• English
  • Login / Register

ಎಕ್ಸ್‌ಕ್ಲೂಸಿವ್: ಟಾಟಾ ಆಲ್ಟ್ರೋಜ್ ರೇಸರ್ ಫೋಟೋಗಳು ಮತ್ತೆ ಲೀಕ್, 360-ಡಿಗ್ರಿ ಕ್ಯಾಮೆರಾ ಸೇರ್ಪಡೆ

published on ಮೇ 21, 2024 06:06 pm by dipan for ಟಾಟಾ ಆಲ್ಟ್ರೋಜ್ ರೇಸರ್

  • 29 Views
  • ಕಾಮೆಂಟ್‌ ಅನ್ನು ಬರೆಯಿರಿ

ಅಧಿಕೃತವಾಗಿ ಜೂನ್‌ನಲ್ಲಿ ಮಾರುಕಟ್ಟೆಗೆ ಬರಲಿರುವ ಟಾಟಾ ಆಲ್ಟ್ರೊಜ್ ರೇಸರ್, ನೆಕ್ಸಾನ್‌ನ 120 PS ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುಲಿದೆ

Tata Altroz Racer spied

  • ಇತ್ತೀಚಿನ ಸ್ಪೈ ಶಾಟ್‌ಗಳು ಇದು ಹ್ಯುಂಡೈ i20 N ಲೈನ್‌ನಂತೆಯೇ ಡ್ಯುಯಲ್-ಟಿಪ್ ಎಕ್ಸಾಸ್ಟ್ ಅನ್ನು ಪಡೆಯಲಿದೆ ಎಂದು ತೋರಿಸುತ್ತದೆ
  •  ನೆಕ್ಸಾನ್‌ನಲ್ಲಿರುವ ದೊಡ್ಡ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ ಅನ್ನು ಅಪ್‌ಗ್ರೇಡ್‌ ಆಗಿ ಪಡೆಯಲಿದೆ
  •  ಇದು ಹೆಚ್ಚಿನ ಸುರಕ್ಷತೆಗಾಗಿ 360-ಡಿಗ್ರಿ ಕ್ಯಾಮೆರಾ ಮತ್ತು ಬ್ಲೈಂಡ್-ಸ್ಪಾಟ್ ಮಾನಿಟರ್ ಅನ್ನು ಹೊಂದಿದೆ.
  •  ಇದು ಹೊಸ ಅಲೊಯ್ ವೀಲ್ ಡಿಸೈನ್ ಮತ್ತು ಬಿಳಿ ಪಟ್ಟಿಗಳೊಂದಿಗೆ ಕಿತ್ತಳೆ ಮತ್ತು ಕಪ್ಪು ಡ್ಯೂಯಲ್-ಟೋನ್ ಕಲರ್ ನೊಂದಿಗೆ ಬರಲಿದೆ.
  •  ನೆಕ್ಸಾನ್‌ನ 1.2-ಲೀಟರ್ ಟರ್ಬೊ-ಪೆಟ್ರೋಲ್ ಯೂನಿಟ್ ನೊಂದಿಗೆ 120 PS ಮತ್ತು 170 Nm ಅನ್ನು ಉತ್ಪಾದಿಸುತ್ತದೆ
  •  ಜೂನ್ 2024 ಕ್ಕೆ ಮಾರುಕಟ್ಟೆಗೆ ಬರಲಿದ್ದು, ಬೆಲೆಯು 10 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ)

 ಹೊಸ ಟಾಟಾ ಆಲ್ಟ್ರೋಜ್ ರೇಸರ್ ಮಾರುಕಟ್ಟೆಗೆ ಬರಲು ಬಹುತೇಕ ಸಿದ್ಧವಾಗಿದೆ ಮತ್ತು ಯಾವುದೇ ಕೇಮಫ್ಲೇಜ್ ಇಲ್ಲದೆ ಇದನ್ನು ಮತ್ತೊಮ್ಮೆ ಟೆಸ್ಟ್ ಮಾಡುವುದನ್ನು ನೋಡಲಾಗಿದೆ. ಈ ಇತ್ತೀಚಿನ ಲೀಕ್ ಆಗಿರುವ ಚಿತ್ರಗಳು ಟಾಟಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಮುಂಬರುವ ಸ್ಪೋರ್ಟಿ ವರ್ಷನ್ ಕುರಿತು ಹೆಚ್ಚಿನ ವಿವರಗಳನ್ನು ನೀಡುತ್ತದೆ.

 ಇದರಲ್ಲಿ ಹೊಸತು ಏನೇನಿದೆ

 ಭಾರತ್ ಮೊಬಿಲಿಟಿ ಎಕ್ಸ್‌ಪೋ 2024 ರಲ್ಲಿ ತೋರಿಸಿರುವಂತೆ ಟಾಟಾ ತನ್ನ ಆಲ್ಟ್ರೊಜ್ ರೇಸರ್‌ನ ಅಂತಿಮ ವರ್ಷನ್ ಗೆ ಕಿತ್ತಳೆ-ಕಪ್ಪು ಕಲರ್ ಸ್ಕೀಮ್ ಅನ್ನು ಇಟ್ಟುಕೊಂಡಿರುವಂತೆ ತೋರುತ್ತಿದೆ. ಇತ್ತೀಚಿಗೆ ಲೀಕ್ ಆಗಿರುವ ಚಿತ್ರಗಳು ಡ್ಯುಯಲ್-ಟಿಪ್ ಎಕ್ಸಾಸ್ಟ್ ನ ಸೇರ್ಪಡೆಯನ್ನು ದೃಢಪಡಿಸಿದೆ, ಇದು ಈ ಕಾರಿಗೆ ಸ್ಪೋರ್ಟಿ ಆಗಿರುವ ಸೌಂಡ್ ಅನ್ನು ನೀಡುವ ಸಾಧ್ಯತೆಯಿದೆ. ಇದು ಮುಂಭಾಗದ ಫೆಂಡರ್‌ನಲ್ಲಿ "#racer" ಬ್ಯಾಡ್ಜ್ ಮತ್ತು ಬೂಟ್ ಲಿಡ್‌ನಲ್ಲಿ "iTurbo+" ಅನ್ನು ಕೂಡ ಹೊಂದಿದೆ.

Tata Altroz Racer with dual-tip exhaust

ಒಳ ಭಾಗವನ್ನು ಅಪ್ಡೇಟ್ ಮಾಡಲಾಗಿದೆ ಮತ್ತು ಆಟೋ ಎಕ್ಸ್‌ಪೋ 2023 ರಲ್ಲಿ ನಾವು ಮೊದಲ ಬಾರಿಗೆ ನೋಡಿದ ಫೀಚರ್ ಗಳನ್ನು ಹೊಂದಿರುವಂತೆ ತೋರುತ್ತಿದೆ. ಟೆಸ್ಟ್ ಕಾರಿನಲ್ಲಿ, ನಾವು ಹೊಸ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಈಗಿರುವ ಆಲ್ಟ್ರೊಜ್ ಮಾಡೆಲ್ ನಲ್ಲಿರುವ ಸಿಲ್ವರ್ ಮತ್ತು ಬ್ಲಾಕ್ ಕ್ಯಾಬಿನ್ ಥೀಮ್ ಅನ್ನು ನೋಡಿದ್ದೇವೆ.

Tata Altroz Racer interior

ನಾವು ಔಟ್ಸೈಡ್ ರಿಯರ್‌ವ್ಯೂ ಮಿರರ್‌ಗಳ (ORVMs) ಅಡಿಯಲ್ಲಿ ಕ್ಯಾಮೆರಾವನ್ನು ಕೂಡ ನೋಡಿದ್ದೇವೆ, ಇದು 360-ಡಿಗ್ರಿ ಕ್ಯಾಮೆರಾ ಮತ್ತು ಬ್ಲೈಂಡ್-ಸ್ಪಾಟ್ ಮಾನಿಟರ್ ಫೀಚರ್ ಗಳನ್ನು ಖಚಿತಪಡಿಸುತ್ತದೆ.

 ಇತರೆ ಫೀಚರ್ ಗಳು

ಭಾರತ್ ಮೊಬಿಲಿಟಿ ಎಕ್ಸ್‌ಪೋ 2024 ರಲ್ಲಿ ಪ್ರದರ್ಶಿಸಲಾದ ಆಲ್ಟ್ರೊಜ್ ರೇಸರ್ ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು 7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಹೊಂದಿತ್ತು. ಇಲ್ಲಿ ಅಂಬರ್ ಆಂಬಿಯೆಂಟ್ ಲೈಟಿಂಗ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳನ್ನು ಕೂಡ ತೋರಿಸಲಾಗಿತ್ತು. ಸುರಕ್ಷತಾ ಫೀಚರ್ ಗಳಲ್ಲಿ ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ (EBD) ಜೊತೆಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಅನ್ನು ಪಡೆಯುವ ಸಾಧ್ಯತೆಯಿದೆ. ಇದು ಆಲ್ಟ್ರೊಜ್ ಹ್ಯಾಚ್‌ಬ್ಯಾಕ್ ನ ಸ್ಪೋರ್ಟಿಯರ್ ವರ್ಷನ್ ಆಗಿರುವ ಜೊತೆಗೆ ಎಲ್ಲ ರೀತಿಯಲ್ಲೂ ಉತ್ತಮ ಫೀಚರ್ ಗಳನ್ನು ಪಡೆದಿರುವ ಕಾರಾಗಿದೆ.

2024 Tata Altroz Racer cabin

 ಹೆಚ್ಚು ಶಕ್ತಿಶಾಲಿಯಾದ ಪವರ್ ಟ್ರೈನ್

 ಟಾಟಾ ಆಲ್ಟ್ರೋಜ್ ರೇಸರ್ ನೆಕ್ಸಾನ್‌ನ ಟರ್ಬೊ-ಪೆಟ್ರೋಲ್ ಎಂಜಿನ್ ಪಡೆಯಲಿದೆ ಮತ್ತು ಅದರ 

ಸ್ಪೆಸಿಫಿಕೇಷನ್ ಗಳು ಈ ಕೆಳಗಿನಂತಿವೆ:

 ಸ್ಪೆಸಿಫಿಕೇಷನ್ ಗಳು

 1.2 ಟರ್ಬೊ-ಪೆಟ್ರೋಲ್ ಎಂಜಿನ್

 ಪವರ್

120 PS

 ಟಾರ್ಕ್

170 Nm

 ಟ್ರಾನ್ಸ್‌ಮಿಷನ್

 6-ಸ್ಪೀಡ್ MT, 7-ಸ್ಪೀಡ್ DCT (ನಿರೀಕ್ಷಿಸಲಾಗಿದೆ)

 ಇದರ ಜೊತೆಗೆ, ಆಲ್ಟ್ರೋಜ್ ರೇಸರ್ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ (ಇದನ್ನು ಕೂಡ ನೆಕ್ಸಾನ್‌ನಿಂದ ಪಡೆಯಲಾಗಿದೆ) ಬರುವ ನಿರೀಕ್ಷೆಯಿದೆ. ಮಾರುಕಟ್ಟೆಯಲ್ಲಿರುವ ಪ್ರಸ್ತುತ ವೇರಿಯಂಟ್ ಗಳು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ DCTಯನ್ನು 1.2-ಲೀಟರ್ ನ್ಯಾಚುರಲಿ-ಆಸ್ಪಿರೇಟೆಡ್ ಎಂಜಿನ್‌ ಅನ್ನು ಪಡೆದಿವೆ. ಇದಲ್ಲದೆ, ಆಲ್ಟ್ರೋಜ್ iTurbo ವೇರಿಯಂಟ್ ಗಳು 110 PS ಮತ್ತು 140 Nm ಅನ್ನು ಉತ್ಪಾದಿಸುವ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತವೆ.

 ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಟಾಟಾ ಆಲ್ಟ್ರೋಜ್ ರೇಸರ್ ಹ್ಯುಂಡೈ i20 N ಲೈನ್ (120 PS/172 Nm) ಗೆ ನೇರ ಪ್ರತಿಸ್ಪರ್ಧಿಯಾಗಿದೆ ಮತ್ತು ಬೆಲೆಯು ಸುಮಾರು ರೂ. 10 ಲಕ್ಷವಿರುವ ಸಾಧ್ಯತೆಯಿದೆ. ಹಾಗೆಯೆ, ರೆಗ್ಯುಲರ್ ಆಲ್ಟ್ರೋಝ್ ವೇರಿಯಂಟ್ ಗಳ ಬೆಲೆಯು 6.65 ಲಕ್ಷದಿಂದ 10.80 ಲಕ್ಷದವರೆಗೆ ಇದೆ.

 ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಬೆಲೆಯಾಗಿದೆ

 ಇನ್ನಷ್ಟು ಓದಿ: ಟಾಟಾ ಆಲ್ಟ್ರೋಜ್ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಆಲ್ಟ್ರೋಝ್ Racer

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience