2024ರ Bharat Mobility Expoನಲ್ಲಿ ಅನಾವರಣಗೊಳ್ಳಲಿರುವ ಟಾಟಾ ಕಾರುಗಳ ಪಟ್ಟಿ ಇಲ್ಲಿವೆ

published on ಫೆಬ್ರವಾರಿ 01, 2024 03:14 pm by rohit for ಟಾಟಾ ನೆಕ್ಸ್ಂನ್‌

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಆಟೋಮೋಟಿವ್ ಈವೆಂಟ್‌ನಲ್ಲಿ ಟಾಟಾ ತನ್ನ ಮೂರು ಹೊಸ ಕೊಡುಗೆಗಳನ್ನು ಒಳಗೊಂಡಂತೆ ಎಂಟು ಮಾಡೆಲ್ ಗಳನ್ನು ಪ್ರದರ್ಶಿಸಲಿದೆ

Tata Motors at Bharat Mobility Expo

ಭಾರತದ ಮೊದಲ ಭಾರತ್ ಮೊಬಿಲಿಟಿ ಎಕ್ಸ್‌ಪೋ ಫೆಬ್ರವರಿ 1 ಮತ್ತು 3, 2024 ರ ನಡುವೆ ನಡೆಯಲಿದೆ. ಭಾಗವಹಿಸುವವರ ಪಟ್ಟಿಯಲ್ಲಿರುವ ಟಾಟಾ ಮೋಟಾರ್ಸ್ ಈಗ ಎಂಟು ಮಾಡೆಲ್ ಗಳನ್ನು ಈವೆಂಟ್‌ನಲ್ಲಿ ಪ್ರದರ್ಶಿಸಲಿದೆ ಎಂದು ಬಹಿರಂಗಪಡಿಸಿದೆ. ಅದರ ವಿವರಗಳು ಇಲ್ಲಿದೆ:

 ಟಾಟಾ ನೆಕ್ಸಾನ್ CNG

Tata Nexon CNG

 ಟಾಟಾ ತಡವಾಗಿ ಪ್ರವೇಶಿಸಿದರೂ ಕೂಡ ಅದರ ಹಲವಾರು ಇನೊವೇಟಿವ್ ಸೊಲ್ಯೂಷನ್ಸ್ ನಿಂದಾಗಿ CNG ಕಾರ್ ಮಾರುಕಟ್ಟೆಯಲ್ಲಿ ಈಗಾಗಲೇ ಎರಡನೇ ಅತಿ ದೊಡ್ಡ ಮಾಡೆಲ್ ಆಗಿದೆ. 2023 ರಲ್ಲಿ ಪಂಚ್ ಮತ್ತು ಆಲ್ಟ್ರೋಜ್‌ಗೆ ಗ್ರೀನ್ ಫ್ಯುಯೆಲ್ ಆಯ್ಕೆಯನ್ನು ಸೇರಿಸಿದ ನಂತರ, ಟಾಟಾ ಅದನ್ನು ಫೇಸ್‌ಲಿಫ್ಟ್ ಆಗಿರುವ ನೆಕ್ಸಾನ್‌ನಲ್ಲಿಯೂ ಪರಿಚಯಿಸಲು ಸಿದ್ಧವಾಗಿದೆ. ಟಾಟಾ CNG ಕಿಟ್ ಅನ್ನು SUV ಯ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (120 PS/ 170 Nm) ನೊಂದಿಗೆ ಒದಗಿಸುತ್ತದೆ, ಆದರೆ ಕಡಿಮೆ ಉತ್ಪಾದನೆಯೊಂದಿಗೆ.

 ಟಾಟಾ ಸಫಾರಿ ಡಾರ್ಕ್ ಕಾನ್ಸೆಪ್ಟ್

Tata Safari Dark

 ಅಕ್ಟೋಬರ್ 2023 ರಲ್ಲಿ, ಸುಧಾರಿತ ಸ್ಟೈಲಿಂಗ್ ಮತ್ತು ಹೆಚ್ಚು ಆಧುನಿಕ ಫೀಚರ್ ಗಳೊಂದಿಗೆ ಫೇಸ್‌ಲಿಫ್ಟ್ ಆಗಿರುವ ಟಾಟಾ ಸಫಾರಿಯನ್ನು ಲಾಂಚ್ ಮಾಡಲಾಯಿತು. ಆ ಸಮಯದಲ್ಲಿ, ಟಾಟಾ 3-ಸಾಲಿನ SUV ಯ ಡಾರ್ಕ್ ಅವತಾರವನ್ನು ಕೂಡ ಮರು-ಪರಿಚಯಿಸಿತು, ಇದು ಕಪ್ಪುಬಣ್ಣದ ಅಲಾಯ್ ವೀಲ್ಸ್, ಗ್ರಿಲ್, ಕ್ಯಾಬಿನ್ ಥೀಮ್ ಮತ್ತು ಅಪ್ಹೋಲ್ಸ್ಟರಿ ಮತ್ತು ಹೊರಭಾಗದಲ್ಲಿ 'ಡಾರ್ಕ್' ಬ್ಯಾಡ್ಜ್‌ಗಳೊಂದಿಗೆ ಬರುತ್ತದೆ. ಈಗ, ಟಾಟಾ ಇದನ್ನು ಎಕ್ಸ್‌ಪೋದಲ್ಲಿ ಹೊಸ ರೀತಿಯ ಪರಿಕಲ್ಪನೆಯ ರೂಪದಲ್ಲಿ ಪ್ರದರ್ಶಿಸಲಿದೆ ಎಂದು ತೋರುತ್ತಿದೆ. ರೆಡ್ ಡಾರ್ಕ್ ವರ್ಷನ್ ನಲ್ಲಿ, ಒಳಗೆ ಮತ್ತು ಹೊರಗೆ ರೆಡ್ ಹೈಲೈಟ್‌ಗಳೊಂದಿಗೆ ಇದನ್ನು ಪ್ರದರ್ಶಿಸಲಾಗುವುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ.

 ಟಾಟಾ ಅದರ ಶಕ್ತಿಶಾಲಿ ಸುರಕ್ಷತಾ ಸೂಟ್ ಅನ್ನು ಹೈಲೈಟ್ ಮಾಡುವ ಪರಿಕಲ್ಪನೆಯೊಂದಿಗೆ ಸ್ಟ್ಯಾಂಡರ್ಡ್ ಸಫಾರಿಯ ಕ್ರಾಸ್-ಸೆಕ್ಷನ್ ಡಿಸ್ಪ್ಲೇ ಅನ್ನು ಕೂಡ ಪ್ರದರ್ಶಿಸಲಿದೆ. ಭಾರತ್ NCAP ಕ್ರ್ಯಾಶ್ ಟೆಸ್ಟ್ ಮಾಡಿದ ಮೊದಲ ಕೆಲವು ಕಾರುಗಳಲ್ಲಿ ಇದು ಒಂದಾಗಿದೆ ಮತ್ತು ಇದು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ.

 ಟಾಟಾ ಕರ್ವ್ ಕಾನ್ಸೆಪ್ಟ್

Tata Curvv

 ಟಾಟಾ SUV ಶ್ರೇಣಿಗೆ ಹೊಸ ಸೇರ್ಪಡೆಯಾಗಿ ಕರ್ವ್ ಎಂದು ಕರೆಯಲಾಗುವ ಕಾರ್ 2024 ರಲ್ಲಿ ಬರಲಿದೆ, ಇದನ್ನು ಕೂಡ ಈವೆಂಟ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಟಾಟಾ ಇದನ್ನು ಮೊದಲು EV ಆಗಿ ಲಾಂಚ್ ಮಾಡಲಿದೆ, ನಂತರ ಅದರ ಇಂಟರ್ನಲ್ ಕಮ್ಬಾಷನ್ ಎಂಜಿನ್ (ICE) ವರ್ಷನ್ ಅನ್ನು ಮಾರುಕಟ್ಟೆಗೆ ಬಿಡಲಾಗುವುದು.

 ಟಾಟಾ ಆಲ್ಟ್ರೋಜ್ ರೇಸರ್ ಕಾನ್ಸೆಪ್ಟ್

Tata Altroz Racer

 ಟಾಟಾ ಆಲ್ಟ್ರೋಜ್ ರೇಸರ್ ಅನ್ನು ಮೊದಲ ಬಾರಿಗೆ ಆಟೋ ಎಕ್ಸ್‌ಪೋ 2023 ರಲ್ಲಿ ಅನಾವರಣಗೊಳಿಸಲಾಯಿತು, ಇದು ಸ್ಟ್ಯಾಂಡರ್ಡ್ ಆಲ್ಟ್ರೋಜ್ ಹ್ಯಾಚ್‌ಬ್ಯಾಕ್‌ನ ಸ್ಪೋರ್ಟಿಯರ್ ವೇರಿಯಂಟ್ ಆಗಿದೆ. ಇದು ಒಳಗೆ ಮತ್ತು ಹೊರಗೆ ಕಾಸ್ಮೆಟಿಕ್ ಅಪ್‌ಗ್ರೇಡ್‌ಗಳನ್ನು ಹೊಂದಿದೆ ಮತ್ತು ಈಗಾಗಲೇ ಫೇಸ್‌ಲಿಫ್ಟ್ ಆಗಿರುವ ನೆಕ್ಸಾನ್‌ನಲ್ಲಿ ಕಂಡುಬರುವ ವಿವಿಧ ಫೀಚರ್ ಅಪ್ಡೇಟ್ ಗಳನ್ನು ಇದಕ್ಕೆ ನೀಡುವ ನಿರೀಕ್ಷೆಯಿದೆ. ಪವರ್‌ಟ್ರೇನ್‌ಗೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡುವ ನಿರೀಕ್ಷೆ ಇಲ್ಲದಿದ್ದರೂ ಕೂಡ, ನೆಕ್ಸಾನ್‌ನ 120 PS ಟರ್ಬೊ-ಪೆಟ್ರೋಲ್ ಎಂಜಿನ್‌ನ ಸೇರ್ಪಡೆಯು ಇಲ್ಲಿ ಗಮನಾರ್ಹ ವ್ಯತ್ಯಾಸವಾಗಬಹುದು.

 ಟಾಟಾ ಪಂಚ್ EV

Tata Punch EV

 ಟಾಟಾ ತನ್ನ ಪಂಚ್ EV ಅನ್ನು ಹೊಸದಾಗಿ ಅಭಿವೃದ್ಧಿಪಡಿಸಿದ Acti.EV ಪ್ಲಾಟ್‌ಫಾರ್ಮ್ ಆಧರಿಸಿ ತಯಾರಿಸಿರುವ ಮೊದಲ ಎಲೆಕ್ಟ್ರಿಕ್ ಮಾಡೆಲ್ ಆಗಿ ಪರಿಚಯಿಸಿತು. ಇದು ಹೊಸ ಡಿಸೈನ್ ಅನ್ನು ಪಡೆಯಲಿದೆ ಮತ್ತು ಇದು ಟಾಟಾದ ಹೊಸ ಕೊಡುಗೆಗಳಾದ ನೆಕ್ಸಾನ್ ಮತ್ತು ಕರ್ವ್ ನ ರೀತಿಯಲ್ಲಿದೆ. ಇದು ಒಂದೆರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರಲಿದೆ, 421 ಕಿಮೀ ವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡಲಿದೆ. ಹೊಚ್ಚ ಹೊಸ ಕೊಡುಗೆಯಾಗಿರುವ ಕಾರಣ, ಇದನ್ನು ಡಿಸ್ಪ್ಲೇಯಲ್ಲಿ ಕೂಡ ಇರಿಸಲಾಗುವುದು.

 ಇದನ್ನು ಕೂಡ ಓದಿ: ಟಾಟಾ ಪಂಚ್ EV ಲಾಂಗ್ ರೇಂಜ್ ವರ್ಸಸ್ ಟಾಟಾ ನೆಕ್ಸಾನ್ EV ಮಿಡ್ ರೇಂಜ್: ನೀವು ಯಾವ ಎಲೆಕ್ಟ್ರಿಕ್ SUVಯನ್ನು ಖರೀದಿಸಬೇಕು?

 ಟಾಟಾ ನೆಕ್ಸಾನ್ EV ಡಾರ್ಕ್

Tata Nexon

 ಟಾಟಾದ ಪೆವಿಲಿಯನ್‌ನಲ್ಲಿರುವ ಮತ್ತೊಂದು ಹೊಸ ಕೊಡುಗೆ ನೆಕ್ಸಾನ್ EV ಡಾರ್ಕ್ ಆಗಿದೆ. ಪ್ರೀ-ಫೇಸ್‌ಲಿಫ್ಟ್ ನೆಕ್ಸಾನ್ EV ಮ್ಯಾಕ್ಸ್‌ನಲ್ಲಿ ಇದನ್ನು ಮೊದಲು ಪರಿಚಯಿಸಲಾಯಿತು. ಇದು ಫೇಸ್‌ಲಿಫ್ಟ್ ಆಗಿರುವ ನೆಕ್ಸಾನ್ EVಯನ್ನು ಆಧರಿಸಿದೆ, ಮತ್ತು ಒಳಗೆ ಮತ್ತು ಹೊರಗೆ ಹಲವಾರು ಸ್ಟೈಲಿಂಗ್ ಅಪ್ಡೇಟ್ ಗಳನ್ನು ಪಡೆಯಲಿದೆ. ಡಾರ್ಕ್ ಎಡಿಷನ್ ಆಗಿರುವುದರಿಂದ, ಇದು ಬ್ಲಾಕ್ ಔಟ್ ಆಗಿರುವ ಅಲಾಯ್ ವೀಲ್ಸ್ ಮತ್ತು ಆಲ್-ಬ್ಲಾಕ್ ಕ್ಯಾಬಿನ್ ಥೀಮ್ ಸೇರಿದಂತೆ ಕೆಲವು ಕಾಸ್ಮೆಟಿಕ್ ಅಪ್ಡೇಟ್ ಗಳನ್ನು ಪಡೆಯಲಿದೆ. ಆದರೆ, ಅದರ ಎಲೆಕ್ಟ್ರಿಕ್ ಪವರ್‌ಟ್ರೇನ್ ಅಥವಾ ಫೀಚರ್ ಗಳ ಸೆಟ್‌ನಲ್ಲಿ ಯಾವುದೇ ಬದಲಾವಣೆಗಳನ್ನು ನಿರೀಕ್ಷಿಸಲಾಗಿಲ್ಲ.

ಟಾಟಾ ಹ್ಯಾರಿಯರ್ EV ಕಾನ್ಸೆಪ್ಟ್

Tata Harrier EV

 ಫೇಸ್‌ಲಿಫ್ಟ್ ಆಗಿರುವ ಟಾಟಾ ಹ್ಯಾರಿಯರ್ 2024 ರಲ್ಲಿ ಎಲೆಕ್ಟ್ರಿಕ್ ವರ್ಷನ್ ಅನ್ನು ಪಡೆಯಲಿದೆ, ಇದನ್ನು ನಾವು ಮೊದಲ ಬಾರಿಗೆ ಆಟೋ ಎಕ್ಸ್‌ಪೋ 2023 ರಲ್ಲಿ ಪರಿಕಲ್ಪನೆಯಾಗಿ ನೋಡಿದ್ದೇವೆ. ಹ್ಯಾರಿಯರ್ EV ಕಾನ್ಸೆಪ್ಟ್ ಅನ್ನು ಕೂಡ ಎಕ್ಸ್‌ಪೋದಲ್ಲಿ ತೋರಿಸಲಾಗುತ್ತದೆ, ಬಹುಶಃ ಇದು ಅಪ್ಡೇಟ್ ಆಗಿರುವ ರೂಪದಲ್ಲಿ ಇರಬಹುದು ಆದರೆ ರೆಗ್ಯುಲರ್ ಹ್ಯಾರಿಯರ್‌ನ ಡಿಸೈನ್ ಮತ್ತು ಫೀಚರ್ ಗಳನ್ನು ಹೋಲುತ್ತದೆ. ಇದು ಮುಲ್ಟಿಪಲ್ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ, ಮತ್ತು ಇದು 500 ಕಿಮೀಗಿಂತ ಹೆಚ್ಚು ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡಬಹುದು. ಇದರ ಜೊತೆಗೆ, ಟಾಟಾದ ಕಾರುಗಳಲ್ಲಿ ಬಹಳ ಸಮಯದಿಂದ ಕಾಣಸಿಗದಿರುವ ಆಲ್-ವೀಲ್-ಡ್ರೈವ್ (AWD) ವೇರಿಯಂಟ್ ಆಯ್ಕೆಯನ್ನು ನೀಡುತ್ತದೆ.

 ಇವೆಲ್ಲವೂ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಟಾಟಾ ಪ್ರದರ್ಶಿಸಲಿರುವ ಕಾರುಗಳಾಗಿವೆ. ನೀವು ಯಾವ ಮಾಡೆಲ್ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಉತ್ಸುಕರಾಗಿದ್ದೀರಿ? ಭಾರತ್ ಮೊಬಿಲಿಟಿ ಎಕ್ಸ್‌ಪೋ 2024 ರ ಇತ್ತೀಚಿನ ಅಪ್ಡೇಟ್ ಗಳಿಗಾಗಿ ಕಾರ್ ದೇಖೊ ಅನ್ನು ಫಾಲೋ ಮಾಡಿ.

 ಇನ್ನಷ್ಟು ಓದಿ: ನೆಕ್ಸಾನ್ AMT

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ನೆಕ್ಸ್ಂನ್‌

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience