಸಗೊಳಿಸಲಾದ ಗ್ರಿಲ್, ಕಪ್ಪು ಬಂಪರ್ ಮತ್ತು ಬಂಪರ್ ಅಡಿಯಲ್ಲಿ ಕೆಂಪು ಇನ್ಸರ್ಟ್‌ಗೆ ಕಪ್ಪು ಟ್ರೀಟ್‌ ಅನ್ನು ಪಡೆಯುತ್ತದೆ.

MG Gloster Snowstorm Headlights

ಇದು ಕಪ್ಪು ಪ್ಲೇಟ್‌ನ (ಸ್ಮೋಕ್‌ಡ್‌) ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಸಹ ಪಡೆಯುತ್ತದೆ, ಇದು ಕೆಂಪು ಸಾರವನ್ನು ಹೊಂದಿದೆ.

MG Gloster Snowstorm Side

ಬದಿಯಿಂದ ಗಮನಿಸುವಾಗ, ಇದು ಕೆಂಪು ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಸಂಪೂರ್ಣ ಕಪ್ಪು 19-ಇಂಚಿನ ಅಲಾಯ್‌ ವೀಲ್‌ಗಳನ್ನು ಪಡೆಯುತ್ತದೆ ಮತ್ತು ಡೋರ್ ಹ್ಯಾಂಡಲ್‌ಗಳನ್ನು ವ್ಯತಿರಿಕ್ತ ಕಪ್ಪು ಕಲರ್‌ನಲ್ಲಿ ಫಿನಿಶ್‌ ಮಾಡಲಾಗಿದೆ. 

MG Gloster Snowstorm ORVM
MG Gloster Snowstorm Badge

ಇಲ್ಲಿ, ORVM ಗಳು ಹೊಳಪು ಕೆಂಪು ಇನ್ಸರ್ಟ್‌ಗಳೊಂದಿಗೆ ಹೊಳಪು ಕಪ್ಪು ಕಲರ್‌ನಲ್ಲಿಯೂ ಇವೆ, ಮತ್ತು ನೀವು ಮುಂಭಾಗದ ಫೆಂಡರ್‌ಗಳಲ್ಲಿ "ಸ್ನೋಸ್ಟಾರ್ಮ್" ಬ್ಯಾಡ್ಜಿಂಗ್ ಅನ್ನು ಕಾಣಬಹುದು. ವಿಂಡೋದ ಬೆಲ್ಟ್‌ಲೈನ್ ಮತ್ತು ರೂಫ್‌ನ ರೇಲ್ಸ್‌ಗಳನ್ನು ಕಪ್ಪಾಗಿಸಲಾಗಿದೆ, ಇದು ಎಸ್‌ಯುವಿಗೆ ತೇಲುವ ರೂಫ್‌ನಂತಹ ಎಫೆಕ್ಟ್‌ ಅನ್ನು ಮತ್ತಷ್ಟು ಸೇರಿಸುತ್ತದೆ.

MG Gloster Snowstorm Rear

ಹಿಂಭಾಗದಲ್ಲಿ, ಬಹಳಷ್ಟು ಭಿನ್ನವಾಗಿಲ್ಲ. ನೀವು ಈಗಲೂ ಟೈಲ್ ಲೈಟ್‌ಗಳು ಮತ್ತು ಎರಡೂ ಬದಿಯಲ್ಲಿ ಬ್ಯಾಡ್ಜಿಂಗ್ ನಡುವೆ ಕ್ರೋಮ್ ಸ್ಟ್ರಿಪ್ ಅನ್ನು ಪಡೆಯುತ್ತೀರಿ. ಆದರೆ, ಇಲ್ಲಿ ನೀವು ಬಂಪರ್‌ನಲ್ಲಿ ಕೆಂಪು ಎಕ್ಸೆಂಟ್‌ಅನ್ನು ಪಡೆಯುತ್ತೀರಿ, "ಗ್ಲೋಸ್ಟರ್" ಬ್ಯಾಡ್ಜ್ ಅನ್ನು ಕಪ್ಪು ಬಣ್ಣದಲ್ಲಿ ಫಿನಿಶ್‌ ಮಾಡಲಾಗಿದೆ ಮತ್ತು ಇದು ಕ್ವಾಡ್ ಎಕ್ಸಾಸ್ಟ್ ಟಿಪ್ಸ್‌ಗಳೊಂದಿಗೆ ಬರುತ್ತದೆ.

ಇಂಟಿರೀಯರ್‌

MG Gloster Snowstorm Cabin

ಸ್ನೋಸ್ಟಾರ್ಮ್ ಎಡಿಷನ್‌ನ ಕ್ಯಾಬಿನ್ ಕಪ್ಪು ಡ್ಯಾಶ್‌ಬೋರ್ಡ್ ಮತ್ತು ಕಪ್ಪು ಸೆಂಟರ್ ಕನ್ಸೋಲ್‌ನೊಂದಿಗೆ ಸಂಪೂರ್ಣ ಕಪ್ಪು ಬಣ್ಣವನ್ನು ಪಡೆಯುತ್ತದೆ. ಆದಾಗಿಯೂ, ಇಲ್ಲಿ ಯಾವುದೇ ಕೆಂಪು ಸಾರಗಳಿಲ್ಲದಿದ್ದರೂ, ಕ್ಯಾಬಿನ್ ಸೆಂಟರ್ ಕನ್ಸೋಲ್, ಸೆಂಟ್ರಲ್ ಎಸಿ ವೆಂಟ್‌ಗಳು ಮತ್ತು ಸ್ಟೀರಿಂಗ್ ವೀಲ್‌ನಲ್ಲಿ ಹೊಳಪಾದ ಸಿಲ್ವರ್ ಆಕ್ಸೆಂಟ್‌ಗಳನ್ನು ಪಡೆಯುತ್ತದೆ.

MG Gloster Snowstorm Front Seats

ಮುಂಭಾಗದ ಸೀಟುಗಳನ್ನು ಕಪ್ಪು ಲೆಥೆರೆಟ್‌ನಲ್ಲಿ ಕಾಂಟ್ರಾಸ್ಟ್ ವೈಟ್ ಸ್ಟಿಚಿಂಗ್‌ನೊಂದಿಗೆ ಫಿನಿಶ್‌ ಮಾಡಲಾಗಿದೆ. ಡ್ರೈವರ್ ಸೀಟ್ ಈಗಲೂ ವೆಂಟಿಲೇಶನ್‌, ಹೀಟಿಂಗ್‌, ಮಸಾಜ್ ಮತ್ತು ಮೆಮೊರಿ ಫಂಕ್ಷನ್‌ ಅನ್ನು ಹೊಂದಿದೆ ಮತ್ತು ಈ ಸ್ಪೇಷಲ್‌ ಎಡಿಷನ್‌ನಲ್ಲಿ ಯಾವುದೇ ಹೊಸ ಫೀಚರ್‌ನ ಸೇರ್ಪಡೆಗಳಿಲ್ಲ. 

ಇದನ್ನೂ ಓದಿ: ಬಹುನಿರೀಕ್ಷಿತ Tata Altroz Racer ಬಿಡುಗಡೆ, ಬೆಲೆಗಳು 9.49 ಲಕ್ಷ ರೂ.ನಿಂದ ಪ್ರಾರಂಭ

ಇದರ ವೈಶಿಷ್ಟ್ಯಗಳ ಪಟ್ಟಿಯು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 12-ಸ್ಪೀಕರ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ಮೂರು-ಝೋನ್‌ ಕ್ಲೈಮೇಟ್‌ ಕಂಟ್ರೋಲ್‌, 6 ಏರ್‌ಬ್ಯಾಗ್‌ಗಳು ಮತ್ತು ಲೆವೆಲ್ 2 ಎಡಿಎಎಸ್‌ನ ಪೂರ್ಣ ಸೂಟ್‌ನ (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ ) ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಸ್ವಾಯತ್ತ ತುರ್ತು ಬ್ರೇಕಿಂಗ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

MG Gloster Snowstorm Rear Bench Seat

 ಎಮ್‌ಜಿಯು ತನ್ನ ಸ್ನೋಸ್ಟಾರ್ಮ್ ಎಡಿಷನ್‌ ಅನ್ನು 7-ಸೀಟರ್ ರಚನೆಯಲ್ಲಿ ಮಾತ್ರ ನೀಡುತ್ತಿದೆ, ಆದ್ದರಿಂದ ಈ ಎಡಿಷನ್‌ ಎರಡನೇ ಸಾಲಿನಲ್ಲಿ ಬೆಂಚ್ ಸೀಟ್‌ನೊಂದಿಗೆ ಬರುತ್ತದೆ, ಅದು ಅದೇ ಬಣ್ಣದ ಅಂಶವನ್ನು ಪಡೆಯುತ್ತದೆ.

ಬೆಲೆ

MG Gloster Snowstorm

ಎಮ್‌ಜಿ ಗ್ಲೋಸ್ಟರ್‌ ಸ್ನೋಸ್ಟಾರ್ಮ್‌ ಒಂದೇ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ ಹಿಂಬದಿ-ಚಕ್ರ-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಸೆಟಪ್‌ಗಳಲ್ಲಿ ಲಭ್ಯವಿದೆ ಮತ್ತು ಇದರ ಬೆಲೆ 41.05 ಲಕ್ಷ ರೂ.ನಿಂದ 43.87 ಲಕ್ಷ ರೂ.ವರೆಗೆ (ಎಕ್ಸ್-ಶೋ ರೂಂ) ಇರಲಿದೆ. ಈ ಸ್ಪೇಷಲ್‌ ಎಡಿಷನ್‌ ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ, ಆದರೆ ಟೊಯೋಟಾ ಫಾರ್ಚುನರ್, ಸ್ಕೋಡಾ ಕೊಡಿಯಾಕ್ ಮತ್ತು ಜೀಪ್ ಮೆರಿಡಿಯನ್‌ಗೆ ಪರ್ಯಾಯವಾಗಿ ಪರಿಗಣಿಸಬಹುದು.

 ಇದರ ಬಗ್ಗೆ ಇನ್ನಷ್ಟು ಓದಿ : ಎಮ್‌ಜಿ ಗ್ಲೋಸ್ಟರ್‌ ಡೀಸೆಲ್‌

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಎಂಜಿ ಗ್ಲೋಸ್ಟರ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience