Choose your suitable option for better User experience.
  • English
  • Login / Register

MG ಕಾರುಗಳ ಬೆಲೆಯಲ್ಲಿ ಕಡಿತ; ಹೊಸ ದರಗಳು ಅವುಗಳ ನೇರ ಪ್ರತಿಸ್ಪರ್ಧಿಗಳೊಂದಿಗೆ ಹೇಗೆ ಹೋಲಿಕೆ ಆಗುತ್ತದೆ ಎಂಬುವುದು ಇಲ್ಲಿದೆ

published on ಫೆಬ್ರವಾರಿ 05, 2024 08:17 pm by shreyash for ಎಂಜಿ ಜೆಡ್‌ಎಸ್‌ ಇವಿ

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

ಬೆಲೆ ಕಡಿತವು ಎಲ್ಲಾ MG ಮೊಡೆಲ್‌ಗಳಿಗೆ ಅನ್ವಯಿಸುತ್ತದೆ, ಜೆಡ್‌ಎಸ್‌ ಇವಿಗಾಗಿ ದೊಡ್ಡ ಪರಿಷ್ಕರಣೆಯೊಂದಿಗೆ, ರೂ 3.9 ಲಕ್ಷದವರೆಗೆ ಬೆಲೆ ಕಡಿತವಾಗಿದೆ. 

MG Hector, MG Comet EV, MG Gloster, MG Astor

ಮಾರುತಿ, ಟಾಟಾ, ಮತ್ತು ಹ್ಯುಂಡೈ ಮುಂತಾದವುಗಳಲ್ಲಿ ಕಂಡುಬರುವಂತೆ, ಪ್ರತಿ ಹೊಸ ವರ್ಷದ ಆರಂಭದಲ್ಲಿ ವಾಹನ ತಯಾರಕರು ತಮ್ಮ ಎಲ್ಲಾ ಕಾರುಗಳ ಬೆಲೆಗಳನ್ನು ಹೆಚ್ಚಿಸುವ ನಿರೀಕ್ಷೆಯಿದ್ದರೂ, MG ಇಂಡಿಯಾ ಮಾತ್ರ ವಿಭಿನ್ನವಾದ ವಿಧಾನಕ್ಕೆ ಕೈಹಾಕಿದೆ. ಬ್ರಿಟಿಷ್ ಮೂಲದ ಈ ಕಾರ್ ಬ್ರ್ಯಾಂಡ್ ಇತ್ತೀಚೆಗೆ ತನ್ನ ಇವಿಗಳನ್ನು ಒಳಗೊಂಡಂತೆ ಎಲ್ಲಾ ಕಾರುಗಳ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ಬೆಲೆಗಳನ್ನು ಕಡಿತಗೊಳಿಸಿದೆ. ಅದರ ಮೊಡೆಲ್‌ಗಳ ಪರಿಷ್ಕೃತ ಬೆಲೆಗಳು ತಮ್ಮ ಪ್ರತಿಸ್ಪರ್ಧಿಗಳೊಂದಿಗೆ ಹೇಗೆ ಹೋಲಿಕೆಯಾಗುತ್ತದೆ ಎಂಬುದನ್ನು ಗಮನಿಸೋಣ. 

ಬೆಲೆ ಕಡಿತ ಏಕೆ?

2023 ರಲ್ಲಿ ಎಮ್‌ಜಿಯು ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಬ್ರಾಂಡ್‌ನ ಪಟ್ಟಿಯಲ್ಲಿ ಎಂಟನೇ ಸ್ಥಾನವನ್ನು ಪಡೆದಿತ್ತು. ಆದರೆ ಅದರ ಒಟ್ಟು ಮಾರಾಟದ ಪ್ರಮಾಣವು ಏಳನೇ ಹೆಚ್ಚು ಮಾರಾಟವಾದ ಕಾರು ತಯಾರಕರಿಗಿಂತ ಬಹಳ ದೂರದಲ್ಲಿದೆ. 2024ರಲ್ಲಿ, MG ತನ್ನ ಬೆಲೆಗಳನ್ನು ಇನ್ನಷ್ಟು ಸ್ಪರ್ಧಾತ್ಮಕವಾಗಿ ಹೊಂದಿಸುವ ಮೂಲಕ ತನ್ನ ಒಟ್ಟಾರೆ ಮಾರಾಟದ ಪ್ರಮಾಣವನ್ನು ಹೆಚ್ಚಿಸುವತ್ತ ಗಮನಹರಿಸಿದೆ.

MG ಕಾಮೆಟ್ EV

ಎಮ್‌ಜಿ ಕಾಮೆಟ್ ಇವಿ

ಟಾಟಾ ಟಿಯಾಗೊ ಇವಿ

ಟಾಟಾ ಪಂಚ್ ಇವಿ

ಸಿಟ್ರೊಯೆನ್ ಇಸಿ3

6.99 ಲಕ್ಷ ರೂ.ನಿಂದ 8.58 ಲಕ್ಷ ರೂ

8.69 ಲಕ್ಷ ರೂ.ನಿಂದ 12.09 ಲಕ್ಷ ರೂ

10.99 ಲಕ್ಷ ರೂ.ನಿಂದ 15.49 ಲಕ್ಷ ರೂ

11.61 ಲಕ್ಷ ರೂ.ನಿಂದ 13.35 ಲಕ್ಷ ರೂ

  • ಎಮ್‌ಜಿ ಕಾಮೆಟ್ ಇವಿ ಈಗ 6.99 ಲಕ್ಷ ರೂ.ವಿನಿಂದ ಆರಂಭಿಕ ಬೆಲೆಯನ್ನು ಹೊಂದಿದೆ, ಇದು ಅದರ ಹಿಂದಿನ ಬೆಲೆಗಿಂತ ರೂ 99,000 ಕಡಿಮೆಯಾಗಿದೆ ಮತ್ತು ಟಾಪ್‌ ಎಂಡ್‌ ಮೊಡೆಲ್‌ನ ಮೇಲೆಯೂ ಸುಮಾರು 1.4 ಲಕ್ಷ ರೂ.ಗಿಂತಲೂ ಹೆಚ್ಚು ಕಡಿತ ನೀಡಲಾಗಿದೆ. 

  • ಟಾಟಾ ಟಿಯಾಗೊ ಇವಿಯ ಬೇಸ್-ಮೊಡೆಲ್‌ ಆವೃತ್ತಿಯು ಕಾಮೆಟ್ ಇವಿಯ ಟಾಪ್‌-ಎಂಡ್‌ ಮೊಡೆಲ್‌ಗಿಂತ  11,000 ರೂ. ವರೆಗೆ ದುಬಾರಿಯಾಗಿದೆ. ಆದರೆ, ಪಂಚ್ ಇವಿ ಮತ್ತು ಸಿಟ್ರೊಯೆನ್ ಇಸಿ3 ಬೆಲೆ, ಗಾತ್ರ ಮತ್ತು ಡ್ರೈವಿಂಗ್‌ನ ರೇಂಜ್‌ನ ವಿಷಯದಲ್ಲಿ ಸಂಪೂರ್ಣವಾಗಿ ವಿಭಿನ್ನ ಕೆಟೆಗರಿಯಲ್ಲಿದೆ. 

ಎಮ್‌ಜಿ ಆಸ್ಟರ್‌

ಎಂಜಿ ಆಸ್ಟರ್

ಸಿಟ್ರೊಯೆನ್ ಸಿ3 ಎರ್‌ಕ್ರಾಸ್‌

ಹೋಂಡಾ ಎಲಿವೇಟ್

ಹುಂಡೈ ಕ್ರೆಟಾ

ಕಿಯಾ ಸೆಲ್ಟೋಸ್ 

9.98 ಲಕ್ಷ ರೂ.ನಿಂದ 17.98 ಲಕ್ಷ ರೂ.

9.99 ಲಕ್ಷ ರೂ.ನಿಂದ 13.85 ಲಕ್ಷ ರೂ.

11.58 ಲಕ್ಷ ರೂ.ನಿಂದ 16.20 ಲಕ್ಷ ರೂ.

11 ಲಕ್ಷ ರೂ.ನಿಂದ 20.05 ಲಕ್ಷ ರೂ.

10.90 ಲಕ್ಷ ರೂ.ನಿಂದ 20.30 ಲಕ್ಷ ರೂ.

  •  MG ಆಸ್ಟರ್ ಜನವರಿಯಲ್ಲಿ ಎಮ್‌ವೈ2024 ಅಪ್‌ಡೇಟ್ ಅನ್ನು ಪಡೆದುಕೊಂಡಿತು, ಅದರೊಂದಿಗೆ ಇದು ಹೆಚ್ಚು ಫೀಚರ್-ರಿಚ್ ಆಗಿದ್ದು ಮಾತ್ರವಲ್ಲದೆ ಹೆಚ್ಚು ಕೈಗೆಟುಕುವಂತೆಯೂ ಆಯಿತು.
  • ಆಸ್ಟರ್‌ನ ಬೆಲೆ ಈಗ ಮೊದಲಿಗಿಂತ 84,000 ರೂ. ನಷ್ಟು ಕಡಿತವಾಗಿ ಪ್ರಾರಂಭವಾಗುತ್ತದೆ. ಇದು ಭಾರತದಲ್ಲಿ ಅತ್ಯಂತ ಕೈಗೆಟುಕುವ ಕಾಂಪ್ಯಾಕ್ಟ್  ಎಸ್‌ಯುವಿಯಾಗಿದೆ. 
  • ಈ ಎಸ್‌ಯುವಿಗಾಗಿ 2024ರ ಆಪ್‌ಡೇಟ್‌ಗಳು ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಟೋ-ಡಿಮ್ಮಿಂಗ್‌ ಐಆರ್‌ವಿಎಮ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

  • ಎಮ್‌ಜಿಯು ತನ್ನ ಆಸ್ಟರ್‌ನ 10.1-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೆಚ್ಚಿನ ಕಾರ್ಯನಿರ್ವಹಣೆಗಳೊಂದಿಗೆ ಆಪ್‌ಗ್ರೇಡ್‌ ಮಾಡಿದೆ. 

 ಇದನ್ನೂ ಪರಿಶೀಲಿಸಿ: ವಾರ್ಷಿಕವಾಗಿ ನಡೆಯಲಿರುವ ಭಾರತ್ ಮೊಬಿಲಿಟಿ ಎಕ್ಸ್‌ಪೋ, ಇದು ಆಟೋ ಎಕ್ಸ್‌ಪೋವನ್ನು  ಬದಲಾಯಿಸಬಹುದೇ? 

ಎಂಜಿ ಹೆಕ್ಟರ್

2023 MG Hector

ಎಂಜಿ ಹೆಕ್ಟರ್

ಟಾಟಾ ಹ್ಯಾರಿಯರ್

ಮಹೀಂದ್ರ ಎಕ್ಸ್‌ಯುವಿ700 (5-ಸೀಟರ್‌ಗಳು)

14.95  ಲಕ್ಷ ರೂ.ನಿಂದ 21.95 ಲಕ್ಷ ರೂ.

15.49  ಲಕ್ಷ ರೂ.ನಿಂದ 26.44 ಲಕ್ಷ ರೂ.

14 ಲಕ್ಷ ರೂ.ನಿಂದ 20.09 ಲಕ್ಷ ರೂ.

  • ಎಂಜಿ ಹೆಕ್ಟರ್‌ನ ಡೀಸೆಲ್ ವೇರಿಯೆಂಟ್‌ಗಳು ಸುಮಾರು  80,000 ರೂ.ವರೆಗೆ ಬೆಲೆ ಕಡಿತವನ್ನು ಪಡೆದಿವೆ, ಆದರೆ ಪೆಟ್ರೋಲ್ ವೇರಿಯೆಂಟ್‌ಗಳ ಬೆಲೆಗಳು  8,000 ರೂ. ವರೆಗೆ ಮಾತ್ರ ಕಡಿಮೆಯಾಗಿದೆ.

  • ಹೆಕ್ಟರ್‌ನ ಬೇಸ್-ಮೊಡೆಲ್‌ ಆವೃತ್ತಿಯು ಈಗ ಹ್ಯಾರಿಯರ್‌ನ ಬೇಸ್‌-ಮೊಡೆಲ್‌ಗಿಂತ 54,000 ರೂ.ನಷ್ಟು ಅಗ್ಗವಾಗಿದೆ. ಇದರೊಂದಿಗೆ, ಸಂಪೂರ್ಣ ಲೋಡ್ ಮಾಡಲಾದ ಎಮ್‌ಜಿಯ ಈ ಎಸ್‌ಯುವಿಯು ಹ್ಯಾರಿಯರ್‌ನ ಟಾಪ್-ಎಂಡ್‌ ಆವೃತ್ತಿಗಿಂತ ಹೆಚ್ಚು ಕೈಗೆಟುಕುವ ಬೆಲೆಯನ್ನು ಹೊಂದಿದೆ. ಆದರೆ ಡೀಸೆಲ್-ಆಟೋಮ್ಯಾಟಿಕ್‌ ಪವರ್‌ಟ್ರೇನ್ ಅನ್ನು ಹೆಕ್ಟರ್‌ನಲ್ಲಿ ನೀಡಲಾಗುತ್ತಿಲ್ಲ. 

  • ಆದಾಗಿಯೂ, ಮಹೀಂದ್ರಾ ಎಕ್ಸ್‌ಯುವಿ700 ನ 5-ಸೀಟರ್ ಬೇಸ್-ಮೊಡೆಲ್‌ಗಿಂತ ಇದು ಸುಮಾರು 95,000 ರೂ.ವರೆಗೆ ದುಬಾರಿಯಾಗಿದೆ.

ಎಂಜಿ ಹೆಕ್ಟರ್ ಪ್ಲಸ್

ಎಂಜಿ ಹೆಕ್ಟರ್ ಪ್ಲಸ್

ಟಾಟಾ ಸಫಾರಿ

ಮಹೀಂದ್ರಾ ಎಕ್ಸ್‌ಯುವಿ700 (6/7-ಸೀಟರ್‌)

17.75  ಲಕ್ಷ ರೂ.ನಿಂದ  22.68 ಲಕ್ಷ ರೂ.

15.49  ಲಕ್ಷ ರೂ.ನಿಂದ  26.44 ಲಕ್ಷ ರೂ.

17.99  ಲಕ್ಷ ರೂ.ನಿಂದ 26.99 ಲಕ್ಷ ರೂ.

  •  3-ಸಾಲಿನ ಮಧ್ಯಮ ಗಾತ್ರದ ಎಸ್‌ಯುವಿಯಾಗಿರುವ ಎಮ್‌ಜಿ ಹೆಕ್ಟರ್ ಪ್ಲಸ್ ತನ್ನ ಡೀಸೆಲ್ ವೇರಿಯೆಂಟ್‌ಗಳಿಗೆ ಸುಮಾರು  60,000 ರೂ.ವರೆಗೆ ಬೆಲೆ ಕಡಿತದ ಪರಿಷ್ಕರಣೆಯನ್ನು ಪಡೆದುಕೊಂಡಿದೆ. ಮತ್ತೊಂದೆಡೆ, ಪೆಟ್ರೋಲ್ ವೇರಿಯೆಂಟ್‌ಗಳು ಈಗ ಕೇವಲ 5,000 ರೂ.ನಷ್ಟು ಅಗ್ಗವಾಗಿವೆ.

  • ಪ್ರವೇಶ ಮಟ್ಟದ ಹೆಕ್ಟರ್ ಪ್ಲಸ್‌ನ ಆವೃತ್ತಿಯು ಎಕ್ಸ್‌ಯುವಿ700ನ ಬೇಸ್-ಸ್ಪೆಕ್ 7-ಸೀಟರ್ ಆವೃತ್ತಿಗಿಂತ ರೂ 4,000 ರಷ್ಟು ಅಗ್ಗದ ಬೆಲೆಯನ್ನು ಪಡೆದಿದೆ. 

  • ಟಾಟಾ ಸಫಾರಿ ಹೆಚ್ಚು ಕೈಗೆಟುಕುವ ಪ್ರವೇಶ ಮಟ್ಟದ ಆವೃತ್ತಿಯನ್ನು ಹೊಂದಿದ್ದರೂ, ಹೆಕ್ಟರ್ ಪ್ಲಸ್‌ನ ಟಾಪ್-ಸ್ಪೆಕ್ ಆವೃತ್ತಿಯು  ಸಫಾರಿ ಮತ್ತು ಎಕ್ಸ್‌ಯುವಿ700 ನ ಟಾಪ್‌-ಎಂಡ್‌ ಮಾಡೆಲ್‌ಗಿಂತ ಸುಮಾರು  4 ಲಕ್ಷ ರೂ. ವರೆಗೆ ಅಗ್ಗವಾಗಿವೆ.

ಎಮ್‌ಜಿ ಜೆಡ್‌ಎಸ್‌ ಇವಿ

ಎಮ್‌ಜಿ ಜೆಡ್‌ಎಸ್‌ ಇವಿ

ಹುಂಡೈ ಕೋನಾ ಎಲೆಕ್ಟ್ರಿಕ್

18.98 ಲಕ್ಷ ರೂ.ನಿಂದ 25.08 ಲಕ್ಷ ರೂ.

23.84 ಲಕ್ಷ ರೂ.ನಿಂದ 24.03 ಲಕ್ಷ ರೂ.

  • ಎಮ್‌ಜಿ ಜೆಡ್‌ಎಸ್‌ ಇವಿಯು ಅತಿ ಹೆಚ್ಚು ಬೆಲೆಯ ಕಡಿತವನ್ನು ಪಡೆದುಕೊಂಡಿದೆ. ಇದೀಗ ಇದು ರೂ 3.9 ಲಕ್ಷದವರೆಗೆ ಹೆಚ್ಚು ಕೈಗೆಟುಕುವ ಬೆಲೆಯನ್ನು ಹೊಂದಿದೆ. 

  • ಇದು ಈಗ ಅದರ ನೇರ ಪ್ರತಿಸ್ಪರ್ಧಿಯಾದ ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ಗಿಂತ  4.86 ಲಕ್ಷ ರೂ. ನಷ್ಟು ಕಡಿಮೆಯೊಂದಿಗೆ ಬೆಲೆಗಳು ಪ್ರಾರಂಭವಾಗುತ್ತದೆ. ಅದೇ ಸಮಯದಲ್ಲಿ ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಉತ್ತಮ ಬ್ಯಾಟರಿ ರೇಂಜ್‌ನ್ನು ನೀಡುತ್ತದೆ (461 ಕಿಮೀ ಘೋಷಣೆ).   .

 ಸಹ ಪರಿಶೀಲಿಸಿ: ಮೊದಲ ಬಾರಿಗೆ ರಹಸ್ಯವಾಗಿ ಪರೀಕ್ಷೆಗೆ ಒಳಪಟ್ಟ 2024ರ Maruti Dzire  

ಎಂಜಿ ಗ್ಲೋಸ್ಟರ್

ಎಂಜಿ ಗ್ಲೋಸ್ಟರ್

ಟೊಯೋಟಾ ಫಾರ್ಚುನರ್

37.49 ಲಕ್ಷ ರೂ.ನಿಂದ 43 ಲಕ್ಷ ರೂ

33.43 ಲಕ್ಷ ರೂ.ನಿಂದ 51.44 ಲಕ್ಷ ರೂ


  • MG ಗ್ಲೋಸ್ಟರ್‌ನ ಬೆಲೆಗಳನ್ನು 1.34 ಲಕ್ಷ ರೂ.ವರೆಗೆ ಕಡಿತಗೊಳಿಸಲಾಗಿದೆ. 

  • ಟೊಯೊಟಾ ಫಾರ್ಚುನರ್‌ನ ಬೇಸ್-ಮೊಡೆಲ್‌ ಆವೃತ್ತಿಗಿಂತ ಗ್ಲೋಸ್ಟರ್‌ನ ಪ್ರವೇಶ ಮಟ್ಟದ ಆವೃತ್ತಿಯು ಸುಮಾರು 4 ಲಕ್ಷ ರೂ.ನಷ್ಟು ಬೆಲೆ ಕಡಿಮೆಯನ್ನು ಹೊಂದಿದೆ. 

  • ಮತ್ತೊಂದೆಡೆ ಹೆಚ್ಚಿನ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳನ್ನು ನೀಡಿದರೂ, ಗ್ಲೋಸ್ಟರ್‌ನ ಟಾಪ್-ಸ್ಪೆಕ್ ಆವೃತ್ತಿಯು ಈಗ ಫಾರ್ಚ್ಯೂನರ್‌ನ ಟಾಪ್-ಸ್ಪೆಕ್ ಆವೃತ್ತಿಗಿಂತ 8 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಕೈಗೆಟುಕುವ ಬೆಲೆಯಲ್ಲಿದೆ. 

ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಬೆಲೆಗಳಾಗಿವೆ

ಇನ್ನಷ್ಟು ಹೆಚ್ಚು ಓದಿ: ಎಮ್‌ಜಿ ಜೆಡ್‌ಎಸ್‌ ಇವಿ ಆಟೋಮ್ಯಾಟಿಕ್‌

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಎಂಜಿ ZS EV

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience