ಎಕ್ಸ್‌ಕ್ಲೂಸಿವ್: ಲಾಂಚ್ ಮುಂಚೆ ಔಟ್ ಆಗಿದೆ ಇಂಡಿಯಾ-ಸ್ಪೆಕ್ Kia EV9 ಎಲೆಕ್ಟ್ರಿಕ್ ಎಸ್‌ಯುವಿಯ ಸ್ಪೆಸಿಫಿಕೇಷನ್‌ಗಳು
ಕಿಯಾ ಇವಿ9 ಗಾಗಿ shreyash ಮೂಲಕ ಸೆಪ್ಟೆಂಬರ್ 19, 2024 05:09 pm ರಂದು ಪ್ರಕಟಿಸಲಾಗಿದೆ
- 54 Views
- ಕಾಮೆಂಟ್ ಅನ್ನು ಬರೆಯಿರಿ
ಇಂಡಿಯಾ-ಸ್ಪೆಕ್ ಕಿಯಾ ಇವಿ9 99.8 kWh ಬ್ಯಾಟರಿ ಪ್ಯಾಕ್ ಅನ್ನು ಬಳಸಿಕೊಂಡು 500 ಕಿ.ಮೀಗಿಂತ ಹೆಚ್ಚಿನ ಕ್ಲೇಮ್ ಮಾಡಿರುವ ರೇಂಜ್ ಅನ್ನು ನೀಡುತ್ತದೆ
-
ಹೊರಭಾಗದ ಪ್ರಮುಖ ಫೀಚರ್ ಗಳಲ್ಲಿ ಡಿಜಿಟಲ್ ಲೈಟಿಂಗ್ ಪ್ಯಾಟರ್ನ್ ಹೊಂದಿರುವ ಗ್ರಿಲ್ ಮತ್ತು ಸ್ಟಾರ್ ಮ್ಯಾಪ್ LED DRL ಗಳನ್ನು ಒಳಗೊಂಡಿವೆ.
-
ಕ್ಯಾಬಿನ್ ನಲ್ಲಿ ಇದು ಟ್ರಿಪಲ್ ಸ್ಕ್ರೀನ್ ಸೆಟಪ್ ಜೊತೆಗೆ ಸರಳವಾದ ಡ್ಯಾಶ್‌ಬೋರ್ಡ್ ಡಿಸೈನ್ ಅನ್ನು ಪಡೆಯುತ್ತದೆ.
-
ಫೀಚರ್ ವಿಷಯದಲ್ಲಿ ಡ್ಯುಯಲ್ ಸನ್‌ರೂಫ್‌ಗಳು, ರಿಲಾಕ್ಸೆಷನ್ ಫ್ರಂಟ್ ಮತ್ತು ಎರಡನೇ ಸಾಲಿನ ಸೀಟ್ ಗಳು ಮತ್ತು ಲೆವೆಲ್ 2 ADAS ಅನ್ನು ಕೂಡ ಒಳಗೊಂಡಿವೆ.
-
ಎರಡನೇ ಸಾಲಿನ ಸೀಟ್ ಗಳು 8-ವೇ ಪವರ್ ಅಡ್ಜಸ್ಟಬಲ್ ಮತ್ತು ಮಸಾಜ್ ಫಂಕ್ಷನ್ ಅನ್ನು ಕೂಡ ಒಳಗೊಂಡಿವೆ.
-
ಇದು 384 PS ಮತ್ತು 700 Nm ಅನ್ನು ಉತ್ಪಾದಿಸುವ ಡ್ಯುಯಲ್ ಮೋಟಾರ್ ಸೆಟಪ್ ಅನ್ನು ಬಳಸುತ್ತದೆ, ಮತ್ತು ಇದು ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ನೀಡುತ್ತದೆ.
-
ಇದು 350 kW DC ವರೆಗೆ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ, ಮತ್ತು ಕೇವಲ 24 ನಿಮಿಷಗಳಲ್ಲಿ 10% ರಿಂದ 80% ವರೆಗೆ ಚಾರ್ಜ್ ಮಾಡಬಹುದಾಗಿದೆ.
-
ಬೆಲೆಯು 80 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.
ಕಿಯಾ EV9 ಅನ್ನು ಅಕ್ಟೋಬರ್ 3, 2024 ರಂದು ಬ್ರ್ಯಾಂಡ್‌ನ ಲೈನ್ ಅಪ್ ನಲ್ಲಿ ಟಾಪ್ ಎಲೆಕ್ಟ್ರಿಕ್ SUV ಆಗಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. EV9 ಅನ್ನು ಕಿಯಾ EV6 ಮತ್ತು ಹ್ಯುಂಡೈ ಐಯೋನಿಕ್ 5 ನಲ್ಲಿ ಬಳಸಲಾಗಿರುವ E-GMP ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಭಾರತದಲ್ಲಿ EV9 ಅಧಿಕೃತವಾಗಿ ಲಾಂಚ್ ಆಗುವ ಮುನ್ನ, ಅದರ ಸೈಜ್, ಫೀಚರ್ ಗಳು, ಬ್ಯಾಟರಿ ಪ್ಯಾಕ್ ಮತ್ತು ರೇಂಜ್ ಸೇರಿದಂತೆ ಅದರ ಸ್ಪೆಸಿಫಿಕೇಷನ್ ಗಳ ಕುರಿತು ನಾವು ಕೆಲವು ವಿಶೇಷ ವಿವರಗಳನ್ನು ಪಡೆದುಕೊಂಡಿದ್ದೇವೆ.
ಡೈಮೆನ್ಶನ್ ಗಳು
ಉದ್ದ |
5,010 ಮಿ.ಮೀ |
ಅಗಲ |
1,980 ಮಿ.ಮೀ |
ಎತ್ತರ |
1,755 ಮಿ.ಮೀ |
ವೀಲ್‌ಬೇಸ್ |
3,100 ಮಿ.ಮೀ |
ಕಿಯಾ EV9 5 ಮೀಟರ್‌ಗಿಂತಲೂ ಹೆಚ್ಚು ಉದ್ದವಾಗಿದೆ, ಹಾಗಾಗಿ ಇದು ರಸ್ತೆಯಲ್ಲಿ ಉತ್ತಮ ಡ್ರೈವಿಂಗ್ ಅನುಭವವನ್ನು ನೀಡುತ್ತದೆ. EV9 ಬಾಕ್ಸಿ ಆಗಿರುವ SUV ಆಕಾರವನ್ನು ಹೊಂದಿದ್ದರೂ ಕೂಡ, ಅದರ ಆಧುನಿಕ ಡಿಸೈನ್ ಅದನ್ನು ಗಮನ ಸೆಳೆಯುವಂತೆ ಮಾಡುತ್ತದೆ. ಇದು ಗ್ರಿಲ್‌ಗೆ ಇಂಟಿಗ್ರೇಟ್ ಆಗಿರುವ ಡಿಜಿಟಲ್ ಪ್ಯಾಟರ್ನ್ ಲೈಟಿಂಗ್, ಅನಿಮೇಟೆಡ್ ಲೈಟಿಂಗ್ ಪ್ಯಾಟರ್ನ್ ಅನ್ನು ರಚಿಸುವ ಸ್ಟಾರ್ ಮ್ಯಾಪ್ ಲೈಟಿಂಗ್ ಎಂಬ ಹೆಸರಿನ LED DRL ಗಳನ್ನು ವರ್ಟಿಕಲ್ ಆಗಿ ಜೋಡಿಸಲಾದ ಹೆಡ್‌ಲೈಟ್ ಸೆಟಪ್ ನಲ್ಲಿ ಇರಿಸಲಾಗಿದೆ.
ಟೆಕ್‌ನಿಂದ ಲೋಡ್ ಆಗಿರುವ ಕ್ಯಾಬಿನ್
ಕ್ಯಾಬಿನ್ ನಲ್ಲಿ ಕಿಯಾ EV9 ಬ್ಲಾಕ್ ಕಲರ್ ಫಿನಿಷ್ ಪಡೆದಿರುವ ಸರಳವಾದ ಡ್ಯಾಶ್‌ಬೋರ್ಡ್ ಡಿಸೈನ್ ಜೊತೆಗೆ ಡ್ಯುಯಲ್-ಟೋನ್ ವೈಟ್ ಮತ್ತು ಬ್ಲಾಕ್ ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿಯನ್ನು ಹೊಂದಿದೆ. ಇದು ಟ್ರಿಪಲ್ ಸ್ಕ್ರೀನ್ ಸೆಟಪ್ ಅನ್ನು ಹೊಂದಿದ್ದು, ಎರಡು 12.3-ಇಂಚಿನ ಸ್ಕ್ರೀನ್‌ಗಳು ಮಧ್ಯದಲ್ಲಿ ಇರುವ ಕ್ಲೈಮೇಟ್ ಕಂಟ್ರೋಲ್ ನ 5.3-ಇಂಚಿನ ಡಿಸ್ಪ್ಲೇ ಜೊತೆಗೆ ಕೂಡಿಕೊಳ್ಳುತ್ತವೆ. ಸ್ಕ್ರೀನ್ ಕೆಳಗೆ, ಸ್ಟಾರ್ಟ್/ಸ್ಟಾಪ್, ಕ್ಲೈಮೇಟ್ ಕಂಟ್ರೋಲ್ ಮತ್ತು ವೆಂಟಿಲೇಷನ್ ಸಿಸ್ಟಮ್, ಮೀಡಿಯಾ ಮತ್ತು ಇತರ ಸೆಟ್ಟಿಂಗ್‌ಗಳಿಗಾಗಿ ಡ್ಯಾಶ್‌ಬೋರ್ಡ್ ಪ್ಯಾನೆಲ್‌ನಲ್ಲಿ ವರ್ಚುವಲ್ ಆಗಿ ಕಾಣಿಸದೆ ಇರುವ ಟಚ್-ಇನ್‌ಪುಟ್ ಕಂಟ್ರೋಲ್ ಗಳಿವೆ. EV9 ನ ಎರಡನೇ ಸಾಲು ಸೀಟುಗಳು 8-ವೇ ಪವರ್ ಅಡ್ಜಸ್ಟ್ಮೆಂಟ್ ಮತ್ತು ಮಸಾಜ್ ಫಂಕ್ಷನ್ ನೊಂದಿಗೆ ಕ್ಯಾಪ್ಟನ್ ಸೀಟ್‌ಗಳನ್ನು ನೀಡುತ್ತದೆ.
ಇಂಡಿಯಾ-ಸ್ಪೆಕ್ EV9 ಯಲ್ಲಿರುವ ಇತರ ಫೀಚರ್ ಗಳಲ್ಲಿ ಮೊದಲ ಮತ್ತು ಎರಡನೇ ಸಾಲಿಗೆ ಪ್ರತ್ಯೇಕ ಸನ್‌ರೂಫ್‌ಗಳು, ಡಿಜಿಟಲ್ IRVM (ಇನ್ಸೈಡ್ ರಿಯರ್ ವ್ಯೂ ಮಿರರ್) ಮತ್ತು ಲೆಗ್ ಸಪೋರ್ಟ್ ನೊಂದಿಗೆ ಮೊದಲ ಮತ್ತು ಎರಡನೇ ಸಾಲಿನ ಸೀಟ್ ಗಳಿಗೆ ರಿಲಾಕ್ಸೆಷನ್ ಫೀಚರ್ ಅನ್ನು ಒಳಗೊಂಡಿದೆ. EV9 ಸುರಕ್ಷತೆಯ ವಿಷಯದಲ್ಲಿ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್‌ನಂತಹ ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಒಳಗೊಂಡಿದೆ.
ಇದನ್ನು ಕೂಡ ಓದಿ: 2024 ಕಿಯಾ ಕಾರ್ನಿವಲ್ ಬುಕಿಂಗ್ ಪ್ರಾರಂಭ, ಮೊದಲ ದಿನದಲ್ಲಿ 1,800 ಕ್ಕಿಂತ ಹೆಚ್ಚು ಅಡ್ವಾನ್ಸ್ ಆರ್ಡರ್‌ಗಳು
ಬ್ಯಾಟರಿ ಪ್ಯಾಕ್ ಮತ್ತು ರೇಂಜ್
ಕಿಯಾ ತನ್ನ ಇಂಡಿಯಾ-ಸ್ಪೆಕ್ EV9 ಅನ್ನು 99.8 kWh ಬ್ಯಾಟರಿ ಪ್ಯಾಕ್‌ನೊಂದಿಗೆ ನೀಡುತ್ತದೆ. ವಿವರವಾದ ಸ್ಪೆಸಿಫಿಕೇಷನ್ ಗಳನ್ನು ಈ ಕೆಳಗೆ ನೀಡಲಾಗಿದೆ:
ಬ್ಯಾಟರಿ ಪ್ಯಾಕ್ |
99.8 kWh |
ಕ್ಲೇಮ್ ಮಾಡಿರುವ ರೇಂಜ್ |
500 ಕಿ.ಮೀಗಿಂತ ಹೆಚ್ಚು |
ಎಲೆಕ್ಟ್ರಿಕ್ ಮೋಟಾರ್‌ಗಳ ಸಂಖ್ಯೆ |
2 |
ಡ್ರೈವ್ ಪ್ರಕಾರ |
AWD (ಆಲ್-ವೀಲ್-ಡ್ರೈವ್) |
ಪವರ್ |
384 PS |
ಟಾರ್ಕ್ |
700 Nm |
EV9 350 kW ವರೆಗೆ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ, ಆ ಮೂಲಕ ಅದರ ಬ್ಯಾಟರಿಯು ಕೇವಲ 24 ನಿಮಿಷಗಳಲ್ಲಿ 10% ರಿಂದ 80% ವರೆಗೆ ಚಾರ್ಜ್ ಆಗುತ್ತದೆ. EV9 V2L (ವೆಹಿಕಲ್ ಟು ಲೋಡ್) ಫೀಚರ್ ಅನ್ನು ಹೊಂದಿದ್ದು, ಇದು ಕಾರಿನ ಬ್ಯಾಟರಿಯನ್ನು ಬಳಸಿಕೊಂಡು ನಿಮ್ಮ ಡಿವೈಸ್ ಗಳಿಗೆ ಪವರ್ ಅನ್ನು ನೀಡುತ್ತದೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ EV9 ಬೆಲೆಯು ರೂ. 80 ಲಕ್ಷಗಳಿಂದ (ಎಕ್ಸ್ ಶೋ ರೂಂ) ಶುರುವಾಗುವ ನಿರೀಕ್ಷೆಯಿದೆ. ಭಾರತದಲ್ಲಿ, ಇದು BMW iX ಮತ್ತು ಮರ್ಸಿಡಿಸ್ - ಬೆಂಜ್ EQE SUV ಗಳಿಗೆ ಹೋಲಿಸಿದರೆ ಕೈಗೆಟುಕುವ ಬೆಲೆಯ ಪರ್ಯಾಯ ಆಯ್ಕೆಯಾಗಲಿದೆ.
ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ
0 out of 0 found this helpful