ಹುರ್ರೇ, ಸಿಟ್ರಾನ್ C5 ಏರ್‌ಕ್ರಾಸ್ ಹೊಸ ವೇರಿಯೆಂಟ್‌ನ ಬೆಲೆಯಲ್ಲಿ ಇಳಿಕೆ
ಸಿಟ್ರೊನ್ ಸಿ5 ಏರ್‌ಕ್ರಾಸ್ ಗಾಗಿ rohit ಮೂಲಕ ಆಗಸ್ಟ್ 09, 2023 02:47 pm ರಂದು ಪ್ರಕಟಿಸಲಾಗಿದೆ
- 24 Views
- ಕಾಮೆಂಟ್ ಅನ್ನು ಬರೆಯಿರಿ
C5 ಏರ್‌ಕ್ರಾಸ್‌ಗೆ ಈಗ ಹೊಸ ಪ್ರವೇಶ-ಹಂತದ ವೇರಿಯೆಂಟ್, ಫೀಲ್ ಸೇರ್ಪಡೆಯಾಗಿದ್ದು, ಇದರ ಬೆಲೆ ರೂ 36.91 ಲಕ್ಷ (ಎಕ್ಸ್-ಶೋರೂಂ ಪ್ಯಾನ್-ಇಂಡಿಯಾ)
-
ಸಿಟ್ರಾನ್ C5 ಏರ್‌ಕ್ರಾಸ್ ಫೇಸ್‌ಲಿಫ್ಟ್ ಅನ್ನು ಸೆಪ್ಟೆಂಬರ್ 2022ರಲ್ಲಿ ಸಿಂಗಲ್ ವೇರಿಯೆಂಟ್‌ನಲ್ಲಿ ಬಿಡುಗಡೆ ಮಾಡಲಾಯಿತು.
-
ಈ SUV ಅನ್ನು ಈಗ ಇದರ ಪೂರ್ವ-ನವೀಕರಣ ಆವೃತ್ತಿಯೊಂದಿಗೆ ಫೀಲ್ ಮತ್ತು ಶೈನ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
-
ಶೈನ್ ವೇರಿಯೇಂಟ್ ರೂ 50,000ದಷ್ಟು ದುಬಾರಿಯಾಗಿದೆ.
-
ಫೀಚರ್ ವ್ಯತ್ಯಾಸಗಳು ಸಣ್ಣ ಟಚ್‌ಸ್ಕ್ರೀನ್ ಹೊಂದಿದ್ದು ಇದರಲ್ಲಿ ವಿಹಂಗಮ ಸನ್‌ರೂಫ್ ಇರುವುದಿಲ್ಲ.
-
8-ಸ್ಪೀಡ್ ಆಟೋಮ್ಯಾಟಿಕ್‌ನೊಂದಿಗೆ ಅದೇ 2-ಲೀಟರ್ 177PS/400Nm ಡೀಸೆಲ್ ಇಂಜಿನ್ ಅನ್ನು ಪಡೆದಿದೆ.
-
ಬೆಲೆಗಳು ರೂ 36.91 ಲಕ್ಷದಿಂದ ರೂ 37.67 ಲಕ್ಷ (ಎಕ್ಸ್-ಶೋರೂಂ ಪ್ಯಾನ್ ಇಂಡಿಯಾ) ತನಕ ಇದೆ.
ತನ್ನ ಮಾರ್ಕ್‌ನ ಭಾರತೀಯ ಲೈನ್ಅಪ್‌ನಲ್ಲಿ (ಇಲ್ಲಿ ಹೊಸತಾಗಿ ಪಾದಾರ್ಪಣೆ ಮಾಡಿದ ಮಾಡೆಲ್ ಕೂಡಾ ಆಗಿದೆ) ಮುಂಚೂಣಿ ಉತ್ಪನ್ನವಾಗಿರುವ ಸಿಟ್ರಾನ್ C5 ಏರ್‌ಕ್ರಾಸ್, ಈಗ ‘ಫೀಲ್’ ಎಂಬ ಆರಂಭಿಕ ಹಂತದ ವೇರಿಯೆಂಟ್ ಅನ್ನು ಮರಳಿ ಪಡೆದಿದೆ. ಅಲ್ಲದೇ ಈ ಕಾರುತಯಾರಕ ಸಂಸ್ಥೆಯು SUVಯ ಟಾಪ್ ಸ್ಪೆಕ್ ಶೈನ್ ವೇರಿಯೆಂಟ್‌ನ ಬೆಲೆಯನ್ನು ಏರಿಸಿದೆ. ಈ ಪೂರ್ವ-ನವೀಕೃತ ಆವೃತ್ತಿಯು ಈಗಾಗಲೇ ಈ ಎರಡು ವೇರಿಯೆಂಟ್‌ಗಳನ್ನು ಪಡೆದಿದೆ, ಆದರೆ ಕಳೆದ ವರ್ಷ ನವೀಕೃತ C5 ಏರ್‌ಕ್ರಾಸ್‌ನ ಪರಿಚಯದೊಂದಿಗೆ ‘ಫೀಲ್’ ಟ್ರಿಮ್ ಅನ್ನು ಸ್ಥಗಿತಗೊಳಿಸಲಾಗಿತ್ತು.
ಪರಿಷ್ಕೃತ ವೇರಿಯೆಂಟ್‌ವಾರು ಬೆಲೆಗಳು
ವೇರಿಯೆಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
ಫೀಲ್ |
– |
ರೂ 36.91 ಲಕ್ಷ |
– |
ಶೈನ್ |
ರೂ 37.17 ಲಕ್ಷ |
ರೂ 37.67 ಲಕ್ಷ |
+ರೂ 50,000 |
ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ಪ್ಯಾನ್-ಇಂಡಿಯಾ
ಇತ್ತೀಚಿನ ಅಪ್‌ಡೇಟ್‌ನೊಂದಿಗೆ, C5 ಏರ್‌ಕ್ರಾಸ್‌ನ ಟಾಪ್-ಸ್ಪೆಕ್ ಶೈನ್ ಟ್ರಿಮ್ ಐವತ್ತುಸಾವಿರ ರೂಪಾಯಿಗಳಷ್ಟು ದುಬಾರಿಯಾಗಿದೆ, ಆದರೆ, SUVಯು ಒಟ್ಟಾರೆ ರೂ 26,000 ದಷ್ಟು ಅಗ್ಗವಾಗಿದೆ. ಫೀಲ್ ಮತ್ತು ಶೈನ್ ವೇರಿಯೆಂಟ್‌ಗಳೆರಡೂ ಮೋನೋಟೋನ್ ಮತ್ತು ಡ್ಯುಯಲ್-ಟೋನ್ ಪೈಂಟ್ ಆಯ್ಕೆಗಳೊಂದಿಗೆ, ಸಮಬೆಲೆಯನ್ನು ಹೊಂದಿದೆ.
ಇದನ್ನೂ ಓದಿ: ಅತ್ಯಂತ ಅಗ್ಗದ 3- ಸಾಲು ಸೀಟುಳ್ಳ ಇ- SUV ಆಗಲಿದೆ ಸಿಟ್ರಾನ್ C3 ಏರ್‌ಕ್ರಾಸ್ EV
ಅಪ್‌ಡೇಟ್‌ನಲ್ಲಿ ಮಾಡಲಾದ ಬದಲಾವಣೆಗಳು
ಈ ಹೊಸ ಆರಂಭಿಕ ಹಂತದ ಟ್ರಿಮ್‌ನಲ್ಲಿ ಏನೇನು ಇರುವುದಿಲ್ಲ ಎಂಬುದನ್ನು ಸಿಟ್ರನ್ ಇನ್ನಷ್ಟೇ ಹೇಳಬೇಕಿದೆ, ಆದರೂ, C5 ಏರ್‌ಕ್ರಾಸ್ ಫೀಲ್ ಚಿಕ್ಕದಾದ ಟಚ್‌ಸ್ಕ್ರೀನ್ ಯೂನಿಟ್ ಹೊಂದಿರುವ ಸಾಧ್ಯತೆ ಇದ್ದು, ಇದರಲ್ಲಿ ವಿಹಂಗಮ ಸನ್‌ರೂಫ್ ಮತ್ತು ಇತರ ಕೆಲವು ಆರಾಮದಾಯಕ ಮತ್ತು ಅನುಕೂಲ ಫೀಚರ್‌ಗಳನ್ನು ತೆಗೆದುಹಾಕಲಾಗಿದೆ.
C5 ಏರ್‌ಕ್ರಾಸ್‌ನ ಶೈನ್ ವೇರಿಯೆಂಟ್‌ಗೆ ಸಂಬಂಧಿಸಿದಂತೆ ಕಾರುತಯಾರಕರು ಇದನ್ನು 10 ಇಂಚು ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವಿಹಂಗಮ ಸನ್‌ರೂಫ್ ಮತ್ತು ವಿದ್ಯುತ್‌ಚಾಲಿತವಾಗಿ ಹೊಂದಿಸಬಲ್ಲ ಡ್ರೈವರ್ ಸೀಟ್‌ನೊಂದಿಗೆ ಸಜ್ಜುಗೊಳಿಸಿದ್ದಾರೆ. ಇದರ ಸುರಕ್ಷತಾ ಕಿಟ್, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಆರು ಏರ್‌ಬ್ಯಾಗ್‌ಗಳು, ಹಿಲ್-ಅಸಿಸ್ಟ್ ಮತ್ತು ಡಿಸೆಂಟ್ ಕಂಟ್ರೋಲ್ ಹಾಗೂ ರಿವರ್ಸಿಂಗ್ ಕ್ಯಾಮರಾವನ್ನು ಒಳಗೊಂಡಿದೆ.
ಡೀಸೆಲ್ ಇಂಜಿನ್ ಮಾತ್ರ
ಮಧ್ಯಮಗಾತ್ರದ ಈ ಪ್ರೀಮಿಯಂ SUV ಅನ್ನು 2-ಲೀಟರ್ ಡೀಸೆಲ್ ಇಂಜಿನ್ (177PS/400Nm)ನೊಂದಿಗೆ ನೀಡಲಾಗಿದೆ. ಈ ಯೂನಿಟ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಇದು ಇಕೋ ಮತ್ತು ಸ್ಪೋರ್ಟ್ ಎಂಬ ಎರಡು ಡ್ರೈವ್ ಮೋಡ್‌ಗಳು, ಜೊತೆಗೆ ಸ್ಟಾಂಡರ್ಡ್, ಸ್ಯಾಂಡ್, ಮಡ್ ಮತ್ತು ಡ್ಯಾಂಪ್ ಗ್ರಾಸ್‌ಗಳೆಂಬ ಮಲ್ಟಿ-ಟೆರ್ರೈನ್ ಮೋಡ್‌ಗಳನ್ನು ಪಡೆದಿದೆ.
ಇದನ್ನೂ ನೋಡಿ: ಭಾರತ-ಸ್ಪೆಕ್ ಸಿಟ್ರಾನ್ C3X ಕ್ರಾಸ್ ಓವರ್‌ನಲ್ಲಿ ಇದು ನಮ್ಮ ಮೊದಲ ನೋಟವೇ?
ಪ್ರೀಮಿಯಂ ಪ್ರತಿಸ್ಪರ್ಧಿಗಳು
ಸಿಟ್ರಾನ್‌ನ C5 ಏರ್‌ಕ್ರಾಸ್ ಫೋಕ್ಸ್‌ವಾಗನ್ ಟೈಗನ್ , ಹ್ಯುಂಡೈ ಟಕ್ಸನ್ ಮತ್ತು ಜೀಪ್ ಕಾಂಪಸ್‌ಗೆ ಪೈಪೋಟಿ ನೀಡುತ್ತದೆ.
ಇನ್ನಷ್ಟು ಓದಿ : C5 ಏರ್‌ಕ್ರಾಸ್ ಡೀಸೆಲ್