Login or Register ಅತ್ಯುತ್ತಮ CarDekho experience ಗೆ
Login

ಎಕ್ಸ್‌ಕ್ಲೂಸಿವ್‌: 2024ರ ಜೀಪ್ ಮೆರಿಡಿಯನ್ ವಿವರಗಳು ಸೋರಿಕೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಅಕ್ಟೋಬರ್ 17, 2024 07:54 pm ರಂದು dipan ಮೂಲಕ ಪ್ರಕಟಿಸಲಾಗಿದೆ

ಈ ಹೊಸ ವೇರಿಯೆಂಟ್‌ಗಳನ್ನು ಫ್ರಂಟ್-ವೀಲ್-ಡ್ರೈವ್ ಸೆಟಪ್ ಜೊತೆಗೆ ಮ್ಯಾನುವಲ್‌ ಮತ್ತು ಆಟೋಮ್ಯಾಟಿಕ್‌ ಆಯ್ಕೆಗಳೊಂದಿಗೆ ಮಾತ್ರ ನೀಡಲಾಗುತ್ತದೆ

  • 2024ರ ಮೆರಿಡಿಯನ್ 5- ಮತ್ತು 7-ಸೀಟರ್‌ ವಿನ್ಯಾಸಗಳೊಂದಿಗೆ ಬರುತ್ತದೆ.

  • ಹೊಸ ಮೆರಿಡಿಯನ್‌ಗಾಗಿ ಬುಕ್ಕಿಂಗ್‌ಗಳು ಈಗಾಗಲೇ ತೆರೆದಿವೆ.

  • ಹೊಸ ಬೇಸ್‌ ವೇರಿಯೆಂಟ್‌ಗಳು 10.1-ಇಂಚಿನ ಟಚ್‌ಸ್ಕ್ರೀನ್ ಮತ್ತು 7-ಇಂಚಿನ ಇನ್ಸ್‌ಟ್ರುಮೆಂಟ್‌ ಕ್ಲಸ್ಟರ್‌ನಂತಹ ಫೀಚರ್‌ಗಳನ್ನು ಹೊಂದಿರುತ್ತದೆ.

  • ಈ ಆಪ್‌ಡೇಟ್‌ ಮಾಡಲಾದ ಎಸ್‌ಯುವಿಯು ಆರು ಏರ್‌ಬ್ಯಾಗ್‌ಗಳನ್ನು (ಎಲ್ಲಾ ಆವೃತ್ತಿಗಳಲ್ಲಿ) ಮತ್ತು ADAS ಫೀಚರ್‌ಗಳನ್ನು ಹೊಂದಿರುತ್ತದೆ.

  • ವೇರಿಯಂಟ್-ಆಧಾರಿತ ಇಂಟಿರಿಯರ್‌ ಕಲರ್‌ ಥೀಮ್‌ಗಳೊಂದಿಗೆ ಬರುತ್ತದೆ.

  • ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ 2-ಲೀಟರ್ ಡೀಸೆಲ್ ಎಂಜಿನ್ ಅನ್ನು ಮುಂದುವರಿಸಲಿದೆ.

  • ಭಾರತದಾದ್ಯಂತ 29.99 ಲಕ್ಷ ರೂ.ನಿಂದ 37.14 ಲಕ್ಷ ರೂ.ವರೆಗೆ ಇರುವ ಇದರ ಪ್ರಸ್ತುತ ಮೊಡೆಲ್‌ನ ಎಕ್ಸ್-ಶೋರೂಂ ಬೆಲೆಗಿಂತ ಇದು ಹೆಚ್ಚಿನ ಬೆಲೆಯನ್ನು ಹೊಂದುವ ಸಾಧ್ಯತೆಯಿದೆ.

2024ರ ಜೀಪ್ ಮೆರಿಡಿಯನ್ ತನ್ನ ಮುಂಬರುವ ಬಿಡುಗಡೆಗಾಗಿ ಸಜ್ಜಾಗುತ್ತಿದೆ ಮತ್ತು ಈ ಎಸ್‌ಯುವಿಗಾಗಿ ಬುಕ್ಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿದೆ. ಇದು ಒಂದೇ ರೀತಿಯ ವಿನ್ಯಾಸವನ್ನು ಪಡೆಯುತ್ತದೆ, ಹಾಗೆಯೇ ಇದು ಲಾಂಗಿಟ್ಯೂಡ್‌ ಮತ್ತು ಲಾಂಗಿಟ್ಯೂಡ್‌(ಒಪ್ಶನಲ್‌) ಎಂಬ ಎರಡು ಹೊಸ ಬೇಸ್-ಸ್ಪೆಕ್ ವೇರಿಯೆಂಟ್‌ಗಳನ್ನು ಪಡೆಯುತ್ತದೆ ಎಂದು ಡೀಲರ್‌ಶಿಪ್‌ನ ಬಲ್ಲಮೂಲಗಳಿಂದ ತಿಳಿದುಬಂದಿದೆ. ಹೆಚ್ಚುವರಿಯಾಗಿ, ನಾವು ಮೆರಿಡಿಯನ್ ಕುರಿತು ಕೆಲವು ಹೆಚ್ಚಿನ ಮಾಹಿತಿಯನ್ನು ಸಹ ಪಡೆದುಕೊಂಡಿದ್ದೇವೆ, ಅದನ್ನು ಕೆಳಗೆ ವಿವರಿಸಲಾಗಿದೆ:

2024ರ ಜೀಪ್ ಮೆರಿಡಿಯನ್: ಯಾವ ವೇರಿಯೆಂಟ್‌ಗಳನ್ನು ಪಡೆಯುತ್ತವೆ?

ಹೊಸ ಬೇಸ್-ಸ್ಪೆಕ್ ಲಾಂಗಿಟ್ಯೂಡ್ ವೇರಿಯೆಂಟ್‌ 5-ಸೀಟರ್‌ನ ಸೀಟಿಂಗ್‌ ವಿನ್ಯಾಸದಲ್ಲಿ ಲಭ್ಯವಿರುತ್ತದೆ. ಕ್ಯಾಬಿನ್ ಕಪ್ಪು ಮತ್ತು ಗ್ರೇ ಇಂಟಿರಿಯರ್‌ ಥೀಮ್ ಅನ್ನು ಹೊಂದಿರುತ್ತದೆ, ಜೀಪ್ ಕಂಪಾಸ್‌ನ ಲಾಂಗಿಟ್ಯೂಡ್ ವೇರಿಯೆಂಟ್‌ನಿಂದ ಎರವಲು ಪಡೆಯಲಾಗಿದೆ. ಈ ಬೇಸ್-ಸ್ಪೆಕ್ ಮೆರಿಡಿಯನ್ 10.1-ಇಂಚಿನ ಟಚ್‌ಸ್ಕ್ರೀನ್ ಮತ್ತು 7-ಇಂಚಿನ ಇನ್ಸ್‌ಟ್ರುಮೆಂಟ್‌ ಕ್ಲಸ್ಟರ್ ಅನ್ನು ಸಹ ಹೊಂದಿರುತ್ತದೆ. ಇದನ್ನು 6 ಏರ್‌ಬ್ಯಾಗ್‌ಗಳು (ಎಲ್ಲಾ ಮೊಡೆಲ್‌ಗಳಲ್ಲಿ) ಮತ್ತು LED ಹೆಡ್‌ಲೈಟ್‌ಗಳೊಂದಿಗೆ ನೀಡಲಾಗುವುದು. ಇದು 2-ಲೀಟರ್ ಡೀಸೆಲ್ ಎಂಜಿನ್ (170 ಪಿಎಸ್‌/350 ಎನ್‌ಎಮ್‌) ಜೊತೆಗೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಎಕ್ಸ್‌ಕ್ಲೂಸಿವ್‌ ಆಗಿ ಮುಂದುವರಿಯುತ್ತದೆ ಮತ್ತು ಇದು ಫ್ರಂಟ್‌ ವೀಲ್‌ ಡ್ರೈವ್‌ ಆಗಿರಲಿದೆ.

ಬೇಸ್‌ ಮೊಡೆಲ್‌ಗಿಂತ ಒಂದು ಮೇಲಿನ ಲಾಂಗಿಟ್ಯೂಡ್(ಒಪ್ಶನಲ್‌) ವೇರಿಯೆಂಟ್‌ 7 ಸೀಟ್‌ಗಳನ್ನು ಪಡೆಯುತ್ತದೆ. ಇದು ಹೊಸ ಬೇಸ್ ಮಾಡೆಲ್‌ನಂತೆಯೇ ಇಂಟೀರಿಯರ್ ಥೀಮ್ ಅನ್ನು ಹೊಂದಿರುತ್ತದೆ ಆದರೆ ಲೆದರ್‌ನಿಂದ ಸುತ್ತಿದ ಸ್ಟೀರಿಂಗ್ ವೀಲ್‌ ಅನ್ನು ಪಡೆಯುತ್ತದೆ. ಲಾಂಗಿಟ್ಯೂಡ್‌ನೊಂದಿಗೆ ನೀಡಲಾದ ಫೀಚರ್‌ಗಳ ಜೊತೆಗೆ, ಇದು ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಫಾಗ್ ಲ್ಯಾಂಪ್‌ಗಳನ್ನು ಪಡೆಯುತ್ತದೆ. ಲಾಂಗಿಟ್ಯೂಡ್‌ (ಒಪ್ಶನಲ್‌) ವೇರಿಯೆಂಟ್‌ ಫ್ರಂಟ್‌ ವೀಲ್‌-ಡ್ರೈವ್‌ ಸೆಟಪ್‌ನೊಂದಿಗೆ ಮ್ಯಾನ್ಯುವಲ್ ಅಥವಾ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನಡುವೆ ಆಯ್ಕೆಯನ್ನು ಪಡೆಯುತ್ತದೆ.

ಮಿಡ್-ಸ್ಪೆಕ್ ಲಿಮಿಟೆಡ್ (ಒಪ್ಶನಲ್‌) ಕುರಿತು ಹೇಳುವುದಾದದರೆ, ಇದು ಹೊಸ ಬೀಜ್ ಇಂಟೀರಿಯರ್ ಥೀಮ್ ಮತ್ತು ಆಪ್‌ಡೇಟ್‌ ಮಾಡಲಾದ ಕನೆಕ್ಟೆಡ್‌ ಕಾರ್ ಟೆಕ್ ಸೂಟ್ ಅನ್ನು ಪಡೆಯುತ್ತದೆ. ಇತರ ಫೀಚರ್‌ಗಳನ್ನು ಪ್ರಸ್ತುತ-ಸ್ಪೆಕ್ ವೇರಿಯೆಂಟ್‌ನಿಂದ ಎರವಲು ಪಡೆಯಲಾಗುತ್ತದೆ. ಇದರ ಹೈಲೈಟ್‌ಗಳು 2 ನೇ ಮತ್ತು 3 ನೇ ಸಾಲಿಗೆ ದ್ವಾರಗಳೊಂದಿಗೆ ಡ್ಯುಯಲ್-ಝೋನ್ ಎಸಿ, 10.2-ಇಂಚಿನ ಡ್ರೈವರ್ ಡಿಸ್‌ಪ್ಲೇ ಮತ್ತು 9-ಸ್ಪೀಕರ್ ಆಲ್ಪೈನ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿವೆ. ಇದು ಫ್ರಂಟ್‌ ವೀಲ್‌ ಡ್ರೈವ್‌ ಅಥವಾ ಆಲ್-ವೀಲ್-ಡ್ರೈವ್ (AWD) ಸೆಟಪ್‌ನೊಂದಿಗೆ ನೀಡುವುದನ್ನು ಮುಂದುವರಿಸುತ್ತದೆ.

ಸಂಪೂರ್ಣ ಲೋಡ್ ಮಾಡಲಾದ ಓವರ್‌ಲ್ಯಾಂಡ್ ವೇರಿಯೆಂಟ್‌ ಟ್ಯೂಪೆಲೋ-ಬಣ್ಣದ ಕ್ಯಾಬಿನ್‌ನೊಂದಿಗೆ ಕನೆಕ್ಟೆಡ್‌ ಕಾರ್‌ ಟೆಕ್ ಮತ್ತು ಹೊಸ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸೂಟ್ ಅನ್ನು ಪಡೆಯುತ್ತದೆ. ಇದು ಆಟೋಮ್ಯಾಟಿಕ್‌ ಮತ್ತು ಮ್ಯಾನುವಲ್‌ ಆಯ್ಕೆಗಳೊಂದಿಗೆ ಫ್ರಂಟ್‌ ವೀಲ್‌ ಡ್ರೈವ್‌ ಸೆಟಪ್ ಅನ್ನು ಸಹ ಪಡೆಯುತ್ತದೆ, ಆಟೋಮ್ಯಾಟಿಕ್‌ ಮಾತ್ರ ಆಲ್‌ವೀಲ್‌ಡ್ರೈವ್‌ ಅನ್ನು ಸೆಟಪ್ ಪಡೆಯುತ್ತದೆ.

ಇದನ್ನೂ ಓದಿ: 2024ರ ಕೊನೆಯಲ್ಲಿ ಬಿಡುಗಡೆಗೊಳ್ಳಲಿರುವ ಕಾರುಗಳ ಪಟ್ಟಿ ಇಲ್ಲಿದೆ..

2024 ಜೀಪ್ ಮೆರಿಡಿಯನ್: ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಭಾರತದಾದ್ಯಂತ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಜೀಪ್ ಮೆರಿಡಿಯನ್ ಎಕ್ಸ್ ಶೋರೂಂ ಬೆಲೆಗಳು 29.99 ಲಕ್ಷ ರೂ.ನಿಂದ 37.14 ಲಕ್ಷ ರೂ.ವರೆಗೆ ಇದೆ. ಆಪ್‌ಡೇಟ್‌ ಮಾಡಲಾದ ಮೆರಿಡಿಯನ್ ಎರಡು ಹೊಸ ಬೇಸ್-ಸ್ಪೆಕ್ ವೇರಿಯೆಂಟ್‌ಗಳನ್ನು ಹೊಂದಲಿದೆ ಎಂಬುವುದನ್ನು ಪರಿಗಣಿಸಿದಾಗ, ಅದರ ಬೆಲೆಗಳು ಇದೇ ರೀತಿಯ ಆರಂಭಿಕ ಬೆಲೆಯಿಂದ ಪ್ರಾರಂಭವಾಗುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. ಅದರ ಪ್ರತಿಸ್ಪರ್ಧಿಗಳ ವಿಷಯದಲ್ಲಿ, ಇದು ಟೊಯೋಟಾ ಫಾರ್ಚುನರ್, ಎಂಜಿ ಗ್ಲೋಸ್ಟರ್ ಮತ್ತು ಸ್ಕೋಡಾ ಕೊಡಿಯಾಕ್‌ನೊಂದಿಗೆ ಸ್ಪರ್ಧಿಸುವುದನ್ನು ಮುಂದುವರಿಸುತ್ತದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: : ಜೀಪ್ ಮೆರಿಡಿಯನ್ ಡೀಸೆಲ್‌

Share via

Write your Comment on Jeep ಮೆರಿಡಿಯನ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್ಫೇಸ್ ಲಿಫ್ಟ್
Rs.65.90 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.10 - 11.23 ಲಕ್ಷ*
ಹೊಸ ವೇರಿಯೆಂಟ್
Rs.18.99 - 32.41 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ