• English
  • Login / Register

ಬಹುನಿರೀಕ್ಷಿತ Tata Altroz Racer ಬಿಡುಗಡೆ, ಬೆಲೆಗಳು 9.49 ಲಕ್ಷ ರೂ.ನಿಂದ ಪ್ರಾರಂಭ

ಟಾಟಾ ಆಲ್ಟ್ರೋಜ್ ರೇಸರ್ ಗಾಗಿ dipan ಮೂಲಕ ಜೂನ್ 07, 2024 09:28 pm ರಂದು ಪ್ರಕಟಿಸಲಾಗಿದೆ

  • 26 Views
  • ಕಾಮೆಂಟ್‌ ಅನ್ನು ಬರೆಯಿರಿ

ಟಾಟಾ ಆಲ್ಟ್ರೋಜ್ ರೇಸರ್ ಅನ್ನು R1, R2 ಮತ್ತು R3 ಎಂಬ ಮೂರು ಆವೃತ್ತಿಗಳಲ್ಲಿ ನೀಡಲಾಗುತ್ತಿದೆ. 

Tata Altroz Racer launched

  • ಆಲ್ಟ್ರೋಜ್‌ ​​ರೇಸರ್ ರೆಗುಲರ್‌ ಆಲ್ಟ್ರೋಜ್‌ನ ಸ್ಪೋರ್ಟಿಯರ್ ಆವೃತ್ತಿಯಾಗಿದೆ. 

  • ಭಾರತದಾದ್ಯಂತ ಇದರ ಪರಿಚಯಾತ್ಮಕ ಎಕ್ಸ್‌ಶೋರೂಮ್‌ ಬೆಲೆಯು 9.49 ಲಕ್ಷ ರೂ.ನಿಂದ 10.99 ಲಕ್ಷ ರೂ.ವರೆಗೆ ಇದೆ. 

  • ಹೆಚ್ಚು ಶಕ್ತಿಶಾಲಿ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತಿದ್ದು, 6-ಸ್ಪೀಡ್ ಮ್ಯಾನುಯಲ್‌ನೊಂದಿಗೆ 120 ಪಿಎಸ್‌ ಮತ್ತು 170 ಎನ್‌ಎಮ್‌ ನಷ್ಟು ಉತ್ಪಾದಿಸುತ್ತದೆ.

  • ಪರಿಷ್ಕೃತ ಗ್ರಿಲ್ ಮತ್ತು ಡ್ಯುಯಲ್-ಟಿಪ್ ಎಕ್ಸಾಸ್ಟ್‌ನಂತಹ ಸ್ಪೋರ್ಟಿಯರ್ ವಿನ್ಯಾಸದ ಅಂಶಗಳನ್ನು ಹೊಂದಿದೆ.

  • 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

  • ಸುರಕ್ಷತಾ ತಂತ್ರಜ್ಞಾನವು ಬ್ಲೈಂಡ್ ಸ್ಪಾಟ್ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಟಾಟಾ ಆಲ್ಟ್ರೊಜ್ ರೇಸರ್ ಭಾರತದಲ್ಲಿ 9.49 ಲಕ್ಷ ರೂ.ಗೆ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆಯಾಗಿದೆ. ರೇಸರ್ ಮೂರು ಟ್ರಿಮ್‌ಗಳಲ್ಲಿ ಬರುತ್ತದೆ ಮತ್ತು ಶಕ್ತಿಯುತ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಇದರ ಬಾಹ್ಯ ವಿನ್ಯಾಸದ ಅಂಶಗಳನ್ನು ಪರಿಷ್ಕರಿಸಲಾಗಿದೆ ಮತ್ತು ಇದು ಈಗ ನವೀಕರಿಸಿದ ಫೀಚರ್‌ಗಳು ಮತ್ತು ವರ್ಧಿತ ಸುರಕ್ಷತಾ ತಂತ್ರಜ್ಞಾನವನ್ನು ನೀಡುತ್ತದೆ.

ಬೆಲೆಗಳು

ಟಾಟಾ ಆಲ್ಟ್ರೊಜ್ ರೇಸರ್‌ನ ಬೆಲೆಯು 9.49 ಲಕ್ಷ ರೂ.ನಿಂದ 10.99 ಲಕ್ಷ ರೂ.ವರೆಗೆ ಇದೆ. ವೇರಿಯಂಟ್-ವಾರು ಬೆಲೆ ಇಲ್ಲಿದೆ: 

ವೇರಿಯೆಂಟ್‌

ಬೆಲೆಗಳು

R1

9.49 ಲಕ್ಷ ರೂ

R2

10.49 ಲಕ್ಷ ರೂ

R3

10.99 ಲಕ್ಷ ರೂ

(ಇವುಗಳು ಭಾರತದಾದ್ಯಂತದ ಪರಿಚಯಾತ್ಮಕ ಎಕ್ಸ್‌ಶೋರೂಮ್‌ ಬೆಲೆಗಳಾಗಿವೆ)

ಸ್ಪೋರ್ಟಿಯರ್ ಹೊರಭಾಗ

ಟಾಟಾ ಆಲ್ಟ್ರೋಜ್‌ ರೇಸರ್ ರೆಗುಲರ್‌ ಆಲ್ಟ್ರೋಜ್‌ನಂತೆಯೇ ಅದೇ ವಿನ್ಯಾಸವನ್ನು ನಿರ್ವಹಿಸುತ್ತದೆ, ಆದರೆ ಇದು ಸ್ಪೋರ್ಟಿ ನೋಟವನ್ನು ನೀಡುವ ನಿರ್ದಿಷ್ಟ ಸ್ಟೈಲಿಂಗ್ ಅಂಶಗಳನ್ನು ಒಳಗೊಂಡಿದೆ. ಈ ಹೆಚ್ಚುವರಿಗಳಲ್ಲಿ ಹೊಸ ಗ್ರಿಲ್, ಡ್ಯುಯಲ್-ಟಿಪ್ ಎಕ್ಸಾಸ್ಟ್ ಮತ್ತು ಕಪ್ಪು ಆಲಾಯ್‌ ವೀಲ್‌ಗಳು ಸೇರಿವೆ. ಡ್ಯುಯಲ್ ವೈಟ್ ಸ್ಟ್ರೈಪ್‌ಗಳು ಬಾನೆಟ್‌ನಿಂದ ಹಿಂಭಾಗದ ರೂಫ್‌ನವರೆಗೆ ಚಲಿಸುತ್ತವೆ, ಇದು ಅದಕ್ಕೆ ಸ್ಪೋರ್ಟಿ ಲುಕ್‌ ಅನ್ನು ಸೇರಿಸುತ್ತದೆ. ಕಾರಿನ ಮುಂಭಾಗದ ಫೆಂಡರ್‌ಗಳಲ್ಲಿ 'ರೇಸರ್' ಬ್ಯಾಡ್ಜ್ ಮತ್ತು ಟೈಲ್‌ಗೇಟ್‌ನಲ್ಲಿ 'ಐ-ಟರ್ಬೊ+' ಬ್ಯಾಡ್ಜ್ ಅನ್ನು ಸಹ ಹೊಂದಿದೆ. ಆಲ್ಟ್ರೋಜ್ ರೇಸರ್ ಅಟಾಮಿಕ್ ಆರೆಂಜ್, ಪ್ಯೂರ್ ಗ್ರೇ ಮತ್ತು ಅವೆನ್ಯೂ ವೈಟ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.

Tata Altroz Racer front three-fourth

ವರ್ಧಿತ ಇಂಟಿರೀಯರ್‌ಗಳು ಮತ್ತು ಫೀಚರ್‌ಗಳು

ಟಾಟಾ ಆಲ್ಟ್ರೊಜ್ ರೇಸರ್‌ನ ಇಂಟಿರೀಯರ್‌ ರೆಗುಲರ್‌ ಮೊಡೆಲ್‌ನ ವಿನ್ಯಾಸವನ್ನು ಉಳಿಸಿಕೊಂಡಿದೆ ಆದರೆ ಹೆಡ್‌ರೆಸ್ಟ್‌ಗಳಲ್ಲಿ 'ರೇಸರ್' ಗ್ರಾಫಿಕ್ಸ್‌ನೊಂದಿಗೆ ಕಪ್ಪು ಲೆಥೆರೆಟ್ ಸೀಟ್‌ಗಳಂತಹ ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಥೀಮ್‌ ಆಧಾರಿತ ಆಂಬಿಯೆಂಟ್ ಲೈಟಿಂಗ್, ಹಾಗೆಯೇ ಡ್ಯಾಶ್‌ಬೋರ್ಡ್‌ನಲ್ಲಿ ಎಸಿ  ವೆಂಟ್‌ಗಳ ಸುತ್ತಲೂ ಆರೆಂಜ್‌ ಆಕ್ಸೆಂಟ್‌ಗಳು ಮತ್ತು ಸೀಟ್‌ಗಳ ಮೇಲೆ ಕಾಂಟ್ರಾಸ್ಟ್ ಆರೆಂಜ್‌ ಸ್ಟಿಚ್ಚಿಂಗ್‌ಗಳನ್ನು ಸಹ ಒಳಗೊಂಡಿದೆ. ಆಲ್ಟ್ರೊಜ್ ​​ರೇಸರ್ ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಎಂಟರ್ಟೈನ್‌ಮೆಂಟ್‌ ಸಿಸ್ಟಮ್‌ನೊಂದಿಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ ಕಾರ್‌ಪ್ಲೇ, ಹೊಸ 7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ಗಳೊಂದಿಗೆ ಬರುತ್ತದೆ. ಇದು ಆರು ಏರ್‌ಬ್ಯಾಗ್‌ಗಳನ್ನು (ರೆಗುಲರ್‌ನಂತೆ) ಮತ್ತು ಬ್ಲೈಂಡ್-ಸ್ಪಾಟ್ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

Tata Altroz Racer interiors

ಹೆಚ್ಚು ಶಕ್ತಿಯುತ ಎಂಜಿನ್

 ಆಲ್ಟ್ರೋಜ್‌ ​​ರೇಸರ್ ಟಾಟಾ ನೆಕ್ಸಾನ್‌ನ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದ್ದು, ವಿಶೇಷಣಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ.

ಎಂಜಿನ್‌

1.2 ಟರ್ಬೊ-ಪೆಟ್ರೋಲ್ ಎಂಜಿನ್

ಪವರ್‌

120 ಪಿಎಸ್‌

ಟಾರ್ಕ್‌

170 ಎನ್‌ಎಮ್‌

ಗೇರ್‌ಬಾಕ್ಸ್‌

6-ಸ್ಪೀಡ್‌ ಮ್ಯಾನುಯಲ್‌

ಈ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಲಭ್ಯವಿದೆ, ಸದ್ಯಕ್ಕೆ ಯಾವುದೇ ಆಟೋಮ್ಯಾಟಿಕ್‌ ಆಯ್ಕೆಯನ್ನು ನೀಡಲಾಗುವುದಿಲ್ಲ.

Tata Altroz Racer rear three-fourth

ಪ್ರತಿಸ್ಪರ್ಧಿ

ಆಲ್ಟ್ರೋಜ್‌ ರೇಸರ್‌ ಮಾರುಕಟ್ಟೆಯಲ್ಲಿ ಹುಂಡೈ ಐ20 ಎನ್‌ ಲೈನ್‌ಗೆ ನೇರ ಪ್ರತಿಸ್ಪರ್ಧಿಯಾಗಲಿದೆ. ಆದರೆ ನೀವು ಇದೇ ರೇಂಜ್‌ನ ಬಜೆಟ್ ಹೊಂದಿದ್ದರೆ ಮತ್ತು ಸ್ಪೋರ್ಟಿ ಕಾರು ಖರೀದಿಸುವ ಬಗ್ಗೆ ಖಾತ್ರಿಯಿಲ್ಲದಿದ್ದರೆ, ಈ ರೇಂಜ್‌ನಲ್ಲಿ ಸಾಕಷ್ಟು ಇತರ ಮಾದರಿಗಳಿವೆ, ಉದಾಹರಣೆಗೆ ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್ ಮೈಕ್ರೋ ಎಸ್‌ಯುವಿಗಳು, ರೆನಾಲ್ಟ್ ಕೈಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಸಬ್ -4ಎಮ್‌ ಕ್ರಾಸ್‌ಒವರ್‌ಗಳಾದ ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್‌ನಂತಹುಗಳು.

ಇನ್ನಷ್ಟು ಓದಿ: ಟಾಟಾ ಆಲ್ಟ್ರೋಜ್ ರೇಸರ್‌ ಆನ್‌ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ಆಲ್ಟ್ರೋಝ್ Racer

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಕಿಯಾ syros
    ಕಿಯಾ syros
    Rs.9 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮಾರಚ್‌, 2025
  • ಬಿವೈಡಿ seagull
    ಬಿವೈಡಿ seagull
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜನವ, 2025
  • ಎಂಜಿ 3
    ಎಂಜಿ 3
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
  • ನಿಸ್ಸಾನ್ ಲೀಫ್
    ನಿಸ್ಸಾನ್ ಲೀಫ್
    Rs.30 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
  • ಮಾರುತಿ ಎಕ್ಸ್‌ಎಲ್ 5
    ಮಾರುತಿ ಎಕ್ಸ್‌ಎಲ್ 5
    Rs.5 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಸೆಪಟೆಂಬರ್, 2025
×
We need your ನಗರ to customize your experience